ಅಮೀರ್ ಖಾನ್ ನಿರ್ಮಾಣದ ಎರಡನೇ ಚಿತ್ರ ( If I'm Right - ಮೊದಲನೇಯದು ಜಾನೇ ತು ಯಾ ಜಾನೇ ನಾ ) ಪೀಪ್ಲಿ [ ಲೈವ್ ]. ಇಲ್ಲಿ ಪೀಪ್ಲಿ ಅನ್ನೋದು ಊರ ಹೆಸರು. ಲೈವ್ ಅನ್ನೋದು ಆ ಊರಿನ ಮಹಾಪ್ರಜೆಯನ್ನ ಎಡೆಬಿಡದೇ Cover ಮಾಡುವ ಮಾಧ್ಯಮಗಳ [ LIVE ] Coverage ಅನ್ನ ಸೂಚಿಸುತ್ತದೆ.
NDTV Journalist ಆಗಿದ್ದ ಅನುಷಾ ರಿಝ್ವಿ ತಾವೇ ಬರೆದಿದ್ದ The Fallen ಎನ್ನುವ ಕಥಾಹಂದರವನ್ನ ಆಮೀರ್ ಗೆ ತೋರಿಸಿ ಅವರದನ್ನ ಮೆಚ್ಚಿಕೊಂಡು ಇದೀಗ ಚಲನಚಿತ್ರವಾಗಿ ನಮ್ಮ ಮುಂದಿದೆ. ಇದೀಗ ಅನುಷಾ ಅವರೇ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.
ಇನ್ನು ತಾರಾಗಣವನ್ನ ಆರಿಸುವಲ್ಲಿ ನಿರ್ದೇಶಕ ನಿರ್ಮಾಪಕರು ತೋರಿರುವ ಶೃದ್ಧೆ ಅವರಿಗೆ ಯಶ ನೀಡಿದೆಯಂದೇ ಹೇಳಬೇಕು. ಪ್ರಮುಖ ಪಾತ್ರಗಳನ್ನ ಹೊರತುಪಡಿಸಿದರೆ ಇನ್ನುಳಿದವರು ಚಿತ್ರೀಕರಣ ನಡೆದ ಗ್ರಾಮದ ಗ್ರಾಮಸ್ಥರೇ ಆ ಚಿತ್ರದಲ್ಲಿದಾರೆ. ಯಾವುದೇ ಜನಪ್ರಿಯ ಮುಖಕ್ಕೆ ಮಣೆ ಹಾಕದೇ ಪಾತ್ರ ಬಯಸಿದ್ದ ಮುಗ್ಧ ಸೊಗಡಿನ ಮುಖವನ್ನೇ ಆರಿಸಿರುವ ನಿರ್ದೇಶಕ ನಿರ್ಮಾಪಕರ ಆಯ್ಕೆಗೆ ಕಿಂಚಿತ್ತೂ ಮೋಸ ಮಾಡದಂತೆ ಅಭಿನಯಿಸಿದ್ದಾರೆ ನತ್ಥಾ ( ಓಂಕಾರ್ ದಾಸ್ ಮಾಣಿಕ್ ಪುರಿ ). ಚಿತ್ರದಲ್ಲಿ ಇವರ ಹೆಸರು ನತ್ಥಾ ದಾಸ್ ಮಾಣಿಕ್ ಪುರಿ !!ಸುಪ್ರಸಿದ್ಧ ಲೇಖಕ ನಾಟಕಕಾರ ಹಬೀಬ್ ತನ್ವೀರ್ ಅವರ ರಂಗತಂಡ Naya Theatreದಿಂದ ಬಹುತೇಕರು ಚಿತ್ರದ ಪ್ರಮುಖ ಪಾತ್ರ ನಿರ್ವಹಿಸಿದಾರೆ.
ಚಿತ್ರಕ್ಕೆ ಸಂಗೀತ ನೀಡಿರೋರು Indian Ocean ಅನ್ನುವ ಭಾರತದ Music Band ನವರು. ಅವರ ಜೊತೆಗೆ ರಾಮ್ ಸಂಪತ್ ಇದಾರೆ. ರಾಮ್ ಸಂಪತ್ ನಿಮಗೆ ನೆನಪಿದಾರೆ ಅನ್ಕೋತೀನಿ. ಹೃತಿಕ್ ನ ಕ್ರೇಝಿ 4 ಚಿತ್ರದ ಶೀರ್ಷಿಕೆ ಗೀತೆ ನಾನು ಸೋನಿ ಎರಿಕ್ಸನ್ ಗೆ ನೀಡಿದ್ದ ಸಂಗೀತದ ನಕಲು ಎಂದು ಕೋರ್ಟಿಗೆ ಹೋಗಿ ಕೋಟಿ Compensation ಪಡೆದಿದ್ದ ವ್ಯಕ್ತಿಯೇ ರಾಮ್ ಸಂಪತ್. ಇನ್ನು ಇಂಡಿಯನ್ ಓಷಿಯನ್ ಬಗ್ಗೆ ಹೇಳಲೇ ಬೇಕು. ಈ ಮೊದಲು " ಮಾ ರೇವಾ ... " ಅನ್ನುವ ಗೀತೆಯೊಂದಿಗೆ Urban ಹುಡುಗರಿಗೆ ಪರಿಚಯಗೊಂಡಿದ್ದ ಇವರು ಈ ಚಿತ್ರದಲ್ಲಿ " ದೇಶ ಮೇರಾ ... "
ಎನ್ನುವ Peepli Theme ಗೀತೆಯೊಂದಿಗೆ ಎಲ್ಲರ ಮನದಲ್ಲಿ ಉಳಿಯುವ ಕೆಲಸ ಮಾಡಿದಾರೆ. ಈ ಮೊದಲು ಬ್ಲ್ಯಾಕ್ ಫ್ರೈಡೆ ಚಿತ್ರಕ್ಕೆ ಸಂಗೀತ ನೀಡಿದ್ದು ನಿಮಗೆ ನೆನಪಿದೆಯಾ ?! ಆದರೆ ನನ್ನದೊಂದೇ ತಕರಾರೆಂದರೆ ಅವರ ಸಂಗೀತದಲ್ಲಿ ತಬಲಾ ಮತ್ತೆ ಗಿಟಾರ್ ಬಿಟ್ರೆ ಬಾಕಿ ಏನೂ ಕೇಳಿಸೋದೇ ಇಲ್ಲ.
ಎನ್ನುವ Peepli Theme ಗೀತೆಯೊಂದಿಗೆ ಎಲ್ಲರ ಮನದಲ್ಲಿ ಉಳಿಯುವ ಕೆಲಸ ಮಾಡಿದಾರೆ. ಈ ಮೊದಲು ಬ್ಲ್ಯಾಕ್ ಫ್ರೈಡೆ ಚಿತ್ರಕ್ಕೆ ಸಂಗೀತ ನೀಡಿದ್ದು ನಿಮಗೆ ನೆನಪಿದೆಯಾ ?! ಆದರೆ ನನ್ನದೊಂದೇ ತಕರಾರೆಂದರೆ ಅವರ ಸಂಗೀತದಲ್ಲಿ ತಬಲಾ ಮತ್ತೆ ಗಿಟಾರ್ ಬಿಟ್ರೆ ಬಾಕಿ ಏನೂ ಕೇಳಿಸೋದೇ ಇಲ್ಲ.ಖ್ಯಾತ ತಾರಾಗಣವಿಲ್ಲದಿದ್ದರೂ ಕೂಡ ಚಿತ್ರ ಬಿಡುಗಡೆಯಾಗುವ ಮುನ್ನವೇ ತನ್ನ ಖರ್ಚಾಗಿರುವ
10 ಕೋಟಿಯನ್ನ ಬಾಚಿಕೊಂಡು, ಮೊದಲ ದಿನವೇ
4 ಕೋಟಿ ಗಳಿಸಿರುವುದು ಗಮನಿಸಬೇಕಾದ ಅಂಶ.
10 ಕೋಟಿಯನ್ನ ಬಾಚಿಕೊಂಡು, ಮೊದಲ ದಿನವೇ
4 ಕೋಟಿ ಗಳಿಸಿರುವುದು ಗಮನಿಸಬೇಕಾದ ಅಂಶ.ಇನ್ನು ಈ ಚಿತ್ರದ ಬಗ್ಗೆ ಹೆಚ್ಚಿಗೆ ತಿಳಿಯಬಯಸಿದರೆ ನಿಮಗೆ ಕೆಲವು Internet Link ಗಳನ್ನ ಕೊಡ್ತೀನಿ .. ಓದಿ :
ಚಿತ್ರದ ಅಧಿಕೃತ ತಾಣ : http://www.peeplilivethefilm.com/
ಇಂಡಿಯನ್ ಓಷಿಯನ್ : http://www.indianoceanmusic.com/
ಅಮೀರ್ ಖಾನ್ ಫಿಲಮ್ಸ್ : http://www.akpfilms.com/
ಅಮೀರ್ ಖಾನ್ ಪ್ರೊಡಕ್ಷನ್ಸ್ : http://www.akprod.com/
: ರವಿ



1 comment:
i've not seen the movie yet,you have doubled my curiosity with your narration.
Post a Comment