ಸುದ್ದಿ : ರಾಷ್ಟ್ರದ ಬಜೆಟ್ ನಲ್ಲಿ ಮಿತವ್ಯಯತೆ(Austerity) ಯನ್ನ ಮಂಡಿಸಿದ ಗ್ರೀಕ್ ಸರ್ಕಾರ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
|
ಜಾಗತಿಕ ನಕ್ಷೆಯಲ್ಲಿ ಗ್ರೀಸ್ |
|
ಗ್ರೀಸ್ ಸ್ವಾಭಾವಿಕ |
|
ನೆರೆ-ಹೊರೆ |
- ಗ್ರೀಸ್ ದೇಶಕ್ಕಿರುವ ಇನ್ನೊಂದು ಜನಪ್ರಿಯ ಹೆಸರು ಹೆಲ್ಲಾಸ್(Hellas), ಇದೇ ಕಾರಣಕ್ಕೆ ಈ ದೇಶವನ್ನ Hellenic Republic ಎಂದು ಅಧಿಕೃತ ಭಾಷೆಯಲ್ಲಿ ಹೇಳಲಾಗುತ್ತದೆ.
- ಅಲ್ಬೇನಿಯಾ. ಮಸಿಡೋನಿಯಾ, ಬಲ್ಗೇರಿಯಾ & ಟರ್ಕಿ ದೇಶಗಳು ಗ್ರೀಸ್ ದೇಶದ ನೆರೆಯವರು.
- ಪೂರ್ವ, ದಕ್ಷಿಣ & ಪಶ್ಚಿಮಕ್ಕೆ ಸಮುದ್ರತೀರವನ್ನ ಹೊಂದಿರುವ ಗ್ರೀಸ್ ದೇಶ ಜಗತ್ತಿನಲ್ಲಿ 12ನೇ ಅತಿ ಉದ್ದದ ಕರಾವಳಿ ಹೊಂದಿದೆ. ( ಭಾರತ-19 ; ಕೆನಡಾ-1 ; ಇಂಡೋನೇಷಿಯಾ-2 ; ಗ್ರೀನ್ ಲ್ಯಾಂಡ್-3 ; ರಷಿಯಾ-4 ; ಫಿಲಿಪ್ಪೀನ್ಸ್-5 ; ಜಪಾನ್-6 ; ಆಸ್ಸ್ರೇಲಿಯಾ-7 ; ನಾರ್ವೆ-8 ; ಅಮೆರಿಕಾ-9 ; ನ್ಯೂಝಿಲ್ಯಾಂಡ್-10 )
- ಗ್ರೀಸ್ ದೇಶ ಪರ್ವತಮಯವಾಗಿದ್ದು ದೇಶದ ಭೂಭಾಗದ 80 ಪ್ರತಿಶತ ಭಾಗ ಪರ್ವತಾವೃತವಾಗಿದೆ.
- ಸದರಿ ದೇಶದ ಅಧಿಪತ್ಯದಡಿಯಲ್ಲಿ ಸುಮಾರು 1400 ದ್ವೀಪಗಳು ಬರುತ್ತವೆ. ಇವುಗಳಲ್ಲಿ 200 ಚಿಲ್ಲರೆ ದ್ವೀಪಗಳಲ್ಲಿ ಮಾತ್ರ ಮನುಷ್ಯರು ವಾಸಿಸುತ್ತಾರೆ.
- ಜಗತ್ತಿನ ಪಾಶ್ಚಿಮಾತ್ಯ ನಾಗರೀಕತೆಯ ತೊಟ್ಟಿಲು ಎನಿಸಿಕೊಂಡಿರುವುದು ಗ್ರೀಸ್ ನಾಗರೀಕತೆ.
- ಪ್ರಜಾಪ್ರಭುತ್ವ, ಪಾಶ್ಚಿಮಾತ್ಯ ತತ್ವಶಾಸ್ತ್ರ, ಒಲಿಂಪಿಕ್ ಕ್ರೀಡೆಗಳು, ಪಾಶ್ಚಿಮಾತ್ಯ ಸಾಹಿತ್ಯ, ಸಾರ್ವಜನಿಕ ಆಡಳಿತ ತತ್ವಗಳು, ಪಶ್ಚಿಮದ ನಾಟಕ ಪದ್ಧತಿ... ಇತ್ಯಾದಿಗಳ ಜನ್ಮಸ್ಥಾನ ಗ್ರೀಸ್.
- ಸದರಿ ಗ್ರೀಸ್ ಭಾರತಕ್ಕಿಂತ ಎಷ್ಟೋ ಪಾಲು ಚಿಕ್ಕದಿದ್ದರೂ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶವಾಗಿದೆ.
- ಒಟ್ಟೋಮನ್ ಆಡಳಿತವನ್ನ ಕಿತ್ತೊಗೆದು 1830ರಲ್ಲಿ ಆಧುನಿಕ ಗ್ರೀಕ್ ಸೃಷ್ಟಿಯಾಯಿತು.
- ಗ್ರೀಸ್ ದೇಶ ಮೊದಲಿನಿಂದ ಯುರೋಪಿಯನ್ ಒಕ್ಕೂಟದ ಭಾಗವಾಗಿದೆ. ಈ ಅಂಶ ಯಾಕೆ ಪ್ರಮುಖ ಅಂದ್ರೆ ಯುರೋಪ್ ಖಂಡದ ಭಾಗವಾಗಿಯೂ ಇಂದಿಗೂ ಯುರೋಪಿಯನ್ ಒಕ್ಕೂಟ ಸೇರದ ಕೆಲವು ದೇಶಗಳಿವೆ ಅದಕ್ಕೆ.
- ನಮ್ಮ ದೇಶದ ಸಂಸ್ಕೃತಿಯಲ್ಲಿ ಹಿಮಾಲಯಕ್ಕೆ ನೀಡಿರುವಷ್ಟೇ ದೈವಿಕತೆ ಆ ದೇಶದಲ್ಲಿ Mount Olympus ಗೆ ನೀಡಲಾಗಿದೆ.
- ದೇಶದ ಈಶಾನ್ಯ ಭಾಗಕ್ಕೆ ಅತಿ ಪ್ರಾಚೀನ ಕಗ್ಗಾಡು ವ್ಯಾಪಿಸಿದೆ.
: ರವಿ
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment