ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 30, 2010

Diplomatic Cable Leak

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : Diplomatic Cable Leak ಹಾವಳಿ ; ರಾಜತಾಂತ್ರಿಕ ಸಂಬಂಧಗಳಲ್ಲಿ ಬಿರುಗಾಳಿಸುದ್ದಿಯ ಒಳನೋಟ :

 • ಎಲ್ಲ ದಿನಪತ್ರಿಕೆ , ಸುದ್ದಿವಾಹಿನಿಗಳು ತಮ್ಮ ಸುದ್ದಿವಿತರಣೆ ಮಾಡುವ ಶೈಲಿಯ Sophistication ತೋರಿಸುವ ಇರಾದೆಯಿಂದ ಮೂಲದಲ್ಲಿ ಬಳಕೆಯಾದ ಪದವಾದ Diplomatica Cable / CableGate / CableQuotes ಎಂಬ ಪಾರಿಭಾಷಿಕ ಪದಗಳನ್ನ ಬಳಸುತ್ತಾ ಇರೋದನ್ನ ನೀವೆಲ್ಲ ನಿನ್ನೆ ಮೊನ್ನೆ ಎರಡು ದಿನಗಳಲ್ಲಿ ಓದಿರುತ್ತೀರಿ , ಕೇಳಿರುತ್ತೀರಿ.
 • ಏನಿದು CableGate ? ಅಲ್ಲಿ Cable ಅಂದ್ರೆ ದೂರವಾಣಿಯ Cableಆ ? ಮತ್ತೊಂದಾ ? ಹೌದು. ಒಂದು ರೀತಿ ಅದೇಥರ.
ಪ್ರತಿ ದೇಶ ಜಗತ್ತಿನ ಇತರ ದೇಶಗಳೊಡನೆ ರಾಜತಾಂತ್ರಿಕ ಸಂಬಂಧ ಇರಿಸಿಕೊಳ್ಳುವುದು ರೂಢಿಗತ. ಅಂತೆಯೇ ಸದರಿ ಸಂಬಂಧಗಳ ತುರ್ತಿಗಾಗಿ ಪ್ರತಿ ದೇಶದಲ್ಲಿ ಒಬ್ಬ ರಾಜದೂತ(Ambassador)ನನ್ನ ತಮ್ಮದೇ ಕಚೇರಿ (Embassy) ಸ್ಥಾಪಿಸಿ ಇರಿಸುತ್ತವೆ. ಹೀಗೆ ಸ್ಥಾಪನೆಯಾದ Embassy ಸದಾಕಾಲ ತನ್ನ ಮಾತೃಇಲಾಖೆಯಾದ ವಿದೇಶಾಂಗ ಇಲಾಖೆಯ ಜೊತೆ ಸಂಪರ್ಕದಲ್ಲಿರುತ್ತದೆ. ಅಂದರೆ Foreign Ministry ಯಿಂದ Embassy ಗೆ ಸೂಚನೆಗಳು ಮತ್ತು Embassy ಯಿಂದ Foreign Ministryಗೆ ಮಾಹಿತಿಗಳು ರವಾನೆಯಾಗುತ್ತಿರುತ್ತವೆ.

ಹೀಗೆ ಏರ್ಪಡುವ ಸಂಪರ್ಕ ಪ್ರತಿ ದೇಶದ ಹಿತದೃಷ್ಟಿಗನುಗುಣವಾಗಿ ರಹಸ್ಯ(Classified)ವೆಂದು ಗುರುತಿಸಲ್ಪಟ್ಟು ಸದಾ ತನ್ನಗುಣಧರ್ಮವನ್ನ ಕಾಯ್ದುಕೊಳ್ಳುತ್ತದೆ. ಈ ರೀತಿ ರಹಸ್ಯವಾಗಿ ಕಳುಹಿಸಲ್ಪಟ್ಟ ರಾಜತಾಂತ್ರಿಕ ತಂತಿ ಸಂದೇಶ ( Diplomatic Telegram ) ಗಿರುವ ಇನ್ನೊಂದು ಹೆಸರೇ Diplomatic Cable ಅಥವಾ Embassy Cable.

ಇಲ್ಲಿ Telegram ಅನ್ನುವ ಪದಬಳಕೆಯಾಗಿರುವುದರಿಂದ ವಾಚಕರು ಹಳೆಕಾಲದ telegramನ್ನ ಮನಸಲ್ಲಿ ಮೂಡಿಸಿಕೊಳ್ಳಬಾರದು. ಯಾಕಂದ್ರೆ ಇದೊಂದು ಸೂಚ್ಯವಾಗಿ ಮತ್ತು ಹಿಂದೆ ಬಳಸುತ್ತಿದ್ದ ಸಾಧನದ ನಿಮಿತ್ತ ಸೃಷ್ಟಿಯಾದ ಹೆಸರು. ಅದೇ ಹೆಸರು ಮುಂದುವರೆದಿರುವುದರಲ್ಲಿ ಯಾವುದೇ ಗೊಂದಲ ಬೇಡ.

ಮತ್ತು Cable ಎಂಬ ಪದವೂ ಕೂಡ ಹಳೆಯದೇ ಅನ್ನಿ. ಅದಕ್ಕೆ ಕಾರಣ ಈ ಮೊದಲು ಬಳಸುತ್ತಿದ್ದ ಸಮುದ್ರದಡಿಯಲ್ಲಿ ಸಾಗಿದ್ದ ಕೇಬಲ್ ( Submarine Communication Cable ) ಗಳ ಮೂಲಕ ಸಂದೇಶ ರವಾನೆಯಾಗುತ್ತಿತ್ತು.

ಇಂದು ಸಾಧನಗಳು ಬದಲಾಗಿರಬಹುದು. ಆದರೆ ರೂಪ ಮಾತ್ರ ಅದೇ ಇದೆ. ಅಂದರೆ Text Format. ಅಂದು telegram ಇದ್ದಾಗಲೂ ಈ ಮಾಹಿತಿಗಳು text ರೂಪದಲ್ಲೇ ರವಾನೆಯಾಗುತ್ತಿದ್ದವು. ಇಂದು Satellite Phone ಯುಗದಲ್ಲೂ Text ರೂಪದಲ್ಲೇ ರವಾನೆಯಾಗುತ್ತಿವೆ. ಅಂತೆಯೇ ಮೊನ್ನೆ WikiLeak ಮಾಡಿರುವ Leak ಕೂಡ Document Format ನಲ್ಲಿದ್ದು, ಹಲವು ವರ್ಷಗಳ ಮಾಹಿತಿ ಅದಾಗಿರುವುದರಿಂದ ಮತ್ತು ಅನೇಕ Embassyಗಳನ್ನ ಅದು ಒಳಗೊಂಡಿವುದರಿಂದ ಅಪಾರ ಪ್ರಮಾಣದಲ್ಲಿದೆ. ( ಇಂತಹ ಸಂದೇಶಗಳು Encrypted ಇರುತ್ತವೆ ಅನ್ನೋದನ್ನ ಮರೆಯಬಾರದು.) [Encrypted = ಸಂದೇಶ ಗೂಢಲಿಪಿಯಲ್ಲಿದ್ದು ಮಾಹಿತಿ ನೋಡಬೇಕೆಂದರೂ ಅದಕ್ಕೊಂದು Password ಇರುತ್ತದೆ.]

" ಮತ್ತೆ ಮಾಹಿತಿ Encrypted ಇದ್ದು Classified ಅನ್ನಿಸಿಕೊಂಡಾಗ್ಯೂ LEAK ಹೇಗಾಯಿತು  ? " ಅನ್ನುವ ಪ್ರಶ್ನೆ ನಿಮಗೆ ಕಾಡಿ ಉತ್ತರ ಹುಡುಕಲು ನೀವು ತಯಾರಾಗಿದ್ದರೆ ಅಮೆರಿಕಾ ಸರ್ಕಾರ & CIA ನಿಮಗೆ ಸಂಪೂರ್ಣ ಬೆಂಬಲ ನೀಡುತ್ತದೆ !! ತಯಾರಾಗಿದೀರಾ !?
 • ಹೀಗೆ ಅಮೆರಿಕಾದ ವಿದೇಶಾಂಗ ಇಲಾಖೆ ಮತ್ತು ಅದರ ಅಧೀನದ Embassy ಹಾಗೂ Ambassador ಗಳ ನಡುವೆ ಹರಿದಾಡಿದ ಮಾಹಿತಿಗಳೇ ಮೊನ್ನೆ ರವಿವಾರ ಸ್ಫೋಟಗೊಂಡಿದ್ದು.
 • ಆದರೆ ನಮ್ಮ ಪತ್ರಿಕೆಗಳು / ಸುದ್ದಿವಾಹಿನಿಗಳು ತಮ್ಮ ಸುದ್ದಿ ಸ್ಫೋಟಿಸುವ ಭರಾಟೆಯಲ್ಲಿ, ವಾಚಕರ ತಲೆಗೆ ಹುಳ ಬಿಡುವ ಪದವಾಗಿರುವ Diplomatic Cable Leak ಅಂಥವುಗಳನ್ನ ಮೇಲಿಂದ ಮೇಲೆ ಬಳಸಿದರೂ ಅದರ ಅರ್ಥವನ್ನ ತಿಳಿಹೇಳದೇ ; ತಮ್ಮ Sophisticationಗೆ ಗರಿ ಎಂಬಂತೆ ಮಗುಮ್ಮಾಗಿ ಇರುವುದ ತಪ್ಪಲ್ಲವೇ ?
 • ಪತ್ರಿಕೆಗಳು / ಸುದ್ದಿವಾಹಿನಿಗಳು ತಮಗೆ ಲಭ್ಯವಾಗಿರುವ ಸುದ್ದಿಯನ್ನ ಸ್ಫೋಟಿಸುವ ಮೊದಲು ತಮ್ಮ ಸುದ್ದಿ Encrypted(ವಾಚಕರಿಗೆ ತಲೆಬುಡ ತಿಳಿಯದ ಹಾಗಿರುವುದನ್ನ) ಆಗಿಲ್ಲದಿರುವುದನ್ನ ಖಚಿತಪಡಿಸಿಕೊಳ್ಳುವುದು ಒಳಿತಲ್ಲವೇ ?

: ರವಿ

ಇಟಲಿ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 09

0 ಪ್ರತಿಕ್ರಿಯೆಗಳು
ಸುದ್ದಿ : ಶೈಕ್ಷಣಿಕ ಹಣಕಾಸು ನೆರವನ್ನ ಕಡಿತಗೊಳಿಸಲು ತೀರ್ಮಾನಿಸಿದ ಇಟಲಿ ಸರ್ಕಾರದ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ


ಸುದ್ದಿಯಲ್ಲಿರುವ ಸ್ಥಳ ನಕ್ಷೆ :


ಜಾಗತಿಕ ನಕ್ಷೆಯಲ್ಲಿ ಇಟಲಿ

ಇಟಲಿ ನೆರೆಹೊರೆ

ವ್ಯಾಟಿಕನ್ ಸಿಟಿ
ಆಲ್ಪ್ಸ್ ಪರ್ವತಗಳ ವ್ಯಾಪ್ತಿ


 • ದಕ್ಷಿಣ ಮಧ್ಯ ಯುರೋಪ್ ನಲ್ಲಿ ಸ್ಥಿತಗೊಂಡಿರುವ ಇಟಲಿ, ಉತ್ತರದಲ್ಲಿ ಫ್ರಾನ್ಸ್, ಸ್ವಿಟ್ಜರಲ್ಯಾಂಡ್, ಆಸ್ಟ್ರಿಯಾ & ಸ್ಲೊವೇನಿಯಾ ದೇಶಗಳಿಂದ ಸುತ್ತುವರಿಯಲ್ಪಟ್ಟಿದೆ. ದಕ್ಷಿಣಕ್ಕೆ ಸಿಸಿಲಿ & ಸಾರ್ಡೇನಿಯಾ ದ್ವೀಪಗಳಿದ್ದು ಅವೂ ಕೂಡ ಇಟಲಿಯ ಅಧೀನ ಪ್ರದೇಶಗಳೇ ಆಗಿವೆ.
 • ವಿಶೇಷತೆಯೆಂದರೆ : ಈ ದೇಶದ ಒಂದು ಪುಟ್ಟ ನಗರದಂತಿರುವ ವ್ಯಾಟಿಕನ್ ಸಿಟಿ, ಜಾಗತಿಕವಾಗಿ ದೇಶವೆಂದು ಮಾನ್ಯ ಮಾಡಲ್ಪಟ್ಟಿದೆ. ಹೀಗಾಗಿ ಅದನ್ನೂ ನೆರೆಯ ದೇಶವೆಂದೇ ಹೇಳಬೇಕು !!
 • ದೇಶದ ಉತ್ತರದ ಗಡಿಯಗುಂಟ ಚಾಚಿಕೊಂಡಿರುವ ಆಲ್ಪ್ಸ್ ಪರ್ವತಗಳು ಉತ್ತರದ ದೇಶಗಳ ನಡುವಿನ ಗಡಿರೇಖೆಯಾಗಿ ಕೆಲಸ ಮಾಡುತ್ತಿವೆ. ಥೇಟ್ ನಮ್ಮ ಹಿಮಾಲಯದ ಹಾಗೆ. ಈ ಪ್ರದೇಶದಲ್ಲಿರುವ Mont Blanc ದೇಶದ ಅತಿ ಎತ್ತರದ ಪರ್ವತ.
 • ದೇಶದ ಅತಿ ದೊಡ್ಡ ನದಿ ಪೋ(Po), ಫ್ರಾನ್ಸ್ ದೇಶಕ್ಕೆ ಅಂಟಿಕೊಂಡಿರುವ ಪಶ್ಚಿಮ ಗಡಿಯಲ್ಲಿ (ಆಲ್ಪ್ಸ್ ನಲ್ಲಿ) ಹುಟ್ಟಿ ಪೂರ್ವದೆಡೆಗೆ ಹರಿದು ಅಡ್ರಿಯಾಟಿಕ್ ಸಮುದ್ರ ಸೇರುತ್ತದೆ.
 • ಸದರಿ ದೇಶ ಯುರೇಷಿಯನ್ ಪ್ಲೇಟ್ & ಆಫ್ರಿಕನ್ ಪ್ಲೇಟ್ ಸಂಧಿಸುವ ಸ್ಥಳದಲ್ಲಿರುವುದರಿಂದ ಜೀವಂತ ಜ್ವಾಲಾಮುಖಿಗಳು ಈ ದೇಶದಲ್ಲಿ ಕೆಲವಿವೆ.

: ರವಿ

Nov 29, 2010

ಇರಾನ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 08

0 ಪ್ರತಿಕ್ರಿಯೆಗಳು
ಸುದ್ದಿ : ಇರಾನ್ ನಲ್ಲಿ ಬಾಂಬ್ ಸ್ಫೋಟಕ್ಕೆ ಅಣು ವಿಜ್ಞಾನಿ ಬಲಿ

ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ಜಾಗತಿಕ ನಕ್ಷೆಯಲ್ಲಿ ಇರಾನ್


ಇರಾನ್ ನೆರೆಹೊರೆ
 • ಜಗತ್ತಿನ 18ನೇ ದೊಡ್ಡ ದೇಶ. ಅಧಿಕೃತವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಎನಿಸಿಕೊಂಡರೆ ಸಾಂಸ್ಕೃತಿಕವಾಗಿ ಪರ್ಷಿಯಾ ಎಂಬ ಹೆಸರು ಈಗಲೂ ಚಾಲ್ತಿಯಲ್ಲಿದೆ.
 • ಅರ್ಮೇನಿಯಾ, ಅಜರ್ಬೈಜಾನ್, ಕ್ಯಾಸ್ಪಿಯನ್ ಸಮುದ್ರ ಮತ್ತು ತುರ್ಕಮೆನಿಸ್ತಾನ್ ಇವು ಉತ್ತರದಲ್ಲಿ ದೇಶವನ್ನ ಸುತ್ತುವರೆದಿದ್ದರೆ ; ಪೂರ್ವದಲ್ಲಿ ಅಫ್ಘಾನಿಸ್ತಾನ್ & ಪಾಕಿಸ್ತಾನ ; ದಕ್ಷಿಣಕ್ಕೆ ಪರ್ಷಿಯನ್ ಕೊಲ್ಲಿ ಸಮುದ್ರ ; ಪಶ್ಚಿಮಕ್ಕೆ ಇರಾಕ್ ಮತ್ತು ಟರ್ಕಿ ದೇಶಗಳಿಂದ ಸುತ್ತುವರೆಯಲ್ಪಟ್ಟಿದೆ. ಕುವೈತ್ ಕೂಡ ನೆರೆದೇಶವೇ.
 • ಈ ದೇಶದ ತುಂಬೆಲ್ಲಾ ಗುಡ್ಡ ಬೆಟ್ಟಗಳ ಸಾಲುಗಳು ಹರಡಿಕೊಂಡಿವೆ.
 • ಉತ್ತರದ ಭಾಗದಲ್ಲಿ ಅರಣ್ಯವಿದ್ದು , ಪೂರ್ವಕ್ಕೆ ಮರುಭೂಮಿಯಿದೆ.

: ರವಿ

ಏನಿದು ವಿಕಿ ಲೀಕ್ಸ್ ? ( What Is WikiLeaks ? )

2 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಅಮೆರಿಕಾದ 'ನೀತಿ'ಗಳನ್ನ ನಗ್ನಗೊಳಿಸಿದ ವಿಕಿಲೀಕ್ಸ್ಸುದ್ದಿಯ ಒಳನೋಟ :

 • ಮೊಟ್ಟ ಮೊದಲಿಗೆ ತಿಳಿದುಕೊಳ್ಳಬೇಕಿರುವುದು : ವಿಕಿಲೀಕ್ಸ್ ಒಂದು ಪತ್ರಿಕಾ ಮಾಧ್ಯಮ.
 • ಇದಾದ ನಂತರ ತಿಳಿಯಬೇಕಿರುವುದು : Wiki Leaks ಸಂಸ್ಥೆಗೂ Wikipedia ( Wikimedia Foundation ) ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂಬುದು.
 • ಸನ್ ಶೈನ್ ಪ್ರೆಸ್ ಇದರ ಮಾಲೀಕ.
 • ಜೂಲಿಯನ್ ಅಸ್ಸಾಂಜ್ ಎಂಬ ಆಸ್ಟ್ರೇಲಿಯಾ ಪ್ರಜೆ ಇದರ ಸಂಸ್ಥಾಪಕ ಎಂದು ಅನೇಕ ಕಡೆ ವರದಿಯಾಗಿದ್ದರೂ, ಇದರ ಹಿಂದೆ ಬಹುರಾಷ್ಟ್ರೀಯ ಮೆದುಳುಗಳ ಬುದ್ಧಿ ಚಾತುರ್ಯವಿದೆ. ಈ ಸಂಸ್ಥೆಯ ಸ್ಥಾಪನೆಯ ಹಿಂದೆ ಚೀನೀ Dissident ಗಳಿದ್ದಾರೆ , ಪತ್ರಕರ್ತರಿದ್ದಾರೆ , ಗಣಿತಜ್ಞರಿದ್ದಾರೆ , US, Taiwan, Europe, Australia & South Africaದ ಕಂಪ್ಯೂಟರ್ ತಜ್ಞರಿದ್ದಾರೆ ...ಎಂದು ಇನ್ನೊಂದು ವರದಿ ಹೇಳುತ್ತದೆ.
 • 2006ರಲ್ಲಿ ಪ್ರಾರಂಭವಾದ ಈ ಸಂಸ್ಥೆಯ ಧ್ಯೇಯ ತಿಳಿಯಬೇಕಂದ್ರೆ ಅದರ ಸ್ಲೋಗನ್ ಓದಿದರೆ ಸಾಕು :  
Wiki Leaks : We Open Governments

ಜೂಲಿಯನ್ ಅಸ್ಸಾಂಜ್
 • ಪತ್ರಿಕಾ ಮಾಧ್ಯಮಕ್ಕೆ ವಿವಿಧ ರೂಪಗಳಿರುವ ಹಾಗೆ (ಕಾಗದ, ರೇಡಿಯೋ, ಟಿವಿ..) ಸದರಿ ಪತ್ರಿಕಾ ಮಾಧ್ಯಮದ ರೂಪ : ಅಂತರಜಾಲ ತಾಣ. ಇದೊಂದು Document Archive Website Cum Newspaper.
 • ಅದು ಹೇಗೆ ಇವರು ಸರ್ಕಾರದ Classified (ರಹಸ್ಯ) ಮಾಹಿತಿಗಳನ್ನ ಹೀಗೆ ಜಗತ್ತಿನ ಮುಂದಿಡುತ್ತಾರೆ ? ಅದು ಕಾನೂನು ಬಾಹಿರವಲ್ಲವೇ ? ಎಂಬುದು ನಿಮ್ಮ ಸಂದೇಹವಾಗಿದ್ದರೆ : 
 

ಮೊದಲು ತಿಳಿಯಬೇಕಿರುವುದು, ವೆಬ್ ಸೈಟ್ ಒಂದು ಹೇಗೆ ಕೆಲಸ ಮಾಡುತ್ತದೆ ಅಂತ.
ಪ್ರಥಮತರವಾಗಿ ನೀವು ತೆರೆಯಬೇಕೆಂದಿರುವ ವೆಬ್ ಸೈಟ್ ನ ಉದ್ದೇಶವನ್ನ ನಿಕ್ಕಿ ಮಾಡಿಕೊಳ್ಳಬೇಕು. ಅದು ಯಾಕಂದ್ರೆ ನಿಮ್ಮ ಉದ್ದೇಶಕ್ಕೆ ತಕ್ಕ ಹಾಗೆ Storage, Site Address Extension ... ಇತ್ಯಾದಿಗಳಿರುತ್ತವೆ. ಅಂದರೆ ನೀವು ದಿನೇ ದಿನೇ ಹೊಸ ಹೊಸ ಮಾಹಿತಿಗಳನ್ನ ಅಲ್ಲಿ ಸೇರಿಸುವವರಾಗಿದ್ದರೆ ನಿಮಗೆ ಒಂದೆರಡು GB ಗಳು ಸಾಲದೇ ಹೋಗಬಹುದು. ಆಮೇಲೆ, ಸೈಟ್ ನ ಮಾಹಿತಿಗನುಗುಣವಾಗಿ Site Address Extension ಆರಿಸಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ವೆಬ್ ಸೈಟ್ ಅನ್ನ ಶೈಕ್ಷಣಿಕ ಉದ್ದೇಶಗಳಿಗೆ ಬಳಸಬೇಕು ಅಂತಿದ್ದರೆ, www.shikshana.edu ಅಥವಾ www.shikshana.ac.in  ಅಂತಲೂ, ನೀವು TV Channel ಒಂದರ ಒಡೆಯರಾಗಿದ್ದು, ಅದನ್ನ ವೆಬ್ಬಾಗಿಲಿನ ಮೂಲಕ ತೋರಿಸುವ ಉಮೇದಿಯಿದ್ದರೆ, www.kannadachannel.tv ಅಂತಲೂ ...ಇತ್ಯಾದಿ  ಎಲ್ಲಾ ಸಿಗುತ್ತವೆ. ನೀವಿಲ್ಲಿ ಗಮನಹರಿಸಬೇಕಾದ ಅಂಶವೆಂದರೆ ನಿಮ್ಮ ವೆಬ್ ತಾಣದ ಹೆಸರು ನೀವು ನೀಡಬಯಸಿರುವ ನಿಮ್ಮ ತಾಣದ ಮಾಹಿತಿಗಳ ಬಗ್ಗೆ ಒಂದು ಪದದಲ್ಲಿ ಸೂಚಿಸುವಂತಿದ್ದು, ಆಕರ್ಷಣೀಯವಾಗಿರಬೇಕು. ಇದಿಷ್ಟು ವೆಬ್ ವಿಳಾಸದ ಹೆಸರಿನ ಮಾತಾಯಿತು.
ಮುಂದಿನ ಹೆಜ್ಜೆ ನಿಮ್ಮ ವೆಬ್ ಪುಟದ ವಿನ್ಯಾಸ. ಇದಕ್ಕೆ  WE DO WEB DESIGNING  HERE ಎಂಬ ಬೋರ್ಡ್ ಹಾಕಿರುವ ಅಂಗಡಿಗಳಿಗೆ ಹೋಗಬೇಕು. ಅವರು ನಿಮ್ಮ ತಾಣದ ಮುಖಪುಟ ಹೇಗಿರಬೇಕು, ವೆಬ್ಬಾರ್ಥಿ ನಿಮ್ಮ ತಾಣದ ಮಾಹಿತಿಗಳನ್ನ ಹೆಕ್ಕುವ ವೈವಿಧ್ಯ ವಿಧಗಳು .. ಇತ್ಯಾದಿಗಳನ್ನೊಳಗೊಂಡ Menu Card ಅನ್ನ ನಿಮ್ಮ ಮುಂದೆ ತೆರೆದಿಡುತ್ತಾರೆ.  ಅಷ್ಟೇ ಅಲ್ಲದೆ ನಿಮ್ಮ ಪರವಾಗಿ ಅವರೇ ತಾಣವನ್ನ ಕಾಲದಿಂದ ಕಾಲಕ್ಕೆ Update ಕೂಡ ಮಾಡುತ್ತಾರೆ. ನಿಮ್ಮ ಜೇಬಿಗೆ ಸರಿಹೊಂದುವ, ನಿಮ್ಮ ಮನಕ್ಕೊಪ್ಪುವ ವಿನ್ಯಾಸದ, ನಿಮ್ಮ ತಾಣ ಸಾರಬೇಕಿರುವ ಧ್ಯೇಯ ತಿಳಿಸಲನುಕೂಲವಾಗುವ ಮೆದು / ಗಾಢ ಬಣ್ಣ .. ಇತ್ಯಾದಿ ಅಂಶಗಳನ್ನ ನೋಡಿಕೊಂಡು ಅಂತಿಮಗೊಳಿಸಬೇಕು. ಇದಿಷ್ಟನ್ನ ಕೇಳಿದ ನಂತರ Website ಬಗ್ಗೆ ನಿಮಗೊಂದು ಕಲ್ಪನೆ ಮೂಡಿರಬಹುದು. ಆ ಕಲ್ಪನೆಯನ್ನ ಗಟ್ಟಿಗೊಳಿಸಲು, ವಿವಿಧ ರಂಗದವರು ತಮ್ಮ ಧ್ಯೇಯ & ಉದ್ದೇಶ & ಕಲ್ಪನಾ ಲಹರಿಯನ್ನ ಸಾರುವ ತಾಣಗಳನ್ನ ಹೇಗೆ ವಿನ್ಯಾಸಗೊಳಿಸಿಕೊಂಡಿದ್ದಾರೆ ಅಂತ ಕೆಲವು ಉದಾಹರಣೆಗಳ ಮೂಲಕ ನೋಡೋಣ ಬನ್ನಿ :
ವಿಷಯವನ್ನ ನಿಕ್ಕಿ ಮಾಡಿಕೊಂಡಾಯಿತು. ಮಾಹಿತಿಯನ್ನ ಬರೆದಿಟ್ಟುಕೊಂಡಾಯಿತು.  ಒಪ್ಪವಾದ ಓರಣವೂ ಮಾಡಿ ಆಯಿತು. ಇಷ್ಟು ಮಾತ್ರ ಆದರೆ ನೀವು ನಿರ್ಮಿಸಿದ ತಾಣವನ್ನ ನಿಮ್ಮ ಮನೆಯ ಏಕೈಕ ಕಂಪ್ಯೂಟರ್ ಪರದೆಯ ಮೇಲೆ ನೀವೊಬ್ಬರು ಮಾತ್ರ ನೋಡಲು ಸಾಧ್ಯವಾಗುತ್ತದೆ. ನಿಮ್ಮ ಉದ್ದೇಶ ನಿಮ್ಮ ಸಂದೇಶವನ್ನ ಜಗದಗಲ ಸಾರುವುದು ತಾನೇ ? ಹಾಗಿದ್ದರೆ, ಮುಂದಿನ ಹಂತವಾಗಿ ನೀವು ಸಂಗ್ರಹಿಸಿ, ಸಾರಬಯಸಿರುವ ಮಾಹಿತಿಯನ್ನ ಜಗದೆಲ್ಲಾ ವೆಬ್ಬಿಗರಿಗೆ ಸಿಗುವ (Access) ಜಾಗದಲ್ಲಿ ಇರಿಸಬೇಕು. ಅದುವೇ Web Hosting.

WE DO WEBSITE HOSTING : ಅಂತ ನೀವು ಎಲ್ಲಾದರೂ ವಿಜ್ಞಾಪನೆಗಳನ್ನ ನೋಡಿಯೇ ಇರುತ್ತೀರಿ. ಅವರ ಕೆಲಸ ಅಂದ್ರೆ  ವೆಬ್ ಸೈಟ್  ಒಂದರ ಸಮಗ್ರ ಮಾಹಿತಿಯನ್ನ ಜಗತ್ತಿನೆಲ್ಲೆಡೆಯ ಜನರಿಗೆ ನಿಲುಕುವ ಹಾಗೆ ಒಂದೆಡೆ(Serverನಲ್ಲಿ) ಸಂಗ್ರಹಿಸಿಡುವುದು. ಈ ಕೆಲಸ ಮಾಡಲು ಒಂದು Host Site ಅಂತ ಇರುತ್ತದೆ. ಅದು ನಿಮ್ಮ ತಾಣದ ಎಲ್ಲ ಮಾಹಿತಿಗಳನ್ನ ಒಂದೆಡೆ ಕೂಡಿಡುವ ಕೆಲಸ ಮಾಡುತ್ತದೆ. ಅಂದರೆ ನೀವು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಆ ತಾಣವನ್ನ ಜಾಲಾಡಲು ಪ್ರಾರಂಭಿಸಿದರೂ, ಸದರಿ Host ನಿಂದ ನಿಮಗೆ ಮಾಹಿತಿ ರವಾನೆಯಾಗುತ್ತದೆ. ಹಾಗೆ ನಿಮಗೆ ಲಭ್ಯವಾಗುವ ಮಾಹಿತಿ ಕೂಡಿಡುವ ಜಾಗ ತುಂಬಾ ದುಬಾರಿಯಾಗಿದ್ದು ನನ್ನ ತಿಳುವಳಿಕೆಯ ಪ್ರಕಾರ 1GB Storage ಗೆ ಮತ್ತು 1 ವರ್ಷದ ಅವಧಿಗೆ ರೂ.10000/-. ಈ ದುಬಾರಿ ವೆಚ್ಚವನ್ನ ನಿಭಾಯಿಸಲಿಕ್ಕಾಗದ ಮತ್ತು ಹೊಸತನವನ್ನ ಹಂಚುವ ಹುಮ್ಮಸ್ಸಿನ ನಮ್ಮಂಥವರಿಗೆಂದೇ ಇಂದು Blog ಎಂಬ PseudoWebsite ಗಳು ಸೃಷ್ಟಿಯಾಗಿರುವುದು. Blog ಗಳು ಉಚಿತ Storage ನೀಡುವುದಲ್ಲದೇ, ಅನೇಕ ವಿಶಿಷ್ಟ ವಿನ್ಯಾಸಗಳ ಮೂಲಕ ನಿಮ್ಮ ಮನದ ಲಹರಿಯನ್ನ ಹರಿಯಬಿಡಲಿಕ್ಕೆ ಸಹಾಯಕವಾಗಿವೆ. ಇಂತಿಪ್ಪ Blog ಲೋಕದ ಕೆಲವು ಉದಾಹರಣೆಗಳನ್ನ ನೋಡೋಣ :
ಸದರಿ Host ಗಳಲ್ಲಿ ನೀವು ನಿಮ್ಮಿಷ್ಟದ ಮಾಹಿತಿಯನ್ನ ಸೇರಿಸುವ ಸ್ವಾತಂತ್ರ್ಯವಿದ್ದರೂ ಕೂಡ, Website Host Site ಎಂಬುದು ಗೋದ್ರೇಜ್ ತಿಜೋರಿಯ ಹಾಗೆ ಸುರಕ್ಷಿತ ತಾಣವೇನಲ್ಲ. ತಿಜೋರಿಗಾದರೆ ಕೀಲಿಕೈ ನಿಮ್ಮ ಬಳಿ ಇರುತ್ತದೆ. ಆದರೆ ಇಲ್ಲಿ ಹಾಗಲ್ಲ. ನಿಮಗೆ ತಿಳಿದಿದೆಯೋ ಇಲ್ಲವೋ, ಪ್ರತಿ ದೇಶದ ಅಧಿಕೃತ Intelligence Agency ಯವರು ತಮ್ಮ ದೇಶದಲ್ಲಿ ನೆಲೆಗೊಂಡಿರುವ Serverಗೆ ನಂಟಸ್ತಿಕೆ ಹೊಂದಿರುವ ಯಾವುದೇ ಅಂತರಜಾಲ ತಾಣದ ಆಗುಹೋಗುಗಳನ್ನ ತಮ್ಮ ಗಸ್ತಿನಲ್ಲಿಡಬಹುದು. ನೀವು ಸೇರಿಸುವ ಮಾಹಿತಿ ಆಕ್ಷೇಪಾರ್ಹವಾಗಿದ್ದರೆ, ನಿಮ್ಮ ತಾಣವನ್ನ ಸಾರ್ವಜನಿಕರ ಬಳಕೆಯಿಂದ ದೂರವಿಡುವ ಅಥವಾ ಅದನ್ನ ತೆಗೆದೇ ಹಾಕುವ ಸಾಧ್ಯತೆ ಇರುತ್ತದೆ.

 

ವಿಷಯ ಹೀಗಿರುವಾಗ, ವಿಕಿಲೀಕ್ಸ್ ಜಗದ ದೊಡ್ಡಣ್ಣನನ್ನ ಹೀಗೆ ಬತ್ತಲೆ ಮಾಡಿತಲ್ಲಾ !! ಈ ತಾಣಕ್ಕೆ ವ್ಹಾ ! ಎಂಥ ಮೀಟರ್ !! ಅಂತ ನಿಮ್ಮ ಉದ್ಗಾರವಾದರೆ, ಇಲ್ಲಿದೆ ಉತ್ತರ.

ಮೇಲಿನ ಪ್ಯಾರಾದಲ್ಲಿ ಗಮನಿಸಬೇಕಾದ ಅಂಶ ಎಂದರೆ ...ತಮ್ಮ ದೇಶದಲ್ಲಿ ನೆಲೆಗೊಂಡಿರುವ Server... ಎಂಬುದು. ಈ Clause ಏನಿದೆಯಲ್ಲಾ ಇದೇ ವಿಕಿಲೀಕ್ಸ್ ಗೆ ವರವಾಗಿ ಪರಿಣಮಿಸಿರುವುದು. ಜೂಲಿಯನ್ ಅಸ್ಸಾಂಜ್ ಪ್ರಕಾರ ಸದರಿ ವಿಕಿಲೀಕ್ಸ್ ತಾಣದ Host Site Central Server ಸ್ವೀಡನ್ ದೇಶದಲ್ಲಿದೆ. ಅದರಲ್ಲಿ ಮುಖ್ಯವಾಗಿ PRQ ಎಂಬ ಅಸಾಧ್ಯ ಛಾತಿಯುಳ್ಳ Website Hosting ಕಂಪೆನಿಯ ಸಂರಕ್ಷಣೆಯಲ್ಲಿದೆ. ಸದರಿ PRQ ಸಂಸ್ಥೆ, ತನ್ನ ಮುಖಪುಟದಲ್ಲಿ ತನ್ನ ಸಾಮರ್ಥ್ಯದ ಬಗ್ಗೆ ಹೇಳುತ್ತಾ ಏನು ಹೇಳುತ್ತದೆ ಗೊತ್ತಾ ?
 1. Refugee Hosting
 2. Confidentiality
 3. Technical Proficiency
ಇವಿಷ್ಟು ತನ್ನ ಅಗ್ಗಳಿಕೆಗಳು ಎಂದಿದೆ. (( ನೀವೂ ಓದಿ : ಇಲ್ಲಿ ಕ್ಲಿಕ್ಕಿಸಿ )) ಇದರ ಜೊತೆಗೆ ಅತಿ ಮುಖ್ಯ ಅಂಶವೇನೆಂದರೆ ಸ್ವೀಡನ್ ದೇಶದ ಕಾನೂನಿನ ಪ್ರಕಾರ ತನ್ನ ದೇಶದಲ್ಲಿ ನೆಲೆಗೊಂಡಿರುವ ಯಾವುದೇ ಪತ್ರಿಕಾ ಮಾಧ್ಯಮಕ್ಕೆ ಅದು ಸಂಗ್ರಹಿಸಿ ಬಿತ್ತರಿಸಿದ ಸುದ್ದಿಯ ಮೂಲ ಯಾವುದು ಅಂತ ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಇದಕ್ಕೂ ಮಿಗಿಲಾಗಿ ತನ್ನ ದೇಶದಲ್ಲಿ ನೆಲೆಗೊಂಡಿರುವ ಅಂಥ ಸಮೂಹ ಮಾಧ್ಯಮಗಳಿಗೆ ಕಾನೂನು ರೀತ್ಯಾ ರಕ್ಷಣೆ ನೀಡುವ ಜವಾಬ್ದಾರಿಯನ್ನೂ ಅಲ್ಲಿನ ಸರ್ಕಾರ ಹೊತ್ತಿದೆ. ಇವೆರಡು ಅಂಶಗಳನ್ನ ಆಧರಿಸಿ ವಿಕಿಲೀಕ್ಸ್ ಸಂಸ್ಥೆ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸುದ್ದಿಗಳನ್ನ ಸ್ಫೋಟಿಸುತ್ತಿದೆ.

ಇಷ್ಟು ಸಾಕು ಈ ವಿಕಿ ಲೀಕ್ಸ್ ಪತ್ರಿಕೆಗೆ ಇಂಥ ಭಯಂಕರ ಛಾತಿ ಹೇಗೆ ಬಂತು ಅಂತ ತಿಳಿಯಲಿಕ್ಕೆ. ಅಲ್ವಾ ?
 • ಇಲ್ಲಿ ನೀಡಿರುವ ಮಾಹಿತಿಗೆ ಪೂರಕವಾಗಿ ನಿಮಗೆ ಏನೇನು ತಿಳಿದಿದೆ ?
 • ನಿನ್ನೆ ರವಿವಾರ ಹೊರ ಬಿದ್ದಿರುವ ಭಯಾನಕ ಸತ್ಯಗಳು ಯಾವುವು ಅಂತ ನೀವು ಪಟ್ಟಿ ಮಾಡಬಲ್ಲಿರಾ ?
 • ಗೊತ್ತಿದ್ರೆ : ಪ್ರತಿಕ್ರಿಯಿಸಲು ಹಿಂಜರಿಯಬೇಡಿ.

: ರವಿ

  Nov 24, 2010

  ನ್ಯೂಝಿಲ್ಯಾಂಡ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 07

  0 ಪ್ರತಿಕ್ರಿಯೆಗಳು
  ಸುದ್ದಿ : ನ್ಯೂಝಿಲ್ಯಾಂಡ್ ನ ಗಣಿಯಲ್ಲಿ ಸಿಕ್ಕಿಕೊಂಡಿದ್ದ ಗಣಿಗಾರರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.  ಸುದ್ದಿಯಲ್ಲಿರುವ ಸ್ಥಳ ನಕ್ಷೆ :

  ಜಾಗತಿಕ ನಕ್ಷೆಯಲ್ಲಿ ನ್ಯೂಝಿಲ್ಯಾಂಡ್ ನ ಸ್ಥಾನ
  • ಜಗತ್ತಿನ ಒಟ್ಟು 192 ದೇಶಗಲ್ಲಿ ಸುಮಾರು 47 ದ್ವೀಪ ದೇಶಗಳಿವೆ. ಅಂಥ ದ್ವೀಪ ದೇಶಗಳಲ್ಲಿ ವಿಸ್ತೀರ್ಣದಲ್ಲಿ ಆರನೇ ಸ್ಥಾನದಲ್ಲಿದೆ ನ್ಯೂಝಿಲ್ಯಾಂಡ್.
  • ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಆಗ್ನೇಯಕ್ಕಿರುವ ಈ ದೇಶ ಎರಡು ಭೂಭಾಗಳಲ್ಲಿ ವಿಭಾಗಿಸಲ್ಪಟ್ಟಿದೆ, ಉತ್ತರ ದ್ವೀಪ & ದಕ್ಷಿಣ ದ್ವೀಪ(ವಿಸ್ತೀರ್ಣದಲ್ಲಿ ದೊಡ್ಡದು) ಎಂದು. ಆದರೆ ಸದರಿ ದೇಶವನ್ನ ಸುತ್ತುವರೆದಿರುವ ಸಮುದ್ರ, ತಾಸ್ಮಾನ್ ಸಮುದ್ರ.  ಅಷ್ಟೇ ಅಲ್ಲದೇ ದೇಶ ಅನೇಕ ಚಿಕ್ಕ ಚಿಕ್ಕ ದ್ವೀಪಗಳನ್ನ ಹೊಂದಿದೆ.
  • ಸ್ಥಳೀಯ ಭಾಷೆಯಲ್ಲಿ ಈ ದೇಶಕ್ಕೆ Aotearoa ಎಂಬ ಹೆಸರಿದ್ದು ಅರ್ಥ land of the long white cloud ಎಂದಾಗುತ್ತದೆ.
  • ಯುರೋಪಿನಿಂದ ಬಂದವರೇ ಈ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ದೇಶದ ಸ್ಥಳೀಯ ಜನಾಂಗ (ಮಾವೋರಿ-maori)ಅಲ್ಪಸಂಖ್ಯಾತವಾಗಿದೆ.
  • ಉತ್ತರ ಮತ್ತು ದಕ್ಷಿಣ ಭೂಭಾಗಗಳು ಕುಕ್ ಜಲಸಂಧಿಯಿಂದ ಬೇರ್ಪಟ್ಟಿವೆ.
  • ಇಲ್ಲಿನ ಭೂಭಾಗ ಕನಸಿನ ತಾಣವೆಂಬಂತಿದ್ದು, ಅನೇಕ ಚಲನಚಿತ್ರಗಳಿಗೆ 'ಹಿನ್ನೆಲೆ'ಯಾಗಿದೆ.

   
  : ರವಿ

  Nov 23, 2010

  ಕಾಂಬೋಡಿಯಾ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 06

  0 ಪ್ರತಿಕ್ರಿಯೆಗಳು
  ಸುದ್ದಿ : ಕಾಂಬೋಡಿಯಾದಲ್ಲಿ ಕಾಲ್ತುಳಿತ ; 300ಕ್ಕೂ ಹೆಚ್ಚು ಸಾವು.


  ಸುದ್ದಿಯಲ್ಲಿರುವ ಸ್ಥಳ ನಕ್ಷೆ :

  ಜಾಗತಿಕ ನಕ್ಷೆಯಲ್ಲಿ ಕಾಂಬೋಡಿಯಾದ ಸ್ಥಾನ
  ನಮ್ಮನೆ & ನೆರೆ ಹೊರೆಯವರು


  • ಕಾಂಬೋಡಿಯಾ ದೇಶದ ಭೂಭಾಗ ಥಾಯ್ಲೆಂಡ್, ಲಾವೋಸ್ ಮತ್ತು ವಿಯೆಟ್ನಾಂ ನಿಂದ  ಸುತ್ತುವರಿಯಲ್ಪಟ್ಟಿದ್ದರೆ ಪಶ್ಚಿಮದ ಕಡೆ ಥಾಯ್ಲೆಂಡ್ ಗಲ್ಫ್ ನಿಂದ ಸುತ್ತುವರಿಯಲ್ಪಟ್ಟಿದೆ.
  • Lacustrine Plain ಈ ದೇಶದ ಭೌಗೋಳಿಕ 'ಆಕರ್ಷಣೆ'ಗಳಲ್ಲೊಂದು. ಭಾರತದ ಕಾಶ್ಮೀರ ಕಣಿವೆ ಒಂದು ಉದಾಹರಣೆ. ಅಂದಹಾಗೆ Lacustrine Plain = ಕೆಲವೊಂದು ಕೆರೆಗಳು(ಸಾಮಾನ್ಯವಾಗಿ ಕಣಿವೆ ಪ್ರದೇಶದಲ್ಲಿರುವ ಕೆರೆಗಳು), ಸುತ್ತಲಿನ ತೊರೆಗಳಿಂದ ನೀರಿನ ಜೊತೆಗೆ ಸವೆಸಿದ ಮಣ್ಣನ್ನ ಪಡೆಯುತ್ತವೆ. ಹೀಗೆ ಹರಿದು ಬಂದ ಮಣ್ಣು ಸದರಿ ಕೆರೆಯ ನೀರನ್ನ ಇಂಗಿಸಿ ಅಲ್ಲೊಂದು ಸಮತಟ್ಟಾದ ಭೂಮಿಯನ್ನ ನಿರ್ಮಿಸುತ್ತವೆ. ಅಲ್ಲಿ ನೀರು ಇಂಗಿರಬಹುದು, ಆವಿಯಾಗಿರಬಹುದು. ಅಂತಹ ಸಮತಟ್ಟಾದ ಭೂಮಿಯನ್ನ Lacustrine Plain ಎನ್ನುತ್ತಾರೆ.

   
  : ರವಿ

  Nov 22, 2010

  ಉತ್ತರ ಕೊರಿಯಾ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 05

  0 ಪ್ರತಿಕ್ರಿಯೆಗಳು
  ಸುದ್ದಿ : ಉತ್ತರ ಕೊರಿಯಾದಲ್ಲಿ ಯುರೇನಿಯಂ ಸಂವರ್ಧನೆಗೆ ಹೊಸ ಸ್ಥಾವರ ಸ್ಥಾಪಿಸಿದ ಸುದ್ದಿ


  ಸುದ್ದಿಯಲ್ಲಿರುವ ಸ್ಥಳ ನಕ್ಷೆ :


  ರಾಜಕೀಯ
  ಭೌಗೋಳಿಕ  • ಕೊರಿಯನ್ ಪ್ರಸ್ಥಭೂಮಿಯ ಭಾಗವಾಗಿರುವ ಉತ್ತರ ಕೊರಿಯಾ ಉತ್ತರದಲ್ಲಿ ಚೀನಾ ಮತ್ತು ರಷಿಯಾ ದೇಶಗಳೊಂದಿಗೆ ತನ್ನ ಗಡಿಯನ್ನ ಹಂಚಿಕೊಂಡಿದ್ದರೆ, ದಕ್ಷಿಣಕ್ಕೆ ದಕ್ಷಿಣ ಕೊರಿಯಾ, ಪೂರ್ವಕ್ಕೆ ಜಪಾನ್ ಸಮುದ್ರ, ಪಶ್ಚಿಮಕ್ಕೆ ಹಳದಿ ಸಮುದ್ರದಿಂದ ಸುತ್ತುವರೆಯಲ್ಪಟ್ಟಿದೆ.
  • ಈ ದೇಶದ ತುಂಬೆಲ್ಲ ಪರ್ವತಶ್ರೇಣಿಗಳ ಅಡ್ಡಾದಿಡ್ಡಿ ಸಾಲುಗಳು ಚಾಚಿಕೊಂಡಿವೆ.


   
  : ರವಿ

  Nov 20, 2010

  ಡೆಲ್ ಸ್ಟ್ರೀಕ್

  2 ಪ್ರತಿಕ್ರಿಯೆಗಳು
  ಈ ವಾರವಿಡೀ ಎಲ್ಲ ದಿನಪತ್ರಿಕೆಗಳಲ್ಲಿ ಕಂಡುಬಂದ ವಿಜ್ಞಾಪನೆ ಎಂದರೆ ಡೆಲ್ ಕಂಪೆನಿಯ ಸ್ಟ್ರೀಕ್ ದು. ಇದೊಂದು ಸ್ಮಾರ್ಟ್ ಫೋನ್ ಮೀರಿದ ಟ್ಯಾಬ್ಲೆಟ್ ಪಿಸಿ ಅಲ್ಲಲ್ಲ ಕಂಪೆನಿ ಹೇಳುವ ಹಾಗೆ ಪಾಕೆಟ್ ಟ್ಯಾಬ್ಲೆಟ್. ಇದಕ್ಕೂ ಮುಂಚೆ ಸಂಚಲನ ಸೃಷ್ಟಿಸಿದ್ದು ಆ್ಯಪಲ್ ಕಂಪೆನಿಯ ಐಪ್ಯಾಡ್. ನಂತರ ಅನೇಕ ಚಿಕ್ಕಪುಟ್ಟ ಕಂಪೆನಿಗಳು ತಮ್ಮ ಉತ್ಪನ್ನವನ್ನ ಮಾರುಕಟ್ಟೆಗೆ ಪರಿಚಯಿಸಿದವು. ಅದು ಆ್ಯಪಲ್ ಕಂಪೆನಿಯ ಚರಿಷ್ಮಾದ ಪ್ರಭಾವ. ನಂತರ 6 ತಿಂಗಳ ಸಮಯ ತೆಗೆದುಕೊಂಡು ಇದೀಗ ದೊಡ್ಡ ದೊಡ್ಡ ಕಂಪೆನಿಗಳು ಸ್ಪರ್ಧೆಗಿಳಿದಿವೆ. ಕಳೆದ ತಿಂಗಳು ಸ್ಯಾಮಸಂಗ್ ಗ್ಯಾಲಾಕ್ಸಿ ಟ್ಯಾಬ್ ಹೆಸರಲ್ಲಿ ಟ್ಯಾಬ್ಲೆಟ್ ಪಿಸಿ ಬಿಡುಗಡೆ ಮಾಡಿತು. ನಂತರ ಬ್ಲ್ಯಾಕ್ ಬೆರ್ರಿ ಪ್ಲೇಬುಕ್ ಬಂತು. ಇದೀಗ ಡೆಲ್ ಕಂಪೆನಿ ಸ್ಟ್ರೀಕ್ ( Streak ) ಹೆಸರಿನಲ್ಲಿ ಪಾಕೆಟ್ ಟ್ಯಾಬ್ಲೆಟ್ (ಪಿಸಿ) ಬಿಡುಗಡೆ ಮಾಡಿತು. ಇದು ಸ್ಮಾರ್ಟ್ ಫೋನ್ ಕೂಡ ಹೌದು. 

  ಈ ಮೊದಲು ಕಂಪ್ಯೂಟರ್ ಮಾತ್ರ ಮಾರುತ್ತಿದ್ದಾಗ Your's Is Here ಅನ್ನುತ್ತಿದ್ದ ಡೆಲ್, ಇದೀಗ ಫೋನ್ ತಯಾರಿಕಾ ಲೋಕಕ್ಕೆ ಇಳಿದು ತನ್ನ Tag Line ಕೂಡ ಹೊಸದಾಗಿ ಸೃಷ್ಟಿಸಿಕೊಂಡಿದೆ. Dell - The Power To Do More ಇದು ಹೊಸದು.  ಸ್ಪರ್ಧೆ ತೀಕ್ಷ್ಣವಾದಾಗ ಬೃಹತ್ ಕಂಪೆನಿಗಳೂ ತಮ್ಮ ಹಳೆಯ ವೇಷವನ್ನ ಕಳಚಿ ಹೊಸ ಹುರುಪಿನೊಂದಿಗೆ ಸ್ಪರ್ಧೆಗಿಳಿಯುತ್ತವೆ ಅನ್ನೋದಕ್ಕೆ ಡೆಲ್ ಜ್ವಲಂತ ಉದಾಹರಣೆ.

  ಈಗ ಡೆಲ್ ಸ್ಟ್ರೀಕ್ ( Dell Streak ) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ :


  • ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಸದರಿ ಸ್ಟ್ರೀಕ್ ನ ಜೀವಾಳ.
  • 5 inch Capacitive TouchScreen & 5MP Camera - ಇವು ಮೇಲ್ನೋಟದ ಮುದ್ದುಗಳು.
  • ಸ್ಮಾರ್ಟ್ ಫೋನ್ ಗಳಿಗೆಂದೇ Qualcomm ಕಂಪೆನಿ ತಯಾರಿಸುವ ಸ್ನ್ಯಾಪ್ ಡ್ರಾಗನ್ ( Snapdragon ) ಹೆಸರುಳ್ಳ  CPU ಇದೆ. ಅಂದ್ರೆ 512MB ROM , 512 MB RAM ಮತ್ತು 1GHz ವೇಗದ ಪ್ರೊಸೆಸರ್ ಒಳಗೊಂಡಿದೆ.
  • 800*480 pixel ಸ್ಪಷ್ಟತೆ ಇರುವ ಟಚ್ ಸ್ಕ್ರೀನ್.
  • ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು wi-fi , 3G , Bluetooth , GPS , A-GPS , GSM , EDGE , HSDPA ಹೊಂದಿದೆ.
  • ಹೊಸ ಹೊಸ ಆ್ಯಪ್ ( App )ಗಳಿಗಾಗಿ Android Market ಇದೆ.
  ಒಳನೋಟ

  Streak ಅಂದ್ರೆ ಪದಕೋಶದ ಅರ್ಥ :
  ಇದನ್ನ Light Streak Effect ಅಂತಾರೆ.
  1. A line, mark, smear, or band differentiated by color or texture from its surroundings.
  2. An inherent, often contrasting quality: "There was a streak of wildness in him" .
  3. A ray or flash of light: the first streaks of dawn; a streak of lightning.
  4. Informal.
   1. A brief run or stretch, as of luck.
   2. An unbroken series, as of wins or losses.
  5. Mineralogy. The color of the fine powder produced when a mineral is rubbed against a hard surface. Used as a distinguishing characteristic.
  6. Botany. Any of various viral diseases of plants characterized by the appearance of discolored stripes on the leaves or stems.
  7. Microbiology. A bacterial culture inoculated by drawing a bacteria-laden needle across the surface of a solid culture medium.
  ಹಾಗಾಗಿ ತನ್ನ ಸುತ್ತಲಿನ ವಾತಾವರಣವನ್ನ ಭೇದಿಸಿ ತನ್ನನ್ನ ತಾನು ಗುರುತಿಕೊಳ್ಳುವ ಹಾಗೊಂದು ವಿಶಿಷ್ಟತೆ ಹೊಂದಿರುವ Device ಎಂದು ಕಂಪೆನಿ ಬೀಗುತ್ತದೆ ಎನ್ನಬಹುದು.

  ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ (Android OperatingSystem) : ಇದು ಗೂಗಲ್ ಕಂಪೆನಿ ಮೊಬೈಲ್ / Pocket PC ಗಳಿಗೆಂದೇ ಸೃಷ್ಟಿಸಿರುವ ಆಪರೇಟಿಂಗ್ ಸಿಸ್ಟಂ ಗಿರುವ ಹೆಸರು. Android ಪದದ ಶಬ್ದಕೋಶದ ಅರ್ಥ Possessing human features ಅಂತ ಇದೆ. Humanoid ಎನ್ನುವ ಹಾಗೆ An automation that is created from biological materials and resembles a human ಅಂತ.

  ಓದುಗರು ಒಂದು ಮಾತನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಹಿಂದೆ ಬರುತ್ತಿದ್ದ Call - SMS - Music - FM - Java Games ಇಷ್ಟು Application ಗಳನ್ನ Run ಮಾಡಲು ಬೇಕಾಗುತ್ತಿದ್ದಿದ್ದುದು Proprietary OS ( = propietary operating systems is one where an company designs, develops and markets it as their own system & for their own device. ) ಇದೀಗ ಜನಪ್ರಿಯವಾಗಿರುವ Smart Phone ಗಳಿಗೆ  Proprietary OS ಸಾಲುವುದಿಲ್ಲ. ಕಾರಣ ಅವೀಗ ಕೇವಲ Call - SMS - Music - FM... ಇತ್ಯಾದಿ ಚಿಕ್ಕಪುಟ್ಟ Function ಗಳಿಗಷ್ಟೇ ಸೀಮಿತವಾಗಿಲ್ಲ. ಬದಲಿಗೆ
  • Web Browsing 
  • One Click/Touch Social Network Connection 
  • Word / Excel / PPT Create & Edit 
  • Wi-Fi 
  • 3G 
  • GPS
  • Touch Screen + Hardware KeyPad Input
  • ChipSet Processor
  • RAM
  • ROM
  • Big Storage Capacity Memory Card Compatibility
  • HD Camera
  • Video Editing
  • Photo Editing
  • Geo Tagging of Images
  • TV out
  • Multi Format Video Player
  • eBook Reader
  ಹೀಗೆ ಹತ್ತು ಹಲವು ಅಭಿಲಾಷೆಗಳು ಪೂರ್ತಿಯಾಗಬೆಕಂದ್ರೆ ಸರಳ code ಬಳಸಿ ಬರೆದ Proprietary OS ಸಹಾಯಕ್ಕೆ ಬರುವುದಿಲ್ಲ. ನೀವೇ ನೋಡಿ ಮೇಜಿನ ಮೇಲಿನ ಕಂಪ್ಯೂಟರ್ ಮಾಡುವ ಕೆಲಸಕ್ಕಿಂತ ಹೆಚ್ಚಿನ ಕರ್ತವ್ಯಗಳು smartphoneಗೆ ಆರೋಪಿತವಾಗಿವೆ. ಹೀಗಿರುವಾಗ ಅದಕ್ಕೆ ಕಂಪ್ಯೂಟರ್ ಗಿಂತ ಸಮರ್ಥವಾದ, ಯಾಕಂದ್ರೆ ಚಿಕ್ಕ Device - ಚಿಕ್ಕ Space ನಲ್ಲಿ ಅಷ್ಟೊಂದು ಅಗಾಧ ಕೆಲಸಕ್ಕೆ ಅಣಿಯಾಗಬೇಕಲ್ಲ ಅದಕ್ಕೆ, Operating System ಬೇಕೇ ಬೇಕು. ಈ ತುರ್ತಿನ ಬೇಡಿಕೆ ಪೂರೈಸಲು ಅನೇಕ mobile OS ಬರೆಯುವ ಕಂಪೆನಿಗಳು ತಲೆ ಎತ್ತಿದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ
  • Symbian OS by SYMBIAN
  • iOS by APPLE
  • Android OS by GOOGLE
  • Windows Mobile OS by MICROSOFT
  • BADA OS by SAMSUNG
  • Blackberry OS by RIM
  • Maemo OS by NOKIA
  • MeeGo OS by LINUX
  ಒಂದು ಸಮೀಕ್ಷೆಯ ಪ್ರಕಾರ ಸದ್ಯ ಮುಂಚೂಣಿಯಲ್ಲಿರುವುದು Symbian OS. ನಂತರದ ಸ್ಥಾನ iOS. ನಂತರ Blackberry OS. ನಂತರ Windows Mobile OS. ತದನಂತರದ ಅಂದರೆ ನಾಲ್ಕನೇ ಸ್ಥಾನ Android OSಗೆ. ಆದರೆ ಅದೇ ಸಮೀಕ್ಷೆ ಹೇಳುವುದೇನೆಂದ್ರೆ ಈಗಿನ ವೇಗದಲ್ಲಿಯೇ ಜನಪ್ರಿಯತೆ ಕಾಯ್ದುಕೊಂಡರೆ 2013ರವೇಳೆಗೆ Android OS ಪ್ರಥಮ ಸ್ಥಾನಕ್ಕೆ ಏರಲಿದೆ ಅಂತ. ಹೀಗಿರುವ Android OSನ ಜನಪ್ರಿಯತೆಯ ಗುಟ್ಟುಗಳನ್ನ ಕೆಳಕಂಡ ಕೋಷ್ಟಕ ರಟ್ಟು ಮಾಡಬಹುದು. ಓದಿ ನೋಡಿ :


  Android OS
  Windows MOS
  iOS
  GSM + CDMA
  GSM+CDMA
  GSM
  Sim Unlocked
  Sim Unlocked
  Sim Locked
  No Music Store (to be Launched)
  ZUNE
  iTUNES
  Google Search Engine
  Bing Search Engine
  Spotlight Search Engine
  Google Market
  Microsoft Market Place
  App Store ( Mobile Me )

  ಕೆಲವು ಪ್ರಮುಖ ವ್ಯತ್ಯಾಸಗಳು

  Is An OpenSource OS

  Not An OpenSource OS
  As Google Is The King In The InternetWorld – Net Users Will Have An Advantage Always

  Rely On Third Party Applications
  Can Run Mutiple Apps @ A Time

  Limited to mail-music&phone
  Customisable Homescreen


  Multiple Notifications

  Limited Notifications
  You Can Use Your Hardware

  Use Only Apple Supplied
  Sim Unlocked, So That U Can Choose Ur Carrier

  Sim Locked, So U Cant Choose The Carrier of Ur Wish
  Faster Settings Change

  Bit Slower
  Google & Other Social Networking is Superb here

  But With Third Party Apps
  Price Is Reachable

  Price Is Not Reachable

  ಖಾಲಿ ಬಿಟ್ಟ ಸ್ಥಳವನ್ನ(Windows MOS ಹೊರತುಪಡಿಸಿ), ಅದೇ ಕೆಲಸ ಮಾಡಿದರೂ Android ನಷ್ಟು ಸಮರ್ಥವಾಗಿ ಮಾಡುವುದಿಲ್ಲ ಅಂತ ಅರ್ಥೈಸಬೇಕು.

  ಈ ಪಟ್ಟಿ ಓದಿದ ನಂತರವೂ ನಾನು Android ಬಗ್ಗೆ ಭಾಷಣ ಮಾಡುವುದು ತಪ್ಪು ಅಂತ ನಂಗೆ ಗೊತ್ತು.

  Wide Screen : ವಿಶಾಲ ಪರದೆ ಇರುವುದರಿಂದ ಇಲೆಕ್ಟ್ರಾನಿಕ್  ರೂಪದ ಪುಸ್ತಕ ಓದಲು , ಅಂತರಜಾಲ ತಡಕಾಡುವಾಗ ಮಾಹಿತಿಯನ್ನ ಸ್ಪಷ್ಟವಾಗಿ ಗ್ರಹಿಸಲು , ಚಲನಚಿತ್ರಗಳ ವೀಕ್ಷಣೆ ಆನಂದದಾಯಕವಾಗಿಸಲು .. ಸಹಕಾರಿ.

  1GHz Processor : ನಾವು ಬಳಸುವ ಕಂಪ್ಯೂಟರ್ ಗಳು ಸಾಮಾನ್ಯವಾಗಿ 2.0GHz ನಿಂದ 3.6GHz ವರೆಗಿನ ವೇಗವನ್ನ ಹೊಂದಿರುತ್ತವೆ. ಈಗ ಈ ಪಾಕೆಟ್ ಕಂಪ್ಯೂಟರ್ 1.0GHz ಹೊಂದಿರುವುದು ಅಲಕ್ಷ್ಯ ಮಾಡುವ ವೇಗವೇನಲ್ಲ.

  Android Market : ಇದು ನಿಮ್ಮ ಸ್ಮಾರ್ಟ್ ಫೋನನ್ನ ಇನ್ನಷ್ಟು ಸ್ಪರ್ಧಾತ್ಮಕವಾಗಿಸಲು ಅವಶ್ಯವಿರುವ Applications ( Apps ಎನ್ನುವುದು Application Programmes ಎಂಬ ಪದದ ಮುದ್ದು ರೂಪ )  ಗಳು ದೊರೆಯುವ ಸ್ಥಳ. ಕೆಲವು App ಗಳು ಉಚಿತವಾಗಿದ್ದರೆ ಇನ್ನು ಕೆಲವನ್ನ ಖರೀದಿಸಬೇಕು. 2008ರಲ್ಲಿ ಪ್ರಾರಂಭವಾದ ಈ ಮಾರುಕಟ್ಟೆಗೆ ನಿಮ್ಮ Brain Child ಗಳಾದ ನೀವೇ ತಯಾರಿಸಿದ Android Compatible App ಗಳನ್ನ ಸೇರಿಸಬಹುದು. ಕಾರಣ - Android ಒಂದು OpenSource Operating System.

  *****

  ಇದಿಷ್ಟು ಡೆಲ್ ಸ್ಟ್ರೀಕ್ ಬಗ್ಗೆ ನಾನು ನಿಮಗೆ ಸದ್ಯಕ್ಕೆ ತಿಳಿಸಬೇಕೆಂದಿದ್ದು. ನಿಮಗೆ ಇದಕ್ಕೆ ಇನ್ನೂ ಸ್ವಲ್ಪ ಸೇರಿಸುವ ಮನಸಾಗಿದ್ರೆ ಖಂಡಿತ ಸೇರಿಸಿ. ಒಂದೆರಡು ಸಾಲಲ್ಲ. ನೀವು ಸಾವಿರ ಸಾಲು ಬರೆದರೂ ಬೇಡ ಅನ್ನುವುದಿಲ್ಲ ನಾನು !!

  ಸದ್ಯ ಸ್ಪರ್ಧೆಯಲ್ಲಿರುವ ಪ್ರಮುಖ Pocket PC ಗಳೆಂದ್ರೆ

  Apple iPad  Samsung Galaxy TAB  Dell Streak

   

  Blackberry PlayBook  Cisco Cius  HP Slate  Toshiba Libretto


  Asus eepad  Lenovo ideapad

   
  NEC LifeTouch
  ಸ್ಟ್ರೀಕ್ ಬಗ್ಗೆ ಗೊತ್ತಾಯ್ತು. ಸ್ಪರ್ಧೆಯಲ್ಲಿರುವ ಇತರ ಸ್ಪರ್ಧಾರ್ಥಿಗಳ ಹೆಸರೂ ತಿಳಿದುಕೊಂಡಾಯ್ತು. ಆದರೆ ಸದರಿ ಸ್ಪರ್ಧೆಗೆ ಕಿಚ್ಚು ಹಚ್ಚಿದ್ದು ಯಾರು ಗೊತ್ತಾ ?!


  ಹಾಂ. ಅಮೇಜಾನ್ ಕಿಂಡಲ್. ಇ ಬುಕ್ ರೀಡರ್ ಆಗಿ ಕ್ರಾಂತಿಯನ್ನೇ ಸೃಷ್ಟಿಸಿದ ಇದು ಹೊಸ ಸ್ಪರ್ಧೆಗೆ ದಾರಿ ಮಾಡಿ ಕೊಟ್ಟಿದೆ. ನಿಮಗೆ ಕಿಂಡಲ್ ಬಗ್ಗೆ ಏನೇನು ಗೊತ್ತು ?  : e - ಶ

  ಮಡಗಾಸ್ಕರ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 04

  0 ಪ್ರತಿಕ್ರಿಯೆಗಳು
  ಸುದ್ದಿ : ಮಡಗಾಸ್ಕರ್ ನಲ್ಲಿ ಮಿನಿ ಮಿಲಿಟರಿ ದಂಗೆ  ಸುದ್ದಿಯಲ್ಲಿರುವ ಸ್ಥಳ ನಕ್ಷೆ :

  • ಜಗತ್ತಿನ ನಾಲ್ಕನೇ ಅತಿ ದೊಡ್ಡ ದ್ವೀಪ ಮಡಗಾಸ್ಕರ್. ವಿಸ್ತೀರ್ಣದಲ್ಲಿ ಫ್ರಾನ್ಸ್ ಗಿಂತ ಸ್ವಲ್ಪ ದೊಡ್ಡದೇ !
  • ದ್ವೀಪದ ಮಧ್ಯ ಭಾಗದ ಎತ್ತರದ ಪ್ರಸ್ಥಭೂಮಿ ಪೂರ್ವ ಕರಾವಳಿಯ ಕಡೆ  ಭೂಮಿ ಕಡಿದಾಗಿದ್ದು, ಅಲ್ಲಿ ಮಳೆಕಾಡು ಸಣ್ಣ ಪ್ರಮಾಣದಲ್ಲಿ ಚಾಚಿಕೊಂಡಿದೆ. ಮಧ್ಯ ಎತ್ತರ ಪ್ರದೇಶದಿಂದ ಪಶ್ಚಿಮದ ಕಡೆಗಿನ ಭೂಮಿ ಕ್ರಮೇಣ ಜಾರಿಕೊಂಡಿದೆ.
  • ಮಧ್ಯ ಪ್ರಸ್ಥಭೂಮಿಯಲ್ಲಿ ತಲೆ ಎತ್ತಿರುವ ಬೆಟ್ಟಗಳು ಇಳಿಜಾರಿನ ಕಾರಣದಿಂದ ಉಂಟಾಗಿರುವ ವಿಪರೀತವೆನ್ನುವ ಮಣ್ಣಿನ ಸವಕಳಿಯಿಂದ ಬೋಳಾಗಿದ್ದು,  ಕೆಂಪು ಮಣ್ಣು ( Red Laterite Soil ) ತೆರೆಯಲ್ಫಟ್ಟು, ಆಕಾಶದಿಂದ ನೋಡಿದಾಗ ಕಾಣುವ ಭೂಪ್ರದೇಶಕ್ಕೆ ಅನ್ವರ್ಥಕವಾಗಿ Red Island (ಕೆಂಪು ದ್ವೀಪ) ಎಂದು ಕರೆಯಲಾಗಿದೆ.
  • ಈ ದ್ವೀಪದಲ್ಲಿ ಎರಡೇ ಕಾಲಗಳು(ಋತುಗಳು) : ನವೆಂಬರ್ ನಿಂದ ಏಪ್ರಿಲ್ ವರೆಗೆ ಬಿಸಿಲು ಮತ್ತು ಮಳೆಯಿಂದ ಕೂಡಿದ ವಾತಾವರಣವಿದ್ದರೆ, ಮೇ ಯಿಂದ ಅಕ್ಟೋಬರ್ ವರೆಗೆ ತಂಪಾದ, ಒಣಹವೆಯ ವಾತಾವರಣವಿರುತ್ತದೆ.

   
  : ರವಿ

  Nov 19, 2010

  ಇಸ್ರೇಲ್ ಪ್ಯಾಲಿಸ್ತೇನ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 03

  0 ಪ್ರತಿಕ್ರಿಯೆಗಳು
  ಸುದ್ದಿ : ಇಸ್ರೇಲ್ ಪ್ಯಾಲಿಸ್ತೇನ್ ಮತ್ತೆ ಜಟಾಪಟಿ


  ಸುದ್ದಿಯಲ್ಲಿರುವ ಸ್ಥಳ ನಕ್ಷೆ :

  ಈಗ ವಾಸ್ತವದಲ್ಲಿ ಇರೋದು ಹೀಗೆ

  ಇದು ಗ್ರೇಟರ್ ಇಸ್ರೇಲ್ ಅಂತೆ !


  ಇಷ್ಟು ಪ್ಯಾಲೆಸ್ತೇನ್ ಗೆ ಬೇಕಂತೆ
  ಆದರೆ, ಅವರೀಗ ಇರುವುದೆಷ್ಟು ಜಾಗದಲ್ಲಿ ನೋಡಿ !!
  • ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವೆ ಜಗಳಕ್ಕೆ ಮುಖ್ಯ ಕಾರಣಗಳಲ್ಲೊಂದು ಅವರ ದೇಶದ ಎಲ್ಲೆಗಳನ್ನ ವಿಸ್ತರಿಸುವ ಹಪಹಪಿ.
  • ಮೇಲ್ಕಂಡ ನಕ್ಷೆಗಳನ್ನ ನೋಡಿದರೆ ಅಲ್ಲಿನ ಸ್ಥಿತಿಗತಿಗಳ ನಿಮಗೊಂದು ಚಿತ್ರಣ ಸಿಗುತ್ತದೆ.
  • ಮುಂದಿನ ವಾರದಲ್ಲಿ ಇಸ್ರೇಲ್ - ಪ್ಯಾಲೆಸ್ತೇನ್ ಜಟಾಪಟಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಲೇಖನವೊಂದನ್ನ ನೀಡಲಾಗುತ್ತದೆ. ಅಲ್ಲಿ ಸಮಗ್ರ ವಿಷಯವನ್ನೂ ಮನನ ಮಾಡುವಿರಂತೆ.
   
  : ರವಿ

  ವಾಹನ & ವೈಯಕ್ತಿಕ ಭದ್ರತೆ

  0 ಪ್ರತಿಕ್ರಿಯೆಗಳು
  ಚುಟುಕು ಸುದ್ದಿ : ಮಗುವೊಂದರ ಜೀವವನ್ನ ಕಾಯಿಸಿದ ನರೇಂದ್ರ ಮೋದಿ ಕಾರಿನ ಸುಗಮ ಚಲನೆ.  ಸುದ್ದಿಯ ಒಳನೋಟ :

  • ವಿವಿಐಪಿ , ವಿಐಪಿ ಇತ್ಯಾದಿಗಳು ರಸ್ತೆಗಿಳಿದರೆ ಮೊದಲು ಅವರಿಗೆ ಆದ್ಯತೆ ಕೊಡಬೇಕು ಎನ್ನುವುದು ನಿಯಮವೇನೋ ತಿಳಿಯದು. ಆದರೆ ಸಾಮಾನ್ಯವಾಗಿ ಅಂಥ ಮಹಾನುಭಾವರು ಹೊರಟರೆ ವಿಶಾಲ ರಸ್ತೆಗಳಲ್ಲಿ ತಾವಷ್ಟೇ ಹೋಗಲು ಅನುವು ಮಾಡಿಕೊಟ್ಟು ಅವರ ದುರಾಡಳಿತ ಸೃಷ್ಟಿಸಿರುವ ಟ್ರಾಫಿಕ್ ಸಮಸ್ಯೆ (?)ಯನ್ನ ಅವರಿಗೆ ತಿಳಿಯದ ಹಾಗೆ ಮಾಡುತ್ತೇವೆ.
  ಟ್ರಾಫಿಕ್ ಸಮಸ್ಯೆಗೆ ಕೇವಲ ಸರ್ಕಾರವೊಂದನ್ನೇ ದೂಷಿಸುವುದು ತಪ್ಪು. ಸರ್ಕಾರ ಎನ್ನುವುದು ಆಡಳಿತ ಯಂತ್ರ. ಅದನ್ನ ಚಲಾಯಿಸುವವರು ನಮ್ಮ ಪ್ರತಿನಿಧಿಗಳಷ್ಟೇ. ರಸ್ತೆಯ ಮೇಲೆ ನಾವು ಚಲಾಯಿಸುವ ನಮ್ಮ ಸ್ವಂತ ವಾಹನದ ಮೇಲೆ ಇರುವಷ್ಟೇ ಸ್ವಂತಿಕೆ ಸರ್ಕಾರದ ಆಡಳಿತ ಯಂತ್ರದ ಮೇಲೆ ನಮ್ಮೆಲ್ಲರಿಗಿದೆ. ಹಾಂ, ಇಲ್ಲಿ ವಿಶೇಷತೆ ಏನಂದ್ರೆ ಸ್ವಂತ ವಾಹನ ಇಲ್ಲದೇ ಇರುವವರಿಗೂ ಸರ್ಕಾರಿ ಆಡಳಿತ ಯಂತ್ರದ ಮೇಲೆ ಸ್ವಂತಿಕೆ ಇದೆ. ಅವರಿಗೆ ಛಾತಿ ಇದ್ದರೆ ರಸ್ತೆಯ ಮೇಲೆ ಇಲ್ಲಿಯತನಕ ಪಾದಚಾರಿಗಳಾಗಿದ್ದರೂ ಪರವಾ ಇಲ್ಲ, ಇನ್ನು ಮುಂದೆ ಸರ್ಕಾರಿ ಆಡಳಿತ ಯಂತ್ರ ಚಲಾಯಿಸಬಹುದು. ಆಗ  ರಸ್ತೆಗಳಲ್ಲಿ ಹೊರಟರೆ ಇಡೀ ಊರೇ  ದಾರಿ ಮಾಡಿಕೊಡುತ್ತದೆ. ಮೊದಲಿನಂತೆ ಕೆಂಪು ದೀಪಕ್ಕಾಗಿ ಕಾಯುವ ಪ್ರಶ್ನೆಯೇ ಇಲ್ಲ !!  ಯಾಕಂದ್ರೆ ನೀವು ಸದಾ ಕೆಂಪು ದೀಪ ತೋರಿಸಿಕೊಂಡು ಹೋಗುತ್ತೀರಿ. ಉಳಿದವರು ಕೆಂಪು ದೀಪ ನೋಡಿ ನಿಲ್ಲುವುದು ಟ್ರಾಫಿಕ್ ನಿಯಮ ತಾನೇ ?
  ಟ್ರಾಫಿಕ್ ಸಮಸ್ಯೆಗೆ ಬುಹುಮುಖ್ಯ ಕಾರಣಗಳು ಎರಡು : ಅತಿಯಾದ ಜನಸಂಖ್ಯೆ & ಅತಿಯಾದ ಸ್ವಂತ ವಾಹನಗಳು. ಇವೆರಡಕ್ಕೂ ನಮ್ಮ ಅವಜ್ಞೆ & ಸ್ವಾರ್ಥ ಕಾರಣವೇ ಹೊರತು ಸರ್ಕಾರವಲ್ಲ. ನಿಮಗೆ 4ನೇ ಮಗು ಹುಟ್ಟಿದರೆ ಅದಕ್ಕೆ ಸರ್ಕಾರವನ್ನ ದೂರುವುದು ನಿಮಗೆ ಶೋಭೆ(!?) ತರುವಂಥದಲ್ಲ. ನೀವು ಹೊಸ ವಾಹನ ಖರೀದಿಸಿದರೆ ಅದಕ್ಕೆ ಸರ್ಕಾರ ಜವಾಬ್ದಾರಿಯೇ ? ನಮ್ಮ ಮನೆಯಿಂದ ಬಸ್ ವ್ಯವಸ್ಥೆ ಸರಿಯಾಗಿಲ್ಲ. ಅದಕ್ಕೆ ಸ್ವಂತ ವಾಹನ ಬೇಕು ಎನ್ನುವವರು ಇಲ್ಲಿ ಸಮಸ್ಯೆಯಾಗಿಲ್ಲ. ಬದಲಿಗೆ ದೊಡ್ಡ ಕಾರಿನಲ್ಲಿ ಒಬ್ಬರೇ ಹೊರಟು ನಾಲ್ಕು ಜನ ಆಕ್ರಮಿಸುವ ಜಾಗವನ್ನ ಒಬ್ಬರೇ ಆಕ್ರಮಿಸುವುದು ಸಲ್ಲ. ಇದಕ್ಕೆ ಮದ್ದು ಎಂಬಂತೆ,  car pooling ವ್ಯವಸ್ಥೆಯೊಂದಿದೆ. ಹೀಗಿರುವಾಗ ಟ್ರಾಫಿಕ್ ಸಮಸ್ಯೆಗೆ ಸರ್ಕಾರ ಮೊದಲ ಕಾರಣ ಎಂದು ನಿಮಗನಿಸಿದರೆ, ಅದು ಕೊನೆಯಿಂದ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ನಿಮಗೆ ತಿಳಿದಿರಲಿ. ನಮ್ಮಿಂದಾಗಿರುವ ತಪ್ಪುಗಳನ್ನ ಮೊದಲು ತಿದ್ದಿಕೊಳ್ಳೋಣ. ನಂತರ ಇತರರನ್ನ ದೂಷಿಸೋಣ.
  • ಸದರಿ ವಿಐಪಿ ಗಳು ಹೊರಟರೆ ಅವರ ಹಿಂದೆ ಮುಂದೆ ಹತ್ತಾರು ವಾಹನಗಳ ಸಾಲಿರುತ್ತದೆ. ಅದು ಅವರ ವೈಯಕ್ತಿಕ ಭದ್ರತೆಗಾಗಿ. ಆ ಸಾಲಲ್ಲಿ
  • ಮೊದಲಲ್ಲಿ Signal Jammer Vehicle ಇರುತ್ತದೆ. ಸಂಭಾವ್ಯ ಬಾಂಬ್ ದಾಳಿಯಾದರೆ, ಅದರಲ್ಲೂ ನಿಸ್ತಂತು (wireless) Device ಬಳಸಿ ಬಾಂಬ್ ಸ್ಫೋಟಕ್ಕೆ ಯತ್ನಿಸಿದರೆ, ಸದರಿ wireless Device ನಿಂದ ಸ್ಫೋಟಕ್ಕೆ ಸಂದೇಶ ರವಾನೆಯಾಗದ ಹಾಗೆ ನೋಡಿಕೊಳ್ಳುವುದೇ ಜಾಮರ್ ವೆಹಿಕಲ್ ನ ಕೆಲಸ.
  • ನಂತರ ಉಚ್ಚ ದರ್ಜೆಯ ರಕ್ಷಣಾ ಅಧಿಕಾರಿ(ಪೊಲೀಸ್)ಗಳ ಅಂಗರಕ್ಷಕ ವಾಹನ ಇರುತ್ತದೆ.
  • ಆಮೇಲೆ ಸದರಿ ಗಣ್ಯ ವ್ಯಕ್ತಿ. 
  • ಆಮೇಲೆ ಅವರ ಆಪ್ತರು. 
  • ನಂತರ ಮತ್ತೊಂದು ಪೊಲೀಸ್ ವಾಹನ.
  • ನಂತರ ಪೊಲೀಸ್ ತುಕಡಿ ಇರುವ ವ್ಯಾನ್.
  • ನಂತರ ಆಂಬುಲೆನ್ಸ್.
  ಇಲ್ಲಿ ನೀಡಿರುವ ಪಟ್ಟಿ ಮತ್ತು ಅನುಕ್ರಮಣಿಕೆ ವೈಯಕ್ತಿಕ Observation ಮೇಲೆ ನಂಬಿಕೆ ಇರಿಸಿ ನೀಡಿದುದಾಗಿದೆ. ನಿಖರ ಮಾಹಿತಿಯನ್ನ ಓದುಗರೇ ತಿಳಿಸಿಕೊಟ್ಟರೆ ಉಪಕಾರವಾದೀತು.
  • ವಾಹನಕ್ಕೆ ಭದ್ರತೆಯ ಜೊತೆಗೆ ವೈಯಕ್ತಿಕ ಭದ್ರತೆಯನ್ನೂ ಅತಿಗಣ್ಯರು, ಗಣ್ಯರು .. ಗಳಿಗೆ ನೀಡಲಾಗುತ್ತದೆ. ಅದು ಹೀಗಿದೆ.


  ಪ್ರತಿಯೊಬ್ಬರಿಗೂ ಪ್ರಾಣ ರಕ್ಷಣೆ ಅನ್ನೋದು ಅತ್ಯಂತ ಮಹತ್ವದ್ದು. ನಮ್ಮಂತ ಸಾಮಾನ್ಯ ಮನುಷ್ಯರು ಬಿಡಿ, ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗಳು ನಾವು! ಆದರೆ ನಮಗಿಂತಲೂ ಎತ್ತರಕ್ಕೇರಿದ, ಕೀರ್ತಿಯ ಕಳಶವನ್ನು ಭುಜದಲ್ಲಿ ಹೊತ್ತ ಪ್ರಖ್ಯಾತರಿಗೆ ನಮ್ಮಷ್ಟು ಸುಲಭದ ಬದುಕು ಸಾಧ್ಯವಿಲ್ಲ. ಅವರ ಜೀವದ ರಕ್ಷಣೆ ಅವರಿಗೊಂದು ದೊಡ್ಡ ಸವಾಲಾಗಿರುತ್ತದೆ. ಭಾರತದಲ್ಲಂತೂ ಇಂತಹ ವ್ಯಕ್ತಿಗಳಿಗೆ ಭದ್ರತೆ ಒದಗಿಸುವುದು ಸ್ಥಳೀಯ ಸರ್ಕಾರ ಮತ್ತು ಪೋಲೀಸರಿಗೆ ದೊಡ್ಡ ಮಟ್ಟದ ತಲೆನೋವು. ಸಾಮಾನ್ಯವಾಗಿ ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ಪ್ರಖ್ಯಾತ ಕ್ರೀಡಾ ಪಟುಗಳು ಮೊದಲಾದ VVIP/ VIP ಗಳಿಗೆಲ್ಲಾ ವೈಯಕ್ತಿಕ ಭದ್ರತೆಯನ್ನು ಒದಗಿಸಲಾಗುತ್ತದೆ. ಎಕ್ಸ್, ವೈ, ಝಡ್ ಮತ್ತು ಝಡ್ ಪ್ಲಸ್ ಎಂಬ ನಾಲ್ಕು ಶ್ರೇಣಿಯ ಭದ್ರತಾ ವ್ಯವಸ್ಥೆ ಭಾರತದಲ್ಲಿ ಚಾಲ್ತಿಯಲ್ಲಿದೆ.

  X ವರ್ಗದ ಭದ್ರತೆಯಲ್ಲಿ 2 ಜನ ಸಿಬ್ಬಂದಿಗಳು.
  ವರ್ಗದ ಭದ್ರತೆಯಲ್ಲಿ 11 ಜನ ಸಿಬ್ಬಂದಿಗಳು.
  Z  ವರ್ಗದ ಭದ್ರತೆಯಲ್ಲಿ 22 ಜನ ಸಿಬ್ಬಂದಿಗಳು.
  Z+ ವರ್ಗದ ಭದ್ರತೆಯಲ್ಲಿ 36 ಜನ ಸಿಬ್ಬಂದಿಗಳು.

  ಭದ್ರತಾ ಸಿಬ್ಬಂದಿಗಳನ್ನು ವಿಶೇಷ ಭದ್ರತಾ ಪಡೆ (SPG), ರಾಷ್ಟ್ರೀಯ ಭದ್ರತಾ ದಳ (NSG), ಇಂಡೋ ಟಿಭೇಟಿಯನ್ ಗಡಿ ಪೋಲೀಸ್ (ITBP), ಕೇಂದ್ರೀಯ ಮೀಸಲು ಪೋಲೀಸ್ ಪಡೆ (CRPF) ಮೊದಲಾದ ಭದ್ರತಾ ಸಂಸ್ಥೆಗಳು ನಿಯೋಜಿಸುವ ಹೊಣೆಯನ್ನು ಹೊತ್ತುಕೊಂಡಿರುತ್ತವೆ.

  ಅತ್ಯನ್ನತ ಭದ್ರತಾ ಸೇವೆಯಾದ Z+ ಶ್ರೇಣಿಯಲ್ಲಿ ರಾಷ್ಟ್ರೀಯ ಭದ್ರತಾ ದಳ (NSG)  ಅಥವಾ  ವಿಶೇಷ ಭದ್ರತಾ ಪಡೆ (SPG) ಕಮಾಂಡೋಗಳು ಕಾರ್ಯನಿರ್ವಹಿಸುತ್ತಾರೆ. ಪೈಲಟ್ ಕಾರ್, ಅಂಗರಕ್ಷಕ ವಾಹನ ಹಾಗೂ ವೈಯಕ್ತಿಕ ಭದ್ರತಾಧಿಕಾರಿಗಳನ್ನೊಳಗೊಂಡ 36 ಸಿಬ್ಬಂದಿಗಳು ಭದ್ರತೆಗೆ ನಿಯೋಜಿತರಾಗಿರುತ್ತಾರೆಪ್ರತಿಷ್ಠಿತ ವ್ಯಕ್ತಿಗಳಿಗೆ ಶ್ರೇಣಿಯ ಭದ್ರತೆ ಒಂದು ಪ್ರತಿಷ್ಠೆಯ ಸಂಕೇತ ಕೂಡಾ ಆಗಿರುತ್ತದೆ.

  Z ಶ್ರೇಣಿಯ ಭದ್ರತೆಯಲ್ಲಿ ಇಂಡೋ ಟಿಭೇಟಿಯನ್ ಗಡಿ ಪೋಲೀಸ್ (ITBP) ಅಥವಾ ಕೇಂದ್ರೀಯ ಮೀಸಲು ಪೋಲೀಸ್ ಪಡೆ (CRPF) ಯೋಧರು ಮತ್ತು ಅಂಗರಕ್ಷಕ ವಾಹನ ಒಳಗೊಂಡ 22 ಮಂದಿ ಇದ್ದರೆ, Y  ಶ್ರೇಣಿಯಲ್ಲಿ ಇಬ್ಬರು ವೈಯಕ್ತಿಕ ಭದ್ರತಾಧಿಕಾರಿ (PSO)ಗಳನ್ನೊಳಗೊಂಡ 11 ಜನ  ಹಾಗೂ X ಶ್ರೇಣಿಯಲ್ಲಿ ಒಬ್ಬರು ಭದ್ರತಾಧಿಕಾರಿ ಒಳಗೊಂಡಂತೆ ಇಬ್ಬರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ.

  ಪ್ರತಿಷ್ಠಿತರೊಬ್ಬರ ಪ್ರಾಣ ಕಾಪಾಡೋಕೆ  ಎಷ್ಟೊಂದು  ಮಂದಿ  ಶ್ರಮಪಡ್ತಾರಲ್ವಾ ..? ಆದರೆ ಪ್ರತಿಷ್ಠಿತರೆಲ್ಲಾ ದಿನೇ ದಿನೇ ಒಂದಿಲ್ಲೊಂದು ರೀತಿಯಲ್ಲಿ ಭ್ರಷ್ಟತೆಯ ಅಭ್ಯಂಜನ ಮಾಡ್ತಿರೋದನ್ನೇಲ್ಲಾ ನೋಡಿದ್ರೆ ಸಡಗರಕ್ಕೋಸ್ಕರವೇ ಇವರಿಗೆ ಇಂತಹ ಸೆಕ್ಯುರಿಟಿ ಕೊಡಬೇಕಾ ಅನ್ನಿಸ್ತಿದೆ.  : ಪರಶು 

  ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

  ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ