ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Dec 2, 2010

ಸೊಮಾಲಿಯಾ

ಚುಟುಕು ಸುದ್ದಿ : ಸೊಮಾಲಿಯಾದಲ್ಲಿ ನಿಲ್ಲದ ಹಿಂಸೆ ; ರಕ್ಷಣೆಗೆ ಧಾವಿಸಿದ ಆಫ್ರಿಕನ್ ಒಕ್ಕೂಟದ ಸೇನೆ


ಬಡತನ
ನಿಸರ್ಗ












ಕಡಲ್ಗಳ್ಳರು
ಸೊಮಾಲಿಯಾ ಧ್ವಜ





ಸುದ್ದಿಯ ಒಳನೋಟ :
  • ಆಫ್ರಿಕಾ ಖಂಡದ Horn of Africa ಭೂಭಾಗದಲ್ಲಿ ಸ್ಥಿತಗೊಂಡಿರುವ ದೇಶ.
  • ಅಧಿಕೃತವಾಗಿ ಸೊಮಾಲಿಯಾ ಗಣರಾಜ್ಯ ಎಂಬ ಹೆಸರಿದ್ದು ಅರಬ್ ರಾಷ್ಟ್ರಗಳ ಒಕ್ಕೂಟದ (Arab League) ಸದಸ್ಯ ರಾಷ್ಟ್ರಕೂಡ ಹೌದು.
  • ದಿನಪತ್ರಿಕೆಗಳಲ್ಲಿ ನಾವು ನೋಡುವ ಕಡಲ್ಗಳ್ಳತನದ ಸುದ್ದಿಯಿಂದ, ಇದೊಂದು ದಿವಾಳಿ ಎದ್ದು ಹೋಗಿರುವ ದೇಶವೆಂದು ನಾವು ಬಗೆದರೆ, ಅದು ನಮ್ಮ ಅಲ್ಪಜ್ಞಾನವಾಗುತ್ತದೆ. ಕಾರಣ ಆ ದೇಶ ಬಡತನದ ಹೊರತಾಗಿಯೂ ತಕ್ಕಮಟ್ಟಿಗಿನ, ಸುಭದ್ರವಲದ್ಲದಿದ್ದರೂ ಭದ್ರ ಎನಿಸುವ ಆರ್ಥಿಕತೆ ಹೊಂದಿದೆ.
  • ಆಂತರಿಕ ಕಾರಣಗಳಿಂದ ದಕ್ಷಿಣ ಸೊಮಾಲಿಯಾ & ಉತ್ತರ ಸೊಮಾಲಿಯಾ ಎಂದು ಬೇರ್ಪಟ್ಟಿದ್ದ ದೇಶ, ಮುಂದೆ 1960ರಲ್ಲಿ ಒಂದಾಯಿತು. 1961ರಲ್ಲಿ ಹೊಸ ಕಾನೂನಿನ ಅಂಗೀಕಾರದ ಜೊತೆಜೊತೆಗೆ ಚುನಾವಣೆ ನಡೆದು ಪ್ರಜಾಸತ್ತಾತ್ಮಕ ಸರ್ಕಾರ ಆಳ್ವಿಕೆಗೆ ಬಂತು.
  • ಅರಬ್ ದೇಶಗಳೊಂದಿಗಿನ ಅನಾದಿ ಕಾಲದ ಸಂಬಂಧಗಳ ಕಾರಣದಿಂದ 1974ರಲ್ಲಿ ಅರಬ್ ಲೀಗ್ ಸೇರಿಯೂ ಆಯಿತು. 
  • ದೇಶ ಸ್ವತಂತ್ರವಾಗಿ ಚುನಾವಣೆಯ ಮೂಲಕ ಸರ್ಕಾರ ರಚಿಸಿದಾಗ ಪಾಶ್ಚಿಮಾತ್ಯ ರಾಷ್ಟ್ರಗಳು " ಸೊಮಾಲಿಯಾ, ಆಫ್ರಿಕಾ ಖಂಡಕ್ಕೆ ಮಾದರಿ ಪ್ರಜಾಪ್ರಭುತ್ವ " ವಾಯಿತು ಎಂದು ಬಗೆದಿದ್ದರು. ಆದರೆ 1969ರಲ್ಲಿ ಅಂದಿನ ರಾಷ್ಟ್ರಾದ್ಯಕ್ಷರ ಹತ್ಯೆಯ ಬಳಿಕ ಖಾಲಿ ಉಳಿದಿದ್ದ ದೇಶದ ಮುಂಖಂಡನ ಸ್ಥಾನದಲ್ಲಿ, coup d'état ಮೂಲಕ ಸೈಯದ್ ಬಾರಿ ಎಂಬ ಮಿಲಿಟರಿ ಸರ್ವಾಧಿಕಾರಿ ಕುಳಿತುಕೊಂಡ. ತನ್ಮೂಲಕ ದೇಶದ ಆಡಳಿತ ಅವನಿಗೆ ಹಸ್ತಾಂತರವಾಯಿತು. 
  • ಸೈಯದ್ ಬಾರಿ(Said Barre) ಚೀನಾದ ಕಮ್ಯೂನಿಸಂ ಆರಾಧಕನಾಗಿದ್ದು ದೇಶದ ಸಮಸ್ತವನ್ನೂ ರಾಷ್ಟ್ರೀಕರಣಗಳಿಸಿದ. ಅಲ್ಲದೇ ದೇಶದಲ್ಲಿ ಜಾರಿಯಲ್ಲಿದ್ದ ವಂಶಾಧಾರಿತ ಆಡಳಿತ ವ್ಯವಸ್ಥೆಯನ್ನ ನಾಶಪಡಿಸಲು ಹವಣಿಸಿ 1986ರಲ್ಲಿ ಸೊಮಾಲಿಯಾ ನಾಗರಿಕ ಯುದ್ಧಗಳಿಗೆ ಕಾರಣೀಭೂತನಾಗಿ, ಆ ಯುದ್ಧ ಇಂದಿಗೂ ಶಮನವಾಗಿಲ್ಲ.
  • 1969 ರಿಂದ 1991ರವರೆಗೆ ಅಧಿಕಾರದಲ್ಲಿ ಕಾಮ್ರೇಡ್ ಬಾರಿ, 1974ರಲ್ಲಿ ಮಾಧ್ಯಮಿಕ ಶಾಲೆಗಳನ್ನೆಲ್ಲಾ ಮುಚ್ಚಿಸಿ ಅಲ್ಲಿ ಕಲಿಯುತ್ತಿದ್ದ ಮಕ್ಕಳನ್ನ ಕ್ರಾಂತಿಯ ಆರಾಧಕರನ್ನಾಗಿಸಲು ಅವರ ಕೈಗೆ ಬಂದೂಕು ನೀಡಿ ಮಿಲಿಟರಿಗೆ ಯುವಕರ ಪಡೆ ತಯಾರು ಮಾಡಿದ. ಅಂಥ ಮಕ್ಕಳ ಸಂಖ್ಯೆ ಆ ವರ್ಷದಲ್ಲಿ 25000 ವಿತ್ತು. ಆ ಮಕ್ಕಳಿಗೆ ಹಳ್ಳಿಗಳಿಗೆ ಹೋಗಿ ಅಲ್ಲಿದ್ದ ಅನಕ್ಷರಸ್ಥರಿಗೆ, ಕಾಮ್ರೇಡ್ ಹೊರತಂದಿದ್ದ ದೇಶದ ಹೊಸ ಲಿಪಿಯನ್ನ ಓದಲು ಬರೆಯಲು ಕಲಿಸಿಕೊಡುವ ಜವಾಬ್ದಾರಿಯನ್ನೂ ನೀಡಲಾಯಿತು.
  • 1991ರಲ್ಲಿ ಕಾಮ್ರೇಡ್ ಅಧಿಕಾರದಿಂದ ಕೆಳಗಿಳಿದ ನಂತರ ತಾರಕಕ್ಕೇರಿದ ಕಲಹಗಳಿಂದ ಎಚ್ಚೆತ್ತುಕೊಂಡ ವಿಶ್ವಸಂಸ್ಥೆ ಡಿಸೆಂಬರ್ 3, 1992ರಲ್ಲಿ ಠರಾವು ಪಾಸು ಮಾಡಿ ಆ ದೇಶಕ್ಕೆ ಶಾಂತಿಮರುಸ್ಥಾಪನೆಗೆಂದು ತನ್ನ ಸದಸ್ಯ ರಾಷ್ಟ್ರಗಳ ಮಿಲಿಟರಿ ತುಕಡಿಯನ್ನ ಅಮೆರಿಕಾ ಮಿಲಿಟರಿಯ ನೇತೃತ್ವದಲ್ಲಿ ಕಳುಹಿಸಲು ತೀರ್ಮಾನಿಸಿತು.
  • ಆದರೆ ಅಮೆರಿಕದ ಕೈಚಳಕ ಈಗಾಗಲೇ ಅಲ್ಲಿ ನಡೆದು ಹೋಗಿತ್ತು. ಕಾಮ್ರೇಡ್ ಬಾರಿಯನ್ನ ತನ್ನ ಕೈಗೊಂಬೆಯಾಗಿಸಿಕೊಂಡಿದ್ದ ಅಮೆರಿಕಾ, ಸೊಮಾಲಿಯಾದ ಪ್ರಮುಖ ತೈಲ ನಿಕ್ಷೇಪಗಳಲ್ಲಿ ತನ್ನ ದೇಶದ ಕಂಪೆನಿಗಳನ್ನ ಸ್ಥಾಪಿಸಿಕೊಂಡಿತ್ತು. ಮುಂದೆ ಬಂದ ಬುಷ್ ಆಡಳಿತ ಈ ಶಾಂತಿ ಸ್ಥಾಪನೆಯ ನೆಪದಲ್ಲಿ ಆ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಹುನ್ನಾರ ಮಾಡಿತು ಎಂಬುದನ್ನ ಓದುಗರು ಗಮನಿಸಬೇಕು. ಬುಷ್ ಆಡಳಿತ ಇದೇ ತೈಲದ ಮೇಲೆ ಕಣ್ಣಿಟ್ಟು ಇರಾಕ್ ದೇಶವನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿರುವುದು ಇಲ್ಲಿ ಉಲ್ಲೇಖನೀಯ.
  • ಸದರಿ ಯುದ್ಧವನ್ನ ನಾನಿಲ್ಲಿ ವಿವರಿಸುವ ಬದಲು ಓದುಗರು Black Hawk Down ಚಿತ್ರವನ್ನ ನೋಡಬೇಕು. ಅದು ಇದೇ ಯುದ್ಧವನ್ನಾಧರಿಸಿದ ಚಿತ್ರ.
  • ಸೊಮಾಲಿಯಾ Civil War ಬಗ್ಗೆ ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ 
  • ಈಗ ಸುದ್ದಿಯಲ್ಲಿರುವ ಯುದ್ಧ : ಇಥಿಯೋಪಿಯಾ ತಾನು ಆಕ್ರಮಿಸಿದ್ದ ಸೊಮಾಲಿಯಾದ ಭೂಭಾಗವನ್ನ ಬಿಟ್ಟುಕೊಟ್ಟು 2008ರಲ್ಲಿ ಹಿಂದೆ ಸರಿದಿದ್ದರಿಂದ ಇಷ್ಟು ದಿನ ಅಜ್ಞಾತವಾಗಿದ್ದ ಇಸ್ಲಾಮಿಕ್ ಮೂಲಭೂತವಾದಿ ಗೆರಿಲ್ಲಾಗಳು ಮತ್ತೆ ದೇಶದಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸುವಲ್ಲಿ ದಾಪುಗಾಲಿಟ್ಟಿವೆ. ಅದರ ಭಾಗವಾಗಿಯೇ ಈ ಹಿಂಸೆ.
ಅವರಿಗೆ ದೇಶವನ್ನ ತಮ್ಮ ಸುಪರ್ದಿಗೆ ತೆಗೆದುಕೊಂಡು ದೇಶದಲ್ಲಿ ತಮ್ಮ ನಿಯಮಗಳನ್ನ ಜಾರಿಗೆ ತರುವ ಮನಸಿದ್ದರೆ, ಒಳ್ಳೆಯದೇ. ಆದರೆ ಎಲ್ಲದಕ್ಕೂ ಅವರಿಗೆ ಗೊತ್ತಿರುವ ದಾರಿ ಒಂದೇ ಹಿಂಸೆ. ಹಿಂಸೆಯೊಂದೇ ಸರ್ವತ್ರ ಸಾಧನ ಎಂದವರು ಬಗೆದಂತಿದೆ. ದೇಶ ಸ್ಥಾಪನೆಗೆ ಹಿಂಸೆ, ಅಧಿಕಾರ ಸ್ಥಾಪನೆಗೆ, ನೀತಿಯನ್ನ ಪ್ರತಿಭಟಿಸಲು ಹಿಂಸೆ, .. ಅವರ ತತ್ವಗಳು ಅವರಿಗೇ ಪ್ರೀತಿ !!
  • ಸುಯೇಜ್ ಕಾಲುವೆಗೆ ಸಾಗುವ ಮಾರ್ಗದಲ್ಲಿ ಸ್ಥಿತಗೊಂಡಿರುವುದರಿಂದ ದೇಶಕ್ಕೆ ವ್ಯಾಪಾರ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಆದರೆ ಅಲ್ಲಿನ ಬಡತನ & ಆಂತರಿಕ ಕಲಹಗಳು ಅದಕ್ಕೆ ಅಡ್ಡಗಾಲಾಗಿದೆ.
  • ವರದಿಯೊಂದರ ಪ್ರಕಾರ ಸೊಮಾಲಿಯಾ ದೇಶದ 73 ಪ್ರತಿಶತ ಜನಸಂಖ್ಯೆಯ ದಿನದ ಸಂಪಾದನೆ $2 ದಾಟುವುದಿಲ್ಲ. 
  • ಸೊಮಾಲಿಯಾ ಬಗ್ಗೆ ನಿಮ್ಮಲ್ಲಿ ಏನೇನು ಮಾಹಿತಿ ಇದೆ ? hm ?

: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ