ಸುದ್ದಿಯಲ್ಲಿರುವ ಸ್ಥಳ ನಕ್ಷೆ :
ಜಾಗತಿಕ ನಕ್ಷೆಯಲ್ಲಿ ನ್ಯೂಝಿಲ್ಯಾಂಡ್ ನ ಸ್ಥಾನ |
- ಜಗತ್ತಿನ ಒಟ್ಟು 192 ದೇಶಗಲ್ಲಿ ಸುಮಾರು 47 ದ್ವೀಪ ದೇಶಗಳಿವೆ. ಅಂಥ ದ್ವೀಪ ದೇಶಗಳಲ್ಲಿ ವಿಸ್ತೀರ್ಣದಲ್ಲಿ ಆರನೇ ಸ್ಥಾನದಲ್ಲಿದೆ ನ್ಯೂಝಿಲ್ಯಾಂಡ್.
- ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಆಗ್ನೇಯಕ್ಕಿರುವ ಈ ದೇಶ ಎರಡು ಭೂಭಾಗಳಲ್ಲಿ ವಿಭಾಗಿಸಲ್ಪಟ್ಟಿದೆ, ಉತ್ತರ ದ್ವೀಪ & ದಕ್ಷಿಣ ದ್ವೀಪ(ವಿಸ್ತೀರ್ಣದಲ್ಲಿ ದೊಡ್ಡದು) ಎಂದು. ಆದರೆ ಸದರಿ ದೇಶವನ್ನ ಸುತ್ತುವರೆದಿರುವ ಸಮುದ್ರ, ತಾಸ್ಮಾನ್ ಸಮುದ್ರ. ಅಷ್ಟೇ ಅಲ್ಲದೇ ದೇಶ ಅನೇಕ ಚಿಕ್ಕ ಚಿಕ್ಕ ದ್ವೀಪಗಳನ್ನ ಹೊಂದಿದೆ.
- ಸ್ಥಳೀಯ ಭಾಷೆಯಲ್ಲಿ ಈ ದೇಶಕ್ಕೆ Aotearoa ಎಂಬ ಹೆಸರಿದ್ದು ಅರ್ಥ land of the long white cloud ಎಂದಾಗುತ್ತದೆ.
- ಯುರೋಪಿನಿಂದ ಬಂದವರೇ ಈ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ದೇಶದ ಸ್ಥಳೀಯ ಜನಾಂಗ (ಮಾವೋರಿ-maori)ಅಲ್ಪಸಂಖ್ಯಾತವಾಗಿದೆ.
- ಉತ್ತರ ಮತ್ತು ದಕ್ಷಿಣ ಭೂಭಾಗಗಳು ಕುಕ್ ಜಲಸಂಧಿಯಿಂದ ಬೇರ್ಪಟ್ಟಿವೆ.
- ಇಲ್ಲಿನ ಭೂಭಾಗ ಕನಸಿನ ತಾಣವೆಂಬಂತಿದ್ದು, ಅನೇಕ ಚಲನಚಿತ್ರಗಳಿಗೆ 'ಹಿನ್ನೆಲೆ'ಯಾಗಿದೆ.
: ರವಿ
No comments:
Post a Comment