ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 31, 2010

ನಮ್ಮ ಮೈಸೂರು ಅರಮನೆ Live Online !! - ಇದು ಗಿಗಾ ಪಿಕ್ಸೆಲ್ ( gigapixel ) ಕಾಲ

2 ಪ್ರತಿಕ್ರಿಯೆಗಳು


ಹೌದು ನಮ್ಮ ಮೊಬೈಲ್ ಗಳಲ್ಲಿ ಮೊದಲಿಗೆ ಬಂದ VGA ( Video Graphics Array ) Camera ಗಳ ನಂತರ ಈಗ ಚಾಲ್ತಿಯಲ್ಲಿರುವ ಸರ್ವೇ ಸಾಮಾನ್ಯ 2 mega pixel camera ಗಳಿಂದ ಹಿಡಿದು 12.1 mega pixel camera ಉಳ್ಳ ಮೊಬೈಲ್ ಗಳನ್ನು ನಾವೆಲ್ಲಾ ಕಂಡಿದೀವಿ / ಕೇಳಿದೀವಿ. ಅವುಗಳ ಜೊತೆಗೆ ಇನ್ನೂ ಹೆಚ್ಚಿನ resolution ಹೊಂದಿರುವ digital camera ಗಳನ್ನ ಹವ್ಯಾಸಿ ಛಾಯಾಚಿತ್ರಕಾರರ ಕೈಯಲ್ಲಿ ನೋಡಿದ್ದೇವೆ. ಅಂವ ವೃತ್ತಿಪರನಾಗಿದ್ದರೂ ಅದು mega ದಾಟಿ giga ಮುಟ್ಟುವುದಿಲ್ಲ ಬಿಡಿ.

ಆದರೆ ಈಗ ಗಿಗಾಪಿಕ್ಸೆಲ್ ಕಾಲ ಬಂದಿದೆ ಅಂದ್ರೆ ನೀವು ನಂಬಬೇಕು. ಅಂಥ ಗಿಗಾ ಚಿತ್ರಗಳಲ್ಲಿನ resolution  354159x75570 px ಇರುತ್ತೆ ಅಂತ ನಿಮಗೆ ಗೊತ್ತಾ ?!! ನಮ್ಮ VGA camera resolution 640x480 ಇದ್ರೆ, 2 MP camera resolution 1600x1200 ಇರತ್ತೆ. ಈಗ ನಿಮಗೆ GIGA PIXEL ಸಾಮರ್ಥ್ಯದ ಅಗಾಧ ಸಾಧ್ಯತೆಗಳ ಬಗ್ಗೆ ಅರಿವಾಗಿರಲಿಕ್ಕೂ ಸಾಕು. ಇಂಥ ಅಗಾಧ ಸ್ಪಷ್ಟತೆ(clarity = high resolution )ಯ ಚಿತ್ರವನ್ನಾದರೂ ಹೇಗೆ ತೆಗೆಯುತ್ತಾರೆ ಅಂತೀರಾ ?!! ಅದುವೇ Image Stitching. ಹೆಸರು ಎಷ್ಟು ಮುದ್ದಾಗಿದೆಯಲ್ಲಾ ?! ಅಷ್ಟೇ ಮುದ್ದಾಗಿದೆ ಆ ತಂತ್ರದ ಉತ್ಪಾದನೆ. ವಿವಿಧ ಕೋನಗಳಲ್ಲಿನ ಚಿತ್ರಗಳನ್ನ high precision ಇಟ್ಟುಕೊಂಡು ಜೋಡಿಸುವ software ಬಳಸಿ ತಯಾರಿಸುವ panoramic view ಇದು.

ಈಗ ವಿಷಯಕ್ಕೆ ಬರ್ತೀನಿ ....

ಈ ಲೇಖನದ ಶೀರ್ಷಿಕೆ / ಮಾಹಿತಿಯನ್ನೊಳಗೊಂಡ e-mail ಒಂದು ನಿಮ್ಮ mail ಮನೆಗೆ ಈಗಾಗಲೇ ಬಂದಿರಬಹುದು. ಆದರೆ ಯಾರ ಮನೆಗೆ ಅದು ಬಂದಿಲ್ಲವೋ / ಯಾರು ಇದನ್ನ ಮುಂಚೆ ನೋಡಿಲ್ಲವೋ ಅವರಿಗೊಂದು ನಯನ ಮನೋಹರ ದೃಶ್ಯ ಇಲ್ಲಿ ಕಾದಿದೆ. ಸುಮ್ನೆ ಶಬ್ದಗಳ ಅಲಂಕಾರಕ್ಕೆ ಇದನ್ನ ಬಳಸ್ತಿಲ್ಲ ಇದು ನಿಜಕ್ಕೂ ನಯನ ಮನೋಹರ. ಇಲ್ಲಿ ಶಬ್ದಗಳಿಗೆ ಜಾಗವಿಲ್ಲ. ಚಿತ್ರಗಳೇ ಮಾತಾಡ್ತಾವೆ. ನೋಡಿ : ಅನುಭವಿಸಿ ...






ನಿಮ್ಮ ಕಂಪ್ಯೂಟರ್ ಗೆ ಸ್ಪೀಕರ್ ಇದ್ದರೆ ಚಿತ್ರದ ಜೊತೆಗೆ ಆಂಗ್ಲ  ಅಥವಾ ಕನ್ನಡ ಭಾಷೆಯ ವಿವರಣೆಯನ್ನೂ ಕೇಳಬಹುದು. ಇಂಥದೇ ಒಂದು email ನನಗೆ ಕೆಲ ದಿನಗಳ ಹಿಂದೆ ಬಂದಿತ್ತು. ಅದು ಫ್ರಾನ್ಸ್ ದೇಶದ ಪ್ಯಾರಿಸ್ ನಗರದ ದೃಶ್ಯಾವಳಿ. ಅಲ್ಲಿ Image Stitching ಅನ್ನುವ ಶಬ್ದವೊಂದನ್ನ ಕಂಡೆ. ಬಹುಶಃ ಆ ತಂತ್ರಗಾರಿಕೆಯನ್ನ ಬಳಸಿಯೇ ನಮ್ಮೀ  ಮೈಸೂರು ಅರಮನೆಯ ದೃಶ್ಯಕಾವ್ಯವನ್ನ ರಚಿಸಿದ್ದಾರೆ ಅಂದುಕೊಂಡಿದೀನಿ. 

ಆ ಪ್ಯಾರಿಸ್ ನಗರದ ಚಿತ್ರಕಾವ್ಯ ಸವಿಯಲು ಈ ಕೆಳಕಂಡ ತಾಣಕ್ಕೆ ಭೇಟಿ ನೀಡಿ :






ಆದರೆ ಪ್ಯಾರಿಸ್ ನಗರದ ದೃಶ್ಯಕಾವ್ಯಕ್ಕಿಂತ ನಮ್ಮ ಮೈಸೂರು ಅರಮನೆಯ ಕಾವ್ಯವೇ ಒಂದು ಕೈ ಮೇಲು ಅನ್ನೋದನ್ನ ಎರಡನ್ನೂ ನೋಡಿಯಾದ ಮೇಲೆ ನೀವೇ ನಿರ್ಧರಿಸುತ್ತೀರಿ ....

ಮೈಸೂರರಮನೆಯ ಹೆಚ್ಚಿನ ಮಾಹಿತಿಗಾಗಿ  :



ಜೊತೆಗೆ ಪ್ಯಾರಿಸ್ ದೃಶ್ಯಕಾವ್ಯ ರಚಿಸಿದ ಸಂಸ್ಥೆಯ ಅಧಿಕೃತ ವೆಬ್ ತಾಣ : http://www.autopano.net/en/


 
: ರವಿ



.

ಸ್ಪರ್ಧಾರ್ಥಿಗಳ ಆರೋಗ್ಯಕ್ಕಾಗಿ ಸ್ನೇಹಿತರೊಬ್ಬರ ರೆಸಿಪಿ !!!

0 ಪ್ರತಿಕ್ರಿಯೆಗಳು
ಸ್ಪರ್ಧಾರ್ಥಿಗಳು  ಓದಿನ ಜೊತೆಗೆ ಆರೋಗ್ಯದ ಕಡೆಗೂ ಗಮನ ಕೊಡಬೇಕಲ್ವೇ?  ....  ಅದಕ್ಕೋಸ್ಕರ  ನಿಮಗಾಗಿ ಒಂದು ಸ್ಪೆಷಲ್ & ಸಿಂಪಲ್ ರಿಸಿಪೀ ಇದೆ ಕಣ್ರೀ... ಹಾಗೇ ಸುಮ್ಮನೆ ಟ್ರೈ ಮಾಡಿ !!

::  EGG Biriyani ::

ಬೇಕಾಗುವ ಪದಾರ್ಥಗಳು
  • 1/2 ಕೆಜಿ. ಬಾಸ್ಮತಿ ಅಕ್ಕಿ
  • ಮೊಟ್ಟೆ - 4
  • 2 spoon -   ಅಚ್ಚ ಖಾರದಪುಡಿ
  • 4 spoon -   ಧನಿಯಾ ಪುಡಿ
  • 1 Cup   -  ಮೊಸರು
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್
  • ನಿಂಬೆಹಣ್ಣು - 1
  • ಈರುಳ್ಳಿ - 4
  • ಕ್ಯಾರೇಟ್ - 1
  • ಟೊಮ್ಯಾಟೊ - 5
  • ಮಸಲಾ ಹೂ/ ಎಲೆ - 2
  • ಹಸಿ ಕಾಯಿ ತುರಿ - 1/2 ಹೋಳು
  • ಪುದೀನಾ
  • ಕೊತ್ತಂಬರಿ ಸೊಪ್ಪು 
  • ಸ್ವಲ್ಪ ಉಪ್ಪು, ಎಣ್ಟೆ

: ತಯಾರಿ :

  • ಅಕ್ಕಿಯನ್ನು ಸ್ವಲ್ಪ ನಿಂಬೆರಸ ಹಾಕಿ  ಉದುರಾಗಿ ಅನ್ನ ರೆಡಿ ಮಾಡ್ಕೊಳ್ಳಿ
  • 4 ಮೊಟ್ಟಯನ್ನು ಬೇಯಿಸಿಕೊಂಡು 1/2 cut ಮಾಡಿ
  • ಅಚ್ಚ ಖಾರದ ಪುಡಿ, ಬೆಳ್ಳುಳ್ಳಿ, ಶುಂಠಿ, 1 ಚಕ್ಕೆ, ಕೊತ್ತಂಬರಿ , ಪುದೀನಾ  ಎಲ್ಲಾ ಸೇರಿ ರುಬ್ಬಿ ಇಟ್ಟುಕೊಳ್ಳಿ
  • ಹಸಿ ಕಾಯಿತುರಿಯನ್ನು ಬೇರೆಯಾಗಿ ಆಗಿ ರುಬ್ಬಿ ಇಟ್ಟುಕೊಳ್ಳಿ
  • ಈರುಳ್ಳಿ ಮತ್ತು ಟೊಮ್ಯಾಟೋ ಅನ್ನು ಉದ್ದು ಉದ್ದಾಗಿ ಹೆಚ್ಚಿಟ್ಟುಕೊಳ್ಳಿ

: ಮಾಡುವ ವಿಧಾನ :


ಬಾಣಲೆಗೆ ಎಣ್ನೆ ಹಾಕಿ ಹೆಚ್ಚಿಟ್ಟು ಕೊಂಡಿರುವ ಈರುಳ್ಳಿ ಹಾಕಿ fry ಮಾಡಿ ನಂತರ ಟೊಮೊಟೊ ಹಾಕಿ ಸರಿಯಾಗಿ fry ಮಾಡಿ ನಂತರ ರುಬ್ಬಿಟ್ಟು ಕೊಂಡಿರುವ ಮಸಾಲಾ ಹಾಕಬೇಕು (ಅಂದರೆ ಖಾರದ ಪುಡಿ, ಬೆಳ್ಳುಳ್ಳಿ ಇರುವ ಮಸಾಲಾ)  ಚೆನ್ನಾಗಿ fry ಆದ ಮೇಲೆ ಮಸಾಲಾ smell ಬರುತ್ತೆ  ನಂತರ   ಅದಕ್ಕೆ 1 cup ಗಟ್ಟಿ ಮೊಸರನ್ನ ಹಾಕಬೇಕು . ನಂತರ ರುಬ್ಬಿಕೊಂಡಿರುವ ಕಾಯಿತುರಿ ಹಾಕಿ ಚಿನ್ನಾಗಿ mix ಮಾಡಿ . ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ಪಷ್ಟ ನಿಂಬೆರಸ ಹಾಕಬೇಕು. ಎಲ್ಲಾ ಮಸಾಲೆಗೆ ಆದ ಮೇಲೆ   ಕೊನೆಗೆ ಹೆಚ್ಚಿಟ್ಟು ಕೊಂಡಿರುವ Egg ಅನ್ನು ಅದಕ್ಕೆ ಹಾಕಬೇಕು. ಕೊನೆಗೆ ಉದುರಾಗಿ ಅನ್ನ ವನ್ನು ಈ ಮಸಾಲೆಗೆ mix ಮಾಡಿ  ಅನ್ನ ವನ್ನು ಮಸಾಲೆಗೆ mix  ಮಾಡಿದ ಮೇಲೆ  5 ನಿಮಿಷ ಮುಚ್ಚಿಟ್ಟು ಬಿಸಿ ಮಾಡಬೇಕು  ಗರಂ ಗರಂ EGG Biriyani  ರೆಡಿ.....
           
ಮಸ್ತಾಗಿರುವ ಬಿರಿಯಾನಿ ತಿಂದು ನಮ್ಮ ಸ್ವರ್ಧಾರ್ಥಿ ಬ್ಲಾಗ್ ಗೆ ಇನ್ನು ಹೆಚ್ಚಿನ ಲೇಖನಗಳನ್ನು ಕಳುಹಿಸಿಕೊಡಿ.


: ಸರಿತಾ

Aug 30, 2010

ಬ್ಯಾಂಕುಗಳಲ್ಲಿ ಪ್ರೊಬೇಷನರಿ ಆಫೀಸರ್

0 ಪ್ರತಿಕ್ರಿಯೆಗಳು

ನಿಮಗೆಲ್ಲ ತಿಳಿದಿರುವ ವಿಷಯವೊಂದನ್ನೇ ಇವತ್ತು ಹಾಗೇ ಸುಮ್ಮನೇ ಅಂತ ಹೇಳ್ತೀನಿ ಕೇಳಿ : ಭಾರತದಲ್ಲಿನ ಬ್ಯಾಂಕುಗಳಲ್ಲಿ ನೌಕರಿಗಾಗಿ ಅರ್ಜಿ ಕರೆಯುವುದಕ್ಕೆ ಸಂಬಂಧಿಸಿದಂತೆ ಕ್ಲರ್ಕ್ ಮತ್ತೆ ಪ್ರೊಬೇಷನರಿ ಆಫೀಸರ್ ಈ ಎರಡು ಹುದ್ದೆಗಳು ಮಾತ್ರ ಜಾಸ್ತಿ ಪ್ರಚಾರ ಪಡೆದಂತವು. ( ಅದಕ್ಕೆ ಕಾರಣವೂ ಇಲ್ಲದೇ ಇಲ್ಲ ಬಿಡಿ.. ಅಲ್ಲಿ ಬೇಕಾಗಿರುವ ಪ್ರಮುಖರು ಅವರಿಬ್ಬರೇ ತಾನೇ ?! ) ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ತಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಿರುವ ಬಾಬ್ತು ಇತರ ತಾಂತ್ರಿಕ ಜ್ಞಾನವುಳ್ಳವರನ್ನೂ ಕೆಲಸಕ್ಕೆ ತೆಗೆದುಕೊಳ್ಳುತ್ತಿವೆ.

ಸಾಮಾನ್ಯವಾಗಿ ಕೆಲಸಕ್ಕೆ ಕಷ್ಟಪಡುವವರು ನನ್ನ ಹಾಗೆ ಸಾಮಾನ್ಯ ಪದವಿ ಮಾಡಿದವರು ಇಲ್ಲವೇ 10 ಅಥವಾ 12 ನೇ ತರಗತಿ ಮುಗಿಸಿದವರು. ಈಗ ಕ್ಲರಿಕಲ್ ಕೆಲಸಗಳಿಗೂ 12ನೇ ತರಗತಿ ಶಿಕ್ಷಣ ಬಯಸುವುದು ಹಳೆಯ ಮಾತಾಯಿತು.. ಅದಕ್ಕೂ ಪದವಿ ಬೇಕು ಅನ್ನುವ ಕಾಲ ಬಂದಿದೆ. ಹೀಗಿರುವಾಗ ಪದವಿ ಮುಗಿಸಿ ಕ್ಲರಿಕಲ್ ಕೆಲಸ ಸೇರುವುದಕ್ಕಿಂತ ಸ್ವಲ್ಪ ಜಾಸ್ತಿ ಶ್ರಮ ಪಟ್ಟು ಪ್ರೊಬೇಷನರಿ ಆಫೀಸರ್ ಹುದ್ದೆಗೇ ಸೇರುವುದು ಸರಿ ಅನ್ನಿಸುತ್ತದೆ. ಅದಕ್ಕೆ ಸಹಾಯವಾಗುವ ಕೆಲವು ತಾಣಗಳ ಪಟ್ಟಿಯನ್ನ ಇಲ್ಲಿ ನೀಡ್ತಿದೀನಿ .. ನೋಡಿ ನಿಮಗೆ ಅನುಕೂಲವಾಗಬಹುದು :

ವಿವಿಧ ಬ್ಯಾಂಕುಗಳ ಹೊಸ ನೇಮಕಾತಿ ಅಧಿಸೂಚನೆಗಳಿಗಾಗಿ : ಇಲ್ಲಿ ಕ್ಲಿಕ್ಕಿಸಿ

ಈ ಹಿಂದೆ ನಡೆದ ಕೆಲವು ಸಂದರ್ಶನಗಳಲ್ಲಿ ಕೇಳಲಾದ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ ( ವಿವಿಧ ಸರ್ಕಾರಿ ನೌಕರಿಗಳಿಗಾಗಿ )

ಸಂದರ್ಶನಕ್ಕೆ ಸಂಬಂಧಿಸಿದಂತೆ ಇನ್ನೊಂದು ತಾಣ

( ಕ್ಲರಿಕಲ್/ಪ್ರೊಬೇಷನರಿ ಆಫೀಸರ್  ಹುದ್ದೆಗಳ ಈ ಹಿಂದಿನ ಪ್ರಶ್ನೆಪತ್ರಿಕೆಗಳು ಸಂಪೂರ್ಣ ಉಚಿತ !! ಬೇಕಾ ? ಇಲ್ಲಿ ಕ್ಲಿಕ್ಕಿಸಿ )



 ............ ಮನಸು ಮಾಡಿದರೆ ಇನ್ನೂ ಹತ್ತೆಂಟು ಉಪಯುಕ್ತ ಅನ್ನಿಸುವ ತಾಣಗಳನ್ನ ನಾನೇ ಹುಡುಕಿ ಕೊಡಬಹುದು. ಆದರೆ ನೀವೂ ಸ್ವಲ್ಪ ಶ್ರಮ ತೆಗೆದುಕೊಳ್ಳಿ ಅನ್ನುವ ದೃಷ್ಟಿಯಿಂದ ಇಲ್ಲಿಗೇ ನಿಲ್ಲಿಸ್ತಿದೀನಿ. ನೀವು ಈ ಬರಹಕ್ಕೆ Comment ರೂಪದಲ್ಲಿ ನಿಮಗೆ ಗೊತ್ತಿರುವ , ಬ್ಯಾಂಕ್ ಪರೀಕ್ಷೆಗಳಿಗೆ ಅನುಕೂಲ ಆಗುವ ನಾಲ್ಕಾರು ತಾಣಗಳ ಅಂತರ್ಜಾಲ ಕೊಂಡಿಗಳನ್ನ ನೀಡಿ ನಿಮಗೆ ತಿಳಿದಿರುವ ಜ್ಞಾನಮೂಲವನ್ನ ಇತರರೊಂದಿಗೂ ಹಂಚಿಕೊಳ್ಳಿ. ನೀವು ಎಲ್ಲರೂ ಒಂದು ತಾಣವನ್ನ ಹಂಚುವ ಔದಾರ್ಯತೆ ತೋರಿದರೂ ನೂರಾರು ತಾಣಗಳ ಜ್ಞಾನ ನಮ್ಮೆಲ್ಲರದಾಗಬಹುದು !! ನೋಡಿ ಹನಿ ಹನಿ ಸೇರಿ ಹಳ್ಳವಾಗೋದು ಹೀಗೇನೇ !!!!!



.

Aug 28, 2010

ಶೇಖರಣೆ ನೆಪದಲ್ಲಿ ಪೋಲಾದ ಧಾನ್ಯಸಂಗ್ರಹ

0 ಪ್ರತಿಕ್ರಿಯೆಗಳು
ಕೆಲವು ದಿನಗಳ ಹಿಂದೆ ಸರ್ವೋಚ್ಛ ನ್ಯಾಯಲಯ ಕೇಂದ್ರ ಸರ್ಕಾರಕ್ಕೆ ಆಹಾರವನ್ನು ಪೋಲುಮಾಡಬೇಡಿ, ಎಷ್ಟೋ ಜನರು ಆಹಾರದಿಂದ ವಂಚಿತರಾಗಿದ್ದಾರೆ, ಅಂತಹವರಿಗೆ ಹಂಚಿ, ಎಂದು ಮಾರ್ಗದರ್ಶನ ನೀಡಿತು. ಅದರ ಬಗ್ಗೆ ಅಂದರೆ, ಕೇಂದ್ರ ಸರ್ಕಾರ ಮಾಡುತ್ತಿರುವ ಆಹಾರ ನಾಶದ ಬಗ್ಗೆ ಕೆಲವು ಮಾಹಿತಿಯನ್ನು  ನೀಡುತ್ತೇನೆ...

> ಕೇಂದ್ರ ಆಹಾರ ಸಚಿವ ಶರದ್ ಪವಾರ್ ಅವರು ಲೋಕಸಭೆಯಲ್ಲಿ ಕೊಟ್ಟ ಮಾಹಿತಿ ಪ್ರಕಾರ ಸರ್ಕಾರಿ ಗೋದಾಮುಗಳಲ್ಲಿ ವ್ಯರ್ಥವಾದ ಆಹಾರ ಧಾನ್ಯದ ಪ್ರಮಾಣ ಕೇವಲ ೧೧೭೦೦ ಟನ್. ಆದರೆ, RTI ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ಕಳೆದ ವರ್ಷವೊಂದರಲ್ಲೇ 10688 ಲಕ್ಷ ಟನ್ ಆಹಾರ ಧಾನ್ಯ ಸರಕಾರಿ ಗೋದಾಮುಗಳಲ್ಲಿ ಕೊಳೆತು ಹೋದ ವಿವರಣೆ ನೀಡಿದೆ. ಈ ಮಾಹಿತಿ ಪ್ರಕಾರವೇ,1997 ರಿಂದ 2007ರ ನಡುವೆ,  FCI ಗೋದಾಮಿನಲ್ಲಿ 1.83 ಲಕ್ಷ ಟನ್ ಗೋಧಿ, 6.33 ಲಕ್ಷ ಟನ್ ಅಕ್ಕಿ,  2.20  ಲಕ್ಷ ಟನ್ ಭತ್ತ ಮತ್ತು 1.11 ಲಕ್ಷ ಟನ್ ಮೆಕ್ಕೆಜೊಳ ಮಣ್ಣುಪಾಲಾಗಿದೆ. 

> ಇಷ್ಟಕ್ಕೆಲ್ಲ ಕಾರಣ ನಮ್ಮಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದಿರುವಿಕೆ. ನಮ್ಮ ರೈತರು ಬೆವರು ಸುರಿಸಿ ಬೆಳೆದ ಬೆಳೆಯಲ್ಲಿ ಅಬ್ಬಬ್ಬಾ ಎಂದರೆ 6 ಲಕ್ಷ ಟನ್ ಅಹಾರವನ್ನು ಸಂಗ್ರಹಿಸಬಹುದು. ಉಳಿದ ಆಹಾರ ಪದಾರ್ಥಗಳಿಗೆ ಆಕಾಶವೇ ನೆಲೆ. ಮಳೆ-ಬಿಸಿಲಿಗೆ ಸಿಕ್ಕು ಆಹಾರ ನಾಶವಾಗುತ್ತದೆ.  ಗೋದಾಮುಗಳಲ್ಲಿ ಸಂಗ್ರಹಿಸಿಟ್ಟ ಆಹಾರಗಳಿಗೆ ಇಲಿ, ಇನ್ನಿತರ ಕೀಟಗಳಿಂದ ಸರಿಯಾದ ರೀತಿಯಲ್ಲಿ ಸಂರಕ್ಷಣೆ ಸಿಗದೇ ಇರುವುದು. ಇಂತಹ ಸಮಸ್ಯೆಗಳಿಂದ ಹೊರಬರುವಂತೆ ನ್ಯಾಯಾಲಯ ಸಲಹೆ ನೀಡಿದೆ. ಆಹಾರ ಪದಾರ್ಥಗಳ ಸಂಗ್ರಹ ಕಾರ್ಯವನ್ನು ಖಾಸಗೀಕರಣ ಮಾಡಿದ್ರೆ ಸೂಕ್ತ ಅಂತ ಅನ್ಸುತ್ತೆ. ಹಣ್ಣು-ತರಕಾರಿಗಳು ಹೆಚ್ಚು ದಿನಗಳ ಕಾಲ ಕೆಡದಂತೆ ಇಡುವ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಬೇಕು. ನಮ್ಮ ದೇಶದಲ್ಲಿ ಸಂಸ್ಕರಣೆಗೊಂಡ ಆಹಾರಗಳು ಶೇ.2 ಕ್ಕಿಂತಲೂ ಕಡಿಮೆ. ನಮ್ಮ ದೇಶಕ್ಕೆ ಎಲ್ಲ ರಂಗಗಳಲ್ಲಿ ಸವಾಲೊಡ್ಡುವ ಚೀನಾ ದೇಶವು 15 ಕೋಟಿ ಟನ್ ನಷ್ಟು ಆಹಾರ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

 : ಪವನ್


ಲೇಖಕರ ಸಂಪರ್ಕ ವಿಳಾಸ : mahapavan@gmail.com


***************** 


1 Y

E

L

L

O

2 W



P





   H




   U

4 B

G

S
   I
  L
  V
  E
   R
   R

    R



  T



   P
7 O
  R
   A
   N
G
  E

B

  L

   W


   Y

    R


10  B
    L
   U
  E
   N


11  R
    E

   E


    A







    E


   C




12   P
   I
    N
   K

   K






*****************

Aug 27, 2010

ಪದಬಂಧ

2 ಪ್ರತಿಕ್ರಿಯೆಗಳು
:: ಪದಬಂಧ ::


ಪದಬಂಧ ( Puzzles ) ಎಂಬ ಶಬ್ದಗಳ ಆಟ ಎಲ್ಲರಿಗೂ ಒಂದು ಮೋಜಿನ, ಸಮಯ ಸ್ಫೂರ್ತಿಯ ಆಟ. ಅಷ್ಟೇ ಅಲ್ಲ, ಬುದ್ಧಿಗೆ ಕೆಲವೊಮ್ಮೆ ಕಸರತ್ತು ಸಹ ನೀಡುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಬೆಳಗಿನ ಒಂದು ಕಪ್ ಚಹಾ ಕುಡಿಯುವುದರೊಳಗೆ 12 ದಿನಪತ್ರಿಕೆಗಳ ಪದಬಂಧ ( Puzzles ) ತುಂಬುತ್ತಿದ್ದರಂತೆ !!  

ವಾಹ್ ! ಅನ್ನೋದರ ಜೊತೆಗೆ, " ನಾನೇನೂ ಕಮ್ಮಿ ಇಲ್ಲ. ಇಂಥ ಆಟಗಳಲ್ಲಿ ನನ್ನ ಬುದ್ಧಿಮತ್ತೆಯನ್ನ ಒರೆಹಚ್ಚಲು ನಾನು ಯಾವಾಗಲೂ ರೆಡಿ " ಅಂತ ಅಣಿಯಾಗ್ತಿದೀರಾ  ಅನ್ನೋದು ನಂಗೆ ಗೊತ್ತಾಯ್ತು. ಆದರೆ ಕನ್ನಡ ಪದಬಂಧ ಬಿಡಿಸುವುದು ಸುಲಭ. ಅದೇ ಇಂಗ್ಲೀಷ್ Puzzles ಬಿಡಿಸುವುದು ಕಷ್ಟ. ಅದಕ್ಕೆ ಒಂದು ಸರಳ ಇಂಗ್ಲೀಷ್ Puzzle ಕೊಟ್ಟಿದೀನಿ. ಪ್ರಯತ್ನ ಮಾಡಿ ...





1




2



3










4

5

6















7



8


9








10






11


















12







Across

1. It's the color of gold.
6. ___ and gold are precious metals.
7. It's also the name of a fruit.
10. The sun is shining and the sky is ___ today.
11. Tomatoes are ___.
12. Do you like the ___ Panther cartoon?

Down

2. He wants peace. He is carrying a ___ flag.
3. If you mix red and blue, you get this color.
4. ___ sugar is healthier than refined sugar.
5. It's going to rain. The sky is ___ today.
8. The apple is not ripe. It's still ___.
9. It's the opposite of white.


ಎಲ್ಲಾ ಮನೆಗಳನ್ನೂ ಭರ್ತಿ ಮಾಡಿ ಆಯಿತಾ ? ಹಾಗಿದ್ದರೆ ಸರಿ ಉತ್ತರ ?!! ನಾಳೆ ಹೊಸ ಲೇಖನದ ಅಡಿ ಭಾಗದಲ್ಲಿ ಈ Puzzle ನ ಉತ್ತರ ಇರುತ್ತೆ. ಹುಡುಕಿ - ಹೋಲಿಸಿ, ತಿದ್ದಿಕೊಳ್ಳಿ / ಶಭಾಷ್ ಎಂದುಕೊಳ್ಳಿ.

ಇನ್ನಷ್ಟು ಪದಬಂಧಗಳನ್ನು ಬಿಡಿಸುವ ಮನಸ್ಸಾಗಿದೆಯಾ ? ಹಾಗಿದ್ದಲ್ಲಿ  http://iteslj.org/cw/  ತಾಣಕ್ಕೆ ಭೇಟಿ ನೀಡಿ.



ಶುಭದಿನ,
: ಎಂ.ಬಿ.ಲಾವಣ್ಯ



Aug 26, 2010

ಎಲ್ಲಿಲ್ಲಿ ನೋಡಿ ಎಲ್.ಇ.ಡಿ

0 ಪ್ರತಿಕ್ರಿಯೆಗಳು

:: ಎಲ್ಲಿಲ್ಲಿ ನೋಡಿ  ಎಲ್.ಇ.ಡಿ ::



ಲೈಟ್ ಎಮಿಟಿಂಗ್ ಡಯೋಡ್ ಎಂಬುದನ್ನು ಸಂಕ್ಷೇಪಿಸಿಕೊಂಡು ಎಲ್.ಇ.ಡಿ ಎಂದು ಕರೆಯಲ್ಪಡುವ  ಪುಟ್ಟ ವಿದ್ಯುದ್ದೀಪವನ್ನು  ನೀವು ಎಲ್ಲೆಲ್ಲೂ ನೋಡಿರುತ್ತೀರಿ, ಇಲ್ಲ ನೋಡಿಲ್ಲ ಅಂತೀರಾ ? ಹಾಗಾದ್ರೆ ನಿಮ್ಮ ಕಂಪ್ಯೂಟರ್ ನ ಕೀಲಿಮಣೆಯ ನಂಬರ್ ಲಾಕ್,  ಕ್ಯಾಪ್ಸ್ ಲಾಕ್, ಸ್ಕ್ರಾಲ್ ಲಾಕ್ ನ ಇಂಡಿಕೇಟರ್ ಗಳ ಕಡೆ ಕಣ್ಣಾಯಿಸಿ.  ಹಾ ಕಾಣಿಸ್ತಲ್ವಾ ಹಸಿರು ಬಣ್ಣದ ಪುಟ್ಟ ದೀಪ,  ಇವನ್ನೆ ಎಲ್.ಇ.ಡಿ. ಲ್ಯಾಂಪ್ಸ್ ಅನ್ನೊದು. ಇಂದು ನಾವು ದಿನನಿತ್ಯ ಬಳಸುವ ವಿದ್ಯುದ್ದುಪಕರಣಗಳಲ್ಲಿ, ಅಲಂಕಾರಿಕ ವಸ್ತುಗಳಲ್ಲಿ, ವಾಹನಗಳಲ್ಲಿ ಈ ಪುಟ್ಟ ಆಕರ್ಷಕ ದೀಪಗಳ ಬಳಕೆ ಸರ್ವೇ ಸಾಮಾನ್ಯವಾಗಿದೆ. ನಮ್ಮ ಬಿ.ಎಂ.ಟಿ.ಸಿ ಯ ನೂತನ ಬಸ್ ಗಳಲ್ಲಿ ಎಲ್.ಇ.ಡಿ. ಬಳಕೆಯ ನಾಮಫಲಕಗಳನ್ನು ದಿನನಿತ್ಯ ಕಾಣುತ್ತೇವೆ ಹಾಗೇ ರಾತ್ರಿ ಹೇಳದೇ ಕೇಳದೆ ವಿದ್ಯುತ್ ಕೈ ಕೊಟ್ಟಾಗ ಹೊತ್ತಿಸುತ್ತೇವಲ್ಲ ಎಮರ್ಜೆನ್ಸಿ ಲೈಟು ಅವುಗಳಲ್ಲೂ ಹಾಗೂ  ಸೌರ ವಿದ್ಯುದ್ದೀಪಗಳಲ್ಲೂ ಸಹ ಈ ಎಲ್.ಇ.ಡಿ.ಗಳು ಬಹುಸಂಖ್ಯೆಯಲ್ಲಿ ಬಳಕೆಯಾಗುತ್ತಿವೆ.


ಈ ಎಲ್.ಇ.ಡಿ. ಎಂಬುದು ಹೆಸರೇ ಸೂಚಿಸುವಂತೆ  ಬೆಳಕನ್ನು ಹೊರಸೂಸಬಲ್ಲಂತಹ ಡಯೋಡ್ ಆಗಿದೆ. ಒಂದು ಕಡೆ ಋಣಾತ್ಮಕ ವಿದ್ಯುದಾವೇಶಗಳಿರುವ ಎಲೆಕ್ಟ್ರಾನ್ ಗಳು ಹಾಗೂ ಇನ್ನೊಂದುಕಡೆ ಧನಾತ್ಮಕ ವಿದ್ಯುದಾವೇಶಗಳಿರುವ ಎಲೆಕ್ಟ್ರಾನ್ ಗಳಿರುವ ಎರಡು ಅರೆವಾಹಕ ಭಾಗಗಳನ್ನು ಸೇರಿಸಿ ಈ ಎಲ್.ಇ.ಡಿ. ಗಳನ್ನು ತಯಾರಿಸಲಾಗಿರುತ್ತದೆ. ವಿದ್ಯುತ್ ಹರಿದಾಗ ಧನಾತ್ಮಕ ಹಾಗೂ ಋಣಾತ್ಮಕ ವಿದ್ಯುದಾವೇಶಗಳು ಒಂದುಗೂಡಿ ಪೋಟಾನುಗಳ ರೂಪದಲ್ಲಿ ಬೆಳಕನ್ನು ಹೊರಸೂಸುತ್ತವೆ. ಎಲ್.ಇ.ಡಿ. ತಯಾರಿಕೆಯಲ್ಲಿ ಬಗೆಬಗೆಯ ಧಾತುಗಳನ್ನು ಬಳಸುವ ಮೂಲಕ ಬಣ್ಣಬಣ್ಣದ ಬಲ್ಬ್ ಗಳನ್ನು ತಯಾರಿಸಲಾಗುತ್ತದೆ.  ಬಣ್ಣ ಬಣ್ಣದ ಬೆಳಕು ಸೂಸುವ ಎಲ್.ಇ.ಡಿ.ಗಳನ್ನು ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ, ಸಿಗ್ನಲ್ ದೀಪಗಳಲ್ಲಿ, ನಾಮಫಲಕಗಳಲ್ಲಿ,   ವಿದ್ಯುತ್ ಉಪಕರಣಗಳಲ್ಲಿ ಬಳಸಿದರೆ, ಬಿಳಿಬೆಳಕು ಸೂಸುವ ಪುಟ್ಟ ಪುಟ್ಟ ಈ ದೀಪಗಳನ್ನು ಬಹುಸಂಖ್ಯೆಯಲ್ಲಿ ಒಗ್ಗೂಡಿಸಿ ಶುಭ್ರವಾದ, ತಂಪಾದ, ಹಿತಕರ ಬೆಳಕನ್ನು ಪಡೆಯಲಾಗುವ ಗೃಹ ಬಳಕೆಯ ದೀಪಗಳಲ್ಲಿ ಬಳಸಲಾಗುತ್ತದೆ.



ಅಮೇರಿಕಾದ ನಿಕ್ ಹೋಲೋನ್ಯಾಕ್ ಎಂಬ ವಿಜ್ಞಾನಿ 1962 ರಲ್ಲಿ ಮೊದಲ  ಎಲ್.ಇ.ಡಿ ಯನ್ನು ಸೃಷ್ಠಿಸಿದ. ಅಲ್ಲಿಂದೀಚೆಗೆ ಕ್ಷಿಪ್ರಗತಿಯಲ್ಲಿ ಜನಪ್ರಿಯವಾಗಿರುವ ಈ ಪುಟಾಣಿ ದೀಪಗಳು ಇಂದು ಸರ್ವವ್ಯಾಪಿಯಾಗಿವೆ. ಸಾಮಾನ್ಯ ವಿದ್ಯುತ್ ದೀಪಗಳಿಗಿಂತ ಹತ್ತು ಹನ್ನೆರಡು ಪಟ್ಟು ಕಾರ್ಯದಕ್ಷತೆ ಮತ್ತು ಬಾಳಿಕೆಯನ್ನು ಈ ಪುಟ್ಟ ದೀಪಗಳು ಹೊಂದಿದ್ದು.  ಸಮ ಪ್ರಮಾಣದ ವಿದ್ಯುತ್ ಪ್ರವಾಹದಲ್ಲಿ ಒಂದು ಎಲ್.ಇ.ಡಿ ಕನಿಷ್ಟ ಸುಮಾರು ಒಂದು ಲಕ್ಷಗಂಟೆಗಳಷ್ಟು ಬಾಳಿಕೆ ಬರಬಲ್ಲದು ಎಂದು ಅಂದಾಜಿಸಲಾಗಿದೆ. ಅತಿಕಡಿಮೆ ಓಲ್ಟೇಜಿನ ವಿದ್ಯುತ್ ಪ್ರವಾಹದಲ್ಲೂ ಸಹ ಬೆಳಕನ್ನು ಹೊರಸೂಸಬಲ್ಲ ಇವು ಕಡಿಮೆ ಬೆಲೆಯಲ್ಲಿ ಕೈಗೆಟಕುವ ವಿದ್ಯುದ್ ದೀಪಗಳಾಗಿವೆ. 


ಇಂದು ಎಲ್.ಇ.ಡಿ. ಬಳಕೆ ಕೇವಲ ಬೆಳಕಿಗಷ್ಟೇ ಅಲ್ಲದೆ ಅಲ್ಟ್ರಾ ವೈಲೆಟ್  ಮೂಲಕ ನೀರನ್ನು ಶುದ್ಧೀಕರಿಸುವ ಯೂವಿ ಟ್ರೀಟೆಡ್ ತಂತ್ರಜ್ಞಾನಕ್ಕೂ ಕಾಲಿಟ್ಟಿದ್ದು ಇಲ್ಲಿ ಯಶಸ್ವಿಯಾದರೆ ವಿದ್ಯುತ್ ಸಂಪರ್ಕ ಇಲ್ಲದಂತಹ ಸ್ಥಳಗಳಲ್ಲೂ ಸೌರಶಕ್ತಿಯ ಮೂಲಕ ನೀರಿನ ಶುದ್ಧೀಕರಣವನ್ನು ಸಾಧ್ಯವಾಗಿಸಬಹುದು ಎಂಬುದು ನಮ್ಮ ವಿಜ್ಞಾನಿಗಳ ಕನಸಾಗಿದೆ.

ಈ ವಿದ್ಯುದ್ ದೀಪಗಳ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಇನ್ನೂ ಕಡಿಮೆ ದರದಲ್ಲಿ ಕೈಗೆಟುಕುವಂತಹ ಎಲ್,ಇ.ಡಿಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳ ಪ್ರಯತ್ನ ನಿರಂತರವಾಗಿ ಸಾಗಿದ್ದು ಎಲ್ಲೆಲ್ಲೂ ಎಲ್.ಇ.ಡಿ ಗಳ ಬೆಳಕೇ ರಾರಾಜಿಸುವ ಕಾಲವು ಸನ್ನಿಹಿತವಾಗುತ್ತಿದೆ.

ಎಲ್.ಇ.ಡಿ.ಗಳ ಬಗ್ಗೆ ಹೆಚ್ಚು ತಿಳಿಯಲು
http://kn.wikipedia.org/wiki/ಲ್‌ಇಡಿ_ಲ್ಯಾ೦ಪ್

: ಪರಶು 



.

Aug 25, 2010

ನೀವೂ ಬರೀರಪ್ಪಾ !!

0 ಪ್ರತಿಕ್ರಿಯೆಗಳು



: ಹಾಗೇ ಸುಮ್ಮನೆ ...  ಮಾತುಕತೆ :



ಎಷ್ಟು ದಿವಸ ರವಿ ಅನ್ನೋನೊಬ್ಬ ಬರೀತಾ ಹೋಗ್ತಾನೆ ಹೇಳಿ ? ಹಾಗೊಂದು ಪಕ್ಷ ಅವನು ಬರೆಯೋದೇ ಆದ್ರೂ, ದಿನ ಅವನೆಷ್ಟೇ ತರಹೇವಾರಿ ಅಡುಗೆ ಮಾಡಿ ಹಾಕಿದ್ರೂ ಅದು ಬರೋದು ಒಂದೇ ಅಡುಗೆ ಮನೆಯಿಂದ. ಅಂಥ ಅಡುಗೆ ವರ್ಷ ಕಳೆದರೂ ಬೇಸರ ಆಗೋದಿಲ್ಲ ಅನ್ನೋದಕ್ಕೆ ಪೂರ್ವ ನಿದರ್ಶನಗಳು ಕಡಿಮೆ.

ವಿಷಯ ಹೀಗಿರಬೇಕಾದ್ರೆ, ನಿಮಗೆ ಗೊತ್ತಿರೋ ವಿಷಯವನ್ನ ಹಂಚಿಕೊಳ್ಳೋ ಸಾರ್ಥಕತೆಯನ್ನ ಪಡೆದುಕೊಳ್ಳಿ. ಅಂಥದೊಂದು ಮುಕ್ತ ವೇದಿಕೆ ಇಲ್ಲಿ, ಸ್ಪರ್ಧಾರ್ಥಿ ತಾಣದಲ್ಲಿ ಉಚಿತವಾಗಿ ಲಭ್ಯವಿದೆ ಅನ್ನೋದನ್ನ ಮರೀಬೇಡಿ.

ನಿಮ್ಮಲ್ಲಿರಬಹುದಾದ ಹಿಂಜರಿಕೆಗಳನ್ನ ಪಟ್ಟಿ ಮಾಡ್ತೀನಿ ಕೇಳಿ :
  • ನಾನು ಬರೆದ ವಿಷಯ ಈಗಾಗ್ಲೇ ಎಲ್ರೀಗೂ ಗೊತ್ತಿದ್ರೆ ? ::: ಗೊತ್ತಿದ್ರೆ ಅವನಿಗೆ ಗೊತ್ತಿರುತ್ರೀ ... ಬರೀತಿರೋ ನಿಮಗಲ್ವಲ್ಲಾ ? ಇಲ್ಲಿ ಬರೆಯೋ ವಿಷಯಗಳೆಲ್ಲಾ ಒಬ್ಬರಿಗಲ್ಲಾ ಒಬ್ಬರಿಗೆ ಗೊತ್ತಿರುವಂಥವೇ. ಯಾರಿಗೂ ಗೊತ್ತಿಲ್ದೇ ಇರೋ ವಿಷಯ ಬರೆದ್ರೆ ಅದೊಂದು Research Paper ಆಗುತ್ತೆ. ನೀವಿಲ್ಲಿ ಬರೆದು, ಪ್ರಕಟವಾಗಬೇಕಾಗಿರೋ ಲೇಖನಗಳ ಹಿಂದಿರಬೇಕಾಗಿರುವ ಧ್ಯೇಯ ಇಷ್ಟೇ : ಲೇಖಕ ಆ ಲೇಖನದ ವಿಷಯವನ್ನ ಕುತೂಹಲದ ನೀರಿಗೆ ಇಳಿದು ಹುಡುಕಾಡಿ 'ಶೋಧಿ'ಸಿರಬೇಕು. ಆ ವಿಷಯ ಸಾಮಾನ್ಯರು ತಿಳಿದಿರುವ ಸಾಮಾನ್ಯ ವಿಷಯವಾಗಿದ್ದರೂ ಪ್ರತಿ ವ್ಯಕ್ತಿ / ವಿದ್ಯಾರ್ಥಿ / ಲೇಖಕ ಅದನ್ನ ಬಿತ್ತರಿಸುವ ಸಾಮರ್ಥ್ಯ ಪ್ರತಿ ವ್ಯಕ್ತಿಯ Finger Print ನಷ್ಟೇ Unique. ನಿಮ್ಮ ಪದಗಳಲ್ಲಿ ಆ ಶಕ್ತಿ ತುಂಬಿಸಿ, ಅತಿ ಸಾಮಾನ್ಯ ವಿಷಯವನ್ನೂ ಕುತೂಹಲಕಾರಿಯಾಗಿ Present ಮಾಡುವ ಶಕ್ತಿಯನ್ನ ಬೆಳೆಸಿಕೊಳ್ಳಿ. ವಿಷಯ ಸಂಗ್ರಹ ನಿಮ್ಮ Prelims ಗೆ ಸಹಾಯ ಆದ್ರೆ, ವಿಷಯವನ್ನ Present ಮಾಡುವ ನಿಮ್ಮ Uniqueness ಮುಖ್ಯ ಪರೀಕ್ಷೆಗೆ ಸಹಾಯ ಮಾಡತ್ತೆ. Got My Point ? Thats Like A Good Boy !!
  • ಲೇಖನಕ್ಕೆ ಕಚ್ಚಾ ಸಾಮಗ್ರಿ ಎಲ್ಲಿಂದ ಹುಡುಕ್ಲಿ ನಾನು ? ::: ಇದನ್ನ ನಾನು ಹೇಳಕ್ಕಾಗಲ್ಲ. ನಿಮ್ಮ ಲೇಖನದ ಹರವು ಆಧರಿಸಿ ಹುಡುಕಿ. ನಿಮ್ಮ ಮನೆ ಕಪಾಟಿನಲ್ಲಿರುವ ಪುಸ್ತಕಗಳು, ಊರ ಗ್ರಂಥಾಲಯ, ಕಾಲೇಜ್ / ಯುನಿವರ್ಸಿಟಿ ಲೈಬ್ರರಿ, ಗೂಗಲ್, ವಿಕಿಪೀಡಿಯಾ ... ಇವೆಲ್ಲಾ ನಿಮಗೆ ಸಹಾಯವಾಗಬಲ್ಲವು.
  • ಬರೀಬೇಕು ಅಂತ ವಿಷಯ ಇಟ್ಕೊಂಡಿದೀನಿ.. ಮುಂದೇನು ? ::: ಮುಂದೇನು ತಕ್ಷಣ ಆ ಜ್ಞಾನ ಪುಟವನ್ನ ಕನ್ನಡ Unicode ನಲ್ಲಿ / Google Transliterator / gmail mailbox ನಲ್ಲಿರೋ ಪ್ರಾದೇಶಿಕ ಭಾಷೆಯನ್ನ ಟೈಪಿಸುವ ಟೂಲ್ ಬಳಸಿ ಬರೆದು ತುರ್ತಾಗಿ ಮಿಂಚಂಚೆ ಕಳಿಸಿ : ವಿಳಾಸ - spardharthi@gmail.com
ಈ ಮಾತುಕತೆಯ ಮುಂದಿನ ಲೇಖನ ರವಿ ಬಿಟ್ಟು ಮತ್ತೊಬ್ಬ ಆಸಕ್ತ " ಸ್ಪರ್ಧಾರ್ಥಿ " ಯದೇ ಇರಬೇಕು ಅಂತ ನಿರ್ಧಾರ ಮಾಡಿ ಆಗಿದೆ. ನೋಡೋಣ ಪ್ರತಿ ದಿನ ಸ್ಪರ್ಧಾರ್ಥಿ ತಾಣದ ಜ್ಞಾನಪುಟ ಓದುವ ನಿಮ್ಮಲ್ಲೆಷ್ಟು ಜನ ನಿಮ್ಮ ಪಾಲಿನ ಜ್ಞಾನಬುತ್ತಿಯನ್ನ ನಮ್ಮೊಂದಿಗೆ ಹಂಚಿ ತಿನ್ನುವ ಔದಾರ್ಯ ತೋರಿಸ್ತೀರಿ ಅಂತ !!



ಇಂತಿ ನಿಮ್ಮ,
ಸ್ಪರ್ಧಾರ್ಥಿ







.

Aug 24, 2010

Commemorative Coins : ಸಂಸ್ಮರಣ ನಾಣ್ಯಗಳು

0 ಪ್ರತಿಕ್ರಿಯೆಗಳು


ಮೇಲ್ಕಂಡ ಚಿತ್ರದಲ್ಲಿ ಕಾಣುವಂತೆ ನಮ್ಮ ಭಾರತ ಸರ್ಕಾರ ಅನೇಕ ಮಹಾಪುರುಷರನ್ನ ನೆನೆಯುವ, ದಿನಾಚರಣೆಗಳ ವಾರ್ಷಿಕೋತ್ಸವಗಳು, ಸಂಸ್ಥೆಗಳ ಜಯಂತಿ ... ಇತ್ಯಾದಿಗಳನ್ನ ನಾಣ್ಯಗಳ ಹಿಂಬದಿಯ ಮೇಲೆ ಮುದ್ರಿಸಿ ಹಂಚಿದ್ದೂ ಆಗಿದೆ, ನಾವು ಅವನ್ನ ನೋಡಿದ್ದು - ಬಳಸಿದ್ದೂ ಆಗಿದೆ. ಈಗ ಆ ಸಂಸ್ಮರಣಾ ನಾಣ್ಯಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ :



  • ಮೊದಲಿಗೆ ತಿಳಿಯಬೇಕಾಗಿರುವ ವಿಷಯ ಸದರಿ ನಾಣ್ಯಗಳನ್ನ Commemorative Coins ಅಂತಾರೆ ಅನ್ನೋದನ್ನ. ಮೊದಲ ಬಾರಿಗೆ ಇವನ್ನ ಭಾರತದ ಮೊದಲ ಪ್ರಧಾನಿ ನೆಹರೂರವರ ಜನ್ಮದಿನದ ಅಂಗವಾಗಿ 1964ರಲ್ಲಿ ಟಂಕಿಸಲಾಯಿತು.
  • ಈ ತರಹದ Commemorative Coins ಗಳು ಸಾಮಾನ್ಯ ಚಲಾವಣೆಗಾಗಿಯೂ ತಯಾರಿಸಬಹುದು ಅಥವಾ ಕೇವಲ ಸಂಗ್ರಹದ ಹವ್ಯಾಸವುಳ್ಳವರಿಗೆಂದೇ ತಯಾರಿಸಬಹುದು.
  • ಕಡಿಮೆ ಮುಖಬೆಲೆಯ ನಾಣ್ಯಗಳನ್ನ ಚಲಾವಣೆಗೆ ಬಿಟ್ಟು ಹೆಚ್ಚಿನ ಮುಖಬೆಲೆಯ(100/- ) ನಾಣ್ಯಗಳನ್ನ ಸಂಗ್ರಹಕ್ಕೆ ಮಾತ್ರ ನೀಡುವುದು ವಾಡಿಕೆ. ಸಾಮಾನ್ಯವಾಗಿ ಸಂಸ್ಮರಣ ಸಂಚಿಕೆಯ ನಾಣ್ಯಗಳ ಮುಖಬೆಲೆ 5 ಪೈಸೆ ಯಿಂದ ಹಿಡಿದ100 ರೂಪಾಯಿ ವರೆಗೆ ಇರುತ್ತದೆ.
  • ಹೀಗೆ ಟಂಕಿಸಲಾಗುವ ನಾಣ್ಯಗಳಿಗಾಗಿ ಬಳಸುವ ಲೋಹವೂ ವ್ಯತ್ಯಾಸವಾಗುತ್ತದೆ. ಕೆಲವೊಮ್ಮೆ ಸಂಗ್ರಹಕ್ಕಾಗಿರುವ ಹೆಚ್ಚಿನ ಮುಖಬೆಲೆಯ ನಾಣ್ಯಗಳನ್ನ ಬೆಳ್ಳಿಯಲ್ಲಿ ತಯಾರಿಸಿ, ಇನ್ನುಳಿದವುಗಳನ್ನ ವಾಡಿಕೆಯಂತೆ ಟಂಕಿಸಲಾಗುತ್ತದೆ.
  • ಸಂಸ್ಮರಣ ಸಂಚಿಕೆಯ ಎಲ್ಲ ನಾಣ್ಯಗಳನ್ನೂ ಚಲಾವಣೆಯಲ್ಲಿ ತರಬೇಕೆಂದೇನಿಲ್ಲ.
  • ಹೀಗೆ ಟಂಕಿಸಲಾಗಿಗುವ ಸಂಸ್ಮರಣ ನಾಣ್ಯಗಳ ಸಂಗ್ರಹ ಹವ್ಯಾಸವಿರುವವರಿಗೆ ಅನುಕೂಲವಾಗಲೆಂದೇ UNC Sets ( Uncirculated Sets ) ( ಚಲಾವಣೆಗೆ ತರದ ನಾಣ್ಯಗಳು ) ಮತ್ತು Proof Sets ( ಚಲಾವಣೆಗೆ ಮುಂಚೆ ಸಂಗ್ರಹಕಾರರಿಗೆಂದೇ ಬಿಡುಗಡೆ ಮಾಡುವ ನಾಣ್ಯಗಳು - ಒಂದು ಚಿತ್ರದ ಹಿಂದಿನ ದಿನದ ಪ್ರೀಮಿಯರ್ ಷೋ ಇದ್ದ ಹಾಗೆ !! ) ಎಂಬೆರಡು ವಿಧದಲ್ಲಿ ನೀಡುವುದು ವಾಡಿಕೆ.
  • ಕೇಂದ್ರ ಸರ್ಕಾರ 2006ರಲ್ಲಿ Security Printing & Minting Corporation of India Ltd. ಅನ್ನ ಸ್ಥಾಪಿಸಿತು. ಇದರ ಅಡಿಯಲ್ಲಿ ದೇಶದ ಎಲ್ಲ 9 ಟಂಕಶಾಲೆಗಳು ( ನೋಟು ಮುದ್ರಣಾಗಾರಗಳನ್ನೂ ಸೇರಿಸಿ ) ಕಾರ್ಯನಿರ್ವಹಿಸುತ್ತವೆ. 
  • ಮುಂಬೈ, ಕೋಲ್ಕತಾ, ಹೈದರಾಬಾದ್ & ನೋಯ್ಡಾ ಇವು ನಾಲ್ಕು ನಮ್ಮ ದೇಶದ ನಾಣ್ಯ ಟಂಕಶಾಲೆಗಳು.
  • ಇದರಲ್ಲಿ ಮುಂಬೈ & ಕೋಲ್ಕತಾ ಮಾತ್ರ ಸಂಸ್ಮರಣ ನಾಣ್ಯಗಳನ್ನ ಟಂಕಿಸುತ್ತವೆ.
  • ಹಾಂ, ಅಂದಂಗೆ ಈ ನಾಣ್ಯ ಸಂಗ್ರಹಕಾರರನ್ನ Numismatist ಅಂತಾರೆ ಅನ್ನೋದು ನಿಮಗೆ ಗೊತ್ತು ಅನ್ಕೋತೀನಿ.

ಇದು ನಮ್ಮ ಭಾರತದ ಟಂಕಶಾಲೆಯ ಚಿಹ್ನೆ


:: ಹೆಚ್ಚಿನ ಓದಿಗಾಗಿ ಉಪಯುಕ್ತ ನೆಟ್ ಕೊಂಡಿಗಳು ::




: ರವಿ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ