If Pakistan has any ideas of annexing any part of our territories by force, she should think afresh. I want to state categorically that force will be met with force and aggression against us will never be allowed to succeed. - Lal Bahadur Shastri
ದೇಶ ಕಂಡ ಮೊದಲ ಅನುಕರಣೀಯ ಪ್ರಾಮಾಣಿಕತೆ ಹೊಂದಿದ್ದ ಪ್ರಧಾನ ಮಂತ್ರಿ ಲಾಲ್ ಬಹಾದೂರ್ ಶಾಸ್ತ್ರಿ ಯವರು ಅಂದ್ರೆ ನೀವು ಯಾರೂ ತಕರಾರು ತೆಗೆಯೋದಿಲ್ಲ ಅಂತ ನನಗೆ ಗೊತ್ತು. ಅಷ್ಟೊಂದು ಸರಳತೆ - ಪ್ರಾಮಾಣಿಕತನ - ದಿಟ್ಟತನ - ದಕ್ಷತೆ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದ ನಮ್ಮ ಶಾಸ್ತ್ರಿಯವರು ಇಂದಿನ ರಾಜಕಾರಣಿಗಳಿಗೆ ಪ್ರಾತಃಸ್ಮರಣೀಯರಷ್ಟೇ ಅಲ್ಲ, ಅವರೆಲ್ಲ ಶಾಸ್ತ್ರಿಯವರನ್ನ ದ್ರೋಣಾಚಾರ್ಯರಂತೆ ಸ್ವೀಕರಿಸಿ ಇವರು ಏಕಲವ್ಯನಂತೆ ಪಾಠ ಕಲಿಯಬೇಕು. ಇಂಥ ಮಹಾನುಭಾವರ ಜೀವನದ ಬಗ್ಗೆ ಕೆಲವು ಒಂದು ಸಾಲಿನ ಮಾಹಿತಿಗಳು ನಿಮಗಾಗಿ :
- ಶಾಸ್ತ್ರಿಯವರು ಜನಿಸಿದ್ದು ಮುಘಲ್ ಸರಾಯ್ ನಲ್ಲಿ ಅಕ್ಟೋಬರ್ 2, 1904ರಲ್ಲಿ. ಆಗ ಮುಘಲ್ ಸರಾಯ್ ಆಗ್ರಾ & ಔಧ್ ಸಂಯುಕ್ತ ಸಂಸ್ಥಾನದ ಭಾಗವಾಗಿತ್ತು.
- ಅವರ ಮೊದಲ ಹೆಸರು ಲಾಲ್ ಬಹಾದೂರ್ ಶ್ರೀವಾಸ್ತವ್ ಎಂದಾಗಿತ್ತು.
- ತಂದೆ - ಶಾರದಾ ಶ್ರೀವಾಸ್ತವ ಪ್ರಸಾದ್ & ತಾಯಿ - ರಾಮದುಲಾರಿ ದೇವಿ
- ಜಾತಿ ಪದ್ಧತಿಯನ್ನು ಕಟುವಾಗಿ ವಿರೋಧಿಸುತ್ತಿದ್ದ ಲಾಲ್ ಬಹದ್ದೂರ್, ಜಾತಿಯನ್ನ ಬಿಂಬಿಸುತ್ತಿದ್ದ ಶ್ರೀವಾಸ್ತವ್ ಎಂಬ ತಮ್ಮ ಅಡ್ಡಹೆಸರನ್ನು ಬಳಸುವುದನ್ನ ನಿಲ್ಲಿಸಿದರು. ಕಾಶೀ ವಿದ್ಯಾಪೀಠದಲ್ಲಿ 1926ರಲ್ಲಿ 4ವರ್ಷದ ಅಧ್ಯಯನ ಪೂರೈಸಿ 'ಶಾಸ್ತ್ರಿ' ಎಂಬ ಪದವಿ ಗಳಿಸಿದರು.
- 1927ರಲ್ಲಿ ಲಲಿತಾ ದೇವಿಯವರನ್ನು ಮದುವೆಯಾದರು. ವರದಕ್ಷಿಣೆ ನೀಡುವ ಪದ್ಧತಿ ಜಾರಿಯಲ್ಲಿದ್ದ ಆ ದಿನಗಳಲ್ಲಿ ಅವರು ಪಡೆದ ವರದಕ್ಷಿಣೆ : ಒಂದು ಚರಕ & ಸ್ವಲ್ಪ ನೂಲು !
- ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಜೈಲಿನಲ್ಲಿದ್ದಾಗ ಅವರ ಮಗಳು ಖಾಯಿಲೆ ಬಿದ್ದಿರುವುದನ್ನ ಗಮನಿಸಿ ಬ್ರಿಟಿಷ್ ಸರ್ಕಾರ ಅವರಿಗೆ 15 ದಿನಗಳ ಮಟ್ಟಿಗೆ ಬಿಡುಗಡೆ ಮಾಡಿ ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದನ್ನ ನಿಷೇಧಿಸುವ ಷರತ್ತು ವಿಧಿಸಿತ್ತು. ದುರದೃಷ್ಟವಷಾತ್ ಅವರು ಮನೆ ತಲುಪುವ ಮೊದಲೇ ಅವರ ಮಗಳು ತೀರಿ ಹೋದರು. ಮನೆಗೆ ಹೋಗಿ ಅಂತಿಮ ವಿಧಿಗಳನ್ನು ಪೂರೈಸಿ ಮರಳಿ ಜೈಲು ಸೇರಿದರು, ಲಾಲ್ ಬಹಾದೂರ್ !
- ಸ್ಯಾತಂತ್ರ್ಯ ಹೋರಾಟದ ಭಾಗವಾಗಿ ಲಾಲ್ ಬಹಾದೂರ್ ಒಟ್ಟು 9 ವರ್ಷ ಜೈಲಿನಲ್ಲಿದ್ದರು. ಅಲ್ಲಿ ಪಶ್ಚಿಮದ ತತ್ವಜ್ಞಾನಿಗಳ, ಕ್ರಾಂತಿಕಾರರ & ಸಮಾಜ ಸುಧಾರಕರ ಬಗ್ಗೆ ಅಧ್ಯಯನ ಮಾಡಿದರು. ಇಲ್ಲಿಯೇ ಅವರು ಮೇರಿ ಕ್ಯೂರಿ ಆತ್ಮಚರಿತ್ರೆಯನ್ನ ಹಿಂದಿಗೆ ಅನುವಾದಿಸಿದರು.
- ಉತ್ತರ ಪ್ರದೇಶ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಮಹಿಳಾ ನಿರ್ವಾಹಕರನ್ನ ಮೊಟ್ಟ ಮೊದಲಿಗೆ ನೇಮಕ ಮಾಡಿದ್ದು ಲಾಲ್ ಬಹಾದೂರ್.
- 1951ರಲ್ಲಿ ನೆಹರೂ ಲಾಲ್ ಬಹಾದೂರರನ್ನ ರಾಜ್ಯ ಸಭೆಗೆ ಚುನಾಯಿಸಿದರು. ( Nominate )
- 1951 ರಿಂದ 1956ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿ ಕರ್ತವ್ಯ ನಿರ್ವಹಿಸಿದರು.
- 1957ರಲ್ಲಿ ಆಂಧ್ರಪ್ರದೇಶದ ಮಹಬೂಬನಗರದಲ್ಲಿ 112 ಜನರ ಸಾವಿಗೆ ಕಾರಣವಾದ ರೈಲು ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದರು. ಆದರೆ ನೆಹರೂ ಆ ರಾಜೀನಾಮೆಯನ್ನ ಮನ್ನಿಸಲಿಲ್ಲ. ಆದರೆ ಮೂರು ತಿಂಗಳ ನಂತರ ತಮಿಳುನಾಡಿನ ಅರಿಯಾಲೂರಿನಲ್ಲಿ 144 ಜನರ ಸಾವಿಗೆ ಕಾರಣವಾದ ಮತ್ತೊಂದು ಅಪಘಾತವಾದಾಗ ಅವರು ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನ ಈ ಸಲ ಮನ್ನಿಸಿ ಲೋಕಸಭೆಯಲ್ಲಿ ಮಾತನಾಡಿದ ನೆಹರೂ : " ಈ ರಾಜೀನಾಮೆಯನ್ನ ಸ್ವೀಕರಿಸುವ ಮೂಲಕ ಅವರು ಒಬ್ಬ ಮಾದರಿ ಮಂತ್ರಿ ಅಂತ ಬಿಂಬಿತವಾಗುತ್ತದೇ ಹೊರತು ಈ ಅವಘಡಕ್ಕೆ ಅವರು ಹೊಣೆ ಎಂಬ ಅರ್ಥವಲ್ಲ " ಎಂದರು.
- 1957ರಲ್ಲಿಯೇ ಮತ್ತೆ ಲೋಕಸಭೆಗೆ ಚುನಾವಣೆ ನಡೆದು ಹೊಸ ಮಂತ್ರಿಮಂಡಲ ಬಂದಾಗ ಮೊದಲು ಸಾರಿಗೆ & ಸಂಪರ್ಕ ನಂತರ ವಾಣಿಜ್ಯ & ಕೈಗಾರಿಕೆ ಆಮೇಲೆ ಗೃಹ ಖಾತೆಯನ್ನ ನಿಭಾಯಿಸಿದರು.
- 1964ರ ಮೇ 27ರಂದು ನೆಹರೂ ತೀರಿಕೊಂಡಾಗ ಲಾಲ್ ಬಹಾದೂರ್ ಪ್ರಧಾನಮಂತ್ರಿ ಹುದ್ದೆಗೆ ಆರಿಸಲ್ಪಟ್ಟು 9ನೇ ಜೂನ್ 1964ರಲ್ಲಿ ಪ್ರಧಾನಂತ್ರಿಯಾದರು.
- 1965ರ 22 ದಿನದ ಭಾರತ - ಪಾಕಿಸ್ತಾನ ಯುದ್ಧದ ಸಮಯದಲ್ಲಿ " ಜೈ ಜವಾನ್ - ಜೈ ಕಿಸಾನ್ " ಘೋಷಣೆಯನ್ನ ನೀಡಿದರು.
- ಗುಜರಾತ್ ನ ಕಛ್ ಪ್ರದೇಶದ ಅರ್ಧ ಭಾಗ ತನ್ನದೆಂದು ಹೇಳಿಕೊಂಡು ಪಾಕಿಸ್ತಾನ ಯುದ್ಧಕ್ಕೆ ಬಂದಿತ್ತು.
- ಯುದ್ಧ ಕೊನೆಗೊಂಡು ತಾಶ್ಕೆಂಟ್ ನಲ್ಲಿ 10 ಜನವರಿ 1966ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ತಾಶ್ಕೆಂಟ್ ಇರುವುದು ಅಂದಿನ ಯು.ಎಸ್.ಎಸ್.ಆರ್. ನಲ್ಲಿ. ಇಂದು ಉಜ್ಬೇಕಿಸ್ತಾನದಲ್ಲಿದೆ. ಆ ಒಪ್ಪಂದವನ್ನ ಆಯೋಜಿಸಿದ್ದು ರಷಿಯಾದ ರಾಜಕಾರಣಿ ಅಲೆಕ್ಸಿ ಕೋಸಿಜಿನ್. ಸಹಿ ಹಾಕಿದವರು ಲಾಲ್ ಬಹಾದೂರ್ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಹಮದ್ ಅಯೂಬ್ ಖಾನ್.
- ಮೊದಲ ' ಮರಣೋತ್ತರ ಭಾರತ ರತ್ನ ' ಪಡೆದವರು , ಲಾಲ್ ಬಹಾದೂರ್.
- ದೇಶದ ಅತ್ಯುಚ್ಛ ಅಧಿಕಾರಿ ವರ್ಗವಾದ IAS ನವರಿಗೆ ತರಬೇತಿ ನೀಡುವ ಸಂಸ್ಥೆಗೆ ಲಾಲ್ ಬಹಾದೂರರ ಹೆಸರನ್ನ ಇಡಲಾಗಿದೆ. ಅದು ಮಸ್ಸೂರಿಯಲ್ಲಿದೆ. ( Lal Bahadur Shastri National Academy of Administration )
- ವಿಜಯ ಘಾಟ್ - ಇದು ಲಾಲ್ ಬಹಾದೂರರ ಸಮಾಧಿ ಸ್ಥಳ
: ರವಿ
.
No comments:
Post a Comment