ಸುದ್ದಿಯಲ್ಲಿರುವ ಸ್ಥಳ ನಕ್ಷೆ :
ಜಾಗತಿಕ ನಕ್ಷೆಯಲ್ಲಿ ಕಾಂಬೋಡಿಯಾದ ಸ್ಥಾನ |
ನಮ್ಮನೆ & ನೆರೆ ಹೊರೆಯವರು |
- ಕಾಂಬೋಡಿಯಾ ದೇಶದ ಭೂಭಾಗ ಥಾಯ್ಲೆಂಡ್, ಲಾವೋಸ್ ಮತ್ತು ವಿಯೆಟ್ನಾಂ ನಿಂದ ಸುತ್ತುವರಿಯಲ್ಪಟ್ಟಿದ್ದರೆ ಪಶ್ಚಿಮದ ಕಡೆ ಥಾಯ್ಲೆಂಡ್ ಗಲ್ಫ್ ನಿಂದ ಸುತ್ತುವರಿಯಲ್ಪಟ್ಟಿದೆ.
- Lacustrine Plain ಈ ದೇಶದ ಭೌಗೋಳಿಕ 'ಆಕರ್ಷಣೆ'ಗಳಲ್ಲೊಂದು. ಭಾರತದ ಕಾಶ್ಮೀರ ಕಣಿವೆ ಒಂದು ಉದಾಹರಣೆ. ಅಂದಹಾಗೆ Lacustrine Plain = ಕೆಲವೊಂದು ಕೆರೆಗಳು(ಸಾಮಾನ್ಯವಾಗಿ ಕಣಿವೆ ಪ್ರದೇಶದಲ್ಲಿರುವ ಕೆರೆಗಳು), ಸುತ್ತಲಿನ ತೊರೆಗಳಿಂದ ನೀರಿನ ಜೊತೆಗೆ ಸವೆಸಿದ ಮಣ್ಣನ್ನ ಪಡೆಯುತ್ತವೆ. ಹೀಗೆ ಹರಿದು ಬಂದ ಮಣ್ಣು ಸದರಿ ಕೆರೆಯ ನೀರನ್ನ ಇಂಗಿಸಿ ಅಲ್ಲೊಂದು ಸಮತಟ್ಟಾದ ಭೂಮಿಯನ್ನ ನಿರ್ಮಿಸುತ್ತವೆ. ಅಲ್ಲಿ ನೀರು ಇಂಗಿರಬಹುದು, ಆವಿಯಾಗಿರಬಹುದು. ಅಂತಹ ಸಮತಟ್ಟಾದ ಭೂಮಿಯನ್ನ Lacustrine Plain ಎನ್ನುತ್ತಾರೆ.
: ರವಿ
No comments:
Post a Comment