ಎಲ್ಲರಿಗೂ ತಿಳಿದಿರುವ ಹಾಗೆ ಅಮೆರಿಕನ್ನರಿಗೆ ಧರ್ಮಕ್ಕಿಂತ ದೇಶದ ಬಗ್ಗೆ ಪ್ರೀತಿ ಜಾಸ್ತಿ. Country First ಎಂಬ ನೀತಿ ಅವರದ್ದು. ನಾವು ಹೇಗೆ ನಮ್ಮ ದೇಶದ ಬಗ್ಗೆ ಹೇಳಿಕೊಳ್ಳುವಾಗ ನಮ್ಮದು ಸಂಪದ್ಭರಿತ ರಾಷ್ಟ್ರ - ಜಾತ್ಯಾತೀತ ರಾಷ್ಟ್ರ - ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಎಂಬಿತ್ಯಾದಿಯಾಗಿ ಹೇಳಿಕೊಳ್ಳೂತ್ತೇವಲ್ಲ ... ಅದೇ ರೀತಿ ಅವರು ಈ ಕೆಳಗಿನಂತೆ ಹೇಳಿಕೊಳ್ಳುವದು ಸರ್ವೇ ಸಾಧಾರಣವಾಗಿ ಕಂಡುಬರುತ್ತದೆ....
"The United States of America is exceptional among the nations of the world. Unlike most other countries, there is no overarching ethnic or religious affiliation that identifies one as an “American.”Rather, what binds the more than 300 million Americans together is a shared civic identity.
ಇಂತಿಪ್ಪ ದೇಶದಲ್ಲಿ ಕ್ರೀಡೆಯ ಬಗೆಗಿನ ದೃಷ್ಟಿಕೋನ ಹೇಗಿರಬಹುದು ಎಂಬ ಕುತೂಹಲಕ್ಕಾಗಿ ಮಾಹಿತಿಯನ್ನು ತಡಕಾಡಿದಾಗ ಕೆಲವು ಕುತೂಹಲಕರ ಅಂಶಗಳು ಸಿಕ್ಕಿದ್ವು. ನಿಮ್ಮೊಂದಿಗೆ ಅವುಗಳನ್ನು ಹಂಚಿಕೊಳ್ಳೋಣ ಅಂತ ಈ ಬರಹ.
ಅಮೆರಿಕದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಸಂಪೂರ್ಣ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಇಲಾಖೆ ಎಂಬುದಿಲ್ವಂತೆ.
President's Council on Physical Fitness and Sports ಎಂಬ ಸಮಿತಿ ದೇಶದ ಕ್ರೀಡಾ ಚಟುವಟಿಕೆಗಳ ಬಗ್ಗೆ ಅಮೆರಿಕದ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾ ದೇಶದ ನಾಗರಿಕರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಕ್ರೀಡೆಯನ್ನು ಶಿಫಾರಸ್ಸು ಮಾಡುತ್ತದಂತೆ.
ಅಮೆರಿಕ ಸಂಸತ್ತು ಅಖೈರುಗೊಳಿಸಿರುವ ಅಮೆರಿಕಾ ಒಲಿಂಪಿಕ್ ಅಸೋಸಿಯೇಷನ್ ಸಂಸ್ಥೆಯು ಎಲ್ಲ ದೇಶಗಳ ಹಾಗೆ ತನ್ನ ದೇಶದಲ್ಲಿ ಒಲಿಂಪಿಕ್ ಪಾಲ್ಗೊಳ್ಗಲುವಿಕೆಗೆ ಸಂಬಂಧಿಸಿದ ಜವಾಬ್ದಾರಿ ಹೊಂದಿದೆ. ಇದರಲ್ಲೇನಿದೆ ವಿಶೇಷ ಅಂದಿರಾ - ಆಯ್ಕೆಯಾಗುವ ಕ್ರೀಡಾಳುಗಳು ತಯಾರಾಗುವ ಬಗೆಯೇ - American Special !!
ಎಲ್ಲ ದೇಶಗಳಲ್ಲೂ Amateur Sports ಮತ್ತು Proffessional Sports ಎಂಬ ಎರಡು ವಿಧಗಳಿರುತ್ತವೆ. ಶಾಲಾ ಕಾಲೇಜುಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸಮಯ ಕಳೆಯಲು ಅಥವಾ ಆಟದ ಸಮಯವನ್ನು ಪೂರೈಸಲು ಅಥವಾ ಹವ್ಯಾಸದ ಭಾಗವಾಗಿ ಆಟ ಆಡುವ ರೀತಿಗೆ
Amateur Sports ಎನ್ನಬಹುದು. ಈ ತೆರನಾದ ಕ್ರೀಡೆಯ ಪಾಲ್ಗೊಳ್ಳುವಿಕೆಯಲ್ಲಿ ಗಂಭೀರತೆ ಕಡಿಮೆ. ಈ ಹಂತದಲ್ಲಿ ಅನೇಕ ಉತ್ತಮ ಕ್ರೀಡಾಪಟುಗಳು ಸರಿಯಾದ ಮಾರ್ಗದರ್ಶನವಿಲ್ಲದೆ ಉತ್ತಮ ಕ್ರೀಡಾ ಭವಿಷ್ಯ ಕಳೆದುಕೊಂಡು ಯಾವುದೋ ಬ್ಯಾಂಕಿನಲ್ಲಿ - ಸರ್ಕಾರೀ ಕಚೇರಿಯಲ್ಲಿ - ಇಲ್ಲಾ ಸಾಫ್ಟ್ ನೌಕರಿಯಲ್ಲಿ ಜಾಗ ಪಡೆದು ಸಂಸಾರ ಸಾಗರಕ್ಕೆ ಧುಮುಕಿ ಹಿಂದೊಮ್ಮೆ ತಾವು ಕ್ರೀಡೆಯಲ್ಲಿ ಮುಂದಿದ್ದೆವು ಎಂಬ ಕತೆಗಳನ್ನು ಮೊಮ್ಮಕ್ಕಳಿಗೆ ಹೇಳುವ ತಾತಂದಿರಾಗಿಬಿಡುತ್ತಾರೆ.
ಅಮೆರಿಕ ಒಲಿಂಪಿಕ್ಸ್ ನಲ್ಲಿ ಗಳಿಸಿ ಒಟ್ಟು ಪದಕಗಳೊಂದಗೆ ಚಿನ್ನದ ಪದಕಗಳ % GRAPH
ಆದರೆ ಅಮೆರಿಕದಲ್ಲಿ Amateur Sports ಬಗ್ಗೆ ಕೂಡ ಗಮನಹರಿಸಲಾಗುತ್ತದೆ. ಈ ಒಂದು ಅಂಶವೇ ಸಾಕು ಅಮೆರಿಕವನ್ನು ಇತರ ದೇಶಗಳಿಂದ ವಿಭಿನ್ನವಾಗಿರಿಸಲು. ಮಾಧ್ಯಮಿಕ ಮತ್ತು ಪಿಯು ಹಂತದ ಶಾಲೆಗಳಲ್ಲಿ(Secondary & Tertiary Educational Institutions) ಕ್ರೀಡೆಗಳಲ್ಲಿ ಅಭ್ಯಾಸದ ಕಡೆಗಿನ ಉತ್ಸುಕತೆಯಷ್ಟೇ ಕ್ರೀಡೆಯ ಕಡೆಗೂ ಇಟ್ಟುಕೊಂಡು ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಿತ್ತು -ಹೆಚ್ಚಿದೆ- ಹೆಚ್ಚಿರುತ್ತದೆ. ಅದುವೇ ಅಲ್ಲಿನ ಜನಜೀವನದ ವಿಶೇಷತೆ. ಈ ಬಗ್ಗೆ ಕ್ರೀಡಾಸಕ್ತ ವಿದ್ಯಾರ್ಥಿಗಳ ಆಸಕ್ತಿಯನ್ನು ಪೋಷಿಸಲು
National Collegiate Athletic Association ಎಂಬ ಶಾಲಾ ಕಾಲೇಜುಗಳ ಸಂಘವೊಂದನ್ನು ಸ್ಥಾಪಿಸಿಕೊಂಡಿದ್ದಾರೆ. ನಾನು ಮೊದಲೇ ಹೇಳಿದಂತೆ ಸರ್ಕಾರದ ನೇರ ಹಸ್ತಕ್ಷೇಪ ಇಲ್ಲ ಎಂಬುದನ್ನು ನಾನು ನಿಮಗಿಲ್ಲಿ ತೋರಿಸಿಕೊಟ್ಟ ಹಾಗಾಯಿತು. ಸುಮಾರು 1281 ಶಿಕ್ಷಣ ಸಂಸ್ಥೆಗಳು ಇದರ ಭಾಗವಾಗಿವೆ. ಈ ಸಂಸ್ಥೆ ಕ್ರೀಡೆಯಲ್ಲಿ ಮುಂದಿರುವ ಹುಡುಗರನ್ನು ತನ್ನ ಸುಪರ್ದಿಯಲ್ಲಿರುವ ಶಾಲೆಗಳ ಮುಖಾಂತರ ಗುರುತಿಸಿ ಅವರಿಗೆ ಹೇರಳ ಶಿಷ್ಯವೇತನ ನೀಡುತ್ತದೆ. ಅಷ್ಟೇ ಅಲ್ಲ ಈ NCAA ಗೆ ಕಾರ್ಫೊರೇಟ್ ಜಗತ್ತಿನ ಹಣಕಾಸಿನ ಬೆಂಬಲ ಇರುವುದು ಅಲ್ಲಿನ ಅತಿ ದೊಡ್ಡ ಪ್ಲಸ್ ಪಾಯಿಂಟ್. ವಿಕಿ ಪುಟದಿಂದ ಹೆಕ್ಕಿ ತೆಗೆದ ಮಾಹಿತಿಯ ಪ್ರಕಾರ ಈ ಕೆಳಕಂಡ ಹೆಸರಾಂತ ಕಂಪೆನಿಗಳು ಆ ಧೇಶದಲ್ಲಿ ಕ್ರೀಡೆಯಲ್ಲಿ ಹಣ ತೊಡಗಿಸಿರೋದನ್ನು ನೀವು ಕಾಣಬಹುದು.
NCAA Basketball ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳ ಬೃಹತ್ ಪಟ್ಟಿ
ನಂತರದ್ದು ಕ್ರೀಡಾ ಕ್ಲಬ್ ಗಳ ಸರದಿ. ಅವು ಪ್ರತಿ ವರ್ಷ ಹೊಸ ಹೊಸ ಪ್ರತಿಭಾವಂತ ಹುಡುಗರನ್ನು ಆರಿಸಿ ತಮ್ಮ ವಾರ್ಷಿಕ ಕ್ರೀಡಾ ಡ್ರಾಫ್ಟ್ ನಲ್ಲಿ ಸೇರಿಸಿಕೊಳ್ಳುತ್ತಾರೆ. ಹಾಗೆ ಸೇರ್ಪಡೆಗೊಂಡ ವಿದ್ಯಾರ್ಥಿ ಕ್ರೀಡಾರ್ಥಿಯಾಗಿ ಬದಲಾಗುತ್ತಾನೆ. ಇಲ್ಲಿಂದಲೇ ಅವರ ಜೀವನದಲ್ಲಿ ಯೂ - ಟರ್ನ್ !!
ಬಹಳ ದಿನದ ನಂತರ ಏನಾದರೂ ಬರೆಯೋ ಮನಸಾಗಿದೆ. ಯಾವ ವಿಷಯದ ಮೇಲೆ ಬರೆಯೋದು ಅಂತ ವಿಚಾರ ಮಾಡಿದಾಗ ಒಲಿಂಪಿಕ್ಸ್ ನೆನಪಾಯ್ತು. ಪದಕ ಪಟ್ಟಿ - ಸಾಧನೆ ಮಾಹಿತಿಗಿಂತ ವಿಭಿನ್ನವಾದದ್ದನ್ನ ಪರಿಚಯಿಸೋಣ ಅಂತ ಈ ವಿಷಯ ಎತ್ಕೊಂಡಿದೀನಿ.
ಮೊದಲು ಈ ವಿಡಿಯೋ ನೋಡಿ : ಇದು ಸ್ವಯಂ ವೇದ್ಯ ವಿಡಿಯೋ !!
-------
http://youtu.be/qij0QULBBdk
-------
ಈಗ ನಾನು ಸಂಗ್ರಹಿಸಿರುವ ಮಾಹಿತಿಯನ್ನು ನಂಬುವುದಾದರೆ...
" 1980ರ ದಶಕದಿಂದ ಚೀನಾ ಅಥ್ಲೀಟ್ ಗಳನ್ನು ತಯಾರು ಮಾಡುವ ಕಾರ್ಯವನ್ನು ಪ್ರಾರಂಬಿಸಿತಂತೆ. ಚೀನಾ ದೇಶದ ಎಲ್ಲ ಶಾಲಾಶಿಕ್ಷಕರಿಗೆ ತಮ್ಮ ಶಾಲೆಯಲ್ಲಿ ಕ್ರೀಡೆಯಲ್ಲಿ ಜನ್ಮತಹ ಗುಣ ಹೊಂದಿ ಮುಂದಿರುವ ಮಕ್ಕಳನ್ನು ಗುರುತಿಸುವಂತೆ ಸೂಚಿಸಲಾಗುತ್ತಂತೆ. ಅಲ್ಲದೇ ಅಂತಹ ಮಕ್ಕಳ ಬಗೆಗಿನ ಮಾಹಿತಿಯನ್ನು ಹತ್ತಿರದ ಸರ್ಕಾರ ಅಧಿಸೂಚಿಸಿದ ಸರ್ಕಾರಿ ಅಧಿಕಾರಿಗೆ ತಿಳಿಸಲು ಸೂಚಿಸಲಾಗಿರುತ್ತದಂತೆ. ಅಂತಹ ಅಧಿಕಾರಿಗಳು ಶಿಕ್ಷಕರು ಸೂಚಿಸಿದ ಮಕ್ಕಳನ್ನು ಪರೀಕ್ಷೆಗೊಳಪಡಿಸಿ ಹತ್ತಿರದ ಕ್ರೀಡಾ ತರಬೇತುದಾರನ ಹತ್ತಿರ ಬಿಡುತ್ತಾರಂತೆ. ತದನಂತರ ಚೀನಾ ದೇಶದಾದ್ಯಂತ ತೆರೆದಿರುವ ಸುಮಾರು 3000 ಕ್ರೀಡಾ ಹಾಸ್ಟೆಲ್ ಗಳ ಪೈಕಿ ಸದರಿ ಮಗು ಯಾವ ಕ್ರೀಡೆಯಲ್ಲಿ ಮುಂದಿದೆಯೋ ಅಂತಹ ಕ್ರೀಡೆಗೆ ಸಂಬಂಧಿಸಿದ ಹಾಸ್ಟೆಲ್ ಗೆ ಕಳುಹಿಸಲಾಗುತ್ತದಂತೆ. ಸದರಿ ಮಕ್ಕಳನ್ನು ಬಹುತೇಕ ಬಾರಿ ತಂದೆ ತಾಯಿಯರಿಂದ ದೂರ ಮಾಡಿ ಇರಿಸಲಾಗುತ್ತದಂತೆ. ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ತರಬೇತಿಗೆ ನಿಯೋಜಿತವಾದ ಮಗುವಿಗೆ " ನಿನ್ನ ಜೀವನದ ಗುರಿ - ಒಲಿಂಪಿಕ್ ಪದಕ " ಎಂಬುದಾಗಿ ನಂಬಿಸಿ ಅಚ್ಚೊತ್ತುವಂತೆ ಮಾಡಿ ಆ ನಿಟ್ಟಿನಲ್ಲಿ ಸಫಲರಾಗುವಂತೆ ಮಾಡುವುದೇ ಚೀನಾ ದೇಶ ಅನುಸರಿಸುವ ವಿಧಾನವಂತೆ.... "
ಈ ಪ್ಯಾರಾವನ್ನು ಅಂತೆ-ಕಂತೆಯ ರೀತಿ ಬರೆದ್ದೇಕೆಂದರೆ ನನಗೆ ಈ ವಿಷಯದ ಸತ್ಯಾತ್ಯತೆಯ ಬಗ್ಗೆ ಖಚಿತತೆ ಇಲ್ಲ. ಆದರೆ 75 ಪ್ರತಿಶತ ಇದು ಸತ್ಯ ಎಂದು ಓದಿ ನಂಬಿದ್ದೇನೆ. ಅದಕ್ಕೇನೆ ಈ ಮಾಹಿತಿಯನ್ನ ನಿಮಗೂ ನೀಡಿ ಸತ್ಯಾಸತ್ಯತೆಯನ್ನು ನಿಮ್ಮಿಂದಲೂ ಪರೀಕ್ಷೆ ಮಾಡಿಸೋಣ ಅಂತನ್ನುವುದು ನನ್ನ ಉದ್ದೇಶ.
ಸುದ್ದಿ : 92.4 ಟ್ರಿಲಿಯನ್ ಯೆನ್ ಮೊತ್ತದ ಬಜೆಟ್ ಮಂಡಿಸಿದ ಜಪಾನ್ ಸರ್ಕಾರ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
ಜಾಗತಿಕ ನಕ್ಷೆಯಲ್ಲಿ ಜಪಾನ್
ಜಪಾನ್ ಸ್ವಾಭಾವಿಕ
ನೆರೆ-ಹೊರೆ
ಸೂರ್ಯೋದಯದ ನಾಡು ಎಂದೇ ಪ್ರಸಿದ್ಧವಾಗಿರುವ ಜಪಾನ್ ಗೆ, (ಆ ಹೆಸರಿನ ಅರ್ಥ ಕೂಡ ಅದೇ !!) ಅಧಿಕೃತ ಭಾಷೆಯಲ್ಲಿ ಸ್ಟೇಟ್ ಆಫ್ ಜಪಾನ್ ಎಂದು ಹೆಸರಿದೆ.
ಜಪಾನ್ ದೇಶ ದ್ವೀಪಗಳ ಸಮೂಹ. ಇಂತಹ ಭೂಪ್ರದೇಶಗಳನ್ನ Archipelago ಅಂತ ಕರೆಯುತ್ತಾರೆ ಅನ್ನೋದನ್ನ ಸ್ಪರ್ಧಾರ್ಥಿಗಳು ನೆನಪಿಡಬೇಕು. ( Archipelago = Island Group = is a chain or cluster of islands that are formed tectonically ) ಜಪಾನ್ ತನ್ನ ಸುಪರ್ದಿಯಲ್ಲಿ 3000+ ದ್ವೀಪಗಳನ್ನ ಹೊಂದಿದೆ.
ಜಪಾನ್ ದೇಶ ಪರ್ವತಮಯವಾಗಿದ್ದು ಬಹಳ ಪರ್ವತಗಳು ತಮ್ಮ ಉದರದಲ್ಲಿ ಜ್ವಾಲಾಮುಖಿಗಳನ್ನ ಹೊಂದಿವೆ.
ಚೀನಾ ದೇಶವನ್ನ ಆರ್ಥಿಕತೆಯಲ್ಲಿ ಹಿಂದಿಕ್ಕಲು ಪ್ರಯತ್ನಿಸುತ್ತಿರುವ ಜಪಾನ್, ಜನಸಂಖ್ಯೆಯಲ್ಲೂ ತೀರ ಹಿಂದೇನಿಲ್ಲ. ಜಗತ್ತಿನ ಜನಸಂಖ್ಯೆಯಲ್ಲಿ 10ನೇ ಸ್ಥಾನ ಹೊಂದಿದೆ. ದೇಶದ ವಿಸ್ತೀರ್ಣ ಚಿಕ್ಕದಿದ್ದರೇನಾಯಿತು !! ನಾವು ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಹಂಬಲ !!! ನಮ್ಮ ದೇಶದಲ್ಲಿ ಜಾಗ ಇಲ್ಲದಿದ್ದರೇನಾಯಿತು, ಬೇರೆ ದೇಶದಲ್ಲಿ ಹೋಗಿ ನೆಲೆಸಿದರಾಯಿತು ಎನ್ನುವ Idea ಇರಬೇಕು !!!!
ದೇಶದಲ್ಲಿ Emperor ಇವತ್ತಿಗೂ ಅತ್ಯುಚ್ಛ ಸ್ಥಾನವನ್ನಲಂಕಿರಿಸಿರುವ ವ್ಯಕ್ತಿ. Diet ಎಂಬ ಹೆಸರಿನ ಜನಪ್ರತಿನಿಧಿಗಳ ಸಭೆ ಕೂಡ ಇದೆ. ನಮ್ಮ ದೇಶದ್ದು ಸಂಸತ್ತು (Parliament) ಅನ್ನೋದು ನಿಮಗೆ ಗೊತ್ತಿದೆ.
1945ರಲ್ಲಿ ಅಣು ಬಾಂಬ್ ಎಂಬ ವಿಕೃತ ಪ್ರತೀಕಾರಕ್ಕೆ ತುತ್ತಾದ ಜಪಾನ್ ಇಂದು ಜಗತ್ತಿನಲ್ಲಿ ಅಮೆರಿಕಾ & ಚೀನಾ ನಂತರ ಮೂರನೇ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ಅಂದು ಜಪಾನ್ ದೇಶದಲ್ಲಿ ಇದ್ದ ಅಭದ್ರತೆ ಒಂದು ಕಡೆಯಾದರೆ, ಅದೇ ಹೊತ್ತಿನಲ್ಲಿ ಸ್ವಾತಂತ್ರ್ಯ ಪಡೆದ ಭಾರತ ದೇಶ ಬ್ರಿಟಿಷರ ದೋಚುವಿಕೆಯಿಂದ ಬಡ ದೇಶವಾಗಿದ್ದುದು ನಿಜ. ಆದರೆ ಇವರ ಅಧೀನದ ಚಿಕ್ಕ ಭೂಪ್ರದೇಶದಲ್ಲಿ ಇವರು ತೋರಿರುವ ಅದಮ್ಯ ಸಾಹಸ ಖಂಡಿತ ಇಡೀ ಜಗತ್ತಿಗೆ ಮಾದರಿ. ಹೀಗಿರುವಾಗ ಭಾರತ & ಜಪಾನ್ ಎರಡೂ ದೇಶಗಳು ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಗಿಟ್ಟಿಸಲು ತವಕಿಸುತ್ತಿವೆ. ಆ ಸ್ಥಾನಕ್ಕೆ ಪೈಪೋಟಿ ನಡೆಸಲು ಅವರಿಬ್ಬರೂ ತಂತಮ್ಮ ಅರ್ಹತಾ ಪಟ್ಟಿಯನ್ನೂ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈ ಕೆಳಕಂಡ ಪಟ್ಟಿ ನೋಡಿದ ಮೇಲೆ ಎದೆ ಮೇಲೆ ಕೈ ಇಟ್ಟುಕೊಂಡು ಅರ್ಹತೆಯ ಬಗ್ಗೆ ಮಾತಾಡಲು ಯಾರಿಗೆ 'ಅರ್ಹತೆ' ಇದೆಯೆಂದು ನೀವು ಸ್ಪರ್ಧಾರ್ಥಿಗಳೂ ತೀರ್ಮಾನಿಸಿ :
ಭಾರತ
ಜಪಾನ್
ವಿಸ್ತೀರ್ಣ
7ನೇ ಸ್ಥಾನ
61ನೇ ಸ್ಥಾನ
ಜನಸಂಖ್ಯೆ
2ನೇ ಸ್ಥಾನ
10ನೇ ಸ್ಥಾನ
ಸ್ವಂತ ಸಂವಿಧಾನ ಅಂಗೀಕರಿಸಿದ್ದು
1950
1947
GDP (PPP)
$1.367 ಟ್ರಿಲಿಯನ್
$4.267 ಟ್ರಿಲಿಯನ್
HDI
119ನೇ ಸ್ಥಾನ
11ನೇ ಸ್ಥಾನ
ಕರೆನ್ಸಿ
1 ಜಪಾನ್ ಯೆನ್
= 0.5508 ಭಾರತ ರೂಪಾಯಿ
------
81.3 ಜಪಾನ್ ಯೆನ್ = 1 US $
1 ರೂಪಾಯಿ
= 1.8063 ಜಪಾನ್ ಯೆನ್
------
45.02 ರೂಪಾಯಿ = 1 US $
ಅಂದ್ರೆ ಎಂಟಾಣೆ ಕೊಟ್ರೆ ಒಂದು ಜಪಾನಿ ಯೆನ್ ಪಡೆಯಬಹುದು. ಅದೇ ರೀತಿ 45 ರೂಪಾಯಿಗೆ ಒಂದು ಯು,ಎಸ್.ಡಾಲರ್ ಪಡೆದರೆ 81 ಜಪಾನಿ ಯೆನ್ ಗೆ ಒಂದು ಯು,ಎಸ್.ಡಾಲರ್ ಪಡೆಯಬಹುದು.
HDI ನಲ್ಲಿ 100+ ಸ್ಥಾನ ಹೊಂದಿರುವ ಭಾರತ ಇನ್ನು ಬಹಳ ಪ್ರಯತ್ನ ಪಡಬೇಕು.
HDI ನಲ್ಲಿ 11ನೇ ಸ್ಥಾನ ಪಡೆದಿರುವ ಜಪಾನ್ ಜಗತ್ತಿನಲ್ಲಿ ಬಡತನದ ಪ್ರಮಾಣ ಅತಿ ಕಡಿಮೆ ಇರುವ ದೇಶಗಳ ಪಟ್ಟಿಯಲ್ಲಿ 12ನೇ ಸ್ಥಾನ ಹೊಂದಿದೆ.
ಇಷ್ಟೆಲ್ಲಾ ಬೆಚ್ಚಿ ಬೀಳಿಸುವ ಅಂಕಿಸಂಖ್ಯೆಗಳನ್ನ ಇಟ್ಟುಕೊಂಡಿರುವ ಭಾರತ ತನ್ನ ದೇಶದಲ್ಲಿ ತಾಂಡವವಾಡುತ್ತಿರುವ ಅನಕ್ಷರತೆ-ಭೃಷ್ಟಾಚಾರ-ಹದಗೆಟ್ಟಿರುವ ಆರೋಗ್ಯ ಸೇವೆ ... ಇವನ್ನೆಲ್ಲಾ ಮರೆತು VETO POWER ಗಾಗಿ ಬಡಿದಾಡುವುದು ಎಷ್ಟು ಸಮಂಜಸ !!
ಪಾಕಿಸ್ತಾನದಂಥ ಪಾಪಿಯ ಜೊತೆಗೂ ನ್ಯಾಯವನ್ನೇ ಮಾತಾಡುವ ಭಾರತ, ಈ ಸ್ಥಾನ ಪಡೆಯಲು ನ್ಯಾಯಯುತವಾಗಿಯೂ ಅರ್ಹವೇ ?!!
ನಾವು ಭಾರತೀಯರು ಕೂಡ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುದು ನಿಜವೇ ಇದ್ದರೂ Sustained Development ಮತ್ತು ಬರೀ Development ಗೆ ವ್ಯತ್ಯಾಸವಿದೆ.
ನಮ್ಮ ದೇಶದಲ್ಲಿ ನೆಲೆಸಿರುವ ಅನಕ್ಷರತೆ ಹೀಗೇ ಮುಂದುವರೆದು ನಾವಲ್ಲಿ ವೀಟೋ ಚಲಾಯಿಸಿದರೆ ನಗುವುದಿಲ್ಲವೇ ಜಗತ್ತಿನ ಜನ ??
ಒಬ್ಬ ವಿದ್ಯಾರ್ಥಿ ತನ್ನ ಜಾತಿ ಇದೇ ಎಂದು ದೃಢೀಕರಿಸಿಕೊಳ್ಳುವ ಪ್ರಮಾಣಪತ್ರ ಪಡೆಯಲು ಸಾವಿರ ರೂಪಾಯಿ ಚೆಲ್ಲಲೇ ಬೇಕಿರುವುದನ್ನ ನೋಡಿ ನಗೊಲ್ವಾ ಅವರು??
ಅಷ್ಟಕ್ಕೂ ಮಿಗಿಲಾಗಿ ತನ್ನ ತಲೆದೂಗಲೇಬೇಕಾದ ಸಾಮರ್ಥ್ಯಗಳನ್ನ ಮಾತ್ರ ಮುಂದಿಟ್ಟುಕೊಂಡು VETO ಪಡೆಯಲು ಹಂಬಲಿಸುತ್ತಿರುವ ಭಾರತದಲ್ಲಿ ಒಬ್ಬ ವಿದ್ಯಾರ್ಥಿಯ ವೈಯಕ್ತಿಕ ಸಾಮರ್ಥ್ಯ ಮಾತ್ರ ಮಾನದಂಡವಲ್ಲ ; ಅವನ ಜಾತಿ ಕೂಡ ಅವನಿಗೆ ಮಾನದಂಡವಾಗುತ್ತದೆ ಎಂದರೆ ಹಾಸ್ಯಾಸ್ಪದವಲ್ಲವೇ ??
ಜಪಾನ್ ದೇಶದ 80 ಪ್ರತಿಶತ ಭೂಭಾಗ ಯಾವುದೇ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಯೋಗ್ಯವಲ್ಲ !!
ಇದು ಸಾಲದು ಎಂಬಂತೆ ಮೆದು ನೆಲ & ಭೂಕಂಪದ ಅಭದ್ರತೆ ಸದಾ ಅಲ್ಲಿನ ಜನರಿಗೆ ದುಸ್ವಪ್ನವಾಗಿದೆ.
ಇಷ್ಟಿದ್ದರೂ ಅತಿ ಹೆಚ್ಚು ಜನಸಾಂದ್ರತೆ ಇರುವ ದೇಶಗಳ ಪಟ್ಟಿಯಲ್ಲಿ ಜಪಾನ್ ಗೆ 36ನೇ ಸ್ಥಾನವಿದೆ. (ಭಾರತಕ್ಕೆ 32ನೇ ಸ್ಥಾನವಿದೆ.)
ಸುದ್ದಿ : ರಾಷ್ಟ್ರದ ಬಜೆಟ್ ನಲ್ಲಿ ಮಿತವ್ಯಯತೆ(Austerity) ಯನ್ನ ಮಂಡಿಸಿದ ಗ್ರೀಕ್ ಸರ್ಕಾರ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
ಜಾಗತಿಕ ನಕ್ಷೆಯಲ್ಲಿ ಗ್ರೀಸ್
ಗ್ರೀಸ್ ಸ್ವಾಭಾವಿಕ
ನೆರೆ-ಹೊರೆ
ಗ್ರೀಸ್ ದೇಶಕ್ಕಿರುವ ಇನ್ನೊಂದು ಜನಪ್ರಿಯ ಹೆಸರು ಹೆಲ್ಲಾಸ್(Hellas), ಇದೇ ಕಾರಣಕ್ಕೆ ಈ ದೇಶವನ್ನ Hellenic Republic ಎಂದು ಅಧಿಕೃತ ಭಾಷೆಯಲ್ಲಿ ಹೇಳಲಾಗುತ್ತದೆ.
ಅಲ್ಬೇನಿಯಾ. ಮಸಿಡೋನಿಯಾ, ಬಲ್ಗೇರಿಯಾ & ಟರ್ಕಿ ದೇಶಗಳು ಗ್ರೀಸ್ ದೇಶದ ನೆರೆಯವರು.
ಪೂರ್ವ, ದಕ್ಷಿಣ & ಪಶ್ಚಿಮಕ್ಕೆ ಸಮುದ್ರತೀರವನ್ನ ಹೊಂದಿರುವ ಗ್ರೀಸ್ ದೇಶ ಜಗತ್ತಿನಲ್ಲಿ 12ನೇ ಅತಿ ಉದ್ದದ ಕರಾವಳಿ ಹೊಂದಿದೆ. ( ಭಾರತ-19 ; ಕೆನಡಾ-1 ; ಇಂಡೋನೇಷಿಯಾ-2 ; ಗ್ರೀನ್ ಲ್ಯಾಂಡ್-3 ; ರಷಿಯಾ-4 ; ಫಿಲಿಪ್ಪೀನ್ಸ್-5 ; ಜಪಾನ್-6 ; ಆಸ್ಸ್ರೇಲಿಯಾ-7 ; ನಾರ್ವೆ-8 ; ಅಮೆರಿಕಾ-9 ; ನ್ಯೂಝಿಲ್ಯಾಂಡ್-10 )
ಗ್ರೀಸ್ ದೇಶ ಪರ್ವತಮಯವಾಗಿದ್ದು ದೇಶದ ಭೂಭಾಗದ 80 ಪ್ರತಿಶತ ಭಾಗ ಪರ್ವತಾವೃತವಾಗಿದೆ.
ಸದರಿ ದೇಶದ ಅಧಿಪತ್ಯದಡಿಯಲ್ಲಿ ಸುಮಾರು 1400 ದ್ವೀಪಗಳು ಬರುತ್ತವೆ. ಇವುಗಳಲ್ಲಿ 200 ಚಿಲ್ಲರೆ ದ್ವೀಪಗಳಲ್ಲಿ ಮಾತ್ರ ಮನುಷ್ಯರು ವಾಸಿಸುತ್ತಾರೆ.
ಜಗತ್ತಿನ ಪಾಶ್ಚಿಮಾತ್ಯ ನಾಗರೀಕತೆಯ ತೊಟ್ಟಿಲು ಎನಿಸಿಕೊಂಡಿರುವುದು ಗ್ರೀಸ್ ನಾಗರೀಕತೆ.
ಪ್ರಜಾಪ್ರಭುತ್ವ, ಪಾಶ್ಚಿಮಾತ್ಯ ತತ್ವಶಾಸ್ತ್ರ, ಒಲಿಂಪಿಕ್ ಕ್ರೀಡೆಗಳು, ಪಾಶ್ಚಿಮಾತ್ಯ ಸಾಹಿತ್ಯ, ಸಾರ್ವಜನಿಕ ಆಡಳಿತ ತತ್ವಗಳು, ಪಶ್ಚಿಮದ ನಾಟಕ ಪದ್ಧತಿ... ಇತ್ಯಾದಿಗಳ ಜನ್ಮಸ್ಥಾನ ಗ್ರೀಸ್.
ಸದರಿ ಗ್ರೀಸ್ ಭಾರತಕ್ಕಿಂತ ಎಷ್ಟೋ ಪಾಲು ಚಿಕ್ಕದಿದ್ದರೂ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶವಾಗಿದೆ.
ಒಟ್ಟೋಮನ್ ಆಡಳಿತವನ್ನ ಕಿತ್ತೊಗೆದು 1830ರಲ್ಲಿ ಆಧುನಿಕ ಗ್ರೀಕ್ ಸೃಷ್ಟಿಯಾಯಿತು.
ಗ್ರೀಸ್ ದೇಶ ಮೊದಲಿನಿಂದ ಯುರೋಪಿಯನ್ ಒಕ್ಕೂಟದ ಭಾಗವಾಗಿದೆ. ಈ ಅಂಶ ಯಾಕೆ ಪ್ರಮುಖ ಅಂದ್ರೆ ಯುರೋಪ್ ಖಂಡದ ಭಾಗವಾಗಿಯೂ ಇಂದಿಗೂ ಯುರೋಪಿಯನ್ ಒಕ್ಕೂಟ ಸೇರದ ಕೆಲವು ದೇಶಗಳಿವೆ ಅದಕ್ಕೆ.
ನಮ್ಮ ದೇಶದ ಸಂಸ್ಕೃತಿಯಲ್ಲಿ ಹಿಮಾಲಯಕ್ಕೆ ನೀಡಿರುವಷ್ಟೇ ದೈವಿಕತೆ ಆ ದೇಶದಲ್ಲಿ Mount Olympus ಗೆ ನೀಡಲಾಗಿದೆ.
ದೇಶದ ಈಶಾನ್ಯ ಭಾಗಕ್ಕೆ ಅತಿ ಪ್ರಾಚೀನ ಕಗ್ಗಾಡು ವ್ಯಾಪಿಸಿದೆ.
ಸುದ್ದಿ : ಮುಚ್ಚಿಹೋಗಿದ್ದ ಬಾಂಗ್ಲಾದೇಶದ ವಿದೇಶಿ ಕಲ್ಲಿದ್ದಲು ಕಂಪೆನಿಯ ಮರುಕಾರ್ಯನಿರ್ವಹಣೆಗೆ ಒತ್ತಡ ತಂದಿದ್ದ ಅಮೆರಿಕಾ - ವಿಕಿಲೀಕ್
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
ವಿಶ್ವನಕ್ಷೆಯಲ್ಲಿ ಬಾಂಗ್ಲಾದೇಶ
ಬಾಂಗ್ಲಾದೇಶ ಸ್ವಾಭಾವಿಕ
ನೆರೆ-ಹೊರೆ
ಅನಾದಿ ಕಾಲದಿಂದ ಭರತವರ್ಷದ ಭಾಗವಾಗಿದ್ದ ಬಂಗಾಳ 1905ರಲ್ಲಿ ಮೊದಲ ಬಾರಿಗೆ ಬಂಗಾಳ ವಿಭಜನೆಯ ಮೂಲಕ ಭಾರತ ನಕಾಶೆಯಿಂದ ಹೊರಗುಳಿಯಿತು. ಮುಂದೆ 1947ರಲ್ಲಿ ಭಾರತ ಸ್ವತಂತ್ರಗೊಂಡು ಪಾಕಿಸ್ತಾನವೆಂಬೊಂದು ದೇಶ ಉಗಮವಾದಾಗ, ಆ ದೇಶದ ಪೂರ್ವ ಹಿಸ್ಸೆಯಾಗಿ ಅವರಿಗೆ ಬಾಂಗ್ಲಾದೇಶವನ್ನ ನೀಡಲಾಯಿತು.
ಹಿಂದೊಮ್ಮೆ ಹಿಂದೂ ನಾಡಾಗಿದ್ದ ಬಾಂಗ್ಲಾದೇಶದಲ್ಲಿ ಇಂದು 90% ಮುಸ್ಲಿಂ ಜನಸಂಖ್ಯೆಯಿದೆ. & ವಿಸ್ತೀರ್ಣದಲ್ಲಿ ಚಿಕ್ಕದಿದ್ದರೂ ಜನಸಂಖ್ಯೆಯಲ್ಲಿ ಜಗತ್ತಿನ 8ನೇ ಸ್ಥಾನ ಪಡೆದುಕೊಂಡಿದೆ. ಅಂತೆಯೇ ಪಾಕಿಸ್ತಾನ 6ನೇ ಸ್ಥಾನ ಪಡೆದಿದೆ.
ಬಾಂಗ್ಲಾದೇಶದ ಗಡಿಯನ್ನ ಬಹುತೇಕ ಭಾರತ ಸುತ್ತುವರೆದಿದ್ದರೂ ಆಗ್ನೇಯ ಮೂಲೆಯಲ್ಲಿ ಮಯನ್ಮಾರ್ ಇಣುಕಿದೆ.
ಗಂಗಾ & ಬ್ರಹ್ಮಪುತ್ರಾ ನದಿಗಳು ಈ ದೇಶದ ಜೀವನಾಡಿಗಳು. ಭಾರತದಲ್ಲಿ ಗಂಗಾ ಎನಿಸಿಕೊಳ್ಳುವ ನದಿ, ಬಾಂಗ್ಲಾ ಪ್ರವೇಶಿಸಿದ ನಂತರ ಪದ್ಮಾ ಎಂದು ಹೆಸರು ಬದಲಾಯಿಸುತ್ತದೆ !! ಬ್ರಹ್ಮಪುತ್ರಾ ಕೂಡ ಜಮುನಾ ಎಂದು ಹೆಸರು ಬದಲಾಯಿಸಿಕೊಳ್ಳುತ್ತದೆ. ಇದರ ಜೊತೆಗೆ ಮೇಘನಾ ಎಂಬೊಂದು ನದಿಯೂ ಪ್ರಮುಖ ನದಿಯಾಗಿದೆ. ಗಂಗಾ ಜಮುನಾ ಸೇರಿ ಮುಂದೆ ಹೋಗಿ ಮೇಘನಾಳನ್ನ ಕೂಡಿಕೊಂಡು ಬಂಗಾಳಕೊಲ್ಲಿಯಲ್ಲಿ ವಿಶ್ರಮಿಸುತ್ತವೆ.
ಈ ನದಿಗಳು ಪ್ರತಿ ವರ್ಷದ ಮಳೆಗಾಲದಲ್ಲಿ ಮುನಿಸಿಕೊಳ್ಳುವ ಪರಿ ಭಯಂಕರ. 1998ರಲ್ಲಿ ಇದೇ ರೀತಿ ಮುನಿಸಿಕೊಂಡಾಗ ಬಾಂಗ್ಲಾದೇಶದ 2/3 ಭೂಭಾಗ ಈ ನದಿಗಳಿಂದ ಮುಚ್ಚಿ ಹೋಯ್ತು. ಅದು ಆಧುನಿಕ ಜಗತ್ತಿನಲ್ಲಿ ದಾಖಲಿಸಲ್ಪಟ್ಟ ಅತಿ ಭಯಂಕರ ಅತಿವೃಷ್ಟಿಯಾಯಿತು.
ಸುಂದರಬನ್ ಕಾಡುಗಳು ಇಲ್ಲಿನ ಭೌಗೋಳಿಕ ವಿಶೇಷಗಳು. ಜಗತ್ತಿನ ಬಹುತೇಕ ಮ್ಯಾಂಗ್ರೋವ್ ಕಾಡುಗಳಿಗೆ ಬಾಂಗ್ಲಾ ಆವಾಸಸ್ಥಾನ.
ಬಾಂಗ್ಲಾದೇಶ ಸ್ಥಿತಗೊಂಡಿರುವ ಪ್ರಸ್ಥಭೂಮಿಯ ಬಹುತೇಕ ಭಾಗ ಸಮುದ್ರ ಮಟ್ಟದಿಂದ ಕೇವಲ 12m ಅಥವಾ <12m ಎತ್ತರವಿದ್ದು, ಮುಂದೊಮ್ಮೆ ಸಮುದ್ರದ ನೀರಿನ ಮಟ್ಟ ಕೇವಲ 1m ಏರಿದರೂ ಬಹುತೇಕ ಬಾಂಗ್ಲಾ ಸಮುದ್ರದ ತಳ ಸೇರುವ ಅಪಾಯವಿದೆ.
ಚಿತ್ತಗಾಂಗ್ ನಿಂದ ಅನತಿ ದೂರದಲ್ಲಿರುವ Cox's Bazaar ಎಂಬಲ್ಲಿ ಜಗತ್ತಿನ ಅತಿ ಉದ್ದದ ಸ್ವಾಭಾವಿಕ ಬೀಚ್ ಇದೆ. ಇದು 120ಕಿಮೀ ವರೆಗೆ ಯಾವುದೇ ತಡೆಯಿಲ್ಲದೇ ಚಾಚಿಕೊಂಡಿದೆ.
ಪ್ರತಿ ವರ್ಷ ಈ ದೇಶದ ಮೇಲೆ ಬಂಗಾಳ ಕೊಲ್ಲಿಯಿಂದ ಚಂಡಮಾರುತಗಳು ದಾಳಿಯಿಟ್ಟು, ತಮ್ಮ ಪಾಲಿನ ಬಲಿ ಹೊತ್ತೊಯ್ಯುತ್ತವೆ.
ಸೆಣಬು ಇಲ್ಲಿನ ಪ್ರಾದೇಶಿಕ ಬೆಳೆ. ನೀರಿನ ಸರಬರಾಜು ಅವ್ಯಾಹತವಿರುವುದರಿಂದ ಭತ್ತ ಕೂಡ ಇಲ್ಲಿನ ಪ್ರಮುಖ ಬೆಳೆ. ವರ್ಷದಲ್ಲಿ 3 ಸಲ ಭತ್ತದ ರಾಶಿಯಾಗುತ್ತದೆ. ಈಶಾನ್ಯದ ಕಡೆ ಟೀ ಕೂಡ ಬೆಳೆಯಲಾಗುತ್ತದೆ.
ಸುದ್ದಿ : ಭಾರತಕ್ಕೆ ಭೇಟಿ ನೀಡಿದ ರಷಿಯಾದ ಅಧ್ಯಕ್ಷ ದಿಮಿತ್ರಿ ಮೆಡ್ವೆಡೇವ್
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
ವಿಶ್ವನಕ್ಷೆಯಲ್ಲಿ ರಷಿಯಾ
ನೆರೆ-ಹೊರೆ
ರಷಿಯಾ ಸ್ವಾಭಾವಿಕ
ಕಾಕಾಸಸ್ ಪರ್ವತಶ್ರೇಣಿ
ರಷಿಯಾದ ಯುರೋಪ್ ಪಾಲನ್ನ ಪ್ರತ್ಯೇಕಿಸಿರುವ ಯೂರಲ್ ಪರ್ವತಶ್ರೇಣಿ(ಹಸಿರು ಬಣ್ಣದಲ್ಲಿರುವುದು ಏಷಿಯಾದ ಭೂಭಾಗ)
ಕ್ಯಾಸ್ಪಿಯನ್ ಸಮುದ್ರ ಸೇರುವ ವೋಲ್ಗಾ
ಬೈಕಲ್ ಸರೋವರ
ರಾಹುಲ್ ಸಾಂಕೃತ್ಯಾಯನ್
ಟಂಡ್ರಾ ವಲಯ
ಜಗತ್ತಿನ ಅತಿ ವಿಸ್ತೀರ್ಣದ ದೇಶ.
ಜಗತ್ತಿನ ಭೂಭಾಗದ 1/9ನೇ ಭಾಗದಷ್ಟು ಭೂಮಿ ರಷಿಯಾ ಒಡೆತನದಲ್ಲಿದೆ.
ಆದರೆ ಜನಸಂಖ್ಯೆಯಲ್ಲಿ 9ನೇ ಸ್ಥಾನ ಹೊಂದಿದೆ.
ರಷಿಯಾ ದೇಶಕ್ಕೆ ಸಿಕ್ಕಾಪಟ್ಟೆ ನೆರೆ-ಹೊರೆ ದೇಶಗಳಿವೆ : ನಾರ್ವೆ, ಫಿನ್ ಲ್ಯಾಂಡ್, ಇಸ್ಟೋನಿಯಾ, ಲ್ಯಾಟ್ವಿಯಾ, ಲಿಥುಯೇನಿಯಾ, ಪೋಲ್ಯಾಂಡ್, ಬೆಲರೂಸ್, ಉಕ್ರೇನ್, ಜಾರ್ಜಿಯಾ, ಅಜರ್ ಬೈಜಾನ್, ಕಜಕಿಸ್ತಾನ್, ಚೀನಾ, ಮಂಗೋಲಿಯಾ & ಉತ್ತರ ಕೊರಿಯಾ.
ಇದಲ್ಲದೇ ರಷಿಯಾ, ಜಪಾನ್ & ಅಮೆರಿಕಾದ ಜಲಗಡಿಯನ್ನೂ(Maritime Border) ಹಂಚಿಕೊಂಡಿದೆ.
ಜಗತ್ತಿನಲ್ಲಿರುವ ಅರಣ್ಯದ ಅತಿ ಹೆಚ್ಚು ಭಾಗ ರಷಿಯಾದಲ್ಲಿದೆ.
ಹಾಗೇನೇ ಸಿಹಿ ನೀರಿನ ಸಂಗ್ರಹ(Fresh Water) ಕೂಡ ಜಗತ್ತಿನ 25 ಪ್ರತಿಶತ ರಷಿಯಾದ ಸರೋವರ-ನದಿಗಳಲ್ಲಿದೆ.
ಈ ದೇಶದ ಇನ್ನೊಂದು ವಿಶೇಷತೆಯೆಂದರೆ : ದೇಶದ ಸ್ವಲ್ಪ ಭಾಗ ಯುರೋಪ್ ಖಂಡಕ್ಕೂ ಚಾಚಿದೆ. ಹೀಗಾಗಿ ಇದು ಯುರೇಷಿಯಾ ಭೂಭಾಗದಲ್ಲಿ ಸ್ಥಿತಗೊಂಡಿದೆ ಎಂದು ಹೇಳಲಾಗುತ್ತದೆ.
ಇನ್ನೂ ಒಂದು ವಿಶೇಷತೆಯಿದೆ. ನಮ್ಮ ದೇಶದಲ್ಲಿ ಇರುವುದು ಒಂದೇ ಸಮಯ ವಲಯ(IST). ಆದರೆ ರಷಿಯಾದಲ್ಲಿ 9 ಸಮಯವಲಯಗಳಿವೆ.
ಹಿಂದೊಮ್ಮೆ USSR ಹೆಸರಿನಲ್ಲಿ SuperPower ಆಗಿದ್ದು ನಂತರ 1991ರಲ್ಲಿ ಒಡೆದು ರಷಿಯಾ ಆಗಿರುವ ಸಮಾಚಾರ ನಿಮಗೆಲ್ಲ ತಿಳಿದೇ ಇದೆ. ತದನಂತರದಲ್ಲಿ ಅದೊಂದು ಸಂಘಟನೆ ರಚಿಸಿಕೊಂಡಿದೆ. ಅದುವೇ Commonwealth of Independent States. ಈ ಹಿಂದೆ ಅವಿಚ್ಛಿನ್ನ USSR ಭಾಗವಾಗಿದ್ದ ದೇಶಗಳು ಈ ಸಂಘಟನೆಯ ಸದಸ್ಯ ರಾಷ್ಟ್ರಗಳು.
ಈ ದೇಶದ ನೈಸರ್ಗಿಕ ಹಾಗೂ ಐತಿಹಾಸಿಕ ಕಾಳಜಿಯ ಬಗ್ಗೆ ತಿಳಿಯಲು ಈ ಅಂಕಿಅಂಶಗಳು ಸಾಕು ನೋಡಿ :
23 ಜಾಗತಿಕ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು(Heritage Sites)
40 ಯುನೆಸ್ಕೋ ರಕ್ಷಿತ ಜೀವವಲಯಗಳು(Biospheres)
40 ರಾಷ್ಟ್ರ ಮಟ್ಟದ ಅಭಯಾರಣ್ಯಗಳು(National Park)
101 ರಕ್ಷಿತ ಅರಣ್ಯಗಳು
ಈ ದೇಶದಲ್ಲಿವೆ.
ದೇಶದ ದಕ್ಷಿಣದಿಂದ ಪ್ರಾರಂಭವಾಗುವ ಕಾಡಿನ ಭಾಗದಲ್ಲಿ ಸ್ಟೆಪ್ಪೀ(Steppe) ಹುಲ್ಲುಗಾವಲಿನಿಂದ ಪ್ರಾರಂಭವಾಗಿ ಮಧ್ಯದಲ್ಲಿ ದಟ್ಟ ಕಾಡು ಮುಂದೆ ನಡೆದರೆ ಟಂಡ್ರಾ ಶೀತವಲಯವಿದೆ.
ಅದೇ ರೀತಿ ದಕ್ಷಿಣದಲ್ಲಿ ಕಾಕಾಸಸ್(Caucasus) ಪರ್ವತ ಶ್ರೇಣಿಯಿದೆ. ಈ ಶ್ರೇಣಿ ರಾಜಕೀಯವಾಗಿ ಅತ್ಯಂತ ಪ್ರಮುಖವಾಗಿದೆ. ಇಲ್ಲಿ ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಕಾಣಬರುವ ದಕ್ಷಿಣ ಒಸ್ಸೇಷಿಯಾ & ಜಾರ್ಜಿಯಾ ಯುದ್ಧದಲ್ಲಿ ರಷಿಯಾ ಮಧ್ಯ ಬರುವ ಸುದ್ದಿಯನ್ನ ನೆನಪಿಸಿಕೊಳ್ಳಿ.
ಅದೇ ರೀತಿ ಯೂರಲ್(Ural) ಪರ್ವತಶ್ರೇಣಿಗಳಿಗೂ ಪ್ರಮುಖ ಸ್ಥಾನವಿದೆ. ಯುರೋಪ್ & ರಷಿಯಾವನ್ನ ಭೇದಿಸುವಲ್ಲಿ ಈ ಪರ್ವತಶ್ರೇಣಿಗಳ ಪಾತ್ರ ಪ್ರಮುಖ.
ಅತಿ ಆಳದ, ಸಿಹಿನೀರಿನ, ಸ್ವಚ್ಛ & ಅತ್ಯಂತ ಹಳೆಯ ನೀರಿನ ಸಂಗ್ರಹ ಬೈಕಲ್ ಸರೋವರ ಇಲ್ಲಿದೆ.
ನಮ್ಮ ದೇಶಕ್ಕೆ ಗಂಗಾ ನದಿ ಇರುವ ಹಾಗೆ ರಷಿಯಾಗೆ ವೋಲ್ಗಾ ನದಿಯಿದೆ. ಇತಿಹಾಸ - ಪರಂಪರೆ ಜೊತೆಗೆ ಜನರ ಜೀವನಾಡಿಯಾಗಿ ವೋಲ್ಗಾ ಇದೆ. ರಾಹುಲ್ ಸಾಂಕೃತ್ಯಾಯನ್ (Rahul Sankrityayan) ಎಂಬ ವಿದ್ವಾಂಸರು ರಷಿಯಾ ಮುಂತಾದ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನಜೀವನವನ್ನ ಅಧ್ಯಯನ ಮಾಡಿ ಪಾಂಡಿತ್ಯ ಸಂಪಾದಿಸಿದ್ದರು. ಅವರು 1944ರಲ್ಲಿ ಸಂಪಾದಿಸಿ ಪ್ರಕಟಿಸಿದ್ದ वोल्गा से गंगा (Volga Se Ganga) ಎಂಬ ಸಣ್ಣ ಕಥೆಗಳ ಪುಸ್ತಕವನ್ನ ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಕಾರಣ ಈ ಪುಸ್ತಕ ಭಾರತದ ಸಾಹಿತ್ಯಿಕ ಇತಿಹಾಸದಲ್ಲಿ ಸ್ಥಾನ ಗಿಟ್ಟಿಸಿದೆ. ಮತ್ತಿದು ಇಂಗ್ಲೀಷ್ ಒಳಗೊಂಡಂತೆ ಅನೇಕ ಭಾಷೆಗಳಿಗೆ ತರ್ಜುಮೆಯಾಗಿದೆ.
ರಷಿಯಾ ಭೌಗೋಳಿಕತೆ ಬಗ್ಗೆ ಇನ್ನುಳಿದ ಮಾಹಿತಿಯನ್ನ ನೀವು ನನಗೆ ನೀಡಿ !!!
ಚುಟುಕು ಸುದ್ದಿ : ಕಾಶ್ಮೀರ ಕೇಂದ್ರೀಯ ವಿವಿಗೆ ಹೊಸ ಉಪಕುಲಪತಿ
ಸುದ್ದಿಯ ಒಳನೋಟ :
ಪ್ರತಿ ರಾಜ್ಯದಲ್ಲೂ ಈಗಾಗಲೇ ಇರುವ ವಿಶ್ವವಿದ್ಯಾಲಯಗಳ ಜೊತೆಗೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಹೊಸ ವಿವಿಗಳನ್ನ ಸ್ಥಾಪಿಸಿ ದೇಶದ ಉಚ್ಚ ಶಿಕ್ಷಣಕ್ಕೆ ಕೈಜೋಡಿಸುವುದು ಸದರಿ ವಿವಿಗಳ ಸ್ಥಾಪನೆಯ ಹಿಂದಿರುವ ಉದ್ದೇಶ.
ಸದರಿ ವಿವಿ ಸ್ಥಾಪನೆಗೆ ಕೇಂದ್ರ & ರಾಜ್ಯ ಸರ್ಕಾರಗಳ ನಡುವೆ ತಾಳಮೇಳ ಏರ್ಪಡಿಸಲು, ಈಗಾಗಲೇ ಸ್ಥಾಪನೆಯಾಗಿದ್ದ CABE( Central Advisory Board of Education) ಗೆ ಹೆಚ್ಚುವರಿ ಕರ್ತವ್ಯ ವಹಿಸಲಾಗಿದೆ.
ಸದರಿ CABEನಲ್ಲಿ ದೇಶದೆಲ್ಲೆಡೆಯ ಶಿಕ್ಷಣ ಸಂಬಂಧೀ ಅಧಿಕಾರಿಗಳು / ಸಚಿವರು ಸದಸ್ಯರಾಗಿರುತ್ತಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವರು ಅಧ್ಯಕ್ಷರಾಗಿದ್ದು, :
ಐದು ಜನ ಕೇಂದ್ರ ಸರ್ಕಾರದ ಸಚಿವರು
ನಾಲ್ಕು ಜನ ಲೋಕಸಭಾ ಸದಸ್ಯರು
ಇಬ್ಬರು ರಾಜ್ಯಸಭಾ ಸದಸ್ಯರು
ಎಲ್ಲ ರಾಜ್ಯ & ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರುಗಳು
ಯೋಜನಾ ಆಯೋಗದ ಸದಸ್ಯ(ಶಿಕ್ಷಣ ವಿಭಾಗ)
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವಿವಿಧ ವಿಭಾಗಗಳಿಂದಾಯ್ದ 14ಜನ ಸದಸ್ಯರು
32ಜನ ನಾಮನಿರ್ದೇಶಿತ ಶಿಕ್ಷಣ ತಜ್ಞರು
ಕೇಂದ್ರ ಶಿಕ್ಷಣ ರಾಜ್ಯ ಸಚಿವ
ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ
ಹೀಗೆ ನೂರಕ್ಕೂ ಅಧಿಕ ಸಂಖ್ಯೆಯ ಸದಸ್ಯರು CABEನಲ್ಲಿರುತ್ತಾರೆ.
ದೇಶದ ಶೈಕ್ಷಣಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸದರಿ ಯೋಜನೆಯನ್ನು ಹಮ್ಮಿಕೊಂಡ ಕೆಂದ್ರ ಸರ್ಕಾರ (ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ) ಸಂಸತ್ತಿನಲ್ಲಿ ಅಕ್ಟೋಬರ್ 23, 2008ರಂದು Central University bill 2008 ಮಂಡಿಸಿತು. ಪ್ರಥಮವಾಗಿ ಮಂಡಿಸಲ್ಪಟ್ಟ ಈ Billನಲ್ಲಿ 12 ಹೊಸ ಕೇಂದ್ರೀಯ ವಿವಿಗಳ ಸ್ಥಾಪನೆಯ ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ 4 ವಿವಿಗಳನ್ನ ಕೇಂದ್ರ ವಿವಿ ದರ್ಜೆಗೆ ಏರಿಸುವ ಪ್ರಸ್ತಾವನೆ ಇತ್ತು.
ತದನಂತರದಲ್ಲಿ Central Universities Laws Amendment Bill 2008, & Central University bill 2009 ಗಳನ್ನ ಮಂಡಿಸಿ, ಪಾಸು ಮಾಡಿಸಿದೆ.
ಭಾರತದ ರಾಷ್ಟ್ರಪತಿಗಳು ಸದರಿ ವಿವಿಗಳಿಗೆ "Visitor" ಆಗಿರುತ್ತಾರೆ.
ನಿಮ್ಮ ಮನಸಲ್ಲೀಗ ರಾಜ್ಯಪಾಲರುಗಳು Chanellor ಆಗಿರೋದನ್ನ ಕೇಳಿದೀವಿ. ಇದೇನಿದು Visitor ?! ಅಂತ ಪ್ರಶ್ನೆ ಮೂಡಿರಲೇಕು. ಇಲ್ಲಿದೆ wiki ಉತ್ತರ :
" A Visitor, in United Kingdom law and history, is an overseer of an autonomous ecclesiastical or eleemosynary institution (i.e., a charitable institution set up for the perpetual distribution of the founder's alms and bounty), who can intervene in the internal affairs of that institution. These institutions usually comprise cathedrals, chapels, colleges, universities and hospitals. "
2009ರಲ್ಲಿ ಇನ್ನೂ 9 ಹೊಸ ಕೇಂದ್ರೀಯ ವಿ.ವಿಗಳನ್ನ ಸ್ಥಾಪಿಸಲು " The Central Universities Act, 2009 " ಗೆ ಅನುಮೋದನೆ ಪಡೆದು ಸ್ಥಾಪಿಸಿಯೂ ಆಗಿದೆ. ಜೊತೆಗೆ ಛತ್ತೀಸಗಢ, ಉತ್ತರಾಖಂಡ್ ಮತ್ತು ಮಧ್ಯಪ್ರದೇಶದ 3 ವಿ.ವಿ.ಗಳನ್ನ ಕೇಂದ್ರೀಯ ವಿ.ವಿ.ಗಳಾಗಿ ಪರಿವರ್ತಿಸಲು ಕೂಡ ಸಂಸತ್ತಿನ ಅನುಮೋದನೆ ಪಡೆದಿದೆ.
ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಹೊಸದಾಗಿ ಸೃಷ್ಟಿಯಾಗಿರುವ & ಮೇಲ್ದರ್ಜೆಗೇರಿಸಲ್ಪಟ್ಟ ಕೇಂದ್ರೀಯ ವಿವಿಗಳ ಪಟ್ಟಿ ಇಂತಿದೆ.
ಕೇಂದ್ರೀಯ ವಿ.ವಿ.ಹೆಸರು
ರಾಜ್ಯ/ಕೇಂದ್ರಾಡಳಿತಪ್ರದೇಶ
ನಗರ
1. ಇಂಗ್ಲೀಷ್ & ವಿದೇಶೀಭಾಷೆಗಳವಿ.ವಿ. English & Foreign Languages University
ಆಂಧ್ರಪ್ರದೇಶ
ಹೈದರಾಬಾದ್
2. ಮೌಲಾನಾಆಝಾದ್ರಾಷ್ಟ್ರೀಯಉರ್ದುವಿ.ವಿ.
ಆಂಧ್ರಪ್ರದೇಶ
ಹೈದರಾಬಾದ್
3. ಹೈದರಾಬಾದ್ವಿ.ವಿ.
ಆಂಧ್ರಪ್ರದೇಶ
ಹೈದರಾಬಾದ್
4. ರಾಜೀವ್ಗಾಂಧಿವಿ.ವಿ.
ಅರುಣಾಚಲಪ್ರದೇಶ್
ಇಟಾನಗರ
5. ಅಸ್ಸಾಮ್ವಿ.ವಿ.
ಅಸ್ಸಾಮ್
ಸಿಲ್ಚಾರ್
6. ತೇಝ್ಪುರ್ವಿ.ವಿ.
ಅಸ್ಸಾಮ್
ತೇಝ್ಪುರ್
7. ಬಿಹಾರ್ಕೇಂದ್ರೀಯವಿ.ವಿ.
ಬಿಹಾರ್
ಮೋತಿಹಾರಿ
8. ಗುರುಘಾಸಿದಾಸ್ವಿ.ವಿ.
ಛತ್ತೀಸ್ಘರ್
ಬಿಲಾಸ್ಪುರ್
9. ಜವಾಹರಲಾಲ್ನೆಹರುವಿ.ವಿ.
ದೆಹಲಿ
ನವದೆಹಲಿ
10. ಜಾಮಿಯಾಮಿಲಿಯಾಇಸ್ಲಾಮಿಯಾ
ದೆಹಲಿ
ನವದೆಹಲಿ
11. ಇಂದಿರಾಗಾಂಧಿರಾಷ್ಟ್ರೀಯಮುಕ್ತವಿ.ವಿ.
ದೆಹಲಿ
ನವದೆಹಲಿ
12. ದೆಹಲಿವಿ.ವಿ.
ದೆಹಲಿ
ನವದೆಹಲಿ
13. ಗುಜರಾತ್ಕೇಂದ್ರೀಯವಿ.ವಿ.
ಗುಜರಾತ್
ಗಾಂಧಿನಗರ
14. ಹರ್ಯಾಣಾಕೇಂದ್ರೀಯವಿ.ವಿ.
ಹರ್ಯಾಣಾ
ಮಹೇಂದ್ರಘರ್
15. ಹಿಮಾಚಲಪ್ರದೇಶ್ಕೇಂದ್ರೀಯವಿ.ವಿ.
ಹಿಮಾಚಲಪ್ರದೇಶ್
ಕಾಂಗ್ರಾ
16. ಜಾರ್ಖಂಡ್ಕೇಂದ್ರೀಯವಿ.ವಿ.
ಜಾರ್ಖಂಡ್
ಬ್ರಾಂಬೆ
17. ಕಾಶ್ಮೀರ ಕೇಂದ್ರೀಯವಿ.ವಿ. ( ಈ ಮೊದಲಿನ ಹೆಸರು - ಜಮ್ಮುಕೇಂದ್ರೀಯವಿ.ವಿ. )
ಜಮ್ಮುಮತ್ತುಕಾಶ್ಮೀರ
ಶ್ರೀನಗರ
18. ಕರ್ನಾಟಕಕೇಂದ್ರೀಯವಿ.ವಿ.
ಕರ್ನಾಟಕ
ಗುಲ್ಬರ್ಗಾ
19. ಕೇರಳಕೇಂದ್ರೀಯವಿ.ವಿ.
ಕೇರಳ
ಕಾಸರಗೋಡು
20. ಕೇಂದ್ರೀಯಕೃಷಿವಿ.ವಿ.
ಮಣಿಪುರ
ಇಂಫಾಲ್
21. ಮಣಿಪುರವಿ.ವಿ.
ಮಣಿಪುರ
ಇಂಫಾಲ್
22. ಡಾ | ಹರಿಸಿಂಗ್ಗೌರ್ವಿ.ವಿ.
ಮಧ್ಯಪ್ರದೇಶ್
ಸಾಗರ್
23. ಮಹಾತ್ಮಾಗಾಂಧಿಅಂತರಾಷ್ಟ್ರೀಯಹಿಂದಿವಿ.ವಿ.
ಮಹಾರಾಷ್ಟ್ರ
ವಾರ್ಧಾ
24. ಈಶಾನ್ಯಗುಡ್ಡಗಾಡುವಿ.ವಿ. North Eastern Hill University
ಈ ದಿನದ ಇತಿಹಾಸ : 18ನೇ ನವೆಂಬರ್
-
.
*ಇಂದಿನ ಇತಿಹಾಸ - 18ನೇ ನವೆಂಬರ್ *
ಜಾಗತಿಕ
*ಕ್ರಿ.ಪೂ. 45* :
*ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers
" ದ ಮುದ್ರಣ
*1...
ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ
-
: ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ :
ಕನ್ನಡ ಸಾಹಿತ್ಯ
ಕನ್ನಡ ಸಿನೆಮಾ
ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ
ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ
ಕರ್ನಾಟಕ...