ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 24, 2010

Commemorative Coins : ಸಂಸ್ಮರಣ ನಾಣ್ಯಗಳುಮೇಲ್ಕಂಡ ಚಿತ್ರದಲ್ಲಿ ಕಾಣುವಂತೆ ನಮ್ಮ ಭಾರತ ಸರ್ಕಾರ ಅನೇಕ ಮಹಾಪುರುಷರನ್ನ ನೆನೆಯುವ, ದಿನಾಚರಣೆಗಳ ವಾರ್ಷಿಕೋತ್ಸವಗಳು, ಸಂಸ್ಥೆಗಳ ಜಯಂತಿ ... ಇತ್ಯಾದಿಗಳನ್ನ ನಾಣ್ಯಗಳ ಹಿಂಬದಿಯ ಮೇಲೆ ಮುದ್ರಿಸಿ ಹಂಚಿದ್ದೂ ಆಗಿದೆ, ನಾವು ಅವನ್ನ ನೋಡಿದ್ದು - ಬಳಸಿದ್ದೂ ಆಗಿದೆ. ಈಗ ಆ ಸಂಸ್ಮರಣಾ ನಾಣ್ಯಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ :  • ಮೊದಲಿಗೆ ತಿಳಿಯಬೇಕಾಗಿರುವ ವಿಷಯ ಸದರಿ ನಾಣ್ಯಗಳನ್ನ Commemorative Coins ಅಂತಾರೆ ಅನ್ನೋದನ್ನ. ಮೊದಲ ಬಾರಿಗೆ ಇವನ್ನ ಭಾರತದ ಮೊದಲ ಪ್ರಧಾನಿ ನೆಹರೂರವರ ಜನ್ಮದಿನದ ಅಂಗವಾಗಿ 1964ರಲ್ಲಿ ಟಂಕಿಸಲಾಯಿತು.
  • ಈ ತರಹದ Commemorative Coins ಗಳು ಸಾಮಾನ್ಯ ಚಲಾವಣೆಗಾಗಿಯೂ ತಯಾರಿಸಬಹುದು ಅಥವಾ ಕೇವಲ ಸಂಗ್ರಹದ ಹವ್ಯಾಸವುಳ್ಳವರಿಗೆಂದೇ ತಯಾರಿಸಬಹುದು.
  • ಕಡಿಮೆ ಮುಖಬೆಲೆಯ ನಾಣ್ಯಗಳನ್ನ ಚಲಾವಣೆಗೆ ಬಿಟ್ಟು ಹೆಚ್ಚಿನ ಮುಖಬೆಲೆಯ(100/- ) ನಾಣ್ಯಗಳನ್ನ ಸಂಗ್ರಹಕ್ಕೆ ಮಾತ್ರ ನೀಡುವುದು ವಾಡಿಕೆ. ಸಾಮಾನ್ಯವಾಗಿ ಸಂಸ್ಮರಣ ಸಂಚಿಕೆಯ ನಾಣ್ಯಗಳ ಮುಖಬೆಲೆ 5 ಪೈಸೆ ಯಿಂದ ಹಿಡಿದ100 ರೂಪಾಯಿ ವರೆಗೆ ಇರುತ್ತದೆ.
  • ಹೀಗೆ ಟಂಕಿಸಲಾಗುವ ನಾಣ್ಯಗಳಿಗಾಗಿ ಬಳಸುವ ಲೋಹವೂ ವ್ಯತ್ಯಾಸವಾಗುತ್ತದೆ. ಕೆಲವೊಮ್ಮೆ ಸಂಗ್ರಹಕ್ಕಾಗಿರುವ ಹೆಚ್ಚಿನ ಮುಖಬೆಲೆಯ ನಾಣ್ಯಗಳನ್ನ ಬೆಳ್ಳಿಯಲ್ಲಿ ತಯಾರಿಸಿ, ಇನ್ನುಳಿದವುಗಳನ್ನ ವಾಡಿಕೆಯಂತೆ ಟಂಕಿಸಲಾಗುತ್ತದೆ.
  • ಸಂಸ್ಮರಣ ಸಂಚಿಕೆಯ ಎಲ್ಲ ನಾಣ್ಯಗಳನ್ನೂ ಚಲಾವಣೆಯಲ್ಲಿ ತರಬೇಕೆಂದೇನಿಲ್ಲ.
  • ಹೀಗೆ ಟಂಕಿಸಲಾಗಿಗುವ ಸಂಸ್ಮರಣ ನಾಣ್ಯಗಳ ಸಂಗ್ರಹ ಹವ್ಯಾಸವಿರುವವರಿಗೆ ಅನುಕೂಲವಾಗಲೆಂದೇ UNC Sets ( Uncirculated Sets ) ( ಚಲಾವಣೆಗೆ ತರದ ನಾಣ್ಯಗಳು ) ಮತ್ತು Proof Sets ( ಚಲಾವಣೆಗೆ ಮುಂಚೆ ಸಂಗ್ರಹಕಾರರಿಗೆಂದೇ ಬಿಡುಗಡೆ ಮಾಡುವ ನಾಣ್ಯಗಳು - ಒಂದು ಚಿತ್ರದ ಹಿಂದಿನ ದಿನದ ಪ್ರೀಮಿಯರ್ ಷೋ ಇದ್ದ ಹಾಗೆ !! ) ಎಂಬೆರಡು ವಿಧದಲ್ಲಿ ನೀಡುವುದು ವಾಡಿಕೆ.
  • ಕೇಂದ್ರ ಸರ್ಕಾರ 2006ರಲ್ಲಿ Security Printing & Minting Corporation of India Ltd. ಅನ್ನ ಸ್ಥಾಪಿಸಿತು. ಇದರ ಅಡಿಯಲ್ಲಿ ದೇಶದ ಎಲ್ಲ 9 ಟಂಕಶಾಲೆಗಳು ( ನೋಟು ಮುದ್ರಣಾಗಾರಗಳನ್ನೂ ಸೇರಿಸಿ ) ಕಾರ್ಯನಿರ್ವಹಿಸುತ್ತವೆ. 
  • ಮುಂಬೈ, ಕೋಲ್ಕತಾ, ಹೈದರಾಬಾದ್ & ನೋಯ್ಡಾ ಇವು ನಾಲ್ಕು ನಮ್ಮ ದೇಶದ ನಾಣ್ಯ ಟಂಕಶಾಲೆಗಳು.
  • ಇದರಲ್ಲಿ ಮುಂಬೈ & ಕೋಲ್ಕತಾ ಮಾತ್ರ ಸಂಸ್ಮರಣ ನಾಣ್ಯಗಳನ್ನ ಟಂಕಿಸುತ್ತವೆ.
  • ಹಾಂ, ಅಂದಂಗೆ ಈ ನಾಣ್ಯ ಸಂಗ್ರಹಕಾರರನ್ನ Numismatist ಅಂತಾರೆ ಅನ್ನೋದು ನಿಮಗೆ ಗೊತ್ತು ಅನ್ಕೋತೀನಿ.

ಇದು ನಮ್ಮ ಭಾರತದ ಟಂಕಶಾಲೆಯ ಚಿಹ್ನೆ


:: ಹೆಚ್ಚಿನ ಓದಿಗಾಗಿ ಉಪಯುಕ್ತ ನೆಟ್ ಕೊಂಡಿಗಳು ::
: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ