ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ನಿಹಾರಿಕಾ. Show all posts
Showing posts with label ನಿಹಾರಿಕಾ. Show all posts

Oct 5, 2010

ಈಸ್ಟ್ ಇಂಡಿಯಾ ಕಂಪೆನಿ

1 ಪ್ರತಿಕ್ರಿಯೆಗಳು
  • ಈಸ್ಟ್ ಇಂಡಿಯಾ ಕಂಪೆನಿ - ವಿಶ್ವದ ಮೊದಲ ಬಹುರಾಷ್ಟ್ರೀಯ ಕಂಪೆನಿ.
  • ಈ ಸಂಸ್ಥೆ 1612 ರಿಂದ 1757ರವರೆಗೆ ಭಾರತದಲ್ಲಿ ಜೀವಂತವಾಗಿತ್ತು.
  • ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ / ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪೆನಿ / ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಅಂತಲೂ ಇದಕ್ಕೆ ಹೆಸರಿತ್ತು.
  • ಭಾರತದ ಜನರಿಗೆ ' ಕಂಪೆನಿ ಬಹಾದೂರ್ ' ಅನ್ನುವ ಹೆಸರಿನಿಂದಲೂ ಪರಿಚಯವಿತ್ತು.
  • ಪೂರ್ವ ಜಗತ್ತಿನಲ್ಲಿ ವ್ಯಾಪಾರ ಮಾಡುವ ದೃಷ್ಟಿಯಿಂದ ಶುರುವಾದ ಇದು ಭಾರತ ಉಪಖಂಡ & ಚೀನಾ ಬಿಟ್ಟರೆ ಉಳಿದ ಭಾಗದಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ.
  • ಅವರ ಮುಖ್ಯ ವ್ಯಾಪಾರದ ವಸ್ತುಗಳು : ಹತ್ತಿ , ರೇಷ್ಮೆ . ಇಂಡಿಗೋ ಡೈ , ಹಳ್ಳುಪ್ಪು ಚಹಾ & ಓಪಿಯಂ.
  • ಇದೀಗ ಸದರಿ ಕಂಪೆನಿಯನ್ನ ಮುಂಬೈ ಮೂಲದ ಉದ್ಯಮಿ : ಸಂಜೀವ್ ಮೆಹ್ತಾ ಖರೀದಿ ಮಾಡಿದ್ದಾರೆ.(2005)




ಈಸ್ಟ್ ಇಂಡಿಯಾ ಕಂಪೆನಿಯ ಇತಿಹಾಸ ಹಾಗೂ ಇನ್ನುಳಿದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ




: ನಿಹಾರಿಕಾ



.

Sep 25, 2010

ಕಂಪ್ಯೂಟರ್ ಮೂಲಕ ಅನ್ನದಾಸೋಹ

0 ಪ್ರತಿಕ್ರಿಯೆಗಳು
ಇದೇನಿದು ಹೊಸ ಥರ ಇದೆಯಲ್ಲಾ ?! ಅಂತಿರಾ ? ಹೌದು ಹೊಸ ಯುಗಕ್ಕೆ ಹೊಸ ಮಾರ್ಗಗಳು. ಇದು United Nations Food Programme ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು Non-Profit ಅಂತರಜಾಲ ತಾಣ. 


ತಾಣದ ಧ್ಯೇಯಗಳು ಇಷ್ಟು :

  1. ಸರ್ವರಿಗೂ ಉಚಿತ ಶಿಕ್ಷಣ
  2. ಹಸಿದವರಿಗೆ ಉಚಿತ ಆಹಾರ ನೀಡುವ ಮೂಲಕ ಜಗತ್ತಿನಲ್ಲಿ ಹಸಿವಿನ ಸಮಸ್ಯೆಯನ್ನ ಹೋಗಲಾಡಿಸುವುದು.
ತಾಣದ ಕಾರ್ಯಾಚರಣೆ ಸರಳವಾಗಿದೆ :

ತಾಣದಲ್ಲಿ ಹತ್ತು ಹಲವು ವಿಷಯಗಳ ಮೇಲೆ ಶೈಕ್ಷಣಿಕ Quiz ತಯಾರು ಮಾಡಿದಾರೆ. ನಾವು Click ಮಾಡುವ ಪ್ರತಿ ಸರಿ ಉತ್ತರಕ್ಕೆ 10 ಕಾಳು ಅಕ್ಕಿ (ಧಾನ್ಯ) ದಾಸೋಹದ ಪಾತ್ರೆಗೆ ಸೇರುತ್ತದೆ. 

ಅದು ಹೇಗೆ mouseclick ಮಾಡಿದರೆ ಅಕ್ಕಿ ಸಿಗುತ್ತದೆ ?

ಪ್ರತಿಯೊಂದು ಅಂತರಜಾಲತಾಣಕ್ಕೂ ಹಣ ಮಾಡಿಕೊಳ್ಳುವ ಅವಕಾಶವಿರುತ್ತದೆ. ತನ್ನ ಒಡೆತನದ ತಾಣದಲ್ಲಿ ಜಾಹೀರಾತು ಪ್ರಕಟಿಸಲು ಸ್ಥಳಾವಕಾಶ ನೀಡುವ ಮೂಲಕ ಆ ಅಂತರಜಾಲ ತಾಣದ ಮಾಲೀಕನಿಗೆ ಹಣ ಸಂದಾಯವಾಗುತ್ತದೆ. ಹಾಗೆ ಸ್ಥಳಾವಕಾಶ ನೀಡಿದ ನಂತರ ಸದರಿ ತಾಣದಲ್ಲಿ ಒಬ್ಬ ನೆಟ್ಟಿಗ / ನೆಟಿಝನ್ ( interNET + citiZEN = NETIZEN ) ಮಾಡುವ MouseClick ಗಳ ಸಂಖ್ಯೆ ಆಧರಿಸಿ ಸದರಿ ತಾಣದ ಒಡೆಯನಿಗೆ ಜಾಹೀರಾತುದಾರರು ಹಣ ಸಂದಾಯ ಮಾಡುತ್ತಾರೆ.

ಇದೇ ರೀತಿಯಲ್ಲಿ ಸದರಿ ವಿಶ್ವಸಂಸ್ಥೆಯ ಈ ತಾಣಕ್ಕೂ ಜಾಹೀರಾತು ಕಂಪೆನಿಗಳ ಒಡೆಯರು ಗುಪ್ತದಾನಿಗಳಾಗಿದ್ದಾರೆ. ಅಂಥ ಜಾಹೀರಾತು ಕಂಪೆನಿಗಳು ದಾಸೋಹ ಮಾಡಲು ನಾವು ಮಾಡುವ Mouse Click ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಇಷ್ಟೆಲ್ಲಾ ಓದಿದ ಮೇಲೆ ನೀವೂ ಅನ್ನದಾಸೋಹಕ್ಕೆ ಕುತೂಹಲಿಗಳಾಗಿದೀರಿ ಅಂತ ಗೊತ್ತು ನನಗೆ : ಆದರೆ ಅನ್ನ - ಸಾರು ಬಡಿಸಲು ಅನ್ನದ ಕೈ - ಸೌಟು ಹುಡುಕುವ ಅವಶ್ಯಕತೆಯಿಲ್ಲ... !! ನಿಮ್ಮ ಕಂಪ್ಯೂಟರ್ Mouse ಹಿಡಿದು ಈ ಕೆಳಕಂಡ ತಾಣ ಕ್ಲಿಕ್ಕಿಸಿ .. ಸರಿ ಉತ್ತರಗಳನ್ನ ಕ್ಲಿಕ್ಕಿಸುತ್ತಾ ಹೋಗಿ . ಮನಸ್ತೃಪ್ತಿಯಾಗುವವರೆಗೆ ಊಟ ಬಡಿಸಿ..!!! ಇವತ್ತೊಂದು  ದಿನವಲ್ಲಾ  ಪ್ರತಿ ದಿನವೂ ದಾಸೋಹ ಮಾಡುವ ಸತ್ಕೃಪೆಗೆ ಪಾತ್ರರಾಗಿ.. ಬದಲಿಗೆ ನಿಮ್ಮ ಜ್ಞಾನವನ್ನೂ ಹೆಚ್ಚಿಸಿಕೊಳ್ಳಿ .. ಇಗೋ e-ಅನ್ನದ ಪಾತ್ರೆ ನಿಮ್ಮ ಕೈಗೆ : 







: ನಿಹಾರಿಕಾ




.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ