ದೈನಂದಿನ ಜೀವನದ ಕೆಲವು ಘಟನೆಗಳನ್ನ ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಇನ್ನು ಕೆಲವು ಘಟನೆಗಳನ್ನ ಶಬ್ದಗಳಲ್ಲಿ ವಿವರಿಸಿದರೂ ಆ ವಿವರಣೆ ನಮ್ಮ ವಿಚಾರಶಕ್ತಿಗೆ ನಿಲುಕದೆ ಆ ಘಟನೆಯ ಚಿತ್ರಣ ನಮ್ಮ ಮನಸಲ್ಲಿ ಅದು ನೈಜವಾಗಿ ಇರುವ ಹಾಗೆಯೇ ತದ್ವತ್ತಾಗಿ ಮೂಡದೇ ಹೋಗಿ ನಮ್ಮಲ್ಲಿ 'ತಪ್ಪು ಕಲ್ಪನೆ' ಮೂಡುವ ಸಾಧ್ಯತೆಯಿರುತ್ತದೆ.
ಉದಾ :
- ಚಂಡಮಾರುತ ಹೇಗೆ ಉಂಟಾಗುತ್ತದೆ ?
- ಸುನಾಮಿ ಹೇಗೆ ಉಂಟಾಗುತ್ತದೆ ?.
- ಚಂದ್ರನ ಮೇಲಿನ ಮಾನವನ ಮೊದಲ ಹೆಜ್ಜೆ ...
ಇಂಥ ವಿಷಯಗಳಲ್ಲಿ ಉಂಟಾಗಬಹುದಾದ ತಪ್ಪು ಕಲ್ಪನೆಗಳನ್ನ ಹೋಗಲಾಡಿಸುವ ಉದ್ದೇಶದಿಂದ 'ಸ್ಪರ್ಧಾರ್ಥಿ e-ಪತ್ರಿಕೆ' ಒಂದು Gadget ಅನ್ನ ನಿಮ್ಮ ಬಳಕೆಗೆ ನೀಡಿದೆ. ಅದು ಏನಂದ್ರೆ YouTube ನಿಮಗೆಲ್ಲ ಪರಿಚಿತವಿರುವ ತಾಣ. ಅಲ್ಲಿ ನಾಲ್ದೆಸೆಗಳಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಚಲನಚಿತ್ರ ( Video )ಗಳನ್ನ ಸಂಗ್ರಹಿಸಿ ಇಡಲಾಗಿದೆ. ಅಲ್ಲಿ ಶೈಕ್ಷಣಿಕವಾಗಿ ಸಹಾಯವಾಗುವ ಸಾವಿರಾರು ಚಲನಚಿತ್ರಗಳೂ ಇದಾವೆ. ಅಂಥ ಚಲನ ಚಿತ್ರಗಳ ಸಂಗ್ರಹವನ್ನ ಸ್ಪರ್ಧಾರ್ಥಿ ಪತ್ರಿಕೆ ಮಾಡುತ್ತದೆ.
.
.
ನೀವು ಮೇಲ್ಕಂಡ ಚಿತ್ರವನ್ನ ಪತ್ರಿಕೆಯ ಬಲಭಾಗದಲ್ಲಿಯೂ ಕಾಣಬಹುದು. ಆ ಬಲಭಾಗದ ಚಿತ್ರದ ಮೇಲೆ ಕ್ಲಿಕ್ಕಿಸಿದರೆ ನಿಮ್ಮ ಮುಂದೆ ಶೈಕ್ಷಣಿಕವಾಗಿ ಉಪಯುಕ್ತವೆನಿಸುವ ನೂರಾರು ವಿಡಿಯೋಗಳ ಸಂಗ್ರಹಾಲಯಕ್ಕೆ ಹೋಗುತ್ತೀರಿ. ಅಲ್ಲಿ ನಿಮಗೆ ತಿಳಿಯಬೇಕೆಂದು ಕುತೂಹಲವಿರುವ ವಿಡಿಯೋವನ್ನ ನೋಡಿ, ವಿಷಯವನ್ನ ಅದು ಇರುವಂತೆಯೇ ಗ್ರಹಿಸಿರಿ..
: ಸ್ಪರ್ಧಾರ್ಥಿ
.
No comments:
Post a Comment