ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ಪರಶು. Show all posts
Showing posts with label ಪರಶು. Show all posts

Nov 19, 2010

ವಾಹನ & ವೈಯಕ್ತಿಕ ಭದ್ರತೆ

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಮಗುವೊಂದರ ಜೀವವನ್ನ ಕಾಯಿಸಿದ ನರೇಂದ್ರ ಮೋದಿ ಕಾರಿನ ಸುಗಮ ಚಲನೆ.



ಸುದ್ದಿಯ ಒಳನೋಟ :

  • ವಿವಿಐಪಿ , ವಿಐಪಿ ಇತ್ಯಾದಿಗಳು ರಸ್ತೆಗಿಳಿದರೆ ಮೊದಲು ಅವರಿಗೆ ಆದ್ಯತೆ ಕೊಡಬೇಕು ಎನ್ನುವುದು ನಿಯಮವೇನೋ ತಿಳಿಯದು. ಆದರೆ ಸಾಮಾನ್ಯವಾಗಿ ಅಂಥ ಮಹಾನುಭಾವರು ಹೊರಟರೆ ವಿಶಾಲ ರಸ್ತೆಗಳಲ್ಲಿ ತಾವಷ್ಟೇ ಹೋಗಲು ಅನುವು ಮಾಡಿಕೊಟ್ಟು ಅವರ ದುರಾಡಳಿತ ಸೃಷ್ಟಿಸಿರುವ ಟ್ರಾಫಿಕ್ ಸಮಸ್ಯೆ (?)ಯನ್ನ ಅವರಿಗೆ ತಿಳಿಯದ ಹಾಗೆ ಮಾಡುತ್ತೇವೆ.
ಟ್ರಾಫಿಕ್ ಸಮಸ್ಯೆಗೆ ಕೇವಲ ಸರ್ಕಾರವೊಂದನ್ನೇ ದೂಷಿಸುವುದು ತಪ್ಪು. ಸರ್ಕಾರ ಎನ್ನುವುದು ಆಡಳಿತ ಯಂತ್ರ. ಅದನ್ನ ಚಲಾಯಿಸುವವರು ನಮ್ಮ ಪ್ರತಿನಿಧಿಗಳಷ್ಟೇ. ರಸ್ತೆಯ ಮೇಲೆ ನಾವು ಚಲಾಯಿಸುವ ನಮ್ಮ ಸ್ವಂತ ವಾಹನದ ಮೇಲೆ ಇರುವಷ್ಟೇ ಸ್ವಂತಿಕೆ ಸರ್ಕಾರದ ಆಡಳಿತ ಯಂತ್ರದ ಮೇಲೆ ನಮ್ಮೆಲ್ಲರಿಗಿದೆ. ಹಾಂ, ಇಲ್ಲಿ ವಿಶೇಷತೆ ಏನಂದ್ರೆ ಸ್ವಂತ ವಾಹನ ಇಲ್ಲದೇ ಇರುವವರಿಗೂ ಸರ್ಕಾರಿ ಆಡಳಿತ ಯಂತ್ರದ ಮೇಲೆ ಸ್ವಂತಿಕೆ ಇದೆ. ಅವರಿಗೆ ಛಾತಿ ಇದ್ದರೆ ರಸ್ತೆಯ ಮೇಲೆ ಇಲ್ಲಿಯತನಕ ಪಾದಚಾರಿಗಳಾಗಿದ್ದರೂ ಪರವಾ ಇಲ್ಲ, ಇನ್ನು ಮುಂದೆ ಸರ್ಕಾರಿ ಆಡಳಿತ ಯಂತ್ರ ಚಲಾಯಿಸಬಹುದು. ಆಗ  ರಸ್ತೆಗಳಲ್ಲಿ ಹೊರಟರೆ ಇಡೀ ಊರೇ  ದಾರಿ ಮಾಡಿಕೊಡುತ್ತದೆ. ಮೊದಲಿನಂತೆ ಕೆಂಪು ದೀಪಕ್ಕಾಗಿ ಕಾಯುವ ಪ್ರಶ್ನೆಯೇ ಇಲ್ಲ !!  ಯಾಕಂದ್ರೆ ನೀವು ಸದಾ ಕೆಂಪು ದೀಪ ತೋರಿಸಿಕೊಂಡು ಹೋಗುತ್ತೀರಿ. ಉಳಿದವರು ಕೆಂಪು ದೀಪ ನೋಡಿ ನಿಲ್ಲುವುದು ಟ್ರಾಫಿಕ್ ನಿಯಮ ತಾನೇ ?
ಟ್ರಾಫಿಕ್ ಸಮಸ್ಯೆಗೆ ಬುಹುಮುಖ್ಯ ಕಾರಣಗಳು ಎರಡು : ಅತಿಯಾದ ಜನಸಂಖ್ಯೆ & ಅತಿಯಾದ ಸ್ವಂತ ವಾಹನಗಳು. ಇವೆರಡಕ್ಕೂ ನಮ್ಮ ಅವಜ್ಞೆ & ಸ್ವಾರ್ಥ ಕಾರಣವೇ ಹೊರತು ಸರ್ಕಾರವಲ್ಲ. ನಿಮಗೆ 4ನೇ ಮಗು ಹುಟ್ಟಿದರೆ ಅದಕ್ಕೆ ಸರ್ಕಾರವನ್ನ ದೂರುವುದು ನಿಮಗೆ ಶೋಭೆ(!?) ತರುವಂಥದಲ್ಲ. ನೀವು ಹೊಸ ವಾಹನ ಖರೀದಿಸಿದರೆ ಅದಕ್ಕೆ ಸರ್ಕಾರ ಜವಾಬ್ದಾರಿಯೇ ? ನಮ್ಮ ಮನೆಯಿಂದ ಬಸ್ ವ್ಯವಸ್ಥೆ ಸರಿಯಾಗಿಲ್ಲ. ಅದಕ್ಕೆ ಸ್ವಂತ ವಾಹನ ಬೇಕು ಎನ್ನುವವರು ಇಲ್ಲಿ ಸಮಸ್ಯೆಯಾಗಿಲ್ಲ. ಬದಲಿಗೆ ದೊಡ್ಡ ಕಾರಿನಲ್ಲಿ ಒಬ್ಬರೇ ಹೊರಟು ನಾಲ್ಕು ಜನ ಆಕ್ರಮಿಸುವ ಜಾಗವನ್ನ ಒಬ್ಬರೇ ಆಕ್ರಮಿಸುವುದು ಸಲ್ಲ. ಇದಕ್ಕೆ ಮದ್ದು ಎಂಬಂತೆ,  car pooling ವ್ಯವಸ್ಥೆಯೊಂದಿದೆ. ಹೀಗಿರುವಾಗ ಟ್ರಾಫಿಕ್ ಸಮಸ್ಯೆಗೆ ಸರ್ಕಾರ ಮೊದಲ ಕಾರಣ ಎಂದು ನಿಮಗನಿಸಿದರೆ, ಅದು ಕೊನೆಯಿಂದ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ನಿಮಗೆ ತಿಳಿದಿರಲಿ. ನಮ್ಮಿಂದಾಗಿರುವ ತಪ್ಪುಗಳನ್ನ ಮೊದಲು ತಿದ್ದಿಕೊಳ್ಳೋಣ. ನಂತರ ಇತರರನ್ನ ದೂಷಿಸೋಣ.
  • ಸದರಿ ವಿಐಪಿ ಗಳು ಹೊರಟರೆ ಅವರ ಹಿಂದೆ ಮುಂದೆ ಹತ್ತಾರು ವಾಹನಗಳ ಸಾಲಿರುತ್ತದೆ. ಅದು ಅವರ ವೈಯಕ್ತಿಕ ಭದ್ರತೆಗಾಗಿ. ಆ ಸಾಲಲ್ಲಿ
  • ಮೊದಲಲ್ಲಿ Signal Jammer Vehicle ಇರುತ್ತದೆ. ಸಂಭಾವ್ಯ ಬಾಂಬ್ ದಾಳಿಯಾದರೆ, ಅದರಲ್ಲೂ ನಿಸ್ತಂತು (wireless) Device ಬಳಸಿ ಬಾಂಬ್ ಸ್ಫೋಟಕ್ಕೆ ಯತ್ನಿಸಿದರೆ, ಸದರಿ wireless Device ನಿಂದ ಸ್ಫೋಟಕ್ಕೆ ಸಂದೇಶ ರವಾನೆಯಾಗದ ಹಾಗೆ ನೋಡಿಕೊಳ್ಳುವುದೇ ಜಾಮರ್ ವೆಹಿಕಲ್ ನ ಕೆಲಸ.
  • ನಂತರ ಉಚ್ಚ ದರ್ಜೆಯ ರಕ್ಷಣಾ ಅಧಿಕಾರಿ(ಪೊಲೀಸ್)ಗಳ ಅಂಗರಕ್ಷಕ ವಾಹನ ಇರುತ್ತದೆ.
  • ಆಮೇಲೆ ಸದರಿ ಗಣ್ಯ ವ್ಯಕ್ತಿ. 
  • ಆಮೇಲೆ ಅವರ ಆಪ್ತರು. 
  • ನಂತರ ಮತ್ತೊಂದು ಪೊಲೀಸ್ ವಾಹನ.
  • ನಂತರ ಪೊಲೀಸ್ ತುಕಡಿ ಇರುವ ವ್ಯಾನ್.
  • ನಂತರ ಆಂಬುಲೆನ್ಸ್.
ಇಲ್ಲಿ ನೀಡಿರುವ ಪಟ್ಟಿ ಮತ್ತು ಅನುಕ್ರಮಣಿಕೆ ವೈಯಕ್ತಿಕ Observation ಮೇಲೆ ನಂಬಿಕೆ ಇರಿಸಿ ನೀಡಿದುದಾಗಿದೆ. ನಿಖರ ಮಾಹಿತಿಯನ್ನ ಓದುಗರೇ ತಿಳಿಸಿಕೊಟ್ಟರೆ ಉಪಕಾರವಾದೀತು.
  • ವಾಹನಕ್ಕೆ ಭದ್ರತೆಯ ಜೊತೆಗೆ ವೈಯಕ್ತಿಕ ಭದ್ರತೆಯನ್ನೂ ಅತಿಗಣ್ಯರು, ಗಣ್ಯರು .. ಗಳಿಗೆ ನೀಡಲಾಗುತ್ತದೆ. ಅದು ಹೀಗಿದೆ.


ಪ್ರತಿಯೊಬ್ಬರಿಗೂ ಪ್ರಾಣ ರಕ್ಷಣೆ ಅನ್ನೋದು ಅತ್ಯಂತ ಮಹತ್ವದ್ದು. ನಮ್ಮಂತ ಸಾಮಾನ್ಯ ಮನುಷ್ಯರು ಬಿಡಿ, ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗಳು ನಾವು! ಆದರೆ ನಮಗಿಂತಲೂ ಎತ್ತರಕ್ಕೇರಿದ, ಕೀರ್ತಿಯ ಕಳಶವನ್ನು ಭುಜದಲ್ಲಿ ಹೊತ್ತ ಪ್ರಖ್ಯಾತರಿಗೆ ನಮ್ಮಷ್ಟು ಸುಲಭದ ಬದುಕು ಸಾಧ್ಯವಿಲ್ಲ. ಅವರ ಜೀವದ ರಕ್ಷಣೆ ಅವರಿಗೊಂದು ದೊಡ್ಡ ಸವಾಲಾಗಿರುತ್ತದೆ. ಭಾರತದಲ್ಲಂತೂ ಇಂತಹ ವ್ಯಕ್ತಿಗಳಿಗೆ ಭದ್ರತೆ ಒದಗಿಸುವುದು ಸ್ಥಳೀಯ ಸರ್ಕಾರ ಮತ್ತು ಪೋಲೀಸರಿಗೆ ದೊಡ್ಡ ಮಟ್ಟದ ತಲೆನೋವು. ಸಾಮಾನ್ಯವಾಗಿ ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ಪ್ರಖ್ಯಾತ ಕ್ರೀಡಾ ಪಟುಗಳು ಮೊದಲಾದ VVIP/ VIP ಗಳಿಗೆಲ್ಲಾ ವೈಯಕ್ತಿಕ ಭದ್ರತೆಯನ್ನು ಒದಗಿಸಲಾಗುತ್ತದೆ. ಎಕ್ಸ್, ವೈ, ಝಡ್ ಮತ್ತು ಝಡ್ ಪ್ಲಸ್ ಎಂಬ ನಾಲ್ಕು ಶ್ರೇಣಿಯ ಭದ್ರತಾ ವ್ಯವಸ್ಥೆ ಭಾರತದಲ್ಲಿ ಚಾಲ್ತಿಯಲ್ಲಿದೆ.

X ವರ್ಗದ ಭದ್ರತೆಯಲ್ಲಿ 2 ಜನ ಸಿಬ್ಬಂದಿಗಳು.
ವರ್ಗದ ಭದ್ರತೆಯಲ್ಲಿ 11 ಜನ ಸಿಬ್ಬಂದಿಗಳು.
Z  ವರ್ಗದ ಭದ್ರತೆಯಲ್ಲಿ 22 ಜನ ಸಿಬ್ಬಂದಿಗಳು.
Z+ ವರ್ಗದ ಭದ್ರತೆಯಲ್ಲಿ 36 ಜನ ಸಿಬ್ಬಂದಿಗಳು.

ಭದ್ರತಾ ಸಿಬ್ಬಂದಿಗಳನ್ನು ವಿಶೇಷ ಭದ್ರತಾ ಪಡೆ (SPG), ರಾಷ್ಟ್ರೀಯ ಭದ್ರತಾ ದಳ (NSG), ಇಂಡೋ ಟಿಭೇಟಿಯನ್ ಗಡಿ ಪೋಲೀಸ್ (ITBP), ಕೇಂದ್ರೀಯ ಮೀಸಲು ಪೋಲೀಸ್ ಪಡೆ (CRPF) ಮೊದಲಾದ ಭದ್ರತಾ ಸಂಸ್ಥೆಗಳು ನಿಯೋಜಿಸುವ ಹೊಣೆಯನ್ನು ಹೊತ್ತುಕೊಂಡಿರುತ್ತವೆ.

ಅತ್ಯನ್ನತ ಭದ್ರತಾ ಸೇವೆಯಾದ Z+ ಶ್ರೇಣಿಯಲ್ಲಿ ರಾಷ್ಟ್ರೀಯ ಭದ್ರತಾ ದಳ (NSG)  ಅಥವಾ  ವಿಶೇಷ ಭದ್ರತಾ ಪಡೆ (SPG) ಕಮಾಂಡೋಗಳು ಕಾರ್ಯನಿರ್ವಹಿಸುತ್ತಾರೆ. ಪೈಲಟ್ ಕಾರ್, ಅಂಗರಕ್ಷಕ ವಾಹನ ಹಾಗೂ ವೈಯಕ್ತಿಕ ಭದ್ರತಾಧಿಕಾರಿಗಳನ್ನೊಳಗೊಂಡ 36 ಸಿಬ್ಬಂದಿಗಳು ಭದ್ರತೆಗೆ ನಿಯೋಜಿತರಾಗಿರುತ್ತಾರೆಪ್ರತಿಷ್ಠಿತ ವ್ಯಕ್ತಿಗಳಿಗೆ ಶ್ರೇಣಿಯ ಭದ್ರತೆ ಒಂದು ಪ್ರತಿಷ್ಠೆಯ ಸಂಕೇತ ಕೂಡಾ ಆಗಿರುತ್ತದೆ.

Z ಶ್ರೇಣಿಯ ಭದ್ರತೆಯಲ್ಲಿ ಇಂಡೋ ಟಿಭೇಟಿಯನ್ ಗಡಿ ಪೋಲೀಸ್ (ITBP) ಅಥವಾ ಕೇಂದ್ರೀಯ ಮೀಸಲು ಪೋಲೀಸ್ ಪಡೆ (CRPF) ಯೋಧರು ಮತ್ತು ಅಂಗರಕ್ಷಕ ವಾಹನ ಒಳಗೊಂಡ 22 ಮಂದಿ ಇದ್ದರೆ, Y  ಶ್ರೇಣಿಯಲ್ಲಿ ಇಬ್ಬರು ವೈಯಕ್ತಿಕ ಭದ್ರತಾಧಿಕಾರಿ (PSO)ಗಳನ್ನೊಳಗೊಂಡ 11 ಜನ  ಹಾಗೂ X ಶ್ರೇಣಿಯಲ್ಲಿ ಒಬ್ಬರು ಭದ್ರತಾಧಿಕಾರಿ ಒಳಗೊಂಡಂತೆ ಇಬ್ಬರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ.

ಪ್ರತಿಷ್ಠಿತರೊಬ್ಬರ ಪ್ರಾಣ ಕಾಪಾಡೋಕೆ  ಎಷ್ಟೊಂದು  ಮಂದಿ  ಶ್ರಮಪಡ್ತಾರಲ್ವಾ ..? ಆದರೆ ಪ್ರತಿಷ್ಠಿತರೆಲ್ಲಾ ದಿನೇ ದಿನೇ ಒಂದಿಲ್ಲೊಂದು ರೀತಿಯಲ್ಲಿ ಭ್ರಷ್ಟತೆಯ ಅಭ್ಯಂಜನ ಮಾಡ್ತಿರೋದನ್ನೇಲ್ಲಾ ನೋಡಿದ್ರೆ ಸಡಗರಕ್ಕೋಸ್ಕರವೇ ಇವರಿಗೆ ಇಂತಹ ಸೆಕ್ಯುರಿಟಿ ಕೊಡಬೇಕಾ ಅನ್ನಿಸ್ತಿದೆ.



: ಪರಶು 

Aug 26, 2010

ಎಲ್ಲಿಲ್ಲಿ ನೋಡಿ ಎಲ್.ಇ.ಡಿ

0 ಪ್ರತಿಕ್ರಿಯೆಗಳು

:: ಎಲ್ಲಿಲ್ಲಿ ನೋಡಿ  ಎಲ್.ಇ.ಡಿ ::



ಲೈಟ್ ಎಮಿಟಿಂಗ್ ಡಯೋಡ್ ಎಂಬುದನ್ನು ಸಂಕ್ಷೇಪಿಸಿಕೊಂಡು ಎಲ್.ಇ.ಡಿ ಎಂದು ಕರೆಯಲ್ಪಡುವ  ಪುಟ್ಟ ವಿದ್ಯುದ್ದೀಪವನ್ನು  ನೀವು ಎಲ್ಲೆಲ್ಲೂ ನೋಡಿರುತ್ತೀರಿ, ಇಲ್ಲ ನೋಡಿಲ್ಲ ಅಂತೀರಾ ? ಹಾಗಾದ್ರೆ ನಿಮ್ಮ ಕಂಪ್ಯೂಟರ್ ನ ಕೀಲಿಮಣೆಯ ನಂಬರ್ ಲಾಕ್,  ಕ್ಯಾಪ್ಸ್ ಲಾಕ್, ಸ್ಕ್ರಾಲ್ ಲಾಕ್ ನ ಇಂಡಿಕೇಟರ್ ಗಳ ಕಡೆ ಕಣ್ಣಾಯಿಸಿ.  ಹಾ ಕಾಣಿಸ್ತಲ್ವಾ ಹಸಿರು ಬಣ್ಣದ ಪುಟ್ಟ ದೀಪ,  ಇವನ್ನೆ ಎಲ್.ಇ.ಡಿ. ಲ್ಯಾಂಪ್ಸ್ ಅನ್ನೊದು. ಇಂದು ನಾವು ದಿನನಿತ್ಯ ಬಳಸುವ ವಿದ್ಯುದ್ದುಪಕರಣಗಳಲ್ಲಿ, ಅಲಂಕಾರಿಕ ವಸ್ತುಗಳಲ್ಲಿ, ವಾಹನಗಳಲ್ಲಿ ಈ ಪುಟ್ಟ ಆಕರ್ಷಕ ದೀಪಗಳ ಬಳಕೆ ಸರ್ವೇ ಸಾಮಾನ್ಯವಾಗಿದೆ. ನಮ್ಮ ಬಿ.ಎಂ.ಟಿ.ಸಿ ಯ ನೂತನ ಬಸ್ ಗಳಲ್ಲಿ ಎಲ್.ಇ.ಡಿ. ಬಳಕೆಯ ನಾಮಫಲಕಗಳನ್ನು ದಿನನಿತ್ಯ ಕಾಣುತ್ತೇವೆ ಹಾಗೇ ರಾತ್ರಿ ಹೇಳದೇ ಕೇಳದೆ ವಿದ್ಯುತ್ ಕೈ ಕೊಟ್ಟಾಗ ಹೊತ್ತಿಸುತ್ತೇವಲ್ಲ ಎಮರ್ಜೆನ್ಸಿ ಲೈಟು ಅವುಗಳಲ್ಲೂ ಹಾಗೂ  ಸೌರ ವಿದ್ಯುದ್ದೀಪಗಳಲ್ಲೂ ಸಹ ಈ ಎಲ್.ಇ.ಡಿ.ಗಳು ಬಹುಸಂಖ್ಯೆಯಲ್ಲಿ ಬಳಕೆಯಾಗುತ್ತಿವೆ.


ಈ ಎಲ್.ಇ.ಡಿ. ಎಂಬುದು ಹೆಸರೇ ಸೂಚಿಸುವಂತೆ  ಬೆಳಕನ್ನು ಹೊರಸೂಸಬಲ್ಲಂತಹ ಡಯೋಡ್ ಆಗಿದೆ. ಒಂದು ಕಡೆ ಋಣಾತ್ಮಕ ವಿದ್ಯುದಾವೇಶಗಳಿರುವ ಎಲೆಕ್ಟ್ರಾನ್ ಗಳು ಹಾಗೂ ಇನ್ನೊಂದುಕಡೆ ಧನಾತ್ಮಕ ವಿದ್ಯುದಾವೇಶಗಳಿರುವ ಎಲೆಕ್ಟ್ರಾನ್ ಗಳಿರುವ ಎರಡು ಅರೆವಾಹಕ ಭಾಗಗಳನ್ನು ಸೇರಿಸಿ ಈ ಎಲ್.ಇ.ಡಿ. ಗಳನ್ನು ತಯಾರಿಸಲಾಗಿರುತ್ತದೆ. ವಿದ್ಯುತ್ ಹರಿದಾಗ ಧನಾತ್ಮಕ ಹಾಗೂ ಋಣಾತ್ಮಕ ವಿದ್ಯುದಾವೇಶಗಳು ಒಂದುಗೂಡಿ ಪೋಟಾನುಗಳ ರೂಪದಲ್ಲಿ ಬೆಳಕನ್ನು ಹೊರಸೂಸುತ್ತವೆ. ಎಲ್.ಇ.ಡಿ. ತಯಾರಿಕೆಯಲ್ಲಿ ಬಗೆಬಗೆಯ ಧಾತುಗಳನ್ನು ಬಳಸುವ ಮೂಲಕ ಬಣ್ಣಬಣ್ಣದ ಬಲ್ಬ್ ಗಳನ್ನು ತಯಾರಿಸಲಾಗುತ್ತದೆ.  ಬಣ್ಣ ಬಣ್ಣದ ಬೆಳಕು ಸೂಸುವ ಎಲ್.ಇ.ಡಿ.ಗಳನ್ನು ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ, ಸಿಗ್ನಲ್ ದೀಪಗಳಲ್ಲಿ, ನಾಮಫಲಕಗಳಲ್ಲಿ,   ವಿದ್ಯುತ್ ಉಪಕರಣಗಳಲ್ಲಿ ಬಳಸಿದರೆ, ಬಿಳಿಬೆಳಕು ಸೂಸುವ ಪುಟ್ಟ ಪುಟ್ಟ ಈ ದೀಪಗಳನ್ನು ಬಹುಸಂಖ್ಯೆಯಲ್ಲಿ ಒಗ್ಗೂಡಿಸಿ ಶುಭ್ರವಾದ, ತಂಪಾದ, ಹಿತಕರ ಬೆಳಕನ್ನು ಪಡೆಯಲಾಗುವ ಗೃಹ ಬಳಕೆಯ ದೀಪಗಳಲ್ಲಿ ಬಳಸಲಾಗುತ್ತದೆ.



ಅಮೇರಿಕಾದ ನಿಕ್ ಹೋಲೋನ್ಯಾಕ್ ಎಂಬ ವಿಜ್ಞಾನಿ 1962 ರಲ್ಲಿ ಮೊದಲ  ಎಲ್.ಇ.ಡಿ ಯನ್ನು ಸೃಷ್ಠಿಸಿದ. ಅಲ್ಲಿಂದೀಚೆಗೆ ಕ್ಷಿಪ್ರಗತಿಯಲ್ಲಿ ಜನಪ್ರಿಯವಾಗಿರುವ ಈ ಪುಟಾಣಿ ದೀಪಗಳು ಇಂದು ಸರ್ವವ್ಯಾಪಿಯಾಗಿವೆ. ಸಾಮಾನ್ಯ ವಿದ್ಯುತ್ ದೀಪಗಳಿಗಿಂತ ಹತ್ತು ಹನ್ನೆರಡು ಪಟ್ಟು ಕಾರ್ಯದಕ್ಷತೆ ಮತ್ತು ಬಾಳಿಕೆಯನ್ನು ಈ ಪುಟ್ಟ ದೀಪಗಳು ಹೊಂದಿದ್ದು.  ಸಮ ಪ್ರಮಾಣದ ವಿದ್ಯುತ್ ಪ್ರವಾಹದಲ್ಲಿ ಒಂದು ಎಲ್.ಇ.ಡಿ ಕನಿಷ್ಟ ಸುಮಾರು ಒಂದು ಲಕ್ಷಗಂಟೆಗಳಷ್ಟು ಬಾಳಿಕೆ ಬರಬಲ್ಲದು ಎಂದು ಅಂದಾಜಿಸಲಾಗಿದೆ. ಅತಿಕಡಿಮೆ ಓಲ್ಟೇಜಿನ ವಿದ್ಯುತ್ ಪ್ರವಾಹದಲ್ಲೂ ಸಹ ಬೆಳಕನ್ನು ಹೊರಸೂಸಬಲ್ಲ ಇವು ಕಡಿಮೆ ಬೆಲೆಯಲ್ಲಿ ಕೈಗೆಟಕುವ ವಿದ್ಯುದ್ ದೀಪಗಳಾಗಿವೆ. 


ಇಂದು ಎಲ್.ಇ.ಡಿ. ಬಳಕೆ ಕೇವಲ ಬೆಳಕಿಗಷ್ಟೇ ಅಲ್ಲದೆ ಅಲ್ಟ್ರಾ ವೈಲೆಟ್  ಮೂಲಕ ನೀರನ್ನು ಶುದ್ಧೀಕರಿಸುವ ಯೂವಿ ಟ್ರೀಟೆಡ್ ತಂತ್ರಜ್ಞಾನಕ್ಕೂ ಕಾಲಿಟ್ಟಿದ್ದು ಇಲ್ಲಿ ಯಶಸ್ವಿಯಾದರೆ ವಿದ್ಯುತ್ ಸಂಪರ್ಕ ಇಲ್ಲದಂತಹ ಸ್ಥಳಗಳಲ್ಲೂ ಸೌರಶಕ್ತಿಯ ಮೂಲಕ ನೀರಿನ ಶುದ್ಧೀಕರಣವನ್ನು ಸಾಧ್ಯವಾಗಿಸಬಹುದು ಎಂಬುದು ನಮ್ಮ ವಿಜ್ಞಾನಿಗಳ ಕನಸಾಗಿದೆ.

ಈ ವಿದ್ಯುದ್ ದೀಪಗಳ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಇನ್ನೂ ಕಡಿಮೆ ದರದಲ್ಲಿ ಕೈಗೆಟುಕುವಂತಹ ಎಲ್,ಇ.ಡಿಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳ ಪ್ರಯತ್ನ ನಿರಂತರವಾಗಿ ಸಾಗಿದ್ದು ಎಲ್ಲೆಲ್ಲೂ ಎಲ್.ಇ.ಡಿ ಗಳ ಬೆಳಕೇ ರಾರಾಜಿಸುವ ಕಾಲವು ಸನ್ನಿಹಿತವಾಗುತ್ತಿದೆ.

ಎಲ್.ಇ.ಡಿ.ಗಳ ಬಗ್ಗೆ ಹೆಚ್ಚು ತಿಳಿಯಲು
http://kn.wikipedia.org/wiki/ಲ್‌ಇಡಿ_ಲ್ಯಾ೦ಪ್

: ಪರಶು 



.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ