ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Dec 31, 2010

ಹೊಸ ವರುಷ ಬರಲಿ, ಹೊಸ ಹರುಷ ತರಲಿ ಪ್ರತಿ ನಿಮಿಷ

1 ಪ್ರತಿಕ್ರಿಯೆಗಳು

" ಹೊಸ ವರುಷ ಬರಲಿ, ಹೊಸ ಹರುಷ ತರಲಿ ಪ್ರತಿ ನಿಮಿಷ "
- ಎಸ್.ಎಸ್.ಪಾಟೀಲ,
ಹವ್ಯಾಸಿ ಬರಹಗಾರರು

" ಹೊಸ ವರುಷವೆಂದರೆ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿ, ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರ, ಅದೇನೋ ಆತುರ. "

ಹೊಸ ವರುಷ ಬಂದಿದೆ. ಹೊಸ ಹರುಷ ತಂದಿದೆ. ಹೊಸ ವರುಷವನ್ನ ಸ್ವಾಗತಿಸಲು ಹೊಸ್ತಿಲಲ್ಲಿ ನಿಂತಿರುವ ಈ ಶುಭ ಘಳಿಗೆಯಲ್ಲಿ ಕಳೆದು ಹೋದಂತಹ ವರುಷವನ್ನೊಮ್ಮೆ ಮೆಲುಕು ಹಾಕಿದರೆ ನಮ್ಮ ಜೀವನದಲ್ಲಿನ ಸಿಹಿ-ಕಹಿ ನೆನಪುಗಳ ತೆರೆದ ಪುಟಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. " ಅಬ್ಬಾ ! ಈ ವರುಷ ಇಷ್ಟು ಬೇಗನೆ ಮುಗಿದು ಹೋಯಿತಲ್ಲಾ ?! " ಎಂದು ನಿಟ್ಟುಸಿರು ಬಿಡುವಾಗ ಸಂದ ವರುಷದಲ್ಲಿ ನಾನೇನು ಮಾಡಿದೆ? ಏನು ಗಳಿಸಿದೆ? ಏನು ಅನುಭವಿಸಿದೆ? ... ಹೀಗೆ ಅನೇಕ ಪ್ರಶ್ನೆಗಳೊಂದಿಗೆ ನಮ್ಮ ಏಳುಬೀಳುಗಳ ನೆನಪುಗಳು ನಮ್ಮ ಮನಃಪಟಲದಲ್ಲಿ ಚಿತ್ತಾರವನ್ನ ಬಿಡಿಸುತ್ತವೆ.

ಹೊಸ ವರುಷ ಎಂದರೆ ಹೀಗೇನೇ. ಬರುವಾಗ ಏನೋ ಖುಷಿ, ಏನೋ ಸಂಭ್ರಮ ಹೊತ್ತು ತರುತ್ತದೆ. ಬರುವ ವರ್ಷಕ್ಕೆ ಮೊದಲೇ ಅದಕ್ಕಾಗಿ ಪೂರ್ವ ತಯಾರಿ... ಹೊಸ ವರ್ಷಕ್ಕಾಗಿ ಹೊಸ ಹೊಸ ಆಸೆಗಳು... ಜೀವ ತುಂಬಲಿಟ್ಟಂತಹ ಕನಸುಗಳು... ಇನ್ನೇನೋ... ಇನ್ನೇನೋ... ಇದನೆಲ್ಲವನ್ನ ಕಾರ್ಯರೂಪಕ್ಕೆ ತರಬೇಕೆಂದು ಛಲತೊಟ್ಟು ಹೊಸ ಚೈತನ್ಯದಿಂದ ಕಾಯುವ ಜನಮಾನಸ.

ಪ್ರಸ್ತುತ ವರ್ಷದಲ್ಲಿ ಏನೇನೋ ಘಟನೆಗಳು ನಡೆದಿರಬಹುದು. ನಡೆದಿರುವಂತಹುಗಳು ಕಹಿ ಘಟನೆಗಳಾಗಿದ್ದರೆ ಅಂತಹ ಜಾಗದಲ್ಲಿ ಸಿಹಿ ತುಂಬುವ ಕಾತರ ; ಸಂತಸಭರಿತ ಸಮಯಗಳೇ ತುಂಬಿದ್ದರೆ ಅದೇ ಹಾಯಿದೋಣಿಯನ್ನ ಮುನ್ನಡೆಸಬೇಕೆಂಬ ಆತುರ. ಹೊಸತನ್ನ ತುಂಬುವ ಹಳೆಯದನ್ನ ಮರೆಯುವ ಒಟ್ಟಾರೆ ಚೈತನ್ಯ ತುಂಬಿದ ಹೊಸ ಆಶಾಕಿರಣಗಳಿಂದ ಸ್ವಾಗತಿಸುವ ಹಂಬಲ ಎಲ್ಲರದ್ದೂ.

ಜನವರಿ 1 ಭಾರತೀಯ ಸಂಸ್ಕೃತಿ ಪ್ರಕಾರ ಹೊಸ ವರ್ಷ ಅಲ್ಲದಿದ್ದರೂ, ಇಡೀ ಜಗತ್ತೇ ಹೊಸ ವರುಷ ಎಂದು ಬರಮಾಡಿಕೊಳ್ಳುವುದು ಈ ದಿನವನ್ನೇ. ಡಿಸೆಂಬರ್ 31ರ ರಾತ್ರಿ "ಟಾ..ಟಾ" "ಬೈ..ಬೈ" ಹೇಳುವ ತವಕ. ಮಧ್ಯರಾತ್ರಿ "ವೆಲ್ ಕಮ್" ಮಾಡುವ ಧಾವಂತ. ನಮ್ಮ ಹೊಸ ಹೊಸ ಉಪಾಯಗಳನ್ನ ಕಾರ್ಯರೂಪಕ್ಕೆ ತರುವ ಗಡಿಬಿಡಿ. ಒಟ್ಟಾಗಿ ಇದು ಬದಲಾವಣೆಯ ಹಂತ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಕುತೂಹಲದಿಂದ ತಾಳ್ಮೆಯಿಂದ ಕಾಯುವ ದಿನ.

ಚಿಕ್ಕ ಮಕ್ಕಳನ್ನ ಕೇಳಿ :
" ಹೊಸ ವರುಷಕ್ಕೆ ಚೆನ್ನಾಗಿ ಓದಬೇಕು "
" ಪಿಕ್ ನಿಕ್ ಹೋಗಬೇಕು "
" ಹೊಸ ಡ್ರೆಸ್ ಹಾಕಬೇಕು "
ಇನ್ನೇನೋ... ಇನ್ನೇನೋ... ಕನಸುಗಳು. ಅದೇ ಮಧ್ಯವಯಸ್ಕರನ್ನ ಕೇಳಿದರೆ ಅವರಿಗೆ ಅವರದ್ದೇ ಕಲ್ಪನೆಯ ಕನಸುಗಳ ಬುತ್ತಿ...

ಪ್ರತಿ ಬಾರಿ ಹೊಸ ವರ್ಷ ಬಂದಾಗಲೂ ಈ ವರ್ಷವಾದರೂ ತಾವು ಜೀವನದಲ್ಲಿ ಪ್ರಗತಿ ಹೊಂದಬೇಕು ಎನ್ನುವ ಆಕಾಂಕ್ಷೆ ಎಲ್ಲರಲ್ಲೂ ಇರುವುದು ಸಹಜ. ಆದರೆ ಜೀವನದಲ್ಲಿ ಏಳಿಗೆ ಸಾಧಿಸಬೇಕಾದರೆ ಏನಾದರೂ ಗುರಿ ಇಟ್ಟಕೊಂಡಿರಬೇಕಲ್ಲವೇ ? ಆ ಗುರಿಯತ್ತ ಏಕಮುಖವಾಗಿ, ಏಕಾಗ್ರಚಿತ್ತರಾಗಿ ತನುಮನವನ್ನ ಅರ್ಪಿಸಿ ಹೆಜ್ಜೆ ಇಟ್ಟಾಗಲೇ ಈಡೇರಬಹುದು.



ಹೊಸ ವರುಷಕ್ಕೆ ಕೆಲವರು ಜೀವನದಲ್ಲಿ ಪ್ರಗತಿ ಪಥದಲ್ಲಿ ಸಾಗಿದ್ದರೆ, ಇನ್ನು ಕೆಲವರು ಜೀವನ ರಾತ್ರಿಯಲ್ಲಿ ಸೋಲನ್ನು ಅನುಭವಿಸಲು ಕಾರಣವೇನು ? ಎಂದು ತಿಳಿಯ ಹೊರಡುತ್ತಾರೆ. ಹಾಗೆ ಹೊರಟಾಗ ಯಾವುದೇ ಗೊತ್ತು ಗುರಿ ಇಲ್ಲದೇ, ಲಂಗುಲಗಾಮಿಲ್ಲದೇ ಜೀವನ ಸಾಗಿಸುತ್ತಿರುವ ಕಾರಣ ಎದುರಾಗುತ್ತದೆ. " ಛೇ ! ಹಾಗೆ ಮಾಡಿದ್ದರೆ ಚೆನ್ನಾಗಿತ್ತು. ಹೀಗೆ ಮಾಡಿದರೆ ಚೆನ್ನಾಗಿತ್ತು " ಎಂದು ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು, ಭೂತಕಾಲದ ಸಿಹಿಕಹಿ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಚಿಂತೆಯ ಚಿತೆಯಲ್ಲಿ ಬೇಯುತ್ತಾ, ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ಜನರು ನಮ್ಮನಡುವೆ ಇರುತ್ತಾರೆ. ನಿನ್ನೆ ಮೊನ್ನೆಗಳ ಕಹಿಗಳನ್ನು ಮರೆತು ನಾಳೆಗಳ ಸಿಹಿಯನ್ನ ಕಲ್ಪಿಸಿಕೊಳ್ಳುವ ಮನಃ ಸ್ಥಿತಿಯನ್ನು ಬೆಳೆಸಿಕೊಂಡರೆ ಭವಿಷ್ಯ ಹಸನಾಗುವುದರಲ್ಲಿ ಸಂಶಯವಿಲ್ಲ. ನಕಾರಾತ್ಮಕ ಚಿಂತನೆಗಳನ್ನ ಬಿತ್ತುವ ನಿರಾಶಾವಾದಿ ಜನರ ಮಾತುಗಳಿಗೆ ಕಿವಿಗೊಡದೇ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡು, ಹೊಸ ವರ್ಷದಲ್ಲಿ ಏನಾದರೂ ಸಾಧನೆ ಮಾಡುತ್ತೇನೆಂಬ ಆತ್ಮವಿಶ್ವಾಸದೊಂದಿಗೆ ಆಶಾವಾದಿಯಾಗಿ ಮುಂದೆ ಹೆಜ್ಜೆ ಇಟ್ಟರೆ ಬೆಳಕಿನ ಆಶಾಕಿರಣ ಮೂಡಬಹುದು.

ಕನಸುಗಳನ್ನ ಕಾಣಬೇಕು. ಕನಸು ಕಂಡರೆ ಮಾತ್ರ ಅದನ್ನ ಸಾಕಾರಗೊಳಿಸಬಹುದು. ಆಸೆಗಳನ್ನು ಇಟ್ಟುಕೊಳ್ಳಲೇಬೇಕು. ಆದರೆ ಅತಿ ಆಸೆ ಇರಬಾರದು. ಯಾರು ಕನಸುಗಳನ್ನು ಹೊಂದಿರುತ್ತಾರೋ, ಆಸೆಗಳನ್ನ ಇಟ್ಟುಕೊಂಡಿರುತ್ತಾರೋ, ದೃಢ ನಿರ್ಧಾರಗಳನ್ನ ಬೆಳೆಸಿಕೊಂಡಿರುತ್ತಾರೋ ಅವರು ಮಾತ್ರ ಜೀವನದಲ್ಲಿ ಮುನ್ನಡೆಯಲು ಸಾಧ್ಯ. ಹೊತ್ತಿರುವ ಕನಸುಗಳನ್ನೆಲ್ಲ ಸಂಪೂರ್ಣಗೊಳಿಸಬೇಕೆಂದಿಲ್ಲ. ಎಲ್ಲವನ್ನ ಸಂಪೂರ್ಣಗೊಳಿಸಬೇಕೆಂಬ ಭಾರವನ್ನ ಹೊರಬಾರದು ಕೂಡ. ಆದರೆ ಯಶಸ್ವಿಗೊಳಿಸಬೇಕು ಎಂಬ ಇಚ್ಛೆ ಬೇಕು. ಒಂದು ವೇಳೆ ಸೋಲು ಬಂದಲ್ಲಿ ಅದನ್ನು ಎದುರಿಸುವ ಧೈರ್ಯ ಕೂಡ ಬೇಕು. ಯಾಕೆಂದರೆ ಸೋಲೇ ಗೆಲುವಿನ ಸೋಪಾನ. ಆ ಸೋಲನ್ನ ಮುಂದಿನ ವರ್ಷಕ್ಕಾಗಿ ಕಾದಿಡಬಹುದು.

ಇನ್ನು ಕೆಲವರು ಹೊಸ ವರ್ಷಕ್ಕೆ ಗುರಿಗಳನ್ನ ಇಟ್ಟುಕೊಂಡು ಕಾರ್ಯೋನ್ಮುಖರಾಗಿ ಆರಂಭಶೂರರರಾಗಿ ಕೆಲಕಾಲದ ಬಳಿಕ ಗುರಿಗಳನ್ನೇ ಮರೆತು, ಮತ್ತೊಂದು ವರ್ಷ ಕಾಲಿರಿಸಿದಾಗ ತಮ್ಮ ಸಾಧನೆಯ ಕಡೆ ಹಿನ್ನೋಟ ಹರಿಸಿ ಸಾಧನೆ ಶೂನ್ಯವೆಂದು ಕಂಡು ಬಂದಾಗ ನಿರಾಶಾವಾದಿಯಾಗಿಬಿಡುತ್ತಾರೆ. ಹಾಗೆ ನಿರಾಶಾವಾದಿಯಾಗುವ ಬದಲು, ಗುರಿಯತ್ತ ತನ್ಮಯತೆಯಿಂದ-ದೃಢಚಿತ್ತದಿಂದ ಹೆಜ್ಜೆ ಇರಿಸಿದರೆ ಅವುಗಳ ಅನುಷ್ಠಾನಕ್ಕೆ ಅವಿರತ ಶ್ರಮವಹಿಸಿದರೆ ಮುಳ್ಳಿನ ಹಾದಿ ಕಳೆದು ಸಾಧನೆಯ ಶೃಂಗ ಮುಟ್ಟುವುದರಲ್ಲಿ ಸಂಶಯವಿಲ್ಲ. ನಿನ್ನೆಗಳನ್ನು ಮರೆತು - ನಾಳೆಗಳನ್ನ ನೆನೆನೆನೆದು - ಕಲ್ಪನೆಯ ಕನಸುಗಳನ್ನು ಹೊಸೆದು - ಅವುಗಳ ಸಾಕಾರದತ್ತ ಸಾಗಿದರೆ, ಜೀವನ ಆಗುವುದು ಸಾರ್ಥಕ.


ಮರೆಯಲಾಗದ ವರ್ಷಕ್ಕೆ ವಂದನೆಗಳೊಂದಿಗೆ,

ಹೊಸ ಋತುಮಾನವು ನಿಮ್ಮಲ್ಲಿ ಚೈತನ್ಯ ತುಂಬಲಿ - ಹೃದಯಿಸಲಿ ಎಂಬ ಆಶಯದೊಂದಿಗೆ,

ಸಂಪದ್ಭರಿತವಾದ ನಿಮ್ಮೆಲ್ಲಾ ಕನಸುಗಳನ್ನ ನನಸಾಗಿಸುವ ಮರೆಯಲಾಗದ ವರ್ಷ ಬರಲೆಂದು ಹಾರೈಕೆಯೊಂದಿಗೆ,

'ಸ್ಪರ್ಧಾರ್ಥಿ' ಗಳೆಲ್ಲರಿಗೂ ಹೊಸ ವರುಷದ ಶುಭಾಷಯಗಳು.


- ಎಸ್.ಎಸ್.ಪಾಟೀಲ, 
ಹವ್ಯಾಸಿ ಬರಹಗಾರರು


Dec 24, 2010

ಜಪಾನ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 19

0 ಪ್ರತಿಕ್ರಿಯೆಗಳು
ಸುದ್ದಿ : 92.4 ಟ್ರಿಲಿಯನ್ ಯೆನ್ ಮೊತ್ತದ ಬಜೆಟ್ ಮಂಡಿಸಿದ ಜಪಾನ್ ಸರ್ಕಾರ


ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ಜಾಗತಿಕ ನಕ್ಷೆಯಲ್ಲಿ ಜಪಾನ್

ಜಪಾನ್ ಸ್ವಾಭಾವಿಕ

ನೆರೆ-ಹೊರೆ




  • ಸೂರ್ಯೋದಯದ ನಾಡು ಎಂದೇ ಪ್ರಸಿದ್ಧವಾಗಿರುವ ಜಪಾನ್ ಗೆ, (ಆ ಹೆಸರಿನ ಅರ್ಥ ಕೂಡ ಅದೇ !!) ಅಧಿಕೃತ ಭಾಷೆಯಲ್ಲಿ ಸ್ಟೇಟ್ ಆಫ್ ಜಪಾನ್ ಎಂದು ಹೆಸರಿದೆ.
  • ಜಪಾನ್ ದೇಶ ದ್ವೀಪಗಳ ಸಮೂಹ. ಇಂತಹ ಭೂಪ್ರದೇಶಗಳನ್ನ Archipelago ಅಂತ ಕರೆಯುತ್ತಾರೆ ಅನ್ನೋದನ್ನ ಸ್ಪರ್ಧಾರ್ಥಿಗಳು ನೆನಪಿಡಬೇಕು. ( Archipelago = Island Group = is a chain or cluster of islands that are formed tectonically ) ಜಪಾನ್ ತನ್ನ ಸುಪರ್ದಿಯಲ್ಲಿ 3000+ ದ್ವೀಪಗಳನ್ನ ಹೊಂದಿದೆ.
  • ಜಪಾನ್ ದೇಶ ಪರ್ವತಮಯವಾಗಿದ್ದು ಬಹಳ ಪರ್ವತಗಳು ತಮ್ಮ ಉದರದಲ್ಲಿ ಜ್ವಾಲಾಮುಖಿಗಳನ್ನ ಹೊಂದಿವೆ.
  • ಚೀನಾ ದೇಶವನ್ನ ಆರ್ಥಿಕತೆಯಲ್ಲಿ ಹಿಂದಿಕ್ಕಲು ಪ್ರಯತ್ನಿಸುತ್ತಿರುವ ಜಪಾನ್, ಜನಸಂಖ್ಯೆಯಲ್ಲೂ ತೀರ ಹಿಂದೇನಿಲ್ಲ. ಜಗತ್ತಿನ ಜನಸಂಖ್ಯೆಯಲ್ಲಿ 10ನೇ ಸ್ಥಾನ ಹೊಂದಿದೆ. ದೇಶದ ವಿಸ್ತೀರ್ಣ ಚಿಕ್ಕದಿದ್ದರೇನಾಯಿತು !! ನಾವು ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಹಂಬಲ !!! ನಮ್ಮ ದೇಶದಲ್ಲಿ ಜಾಗ ಇಲ್ಲದಿದ್ದರೇನಾಯಿತು, ಬೇರೆ ದೇಶದಲ್ಲಿ ಹೋಗಿ ನೆಲೆಸಿದರಾಯಿತು ಎನ್ನುವ Idea ಇರಬೇಕು !!!!
  • ದೇಶದಲ್ಲಿ Emperor ಇವತ್ತಿಗೂ ಅತ್ಯುಚ್ಛ ಸ್ಥಾನವನ್ನಲಂಕಿರಿಸಿರುವ ವ್ಯಕ್ತಿ. Diet ಎಂಬ ಹೆಸರಿನ ಜನಪ್ರತಿನಿಧಿಗಳ ಸಭೆ ಕೂಡ ಇದೆ. ನಮ್ಮ ದೇಶದ್ದು ಸಂಸತ್ತು (Parliament) ಅನ್ನೋದು ನಿಮಗೆ ಗೊತ್ತಿದೆ.
  • 1945ರಲ್ಲಿ ಅಣು ಬಾಂಬ್ ಎಂಬ ವಿಕೃತ ಪ್ರತೀಕಾರಕ್ಕೆ ತುತ್ತಾದ ಜಪಾನ್ ಇಂದು ಜಗತ್ತಿನಲ್ಲಿ ಅಮೆರಿಕಾ & ಚೀನಾ ನಂತರ ಮೂರನೇ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ಅಂದು ಜಪಾನ್ ದೇಶದಲ್ಲಿ ಇದ್ದ ಅಭದ್ರತೆ ಒಂದು ಕಡೆಯಾದರೆ, ಅದೇ ಹೊತ್ತಿನಲ್ಲಿ ಸ್ವಾತಂತ್ರ್ಯ ಪಡೆದ ಭಾರತ ದೇಶ ಬ್ರಿಟಿಷರ ದೋಚುವಿಕೆಯಿಂದ ಬಡ ದೇಶವಾಗಿದ್ದುದು ನಿಜ. ಆದರೆ ಇವರ ಅಧೀನದ ಚಿಕ್ಕ ಭೂಪ್ರದೇಶದಲ್ಲಿ ಇವರು ತೋರಿರುವ ಅದಮ್ಯ ಸಾಹಸ ಖಂಡಿತ ಇಡೀ ಜಗತ್ತಿಗೆ ಮಾದರಿ. ಹೀಗಿರುವಾಗ ಭಾರತ & ಜಪಾನ್ ಎರಡೂ ದೇಶಗಳು ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಗಿಟ್ಟಿಸಲು ತವಕಿಸುತ್ತಿವೆ. ಆ ಸ್ಥಾನಕ್ಕೆ ಪೈಪೋಟಿ ನಡೆಸಲು ಅವರಿಬ್ಬರೂ ತಂತಮ್ಮ ಅರ್ಹತಾ ಪಟ್ಟಿಯನ್ನೂ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈ ಕೆಳಕಂಡ ಪಟ್ಟಿ ನೋಡಿದ ಮೇಲೆ ಎದೆ ಮೇಲೆ ಕೈ ಇಟ್ಟುಕೊಂಡು ಅರ್ಹತೆಯ ಬಗ್ಗೆ ಮಾತಾಡಲು ಯಾರಿಗೆ 'ಅರ್ಹತೆ' ಇದೆಯೆಂದು ನೀವು ಸ್ಪರ್ಧಾರ್ಥಿಗಳೂ ತೀರ್ಮಾನಿಸಿ :
 

ಭಾರತ
ಜಪಾನ್
ವಿಸ್ತೀರ್ಣ
7ನೇ ಸ್ಥಾನ
61ನೇ ಸ್ಥಾನ
ಜನಸಂಖ್ಯೆ
2ನೇ ಸ್ಥಾನ
10ನೇ ಸ್ಥಾನ
ಸ್ವಂತ ಸಂವಿಧಾನ ಅಂಗೀಕರಿಸಿದ್ದು
1950
1947
GDP (PPP)
$1.367 ಟ್ರಿಲಿಯನ್
$4.267 ಟ್ರಿಲಿಯನ್
HDI
119ನೇ ಸ್ಥಾನ
11ನೇ ಸ್ಥಾನ
ಕರೆನ್ಸಿ
1 ಜಪಾನ್ ಯೆನ್
= 0.5508 ಭಾರತ ರೂಪಾಯಿ
------
81.3 ಜಪಾನ್ ಯೆನ್ = 1 US $
1 ರೂಪಾಯಿ
= 1.8063 ಜಪಾನ್ ಯೆನ್
------
45.02 ರೂಪಾಯಿ = 1 US $
ಅಂದ್ರೆ ಎಂಟಾಣೆ ಕೊಟ್ರೆ ಒಂದು ಜಪಾನಿ ಯೆನ್ ಪಡೆಯಬಹುದು. ಅದೇ ರೀತಿ 45 ರೂಪಾಯಿಗೆ ಒಂದು ಯು,ಎಸ್.ಡಾಲರ್ ಪಡೆದರೆ 81 ಜಪಾನಿ ಯೆನ್ ಗೆ ಒಂದು ಯು,ಎಸ್.ಡಾಲರ್ ಪಡೆಯಬಹುದು.
ಸಾಕ್ಷರತೆ (clik here)
168ನೇ ಸ್ಥಾನ
32ನೇ ಸ್ಥಾನ
ರಫ್ತು ಶಕ್ತಿ
18ನೇ ಸ್ಥಾನ
4ನೇ ಸ್ಥಾನ
ಆಮದು ಶಕ್ತಿ
15ನೇ ಸ್ಥಾನ
5ನೇ ಸ್ಥಾನ
Purchasing Power Parity(PPP)
4ನೇ ಸ್ಥಾನ
3ನೇ ಸ್ಥಾನ
Life Expectency (ಆರೋಗ್ಯ ಸೌಲಭ್ಯಗಳನ್ನಾಧರಿಸಿದೆ)
139ನೇ ಸ್ಥಾನ
(64.7ವರ್ಷಗಳು)
1ನೇ ಸ್ಥಾನ
(82.6 ವರ್ಷಗಳು)
Hunger Index
18ಸ್ಥಾನ
ಪಟ್ಟಿಯಲ್ಲಿ ಬರುವುದೇ ಇಲ್ಲ !!
Poverty Index
HDI ನಲ್ಲಿ 100+ ಸ್ಥಾನ ಹೊಂದಿರುವ ಭಾರತ ಇನ್ನು ಬಹಳ ಪ್ರಯತ್ನ ಪಡಬೇಕು.
HDI ನಲ್ಲಿ 11ನೇ ಸ್ಥಾನ ಪಡೆದಿರುವ ಜಪಾನ್ ಜಗತ್ತಿನಲ್ಲಿ ಬಡತನದ ಪ್ರಮಾಣ ಅತಿ ಕಡಿಮೆ ಇರುವ ದೇಶಗಳ ಪಟ್ಟಿಯಲ್ಲಿ 12ನೇ ಸ್ಥಾನ ಹೊಂದಿದೆ.
ಇಷ್ಟೆಲ್ಲಾ ಬೆಚ್ಚಿ ಬೀಳಿಸುವ ಅಂಕಿಸಂಖ್ಯೆಗಳನ್ನ ಇಟ್ಟುಕೊಂಡಿರುವ ಭಾರತ ತನ್ನ ದೇಶದಲ್ಲಿ ತಾಂಡವವಾಡುತ್ತಿರುವ ಅನಕ್ಷರತೆ-ಭೃಷ್ಟಾಚಾರ-ಹದಗೆಟ್ಟಿರುವ ಆರೋಗ್ಯ ಸೇವೆ ... ಇವನ್ನೆಲ್ಲಾ ಮರೆತು VETO POWER ಗಾಗಿ ಬಡಿದಾಡುವುದು ಎಷ್ಟು ಸಮಂಜಸ !! 

ಪಾಕಿಸ್ತಾನದಂಥ ಪಾಪಿಯ ಜೊತೆಗೂ ನ್ಯಾಯವನ್ನೇ ಮಾತಾಡುವ ಭಾರತ, ಈ ಸ್ಥಾನ ಪಡೆಯಲು ನ್ಯಾಯಯುತವಾಗಿಯೂ ಅರ್ಹವೇ ?!! 

ನಾವು ಭಾರತೀಯರು ಕೂಡ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುದು ನಿಜವೇ ಇದ್ದರೂ Sustained Development ಮತ್ತು ಬರೀ Development ಗೆ ವ್ಯತ್ಯಾಸವಿದೆ. 

ನಮ್ಮ ದೇಶದಲ್ಲಿ ನೆಲೆಸಿರುವ ಅನಕ್ಷರತೆ ಹೀಗೇ ಮುಂದುವರೆದು ನಾವಲ್ಲಿ ವೀಟೋ ಚಲಾಯಿಸಿದರೆ ನಗುವುದಿಲ್ಲವೇ ಜಗತ್ತಿನ ಜನ ?? 

ಒಬ್ಬ ವಿದ್ಯಾರ್ಥಿ ತನ್ನ ಜಾತಿ ಇದೇ ಎಂದು ದೃಢೀಕರಿಸಿಕೊಳ್ಳುವ ಪ್ರಮಾಣಪತ್ರ ಪಡೆಯಲು ಸಾವಿರ ರೂಪಾಯಿ ಚೆಲ್ಲಲೇ ಬೇಕಿರುವುದನ್ನ ನೋಡಿ ನಗೊಲ್ವಾ ಅವರು?? 

ಅಷ್ಟಕ್ಕೂ ಮಿಗಿಲಾಗಿ ತನ್ನ ತಲೆದೂಗಲೇಬೇಕಾದ ಸಾಮರ್ಥ್ಯಗಳನ್ನ ಮಾತ್ರ ಮುಂದಿಟ್ಟುಕೊಂಡು VETO ಪಡೆಯಲು ಹಂಬಲಿಸುತ್ತಿರುವ ಭಾರತದಲ್ಲಿ ಒಬ್ಬ ವಿದ್ಯಾರ್ಥಿಯ ವೈಯಕ್ತಿಕ ಸಾಮರ್ಥ್ಯ ಮಾತ್ರ ಮಾನದಂಡವಲ್ಲ ; ಅವನ ಜಾತಿ ಕೂಡ ಅವನಿಗೆ ಮಾನದಂಡವಾಗುತ್ತದೆ ಎಂದರೆ ಹಾಸ್ಯಾಸ್ಪದವಲ್ಲವೇ ??



  • ಜಪಾನ್ ದೇಶದ 80 ಪ್ರತಿಶತ ಭೂಭಾಗ ಯಾವುದೇ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಯೋಗ್ಯವಲ್ಲ !!
  • ಇದು ಸಾಲದು ಎಂಬಂತೆ ಮೆದು ನೆಲ & ಭೂಕಂಪದ ಅಭದ್ರತೆ ಸದಾ ಅಲ್ಲಿನ ಜನರಿಗೆ ದುಸ್ವಪ್ನವಾಗಿದೆ.
  • ಇಷ್ಟಿದ್ದರೂ ಅತಿ ಹೆಚ್ಚು ಜನಸಾಂದ್ರತೆ ಇರುವ ದೇಶಗಳ ಪಟ್ಟಿಯಲ್ಲಿ ಜಪಾನ್ ಗೆ 36ನೇ ಸ್ಥಾನವಿದೆ. (ಭಾರತಕ್ಕೆ 32ನೇ ಸ್ಥಾನವಿದೆ.)

: ರವಿ

Dec 23, 2010

ಗ್ರೀಸ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 18

0 ಪ್ರತಿಕ್ರಿಯೆಗಳು
ಸುದ್ದಿ : ರಾಷ್ಟ್ರದ ಬಜೆಟ್ ನಲ್ಲಿ ಮಿತವ್ಯಯತೆ(Austerity) ಯನ್ನ ಮಂಡಿಸಿದ ಗ್ರೀಕ್ ಸರ್ಕಾರ


ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ಜಾಗತಿಕ ನಕ್ಷೆಯಲ್ಲಿ ಗ್ರೀಸ್


ಗ್ರೀಸ್ ಸ್ವಾಭಾವಿಕ

ನೆರೆ-ಹೊರೆ



  • ಗ್ರೀಸ್ ದೇಶಕ್ಕಿರುವ ಇನ್ನೊಂದು ಜನಪ್ರಿಯ ಹೆಸರು ಹೆಲ್ಲಾಸ್(Hellas), ಇದೇ ಕಾರಣಕ್ಕೆ ಈ ದೇಶವನ್ನ Hellenic Republic ಎಂದು ಅಧಿಕೃತ ಭಾಷೆಯಲ್ಲಿ ಹೇಳಲಾಗುತ್ತದೆ.
  • ಅಲ್ಬೇನಿಯಾ. ಮಸಿಡೋನಿಯಾ, ಬಲ್ಗೇರಿಯಾ & ಟರ್ಕಿ ದೇಶಗಳು ಗ್ರೀಸ್ ದೇಶದ ನೆರೆಯವರು.
  • ಪೂರ್ವ, ದಕ್ಷಿಣ & ಪಶ್ಚಿಮಕ್ಕೆ ಸಮುದ್ರತೀರವನ್ನ ಹೊಂದಿರುವ ಗ್ರೀಸ್ ದೇಶ ಜಗತ್ತಿನಲ್ಲಿ 12ನೇ ಅತಿ ಉದ್ದದ ಕರಾವಳಿ ಹೊಂದಿದೆ. ( ಭಾರತ-19 ; ಕೆನಡಾ-1 ; ಇಂಡೋನೇಷಿಯಾ-2 ; ಗ್ರೀನ್ ಲ್ಯಾಂಡ್-3 ; ರಷಿಯಾ-4 ; ಫಿಲಿಪ್ಪೀನ್ಸ್-5 ; ಜಪಾನ್-6 ; ಆಸ್ಸ್ರೇಲಿಯಾ-7 ; ನಾರ್ವೆ-8 ; ಅಮೆರಿಕಾ-9 ; ನ್ಯೂಝಿಲ್ಯಾಂಡ್-10 )
  • ಗ್ರೀಸ್ ದೇಶ ಪರ್ವತಮಯವಾಗಿದ್ದು ದೇಶದ ಭೂಭಾಗದ 80 ಪ್ರತಿಶತ ಭಾಗ ಪರ್ವತಾವೃತವಾಗಿದೆ.
  • ಸದರಿ ದೇಶದ ಅಧಿಪತ್ಯದಡಿಯಲ್ಲಿ ಸುಮಾರು 1400 ದ್ವೀಪಗಳು ಬರುತ್ತವೆ. ಇವುಗಳಲ್ಲಿ 200 ಚಿಲ್ಲರೆ ದ್ವೀಪಗಳಲ್ಲಿ ಮಾತ್ರ ಮನುಷ್ಯರು ವಾಸಿಸುತ್ತಾರೆ.
  • ಜಗತ್ತಿನ ಪಾಶ್ಚಿಮಾತ್ಯ ನಾಗರೀಕತೆಯ ತೊಟ್ಟಿಲು ಎನಿಸಿಕೊಂಡಿರುವುದು ಗ್ರೀಸ್ ನಾಗರೀಕತೆ.
  • ಪ್ರಜಾಪ್ರಭುತ್ವ, ಪಾಶ್ಚಿಮಾತ್ಯ ತತ್ವಶಾಸ್ತ್ರ, ಒಲಿಂಪಿಕ್ ಕ್ರೀಡೆಗಳು, ಪಾಶ್ಚಿಮಾತ್ಯ ಸಾಹಿತ್ಯ, ಸಾರ್ವಜನಿಕ ಆಡಳಿತ ತತ್ವಗಳು, ಪಶ್ಚಿಮದ ನಾಟಕ ಪದ್ಧತಿ... ಇತ್ಯಾದಿಗಳ ಜನ್ಮಸ್ಥಾನ ಗ್ರೀಸ್.
  • ಸದರಿ ಗ್ರೀಸ್ ಭಾರತಕ್ಕಿಂತ ಎಷ್ಟೋ ಪಾಲು ಚಿಕ್ಕದಿದ್ದರೂ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶವಾಗಿದೆ.
  • ಒಟ್ಟೋಮನ್ ಆಡಳಿತವನ್ನ ಕಿತ್ತೊಗೆದು 1830ರಲ್ಲಿ ಆಧುನಿಕ ಗ್ರೀಕ್ ಸೃಷ್ಟಿಯಾಯಿತು.
  • ಗ್ರೀಸ್ ದೇಶ ಮೊದಲಿನಿಂದ ಯುರೋಪಿಯನ್ ಒಕ್ಕೂಟದ ಭಾಗವಾಗಿದೆ. ಈ ಅಂಶ ಯಾಕೆ ಪ್ರಮುಖ ಅಂದ್ರೆ ಯುರೋಪ್ ಖಂಡದ ಭಾಗವಾಗಿಯೂ ಇಂದಿಗೂ ಯುರೋಪಿಯನ್ ಒಕ್ಕೂಟ ಸೇರದ ಕೆಲವು ದೇಶಗಳಿವೆ ಅದಕ್ಕೆ.
  • ನಮ್ಮ ದೇಶದ ಸಂಸ್ಕೃತಿಯಲ್ಲಿ ಹಿಮಾಲಯಕ್ಕೆ ನೀಡಿರುವಷ್ಟೇ ದೈವಿಕತೆ ಆ ದೇಶದಲ್ಲಿ Mount Olympus ಗೆ ನೀಡಲಾಗಿದೆ.
  • ದೇಶದ ಈಶಾನ್ಯ ಭಾಗಕ್ಕೆ ಅತಿ ಪ್ರಾಚೀನ ಕಗ್ಗಾಡು ವ್ಯಾಪಿಸಿದೆ.

 : ರವಿ

Dec 22, 2010

ಬಾಂಗ್ಲಾದೇಶ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 17

1 ಪ್ರತಿಕ್ರಿಯೆಗಳು
ಸುದ್ದಿ : ಮುಚ್ಚಿಹೋಗಿದ್ದ ಬಾಂಗ್ಲಾದೇಶದ ವಿದೇಶಿ ಕಲ್ಲಿದ್ದಲು ಕಂಪೆನಿಯ ಮರುಕಾರ್ಯನಿರ್ವಹಣೆಗೆ ಒತ್ತಡ ತಂದಿದ್ದ ಅಮೆರಿಕಾ - ವಿಕಿಲೀಕ್


ಸುದ್ದಿಯಲ್ಲಿರುವ ಸ್ಥಳ ನಕ್ಷೆ :

ವಿಶ್ವನಕ್ಷೆಯಲ್ಲಿ ಬಾಂಗ್ಲಾದೇಶ

ಬಾಂಗ್ಲಾದೇಶ ಸ್ವಾಭಾವಿಕ

ನೆರೆ-ಹೊರೆ




  • ಅನಾದಿ ಕಾಲದಿಂದ ಭರತವರ್ಷದ ಭಾಗವಾಗಿದ್ದ ಬಂಗಾಳ 1905ರಲ್ಲಿ ಮೊದಲ ಬಾರಿಗೆ ಬಂಗಾಳ ವಿಭಜನೆಯ ಮೂಲಕ ಭಾರತ ನಕಾಶೆಯಿಂದ ಹೊರಗುಳಿಯಿತು. ಮುಂದೆ 1947ರಲ್ಲಿ ಭಾರತ ಸ್ವತಂತ್ರಗೊಂಡು ಪಾಕಿಸ್ತಾನವೆಂಬೊಂದು ದೇಶ ಉಗಮವಾದಾಗ, ಆ ದೇಶದ ಪೂರ್ವ ಹಿಸ್ಸೆಯಾಗಿ ಅವರಿಗೆ ಬಾಂಗ್ಲಾದೇಶವನ್ನ ನೀಡಲಾಯಿತು.
  • ಹಿಂದೊಮ್ಮೆ ಹಿಂದೂ ನಾಡಾಗಿದ್ದ ಬಾಂಗ್ಲಾದೇಶದಲ್ಲಿ ಇಂದು 90% ಮುಸ್ಲಿಂ ಜನಸಂಖ್ಯೆಯಿದೆ. & ವಿಸ್ತೀರ್ಣದಲ್ಲಿ ಚಿಕ್ಕದಿದ್ದರೂ ಜನಸಂಖ್ಯೆಯಲ್ಲಿ ಜಗತ್ತಿನ 8ನೇ ಸ್ಥಾನ ಪಡೆದುಕೊಂಡಿದೆ. ಅಂತೆಯೇ ಪಾಕಿಸ್ತಾನ 6ನೇ ಸ್ಥಾನ ಪಡೆದಿದೆ.
  • ಬಾಂಗ್ಲಾದೇಶದ ಗಡಿಯನ್ನ ಬಹುತೇಕ ಭಾರತ ಸುತ್ತುವರೆದಿದ್ದರೂ ಆಗ್ನೇಯ ಮೂಲೆಯಲ್ಲಿ ಮಯನ್ಮಾರ್ ಇಣುಕಿದೆ.
  • ಗಂಗಾ & ಬ್ರಹ್ಮಪುತ್ರಾ ನದಿಗಳು ಈ ದೇಶದ ಜೀವನಾಡಿಗಳು. ಭಾರತದಲ್ಲಿ ಗಂಗಾ ಎನಿಸಿಕೊಳ್ಳುವ ನದಿ, ಬಾಂಗ್ಲಾ ಪ್ರವೇಶಿಸಿದ ನಂತರ ಪದ್ಮಾ ಎಂದು ಹೆಸರು ಬದಲಾಯಿಸುತ್ತದೆ !! ಬ್ರಹ್ಮಪುತ್ರಾ ಕೂಡ ಜಮುನಾ ಎಂದು ಹೆಸರು ಬದಲಾಯಿಸಿಕೊಳ್ಳುತ್ತದೆ. ಇದರ ಜೊತೆಗೆ ಮೇಘನಾ ಎಂಬೊಂದು ನದಿಯೂ ಪ್ರಮುಖ ನದಿಯಾಗಿದೆ. ಗಂಗಾ ಜಮುನಾ ಸೇರಿ ಮುಂದೆ ಹೋಗಿ ಮೇಘನಾಳನ್ನ ಕೂಡಿಕೊಂಡು ಬಂಗಾಳಕೊಲ್ಲಿಯಲ್ಲಿ ವಿಶ್ರಮಿಸುತ್ತವೆ.
  • ಈ ನದಿಗಳು ಪ್ರತಿ ವರ್ಷದ ಮಳೆಗಾಲದಲ್ಲಿ ಮುನಿಸಿಕೊಳ್ಳುವ ಪರಿ ಭಯಂಕರ. 1998ರಲ್ಲಿ ಇದೇ ರೀತಿ ಮುನಿಸಿಕೊಂಡಾಗ ಬಾಂಗ್ಲಾದೇಶದ 2/3 ಭೂಭಾಗ ಈ ನದಿಗಳಿಂದ ಮುಚ್ಚಿ ಹೋಯ್ತು. ಅದು ಆಧುನಿಕ ಜಗತ್ತಿನಲ್ಲಿ ದಾಖಲಿಸಲ್ಪಟ್ಟ ಅತಿ ಭಯಂಕರ ಅತಿವೃಷ್ಟಿಯಾಯಿತು.
  • ಸುಂದರಬನ್ ಕಾಡುಗಳು ಇಲ್ಲಿನ ಭೌಗೋಳಿಕ ವಿಶೇಷಗಳು. ಜಗತ್ತಿನ ಬಹುತೇಕ ಮ್ಯಾಂಗ್ರೋವ್ ಕಾಡುಗಳಿಗೆ ಬಾಂಗ್ಲಾ ಆವಾಸಸ್ಥಾನ.
  • ಬಾಂಗ್ಲಾದೇಶ ಸ್ಥಿತಗೊಂಡಿರುವ ಪ್ರಸ್ಥಭೂಮಿಯ ಬಹುತೇಕ ಭಾಗ ಸಮುದ್ರ ಮಟ್ಟದಿಂದ ಕೇವಲ 12m ಅಥವಾ <12m ಎತ್ತರವಿದ್ದು, ಮುಂದೊಮ್ಮೆ ಸಮುದ್ರದ ನೀರಿನ ಮಟ್ಟ ಕೇವಲ 1m ಏರಿದರೂ ಬಹುತೇಕ ಬಾಂಗ್ಲಾ ಸಮುದ್ರದ ತಳ ಸೇರುವ ಅಪಾಯವಿದೆ.
  • ಚಿತ್ತಗಾಂಗ್ ನಿಂದ ಅನತಿ ದೂರದಲ್ಲಿರುವ Cox's Bazaar ಎಂಬಲ್ಲಿ ಜಗತ್ತಿನ ಅತಿ ಉದ್ದದ ಸ್ವಾಭಾವಿಕ ಬೀಚ್ ಇದೆ. ಇದು 120ಕಿಮೀ ವರೆಗೆ ಯಾವುದೇ ತಡೆಯಿಲ್ಲದೇ ಚಾಚಿಕೊಂಡಿದೆ.
  • ಪ್ರತಿ ವರ್ಷ ಈ ದೇಶದ ಮೇಲೆ ಬಂಗಾಳ ಕೊಲ್ಲಿಯಿಂದ ಚಂಡಮಾರುತಗಳು ದಾಳಿಯಿಟ್ಟು, ತಮ್ಮ ಪಾಲಿನ ಬಲಿ ಹೊತ್ತೊಯ್ಯುತ್ತವೆ.
  • ಸೆಣಬು ಇಲ್ಲಿನ ಪ್ರಾದೇಶಿಕ ಬೆಳೆ. ನೀರಿನ ಸರಬರಾಜು ಅವ್ಯಾಹತವಿರುವುದರಿಂದ ಭತ್ತ ಕೂಡ ಇಲ್ಲಿನ ಪ್ರಮುಖ ಬೆಳೆ. ವರ್ಷದಲ್ಲಿ 3 ಸಲ ಭತ್ತದ ರಾಶಿಯಾಗುತ್ತದೆ. ಈಶಾನ್ಯದ ಕಡೆ ಟೀ ಕೂಡ ಬೆಳೆಯಲಾಗುತ್ತದೆ.

 : ರವಿ

Dec 21, 2010

ರಷಿಯಾ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 16

0 ಪ್ರತಿಕ್ರಿಯೆಗಳು
ಸುದ್ದಿ : ಭಾರತಕ್ಕೆ ಭೇಟಿ ನೀಡಿದ ರಷಿಯಾದ ಅಧ್ಯಕ್ಷ ದಿಮಿತ್ರಿ ಮೆಡ್ವೆಡೇವ್


ಸುದ್ದಿಯಲ್ಲಿರುವ ಸ್ಥಳ ನಕ್ಷೆ :


ವಿಶ್ವನಕ್ಷೆಯಲ್ಲಿ ರಷಿಯಾ

ನೆರೆ-ಹೊರೆ

ರಷಿಯಾ ಸ್ವಾಭಾವಿಕ
ಕಾಕಾಸಸ್ ಪರ್ವತಶ್ರೇಣಿ

ರಷಿಯಾದ ಯುರೋಪ್ ಪಾಲನ್ನ ಪ್ರತ್ಯೇಕಿಸಿರುವ ಯೂರಲ್ ಪರ್ವತಶ್ರೇಣಿ(ಹಸಿರು ಬಣ್ಣದಲ್ಲಿರುವುದು ಏಷಿಯಾದ ಭೂಭಾಗ)



ಕ್ಯಾಸ್ಪಿಯನ್ ಸಮುದ್ರ ಸೇರುವ ವೋಲ್ಗಾ
ಬೈಕಲ್ ಸರೋವರ
















ರಾಹುಲ್ ಸಾಂಕೃತ್ಯಾಯನ್


ಟಂಡ್ರಾ ವಲಯ

















  • ಜಗತ್ತಿನ ಅತಿ ವಿಸ್ತೀರ್ಣದ ದೇಶ.
  • ಜಗತ್ತಿನ ಭೂಭಾಗದ 1/9ನೇ ಭಾಗದಷ್ಟು ಭೂಮಿ ರಷಿಯಾ ಒಡೆತನದಲ್ಲಿದೆ.
  • ಆದರೆ ಜನಸಂಖ್ಯೆಯಲ್ಲಿ 9ನೇ ಸ್ಥಾನ ಹೊಂದಿದೆ.
  • ರಷಿಯಾ ದೇಶಕ್ಕೆ ಸಿಕ್ಕಾಪಟ್ಟೆ ನೆರೆ-ಹೊರೆ ದೇಶಗಳಿವೆ : ನಾರ್ವೆ, ಫಿನ್ ಲ್ಯಾಂಡ್, ಇಸ್ಟೋನಿಯಾ, ಲ್ಯಾಟ್ವಿಯಾ, ಲಿಥುಯೇನಿಯಾ, ಪೋಲ್ಯಾಂಡ್, ಬೆಲರೂಸ್, ಉಕ್ರೇನ್, ಜಾರ್ಜಿಯಾ, ಅಜರ್ ಬೈಜಾನ್, ಕಜಕಿಸ್ತಾನ್, ಚೀನಾ, ಮಂಗೋಲಿಯಾ & ಉತ್ತರ ಕೊರಿಯಾ.
  • ಇದಲ್ಲದೇ ರಷಿಯಾ, ಜಪಾನ್ & ಅಮೆರಿಕಾದ ಜಲಗಡಿಯನ್ನೂ(Maritime Border) ಹಂಚಿಕೊಂಡಿದೆ.
  • ಜಗತ್ತಿನಲ್ಲಿರುವ ಅರಣ್ಯದ ಅತಿ ಹೆಚ್ಚು ಭಾಗ ರಷಿಯಾದಲ್ಲಿದೆ.
  • ಹಾಗೇನೇ ಸಿಹಿ ನೀರಿನ ಸಂಗ್ರಹ(Fresh Water) ಕೂಡ ಜಗತ್ತಿನ 25 ಪ್ರತಿಶತ ರಷಿಯಾದ ಸರೋವರ-ನದಿಗಳಲ್ಲಿದೆ.
  • ಈ ದೇಶದ ಇನ್ನೊಂದು ವಿಶೇಷತೆಯೆಂದರೆ : ದೇಶದ ಸ್ವಲ್ಪ ಭಾಗ ಯುರೋಪ್ ಖಂಡಕ್ಕೂ ಚಾಚಿದೆ. ಹೀಗಾಗಿ ಇದು ಯುರೇಷಿಯಾ ಭೂಭಾಗದಲ್ಲಿ ಸ್ಥಿತಗೊಂಡಿದೆ ಎಂದು ಹೇಳಲಾಗುತ್ತದೆ.
  • ಇನ್ನೂ ಒಂದು ವಿಶೇಷತೆಯಿದೆ. ನಮ್ಮ ದೇಶದಲ್ಲಿ ಇರುವುದು ಒಂದೇ ಸಮಯ ವಲಯ(IST). ಆದರೆ ರಷಿಯಾದಲ್ಲಿ 9 ಸಮಯವಲಯಗಳಿವೆ.
  • ಹಿಂದೊಮ್ಮೆ USSR ಹೆಸರಿನಲ್ಲಿ SuperPower ಆಗಿದ್ದು ನಂತರ 1991ರಲ್ಲಿ ಒಡೆದು ರಷಿಯಾ ಆಗಿರುವ ಸಮಾಚಾರ ನಿಮಗೆಲ್ಲ ತಿಳಿದೇ ಇದೆ. ತದನಂತರದಲ್ಲಿ ಅದೊಂದು ಸಂಘಟನೆ ರಚಿಸಿಕೊಂಡಿದೆ. ಅದುವೇ Commonwealth of Independent States. ಈ ಹಿಂದೆ ಅವಿಚ್ಛಿನ್ನ USSR ಭಾಗವಾಗಿದ್ದ ದೇಶಗಳು ಈ ಸಂಘಟನೆಯ ಸದಸ್ಯ ರಾಷ್ಟ್ರಗಳು.
  • ಈ ದೇಶದ ನೈಸರ್ಗಿಕ ಹಾಗೂ ಐತಿಹಾಸಿಕ ಕಾಳಜಿಯ ಬಗ್ಗೆ ತಿಳಿಯಲು ಈ ಅಂಕಿಅಂಶಗಳು ಸಾಕು ನೋಡಿ :
  • 23 ಜಾಗತಿಕ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು(Heritage Sites)
  • 40 ಯುನೆಸ್ಕೋ ರಕ್ಷಿತ ಜೀವವಲಯಗಳು(Biospheres)
  • 40 ರಾಷ್ಟ್ರ ಮಟ್ಟದ ಅಭಯಾರಣ್ಯಗಳು(National Park)
  • 101 ರಕ್ಷಿತ ಅರಣ್ಯಗಳು
ಈ ದೇಶದಲ್ಲಿವೆ.
  • ದೇಶದ ದಕ್ಷಿಣದಿಂದ ಪ್ರಾರಂಭವಾಗುವ ಕಾಡಿನ ಭಾಗದಲ್ಲಿ ಸ್ಟೆಪ್ಪೀ(Steppe) ಹುಲ್ಲುಗಾವಲಿನಿಂದ ಪ್ರಾರಂಭವಾಗಿ ಮಧ್ಯದಲ್ಲಿ ದಟ್ಟ ಕಾಡು ಮುಂದೆ ನಡೆದರೆ ಟಂಡ್ರಾ ಶೀತವಲಯವಿದೆ.
  • ಅದೇ ರೀತಿ ದಕ್ಷಿಣದಲ್ಲಿ ಕಾಕಾಸಸ್(Caucasus) ಪರ್ವತ ಶ್ರೇಣಿಯಿದೆ. ಈ ಶ್ರೇಣಿ ರಾಜಕೀಯವಾಗಿ ಅತ್ಯಂತ ಪ್ರಮುಖವಾಗಿದೆ. ಇಲ್ಲಿ ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಕಾಣಬರುವ ದಕ್ಷಿಣ ಒಸ್ಸೇಷಿಯಾ & ಜಾರ್ಜಿಯಾ ಯುದ್ಧದಲ್ಲಿ ರಷಿಯಾ ಮಧ್ಯ ಬರುವ ಸುದ್ದಿಯನ್ನ ನೆನಪಿಸಿಕೊಳ್ಳಿ.
  • ಅದೇ ರೀತಿ ಯೂರಲ್(Ural) ಪರ್ವತಶ್ರೇಣಿಗಳಿಗೂ ಪ್ರಮುಖ ಸ್ಥಾನವಿದೆ. ಯುರೋಪ್ & ರಷಿಯಾವನ್ನ ಭೇದಿಸುವಲ್ಲಿ ಈ ಪರ್ವತಶ್ರೇಣಿಗಳ ಪಾತ್ರ ಪ್ರಮುಖ.
  • ಅತಿ ಆಳದ, ಸಿಹಿನೀರಿನ, ಸ್ವಚ್ಛ & ಅತ್ಯಂತ ಹಳೆಯ ನೀರಿನ ಸಂಗ್ರಹ ಬೈಕಲ್ ಸರೋವರ ಇಲ್ಲಿದೆ.
  • ನಮ್ಮ ದೇಶಕ್ಕೆ ಗಂಗಾ ನದಿ ಇರುವ ಹಾಗೆ ರಷಿಯಾಗೆ ವೋಲ್ಗಾ ನದಿಯಿದೆ. ಇತಿಹಾಸ - ಪರಂಪರೆ ಜೊತೆಗೆ ಜನರ ಜೀವನಾಡಿಯಾಗಿ ವೋಲ್ಗಾ ಇದೆ. ರಾಹುಲ್ ಸಾಂಕೃತ್ಯಾಯನ್ (Rahul Sankrityayan) ಎಂಬ ವಿದ್ವಾಂಸರು ರಷಿಯಾ ಮುಂತಾದ ದೇಶಗಳಿಗೆ ಭೇಟಿ  ನೀಡಿ ಅಲ್ಲಿನ ಜನಜೀವನವನ್ನ ಅಧ್ಯಯನ ಮಾಡಿ ಪಾಂಡಿತ್ಯ ಸಂಪಾದಿಸಿದ್ದರು. ಅವರು 1944ರಲ್ಲಿ ಸಂಪಾದಿಸಿ ಪ್ರಕಟಿಸಿದ್ದ वोल्गा  से गंगा (Volga Se Ganga) ಎಂಬ ಸಣ್ಣ ಕಥೆಗಳ ಪುಸ್ತಕವನ್ನ ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಕಾರಣ ಈ ಪುಸ್ತಕ ಭಾರತದ ಸಾಹಿತ್ಯಿಕ ಇತಿಹಾಸದಲ್ಲಿ ಸ್ಥಾನ ಗಿಟ್ಟಿಸಿದೆ. ಮತ್ತಿದು ಇಂಗ್ಲೀಷ್ ಒಳಗೊಂಡಂತೆ ಅನೇಕ ಭಾಷೆಗಳಿಗೆ ತರ್ಜುಮೆಯಾಗಿದೆ.
  • ರಷಿಯಾ ಭೌಗೋಳಿಕತೆ ಬಗ್ಗೆ ಇನ್ನುಳಿದ ಮಾಹಿತಿಯನ್ನ ನೀವು ನನಗೆ ನೀಡಿ !!!

 : ರವಿ

Dec 20, 2010

ಕೇಂದ್ರೀಯ ವಿ.ವಿ.

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಕಾಶ್ಮೀರ ಕೇಂದ್ರೀಯ ವಿವಿಗೆ ಹೊಸ ಉಪಕುಲಪತಿ






ಸುದ್ದಿಯ ಒಳನೋಟ :
  • ಪ್ರತಿ ರಾಜ್ಯದಲ್ಲೂ ಈಗಾಗಲೇ ಇರುವ ವಿಶ್ವವಿದ್ಯಾಲಯಗಳ ಜೊತೆಗೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಹೊಸ ವಿವಿಗಳನ್ನ ಸ್ಥಾಪಿಸಿ ದೇಶದ ಉಚ್ಚ ಶಿಕ್ಷಣಕ್ಕೆ ಕೈಜೋಡಿಸುವುದು ಸದರಿ ವಿವಿಗಳ ಸ್ಥಾಪನೆಯ ಹಿಂದಿರುವ ಉದ್ದೇಶ.
  • ಸದರಿ ವಿವಿ ಸ್ಥಾಪನೆಗೆ ಕೇಂದ್ರ & ರಾಜ್ಯ ಸರ್ಕಾರಗಳ ನಡುವೆ ತಾಳಮೇಳ ಏರ್ಪಡಿಸಲು, ಈಗಾಗಲೇ ಸ್ಥಾಪನೆಯಾಗಿದ್ದ CABE( Central Advisory Board of Education) ಗೆ  ಹೆಚ್ಚುವರಿ ಕರ್ತವ್ಯ ವಹಿಸಲಾಗಿದೆ.
  • ಸದರಿ CABEನಲ್ಲಿ ದೇಶದೆಲ್ಲೆಡೆಯ ಶಿಕ್ಷಣ ಸಂಬಂಧೀ ಅಧಿಕಾರಿಗಳು / ಸಚಿವರು ಸದಸ್ಯರಾಗಿರುತ್ತಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವರು ಅಧ್ಯಕ್ಷರಾಗಿದ್ದು, :
  1. ಐದು ಜನ ಕೇಂದ್ರ ಸರ್ಕಾರದ ಸಚಿವರು
  2. ನಾಲ್ಕು ಜನ ಲೋಕಸಭಾ ಸದಸ್ಯರು
  3. ಇಬ್ಬರು ರಾಜ್ಯಸಭಾ ಸದಸ್ಯರು
  4. ಎಲ್ಲ ರಾಜ್ಯ & ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರುಗಳು
  5. ಯೋಜನಾ ಆಯೋಗದ ಸದಸ್ಯ(ಶಿಕ್ಷಣ ವಿಭಾಗ)
  6. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವಿವಿಧ ವಿಭಾಗಗಳಿಂದಾಯ್ದ 14ಜನ ಸದಸ್ಯರು
  7. 32ಜನ ನಾಮನಿರ್ದೇಶಿತ ಶಿಕ್ಷಣ ತಜ್ಞರು
  8. ಕೇಂದ್ರ ಶಿಕ್ಷಣ ರಾಜ್ಯ ಸಚಿವ
  9. ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ
ಹೀಗೆ ನೂರಕ್ಕೂ ಅಧಿಕ ಸಂಖ್ಯೆಯ ಸದಸ್ಯರು CABEನಲ್ಲಿರುತ್ತಾರೆ.
  • ದೇಶದ ಶೈಕ್ಷಣಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸದರಿ ಯೋಜನೆಯನ್ನು ಹಮ್ಮಿಕೊಂಡ ಕೆಂದ್ರ ಸರ್ಕಾರ (ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ) ಸಂಸತ್ತಿನಲ್ಲಿ ಅಕ್ಟೋಬರ್ 23, 2008ರಂದು  Central University bill 2008 ಮಂಡಿಸಿತು. ಪ್ರಥಮವಾಗಿ ಮಂಡಿಸಲ್ಪಟ್ಟ ಈ Billನಲ್ಲಿ  12 ಹೊಸ ಕೇಂದ್ರೀಯ ವಿವಿಗಳ ಸ್ಥಾಪನೆಯ ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ 4 ವಿವಿಗಳನ್ನ ಕೇಂದ್ರ ವಿವಿ ದರ್ಜೆಗೆ ಏರಿಸುವ ಪ್ರಸ್ತಾವನೆ ಇತ್ತು.
  • ತದನಂತರದಲ್ಲಿ Central Universities Laws Amendment Bill 2008,  & Central University bill 2009 ಗಳನ್ನ ಮಂಡಿಸಿ, ಪಾಸು ಮಾಡಿಸಿದೆ.
  • ಭಾರತದ ರಾಷ್ಟ್ರಪತಿಗಳು ಸದರಿ ವಿವಿಗಳಿಗೆ "Visitor" ಆಗಿರುತ್ತಾರೆ. 
ನಿಮ್ಮ ಮನಸಲ್ಲೀಗ ರಾಜ್ಯಪಾಲರುಗಳು Chanellor ಆಗಿರೋದನ್ನ ಕೇಳಿದೀವಿ. ಇದೇನಿದು Visitor ?! ಅಂತ ಪ್ರಶ್ನೆ ಮೂಡಿರಲೇಕು. ಇಲ್ಲಿದೆ wiki ಉತ್ತರ :
" A Visitor, in United Kingdom law and history, is an overseer of an autonomous ecclesiastical or eleemosynary institution (i.e., a charitable institution set up for the perpetual distribution of the founder's alms and bounty), who can intervene in the internal affairs of that institution. These institutions usually comprise cathedrals, chapels, colleges, universities and hospitals. "


  • 2009ರಲ್ಲಿ ಇನ್ನೂ 9 ಹೊಸ ಕೇಂದ್ರೀಯ ವಿ.ವಿಗಳನ್ನ ಸ್ಥಾಪಿಸಲು " The Central Universities Act, 2009 " ಗೆ ಅನುಮೋದನೆ ಪಡೆದು ಸ್ಥಾಪಿಸಿಯೂ ಆಗಿದೆ. ಜೊತೆಗೆ ಛತ್ತೀಸಗಢ, ಉತ್ತರಾಖಂಡ್ ಮತ್ತು ಮಧ್ಯಪ್ರದೇಶದ 3 ವಿ.ವಿ.ಗಳನ್ನ ಕೇಂದ್ರೀಯ ವಿ.ವಿ.ಗಳಾಗಿ ಪರಿವರ್ತಿಸಲು ಕೂಡ ಸಂಸತ್ತಿನ ಅನುಮೋದನೆ ಪಡೆದಿದೆ.
  • ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಹೊಸದಾಗಿ ಸೃಷ್ಟಿಯಾಗಿರುವ & ಮೇಲ್ದರ್ಜೆಗೇರಿಸಲ್ಪಟ್ಟ ಕೇಂದ್ರೀಯ ವಿವಿಗಳ ಪಟ್ಟಿ ಇಂತಿದೆ. 
 
ಕೇಂದ್ರೀಯ ವಿ.ವಿ.ಹೆಸರು
ರಾಜ್ಯ/ಕೇಂದ್ರಾಡಳಿತ ಪ್ರದೇಶ
ನಗರ
1. ಇಂಗ್ಲೀಷ್ & ವಿದೇಶೀ ಭಾಷೆಗಳ ವಿ.ವಿ.
English & Foreign Languages University
ಆಂಧ್ರಪ್ರದೇಶ ಹೈದರಾಬಾದ್
2. ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿ.ವಿ. ಆಂಧ್ರಪ್ರದೇಶ ಹೈದರಾಬಾದ್
3. ಹೈದರಾಬಾದ್ ವಿ.ವಿ. ಆಂಧ್ರಪ್ರದೇಶ ಹೈದರಾಬಾದ್
4. ರಾಜೀವ್ ಗಾಂಧಿ ವಿ.ವಿ. ಅರುಣಾಚಲ ಪ್ರದೇಶ್ ಇಟಾನಗರ
5. ಅಸ್ಸಾಮ್ ವಿ.ವಿ. ಅಸ್ಸಾಮ್ ಸಿಲ್ಚಾರ್
6. ತೇಝ್ ಪುರ್ ವಿ.ವಿ. ಅಸ್ಸಾಮ್ ತೇಝ್ ಪುರ್
7. ಬಿಹಾರ್ ಕೇಂದ್ರೀಯ ವಿ.ವಿ. ಬಿಹಾರ್ ಮೋತಿಹಾರಿ
8. ಗುರು ಘಾಸಿದಾಸ್ ವಿ.ವಿ. ಛತ್ತೀಸ್ ಘರ್ ಬಿಲಾಸ್ ಪುರ್
9. ಜವಾಹರಲಾಲ್ ನೆಹರು ವಿ.ವಿ. ದೆಹಲಿ ನವದೆಹಲಿ
10. ಜಾಮಿಯಾ ಮಿಲಿಯಾ ಇಸ್ಲಾಮಿಯಾ ದೆಹಲಿ ನವದೆಹಲಿ
11. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿ.ವಿ. ದೆಹಲಿ ನವದೆಹಲಿ
12. ದೆಹಲಿ ವಿ.ವಿ. ದೆಹಲಿ ನವದೆಹಲಿ
13. ಗುಜರಾತ್ ಕೇಂದ್ರೀಯ ವಿ.ವಿ. ಗುಜರಾತ್ ಗಾಂಧಿನಗರ
14. ಹರ್ಯಾಣಾ ಕೇಂದ್ರೀಯ ವಿ.ವಿ. ಹರ್ಯಾಣಾ ಮಹೇಂದ್ರಘರ್
15. ಹಿಮಾಚಲ ಪ್ರದೇಶ್ ಕೇಂದ್ರೀಯ ವಿ.ವಿ. ಹಿಮಾಚಲ ಪ್ರದೇಶ್ ಕಾಂಗ್ರಾ
16. ಜಾರ್ಖಂಡ್ ಕೇಂದ್ರೀಯ ವಿ.ವಿ. ಜಾರ್ಖಂಡ್ ಬ್ರಾಂಬೆ
17. ಕಾಶ್ಮೀರ ಕೇಂದ್ರೀಯ ವಿ.ವಿ. ( ಈ ಮೊದಲಿನ ಹೆಸರು - ಜಮ್ಮು ಕೇಂದ್ರೀಯ ವಿ.ವಿ. ) ಜಮ್ಮು ಮತ್ತು ಕಾಶ್ಮೀರ ಶ್ರೀನಗರ
18. ಕರ್ನಾಟಕ ಕೇಂದ್ರೀಯ ವಿ.ವಿ. ಕರ್ನಾಟಕ ಗುಲ್ಬರ್ಗಾ
19. ಕೇರಳ ಕೇಂದ್ರೀಯ ವಿ.ವಿ. ಕೇರಳ ಕಾಸರಗೋಡು
20. ಕೇಂದ್ರೀಯ ಕೃಷಿ ವಿ.ವಿ. ಮಣಿಪುರ ಇಂಫಾಲ್
21. ಮಣಿಪುರ ವಿ.ವಿ. ಮಣಿಪುರ ಇಂಫಾಲ್
22. ಡಾ | ಹರಿಸಿಂಗ್ ಗೌರ್ ವಿ.ವಿ. ಮಧ್ಯಪ್ರದೇಶ್ ಸಾಗರ್
23. ಮಹಾತ್ಮಾಗಾಂಧಿ ಅಂತರಾಷ್ಟ್ರೀಯ ಹಿಂದಿ ವಿ.ವಿ. ಮಹಾರಾಷ್ಟ್ರ ವಾರ್ಧಾ
24. ಈಶಾನ್ಯ ಗುಡ್ಡಗಾಡು ವಿ.ವಿ.
North Eastern Hill University
ಮೇಘಾಲಯ ಶಿಲ್ಲೋಂಗ್
25. ಮಿಜೋರಾಮ್ ವಿ.ವಿ. ಮಿಜೋರಾಮ್ ಐಝವಾಲ್
26. ನಾಗಾಲ್ಯಾಂಡ್ ವಿ.ವಿ. ನಾಗಾಲ್ಯಾಂಡ್ ಕೋಹಿಮಾ
27. ಒಡಿಶಾ ಕೇಂದ್ರೀಯ ವಿ.ವಿ. ಒಡಿಶಾ ಕೋರಾಪುಟ್
28. ಪುದುಚೆರಿ ವಿ.ವಿ. ಪುದುಚೆರಿ ಪುದುಚೆರಿ
29. ಪಂಜಾಬ್ ಕೇಂದ್ರೀಯ ವಿ.ವಿ. ಪಂಜಾಬ್ ಭಟಿಂಡಾ
30. ರಾಜಸ್ಥಾನ್ ಕೇಂದ್ರೀಯ ವಿ.ವಿ. ರಾಜಸ್ಥಾನ್ ಬಿಕಾನೇರ್
31. ಸಿಕ್ಕಿಮ್ ವಿ.ವಿ. ಸಿಕ್ಕಿಮ್ ಯಾಂಗ್ಯಾಂಗ್
32. ತಮಿಳುನಾಡು ವಿ.ವಿ. ತಮಿಳುನಾಡು ತಿರುವಾರೂರು
33. ತ್ರಿಪುರಾ ವಿ.ವಿ. ತ್ರಿಪುರಾ ಅಗರ್ತಲಾ
34. ಹೇಮಾವತಿ ನಂದನ್ ಬಹುಗುಣ ಘರವಾಲ್ ವಿ.ವಿ. ಉತ್ತರಾಖಂಡ್ ಶ್ರೀನಗರ
35. ಅಲಿಘರ್ ಮುಸ್ಲಿಂ ವಿ.ವಿ. ಉತ್ತರಪ್ರದೇಶ ಅಲಿಘರ್
36. ಅಲಹಾಬಾದ್ ವಿ.ವಿ. ಉತ್ತರಪ್ರದೇಶ ಅಲಹಾಬಾದ್
37. ಬನಾರಸ್ ಹಿಂದೂ ವಿ.ವಿ. ಉತ್ತರಪ್ರದೇಶ ವಾರಣಾಸಿ
38. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿ.ವಿ. ಉತ್ತರಪ್ರದೇಶ ಲಕ್ನೋ
39. ವಿಶ್ವಭಾರತಿ ವಿ.ವಿ. ಪಶ್ಚಿಮ ಬಂಗಾಳ ಶಾಂತಿನಿಕೇತನ್
  • ಕರ್ನಾಟಕ ಕೇಂದ್ರೀಯ ವಿವಿ ವೆಬ್ ತಾಣವನ್ನ ಸಂದರ್ಶಿಸಲು ಇಲ್ಲಿ ಕ್ಲಿಕ್ಕಿಸಿ
  • ಇಷ್ಟೆಲ್ಲಾ ಓದಿದ ಮೇಲೆ ನಿಮಗೂ ಕೇಂದ್ರೀಯ ವಿವಿಯಲ್ಲಿ ಓದುವ ಮನಸಾಗಿದ್ದರೆ, ಪ್ರತಿ ವರ್ಷ ಜೂನ್ ನಲ್ಲಿ ನಡೆಯುವ CUCET ಪರೀಕ್ಷೆಗೆ ತಯಾರಾಗಿ !!


: ರವಿ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ