ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ಪ್ರಚಲಿತ ವಿದ್ಯಮಾನಗಳ ಒಳನೋಟ. Show all posts
Showing posts with label ಪ್ರಚಲಿತ ವಿದ್ಯಮಾನಗಳ ಒಳನೋಟ. Show all posts

Dec 20, 2010

ಕೇಂದ್ರೀಯ ವಿ.ವಿ.

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಕಾಶ್ಮೀರ ಕೇಂದ್ರೀಯ ವಿವಿಗೆ ಹೊಸ ಉಪಕುಲಪತಿ






ಸುದ್ದಿಯ ಒಳನೋಟ :
  • ಪ್ರತಿ ರಾಜ್ಯದಲ್ಲೂ ಈಗಾಗಲೇ ಇರುವ ವಿಶ್ವವಿದ್ಯಾಲಯಗಳ ಜೊತೆಗೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಹೊಸ ವಿವಿಗಳನ್ನ ಸ್ಥಾಪಿಸಿ ದೇಶದ ಉಚ್ಚ ಶಿಕ್ಷಣಕ್ಕೆ ಕೈಜೋಡಿಸುವುದು ಸದರಿ ವಿವಿಗಳ ಸ್ಥಾಪನೆಯ ಹಿಂದಿರುವ ಉದ್ದೇಶ.
  • ಸದರಿ ವಿವಿ ಸ್ಥಾಪನೆಗೆ ಕೇಂದ್ರ & ರಾಜ್ಯ ಸರ್ಕಾರಗಳ ನಡುವೆ ತಾಳಮೇಳ ಏರ್ಪಡಿಸಲು, ಈಗಾಗಲೇ ಸ್ಥಾಪನೆಯಾಗಿದ್ದ CABE( Central Advisory Board of Education) ಗೆ  ಹೆಚ್ಚುವರಿ ಕರ್ತವ್ಯ ವಹಿಸಲಾಗಿದೆ.
  • ಸದರಿ CABEನಲ್ಲಿ ದೇಶದೆಲ್ಲೆಡೆಯ ಶಿಕ್ಷಣ ಸಂಬಂಧೀ ಅಧಿಕಾರಿಗಳು / ಸಚಿವರು ಸದಸ್ಯರಾಗಿರುತ್ತಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವರು ಅಧ್ಯಕ್ಷರಾಗಿದ್ದು, :
  1. ಐದು ಜನ ಕೇಂದ್ರ ಸರ್ಕಾರದ ಸಚಿವರು
  2. ನಾಲ್ಕು ಜನ ಲೋಕಸಭಾ ಸದಸ್ಯರು
  3. ಇಬ್ಬರು ರಾಜ್ಯಸಭಾ ಸದಸ್ಯರು
  4. ಎಲ್ಲ ರಾಜ್ಯ & ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರುಗಳು
  5. ಯೋಜನಾ ಆಯೋಗದ ಸದಸ್ಯ(ಶಿಕ್ಷಣ ವಿಭಾಗ)
  6. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವಿವಿಧ ವಿಭಾಗಗಳಿಂದಾಯ್ದ 14ಜನ ಸದಸ್ಯರು
  7. 32ಜನ ನಾಮನಿರ್ದೇಶಿತ ಶಿಕ್ಷಣ ತಜ್ಞರು
  8. ಕೇಂದ್ರ ಶಿಕ್ಷಣ ರಾಜ್ಯ ಸಚಿವ
  9. ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ
ಹೀಗೆ ನೂರಕ್ಕೂ ಅಧಿಕ ಸಂಖ್ಯೆಯ ಸದಸ್ಯರು CABEನಲ್ಲಿರುತ್ತಾರೆ.
  • ದೇಶದ ಶೈಕ್ಷಣಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸದರಿ ಯೋಜನೆಯನ್ನು ಹಮ್ಮಿಕೊಂಡ ಕೆಂದ್ರ ಸರ್ಕಾರ (ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ) ಸಂಸತ್ತಿನಲ್ಲಿ ಅಕ್ಟೋಬರ್ 23, 2008ರಂದು  Central University bill 2008 ಮಂಡಿಸಿತು. ಪ್ರಥಮವಾಗಿ ಮಂಡಿಸಲ್ಪಟ್ಟ ಈ Billನಲ್ಲಿ  12 ಹೊಸ ಕೇಂದ್ರೀಯ ವಿವಿಗಳ ಸ್ಥಾಪನೆಯ ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ 4 ವಿವಿಗಳನ್ನ ಕೇಂದ್ರ ವಿವಿ ದರ್ಜೆಗೆ ಏರಿಸುವ ಪ್ರಸ್ತಾವನೆ ಇತ್ತು.
  • ತದನಂತರದಲ್ಲಿ Central Universities Laws Amendment Bill 2008,  & Central University bill 2009 ಗಳನ್ನ ಮಂಡಿಸಿ, ಪಾಸು ಮಾಡಿಸಿದೆ.
  • ಭಾರತದ ರಾಷ್ಟ್ರಪತಿಗಳು ಸದರಿ ವಿವಿಗಳಿಗೆ "Visitor" ಆಗಿರುತ್ತಾರೆ. 
ನಿಮ್ಮ ಮನಸಲ್ಲೀಗ ರಾಜ್ಯಪಾಲರುಗಳು Chanellor ಆಗಿರೋದನ್ನ ಕೇಳಿದೀವಿ. ಇದೇನಿದು Visitor ?! ಅಂತ ಪ್ರಶ್ನೆ ಮೂಡಿರಲೇಕು. ಇಲ್ಲಿದೆ wiki ಉತ್ತರ :
" A Visitor, in United Kingdom law and history, is an overseer of an autonomous ecclesiastical or eleemosynary institution (i.e., a charitable institution set up for the perpetual distribution of the founder's alms and bounty), who can intervene in the internal affairs of that institution. These institutions usually comprise cathedrals, chapels, colleges, universities and hospitals. "


  • 2009ರಲ್ಲಿ ಇನ್ನೂ 9 ಹೊಸ ಕೇಂದ್ರೀಯ ವಿ.ವಿಗಳನ್ನ ಸ್ಥಾಪಿಸಲು " The Central Universities Act, 2009 " ಗೆ ಅನುಮೋದನೆ ಪಡೆದು ಸ್ಥಾಪಿಸಿಯೂ ಆಗಿದೆ. ಜೊತೆಗೆ ಛತ್ತೀಸಗಢ, ಉತ್ತರಾಖಂಡ್ ಮತ್ತು ಮಧ್ಯಪ್ರದೇಶದ 3 ವಿ.ವಿ.ಗಳನ್ನ ಕೇಂದ್ರೀಯ ವಿ.ವಿ.ಗಳಾಗಿ ಪರಿವರ್ತಿಸಲು ಕೂಡ ಸಂಸತ್ತಿನ ಅನುಮೋದನೆ ಪಡೆದಿದೆ.
  • ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಹೊಸದಾಗಿ ಸೃಷ್ಟಿಯಾಗಿರುವ & ಮೇಲ್ದರ್ಜೆಗೇರಿಸಲ್ಪಟ್ಟ ಕೇಂದ್ರೀಯ ವಿವಿಗಳ ಪಟ್ಟಿ ಇಂತಿದೆ. 
 
ಕೇಂದ್ರೀಯ ವಿ.ವಿ.ಹೆಸರು
ರಾಜ್ಯ/ಕೇಂದ್ರಾಡಳಿತ ಪ್ರದೇಶ
ನಗರ
1. ಇಂಗ್ಲೀಷ್ & ವಿದೇಶೀ ಭಾಷೆಗಳ ವಿ.ವಿ.
English & Foreign Languages University
ಆಂಧ್ರಪ್ರದೇಶ ಹೈದರಾಬಾದ್
2. ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿ.ವಿ. ಆಂಧ್ರಪ್ರದೇಶ ಹೈದರಾಬಾದ್
3. ಹೈದರಾಬಾದ್ ವಿ.ವಿ. ಆಂಧ್ರಪ್ರದೇಶ ಹೈದರಾಬಾದ್
4. ರಾಜೀವ್ ಗಾಂಧಿ ವಿ.ವಿ. ಅರುಣಾಚಲ ಪ್ರದೇಶ್ ಇಟಾನಗರ
5. ಅಸ್ಸಾಮ್ ವಿ.ವಿ. ಅಸ್ಸಾಮ್ ಸಿಲ್ಚಾರ್
6. ತೇಝ್ ಪುರ್ ವಿ.ವಿ. ಅಸ್ಸಾಮ್ ತೇಝ್ ಪುರ್
7. ಬಿಹಾರ್ ಕೇಂದ್ರೀಯ ವಿ.ವಿ. ಬಿಹಾರ್ ಮೋತಿಹಾರಿ
8. ಗುರು ಘಾಸಿದಾಸ್ ವಿ.ವಿ. ಛತ್ತೀಸ್ ಘರ್ ಬಿಲಾಸ್ ಪುರ್
9. ಜವಾಹರಲಾಲ್ ನೆಹರು ವಿ.ವಿ. ದೆಹಲಿ ನವದೆಹಲಿ
10. ಜಾಮಿಯಾ ಮಿಲಿಯಾ ಇಸ್ಲಾಮಿಯಾ ದೆಹಲಿ ನವದೆಹಲಿ
11. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿ.ವಿ. ದೆಹಲಿ ನವದೆಹಲಿ
12. ದೆಹಲಿ ವಿ.ವಿ. ದೆಹಲಿ ನವದೆಹಲಿ
13. ಗುಜರಾತ್ ಕೇಂದ್ರೀಯ ವಿ.ವಿ. ಗುಜರಾತ್ ಗಾಂಧಿನಗರ
14. ಹರ್ಯಾಣಾ ಕೇಂದ್ರೀಯ ವಿ.ವಿ. ಹರ್ಯಾಣಾ ಮಹೇಂದ್ರಘರ್
15. ಹಿಮಾಚಲ ಪ್ರದೇಶ್ ಕೇಂದ್ರೀಯ ವಿ.ವಿ. ಹಿಮಾಚಲ ಪ್ರದೇಶ್ ಕಾಂಗ್ರಾ
16. ಜಾರ್ಖಂಡ್ ಕೇಂದ್ರೀಯ ವಿ.ವಿ. ಜಾರ್ಖಂಡ್ ಬ್ರಾಂಬೆ
17. ಕಾಶ್ಮೀರ ಕೇಂದ್ರೀಯ ವಿ.ವಿ. ( ಈ ಮೊದಲಿನ ಹೆಸರು - ಜಮ್ಮು ಕೇಂದ್ರೀಯ ವಿ.ವಿ. ) ಜಮ್ಮು ಮತ್ತು ಕಾಶ್ಮೀರ ಶ್ರೀನಗರ
18. ಕರ್ನಾಟಕ ಕೇಂದ್ರೀಯ ವಿ.ವಿ. ಕರ್ನಾಟಕ ಗುಲ್ಬರ್ಗಾ
19. ಕೇರಳ ಕೇಂದ್ರೀಯ ವಿ.ವಿ. ಕೇರಳ ಕಾಸರಗೋಡು
20. ಕೇಂದ್ರೀಯ ಕೃಷಿ ವಿ.ವಿ. ಮಣಿಪುರ ಇಂಫಾಲ್
21. ಮಣಿಪುರ ವಿ.ವಿ. ಮಣಿಪುರ ಇಂಫಾಲ್
22. ಡಾ | ಹರಿಸಿಂಗ್ ಗೌರ್ ವಿ.ವಿ. ಮಧ್ಯಪ್ರದೇಶ್ ಸಾಗರ್
23. ಮಹಾತ್ಮಾಗಾಂಧಿ ಅಂತರಾಷ್ಟ್ರೀಯ ಹಿಂದಿ ವಿ.ವಿ. ಮಹಾರಾಷ್ಟ್ರ ವಾರ್ಧಾ
24. ಈಶಾನ್ಯ ಗುಡ್ಡಗಾಡು ವಿ.ವಿ.
North Eastern Hill University
ಮೇಘಾಲಯ ಶಿಲ್ಲೋಂಗ್
25. ಮಿಜೋರಾಮ್ ವಿ.ವಿ. ಮಿಜೋರಾಮ್ ಐಝವಾಲ್
26. ನಾಗಾಲ್ಯಾಂಡ್ ವಿ.ವಿ. ನಾಗಾಲ್ಯಾಂಡ್ ಕೋಹಿಮಾ
27. ಒಡಿಶಾ ಕೇಂದ್ರೀಯ ವಿ.ವಿ. ಒಡಿಶಾ ಕೋರಾಪುಟ್
28. ಪುದುಚೆರಿ ವಿ.ವಿ. ಪುದುಚೆರಿ ಪುದುಚೆರಿ
29. ಪಂಜಾಬ್ ಕೇಂದ್ರೀಯ ವಿ.ವಿ. ಪಂಜಾಬ್ ಭಟಿಂಡಾ
30. ರಾಜಸ್ಥಾನ್ ಕೇಂದ್ರೀಯ ವಿ.ವಿ. ರಾಜಸ್ಥಾನ್ ಬಿಕಾನೇರ್
31. ಸಿಕ್ಕಿಮ್ ವಿ.ವಿ. ಸಿಕ್ಕಿಮ್ ಯಾಂಗ್ಯಾಂಗ್
32. ತಮಿಳುನಾಡು ವಿ.ವಿ. ತಮಿಳುನಾಡು ತಿರುವಾರೂರು
33. ತ್ರಿಪುರಾ ವಿ.ವಿ. ತ್ರಿಪುರಾ ಅಗರ್ತಲಾ
34. ಹೇಮಾವತಿ ನಂದನ್ ಬಹುಗುಣ ಘರವಾಲ್ ವಿ.ವಿ. ಉತ್ತರಾಖಂಡ್ ಶ್ರೀನಗರ
35. ಅಲಿಘರ್ ಮುಸ್ಲಿಂ ವಿ.ವಿ. ಉತ್ತರಪ್ರದೇಶ ಅಲಿಘರ್
36. ಅಲಹಾಬಾದ್ ವಿ.ವಿ. ಉತ್ತರಪ್ರದೇಶ ಅಲಹಾಬಾದ್
37. ಬನಾರಸ್ ಹಿಂದೂ ವಿ.ವಿ. ಉತ್ತರಪ್ರದೇಶ ವಾರಣಾಸಿ
38. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿ.ವಿ. ಉತ್ತರಪ್ರದೇಶ ಲಕ್ನೋ
39. ವಿಶ್ವಭಾರತಿ ವಿ.ವಿ. ಪಶ್ಚಿಮ ಬಂಗಾಳ ಶಾಂತಿನಿಕೇತನ್
  • ಕರ್ನಾಟಕ ಕೇಂದ್ರೀಯ ವಿವಿ ವೆಬ್ ತಾಣವನ್ನ ಸಂದರ್ಶಿಸಲು ಇಲ್ಲಿ ಕ್ಲಿಕ್ಕಿಸಿ
  • ಇಷ್ಟೆಲ್ಲಾ ಓದಿದ ಮೇಲೆ ನಿಮಗೂ ಕೇಂದ್ರೀಯ ವಿವಿಯಲ್ಲಿ ಓದುವ ಮನಸಾಗಿದ್ದರೆ, ಪ್ರತಿ ವರ್ಷ ಜೂನ್ ನಲ್ಲಿ ನಡೆಯುವ CUCET ಪರೀಕ್ಷೆಗೆ ತಯಾರಾಗಿ !!


: ರವಿ

Dec 4, 2010

ಕೋಟ್ ಡೆ ಐವರಿ(Côte d'Ivoire) ಯಲ್ಲಿ ರಾಜಕೀಯ ಅಸಂಗತ ನಾಟಕ

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಕೋಟ್ ಡೆ ಐವರಿ(Côte d'Ivoire) ಯಲ್ಲಿ ರಾಜಕೀಯ ಅಸಂಗತ ನಾಟಕ










ಸುದ್ದಿಯ ಒಳನೋಟ :
  • ಸಾಮಾನ್ಯ ಶಬ್ದಗಳಲ್ಲಿ ಐವರಿ ಕೋಸ್ಟ್ ಎಂದು ಕಡೆಯಲ್ಪಡುವ ಇದು ಅಧಿಕೃತವಾಗಿ ರಿಪಬ್ಲಿಕ್ ಆಫ್ ಕೋಟ್ ಡೆ ಐವರಿ.
  • 1960ರಲ್ಲಿ ದೇಶ ಸ್ವಾತಂತ್ರ್ಯ ಹೊಂದುವ ಮೊದಲು ಫ್ರೆಂಚರ ವಸಾಹತಾಗಿತ್ತು.
  • ಫ್ರೆಂಚ್ ಭಾಷೆ ದೇಶದ ಅಧಿಕೃತ ಭಾಷೆ ಹಾಗೂ  Yamoussoukro ದೇಶದ ರಾಜಧಾನಿ.
  • ಸ್ವಾತಂತ್ರ್ಯ ಹೊಂದಿದ ನಂತರ ಮುತ್ಸದ್ಧಿ Félix Houphouët-Boigny ನಾಯಕತ್ವದಲ್ಲಿ ರಚನೆಯಾದ ಸರ್ಕಾರ ಆಫ್ರಿಕಾದಲ್ಲಿ ಮನೆಮಾತಾಗಿದ್ದ ಬಡತನವನ್ನ ದೂರವಿಟ್ಟು ಆರ್ಥಿಕವಾಗಿ ಬಲಿಷ್ಠವಾಯಿತು. ಇದರ ಸಮಸ್ತ ಶ್ರೇಯವೂ ಫೆಲಿಕ್ಸ್ ಗೇ ಸಲ್ಲುತ್ತದೆ. ಮತ್ತು ಈ ಅದ್ಭುತ ಯಶಸ್ಸಿಗೆ Ivorian Miracle ಎಂಬ ಹೆಸರಿದೆ.
  • ಮೊದಲು ಫ್ರೆಂಚ್ ರಾಜಕೀಯದಲ್ಲಿ ಪಳಗಿದ ಫೆಲಿಕ್ಸ್ ನಂತರ ಫ್ರಾನ್ಸ್ ನೊಂದಿಗೆ ಉತ್ತಮ ಬಾಂಧವ್ಯ ಮುಂದುವರೆಸಿಕೊಂಡು ತಮ್ಮ ದೇಶದ ಏಳಿಗೆಗೆ ಶ್ರಮಿಸಿದರು.
  • ಕಮ್ಯೂನಿಸ್ಟ್ ನೀತಿಯ ಕಟ್ಟಾ ವಿರೋಧಿಯಾಗಿದ್ದ ಫೆಲಿಕ್ಸ್ ದೇಶದ ಬೆನ್ನೆಲುಬಾಗಿದ್ದ ಕೃಷಿಗೆ ಪ್ರಾಮುಖ್ಯತೆ ನೀಡಿ ಅದರ ತಳಹದಿಯ ಮೇಲೆಯೇ ದೇಶದ ಆರ್ಥಿಕತೆಯ ಭದ್ರ ಬುನಾದಿ ಹಾಕಿದರು.
  • ಇವರ ಕಮ್ಯೂನಿಸ್ಟ್ ವಿರೋಧಿ ನೀತಿಯಿಂದ ಶೀತಲ ಯುದ್ಧದ ಸಮಯದಲ್ಲಿ ಪ್ರಬಲವಾಗಿದ್ದ ರಷ್ಯಾದೊಂದಿಗೆ ಕೂಡ ಬಾಂಧವ್ಯ ಕೆಟ್ಟು ಹೋಗಿದ್ದಲ್ಲದೇ, ಚೀನಾವನ್ನ ದೇಶವೆಂದು ಕೂಡ ಮಾನ್ಯತೆ ಮಾಡದಷ್ಟು ಗಟ್ಟಿತನ ತೋರಿದ್ದರು.
  • ಫೆಲಿಕ್ಸ್ ದೇಶ ಸ್ವತಂತ್ರ ಹೊಂದಿದಾಗಿನಿಂದ (1960) ತಾವು ಕೊನೆಯುಸಿರೆಳೆಯುವವರೆಗೂ(1993) ದೇಶವನ್ನು ಅಕ್ಷರಶಃ ಮುನ್ನಡೆಸಿದರು.
  • ಮುಂದೆ ಫೆಲಿಕ್ಸ್ ಬೆಂಬಲಿತ Henri Konan Bédié ಅವರೇ ದೇಶದ ನಾಯಕನಾಗಿ 1995ರಲ್ಲಿ ಆಯ್ಕೆಯಾದರು. ಆದರೆ ದೇಶದಲ್ಲಿ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಹದಗೆಟ್ಟಿತು.
  • 1999ರಲ್ಲಿ ಮಿಲಿಟರು ಕೂಪ್ ಸಂಭವಿಸಿ, ಒಂದು ವರ್ಷದ ಮಟ್ಟಿಗೆ ಮಿಲಿಟರಿ ಆಡಳಿತ ಬಂದರೂ ದೇಶಕ್ಕೆ ತಕ್ಕ ಮಟ್ಟಿಗಿನ ನೆಮ್ಮದಿ ದೊರೆತಿದ್ದು ನಿಜ. ಆ ಅವಧಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಯಿತು.
  • ನಂತರ ಬಂದಿದ್ದೇ ಈಗ ಸುದ್ದಿಯಲ್ಲಿರುವ ಬಾಗ್ಬೋ(Laurent Gbagbo). ಮಿಲಿಟರಿ ಆಡಳಿತ ಕೊನೆಗೊಂಡು ಅಕ್ಟೋಬರ್ 2000ದಲ್ಲಿ ನಡೆದ ಚುನಾವಣೆಗಳಲ್ಲಿ ಆರಿಸಿ ಬಂದ ಬಾಗ್ಬೋ ದೇಶದ ಚುಕ್ಕಾಣಿ ಹಿಡಿದರು. ಇದೇ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದಿದ್ದ  Alassane Ouattara ಅವರು ಅನ್ಯದೇಶೀಯರಾದ ಕಾರಣ ದೇಶದ ಸರ್ವೋಚ್ಚ ನ್ಯಾಯಾಲಯ ಅವರ ಅಭ್ಯರ್ಥಿತನವನ್ನ ರದ್ದುಗೊಳಿಸಿತು. Ouattara ಕೂಡ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
  • ಕಾರಣ : 2005ರಲ್ಲೇ ನಡೆಯಬೇಕಿದ್ದ ಚುನಾವಣೆಗಳನ್ನ ಮುಂದೂಡುತ್ತಾ ಬಂದು ಕಳೆದ ನವೆಂಬರ್ 2010ರಲ್ಲಿ ಚುನಾವಣೆ ನಡೆದವು. ಇದರಲ್ಲಿ ಬಾಗ್ಬೋ ಗೆ ಸೋಲಾಗಿ Ouattara ವಿಜಯಿಯಾಗಿದ್ದಾರೆ. ಆದರೆ ಬಾಗ್ಬೋ ತಮ್ಮ ಕುರ್ಚಿಯನ್ನ ಬಿಡಲೊಲ್ಲರು. ಒಂದು ಕಡೆ : ಅನೇಕ ಅಂತರರಾಷ್ಟ್ರೀಯ ನಾಯಕರು ಒತ್ತಡ ಹೇರುತ್ತಿದ್ದರೂ ತಮ್ಮ ಸ್ಥಾನವನ್ನ ತ್ಯಜಿಸಲು ಬಾಗ್ಬೋ ಹಿಂದೇಟು ಹಾಕುತ್ತಿರಬೇಕಾದರೆ, ಇನ್ನೊಂದು ಕಡೆ : ವಿಜಯಿ Ouattara ಹೊಟೇಲೊಂದರಲ್ಲಿ ಕುಳಿತುಕೊಂಡೇ ಸರ್ಕಾರ ಆರಂಭಿಸಿದ್ದಾರೆ !! 
  • ತಾವು ಸೋತಿದ್ದರೂ ಚುನಾವಣಾ ಸಮಿತಿಯಲ್ಲಿರುವ ತಮ್ಮ ಬೆಂಬಲಿಗರನ್ನ ಬಳಸಿಕೊಂಡು, Ouattara ತಮಗಿಂತ ಕಡಿಮೆ ಮತ ಪಡೆದಿದ್ದಾರೆಂದೂ, ಹೀಗಾಗಿ ತಾವೇ ವಿಜಯಿಯೆಂದೂ ಘೋಷಿಸಿಕೊಂಡು ತಾವೇ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ ಬಾಗ್ಬೋ !!
  • ಆದರೆ ವಿಶ್ವಸಂಸ್ಥೆ & ಆಫ್ರಿಕಾ ಒಕ್ಕೂಟ Alassane Ouattara ಅವರನ್ನೇ ಐವರಿಕೋಸ್ಟ್ ನ ಮುಂದಿನ ಅಧ್ಯಕ್ಷರು ಎಂದು ಗುರುತಿಸಿದೆ.


: ರವಿ

Dec 3, 2010

Epidemic & Pandemic

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಹೈಟಿಯಲ್ಲಿ ಎಪಿಡೆಮಿಕ್ ಸ್ವರೂಪ ತಲುಪಿದ ಕಾಲರಾ



ಸುದ್ದಿಯ ಒಳನೋಟ :
  • ಜಾಗತಿಕ ವಿಸ್ತೀರ್ಣಕ್ಕೆ ಹೋಲಿಸಿದರೆ ಒಂದು ಸಣ್ಣ ಪ್ರದೇಶಕ್ಕೆ ಸೀಮಿತವಾಗಿದ್ದು ವಿಪರೀತವೆನ್ನುವ ಮಟ್ಟಿಗೆ ಅಪರೂಪವೆನಿಸಿರುವ (ನೆಗಡಿ, ಜ್ವರದಂಥ ಸಾಮಾನ್ಯ ರೋಗಗಳನ್ನ ಹೊರತುಪಡಿಸಿ - ಕಾಲರಾ, ಹಂದಿಜ್ವರದಂಥ ಅಪರೂಪದ ರೋಗಗಳು) ಕಾಯಿಲೆಗಳು ಹರಡಿದರೆ ಅಂಥ ಸ್ಥಿತಿಗೆ ಎಪಿಡೆಮಿಕ್ (Epidemic) ಎನ್ನಲಾಗುತ್ತದೆ. ಹೀಗೆ ರೋಗ ಹಬ್ಬಿದ ಪ್ರದೇಶದ ವಿಸ್ತೀರ್ಣ ಒಂದು ರಾಜ್ಯ ಅಥವಾ ದೇಶದೊಳಗೆ ಸೀಮಿತವಾಗಿರುತ್ತದೆ.
  • ಮೇಲ್ಕಂಡ ಲಕ್ಷಣಗಳಲ್ಲಿ ರೋಗ ಹಬ್ಬಿದ ವಿಸ್ತೀರ್ಣ ಖಂಡಾಂತರವಾಗಿದ್ದು, ಬೃಹತ್ ಪ್ರದೇಶವನ್ನ ವ್ಯಾಪಿಸಿದ್ದರೆ ಅದು  ಪ್ಯಾಂಡೆಮಿಕ್ (Pandemic) ಎನಿಸಿಕೊಳ್ಳುತ್ತದೆ.
  • ಇಲ್ಲಿ ಎಪಿಡೆಮಿಕ್ ಮತ್ತು ಪ್ಯಾಂಡೆಮಿಕ್ ನಡುವಿನ ವ್ಯತ್ಯಾಸವನ್ನ ಓದುಗರು ಮನಗಾಣಬೇಕು : 
ಎಪಿಡೆಮಿಕ್ ರೋಗ ಸಾಂಕ್ರಾಮಿಕ ಆಗಲೇಬೇಕು ಎಂಬ ನಿಯಮವಿಲ್ಲ. ಆ ಪುಟ್ಟ ಪ್ರದೇಶದ ವಾತಾವರಣಕ್ಕನುಗುಣವಾಗಿ ಅಲ್ಲಿನ ಜನರು ಆ ರೋಗಕ್ಕೆ ತುತ್ತಾಗಿ, ರೋಗಿಗಳ ಸಂಖ್ಯೆ ಉಲ್ಬಣವಾದರೆ ಅದು ಎಪಿಡೆಮಿಕ್.
ಉದಾ : ಹೈಟಿ ಕಾಲರಾ

ಆದರೆ ಪ್ಯಾಂಡೆಮಿಕ್ ಸಂದರ್ಭದಲ್ಲಿ ರೋಗ ಸಾಂಕ್ರಾಮಿಕವಾಗಿದ್ದು ಜನರಲ್ಲಿ ರಾಜ್ಯ ರಾಜ್ಯಗಳ ನಡುವೆ - ದೇಶ ದೇಶಗಳ ನಡುವೆ ಹಬ್ಬಿ ವಿಶಾಲ ಪ್ರದೇಶವನ್ನ ತನ್ನ ಬಾಹುಗಳಲ್ಲಿ ಆಲಿಂಗಿಸುತ್ತದೆ.
ಉದಾ : 2009ರ A H1N1 ಇನ್ಫ್ಲ್ಯೂಯೆಂಜಾ
  • ಎಪಿಡೆಮಿಕ್ ಗಳನ್ನ ಕಾಲಕಾಲದಲ್ಲಿ ಗುರುತಿಸಿ ದಾಖಲಿಸಲಾಗಿದ್ದು ಅವುಗಳ ಪಟ್ಟಿ ಕೂಡ ಮಾಡಲಾಗಿದೆ. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಬಹಳ ಹಳೆಯ ರೋಗಜ್ವಾಲೆಗಳ ಪಟ್ಟಿಯೂ ಇಲ್ಲಿದೆ. ಅದನ್ನ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
  • ಅಂದ ಹಾಗೆ Epidemic & Pandemic ಎಂಬ ಎರಡೂ ಶಬ್ದಗಳು ರೋಗ ಹರಡಿದ ಬಗೆ ಹಾಗೂ ವ್ಯಾಪ್ತಿಯನ್ನ ಸೂಚಿಸುವ ಶಬ್ದಗಳಷ್ಟೇ. ಈ ಹೆಸರಿನ ರೋಗಗಳಿಲ್ಲ. ಆದರೆ Epidemic Cholera ಎಂಬ ಪದ ಬಳಕೆಯಾದಲ್ಲಿ ಕಾಲರಾ ರೋಗ ಹಬ್ಬಿರುವ ಪರಿಯನ್ನ ಗ್ರಹಿಸಬೇಕೇ ಹೊರತು ಅದೊಂದು ಬಗೆಯ ಕಾಲರಾ ಎಂದೆಣಿಸಬಾರದು.

: ರವಿ

Dec 2, 2010

ಸೊಮಾಲಿಯಾ

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಸೊಮಾಲಿಯಾದಲ್ಲಿ ನಿಲ್ಲದ ಹಿಂಸೆ ; ರಕ್ಷಣೆಗೆ ಧಾವಿಸಿದ ಆಫ್ರಿಕನ್ ಒಕ್ಕೂಟದ ಸೇನೆ


ಬಡತನ
ನಿಸರ್ಗ












ಕಡಲ್ಗಳ್ಳರು
ಸೊಮಾಲಿಯಾ ಧ್ವಜ





ಸುದ್ದಿಯ ಒಳನೋಟ :
  • ಆಫ್ರಿಕಾ ಖಂಡದ Horn of Africa ಭೂಭಾಗದಲ್ಲಿ ಸ್ಥಿತಗೊಂಡಿರುವ ದೇಶ.
  • ಅಧಿಕೃತವಾಗಿ ಸೊಮಾಲಿಯಾ ಗಣರಾಜ್ಯ ಎಂಬ ಹೆಸರಿದ್ದು ಅರಬ್ ರಾಷ್ಟ್ರಗಳ ಒಕ್ಕೂಟದ (Arab League) ಸದಸ್ಯ ರಾಷ್ಟ್ರಕೂಡ ಹೌದು.
  • ದಿನಪತ್ರಿಕೆಗಳಲ್ಲಿ ನಾವು ನೋಡುವ ಕಡಲ್ಗಳ್ಳತನದ ಸುದ್ದಿಯಿಂದ, ಇದೊಂದು ದಿವಾಳಿ ಎದ್ದು ಹೋಗಿರುವ ದೇಶವೆಂದು ನಾವು ಬಗೆದರೆ, ಅದು ನಮ್ಮ ಅಲ್ಪಜ್ಞಾನವಾಗುತ್ತದೆ. ಕಾರಣ ಆ ದೇಶ ಬಡತನದ ಹೊರತಾಗಿಯೂ ತಕ್ಕಮಟ್ಟಿಗಿನ, ಸುಭದ್ರವಲದ್ಲದಿದ್ದರೂ ಭದ್ರ ಎನಿಸುವ ಆರ್ಥಿಕತೆ ಹೊಂದಿದೆ.
  • ಆಂತರಿಕ ಕಾರಣಗಳಿಂದ ದಕ್ಷಿಣ ಸೊಮಾಲಿಯಾ & ಉತ್ತರ ಸೊಮಾಲಿಯಾ ಎಂದು ಬೇರ್ಪಟ್ಟಿದ್ದ ದೇಶ, ಮುಂದೆ 1960ರಲ್ಲಿ ಒಂದಾಯಿತು. 1961ರಲ್ಲಿ ಹೊಸ ಕಾನೂನಿನ ಅಂಗೀಕಾರದ ಜೊತೆಜೊತೆಗೆ ಚುನಾವಣೆ ನಡೆದು ಪ್ರಜಾಸತ್ತಾತ್ಮಕ ಸರ್ಕಾರ ಆಳ್ವಿಕೆಗೆ ಬಂತು.
  • ಅರಬ್ ದೇಶಗಳೊಂದಿಗಿನ ಅನಾದಿ ಕಾಲದ ಸಂಬಂಧಗಳ ಕಾರಣದಿಂದ 1974ರಲ್ಲಿ ಅರಬ್ ಲೀಗ್ ಸೇರಿಯೂ ಆಯಿತು. 
  • ದೇಶ ಸ್ವತಂತ್ರವಾಗಿ ಚುನಾವಣೆಯ ಮೂಲಕ ಸರ್ಕಾರ ರಚಿಸಿದಾಗ ಪಾಶ್ಚಿಮಾತ್ಯ ರಾಷ್ಟ್ರಗಳು " ಸೊಮಾಲಿಯಾ, ಆಫ್ರಿಕಾ ಖಂಡಕ್ಕೆ ಮಾದರಿ ಪ್ರಜಾಪ್ರಭುತ್ವ " ವಾಯಿತು ಎಂದು ಬಗೆದಿದ್ದರು. ಆದರೆ 1969ರಲ್ಲಿ ಅಂದಿನ ರಾಷ್ಟ್ರಾದ್ಯಕ್ಷರ ಹತ್ಯೆಯ ಬಳಿಕ ಖಾಲಿ ಉಳಿದಿದ್ದ ದೇಶದ ಮುಂಖಂಡನ ಸ್ಥಾನದಲ್ಲಿ, coup d'état ಮೂಲಕ ಸೈಯದ್ ಬಾರಿ ಎಂಬ ಮಿಲಿಟರಿ ಸರ್ವಾಧಿಕಾರಿ ಕುಳಿತುಕೊಂಡ. ತನ್ಮೂಲಕ ದೇಶದ ಆಡಳಿತ ಅವನಿಗೆ ಹಸ್ತಾಂತರವಾಯಿತು. 
  • ಸೈಯದ್ ಬಾರಿ(Said Barre) ಚೀನಾದ ಕಮ್ಯೂನಿಸಂ ಆರಾಧಕನಾಗಿದ್ದು ದೇಶದ ಸಮಸ್ತವನ್ನೂ ರಾಷ್ಟ್ರೀಕರಣಗಳಿಸಿದ. ಅಲ್ಲದೇ ದೇಶದಲ್ಲಿ ಜಾರಿಯಲ್ಲಿದ್ದ ವಂಶಾಧಾರಿತ ಆಡಳಿತ ವ್ಯವಸ್ಥೆಯನ್ನ ನಾಶಪಡಿಸಲು ಹವಣಿಸಿ 1986ರಲ್ಲಿ ಸೊಮಾಲಿಯಾ ನಾಗರಿಕ ಯುದ್ಧಗಳಿಗೆ ಕಾರಣೀಭೂತನಾಗಿ, ಆ ಯುದ್ಧ ಇಂದಿಗೂ ಶಮನವಾಗಿಲ್ಲ.
  • 1969 ರಿಂದ 1991ರವರೆಗೆ ಅಧಿಕಾರದಲ್ಲಿ ಕಾಮ್ರೇಡ್ ಬಾರಿ, 1974ರಲ್ಲಿ ಮಾಧ್ಯಮಿಕ ಶಾಲೆಗಳನ್ನೆಲ್ಲಾ ಮುಚ್ಚಿಸಿ ಅಲ್ಲಿ ಕಲಿಯುತ್ತಿದ್ದ ಮಕ್ಕಳನ್ನ ಕ್ರಾಂತಿಯ ಆರಾಧಕರನ್ನಾಗಿಸಲು ಅವರ ಕೈಗೆ ಬಂದೂಕು ನೀಡಿ ಮಿಲಿಟರಿಗೆ ಯುವಕರ ಪಡೆ ತಯಾರು ಮಾಡಿದ. ಅಂಥ ಮಕ್ಕಳ ಸಂಖ್ಯೆ ಆ ವರ್ಷದಲ್ಲಿ 25000 ವಿತ್ತು. ಆ ಮಕ್ಕಳಿಗೆ ಹಳ್ಳಿಗಳಿಗೆ ಹೋಗಿ ಅಲ್ಲಿದ್ದ ಅನಕ್ಷರಸ್ಥರಿಗೆ, ಕಾಮ್ರೇಡ್ ಹೊರತಂದಿದ್ದ ದೇಶದ ಹೊಸ ಲಿಪಿಯನ್ನ ಓದಲು ಬರೆಯಲು ಕಲಿಸಿಕೊಡುವ ಜವಾಬ್ದಾರಿಯನ್ನೂ ನೀಡಲಾಯಿತು.
  • 1991ರಲ್ಲಿ ಕಾಮ್ರೇಡ್ ಅಧಿಕಾರದಿಂದ ಕೆಳಗಿಳಿದ ನಂತರ ತಾರಕಕ್ಕೇರಿದ ಕಲಹಗಳಿಂದ ಎಚ್ಚೆತ್ತುಕೊಂಡ ವಿಶ್ವಸಂಸ್ಥೆ ಡಿಸೆಂಬರ್ 3, 1992ರಲ್ಲಿ ಠರಾವು ಪಾಸು ಮಾಡಿ ಆ ದೇಶಕ್ಕೆ ಶಾಂತಿಮರುಸ್ಥಾಪನೆಗೆಂದು ತನ್ನ ಸದಸ್ಯ ರಾಷ್ಟ್ರಗಳ ಮಿಲಿಟರಿ ತುಕಡಿಯನ್ನ ಅಮೆರಿಕಾ ಮಿಲಿಟರಿಯ ನೇತೃತ್ವದಲ್ಲಿ ಕಳುಹಿಸಲು ತೀರ್ಮಾನಿಸಿತು.
  • ಆದರೆ ಅಮೆರಿಕದ ಕೈಚಳಕ ಈಗಾಗಲೇ ಅಲ್ಲಿ ನಡೆದು ಹೋಗಿತ್ತು. ಕಾಮ್ರೇಡ್ ಬಾರಿಯನ್ನ ತನ್ನ ಕೈಗೊಂಬೆಯಾಗಿಸಿಕೊಂಡಿದ್ದ ಅಮೆರಿಕಾ, ಸೊಮಾಲಿಯಾದ ಪ್ರಮುಖ ತೈಲ ನಿಕ್ಷೇಪಗಳಲ್ಲಿ ತನ್ನ ದೇಶದ ಕಂಪೆನಿಗಳನ್ನ ಸ್ಥಾಪಿಸಿಕೊಂಡಿತ್ತು. ಮುಂದೆ ಬಂದ ಬುಷ್ ಆಡಳಿತ ಈ ಶಾಂತಿ ಸ್ಥಾಪನೆಯ ನೆಪದಲ್ಲಿ ಆ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಹುನ್ನಾರ ಮಾಡಿತು ಎಂಬುದನ್ನ ಓದುಗರು ಗಮನಿಸಬೇಕು. ಬುಷ್ ಆಡಳಿತ ಇದೇ ತೈಲದ ಮೇಲೆ ಕಣ್ಣಿಟ್ಟು ಇರಾಕ್ ದೇಶವನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿರುವುದು ಇಲ್ಲಿ ಉಲ್ಲೇಖನೀಯ.
  • ಸದರಿ ಯುದ್ಧವನ್ನ ನಾನಿಲ್ಲಿ ವಿವರಿಸುವ ಬದಲು ಓದುಗರು Black Hawk Down ಚಿತ್ರವನ್ನ ನೋಡಬೇಕು. ಅದು ಇದೇ ಯುದ್ಧವನ್ನಾಧರಿಸಿದ ಚಿತ್ರ.
  • ಸೊಮಾಲಿಯಾ Civil War ಬಗ್ಗೆ ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ 
  • ಈಗ ಸುದ್ದಿಯಲ್ಲಿರುವ ಯುದ್ಧ : ಇಥಿಯೋಪಿಯಾ ತಾನು ಆಕ್ರಮಿಸಿದ್ದ ಸೊಮಾಲಿಯಾದ ಭೂಭಾಗವನ್ನ ಬಿಟ್ಟುಕೊಟ್ಟು 2008ರಲ್ಲಿ ಹಿಂದೆ ಸರಿದಿದ್ದರಿಂದ ಇಷ್ಟು ದಿನ ಅಜ್ಞಾತವಾಗಿದ್ದ ಇಸ್ಲಾಮಿಕ್ ಮೂಲಭೂತವಾದಿ ಗೆರಿಲ್ಲಾಗಳು ಮತ್ತೆ ದೇಶದಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸುವಲ್ಲಿ ದಾಪುಗಾಲಿಟ್ಟಿವೆ. ಅದರ ಭಾಗವಾಗಿಯೇ ಈ ಹಿಂಸೆ.
ಅವರಿಗೆ ದೇಶವನ್ನ ತಮ್ಮ ಸುಪರ್ದಿಗೆ ತೆಗೆದುಕೊಂಡು ದೇಶದಲ್ಲಿ ತಮ್ಮ ನಿಯಮಗಳನ್ನ ಜಾರಿಗೆ ತರುವ ಮನಸಿದ್ದರೆ, ಒಳ್ಳೆಯದೇ. ಆದರೆ ಎಲ್ಲದಕ್ಕೂ ಅವರಿಗೆ ಗೊತ್ತಿರುವ ದಾರಿ ಒಂದೇ ಹಿಂಸೆ. ಹಿಂಸೆಯೊಂದೇ ಸರ್ವತ್ರ ಸಾಧನ ಎಂದವರು ಬಗೆದಂತಿದೆ. ದೇಶ ಸ್ಥಾಪನೆಗೆ ಹಿಂಸೆ, ಅಧಿಕಾರ ಸ್ಥಾಪನೆಗೆ, ನೀತಿಯನ್ನ ಪ್ರತಿಭಟಿಸಲು ಹಿಂಸೆ, .. ಅವರ ತತ್ವಗಳು ಅವರಿಗೇ ಪ್ರೀತಿ !!
  • ಸುಯೇಜ್ ಕಾಲುವೆಗೆ ಸಾಗುವ ಮಾರ್ಗದಲ್ಲಿ ಸ್ಥಿತಗೊಂಡಿರುವುದರಿಂದ ದೇಶಕ್ಕೆ ವ್ಯಾಪಾರ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಆದರೆ ಅಲ್ಲಿನ ಬಡತನ & ಆಂತರಿಕ ಕಲಹಗಳು ಅದಕ್ಕೆ ಅಡ್ಡಗಾಲಾಗಿದೆ.
  • ವರದಿಯೊಂದರ ಪ್ರಕಾರ ಸೊಮಾಲಿಯಾ ದೇಶದ 73 ಪ್ರತಿಶತ ಜನಸಂಖ್ಯೆಯ ದಿನದ ಸಂಪಾದನೆ $2 ದಾಟುವುದಿಲ್ಲ. 
  • ಸೊಮಾಲಿಯಾ ಬಗ್ಗೆ ನಿಮ್ಮಲ್ಲಿ ಏನೇನು ಮಾಹಿತಿ ಇದೆ ? hm ?

: ರವಿ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ