ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ನನ್ನ ಬಗ್ಗೆ ಸ್ವಲ್ಪ ...

ನಮಸ್ತೆ...

ತಲೆಬರಹದಲ್ಲಿ ನನ್ನ ಬಗ್ಗೆ ಸ್ವಲ್ಪ ಹೇಳ್ಕೊಂಬಿಡ್ತೀನಿ ಅಂತ ಬರೆದಿರೋದ್ರಿಂದ ಸ್ವಲ್ಪ ಮಾತ್ರ ಹೇಳ್ತೀನಿ.

ಹೆಸರು : ರೇವಪ್ಪ ಖ್ಯಾಡಿ. ನನ್ನ Surname ನಷ್ಟೆ ಅಪರೂಪ ನಮ್ಮೂರ ಹೆಸರು. ಚಡಚಣ ಅಂತ ನಮ್ಮೂರು. ವಿಜಾಪುರ ಜಿಲ್ಲೆಯಲ್ಲಿ ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಹಳ್ಳಿ. ನಮ್ಮೂರಿಂದ ವಿಠ್ಠಲನ ಪಂಢರಾಪುರ 60km ನಷ್ಟು ಹತ್ತಿರ. ಈ ಕಡೆ ವಿಜಾಪುರವೂ ಅಷ್ಟೇ ದೂರ.

ಅಪ್ಪ ರಾಚಪ್ಪ, ಪ್ರೌಢಶಾಲಾ ಶಿಕ್ಷಕರು. ತಾಯಿ ಭುವನೇಶ್ವರಿ, ಗೃಹಿಣಿ.


10ನೇ ತರಗತಿಯವರೆಗೆ ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿರೋದು ನನ್ನ Plus Point. ಆ Plus Point ಗಳು ಏನು ಅಂದ್ರೆ ಹಳ್ಳಿಯ ಮುಗ್ಧತೆ, ನಿಷ್ಕಪಟತನ ಮತ್ತೆ ಕನ್ನಡ ಮಾಧ್ಯಮ ಕಲಿಸಿಕೊಡೋ ಆತ್ಮವಿಶ್ವಾಸ. ಈ ಎರಡು Plus Point ಗಳು ಇಂದು ನನ್ನಂಥ ಸಾವಿರಾರು ಅಂದಿನ ಮಕ್ಕಳನ್ನ ಇಂದಿನ Good Boys ಆಗಿಸಿವೆ. ಆ ಹಳ್ಳಿ ಮತ್ತೀ ಕನ್ನಡಕ್ಕೆ ಸಾವಿರ ಧನ್ಯವಾದಗಳು.


20 ಮೇಲರ್ಧ ವರ್ಷಕ್ಕೆ ವಿಧಾನಸೌಧದಲ್ಲಿ ಕಿರಿಯ ಸಹಾಯಕ ಅಂತ ಕೆಲಸಕ್ಕೆ ಸೇರಿ ನಾಳೆ ಮೇ(2010) ಗೆ 3 ವರ್ಷ ಆಯ್ತು. ಸರಳ ಕೆಲಸ. ಒಳ್ಳೇ  Work Environment ನಿಂದಾಗಿ ದಿನದ ಕೊನೆಗೆ ಮನೆ ಸೇರುವಾಗ ಎಂಥ Stress ಊ ಇರೋದಿಲ್ಲ. ಆವಾಗ ನನ್ನ ಕಂಪ್ಯೂಟರ್ ಎದುರಿಗೆ ಸ್ಥಾಪಿತನಾದೆ ಅಂದ್ರೆ ಎದ್ದೇಳ್ಬೇಕು ಅಂದ್ರೆ ಒಬ್ರು ಬೇಕು, " ಸಾಕಿನ್ನು ಮಲ್ಕೋ " ಅಂತ ಹೇಳೋಕೆ. ನನ್ನ ಈ Compudiction ಕಾರಣದಿಂದಾಗಿಯೇ ಈ ತಾಣ ನಿಮ್ಮ ಮುಂದಿದೆ.


ಇಷ್ಟು ಸಾಕು ನನ್ನ ಬಗ್ಗೆ.


<<< * >>>


ನನ್ನ ಪರಿಚಯ ಆಯ್ತು ಈಗ ಬ್ಲಾಗ್ ಬಗ್ಗೆಯೂ ಸ್ವಲ್ಪ ಪರಿಚಯ ಮಾಡಿಕೊಡಬೇಕಲ್ಲ ನಾನು ... ಅಲ್ವಾ ?

ತಗೋಳಿ.

ಇಂಗ್ಲೀಷಿನಲ್ಲಿ ಪರೀಕ್ಷೆಗೆ ಸಹಾಯ ಮಾಡೋ ತಾಣಗಳು ಸಾಕಷ್ಟಿದಾವೆ. ಅಂಥ ಪರೀಕ್ಷಾ ಸ್ನೇಹಿ ಬ್ಲಾಗ್ ಗಳನ್ನ ನೋಡಿ ಹೊಟ್ಟೆಕಿಚ್ಚು ಪಟ್ಟು , ನಮ್ಮ ಭಾಷೆಯಲ್ಲಿ ನಮ್ಮವರಿಗಾಗಿ ಅಂತನೇ ಸೃಷ್ಟಿಸಿದ ಒಂದು ತಾಣ ಏನಕ್ಕೆ ಇರಬಾರದು ಅಂತ ಯೋಚಿಸಿದೆ. 

ಆಗ ತಿಂಗಳಿಗೆ 50,000 ರೂಪಾಯಿ ಸಂಬಳ ಎಣಿಸುತ್ತಾ ವಿದೇಶಿ Client ಎಂಬ ಅರಸನಿಗೆ ಅಂಡೆತ್ತಿ ಸಲಾಮು ಮಾಡಿ ಅವನ ಕೆಲಸ Intime ಮಾಡಿ, ಅವನೂರಿಗೆ ಹೋಗಿ ಅಲ್ಲೂ ಅವನ ಮನೆ ತೊಳೆದು ಒಪ್ಪ ಓರಣವಾಗಿಟ್ಟು ಜೀವನಕ್ಕೆ 'ಅರ್ಥ' ಸಂಪಾದನೆಯಲ್ಲಿ ತೊಡಗಿರೋ  ನಮ್ಮ ಕನ್ನಡಿಗರ ಒಂದು ಸಂಕುಲವನ್ನ ಒಂದು ಬಾರಿ ಶಪಿಸಿದೆ. ಅಲ್ಲ ನೂರು ಬಾರಿ.

ಆವಾಗ , ನನ್ನ " ಚಲನಚಿತ್ರದ ಭಾಷೆ ಅರ್ಥವಾಗದಿದ್ದರೂ, ಚಿತ್ರ ನೋಡಿ ಕಥೆ ಅರಿಯುವ ತವಕ " ವನ್ನ ಬಳಸಿ HTML Template ಒಂದನ್ನ ಉಚಿತ ವಿತರಣೆಗಾಗಿ ಅಂತ ನೀಡಿದ ತಾಣವೊಂದರಿಂದ ಎರವಲು ಪಡೆದು ಇದನ್ನ 'ಸೃಷ್ಟಿ' ಮಾಡಿದೆ.



ಹೀಗೆ ಸೃಷ್ಟಿ ಮಾಡಿರೋ ಈ ಬ್ಲಾಗ್ ಎಂಬ ತಾಣ , ನಮ್ಮ ಕನ್ನಡಮ್ಮನ ಋಣ ತೀರಿಸುವ ಮುಗ್ಧ, ಪುಟ್ಟ ಪ್ರಯತ್ನ.


<<< * >>>


ಬ್ಲಾಗ್ ಅಂತೂ ಶುರು ಮಾಡಿಯಾಯ್ತು. 

ಈಗ ಹಿನ್ನೆಲೆ ಹೇಳ್ತೀನಿ ಕೇಳಿ :

2009ರ ಆಗಸ್ಟ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಗೋಣ ಅನ್ನೋ ಸದಭಿಲಾಷೆಯಿಂದ ವಿಧಾನಸೌಧಕ್ಕೆ 47 ದಿವಸ ರಜೆ ಹಾಕಿ ಮನೇಲಿ ಓದೋ ನಾಟಕ ಮಾಡ್ತಾ ಇದ್ದಾಗ ಈ ಹುಳ ತಲೆ ಸೇರ್ತು. ಸರಿ, ಹೇಗಿದ್ರೂ BSNLನವ್ರು Rs.750+Tax Unlimited BroadBand ಅನ್ನ ಸರಕಾರಿ ನೌಕರ ಅನ್ನೋ ಬೀಗತನದ ಸಲುಗೆಯಿಂದ Rs.600+Tax ಅಂತ್ಹೇಳಿ ಕೊಟ್ಟಿದ್ದ Net Connection ಇತ್ತು ಮನೇಲಿ. ಹುಳ ತಲೆ ಹೊಕ್ಕ 10 ನಿಮಿಷಕ್ಕೆಲ್ಲ Blog Template ಗಳನ್ನ ಉಚಿತವಾಗಿ ನೀಡೋ Site ಜಾಲಾಡ್ತಾ ಇದ್ದೆ. ಇದ್ದುದರಲ್ಲೇ ಮನಸಿಗೆ ಸರಿ ಹೊಂದಿದ Template ಬಳಸಿ, ಅದೇ ದಿನ Blogger.com ನಲ್ಲಿ ಸ್ಪರ್ಧಾರ್ಥಿ ಹೆಸರಿಗೆ Site Registration ಕೂಡ ಮಾಡಿ ಮುಗಿಸಿದೆ.

ನಂತರ ಪರೀಕ್ಷೆಗಾಗಿ ಅಂತ ಓದೋ ನಾಟಕ ಮಾಡೋವಾಗ, NoteBook ನ ಹಿಂಭಾಗದಲ್ಲಿ Sitemap ರೆಡಿ ಮಾಡ್ತಾ ಕೂಡ್ತಿದ್ದೆ. ನನ್ನ Website ಹೇಗಿರಬೇಕು ಅಂತ ನಾನು ಕಾಣೋ ಕನಸುಗಳು Steve Jobs ಕನಸಲ್ಲೂ ಬಂದು ಹೋಗಿದ್ರೆ ಆಶ್ಚರ್ಯ ಇಲ್ಲ. ಒಟ್ನಲ್ಲಿ ಒಂದು Net Site ಇರಬೇಕು. ಅಲ್ಲಿ ನಮ್ಮ ಕನ್ನಡದ ಹುಡುಗರಿಗೆ ಸಾಧ್ಯವಾದಷ್ಟು ಕನ್ನಡದಲ್ಲಿ net ಜಗತ್ತಿನಲ್ಲಿ available ಇರೋ Maximum ಸಮಸ್ತ ಮಾಹಿತಿಗಳು ಸಿಗುವಂತಾಗಬೇಕು ಅನ್ನೋ ಆಶಯದ ನೆಲೆಗಟ್ಟಿನ ಮೇಲೇ ಇಡೀ Site ನಲ್ಲಿ ಈ ಮನೆ ಕಟ್ಟಿದೀನಿ. ಮನೆ ಚಿಕ್ಕದು. ಗೊತ್ತು ನಂಗೆ. ಆದ್ರೆ ಮನಸು ದೊಡ್ಡದು. ಅದೂ ಗೊತ್ತು ನಂಗೆ. ಇದನ್ನ Recieve ಮಾಡ್ಕೊಳ್ತಿರೋ ನಿಮ್ಮಗಳ, ಅಂದ್ರೆ ನಾವು ಕನ್ನಡಿಗರ ವಿಶಾಲ ಮನಸ್ಸೇ ನನ್ನ ಈ ಹುಚ್ಚು ಸಾಹಸಕ್ಕೆ ಸ್ಫೂರ್ತಿ.

ಇನ್ನು ಮುನ್ನೆಲೆ :


ಭಾಷೆ ಬಳಸಿದರೇನೇ ಬೆಳೆಯೋದು. ಈ ಮಾತು ಇದೆಯಲ್ಲಾ, ಇದು ಹಾಗೇ ತತ್ವ ಕ್ಕಾಗಿ ಹೇಳ್ತಾ ಇಲ್ಲ.

ಹಾದಿ ಬೀದೀಲಿ ತಮ್ಮ 2 ವರ್ಷದ ಕಂದನ ಜೊತೆ ಹೋಗ್ತಾ.. ಅದು ಎಡವಿದ್ರೆ ಇಂಗ್ಲೀಷಲ್ಲೇ ಬೈದು, ಇಂಗ್ಲೀಷಲ್ಲೇ ಎದ್ದು ನಿಲ್ಲಿಸಿ, ಇಂಗ್ಲೀಷಲ್ಲೇ ಮಿಠಾಯಿ ತಿನ್ನಿಸೋ ಕನ್ನಡಿಗರ ಸಂಘಕ್ಕೆ ಈ ಕಿವಿಮಾತು. ಈಗಿನ ಕಂದಮ್ಮಗಳ ಜೊತೆ ಹಾಗೆ ವ್ಯವಹರಿಸಿದರೇನೆ ಅವು ಮುಂದೆ ಜಾಗತಿಕ ಭಾಷೆಯಾಗಿ ಮೆರೀತಿರೋ ಆಂಗ್ಲ ಭಾಷೆಯ ಪ್ರಭುಗಳಾಗೋದು ಅಂತ ನೀವು ಅನ್ಕೊಂಡಿದ್ರೆ ಅದು ಶುದ್ಧ ತಪ್ಪು ಕಣ್ರೀ. ಆ ಭಾಷೆಗೆ ಅಷ್ಟೊಂದು ಒತ್ತು ನೀಡೋ ಅಗತ್ಯ ಇಲ್ಲ ಅನ್ನೋದು ನನ್ನ ಅಭಿಮತ. 



ಹಾಗಂತ ನಾನು ಆಂಗ್ಲ ಭಾಷೆಯ ವಿರೋಧಿಯಲ್ಲ. ಅದೂ ನಮ್ಮ  ಕನ್ನಡ ಭಾಷೆಯಂತೆ ಒಂದು ಸುಂದರ ಭಾಷೆ. ಆದ್ರೆ ನೀವು ಮಗೂಗೆ ಊಟ ಮಾಡ್ಸೋದ್ರಿಂದ ಹಿಡಿದು ಉಚ್ಚೆ ಹೊಯ್ಸೋ ವರೆಗೂ ಇಂಗ್ಲೀಷಲ್ಲೇ ಹೇಳ್ಕೊಟ್ರೆ ಈ ಮಣ್ಣಿನ ಅನ್ನ ತಿಂದು ಆ ಮಗೂಗೂ ಅದೇ ಅನ್ನ ತಿನ್ನಿಸಿ ಇಲ್ಲಿನ ಮಾತು/ಭಾಷೆ ಬೇಡ ಅಂದ್ರೆ ಹೇಗಿರುತ್ತೆ ಹೇಳಿ. ಕಡೆಗೆ ಸತ್ತ ಮೇಲೆ ಅಂತ್ಯ ಸಂಸ್ಕಾರನೂ ಇದೇ ಮಣ್ಣಲ್ಲೇ ಆಗಬೇಕು ಅನ್ನೋ ಮಾತೃಭೂಮಿಯ ಮಮಕಾರ ಏನಕ್ಕೋ ತಿಳಿಯೋದಿಲ್ಲ. 

ಆದರೆ ,

ನಾನಿಲ್ಲಿ ಹಲವೆಡೆ ಆಂಗ್ಲ ಪದಗಳನ್ನ ಬಳಸಿದೀನಿ. ಅದಕ್ಕೆ ನನ್ನ ಸಮರ್ಥನೆಯೂ ಇಲ್ಲದೇ ಇಲ್ಲ. ಅದೇನೆಂದರೆ ನಮ್ಮ ದಿನನಿತ್ಯದ ಬಳಕೆಗೆ ಬಳಸುವ ಸಂಪರ್ಕ ಮಾಧ್ಯಮವಾಗಿರುವ ಕನ್ನಡ  ಭಾಷೆಯಲ್ಲಿ ಕೆಲವು ಎಂಥ ಶಬ್ದಗಳಿದಾವೆಂದರೆ ಅವು ಹುಟ್ಟಿದ್ದು ವಿದೇಶೀ ನೆಲದಲ್ಲಿ. ಅದನ್ನು ಸಂಶೋಧಿಸಿದವ ಕೂಡ ವಿದೇಶಿಗ. ನಮ್ಮಂತೆ ಅವನೂ ಮಾತೃಭಾಷೆಯ ಅಭಿಮಾನಿ. Cell Phone ಅನ್ನೋ ವಸ್ತುವನ್ನ ಕಂಡುಹಿಡಿದು ಅದಕ್ಕೆ ಆ ಹೆಸರು ಕೊಟ್ಟ. ನಾವದನ್ನ ಪುಟ್ಟ ದೂರವಾಣಿ ಅಂತನೋ ಮತ್ತೊಂದು ಅಂತನೋ ಕರೆದರೆ ಅಭಾಸ ಆಗದೇ ಇರದು. ಹೀಗೆ ನಮ್ಮವರೇ ಅದನ್ನ ಕಂಡುಹಿಡಿದಿದ್ದರೆ ಹಿಂದು ಮುಂದು ನೋಡದೇ ಕನ್ನಡ ಹೆಸರಿಡುತ್ತಿದ್ದರು. ಜೊತೆಗೆ ಇಡೀ ಜಗತ್ತೇ ಹಾಗೇ ಕರೆಯುತ್ತಿತ್ತು ಅದನ್ನ. 

ಉದಾಹರಣೆಗೆ : ನಮ್ಮ ಹಳ್ಳಿಯ ಕಲ್ಲಪ್ಪ, ಮಲ್ಲಪ್ಪಂದಿರು ಜಗದ್ವಿಖ್ಯಾತರಾದರು ಅಂತ ಅವರನ್ನ ಇಂಗ್ಲೆಂಡಿನಲ್ಲಿ ಬೇರೆ ಆಂಗ್ಲ ಭಾಷೆಯ ಹೆಸರಿನಿಂದ ಕರೆಯುತ್ತಾರಾ ? ಹಾಗೆ ಕರೆಯಲಿಕ್ಕಾಗುತ್ತಾ ಹೇಳಿ ನೋಡೋಣ ??!! ಅವರು ಎಲ್ಲಿ ಹೋದರೂ ಕಲ್ಲಪ್ಪ , ಮಲ್ಲಪ್ಪ ರೇ. ಹೀಗಾಗಿ ಜನ್ಮತಃ ಮೂಡಿ ಬರೋ ಹೆಸರುಗಳನ್ನ ಬದಲಾಯಿಸೋದು ಅಷ್ಟು ಸಮಂಜಸ ಅಲ್ಲ ಅಂತ ನನ್ನ ಅಭಿಪ್ರಾಯ. ಏನಂತೀರಿ ?

ಹೀಗೆ ಜನ್ಮತಃ ಬಂದಿರೋ ಕೆಲವು ಆಂಗ್ಲ ಶಬ್ದಗಳ ಜೊತೆಗೆ , ಆ ಸಂದರ್ಭಕ್ಕೆ ಸರಿ ಅನ್ನಿಸೋ ಕೆಲವು ಆಂಗ್ಲ ಪದಗಳನ್ನ ಬಳಸಿದೀನಿ. ಅವಕ್ಕೆ ಕನ್ನಡದಲ್ಲಿ ಸಮಾನಾರ್ಥಕ ಪದಗಳು ಇದ್ರೂ ಕೂಡ ಕೂಡ ಆಂಗ್ಲ ಪದವನ್ನೇ ಬಳಸೋದಕ್ಕೆ ಅದೇನೋ ನನ್ನ ಮನಸು ಆ ಕಡೆ ಹೋಯ್ತು ಅಂತ ಅರ್ಥ, ಆಗ.


ಕೈಯಲ್ಲಿ E Series Mobile Handset ಹಿಡ್ಕೊಂಡ ಮಾತ್ರಕ್ಕೆ ನಾವು BusinessMan/Woman ಆಗೋಕೆ ಸಾಧ್ಯ ಇಲ್ಲ. ಇಷ್ಟು ಮಾತ್ರ ನಾನು ಬುದ್ಧಿ ಹೇಳಬಲ್ಲೆ. ಅವರಿಗೆ.

ಒಟ್ನಲ್ಲಿ, ಕನ್ನಡ ಬೆಳೀಬೇಕು. ಬಲೀಬೇಕು. ಅಷ್ಟೇ ನನ್ನಾಸೆ. ನನ್ನ ಕನಸು.

ಆಶಯ :

ಪತ್ರಿಕೆ ಯನ್ನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ನನ್ನಂಥ ಸ್ನೇಹಿತರನ್ನ ಗಮನದಲ್ಲಿಟ್ಟುಕೊಂಡು ಸೃಷ್ಟಿಸಿದೀನಿ. ಜ್ಞಾನ ಯಾರೊಬ್ಬರ ಸೊತ್ತಲ್ಲ. ಹಂಚಿದಷ್ಟು ಹೆಚ್ಚೋದು ಇದೊಂದೇ ಇರಬೇಕು ಈ ಜಗತ್ತಿನಲ್ಲಿ. ಹೊಸ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಎಲ್ಲ ಪರೀಕ್ಷೆಗಳಿಗೆ ಅರ್ಜಿ ಗುಜರಾಯಿಸುವ ಪದ್ಧತಿಯನ್ನ On-Line Format ಗೆ ಬದಲಾಯಿಸಲಾಗುತ್ತಿದೆ. ಜೊತೆಗೆ ಸರ್ಕಾರದ ಪ್ರತಿ ಕೆಲಸಕ್ಕೂ ಕಂಪ್ಯೂಟರ್ ಜ್ಞಾನ ಕಡ್ಡಾಯ ಮಾಡಲು ಕೂಡ ಸರ್ಕಾರ ಹೊರಟಿದೆ. ಇಂಥ ಸಂದರ್ಭದಲ್ಲಿ ಎಲ್ಲರಿಗೂ ಕಂಪ್ಯೂಟರ್ ಅನ್ನೋದು ದೈನಂದಿನ ಬಳಕೆಯ ವಸ್ತುವಾಗಲು ಬಹಳ ಹಿಡಿಯೋದಿಲ್ಲ ಅನ್ನೋದು ನನ್ನ ತರ್ಕ.

ಸ್ಪರ್ಧಾತ್ಮಕ ಪರೀಕ್ಷಗೆಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ( i.e. ಸ್ಪರ್ಧಾರ್ಥಿಗಳು ) ಈಗಾಗಲೇ ಒಂದು ಕೆಲಸದಲ್ಲಿದ್ದು , ಅವರ ಕಚೇರಿಯಲ್ಲಿ ಕೆಲಸ ಮಾಡುವಾಗ ಅಥವಾ ಇನ್ನೂ ಕೆಲಸವೊಂದನ್ನ ಅರಸುತ್ತಿರುವ ಅಭ್ಯರ್ಥಿಗಳು ಸಾಮಾನ್ಯವಾಗಿ ಪರೀಕ್ಷೆ ಸಿದ್ಧತೆ ಅಂತ್ಹೇಳಿ ಧಾರವಾಡನೋ ಅಥವಾ ಮೈಸೂರೋ ಅಥವಾ ಬೆಂಗಳೂರೋ ಅಥವಾ ತಂತಮ್ಮ ಜಿಲ್ಲಾ ಕೇಂದ್ರಗಳಲ್ಲಿ ಓದಿಗಾಗಿ ಡೇರೆ ಹೂಡೋದು ಇತ್ತೀಚೆಗೆ ಸಾಮಾನ್ಯ ವಾಗಿದೆ. ಇಂಥ ಸ್ಪರ್ಧಾರ್ಥಿಗಳಿಗೆ ಸಹಾಯ ಹಸ್ತವಾಗೋದು


e-ಪತ್ರಿಕೆಯ ಧ್ಯೇಯ&ಉದ್ಧೇಶ :: Motto & Purpose.


ಖುದ್ದು ಒಬ್ಬ ಸ್ಪರ್ಧಾರ್ಥಿಯಾಗಿ ನಿಂತು ಯೋಚಿಸಿ ಒಂದು ಪರೀಕ್ಷೆ ಸಿದ್ಧತೆಗೆ ಏನೇನೆಲ್ಲ ಕಚ್ಚಾ ಸಾಮಗ್ರಿ ಬೇಕಾಗಬಹುದು ಅಂತ ಯೋಚಿಸಿ, ಇದನ್ನ ಸಿದ್ಧಪಡಿಸಿದೀನಿ. ಮುಖ್ಯ ಮಾತು ಏನಂದ್ರೆ, ನಿಮ್ಮೆದುರಿಗಿರೋ e ತಾಣ Final Product ಅಲ್ಲ. ಇದು ನಿರಂತರವಾಗಿ Update ಆಗೋ , ನಿರಂತರ ಬದಲಾವಣೆ ಕಾಣೋ ಹರಿಯೋ ನದಿ. e ಜ್ಞಾನ ನದಿಗೆ ಆ ನೈಸರ್ಗಿಕ ನದಿಗಿರೋ ಗುಣಗಳನ್ನೇ Attribute ಮಾಡೋ ಉದ್ದೇಶ ನಂದು.

ಕೃತಜ್ಞತೆ : 



e-ಬ್ಲಾಗ್ ಪ್ರಾರಂಭಿಸಲು ಪ್ರೇರಣೆ ನೀಡಿದ PDO ಪರೀಕ್ಷಾ ಸಿದ್ಧತಾ ಸಮಯಕ್ಕೆ ನನ್ನ ಮೊದಲ ಕೃತಜ್ಞತೆ. ಎರಡನೆಯದು ನನ್ನ ತಂಗಿಗೆ ಸಲ್ಲಬೇಕು. ನಾವಿಬ್ಬರೇ ಇರೋ ಈ ಬೆಂಗಳೂರು ಮನೆಯಲ್ಲಿ ನನ್ನ ಇಲಾಖೆಯಾದ ಪಾತ್ರೆ ಮತ್ತು ಮನೆ ಸ್ವಚ್ಛತೆಯಲ್ಲಿ ಕಾಲಾನುಕಾಲಗಳಲ್ಲಿ ಉಂಟಾದ ಸಮಸ್ತ ಕೊರತೆಗಳನ್ನ ಸಹಿಸಿಕೊಂಡು ಈ 6 ತಿಂಗಳಲ್ಲಿ ಒಂದು ಸಾರಿಯೂ ಮನೆಯಿಂದ ಹೊರಗೆ ಹಾಕದೆ ಇದ್ದುದಕ್ಕೆ. ಇನ್ನು ನನ್ನ ಆತ್ಮೀಯ ಗೆಳೆಯ ಪರಶುರಾಮ್ ಗೆ ಸಲ್ಲಲೇಬೇಕಾದ ವಿಶೇಷ ಕೃತಜ್ಞತೆಯಿದೆ. ( ನಂಗೊಂದು ಚಾಳಿ ಇದೆ. ಏನಂದ್ರೆ ನಾನು ಮಾಡೋ ಈ ಥರದ ಹೊಸ ಹೊಸ ಹುಚ್ಚಾಟಗಳನ್ನ ನನ್ನ ಸ್ನೇಹಿತರೆದುರು ತೋರಿಸಿ ಅವರಿಂದ ಪ್ರಶಂಸೆ ಮಿಶ್ರಿತ ಅಭಿಪ್ರಾಯ ಪಡೆಯೋದು. ) ಈ ಕೆಲಸವನ್ನ, ನನ್ನ ಮನಸನ್ನ 100% ಅರಿತವರಂತೆ, ಮಾಡಿದ ಪರಶುರಾಮ್ ಗೆ ವಿಶೇಷ ಧನ್ಯವಾದಗಳು. Last But Not The Least ಅನ್ನೋ ಹಾಗೆ, ನನ್ನ ಪ್ರೀತಿಯ Computer ಗೆ ಸ್ನೇಹಪೂರ್ವಕ ಕೃತಜ್ಞತೆ ಅರ್ಪಿಸಲು ಇಷ್ಟಪಡ್ತೀನಿ.


<<< * >>>
ಇಷ್ಟು ಸಾಕು ಪರಿಚಯ.
Over 2 U.
<<< * >>>

5 comments:

ranganath said...

vÀÄA¨Á M¼ÉîAiÀÄ PÉ®¸À E£ÀÄß ¸ÁzÀåªÁzÀµÀÄÖ ªÀiÁ»wUÀ¼À£ÀÄß ¸ÉÃj¸ÀÄwÛj PÀ£ÀßrUÀ ¸ÀàzsÁðyðUÀ½UÉ £ÉgÀªÁUÀĪÀ ºÁUÉ ªÀiÁr zsÀ£ÀåªÁzÀUÀ¼ÀÄ

Anonymous said...

Thanku sir

Anonymous said...

Jai karnataka

Anonymous said...

ಒಳ್ಳೆಯ ಕೆಲಸ

Unknown said...

ಒಳ್ಳೆಯದು

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ