ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Dec 12, 2010

SDA & FDA Study Material (ಎಸ್.ಡಿ.ಎ. & ಎಫ್.ಡಿ.ಎ. ಪರೀಕ್ಷಾ ಮಾರ್ಗದರ್ಶಿ)

:: SDA & FDA ::
1. ಮೊದಲನೆಯದಾಗಿ ಹುದ್ದೆಯ ಸ್ವರೂಪದ ಬಗ್ಗೆ ತಿಳಿದುಕೊಳ್ಳೋಣ.

SDC / SDA / JUNIOR ASSISTANT ( Second Division Clerk/Assistant ) ( ದ್ವಿತೀಯ ದರ್ಜೆ ಸಹಾಯಕ/ಕಿರಿಯ ಸಹಾಯಕ ) : ಪ್ರತಿ ಸರ್ಕಾರಿ ಕಚೇರಿಯಲ್ಲಿ ಒಬ್ಬ SDC ಇದ್ದೇ ಇರುತ್ತಾನೆ. ಅವನ ಕೆಲಸ ಆ ಕಚೇರಿಗೆ ಬರುವ ಪತ್ರ(ಟಪಾಲು)ಗಳನ್ನ ಸ್ವೀಕರಿಸುವುದು, ಸ್ವೀಕರಿಸಿದ ಅಂಥ ಪತ್ರಗಳನ್ನ ಮೇಲಾಧಿಕಾರಿಗಳಿಗೆ ತೋರಿಸಿ ಸಹಿ ಮಾಡಿಸಿ ಸಂಬಂಧಿಸಿದ ವಿಷಯ ನಿರ್ವಾಹಕರಿಗೆ ವರ್ಗಾಯಿಸುವುದು. ಹಾಗೆ ಸ್ವೀಕರಿಸಿ-ವರ್ಗಾಯಿಸಿದ ಪತ್ರಗಳ ವಿವರಗಳನ್ನು ರಿಜಿಸ್ಟರ್ ಒಂದರಲ್ಲಿ ಬರೆದಿಟ್ಟುಕೊಳ್ಳುವುದು. ಬಂದ ಪತ್ರಗಳನ್ನ ಹೇಗೆ ಸ್ವೀಕರಿಸಿದೆವೋ ಅದೇ ರೀತಿ ಕಚೇರಿಯಿಂದ ಹೊರಗಡೆ ಹೋಗುವ ಪತ್ರಗಳ ವಿವರಗಳನ್ನ ಕೂಡ ರಿಜಿಸ್ಟರಿನಲ್ಲಿ ದಾಖಲಿಸಿಕೊಂಡು ಅಟೆಂಡರ್ ಮುಖಾಂತರ ತಲುಪಿಸುವ ಜವಾಬ್ದಾರಿ ವಹಿಸುವುದು. ಸದರಿ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಗಣಕೀಕೃತಗೊಂಡಿರುವುದರಿಂದ SDC ಆಕಾಂಕ್ಷಿಗೆ ಕಂಪ್ಯೂಟರ್ ಜ್ಞಾನ ತುಂಬಾ ಅನುಕೂಲಕರವಾಗಿ ಪರಿಣಮಿಸುತ್ತದೆ.

ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.

ವೇತನ ಶ್ರೇಣಿ : Rs.5800-10500


FDC / FDA / ASSISTANT ( FIRST DIVISION CLERK/ASSISTANT ) ( ಪ್ರಥಮ ದರ್ಜೆ ಸಹಾಯಕ ) : ಸರ್ಕಾರಿ ಕಚೇರಿಯೊಂದರಲ್ಲಿ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು FDC ಗಳಿರುತ್ತಾರೆ. ಕಾರಣ ಪ್ರತಿ ಕಚೇರಿಗೆ ಒಂದಕ್ಕಿಂತ ಹೆಚ್ಚು ವಿಷಯಗಳ ಜವಾಬ್ದಾರಿಯನ್ನ ನೀಡಲಾಗಿರುತ್ತದೆ. ಹೀಗಾಗಿ ಪ್ರತಿ ವಿಭಿನ್ನ ವಿಷಯಕ್ಕೆ ಒಬ್ಬ FDC. ಅದಕ್ಕೇನೇ ಅವರನ್ನ Case Worker ಅಂತ ಕೂಡ ಕರೆಯಲಾಗುತ್ತದೆ. ಕಚೇರಿಯ SDC ತನಗೆ ನೀಡಿದ ಪತ್ರಗಳ ವಿಷಯವನ್ನ ಗ್ರಹಿಸಿ ಅರ್ಜಿದಾರ / ಪತ್ರ ಬರೆದ ವ್ಯಕ್ತಿ ಕೋರಿರುವ ಅಹವಾಲನ್ನ ಅರ್ಥೈಸಿಕೊಂಡು ಸದರಿ ಪತ್ರದ ಮೇಲೆ ತೆಗೆದುಕೊಳ್ಳಬಹುದಾದ ಮುಂದಿನ ಕ್ರಮವನ್ನ ನಿರ್ಧರಿಸಿ ಅದನ್ನ ಕಡತಕ್ಕೆ ಅಳವಡಿಸಿಕೊಂಡು ಟಿಪ್ಪಣಿ ದಾಖಲಿಸುವುದು ಅವನ ಕೆಲಸ. ಸದರಿ ಟಿಪ್ಪಣಿ ದಾಖಲಿಸುವ ಕೆಲಸಕ್ಕೆ ಶುದ್ಧ ಕೈಬರಹ, ಕಚೇರಿ ವಿಷಯ ಜ್ಞಾನ ಹಾಗೂ ನಿಯಮಗಳ ಸೂಕ್ತ ತಿಳುವಳಿಕೆ ಅತಿ ಅವಶ್ಯವಾಗಿದೆ. ಹೀಗಾಗಿ ಆಕಾಂಕ್ಷಿಗಳು ಈ ವಿಷಯದ ಕಡೆ ಗಮನ ಹರಿಸುವುದು ಕ್ಷೇಮಕರ.

ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ಪದವಿ

ವೇತನ ಶ್ರೇಣಿ : FDC Rs.7275-13350 & Assistant Rs.8000-14800

ಸದರಿ ಹುದ್ದೆಗಳಿಗೆ ಸಮಾನಾಂತರವಾಗಿರುವ ಅನೇಕ ಹುದ್ದೆಗಳಿವೆ. ಮತ್ತು ಅವುಗಳಿಗೆ ಪರೀಕ್ಷೆ ಕೂಡ ಸಮಾನಾಂತರವಾಗಿ ನಡೆಯುತ್ತದೆ. ಹೀಗಾಗಿ Special Prep ಅಂತ ಏನು ಬೇಕಿಲ್ಲ. ಇವೆರಡು ಹುದ್ದೆಗಳಿಗೆಂದು ಓದಿಕೊಂಡ ಪಠ್ಯ ಅವಕ್ಕೂ ಸಾಕು ಬೇಕಾದಷ್ಟಾಯ್ತು.

2. ಪರೀಕ್ಷೆಗೆ ನಿಗದಿಪಡಿಸಲಾಗಿರುವ ಪರೀಕ್ಷಾ ವಿಷಯಗಳು

1. ಸಾಮಾನ್ಯ ಕನ್ನಡ ಅಥವಾ ಸಾಮಾನ್ಯ ಇಂಗ್ಲೀಷ್
2. ಸಾಮಾನ್ಯ ಜ್ಞಾನ

3. ತಯಾರಾಗುವುದು ಹೇಗೆ ?

1. ಸಾಮಾನ್ಯ ಕನ್ನಡ : ಮೈಸೂರು ವಿವಿ ದಶಕಗಳ ಹಿಂದೆ ಪ್ರಕಟಿಸಿದ್ದ ಕನ್ನಡ ವ್ಯಾಕರಣ ಪುಸ್ತಕ ಎಂದಿಗೂ ಪ್ರಸಕ್ತ. ಇದರ ಜೊತೆಗೆ ಕನ್ನಡ ಸಾಹಿತ್ಯ ಲೋಕದ ಬಗ್ಗೆ ಪ್ರಾಥಮಿಕ ಜ್ಞಾನ ಬಹುಮುಖ್ಯ(ಕೃತಿ-ಕರ್ತೃ-ಕಾವ್ಯನಾಮ-ಪ್ರಶಸ್ತಿ ..ಇತ್ಯಾದಿ)

2. ಸಾಮಾನ್ಯ ಇಂಗ್ಲೀಷ್ : ಸಾಮಾನ್ಯ ಇಂಗ್ಲೀಷ್ ಪರೀಕ್ಷೆಯ ಬಗ್ಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಿಕೊಡುವಂಥದ್ದು. ಪ್ರತಿದಿನ ಆಂಗ್ಲ ದಿನಪತ್ರಿಕೆಗಳನ್ನ ಓದಿ, ಅಲ್ಲಿ ಕಂಡುಬರುವ ನಿಮಗೆ ತಲೆಬುಡ ತಿಳಿಯದ ಪದಗಳ ತಲೆಬುಡ ತಿಳಿಯಿರಿ. ಇನ್ನು ಈ ಪತ್ರಿಕೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುವುದು Common Sense.

3. ಸಾಮಾನ್ಯ ಜ್ಞಾನ : ಈ ವಿಷಯ ಹೆಸರಿಗೆ ತಕ್ಕ ಹಾಗೆ ಸಾಮಾನ್ಯ ಜ್ಞಾನವಾಗಿದ್ದು, ದಿನನಿತ್ಯದ ಜೀವನದಲ್ಲಿ ಎದುರಾಗುವ ವಿಜ್ಞಾನ, ಇತಿಹಾಸ, ಭೂಗೋಳ.. ಇತ್ಯಾದಿ ಪ್ರಶ್ನೆಗಳೇ ನಿಮಗೆ ಪರೀಕ್ಷೆಗಳಲ್ಲಿ ಎದುರಾಗುವುದರಿಂದ ನೀವು ಸದರಿ ವಿಷಯಗಳ ಕಡೆ ಗಮನ ಹರಿಸುವುದು ಕ್ಷೇಮಕರ. ಇಷ್ಟಿದ್ದಾಗ್ಯೂ ಈ ವಿಷಯಕ್ಕೆ ಪರಾಮರ್ಶನ ಗ್ರಂಥಗಳ ಅವಶ್ಯಕತೆ ಖಂಡಿತ ಇದೆ. ಆದರೆ ಸದರಿ ವಿಷಯದ ಬಗ್ಗೆ ಒಂದು ಬೃಹದ್ಗಂತ್ರ ಇಟ್ಟುಕೊಂಡು ಓದುವುದು ಸಮಯ ಉಳಿಸುವಲ್ಲಿ ಮತ್ತು ಜ್ಞಾನ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. Tata McGraw Hill General Studies Manual ಸಾಕು ಬೇಕಾದಷ್ಟಾಯ್ತು.


4. STUDY MATERIAL

: ಸಾಮಾನ್ಯ ಇಂಗ್ಲೀಷ್ :: ಸಾಮಾನ್ಯ ಜ್ಞಾನ :


--------
------- 


 

:  ಪತ್ರೋದ್ಯೋಗಿ

8 comments:

sai chandra mouli said...

Good information. Keep sharing this kind of useful info. Latest GAIL Jobs

Thank you for the useful information. You might be interested in Latest AAI Jobs

sai chandra mouli said...

For Latest JNTUK Results You Can Visit. JNTUK Results
For Latest JNTUH Results You Can Visit. JNTUH Results
For Latest JNTUA Results You Can Visit. JNTUA Results

sai chandra mouli said...

Good Information. Keep sharing this kind of info.All India Results

gkindiaonline website said...

Read, learn and practice MCQ and answers with explanation on Current Affairs, GK, Education, Aptitude, Verbal ability & Computer science for interview & Govt. Exams
http://www.gkindiaonline.com/

Unknown said...

Kannada medium.....notes pls

Shashi Shashi said...

sir please send sda/fda notes

Unknown said...

Sir please FDA SDA notes

Unknown said...

FDA SDA Kannada medium notes please sir

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ