ಇದೇನಿದು ಹೊಸ ಥರ ಇದೆಯಲ್ಲಾ ?! ಅಂತಿರಾ ? ಹೌದು ಹೊಸ ಯುಗಕ್ಕೆ ಹೊಸ ಮಾರ್ಗಗಳು. ಇದು United Nations Food Programme ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು Non-Profit ಅಂತರಜಾಲ ತಾಣ.
ತಾಣದ ಧ್ಯೇಯಗಳು ಇಷ್ಟು :
- ಸರ್ವರಿಗೂ ಉಚಿತ ಶಿಕ್ಷಣ
- ಹಸಿದವರಿಗೆ ಉಚಿತ ಆಹಾರ ನೀಡುವ ಮೂಲಕ ಜಗತ್ತಿನಲ್ಲಿ ಹಸಿವಿನ ಸಮಸ್ಯೆಯನ್ನ ಹೋಗಲಾಡಿಸುವುದು.
ತಾಣದ ಕಾರ್ಯಾಚರಣೆ ಸರಳವಾಗಿದೆ :
ತಾಣದಲ್ಲಿ ಹತ್ತು ಹಲವು ವಿಷಯಗಳ ಮೇಲೆ ಶೈಕ್ಷಣಿಕ Quiz ತಯಾರು ಮಾಡಿದಾರೆ. ನಾವು Click ಮಾಡುವ ಪ್ರತಿ ಸರಿ ಉತ್ತರಕ್ಕೆ 10 ಕಾಳು ಅಕ್ಕಿ (ಧಾನ್ಯ) ದಾಸೋಹದ ಪಾತ್ರೆಗೆ ಸೇರುತ್ತದೆ.
ಅದು ಹೇಗೆ mouseclick ಮಾಡಿದರೆ ಅಕ್ಕಿ ಸಿಗುತ್ತದೆ ?
ಪ್ರತಿಯೊಂದು ಅಂತರಜಾಲತಾಣಕ್ಕೂ ಹಣ ಮಾಡಿಕೊಳ್ಳುವ ಅವಕಾಶವಿರುತ್ತದೆ. ತನ್ನ ಒಡೆತನದ ತಾಣದಲ್ಲಿ ಜಾಹೀರಾತು ಪ್ರಕಟಿಸಲು ಸ್ಥಳಾವಕಾಶ ನೀಡುವ ಮೂಲಕ ಆ ಅಂತರಜಾಲ ತಾಣದ ಮಾಲೀಕನಿಗೆ ಹಣ ಸಂದಾಯವಾಗುತ್ತದೆ. ಹಾಗೆ ಸ್ಥಳಾವಕಾಶ ನೀಡಿದ ನಂತರ ಸದರಿ ತಾಣದಲ್ಲಿ ಒಬ್ಬ ನೆಟ್ಟಿಗ / ನೆಟಿಝನ್ ( interNET + citiZEN = NETIZEN ) ಮಾಡುವ MouseClick ಗಳ ಸಂಖ್ಯೆ ಆಧರಿಸಿ ಸದರಿ ತಾಣದ ಒಡೆಯನಿಗೆ ಜಾಹೀರಾತುದಾರರು ಹಣ ಸಂದಾಯ ಮಾಡುತ್ತಾರೆ.
ಇದೇ ರೀತಿಯಲ್ಲಿ ಸದರಿ ವಿಶ್ವಸಂಸ್ಥೆಯ ಈ ತಾಣಕ್ಕೂ ಜಾಹೀರಾತು ಕಂಪೆನಿಗಳ ಒಡೆಯರು ಗುಪ್ತದಾನಿಗಳಾಗಿದ್ದಾರೆ. ಅಂಥ ಜಾಹೀರಾತು ಕಂಪೆನಿಗಳು ದಾಸೋಹ ಮಾಡಲು ನಾವು ಮಾಡುವ Mouse Click ಪರೋಕ್ಷವಾಗಿ ಸಹಾಯ ಮಾಡುತ್ತದೆ.
ಇಷ್ಟೆಲ್ಲಾ ಓದಿದ ಮೇಲೆ ನೀವೂ ಅನ್ನದಾಸೋಹಕ್ಕೆ ಕುತೂಹಲಿಗಳಾಗಿದೀರಿ ಅಂತ ಗೊತ್ತು ನನಗೆ : ಆದರೆ ಅನ್ನ - ಸಾರು ಬಡಿಸಲು ಅನ್ನದ ಕೈ - ಸೌಟು ಹುಡುಕುವ ಅವಶ್ಯಕತೆಯಿಲ್ಲ... !! ನಿಮ್ಮ ಕಂಪ್ಯೂಟರ್ Mouse ಹಿಡಿದು ಈ ಕೆಳಕಂಡ ತಾಣ ಕ್ಲಿಕ್ಕಿಸಿ .. ಸರಿ ಉತ್ತರಗಳನ್ನ ಕ್ಲಿಕ್ಕಿಸುತ್ತಾ ಹೋಗಿ . ಮನಸ್ತೃಪ್ತಿಯಾಗುವವರೆಗೆ ಊಟ ಬಡಿಸಿ..!!! ಇವತ್ತೊಂದು ದಿನವಲ್ಲಾ ಪ್ರತಿ ದಿನವೂ ದಾಸೋಹ ಮಾಡುವ ಸತ್ಕೃಪೆಗೆ ಪಾತ್ರರಾಗಿ.. ಬದಲಿಗೆ ನಿಮ್ಮ ಜ್ಞಾನವನ್ನೂ ಹೆಚ್ಚಿಸಿಕೊಳ್ಳಿ .. ಇಗೋ e-ಅನ್ನದ ಪಾತ್ರೆ ನಿಮ್ಮ ಕೈಗೆ :
: ನಿಹಾರಿಕಾ
.
No comments:
Post a Comment