ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 20, 2010

Peepli [ LIVE ]

1 ಪ್ರತಿಕ್ರಿಯೆಗಳು


ಅಮೀರ್ ಖಾನ್ ನಿರ್ಮಾಣದ ಎರಡನೇ ಚಿತ್ರ ( If I'm Right - ಮೊದಲನೇಯದು ಜಾನೇ ತು ಯಾ ಜಾನೇ ನಾ ) ಪೀಪ್ಲಿ [ ಲೈವ್ ]. ಇಲ್ಲಿ ಪೀಪ್ಲಿ ಅನ್ನೋದು ಊರ ಹೆಸರು. ಲೈವ್ ಅನ್ನೋದು ಆ ಊರಿನ ಮಹಾಪ್ರಜೆಯನ್ನ ಎಡೆಬಿಡದೇ Cover ಮಾಡುವ ಮಾಧ್ಯಮಗಳ [ LIVE ] Coverage ಅನ್ನ ಸೂಚಿಸುತ್ತದೆ.

NDTV Journalist ಆಗಿದ್ದ ಅನುಷಾ ರಿಝ್ವಿ ತಾವೇ ಬರೆದಿದ್ದ The Fallen ಎನ್ನುವ ಕಥಾಹಂದರವನ್ನ ಆಮೀರ್ ಗೆ ತೋರಿಸಿ ಅವರದನ್ನ ಮೆಚ್ಚಿಕೊಂಡು ಇದೀಗ ಚಲನಚಿತ್ರವಾಗಿ ನಮ್ಮ ಮುಂದಿದೆ. ಇದೀಗ ಅನುಷಾ ಅವರೇ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

ಇನ್ನು ತಾರಾಗಣವನ್ನ ಆರಿಸುವಲ್ಲಿ ನಿರ್ದೇಶಕ ನಿರ್ಮಾಪಕರು ತೋರಿರುವ ಶೃದ್ಧೆ ಅವರಿಗೆ ಯಶ ನೀಡಿದೆಯಂದೇ ಹೇಳಬೇಕು. ಪ್ರಮುಖ ಪಾತ್ರಗಳನ್ನ ಹೊರತುಪಡಿಸಿದರೆ ಇನ್ನುಳಿದವರು ಚಿತ್ರೀಕರಣ ನಡೆದ ಗ್ರಾಮದ ಗ್ರಾಮಸ್ಥರೇ ಆ ಚಿತ್ರದಲ್ಲಿದಾರೆ. ಯಾವುದೇ ಜನಪ್ರಿಯ ಮುಖಕ್ಕೆ ಮಣೆ ಹಾಕದೇ ಪಾತ್ರ ಬಯಸಿದ್ದ ಮುಗ್ಧ ಸೊಗಡಿನ ಮುಖವನ್ನೇ ಆರಿಸಿರುವ  ನಿರ್ದೇಶಕ ನಿರ್ಮಾಪಕರ ಆಯ್ಕೆಗೆ ಕಿಂಚಿತ್ತೂ ಮೋಸ ಮಾಡದಂತೆ ಅಭಿನಯಿಸಿದ್ದಾರೆ ನತ್ಥಾ ( ಓಂಕಾರ್ ದಾಸ್ ಮಾಣಿಕ್ ಪುರಿ ). ಚಿತ್ರದಲ್ಲಿ ಇವರ ಹೆಸರು ನತ್ಥಾ ದಾಸ್ ಮಾಣಿಕ್ ಪುರಿ !!



ಸುಪ್ರಸಿದ್ಧ ಲೇಖಕ ನಾಟಕಕಾರ ಹಬೀಬ್ ತನ್ವೀರ್ ಅವರ ರಂಗತಂಡ Naya Theatreದಿಂದ ಬಹುತೇಕರು ಚಿತ್ರದ ಪ್ರಮುಖ ಪಾತ್ರ ನಿರ್ವಹಿಸಿದಾರೆ. 



ಚಿತ್ರಕ್ಕೆ ಸಂಗೀತ ನೀಡಿರೋರು Indian Ocean ಅನ್ನುವ ಭಾರತದ Music Band ನವರು. ಅವರ ಜೊತೆಗೆ ರಾಮ್ ಸಂಪತ್ ಇದಾರೆ. ರಾಮ್ ಸಂಪತ್ ನಿಮಗೆ ನೆನಪಿದಾರೆ ಅನ್ಕೋತೀನಿ. ಹೃತಿಕ್ ನ ಕ್ರೇಝಿ 4 ಚಿತ್ರದ ಶೀರ್ಷಿಕೆ ಗೀತೆ ನಾನು ಸೋನಿ ಎರಿಕ್ಸನ್ ಗೆ ನೀಡಿದ್ದ ಸಂಗೀತದ ನಕಲು ಎಂದು ಕೋರ್ಟಿಗೆ ಹೋಗಿ ಕೋಟಿ Compensation ಪಡೆದಿದ್ದ ವ್ಯಕ್ತಿಯೇ ರಾಮ್ ಸಂಪತ್. ಇನ್ನು ಇಂಡಿಯನ್ ಓಷಿಯನ್ ಬಗ್ಗೆ ಹೇಳಲೇ ಬೇಕು. ಈ ಮೊದಲು " ಮಾ ರೇವಾ ... " ಅನ್ನುವ ಗೀತೆಯೊಂದಿಗೆ Urban ಹುಡುಗರಿಗೆ ಪರಿಚಯಗೊಂಡಿದ್ದ ಇವರು ಈ ಚಿತ್ರದಲ್ಲಿ " ದೇಶ ಮೇರಾ ... " ಎನ್ನುವ Peepli Theme ಗೀತೆಯೊಂದಿಗೆ ಎಲ್ಲರ ಮನದಲ್ಲಿ ಉಳಿಯುವ ಕೆಲಸ ಮಾಡಿದಾರೆ. ಈ ಮೊದಲು ಬ್ಲ್ಯಾಕ್ ಫ್ರೈಡೆ ಚಿತ್ರಕ್ಕೆ ಸಂಗೀತ ನೀಡಿದ್ದು ನಿಮಗೆ ನೆನಪಿದೆಯಾ ?! ಆದರೆ ನನ್ನದೊಂದೇ ತಕರಾರೆಂದರೆ ಅವರ ಸಂಗೀತದಲ್ಲಿ ತಬಲಾ ಮತ್ತೆ ಗಿಟಾರ್ ಬಿಟ್ರೆ ಬಾಕಿ ಏನೂ ಕೇಳಿಸೋದೇ ಇಲ್ಲ.


ಖ್ಯಾತ ತಾರಾಗಣವಿಲ್ಲದಿದ್ದರೂ ಕೂಡ ಚಿತ್ರ ಬಿಡುಗಡೆಯಾಗುವ ಮುನ್ನವೇ ತನ್ನ ಖರ್ಚಾಗಿರುವ10 ಕೋಟಿಯನ್ನ ಬಾಚಿಕೊಂಡು, ಮೊದಲ ದಿನವೇ4 ಕೋಟಿ  ಗಳಿಸಿರುವುದು ಗಮನಿಸಬೇಕಾದ ಅಂಶ.


ಇನ್ನು ಈ ಚಿತ್ರದ ಬಗ್ಗೆ ಹೆಚ್ಚಿಗೆ ತಿಳಿಯಬಯಸಿದರೆ ನಿಮಗೆ ಕೆಲವು Internet Link ಗಳನ್ನ ಕೊಡ್ತೀನಿ .. ಓದಿ :

ಚಿತ್ರದ ಅಧಿಕೃತ ತಾಣ : http://www.peeplilivethefilm.com/

ಇಂಡಿಯನ್ ಓಷಿಯನ್ : http://www.indianoceanmusic.com/







: ರವಿ



Aug 19, 2010

ನನ್ನ ಧ್ವನಿಗೆ ನಿನ್ನ ಧ್ವನಿಯ, ಸೇರಿದಂತೆ ನಮ್ಮ ಧ್ವನಿಯ ...

0 ಪ್ರತಿಕ್ರಿಯೆಗಳು



ನಮ್ಮ ಹೆಮ್ಮೆಯ ಭೀಮಸೇನ ಜೋಷಿಯವರ ಸುವರ್ಣ ಕಂಠದಿಂದ ಪ್ರಾರಂಭವಾಗುವ " ಮಿಲೇ ಸುರ ಮೇರಾ ತುಮ್ಹಾರಾ ... " ಗೀತೆ ಇಂದಿಗೂ ಜನಪ್ರಿಯ. ಸ್ವಾತಂತ್ರ್ಯ ದಿನಾಚರಣೆಯ ಆಸುಪಾಸಿನಲ್ಲಿರುವ ನಾವು ಇವತ್ತು  ಆ ಗೀತೆಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಗೀತೆಯ ನಿರ್ಮಾಣ : ಲೋಕ ಸೇವಾ ಸಂಚಾರ ಪರಿಷದ್

ಗೀತೆಯ ರಚನೆಕಾರರು : ಪಿಯೂಷ್ ಪಾಂಡೆ

ಗೀತೆಯನ್ನ ಸಂಗೀತಕ್ಕಳವಡಿಸಿದವರು : ಅಶೋಕ್ ಪಟ್ಕಿ ( & ಲೂಯಿಸ್ ಬ್ಯಾಂಕ್ಸ್ )

ಗೀತೆಯನ್ನ ನಿರ್ದೇಶಿಸಿದವರು : ಸುರೇಶ್ ಮುಲಿಕ್

ಗೀತೆಯ ಪ್ರಥಮ ಪ್ರಸಾರ : ದೂರದರ್ಶನ ವಾಹಿನಿಯಲ್ಲಿ 1988ರ ಸ್ವಾತಂತ್ರ್ಯ ದಿನಾಚರಣೆಯಂದು , ಪ್ರಧಾನಮಂತ್ರಿಗಳ ಭಾಷಣದ ನಂತರ

" ಮಿಲೇ ಸುರ ಮೇರಾ ತುಮ್ಹಾರಾ, ದೋ ಸುರ ಬನೇ ಹಮಾರಾ " 

ಎಂಬೀ ವಾಕ್ಯವನ್ನೊಳಗೊಂಡ ಈ ಗೀತೆ ಭಾರತದ 14 ಭಾಷೆಗಳಲ್ಲಿ ಉಚ್ಛರಿಸಲ್ಪಟ್ಟು, ವಿವಿಧ ಸ್ಥಳೀಯ ಸುಪ್ರಸಿದ್ಧ ವ್ಯಕ್ತಿಗಳನ್ನ ಒಳಗೊಂಡು ಚಿತ್ರಿತವಾಗಿದೆ. ಬಳಸಿದ ಭಾಷೆಗಳ ಲಿಪಿ ಇಂತಿದೆ :



मिले सुर मेरा तुम्हारा, तो सुर बने हमारा सुर की नदियाँ हर दिशा से, बहते सागर में मिलें
बादलों का रूप लेकर, बरसे हलके हलके
मिले सुर मेरा तुम्हारा, तो सुर बने हमारा
मिले सुर मेरा तुम्हारा
चॉन्य् तरज़ तय म्यॉन्य् तरज़, इक॒वट॒ बनि यि सॉन्य् तरज़
چأنِۂ ترز تَے میأنِۂ ترز، اِکوَٹہٕ بَنِہ یِہ سأنِۂ ترز
ਤੇਰਾ ਸੁਰ ਮਿਲੇ ਮੇਰੇ ਸੁਰ ਦੇ ਨਾਲ, ਮਿਲਕੇ ਬਣੇ ਇੱਕ ਨਵਾਂ ਸੁਰ ਤਾਲ
मिले सुर मेरा तुम्हारा, तो सुर बने हमारा
मुंहिंजो सुर तुहिंजे सां पियारा मिले जड॒हिं, गीत असांजो मधुर तरानो बणे तड॒हिं
مُنهِنجو سُر تُنهِنجي سان پِيارا مِلي جَڏَهِن، گِيت اَسانجو مَڍُر تَرانوبَڻي تَڏَهِن
سر کی دریا بہتے ساگر میں ملےਬਾਦਲਾਂ ਦਾ ਰੂਪ ਲੈਕੇ, ਬਰਸਨ ਹੌਲੇ ਹੌਲੇ
இசைந்தால் நம் இருவரின் ஸ்வரமும் நமதாகும்
திசை வேறானாலும் ஆழி சேர் ஆறுகள் முகிலாய்
மழையாய் பொழிவது போல் இசை
நம் இசை
ನನ್ನ ಧ್ವನಿಗೆ ನಿನ್ನ ಧ್ವನಿಯ, ಸೇರಿದಂತೆ ನಮ್ಮ ಧ್ವನಿಯ
నా స్వరము నీ స్వరము సంగమమై, మన స్వరంగా అవతరించే
എന്റെ സ്വരവും നിങ്ങളുടെ സ്വരവും, ഒന്നുചേര്‍ന്നു നമ്മുടെ സ്വരമായ്
তোমার সুর মোদের সুর, সৃষ্টি করুক ঐক্যসুর সৃষ্টি হউক ঐক্যতান
ତୁମ ଆମର ସ୍ବରର ମିଳନ, ସୃଷ୍ଟି କରି ଚାଲୁ ଏକ ତାନ
મળે સૂર જો તારો મારો, બને આપણો સૂર નિરાળો
माझ्या तुमच्या जुळता तारा, मधुर सुरांच्या बरसती धारा

सुर की नदियाँ हर दिशा से, बहते सागर में मिलें
बादलों का रूप लेके, बरसे हलके हलके
मिले सुर मेरा तुम्हारा, तो सुर बने हमारा
मिले सुर मेरा तुम्हारा

  1. ಹಿಂದಿ
  2. ಕಾಶ್ಮೀರಿ
  3. ಉರ್ದು
  4. ಪಂಜಾಬಿ
  5. ಸಿಂಧಿ
  6. ತಮಿಳು
  7. ಕನ್ನಡ
  8. ತೆಲುಗು
  9. ಮಲಯಾಳಿ
  10. ಬಂಗಾಳಿ
  11. ಅಸ್ಸಾಮೀ
  12. ಒರಿಯಾ
  13. ಗುಜರಾತಿ
  14. ಮರಾಠಿ

ಸದರಿ ಗೀತೆಯ ಚಲನಚಿತ್ರದಲ್ಲಿ ಮೂಡಿ ಬಂದ ಖ್ಯಾತನಾಮರಿವರು :

:: ಸಿನೆಮಾ / ದೂರದರ್ಶನ ::

ಅಮಿತಾಬ್ ಬಚ್ಚನ್
ಮಿಥುನ್ ಚಕ್ರವರ್ತಿ
ತನ್ವೀರ್ ಆಶಾಯ್
ಕಮಲ್ ಹಾಸನ್
ಕೆ.ಆರ್.ವಿಜಯ
ರೇವತಿ
ಜಿತೇಂದ್ರ
ವಹೀದಾ ರಹಮಾನ್
ಹೇಮಾ ಮಾಲಿನಿ
ತನುಜಾ
ಶರ್ಮಿಳಾ ಟಾಗೋರ್
ಶಬಾನಾ ಅಜ್ಮಿ
ದೀಪಾ ಸಾಹಿ
ಓಂ ಪುರಿ
ದೀನಾ ಪಾಠಕ್
ಮೀನಾಕ್ಷಿ ಶೇಷಾದ್ರಿ


:: ನಾಟ್ಯ ::


ಮಲ್ಲಿಕಾ ಸಾರಾಭಾಯ್

:: ವ್ಯಂಗ್ಯ ಚಿತ್ರಕಾರ ::

ಮಾರಿಯೋ ಮಿರಾಂಡಾ

:: ನಿರ್ದೇಶಕ ::

ಮೃಣಾಲ್ ಸೇನ್

:: ಲೇಖಕರು ::

ಸುನಿಲ್ ಗಂಗೋಪಾಧ್ಯಾಯ
ಆನಂದಶಂಕರ ರೇ


:: ಗಾಯಕರು ::

ಭೀಮಸೇನ್ ಜೋಷಿ
ಎಂ.ಬಾಲಮುರಳಿ ಕೃಷ್ಣ
ಲತಾ ಮಂಗೇಶ್ಕರ್
ಸುಚಿತ್ರಾ ಮಿತ್ರಾ


:: ಕ್ರೀಡಾ ಪಟುಗಳು ::

ನರೇಂದ್ರ ಹಿರ್ವಾನಿ
ಎಸ್.ವೆಂಕಟರಾಘವನ್
ಪ್ರಕಾಶ್ ಪಡುಕೋಣೆ
ರಾಮನಾಥನ್ ಕೃಷ್ಣನ್
ಅರುಣ್ ಲಾಲ್
ಪಿ.ಕೆ.ಬ್ಯಾನರ್ಜೀ
ಚುನೀ ಗೋಸ್ವಾಮಿ
ಸೈಯದ್ ಕಿರ್ಮಾನಿ
ಲೆಸ್ಲೀ ಕ್ಲಾಡಿಯಸ್
ಗುರುಬಕ್ಸ್ ಸಿಂಗ್


ಜೊತೆಗೆ

ಪ್ರತಾಪ್ ಪಠಾಣ್ ( ಮಲಯಾಳಿ ನಟ )
ಏ.ವಿ.ರಮಣನ್ ( ತಮಿಳು ನಟ )



<<< >>>


ಇದೀಗ 22 ವರ್ಷಗಳ ನಂತರ ಕಳೆದ ಜನವರಿ 26ಕ್ಕೆ ಪ್ರಸಾರ ಮಾಡುವ ಸಲುವಾಗಿ ZOOM TV ಯವರು


" ಫಿರ್ ಮಿಲೇ ಸುರ ... "

ಅನ್ನುವ ಶೀರ್ಷಿಕೆಯಡಿಯಲ್ಲಿ ಎ.ಆರ್.ರಹಮಾನ್ ಸಂಗೀತ ಅಳವಡಿಕೆಯೊಂದಿಗೆ ( ಹಿಂದಿನ ಸಂಗೀತವನ್ನ ಉಳಿಸಿಕೊಂಡಿರುವುದರ ಜೊತೆಗೆ ) ನಿರ್ಮಿಸಿದೆ. ಈ ಅವತರಣಿಕೆ ಈ ಹಿಂದಿನ 6 ನಿಮಿಷ 9 ಸೆಕೆಂಡ್ ಗಿಂತ ದೊಡ್ಡದಿದ್ದು 16 ನಿಮಿಷ 17 ಸೆಕೆಂಡ್ ಅವಧಿಯದ್ದಾಗಿದೆ. ಈ ಬಾರಿ ಕೈಲಾಶ್ ಸುರೇಂದ್ರನಾಥ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಈ ವ್ಯಕ್ತಿ ಮತ್ತಾರೂ ಅಲ್ಲ. ಮೊದಲ ಅವತರಣಿಕೆಯ ನಿರ್ಮಾಪಕರು. ಆದರೆ ಹೊಸ ಅವತರಣಿಕೆ ಹಳಬರಿಗೆ ಸುತಾರಾಂ ರುಚಿಸಿಲ್ಲ. ಇನ್ನು ಇದೇ ಮೊದಲ ಸಲ ನೋಡಿರುವವರಿಗೂ ಅಂಥ ಉತ್ಸಾಹಕಾರಿ ಅನಿಸಿಲ್ಲ. ಜೊತೆಗೆ ಮುಖ್ಯವಾಗಿ ಸಿನೆಮಾ ಕ್ಷೇತ್ರದವರಿಗೆ ಮಣೆ ಹಾಕಿ ಗೀತೆಯನ್ನ ಕಮರ್ಷಿಯಲ್ ಆಗಿ ನಿರ್ಮಿಸಿರುವುದು ಸಾಕಷ್ಟು ಜನರ ಟೀಕೆಗೆ ಗುರಿಯಾಗಿದೆ.









: ರವಿ

Aug 18, 2010

ವಿಕಿಪೀಡಿಯಾದ ಡಿಕ್ಷನರಿ = ವಿಕ್ಷನರಿ

0 ಪ್ರತಿಕ್ರಿಯೆಗಳು


ವಿಕಿಪೀಡಿಯಾದ ಬಗ್ಗೆ ಕೇಳಿಯೇ ಇರುತ್ತೀರಿ ನೀವೆಲ್ಲಾ ? ಹಿಂದೆಲ್ಲಾ ಹತ್ತೆಂಟು ಸಂಪುಟಗಳಲ್ಲಿ ಸಂಗ್ರಹಗೊಂಡಿದ್ದ Brittanica Encyclopedia ದ ಬಗ್ಗೆ ಅಚ್ಚರಿ ಮಿಶ್ರಿತ ಕೃತಜ್ಞತೆಯಿಂದ ನೋಡುತ್ತಿದ್ದ ನಾವು ಈ ವಿಕಿಪೀಡಿಯಾವನ್ನ ಕಂಡ ಮೇಲೆ ಮಂತ್ರಮುಗ್ಧರಾಗಿದ್ದೇವೆ ಎಂತಲೇ ಹೇಳಬೇಕು. ಈ ವಿಕಿಪೀಡಿಯಾ ದಿನನಿತ್ಯ ಬರೆಯಲ್ಪಡುವ - ತಿದ್ದಲ್ಪಡುವ ಒಂದು ನೆಟ್ ಪುಸ್ತಕ. ಗೂಗಲ್ Random ಆಗಿ ಅತಿ ಹತ್ತಿರದ ಉತ್ತರ ಹುಡುಕಿದರೆ ಇದು ನಿರ್ದಿಷ್ಟ ವಾಕ್ಯ / ಪದ ಕ್ಕೆ ಸುದೀರ್ಘ ಮಾಹಿತಿ ನೀಡುವುದರ ಜೊತೆಗೆ ನೀವೂ ಆ ಮಾಹಿತಿಗೆ ತಿದ್ದುಪಡಿ ಅಥವಾ ಹೆಚ್ಚಿನ ಸೇರ್ಪಡೆ ಮಾಡುವ ಅವಕಾಶ ಒದಗಿಸುತ್ತದೆ. ನೋಡಿ ... ಎಂಥ ಅವಕಾಶ. ತಾವು ಬರೆದ ಲೇಖನಕ್ಕೆ ಇನ್ನೊಬ್ಬರು ತಮ್ಮ ಅಭಿಪ್ರಾಯ ನೀಡಿದರೇನೇ ಸಿಡುಕುವ ಈ ಕಾಲದಲ್ಲಿ ಅದನ್ನ ತಿದ್ದಿ ಇನ್ನೂ ಶ್ರೀಮಂತವಾಗಿಸುವ ಧ್ಯೇಯ ಹೊಂದಿರುವ ಈ ತಾಣದ ಮಹಾನ್ ತನಕ್ಕೆ  " ಜೈ ಹೋ ! " ಎನ್ನಲೇಬೇಕಲ್ವಾ ?!!


ಇಂತಿಪ್ಪ ವಿಕಿಪೀಡಿಯಾದ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುವುದೇ ವಿಕ್ಷನರಿ


ಈ ವಿಕ್ಷನರಿ ಜಗತ್ತಿನ ವಿವಿಧ ಭಾಷೆಗಳ ಶಬ್ದಗಳಿಗೆ ಕನ್ನಡ to ಇಂಗ್ಲೀಷ್ ಹಾಗೂ ಇಂಗ್ಲೀಷ್ to ಕನ್ನಡ  ರೀತಿಯಲ್ಲಿ ಶಬ್ದಾರ್ಥ ಕಲೆಹಾಕುವ ಕೆಲಸ ಮಾಡುತ್ತೆ.

ಕನ್ನಡ ವಿಕ್ಷನರಿಗಾಗಿ ಇಲ್ಲಿ ಕ್ಲಿಕ್ಕಿಸಿ


ಸುಮಾರು 120350 ಶಬ್ದಗಳನ್ನ ಜೋಡಿಸಿಕೊಂಡಿರುವ ತಮಿಳು ಭಾಷೆ 100000+ ಶಬ್ದಗಳನ್ನ ಕಲೆಹಾಕಿರುವ ಇಂಗ್ಲೀಷ್ ಮತ್ತಿತರ ಭಾಷೆಗಳ ಸಾಲಿನಲ್ಲಿ ನಿಂತಿದೆ. 68608 ಶಬ್ದಗಳನ್ನ ಜೋಡಿಸಿಕೊಂಡಿರುವ ಕನ್ನಡ ಭಾಷೆ 10000+ ಶಬ್ಗಗಳನ್ನ ಕಲೆಹಾಕಿರುವ ಭಾಷೆಗಳ ಜೊತೆ 2ನೇ ಸಾಲಿನಲ್ಲಿ ನಿಂತಿದೆ. 


Hello ಸಾಫ್ಟ್ ಗಳಿರಾ !! Ur Attention Please. You Can Afford CCD Cappucino From Ur 5 Digit Salary. But Make Sure That Ur Knowledge Is Not Been Drained By Someone Who Is A Foreigner aka Your Client, Who Can Be Anybody & U Will Never Mind To Change Them Often. Isnt It Bloody Knowledge Prostitution. Pay Me More & I'm Yours Kind of Attitude Has The Same Phrase I Think. Change Your Attitude ( Whosoever Have That ) & Give Some of Your Share of Your Knowledge Towards Your Mother India.

[ I Have Used English, As Many Understand It Better & Feel The Punch Only In That Language ]


ಬೆಂಗಳೂರಿನಲ್ಲಿ ಸಾಫ್ಟವೇರ್ ನೆಲೆನಿಂತರೇನು ಬಂತು, ಮಣ್ಣು. ನಮ್ಮ ನೆಲದಲ್ಲಿ ಅವರ ಕೆಲಸ ಮಾಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಜಾಸ್ತಿ ಲಾಭ ಮಾಡಿಕೊಳ್ಳುವ ಅವರ ಹುನ್ನಾರ ಅರಿಯದ ಇದು ಒಂದು ರೀತಿಯ ಗಣಿ ಸಾಗಣೆಯಂತೇ ಲೆಕ್ಕ ಅಲ್ವೇನ್ರೀ ? ಇಂದು ನಮ್ಮಲ್ಲಿಯ ವಿದ್ಯುತ್ ಮತ್ತೊಂದು ಬರಿದು ಮಾಡಿಕೊಂಡು ನಾಳೆ ಅವರ ಮುಂದೆ ನಿಲ್ಲುವ ಬದಲು , ಇನ್ನೂ Developed ದೇಶಗಳ ಸಾಲಿನಲ್ಲಿ ನಿಲ್ಲಲು ಪ್ರಯತ್ನಿಸುತ್ತಿರುವ ನಾವು ಅವರಿಗಾಗಿ ಕೆಲಸ ಮಾಡಿಕೊಡುವುದರ ಜೊತೆ ಜೊತೆಗೆ ಆ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡು ನಮ್ಮ ದೇಶಕ್ಕೂ ನಾವು ಕಲಿತ ನಾಲ್ಕಕ್ಷರದ ಮೂಲಕ  ಸಹಾಯ ಮಾಡಿದರೆ ಆಗಲ್ವಾ ? 


ಬರೀ ಸ್ವದೇಸ್ ಮೂವೀ ನೋಡಿ ಕಣ್ಣು ಒದ್ದೆ ಮಾಡಿಕೊಂಡ್ರೆ ಸಾಲಲ್ಲಪ್ಪ. ಅದನ್ನ ಅಳವಡಿಸಿಕೊಳ್ಳೋದಕ್ಕೂ will ಬೇಕು. ಅದು ಬಿಟ್ಟು ಅವರು ನೀಡೋ Per Annum Package ಗಾಗಿ  ಬೇಕಾಗೋ ಒಳ್ಳೇ Appraisal ಗಾಗಿ ವರ್ಷ ಇಡೀ ' ಹೋರಾಡೋದು  ' ಬಿಟ್ಟು ದೇಶದ Appraisal ಕಡೆನೂ ಗಮನ ಹರಿಸಿ ಅಂತ ನಮ್ಮ  ಸಾಫ್ಟ್ ಬಂಧುಗಳಿಗೆ ಕೇಳ್ಕೊಳೊಣ್ವಾ ?





 
: ರವಿ




Aug 17, 2010

ಮೀಥೈಲ್ ಐಸೋ ಸೈನೇಟ್ ( MIC - Methyl Isocyanate )

0 ಪ್ರತಿಕ್ರಿಯೆಗಳು

ಇತ್ತೀಚಿನ ಭೂಪಾಲ್ ಅನಿಲ ದುರಂತದ ಚರ್ಚೆಯಲ್ಲಿ MIC ಎಂಬ ಪದದ ಬಳಕೆಯನ್ನ ನೀವು ಪತ್ರಿಕೆ / ದೂರದರ್ಶನಗಳಲ್ಲಿ ಗಮನಿಸಿರಬಹುದು. ಏನೀ MIC ? ಅಷ್ಟು ಜನರ ಸಾವಿಗೆ - ಅಂಗವೈಕಲ್ಯಕ್ಕೆ ಕಾರಣೀಭೂತವಾಗಿರುವ ಇದೆಂಥ ವಿಷ ?


ಇದನ್ನ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ






: ರವಿ

Aug 15, 2010

ಗಣಕ ಪದ ಕೋಶ - 02

0 ಪ್ರತಿಕ್ರಿಯೆಗಳು













CPU Cabinet :: ಇದು ಕಂಪ್ಯೂಟರ್ ನ ಪ್ರಮುಖ ಅಂಗವಾದ CPU ಗೆ ರಕ್ಷಾಕವಚ + ಹೊದಿಕೆ + ....

Aug 8, 2010

ಗಣಕ ಪದ ಕೋಶ - 01

0 ಪ್ರತಿಕ್ರಿಯೆಗಳು


UPS (Uninterreptible Power Supply) :: ಕಂಪ್ಯೂಟರ್ ಬಳಸುವಾಗ ದಿಢೀರನೆ ವಿದ್ಯುತ್ ಸಂಪರ್ಕ ಹೊರಟು ಹೋದರೆ ನಾವು ಮಾಡುತ್ತಿದ್ದ ಕೆಲಸ ಅಪೂರ್ಣವಾಗುವುದಷ್ಟೇ ಅಲ್ಲ ಮಾಡಿದ್ದೆಲ್ಲಾ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಈ ಅನನುಕೂಲತೆಯನ್ನ ತಪ್ಪಿಸಲೆಂದೇ ತಯಾರಿಸಲಾದ ಸಾಧನ, ಯು.ಪಿ.ಎಸ್. . ಸದರಿ ಸಾಧನದ ಹೆಸರು UPS ಆದರೆ ಇದನ್ನ ಕಂಪ್ಯೂಟರ್ ಗೆ ಮಾತ್ರ ಬಳಸುತ್ತಾರೆ ಎಂದು ತಿಳಿದರೆ ತಪ್ಪು. ವಿದ್ಯುತ್ ನಿಲುಗಡೆಯಾದ ತಕ್ಷಣ ತನ್ನಲ್ಲಿ ಸಂಗ್ರಹವಾಗಿರುವ ಅಥವಾ ಮರುಕ್ಷಣದಲ್ಲಿಯೇ ವಿದ್ಯುತ್ ಉತ್ಪಾದನೆಯಾಗುವಂತೆ ಸೂಚನೆ ನೀಡುವ ಸಾಧನಕ್ಕೆ UPS ಎಂದು ಹೆಸರು. ಎರಡನೇ CASE ನಲ್ಲಿ ಬರುವ ವಿದ್ಯುತ್ ಉತ್ಪಾದನೆ ಮಾಡುವ ಸಾಧನಕ್ಕೆ POWER GENERATOR ಎಂದು ಹೆಸರು. POWER GENERATE ಮಾಡುವ ಸಾಧನಕ್ಕೂ , ವಿದ್ಯುತ್ ನಿಲುಗಡೆಯ ಮರುಕ್ಷಣವೇ ವಿದ್ಯುತ್ ಪೂರೈಕೆ ಸಲ್ಲಸಲು ಸೂಚನೆ ನೀಡುವ UPS ಗೂ ವ್ಯತ್ಯಾಸವನ್ನ ಓದುಗರು ಅರಿಯಬೇಕು.

ಹೀಗೆ ವಿದ್ಯುತ್ ಸರಬರಾಜು ನೀಡಲು UPS ಸಾಧನದ ಒಳಗೆ Battery ಯನ್ನ ಅಳವಡಿಸಲಾಗಿರುತ್ತದೆ(Battery Room). ಹಾಗೆ ಅಳವಡಿಸಲಾಗಿರುವ ಬ್ಯಾಟರಿ Acid Battery ಅಥವಾ Rechargeable Li-Ion Battery ಆಗಿರುತ್ತದೆ. ಈ ಬ್ಯಾಟರಿಗಳು ವಿದ್ಯುತ್ ಸರಬರಾಜು ಇದ್ದಾಗ ತಮ್ಮಲ್ಲಿ ಅದನ್ನ ತುಂಬಿಕೊಂಡು , ಅಭಾವ ಎದುರಾದಾಗ ತಮ್ಮ ಶೇಖರಣೆ ಖಾಲಿಯಾಗುವವರೆಗೆ ನೀಡುತ್ತವೆ. ಶೇಖರಣೆ ಖಾಲಿಯಾದ ನಂತರ ಮತ್ತೆ ವಿದ್ಯುತ್ ಬಳಸಿ ಮರುಪೂರಣ ಮಾಡಿಕೊಳ್ಳುತ್ತವೆ. ಇವೆಲ್ಲಕ್ಕೂ ಕಳಶಪ್ರಾಯವಾಗಿ ವಿದ್ಯುತ್ ನಿಲುಗಡೆಯಾದ ತತ್ ಕ್ಷಣವೇ Battery ಯಿಂದ ವಿದ್ಯುತ್ ಎಳೆಯಲು ಸೂಚನೆ ನೀಡುವ ಸಲುವಾಗಿ UPS ಒಳಗಡೆ Electronic Circuit ಒಂದನ್ನು ಕೂಡ ಜೋಡಿಸಲಾಗಿರುತ್ತದೆ.



: e-ಶ

ಒಂದು ವಾರದ ವಿರಹ

0 ಪ್ರತಿಕ್ರಿಯೆಗಳು


6 ತಿಂಗಳ ನಂತರ ನಮ್ಮೂರಿಗೆ ಹೋಗ್ತಾ ಇದೀನಿ. ಅಲ್ಲಿ ಅಂತರ್ಜಾಲದ ಸಂಪರ್ಕದ ಕೊರತೆ ಇದೆ. ಹೀಗಾಗಿ ಈ ಒಂದು ವಾರ ನಿಮಗೆ ದೈನಂದಿನ ಜ್ಞಾನ ಪುಟವನ್ನ ನೀಡೋದು ಸಾಧ್ಯವಾಗೋದಿಲ್ಲ. ಅದಕ್ಕೆ ನಿಮಗೆ Sorry ಕೇಳ್ತೀನಿ...

ಮತ್ತೆ ಮುಂದಿನ ಮಂಗಳವಾರದಿಂದ ದೈನಂದಿನ ಜ್ಞಾನ ಪುಟ ನಿಮ್ಮೆದುರಿಗೆ - ನಿಮ್ಮ mailಮನೆಗೆ.

ಅಲ್ಲಿ ತನಕ ನೀವು ಖಾಲಿ ಏನಕ್ಕೆ ಕೂತುಕೊಳ್ತೀರಿ ? 


ನಾನು ಒಂದು ವಾರ ನಿಮಗೆ ಜ್ಞಾನವನ್ನ ಹಂಚುವ ಕೆಲಸ ಮಾಡಿದೀನಿ. ಅದರಲ್ಲಿ ಸಿನೆಮಾ, ಅಧ್ಯಯನ, ಸಂದರ್ಶನ ... ಹೀಗೆ ನಾನಾ ವಿಚಾರಗಳಿದ್ವು. ಅವೆಲ್ಲವನ್ನೂ ಯಾರಿಗೂ ತಿಳಿದೇ ಇರಲಿಲ್ಲ ಅನ್ನೋ ಅಹಂ ಇಂದ ಬರೀಲಿಲ್ಲ. ಬದಲಿಗೆ ನನಗೆ ತಿಳಿಯದ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿ ನಿಮಗೂ ಹಂಚಿದೀನಿ. ಹಾಗೆ ಹಂಚಿದಾಗ ನಿಮಗೆ ಆ ಮಾಹಿತಿ ಕಲೆ ಹಾಕಲು ನಾನು ತೆಗೆದುಕೊಂಡಷ್ಟು ಸಮಯದ ಉಳಿತಾಯ ಆದ ಹಾಗಾಯ್ತು ತಾನೆ ?

ಎಲ್ರಿಗೂ ಅಲ್ದೇ ಹೋದ್ರೂ ಕೆಲವು ಜನ ಸ್ಪರ್ಧಾರ್ಥಿಗಳಿಗಾದ್ರೂ ನಾನು ಹಂಚಿದ ವಿಷಯಗಳು ಹೊಸತಾದವು ಅನಿಸಿರಲಿಕ್ಕೆ ಸಾಕು. ಅಲ್ಲಿಗೆ ನನ್ನ ಶ್ರಮ ಸಾರ್ಥಕ. 

ಅದೇ ರೀತಿ ನೀವೂ ಕೂಡ ಪ್ರತಿ ದಿನ ಒಂದು ವಿಚಾರವನ್ನ ಹೊಸತಾಗಿ ತಿಳಿಯುವ ಹಟ ಮಾಡಿ. ಹಾಗೆ ಒಂದು ವಾರದಲ್ಲಿ  ನೀವು ತಿಳಿದುಕೊಳ್ಳುವ 7 ಹೊಸ ವಿಚಾರಗಳಲ್ಲಿ ಕನಿಷ್ಠ 2 ನ್ನಾದ್ರೂ ಹಂಚಿಕೊಂಡರೆ ಇನ್ನೊಬ್ಬರಿಗೆ ಆ ಮಾಹಿತಿ ಕಲೆಹಾಕಲು ಪಡುವ ಶ್ರಮದ ಉಳಿತಾಯವಾಗಬಹುದಲ್ವೇ ?

ಇನ್ನು ಹೇಗೆ ಹಂಚಿಕೋಬೇಕು ನಿಮ್ಮ ಲೇಖನವನ್ನ ಅನ್ನೋದು ಗೊತ್ತು ತಾನೆ ? ಬಹಳ ಸರಳವಾಗಿದೆ : ನಿಮ್ಮ ಲೇಖನವನ್ನ ನನ್ನ mail ID : spardharthi@gmail.com ಗೆ email ಮಾಡಿ. ಉರಿನಿಂದ ಬಂದ ಮರುದಿನದಿಂದ ನಿಮ್ಮ ಲೇಖನಗಳನ್ನೇ ಪ್ರಕಟಿಸ್ತೀನಿ. ಸರಿನಾ ?

ಇಲ್ಲಿ ಖಂಡಿತ ಸ್ವಾರ್ಥ ಪೂರಿತ ದುಷ್ಟಬುದ್ಧಿಯನ್ನ ಇಣುಕಲು ಬಿಡಬೇಡಿ. ಬದಲಿಗೆ " ನೀ ನನಗಾದರೆ ನಾ ನಿನಗೆ " ಅನ್ನುವ ನಾಣ್ಣುಡಿ ನೆನಪಿರಲಿ. ಈ ನಾಣ್ಣುಡಿಯಲ್ಲಿ ನಿಮಗೆ ನಂಬಿಕೆ ಇದ್ರೂ ಬಂತು ಬಿಟ್ರೂ ಬಂತು , ಆದರೆ : ನಿಮಗೆ ಸಹಾಯ ದೊರೆತು ಅದರಿಂದ ಒಳ್ಳೆಯದಾಗುವುದು, ನೀವು ಇತರರಿಗೆ ಸಹಾಯ ಮಾಡಿದಾಗ ಮಾತ್ರ !!

- ಸ್ಪರ್ಧಾರ್ಥಿ


.

Aug 7, 2010

ಸಂದರ್ಶನ ಸಿದ್ಧತೆಗೊಂದು ಅತ್ಯುಪಯುಕ್ತ ತಾಣ

0 ಪ್ರತಿಕ್ರಿಯೆಗಳು


" ........ಅಂತೂ ಇಂತೂ ಲಿಖಿತ ಪರೀಕ್ಷೆ ಪಾಸು ಮಾಡಿ ಆಯ್ತು , ಆದರೆ ಈಗ ಸಂದರ್ಶನದ್ದೇ ದೊಡ್ಡ ಚಿಂತೆಯಾಗಿದೆ. "

".... ಲಿಖಿತ ಪರೀಕ್ಷೆಗಳಿಗಾದರೆ ಮಾದರಿ / ಪೂರ್ವ ಪ್ರಶ್ನೋತ್ತರ ಲಭ್ಯವಿದ್ವು. ಆದರೆ ಸಂದರ್ಶನಕ್ಕೆ ? "

" ...... ಸಂದರ್ಶನಕ್ಕೆ ಅನುಕೂಲ ಆಗೋ ಹಾಗೆ ಸಹಾಯ ಮಾಡೋ ತಾಣ ಯಾವುದೂ ಇಲ್ವೇ ? "


ಹೀಗಂತ ಅಲವತ್ತುಕೊಳ್ಳುವ ದಿನಗಳು ದೂರ ಸರಿದಿವೆ. ಇನ್ನು ಮೇಲೆ ಆ ಪ್ರಶ್ನೆಯೇ ಉದ್ಧವಿಸುವುದಿಲ್ಲ. ಯಾಕಂದ್ರೆ ಆ ಸಮಸ್ಯೆಗೆ ಪರಿಹಾರ ರೂಪವಾಗಿ ಒಂದು ಸುಂದರ ವೆಬ್ ತಾಣವನ್ನ ನಿಮಗೆ ಪರಿಚಯಿಸ್ತಾ ಇದೀನಿ. ಇಲ್ಲಿ ಈ ಹಿಂದೆ ಆಗಿರುವ ಸಂದರ್ಶನಗಳಿಂದ ಅಭ್ಯರ್ಥಿಗಳಿಂದ ಒಂದೆಡೆ ಮಾಹಿತಿ ಸಂಗ್ರಹಿಸಲಾಗಿದೆ. ಇಲ್ಲಿ ಸರ್ಕಾರೀ ನೌಕರಿಯ ಜೊತೆಗೆ Software ನೌಕರಿಯ ಎಲ್ಲ ತರಹದ Topic ಗಳನ್ನ ಆಧರಿಸಿ ಸಂದರ್ಶನ ಮಾಹಿತಿಯನ್ನ / ಪ್ರಶ್ನೆಗಳನ್ನ ಕಲೆ ಹಾಕಲಾಗಿದೆ. ವ್ಯವಸ್ಥಿತಾವಗಿದೆ ಅವರ ಪ್ರಯತ್ನ. ಅದಕ್ಕೆ ನಾವೆಲ್ಲ ಶುಭ ಕೋರಲೇಬೇಕು. ಈಗ ಆ ತಾಣ( allinterview.com ) ಒಂದ್ಸಾರಿ ಸಂದರ್ಶಿಸಿ ಬನ್ನಿ. ನಿಮ್ಮ ಮುಂದಿನ ಸಂದರ್ಶನಗಳಿಗೆ ಸಹಾಯ ಮಾಡುವ ಶಕ್ತಿ ಆ ತಾಣಕ್ಕಿದೆ ಅಂತ ನಾನು ನಂಬಿದೀನಿ.

ತಾಣವನ್ನ ಸಂದರ್ಶಿಸಲು ಇಲ್ಲಿ ಕ್ಲಿಕ್ಕಿಸಿ




: ರವಿ

Aug 6, 2010

Exploring ಸ್ಪರ್ಧಾರ್ಥಿ : I

0 ಪ್ರತಿಕ್ರಿಯೆಗಳು



ಈ ತರಹ ಹೊಸ ಹೊಸ ಉತ್ಪನ್ನಗಳಿಗೆ ಕಂಪೆನಿಗಳು ಧ್ಯೇಯ ವಾಕ್ಯ ನೀಡೋದು ರೂಢಿಯಾಗಿಬಿಟ್ಟಿದೆ. ಬರೀ ಹೊಸ ಉತ್ಪನ್ನಗಳಷ್ಟೇ ಅಲ್ಲ,  ಹಳೆ ಕಂಪೆನಿಗಳು ಕೂಡ ತಮ್ಮ ಧ್ಯೇಯ ಬದಲಾಗಿರುವುದನ್ನ ಘೋಷಿಸುವುದಕ್ಕೋಸ್ಕರ / ತಮ್ಮ ಕಂಪೆನಿಯ ಹೆಚ್ಚಿರುವ ಬದ್ಧತೆಯನ್ನ ತೋರಿಸಲಿಕ್ಕೆ ಕೂಡ ಧ್ಯೇಯ ವಾಕ್ಯಗಳನ್ನ ಬದಲಾಯಿಸ್ತಾ ಹೋಗ್ತಾವೆ. ಆ ಧ್ಯೇಯ ವಾಕ್ಯಗಳು ಆ ಉತ್ಪನ್ನದ ಉದ್ದೇಶ ಸಾರುತ್ವೆ .... ಅಂತಹ ಅನೇಕ Slogans / Tag Lines ಗಳ ಸಂಗ್ರಹವೊಂದು ನಮ್ಮ ಸ್ಪರ್ಧಾರ್ಥಿಯಲ್ಲಿದೆ.  ಆ ಸಂಗ್ರಹಕ್ಕೆ ಸಾಕಷ್ಟು ಶ್ರಮ ಪಟ್ಟಿದೀನಿ. 75% ಪೂರ್ತಿಯಾಗಿದೆ. ಇನ್ನುಳಿದವುಗಳನ್ನ ಶೀಘ್ರದಲ್ಲೇ ಪೂರ್ತಿ ಮಾಡ್ತೀನಿ. ಒಂದ್ಸಾರಿ ಓದಿ : ಇಲ್ಲಿ ಕ್ಲಿಕ್ಕಿಸಿ


Aug 5, 2010

ನಮ್ಮ ಗುರುಪ್ರಸಾದ್

0 ಪ್ರತಿಕ್ರಿಯೆಗಳು
'ಮಠ' ಚಲನಚಿತ್ರ ನೋಡಿದ ಪ್ರತಿಯೊಬ್ಬರಿಗೂ ಗೊತ್ತು ನಿರ್ದೇಶಕ ಗುರುಪ್ರಸಾದ್ Calibre ಏನೆಂದು. ಅಂಥ ಗುರುಪ್ರಸಾದ್ ಹಿಂದೆ " ಯಾರಿಗೆ ಬೇಡ ದುಡ್ಡು !! " (2002) ಎಂಬ ಚಿತ್ರ ಮಾಡಿದ್ದು ಕಡಿಮೆ ಜನರಿಗೆ ಗೊತ್ತು. 'ಮಠ'(2006)ದ ನಂತರ ಬಿಡುಗಡೆಯಾದ  'ಎದ್ದೇಳು ಮಂಜುನಾಥ'(2009) ಚಿತ್ರ ಕೂಡ ಗುರುಪ್ರಸಾದ್ ರ ಸಾಮರ್ಥ್ಯವನ್ನ ಸಾಬೀತು ಪಡಿಸಿದೆ.


ಈಗ 2 ಚಿತ್ರಗಳು ಅವರ ಮುಂದಿವೆ : ಡೈರೆಕ್ಟರ್ಸ್' ಸ್ಪೆಷಲ್ ಮತ್ತೆ ಜುಗಲ್ ಬಂದಿ.


ಡೈರೆಕ್ಟರ್ಸ್ ಸ್ಪೆಷಲ್ ನಲ್ಲಿ ಕೋಮಲ್ ರನ್ನ ಸೇರಿಸಿಕೊಂಡದ್ದು ನಂತರ ಅವರು ಕೈಕೊಟ್ಟದ್ದು ಈಗ ಇತಿಹಾಸ. ತಬ್ಲಾ ನಾಣಿ ಯವರಂತೂ ಎಂದಿನಂತೆ ಗುರುಪ್ರಸಾದ್ ಜೊತೆಗಿದಾರೆ. ಕೋಮಲ್ ಬಿಟ್ಟು ಹೋದ ನಂತರ ಗುರುಪ್ರಸಾದ್ ರಂಗಭೂಮಿಯಿಂದ ಕೆಲವು ಪ್ರತಿಭಾವಂತರನ್ನ ತಮ್ಮ Director Special ಚಿತ್ರಕ್ಕೆ ಆರಿಸಿಕೊಂಡಿದ್ದಾರಂತೆ. ಎಂಥ ಕಗ್ಗಲ್ಲನ್ನೂ ಕಡೆದು ಸುಂದರ ಶಿಲ್ಪವನ್ನಾಗಿಸಿವ ಶಿಲ್ಪಿಯ ಹಾಗೆ ನಮ್ಮ ಗುರುಪ್ರಸಾದ್ ಅಲ್ವಾ ?!! ಅಂಥದ್ರಲ್ಲಿ ರಂಗಭೂಮಿಯ ನಟರು ಅವರ ಪರಿಶ್ರಮಕ್ಕೆ ಬೆಲೆ ತಂದೇ ತರುತ್ತಾರೆ ಅಂತ ಹಾರೈಸೋಣ.


ಜುಗಲ್ ಬಂದಿಯಲ್ಲೂ ನಾಣಿಯವರಿರುವುದು ಗೊತ್ತಾಗಿದೆ. ಬಾಕಿ ರೂಪುರೇಷೆಗಳು ತಿಳಿದು ಬಂದಿಲ್ಲ.



: ರವಿ

Aug 4, 2010

Spa ಅಂದ್ರೇನು ಗೊತ್ತಾ ?

0 ಪ್ರತಿಕ್ರಿಯೆಗಳು

ಈ ಬ್ಯೂಟಿ ಪಾರ್ಲರ್ ಗಳು ಕೆಲವು ತಮ್ಮ ನಾಮಫಲಕಗಳ ಮೇಲೆ ' ಸ್ಪಾ (Spa ) ' ಅನ್ನೋ ಶಬ್ದವನ್ನೂ ಸೇರಿಸಿಕೊಂಡು ಜನರನ್ನ ಸೆಳೆಯೋ ಕೆಲಸ ಮಾಡ್ತಾ ಇವೆ. ಈ ಸ್ಪಾಗಳು ಐಷಾರಾಮಿ ರೆಸಾರ್ಟ್ ಗಳಲ್ಲಿ ಸಾಮಾನ್ಯವಾಗಿ ಹೋಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಆದರೆ ಏನು ಈ ಸ್ಪಾ ಅಂದ್ರೆ ಅಂತ ನಿಖರವಾಗಿ ಬಹಳ ಕಡಿಮೆ ಜನರಿಗೆ ಗೊತ್ತು.

' Health Through Water ' - ಅನ್ನುವ ಧ್ಯೇಯವುಳ್ಳ ಈ ಕ್ರಿಯೆ ಖನಿಜಯುಕ್ತ ನೀರನ್ನ ನಮ್ಮ ದೇಹದ ಮೇಲೆ ಪ್ರಯೋಗ ಮಾಡಿ ನಮ್ಮನ್ನ ಆರೋಗ್ಯವಾಗಿರಿಸಿಕೊಳ್ಳುತ್ತೆ. ಅದು ಸ್ನಾನವಾಗಿರಬಹುದು / Body Massage ಆಗಿರಬಹುದು. ಆದರೆ Spa Treatment ಅನ್ನೋ ಶಬ್ದ ಒಳಗೊಳ್ಳುವ ಅಂಶಗಳು Confuse ಮಾಡಿಸ್ತಾವೆ. ಹೀಗಾಗಿ ಏನು ಬರೀಬೇಕು ಅಂತ ಗೊತ್ತಾಗ್ಲಿಲ್ಲ. 

ಅದ್ಕೆ ಹೆಚ್ಚಿಗೆ ತಿಳಿಲಿಕ್ಕೆ /ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ




 - ರವಿ

Aug 3, 2010

SIMPLEX INFRA

0 ಪ್ರತಿಕ್ರಿಯೆಗಳು

ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದನ್ನ ನೋಡಿದ ಪ್ರತಿಯೊಬ್ಬರೂ ಒಂದು ಹೆಸರನ್ನ ಗಮನಿಸಿರಬಹುದು. ಅದೇ ರಸ್ತೆ ಪಕ್ಕ Barricade ಹಾಕಿರ್ತಾರಲ್ಲಾ ... ಅವುಗಳ ಮೇಲೆ BMRCL ( Bangalore Metro Rail Corporation Ltd. ) ಎಂಬ ಹೆಸರಿನ ಜೊತೆಗೆ SIMPLEX INFRA ಎಂಬ ಹೆಸರನ್ನ ಕೂಡ ನೀವು ಓದಿರಬಹುದು. ಆ ಕಂಪೆನಿಯ ಹೆಸರು BMRCL ಹೆಸರಿನ ಒಟ್ಟೊಟ್ಟಿಗೆ ಬರೆದಿರೋದ್ರಿಂದ ಅದು ಸದರಿ ಕಾಮಗಾರಿಯಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತಿರಬೇಕು ಎಂಬ ಸಂಶಯ ಮೂಡಿ ಅದರ ಬಗ್ಗೆ ಹೆಚ್ಚಿಗೆ ತಿಳಿಯಲು ಕೆಲವು ಉಪಯುಕ್ತ ಅಂತರ್ಜಾಲ ಕೊಂಡಿ ( LINK ) ಗಳನ್ನ ನೀಡ್ತಿದೀನಿ... ಒಂದು ಸಾರಿ ಗಮನ ಹರಿಸಿ :

1924ರಿಂದ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಸಿಂಪ್ಲೆಕ್ಸ್ ಇನ್ಫ್ರಾ ತನ್ನ ಕೇಂದ್ರ ಕಚೇರಿಯನ್ನ ಕೋಲ್ಕತಾದಲ್ಲಿ ಹೊಂದಿದೆ. ಭಾರತ ಹಾಗೂ ಮಧ್ಯ ಏಷ್ಯಾದಲ್ಲಿ ತನ್ನ ಕಾರ್ಯವಿಸ್ತಾರ ಹೊಂದಿರುವ ಈ ಕಂಪೆನಿ ತಾನು ಕೈಗೆತ್ತಿಕೊಳ್ಳುವ ಕಾಮಗಾರಿಗಳನ್ನ 7 ವಿಭಾಗಗಳಲ್ಲಿ ವಿಭಾಗಿಸಿಕೊಂಡಿದೆ :

  • Ground Engineering
  • Industrial
  • Building & Housing, Power
  • Marine
  • Roads
  • Railways & Bridges and 
  • Urban infra. 

ಸದರಿ ಕಂಪೆನಿಯ ನಡೆದು ಬಂದ ದಾರಿ : ಇಲ್ಲಿ ಕ್ಲಿಕ್ಕಿಸಿ

ನಮ್ಮ ರಾಜ್ಯದ ಮೊದಲ ಮೆಟ್ರೋ ನೀಡಲು ಕಾರ್ಯನಿರ್ವಹಿಸುತ್ತಿರುವ ಈ ಕಂಪೆನಿಯ ಹಿನ್ನೆಲೆಯನ್ನ ಅಂದ್ರೆ ಹಿಂದಣ ಸಾಧನೆಗಳನ್ನ ಗಮನಿಸಬೇಕಾದ್ದು ಅವಶ್ಯ ಅನ್ಸುತ್ತೆ. ಅದನ್ನ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಇನ್ನು ಕಂಪೆನಿಯ ಅಂತರ್ಜಾಲ ತಾಣ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ







: ರವಿ

Aug 2, 2010

ಎರಡನೇ ದಿನಕ್ಕೆ ಕನ್ನಡಕ್ಕೊಂದು ನಮನ

0 ಪ್ರತಿಕ್ರಿಯೆಗಳು
ಕರ್ನಾಟಕದಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳಿಗೆ ' ಕನ್ನಡ ಪತ್ರಿಕೆ ' ಕಡ್ಡಾಯವಾಗಿರುವುದು ನಿಮಗೆ ತಿಳಿದಿದೆ ಅನ್ಸುತ್ತೆ.

ಹಾಗಾದ್ರೆ ಸದರಿ ಕನ್ನಡ ಪರೀಕ್ಷೆಗಳಲ್ಲಿ ಕೇಳುವ ಕನ್ನಡ - ಕರ್ನಾಟಕಕ್ಕೆ ಸಂಬಂಧಿಸಿದ 

ಸಾಮಾನ್ಯ ಜ್ಞಾನ ಮಾಹಿತಿಗಾಗಿ ತಡಕಾಡುವ ದಿನಗಳು ದೂರ ಇನ್ಮೇಲೆ !!

ಹೇಗೆ ಅಂತೀರಾ ?

ಒಂದು ಸುಂದರ ವೆಬ್ ತಾಣವಿದೆ :

ಅಂತ.

ನಾನು ಜಾಸ್ತಿ ಹೇಳೋದಕ್ಕಿನ್ನ ನೀವೇ ಒಂದ್ಸಾರಿ ನೋಡಿ ಬನ್ನಿ.

ಇಷ್ಟ ಆದ್ರೆ ಸದಸ್ಯರಾಗಲು ಮರೆಯಬೇಡಿ.







: ರವಿ


Aug 1, 2010

ಮೊದಲ ದಿನದ Surprise !!

0 ಪ್ರತಿಕ್ರಿಯೆಗಳು
ಕರ್ನಾಟಕದಲ್ಲಿ ಕನ್ನಡದಲ್ಲಿ ನಡೆಯುವ ಪ್ರಶ್ನೋತ್ತರಗಳ ಲಭ್ಯತೆ ಸಮಸ್ಯೆಯಾಗಿದೆಯಾ ?

SDA , FDA , KAS , High School Teacher .... ಇತ್ಯಾದಿ ಹುದ್ದೆಗಳಿಗಾಗಿ ನಡೆಯುವ ಪ್ರಶ್ನೆ ಪತ್ರಿಕೆಗಳು ಸಕಾಲದಲ್ಲಿ ಅಥವಾ ಬೇಕೆಂದಾಗ ಸಿಗುತ್ತಿಲ್ಲವೇ ?

ಅದಕ್ಕೊಂದು ಪರಿಹಾರ ಇದೀಗ ಲಭ್ಯವಿದೆ.


ಇನ್ನು ಮುಂದೆ ನಡೆಯುವ ಯಾವುದೇ ಹೊಸ ಪರೀಕ್ಷೆಗಳ ಪ್ರಶ್ನೋತ್ತರಗಳು ಇಲ್ಲಿ ಲಭ್ಯವಾಗುತ್ತವೆ.ಜೊತೆಗೆ ಈಗಾಗಲೇ ಮುಕ್ತಾಯವಾಗಿರುವ ಪರೀಕ್ಷೆಗಳ ಹಳೆ ಪ್ರಶ್ನೋತ್ತರಗಳು ಇಲ್ಲಿ ಲಭ್ಯ. 
ಅವುಗಳನ್ನ ವರ್ಷವಾರು & ಹುದ್ದೆವಾರು ವಿಂಗಡಿಸಲಾಗಿದೆ.
ನಿಮಗೆ ಬೇಕಾದ ರೀತಿಯಲ್ಲಿ ಪ್ರಶ್ನೆಪತ್ರಿಕೆಗಳನ್ನ ಹುಡುಕಬಹುದು.

ಅಲ್ಲಿ ಉತ್ತರದ ಜೊತೆಗೆ ವಿವರಣಾತ್ಮಕವಾದ ಉತ್ತರ ಕೂಡ ಲಭ್ಯವಿರುತ್ತದೆ. ಅದೂ ಸಾಲದಿದ್ರೆ ವಿವರಣಾತ್ಮಕ ಉತ್ತರ ಲಭ್ಯವಿರುವ ಸಮರ್ಥ ತಾಣಗಳ ಮಾಹಿತಿ ಕೂಡ ಇರುತ್ತದೆ.

ಪ್ರತಿ ಪ್ರಶ್ನೋತ್ತರವು ವರ್ಷದ ಯಾವುದೇ ಕಾಲದಲ್ಲಿ ಯಾವುದೇ ಹೊತ್ತಲ್ಲಿ ನಿಮ್ಮ ಮುಂದೆ ಹಾಜರ್...
ಒಂದು ಕ್ಲಿಕ್ಕಿನ ಮೂಲಕ.
ಆ ಪ್ರಶ್ನೋತ್ತರಗಳನ್ನ PRINT ಕೂಡ ತೆಗೆದುಕೊಳ್ಳಬಹುದು. ಒಂದು ಪೈಸೆಯನ್ನೂ ಚಾರ್ಜ್ ಮಾಡಲ್ಲ.

ಆಶ್ಚರ್ಯ ಆಯ್ತಾ ? ಖುಷಿ ಆಯ್ತಾ ?

ಏನೇ ಇದ್ರೂ ನಿಮಗೆ ಅನುಕೂಲ ಆಗಿ ಅದರಿಂದ ನೀವು ಮುಂಬರುವ ಪರೀಕ್ಷೆಗಳಿಗೆ ತಯಾರಾಗುವಾಗ ಅನುಕೂಲ ಆಗಿ ನಮ್ಮ 'ಪ್ರಶ್ನೋತ್ತರ ತಂಡ'ವನ್ನ ನೆನೆಸಿಕೊಂಡ್ರೆ ಆದ್ರೆ ಅದೇ ನೀವು ನಮಗೆ ನೀಡುವ ಹಣ, ಫೀ...

ಸರಿ ನಾ ? 
ಮತ್ತೆ ನಾಳೆ ಸಿಗ್ತೀನಿ... ಹೊಸತೊಂದು ಜ್ಞಾನಪುಟವನ್ನ ನಿಮ್ಮ ಮುಂದೆ ತರ್ತೀನಿ.




ಇಂತಿ,
ರವಿ


Jul 31, 2010

" ಸ್ಪರ್ಧಾರ್ಥಿ " : ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ, ಶುಭಾರಂಭ

0 ಪ್ರತಿಕ್ರಿಯೆಗಳು

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ ||






ನಮಸ್ತೆ ... ಎಲ್ಲರಿಗೂ ಶುಭಮುಂಜಾವು. 


ಸ್ಪರ್ಧಾರ್ಥಿ - ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ
ಇಂದಿನಿಂದ ದೈನಂದಿನ ಜ್ಞಾನ ಪತ್ರಿಕೆಯಾಗಿ ಪ್ರಾರಂಭವಾಗುತ್ತಿದೆ.

ಇವತ್ತಿನಿಂದ ನಮ್ಮ - ನನ್ನ - ನಿಮ್ಮ - ನಮ್ಮೆಲ್ಲರ ಸ್ಪರ್ಧಾರ್ಥಿ e-ಪತ್ರಿಕೆ ಶುಭಾರಂಭ. ಅಂದ್ರೆ ಪ್ರತಿ ದಿನ ಜ್ಞಾನ ಹೊತ್ತು ತರುವ ದಿನಪತ್ರಿಕೆಯ ರೂಪದಲ್ಲಿ ನಿಮ್ಮ ಮುಂದೆ. ಪ್ರತಿ ದಿನ ಬೆಳಿಗ್ಗೆ ಒಂದು ಪ್ರಚಲಿತ / ಉಪಯುಕ್ತ / ಸ್ವಾರಸ್ಯಕರ ಮಾಹಿತಿ ಹೊತ್ತ ಪತ್ರಿಕೆಯ ಪ್ರತಿಯೊಂದು ನಿಮ್ಮ mailಮನೆಗೆ ತಲುಪಿಸುವ ಜವಾಬ್ದಾರಿ ನನಗೆ ಬಿಡಿ. ಆದರೆ 

ಹಾಗೆ ತಲುಪುವ ಎಲ್ಲ ಲೇಖನಗಳಿಗೂ ನಾನೇ ಲೇಖಕ / ಕರ್ತೃ ಆಗಬೇಕೆಂಬ ಯಾವ ಸ್ವಾರ್ಥದ ನಿಯಮವನ್ನೂ ನಾನು ಇಟ್ಟುಕೊಂಡಿಲ್ಲ. ಪತ್ರಿಕೆಯನ್ನ ಖುದ್ದಾಗಿ ಸಂದರ್ಶಿಸಿ / ಪತ್ರಿಕೆಯ ಬಗ್ಗೆ ಸ್ನೇಹಿತರಿಂದ ಕೇಳಿ ತಿಳಿದುಕೊಂಡ ಪ್ರತಿಯೊಬ್ಬ ಆಸಕ್ತ : ಕನ್ನಡ ಬಲ್ಲ ವ್ಯಕ್ತಿ ಇಲ್ಲಿ ತಮ್ಮ ಜ್ಞಾನವನ್ನ ಹಂಚಿಕೊಳ್ಳಬಹುದು. ದೇಶ - ಕಾಲದ ಪರಿಮಿತಿ ಇಲ್ಲ. ಇರುವುದೊಂದೇ ಪರಿಮಿತಿ , ಅದು ಕನ್ನಡ.

ಅಂದ್ರೆ ನಿಮ್ಮೆಲ್ಲ ಜ್ಞಾನ ಹಂಚುವ ಹಂಚಿಕೆಗಳು ಕನ್ನಡದಲ್ಲಿರಲಿ & ನುಡಿ 4.0 Unicode ನಲ್ಲಿ ಬೆರಳಚ್ಚಿಸಿದುದಾಗಿರಬೇಕು. ಇಲ್ಲದಿದ್ದಲ್ಲಿ Google Transliterator ಬಳಸಿ ಬರೆಯಬಹುದು. ಮತ್ತು ಹಾಗೆ ಬರೆದ ಲೇಖನವನ್ನ ನನ್ನ email ID spardharthi@gmail.com ಗೆ ಬರೆದು ಕಳುಹಿಸಿ. ವಿಶೇಷ ಸಂದರ್ಭಕ್ಕೆ ತಕ್ಕ ಲೇಖನ ಬರೆಯಬೇಕು ಎನ್ನುವವರು , ಆ ವಿಶೇಷ ದಿನ / ಸಂದರ್ಭದ ಕನಿಷ್ಠ 30 ಗಂಟೆ ಮುಂಚೆ ಲೇಖನವನ್ನ ಕಳಿಸಿಕೊಟ್ಟರೆ ಅನುಕೂಲ. 

ಪ್ರಸ್ತುತ ತಾಣದ ಕರ್ತೃವಿನ ಬಗ್ಗೆ ಹಾಗೂ e-ತಾಣ ಶುರುವಾದ ಬಗ್ಗೆ ಹೆಚ್ಚಿಗೆ ತಿಳಿಯಲು ಮನಸಾದ್ರೆ ಇಲ್ಲಿ ಕ್ಲಿಕ್ಕಿಸಿ

ಆಂಗ್ಲಭಾಷೆಯಲ್ಲಿ ಕಂಡ http://allexamguru.blogspot.com/ ಎಂಬ ತಾಣವೇ ನನಗೆ ಸ್ಫೂರ್ತಿ.

ಆದರೆ ಆಂಗ್ಲಭಾಷೆಯಲ್ಲಿ ಮಾಹಿತಿ / ಜ್ಞಾನ ನೀಡಲು ಅವರಿಗೆ ಗೊತ್ತಿರುವಷ್ಟೇ ತಂತ್ರಾಂಶಗಳ ಜ್ಞಾನ ನಮಗೂ ಗೊತ್ತಿರಬೇಕಾದರೆ ನಾವೇಕೆ ಸುಮ್ಮನಿರೋಣ. ನಾವೂ ಅವರಿಗಿಂತ ಮಿಗಿಲಾಗಿ ಜ್ಞಾನ ಹಂಚೋಣ. ಅವರಿಗಿನ್ನ ಎತ್ತರವನ್ನ ಮುಟ್ಟೋಣ. ನಾನೊಬ್ಬನೇ ಆ ಕೆಲಸ ಮಾಡಿ ನಿಮ್ಮೆದುರಿಗೆ ಬೀಗುವ ಹಮ್ಮಿಲ್ಲ ನನಗೆ. ಬದಲಿಗೆ ನಿಮ್ಮನ್ನೂ ಜೊತೆ ಸೇರಿಸಿಕೊಂಡು ಎತ್ತರಕ್ಕೇರುವ ಹಂಬಲ ನಂದು. ನಿಮ್ಮ ಜೊತೆ ನನಗಿದೆ ಅನ್ಕೊಂಡು ಹೆಜ್ಜೆ ಹಾಕ್ತಿದೀನಿ. ಕನ್ನಡಿಗರ ಮನಸ್ಸು ಎಂದಿಗೂ ಸಹೃದಯತೆ - ಸಹಕಾರ ದ ಮಡಿಲು ಎಂದು ನಂಗೊತ್ತು.

ಇಂತಿ,
ಸ್ಪರ್ಧಾರ್ಥಿ

[ ನಿಮ್ಮ ಸ್ನೇಹಿತರನ್ನ e-ತಾಣಕ್ಕೆ ಪರಿಚಯಿಸಲು ಮರೆಯಬೇಡಿ. ಪ್ರತಿದಿನ ಬರುವ ಈ ತರಹದ ಲೇಖನಗಳನ್ನ Forward ಮಾಡಿ ಅವರಿಗೂ e-ಜ್ಞಾನದ ರುಚಿ ತೋರಿಸಿ. ಸ್ಪರ್ಧಾರ್ಥಿ ತಾಣವನ್ನ ಖುದ್ದಾಗಿ ಸಂದರ್ಶಿಸಲು ಇಲ್ಲಿ ಕ್ಲಿಕ್ಕಿಸಿ http://spardharthi.blogspot.com/ ]

ಅಂತರ್ಜಾಲ ಲೋಕದಲ್ಲಿ " ಸ್ಪರ್ಧಾರ್ಥಿ e-ಪತ್ರಿಕೆ " ಎಲ್ಲ ಪ್ರಮುಖ ಅವಕಾಶಗಳನ್ನೂ ಆಕ್ರಮಿಸಿಕೊಂಡಿದೆ ಅನ್ನೋದು ನಿಮಗೆ ಗೊತ್ತಾ ?

ನೀವು Facebook ನಲ್ಲಿ ಇದೀರಾ ? ಹಾಗಾದರೆ : ಇಲ್ಲಿ ಕ್ಲಿಕ್ಕಿಸಿ 

[ ಈಗಾಗಲೇ ಸುಮಾರು 500 ಜನ Fan ಗಳಿದಾರೆ ]

Facebook ನಲ್ಲಿ ಇನ್ನೊಂದು Account ಇದೆ ಅದನ್ನ Follow ಮಾಡಲು ಇಲ್ಲಿ ಕ್ಲಿಕ್ಕಿಸಿ

 [ ಈಗಾಗಲೇ 1000+ ಜನ ಸ್ನೇಹಿತರಿದಾರೆ !! ]

ನೀವು Twitter ನಲ್ಲಿ ಇದೀರಾ ? ಹಾಗಾದರೆ : ಇಲ್ಲಿ ಕ್ಲಿಕ್ಕಿಸಿ

Twitter ನಲ್ಲಿ ಇನ್ನೊಂದು Account ಇದೆ ಅದನ್ನ Follow ಮಾಡಲು ಇಲ್ಲಿ ಕ್ಲಿಕ್ಕಿಸಿ

ಸ್ಪರ್ಧಾರ್ಥಿ Orkut ಸ್ನೇಹಿತನ ರೂಪದಲ್ಲಿಯೂ ಲಭ್ಯ !! ಹಾಗೂ Orkut Community ರೂಪದಲ್ಲಿಯೂ ಲಭ್ಯ !!!



Jul 24, 2010

ಸ್ಪರ್ಧಾರ್ಥಿ Twitter Account ನ ಕಾರ್ಯವೈಖರಿ

1 ಪ್ರತಿಕ್ರಿಯೆಗಳು


ಇಂದು ಇನ್ನೊಂದು ಹೊಸ ಸಾಹಸಕ್ಕೆ ಕೈ ಹಾಕಿದೀನಿ. 

ಅದು ಏನಂದ್ರೆ ಒಂದು ಹೊಸ Twitter Account ಶುರು ಮಾಡಿದೀನಿ. 

ಅಲ್ಲಿ ಒಂದು ಸಾಲಿನ ಜ್ಞಾನ ಹಂಚಲು ಹಂಚಿಕೆ ಹಾಕಿದೀನಿ.

ಜ್ಞಾನವನ್ನ 140 ಅಕ್ಷರಗಳಲ್ಲಿ ಹಿಡಿದಿಟ್ಟು ಸ್ಪರ್ಧಾರ್ಥಿ Twitter Account ನಲ್ಲಿ ನಾನು ಬರೀತೀನಿ.

ಅದನ್ನ Follow ಮಾಡಿದರೆ ಆ 140 ಅಕ್ಷರಗಳ ಜ್ಞಾನ ನಿಮ್ಮ ಮುಂದೆ.

ನಿಮಗೂ ಇದೇ ರೀತಿಯಲ್ಲಿ ಜ್ಞಾನ ಹಂಚುವ ಮನಸ್ಸಾದ್ರೆ,

ನೀವೂ ಇದೇ ಉದ್ದೇಶಕ್ಕೆಂದು ಒಂದು ಹೊಸ Twitter Account ಶುರು ಮಾಡಿ.

ಆದ್ರೆ, ಒಂದೇ ಒಂದು ಷರತ್ತು ಏನಂದ್ರೆ ....

" ಅಲ್ಲಿ ನೀವು ಜ್ಞಾನ ಪ್ರಸಾರದ ಹೊರತು ಬೇರೇನೂ ಬರೆಯಕೂಡದು "

" ಅಂಥದ್ದೇನಾದ್ರೂ ಬರೆದಲ್ಲಿ ಅದನ್ನ ತೆಗೆದುಹಾಕಲಾಗುವುದು "

ಮೇಲ್ಕಂಡ ನಿಯಮ ಪಾಲಿಸಿ ಅಂಥದೊಂದು Twitter Account ಅನ್ನ ನೀವು ಶುರು ಮಾಡಿದ್ದೇ ಆದಲ್ಲಿ, ನಿಮ್ಮ ಆ Twitter Account ಅನ್ನ ನಾನು ( @spardharthi ) Follow ಮಾಡ್ತೀನಿ.

ಆಗ ನನ್ನ & ನಿಮ್ಮ ಪಾಲಿನ ಜ್ಞಾನ ನಮ್ಮೆಲ್ಲರ ಪಾಲಾಗುತ್ತೆ.

ಇದೇ ತಾನೆ ಸ್ಪರ್ಧಾರ್ಥಿಯ ಧ್ಯೇಯ !!

ಇಷ್ಟು ನಿಯಮ / ಕಾರ್ಯವೈಖರಿ ಪಾಲಿಸಿ ಜ್ಞಾನ ಹಂಚುವ ಕೆಲಸ ಮಾಡೋಣ.

1000 ಗಟ್ಟಲೇ ಅಕ್ಷರ ಬಳಸಿ ಲೇಖನ ಬರೆಯಲು ಆಲಸಿ ಎನ್ನಿಸುವವರು ,

ಒಂದು ಸಾಲಿನ ಆದರೆ 140 ಅಕ್ಷರ ಮೀರದ ವಾಕ್ಯಗಳಲ್ಲಿ ಜ್ಞಾನ ಹಂಚಿ.

Let's Tweet Knowledge in 140 Letters.


Cheers!!!

ಸರಿನಾ ? 

ಸರಿ ಹಾಗಿದ್ರೆ. Over 2 U.

Jul 18, 2010

ಮೈಕ್ರೋಮ್ಯಾಕ್ಸ್ ಬ್ಲಿಂಗ್ ನ Swarovski ಎಲೆಮೆಂಟ್ಸ್

0 ಪ್ರತಿಕ್ರಿಯೆಗಳು

ನಮ್ಮ ಅಕ್ಕಿ aka ಅಕ್ಷಯ್ ಕುಮಾರ್ ತನ್ನ ಹೆಂಡತಿ ಟ್ವಿಂಕಲ್ ಖನ್ನಾಳ ಮೈಕ್ರೋಮ್ಯಾಕ್ಸ್ ಬ್ಲಿಂಗ್ ನ ಜಾಹೀರಾತಿಗಾಗಿ ತನ್ನ Trademark ನಗುವಿನ ಶೈಲಿಯಲ್ಲಿ " ಹಾ ... ಹಾ .. ಹಾ ... It Twinkles !! " ಅಂತ ಧ್ವನಿ ನೀಡಿದ್ದನ್ನ ನೀವು ಗಮನಿಸಿರಬಹುದು. ಆ ಜಾಹೀರಾತಿನಲ್ಲಿ ಕೇಳಿ ಬರುವ ಒಂದು ಶಬ್ದ " It's Decorated With Swarovski ಎಲೆಮೆಂಟ್ಸ್ "  ದ ಅರ್ಥ ಏನ್ ಗೊತ್ತಾ ? ಇಲ್ಲಿದೆ ಓದಿ ತಿಳ್ಕೊಳಿ ...



ಸ್ವಾರೋಸ್ಕೀ - ಇದು ನಿಖರವಾಗಿ ಕತ್ತರಿಸಲ್ಪಟ್ಟ ಗಾಜುಗಳಿಂದ ಮಾಡಿದ ಆಭರಣ / ಐಷಾರಾಮಿ  ಉತ್ಪನ್ನಗಳನ್ನು ತಯಾರು ಮಾಡುವ ಕಂಪೆನಿಯ ಹೆಸರು. ಇವೇನೂ ವಿರಳ ರತ್ನದಂಥ ಕಚ್ಚಾ ವಸ್ತುವಿನಿಂದ ಮಾಡಿದ ವಸ್ತುಗಳಲ್ಲ. ಬದಲಿಗೆ ಹೇರಳವಾಗಿರುವ ಗಾಜನ್ನೇ ಬಳಸಿಕೊಂಡು ಕ್ರಿಯಾಶೀಲತೆಗೆ ಕೆಲಸ ನೀಡಿ ಆ ಗಾಜನ್ನ ವಿವಿಧ ಕೋನಗಳ್ಲಲಿ ಸಾಣೆ ಹಿಡಿದು ಸಾಮಾನ್ಯ ಗಾಜನ್ನ ನಯನ ಮನೋಹರವಾಗಿಸುವುದು ಇವರ ಕೆಲಸ.


ಅಂತೆಯೇ ಮೈಕ್ರೋಮ್ಯಾಕ್ಸ್ ಕಂಪೆನಿಯವರು ರೂ.5000/- ದಲ್ಲಿನೇ ಈ ಬ್ಲಿಂಗ್ ಅನ್ನ ನೀಡುತ್ತಿರುವುದು.


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


: e - ಶ

Jul 3, 2010

Mobile Operating System

0 ಪ್ರತಿಕ್ರಿಯೆಗಳು
Android : Symbian : Windows Phone : iOS : BADA : Maemo

ಈ ಶಬ್ದಗಳನ್ನ ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದ ನೆನಪಿದೆಯಾ ? ಇಲ್ವಾ ?!! ಹಾಗಿದ್ರೆ ಕೇಳಿ ನಾನು ಹೇಳ್ತೀನಿ ಏನಿವು ಅಂತ.

ಇವು , ನಮ್ಮ ದಿನನಿತ್ಯದ ಭಾಗವಾಗಿ ಹೋಗಿರುವ ಮೊಬೈಲ್ ಗಳ Operating Sysyem ಗಳ ಹೆಸರುಗಳು. ಮೊದಲಿಗೆ ಮೊಬೈಲ್ ನಮ್ಮ ಕೈಗೆ ಬಂದಾಗ ಅವು ಬಳಸ್ತಾ ಇದ್ದದ್ದು Operating System ( OS )ನ ಗುಣಾಂಶಗಳನ್ನ ಹೊಂದಿದ್ದರೂ OS ಅಲ್ಲದ ಒಂದು ಸರಳ Software. ಆ ದಿನಗಳಲ್ಲಿ ಆ ಮೊಬೈಲ್ ಗಳು ನಮಗೆ ನೀಡುತ್ತಿದ್ದ ಸೌಲಭ್ಯಗಳು ಅಷ್ಟೇ ನಿಯಮಿತವಾದವುಗಳು ತಾನೇ ?

ಆದರೆ ದಿನಕಳೆದಂತೆ ಮೊಬೈಲ್ ಗಳು PDA(Personal Digital Assistant) ಗಳಾಗಿ ಬದಲಾದುವು. ಆವಾಗ ಅವು ಒಂದು ಪುಟ್ಟ ಕಂಪ್ಯೂಟರ್ ಮಾಡಬೇಕಾದ ಕೆಲಸಗಳನ್ನ ಮಾಡಬೇಕಾದ ಒತ್ತಡಕ್ಕೆ ಒಳಗಾದುವು. ಆ ಒತ್ತಡವನ್ನ ಹಿಂದಿದ್ದ ಸರಳ Software ನಿಂದ ನಿಭಾಯಿಸುವುದು ಅಸಾಧ್ಯವೆಂದರಿತು ಹೆಚ್ಚು ಹೆಚ್ಚು ಸಾಧ್ಯತೆಗಳನ್ನ ಹೊಂದಿದ : ಸಣ್ಣ ಪ್ರಮಾಣದ ಕಂಪ್ಯೂಟರ್ ಲೆಕ್ಕದಲ್ಲಿ ಕೆಲಸ ನಿರ್ವಹಿಸಬಲ್ಲ Software ತಯಾರಿಸಿದರು. ಕಂಪ್ಯೂಟರ್ ಗಳಲ್ಲಿ ಬಳಸುವ OS ತರಹ ಕೆಲಸ ನಿರ್ವಹಿಸುತ್ತಿದ್ದರಿಂದ ಇದಕ್ಕೆ Mobile OS ಎಂದು ನಾಮಕರಣ ಮಾಡಿದರು. 

ವ್ಯಾಪಾರಿ ಜಗತ್ತಿನ ಸಾಮಾನ್ಯ ನಿಯಮದಂತೆ  ಒಂದು ನಿರ್ದಿಷ್ಟ ಉತ್ಪನ್ನವನ್ನ ಹತ್ತೆಂಟು ಕಂಪೆನಿಗಳು ತಯಾರಿಸಿ ಮಾರುಕಟ್ಟೆಗೆ ಹರಿಯಬಿಡುವ ಆರೋಗ್ಯಕರ ಪ್ರವೃತ್ತಿ ಇಲ್ಲೂ ಕಂಡು ಬಂದು ವಿವಿಧ ಕಂಪೆನಿಗಳು ವಿವಿಧ ಸಾಧ್ಯತೆಯಿರುವ Mobile OSಗಳನ್ನ ತಯಾರಿಸಿ ನಮ್ಮೆದುರಿಗಿರಿಸಿದಾರೆ : ಅವುಗಳ ಉದಾಹರಣೆಗಳೇ ಮೇಲಿನ ಹೆಸರುಗಳು

: ಕೆಲವು ಜನಪ್ರಿಯ Mobile OS ಗಳ ಪುಟ್ಟ ಪರಿಚಯ ಇಲ್ಲಿದೆ :


SYMBIAN : Symbian Foundation ಕಂಪೆನಿಯ ಈ ಉತ್ಪನ್ನ ಪ್ರಮುಖವಾಗಿ ನೋಕಿಯಾ ಕಂಪೆನಿಯಿಂದ ಬಳಸಲ್ಪಟ್ಟು  ಆ ಕಂಪೆನಿಯ ಮುಂಚೂಣಿ ಮೊಬೈಲ್ ಗಳಾದ NSeries / ESries ಮೊಬೈಲ್ ಗಳ 'ಜೀವಾಳ'.  S40, S60 ... ಹೀಗೆ ವಿವಿಧ ಹಂತಗಳಲ್ಲಿ ಇದು ಪರಿಚಯಿಸಲಾಗಿದ್ದು S60 5th Edition ಇದು ಈ ದಿನಗಳಲ್ಲಿ ನಮ್ಮ ಮನಸೂರೆಗೊಂಡಿರುವ Touch Screen ಮೊಬೈಲ್ ಗಳ 'ಜೀವಾಳ'. ಕೆಲವು ಸೋನಿ ಎರಿಕ್ಸನ್ , ಮೊಟೊರೋಲಾ ... ಕಂಪೆನಿಯ ಮೊಬೈಲ್ ಗಳಲ್ಲೂ ಇದನ್ನ ಬಳಸಲಾಗಿದೆ.


ANDROID : ಇದು ಗೂಗಲ್ ಕಂಪೆನಿ ತಯಾರಿಸಿದ Mobile OS. ಈ ದಿನಗಳಲ್ಲಿ ಅತ್ಯಂತ ಜನಪ್ರಿಯ OS. ಅನೇಕ ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕಾ ಕಂಪೆನಿಗಳು ಇದನ್ನ ಬಳಸಿಕೊಂಡು ಹೊಸ ಹೊಸ ಉತ್ಪನ್ನಗಳನ್ನ ಹೊರತರುತ್ತಿವೆ. HTC, Samsung, T-Mobile ... ಇತ್ಯಾದಿ Mobile Handset ತಯಾರಕರು ಈ ಉತ್ಪನ್ನದ ಬಳಕೆದಾರರು.


iOS : ತನ್ನೆಲ್ಲ ಉತ್ಪನ್ನಗಳ ಹೆಸರಿನ ಹಿಂದೆ ( i ) ಅನ್ನುವ ಅಕ್ಷರ ಸೇರಿಸಿ ( ಉದಾಹರಣೆಗೆ : iPHONE, iPAD, iPOD, iMAC.... ) ಮಾರುಕಟ್ಟೆಗೆ ಪರಿಚಯಿಸುವ ಆ್ಯಪಲ್ ಕಂಪೆನಿಯ ಈ Mobile OS ತಾನು ಉತ್ಪಾದಿಸುವ iPHONE ಗಾಗಿ ತಯಾರು ಮಾಡಿರುವ ಉತ್ಪನ್ನ. ತಾನೇ ಉತ್ಪಾದಕ ತಾನೇ ಬಳಕೆದಾರ ಅನ್ನುವ ಪಾರಮ್ಯದ ಸಂಕೇತವೋ ಏನೋ ( i ) ಎನ್ನುವ ಅಕ್ಷರದ ಸೂಚ್ಯರ್ಥ.


WINDOWS MOBILE : ಕಂಪ್ಯೂಟರ್ ಜಗತ್ತಿನಲ್ಲಿ ಚಕ್ರಾಧಿಪತ್ಯ ಸಾಧಿಸಿರುವ ಮೈಕ್ರೋಸಾಫ್ಟ್ ಕಂಪೆನಿಯ ಈ ಉತ್ಪನ್ನ ಮೊಬೈಲ್ ಗಳಿಗೆಂದು ತಯಾರಿಸಿರುವ OS. Microsoft ಕಂಪೆನಿ ಕಂಪ್ಯೂಟರ್ ಕ್ಷೇತ್ರದಲ್ಲಿ ಪರಿಚಯಿಸಿರುವ ಎಲ್ಲ ತರಹದ Application ಗಳ ಸಾಮ್ಯತೆ ಈ Mobile OS ನಲ್ಲೂ ದೊರೆಯುವುದರಿಂದ Almost ಎಲ್ಲ ಮೊಬೈಲ್ ತಯಾರಕ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ Atleast ಒಂದು ಉತ್ಪನ್ನಕ್ಕಾದರೂ ಈ OS ಬಳಸಿಕೊಂಡು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.


RIM BLACKBERRY : Research In Motion ( RIM ) ಕಂಪೆನಿಯ ಜನಪ್ರಿಯ ಉತ್ಪನ್ನವಾದ BlackBery ಮೊಬೈಲ್ ಗಾಗಿ ಈ OS ಬಳಕೆಯಾಗುತ್ತಿದೆ.


BADA : ಇದು ಈ ವರ್ಷದ ಮೊಬೈಲ್ ಜಾಗತಿಕ ಸಮ್ಮೇಳನ ( Mobile World Congress 2010 ) ನಲ್ಲಿ  Samsung Electronics ಕಂಪೆನಿಯಿಂದ ಪರಿಚಯಿಸಲಾದ Mobile OS. 


MEEGO : ಇದು ಈ ವರ್ಷದ ಮೊಬೈಲ್ ಜಾಗತಿಕ ಸಮ್ಮೇಳನ ( Mobile World Congress 2010 ) ನಲ್ಲಿ  Nokia Corporation & Intel ನಿಂದ ಜಂಟಿಯಾಗಿ ಉತ್ಪಾದಿಸಿ, ಪರಿಚಯಿಸಲಾದ Mobile OS. 


MAEMO : ಇದು Nokia Corporation ಕಂಪೆನಿಯಿಂದ ಪರಿಚಯಿಸಲಾಗಿರುವ Mobile OS.



ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಸಂಬಂಧಿಸಿದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


- ರೇವಪ್ಪ


Jul 2, 2010

ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕ್ಲರಿಕಲ್ ಹುದ್ದೆಗಳು

0 ಪ್ರತಿಕ್ರಿಯೆಗಳು

ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕ್ಲರಿಕಲ್ ಹುದ್ದೆಗಳು



ಕೊನೆ ದಿನಾಂಕ : 08 ಆಗಸ್ಟ್ 2010
ಪರೀಕ್ಷಾ ದಿನಾಂಕ : 12 ಸಪ್ಟೆಂಬರ್ 2010
ಒಟ್ಟು Vacancy :
200 ( ಕರ್ನಾಟಕ ಕೋಟಾ ) 1210 ( ಭಾರತ )
ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ಪದವಿ

ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : Objective Type exam + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ :  http://www.corpbank.com/asp/0100text.asp?presentID=1712&headID=805



.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ