:: ಸ್ಪರ್ಧಾರ್ಥಿ ಪತ್ರಿಕೆಯ ವಿಷಯ ವಿಭಾಗಗಳು ( CONTENT INDEX ) ::
------------------
ಪರೀಕ್ಷಾ ದೃಷ್ಟಿಯುಳ್ಳ Current Affairs
ನಾವು ಸ್ಪರ್ಧಾರ್ಥಿಗಳು ಎದುರಿಸುವ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಜ್ಞಾನ ಪ್ರಥಮತರ ಎಂದು ಪರಿಗಣಿಸಲ್ಪಟ್ಟಿದೆ. ಬಹುತೇಕ ಸಂದರ್ಶನ ( ವ್ಯಕ್ತಿತ್ವ ಪರೀಕ್ಷೆ ) ಗಳಲ್ಲಿ Current Affairs(CA) Knowledge ಬಹುಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ಪರೀಕ್ಷಾ ದೃಷ್ಟಿಯಿಂದ ಹೆಕ್ಕಿ ತಂದ CA Knowledge Nugget ಗಳನ್ನ ಇಲ್ಲಿ ಕಲೆ ಹಾಕಲಾಗಿದೆ. ಇದು ಪ್ರತಿ ವಾರ ಸತ್ಯಾಪನ ( Update ) ಗೊಳ್ಳುವ ಗುಣವಿಶೇಷ ಹೊಂದಿದೆ.
: ಇಲ್ಲಿ ಕ್ಲಿಕ್ಕಿಸಿ :
------------------
ಪ್ರಚಲಿತ ವಿದ್ಯಮಾನಗಳ ಒಳನೋಟ
ಒಂದು ಸಾಲಿನ ಪ್ರಚಲಿತ ವಿದ್ಯಮಾನಗಳನ್ನ ಅರಿಯುವುದು ಎಷ್ಟು ಮುಖ್ಯವೋ ಪ್ರಚಲಿತ ವಿದ್ಯಮಾನಗಳ ವಿಸ್ತೃತ ಒಳನೋಟವೂ ಅಷ್ಟೇ ಪ್ರಮುಖವಾಗಿದೆ. ಒಂದು ಸಾಲಿನ ಮಾಹಿತಿ ಬಹುಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆಗಳನ್ನ ಬಿಡಿಸುವಲ್ಲಿ ಅನುವಾದರೆ, ಒಳನೋಟವುಳ್ಳ ಮಾಹಿತಿ ವಿಸ್ತೃತ ಉತ್ತರ ಬಯಸುವ ಪರೀಕ್ಷೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಜೊತೆಗೆ ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳಿಗೆ ವಿಸ್ತೃತ ಉತ್ತರ ಬೇಕೇ ಹೊರತು ಚುಟುಕು ಉತ್ತರ ನಮ್ಮ ಜ್ಞಾನದ ಸಂಕುಚಿತತೆಯನ್ನ ತೋರಿಸುತ್ತದೆ.
: ಇಲ್ಲಿ ಕ್ಲಿಕ್ಕಿಸಿ :
------------------
ಪದಕೋಶ
ವಿದ್ಯಾರ್ಥಿಯೊಬ್ಬ ಸ್ಪರ್ಧಾರ್ಥಿಯಾಗಿ , ಸ್ಪರ್ಧಾರ್ಥಿಯೊಬ್ಬ ಯಶಸ್ವಿ ವ್ಯಕ್ತಿಯಾಗುವ ಹಾದಿಯಲ್ಲಿ ಅವನ ಸಂವಹನ ಶಕ್ತಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅವನ ಸಂವಹನ ಶಕ್ತಿ ಸಂಗಡಿಗ ಸ್ಪರ್ಧಾರ್ಥಿಗಳನ್ನಷ್ಟೇ ಅಲ್ಲ ಈಗಾಗಲೇ ಯಶಸ್ಸು ಸಾಧಿಸಿ ಅವನ ವ್ಯಕ್ತಿತ್ವ ಪರೀಕ್ಷೆಗೆ ಕುಳಿತವರನ್ನೂ ಸಂಮೋಹನಗೊಳಿಸುವಂತಿರಬೇಕು. ಸದರಿ ಸಂಮೋಹನ ( MAGIC )ಕ್ಕೆ ಸ್ಪರ್ಧಾರ್ಥಿಯ ಪದಸಂಪತ್ತು ಅವನ Magic Wand ಆಗಿ ಕೆಲಸ ಮಾಡುತ್ತದೆ. ಪದಸಂಪತ್ತು ಶ್ರೀಮಂತವಾಗಿದ್ದರೆ ಅವನನ್ನು ತಡೆಯುವವರೇ ಇಲ್ಲ. ಜೀವನದ ಎಲ್ಲ ಅಖಾಡಗಳಲ್ಲೂ ಅವನಿಗೆ Wild Card Entry. ಅಂಥ Wild Card ಪಡೆಯಲು ಇಲ್ಲಿವೆ ಕೆಲವು ಪದಕೋಶಗಳು.
- ದೈನಂದಿನ ಆಂಗ್ಲ ಪತ್ರಿಕೆಗಳಿಂದ ಹೆಕ್ಕಿ ತಂದ ಕಠಿಣ & ನವ್ಯ ಪದಗಳ ಅರ್ಥ ಸಹಿತ ಸಂಗ್ರಹಕೋಶ : Newspaper ಪದಕೋಶ
- ದಿನವೂ ಹೊಸ ಹೊಸ ಆವಿಶ್ಕಾರಗಳಿಗೆ ಸಾಕ್ಷಿಯಾಗುತ್ತಾ ಅಚ್ಚರಿ ಮೂಡಿಸುವ ತಂತ್ರಜ್ಞಾನ ಲೋಕಕ್ಕೆ ದಿಕ್ಸೂಚಿಯಂತಿರುವ ಪದಕೋಶ : ಗಣಕ ಪದಕೋಶ
------------------
ಮುಂಬರುವ ಸ್ಪ. ಪರೀಕ್ಷೆಗಳ ಸಂಭವನೀಯ ವೇಳಾ ಪಟ್ಟಿ
ಅನೇಕ ಸ್ಪರ್ಧಾರ್ಥಿಗಳು ಪರೀಕ್ಷೆಗಳಿಗೆ ತಯಾರಿ ಮಾಡ್ತಾ ಹಾದು ಹೋದ ಕೆಲವು ಪರೀಕ್ಷೆಗಳನ್ನೇ ಮರೆತು ಆಮೇಲೆ ಅಲವತ್ತುಕೊಳ್ಳುವುದು ಸಾಮಾನ್ಯ. ಹೀಗಾಗಿ ಸ್ಪರ್ಧಾರ್ಥಿಗಳು ಮುಂಬರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಭಾವ್ಯ ವೇಳಾಪಟ್ಟಿ ತಿಳಿದುಕೊಂಡು ಕೊನೆ ದಿನಾಂಕದ ಮುಂಚೆಯೇ ಅರ್ಜಿ ಗುಜರಾಯಿಸಲು ಅನುಕೂಲ ಮಾಡಿಕೊಡುವುದು ಸದರಿ ಮಾಹಿತಿಯ ಉದ್ದೇಶ.
: ಇಲ್ಲಿ ಕ್ಲಿಕ್ಕಿಸಿ :
------------------
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕ ಪಟ್ಟಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕ ಪಟ್ಟಿ
ಒಬ್ಬ ವಿದ್ಯಾರ್ಥಿ ಸ್ಪರ್ಧಾರ್ಥಿಯಾಗುವ ಹಂತದಲ್ಲಿ ತಾನು ಸಿದ್ಧತೆ ನಡೆಸುತ್ತಿರುವ ಪರೀಕ್ಷೆಗಳಿಗಾಗಿ ಓದಬೇಕಿರುವ (Refer ಮಾಡಬೇಕಿರುವ ) ಪುಸ್ತಕಗಳ ಪಟ್ಟಿ ಅವಶ್ಯ ಅನಿಸುತ್ತದೆ. ಕೆಲವು ವಿದ್ಯಾರ್ಥಿಗಳು ಹೀಗೆ ಪುಸ್ತಕ ಪಟ್ಟಿಯ ಸಿದ್ಧತೆ ಮಾಡಿಕೊಂಡೇ ಸಿದ್ಧತೆಗೆ ಧುಮುಕುತ್ತಾರೆ ಎಂಬುದು ಎಷ್ಟು ಸತ್ಯವೋ ಎಲ್ಲ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥಗಳ ಮಾಹಿತಿ ಇರುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ. ಕಳಪೆ ಸಾಹಿತ್ಯ ಓದಿ ಸಮಯ ವ್ಯರ್ಥ ಮಾಡಿಕೊಂಡ ಉದಾಹರಣೆಗಳೂ ಹೇರಳವಾಗಿವೆ. ಇಷ್ಟೇ ಅಲ್ಲ, ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಹೊಸತಾಗಿ ಬಂದಿರುವ ಪುಸ್ತಕದ ಮಾಹಿತಿ ಸ್ಪರ್ಧಾರ್ಥಿಗೆ ಇಲ್ಲದೇ ಇರಬಹುದು. ಈ ಅಲ್ಲ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ಹಾಗೆ ವಿಷಯವಾರು ಪುಸ್ತಕ ಸಲಹೆ ನೀಡಲಾಗಿದೆ.
: ಇಲ್ಲಿ ಕ್ಲಿಕ್ಕಿಸಿ :
------------------
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಿರು ಪರಿಚಯ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಿರು ಪರಿಚಯ
ಸಾಮಾನ್ಯವಾಗಿ ಸ್ಪರ್ಧಾರ್ಥಿಗಳನ್ನ ಎರಡು ರೀತಿಯಾಗಿ ವಿಂಗಡಿಸಬಹುದು. ಒಂದು : ನಿರ್ದಿಷ್ಟ ಪರೀಕ್ಷೆಯೊಂದರ ಗುರಿ ಇಟ್ಟುಕೊಂಡು ಅದಕ್ಕೆಂದೇ ಓದುವುದು. ಎರಡು : " ಸುಮ್ಮನೆ ಓದೋಣ. ಯಾವುದು Click ಆಗುತ್ತೋ ಆಗ್ಲಿ ! " ಅಂತ. ಹೀಗಿರುವಾಗ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪಕ್ಷಿನೋಟ ಉಪಯುಕ್ತ ಅನಿಸುತ್ತದೆ. ಮೊದಲ ಗುಂಪಿನ ಸ್ಪರ್ಧಾರ್ಥಿಗೆ ತಾನೀಗ ತಯಾರಾಗುತ್ತಿರುವ ಪರೀಕ್ಷೆಯದೇ ಪಠ್ಯ ಹಾಗೂ ಸಮಾನಾಂತರ ಪರೀಕ್ಷಾ ಪದ್ಧತಿ ಹೊಂದಿರುವ ಇನ್ನಿತರ ಪರೀಕ್ಷೆಗಳ ಪರಿಚಯವಾಗಿ ಒಂದೇ ಕಲ್ಲಿನಲ್ಲಿ ಎರಡು / ಮೂರು (?) ಹಕ್ಕಿ ಹೊಡೆದಂತಾಗುತ್ತಲ್ಲವೇ ? ಎರಡನೇ ಗುಂಪಿನ ಸ್ಪರ್ಧಾರ್ಥಿಗೆ ನಿಖರವಾಗಿ ವಿವಿಧ ಪರೀಕ್ಷೆಗಳ ಪರೀಕ್ಷಾ ಪದ್ಧತಿ ಹಾಗೂ ಪಠ್ಯದ ಮಾಹಿತಿ ದೊರೆತು ಸಿದ್ಧತೆಯ ತೀಕ್ಷಣತೆಯನ್ನ ವೃದ್ಧಿಸಿಕೊಳ್ಳಲು ಸಹಾಯಕವಾಗುತ್ತದೆ. ಇಂಥ ಅನುಕೂಲಕ್ಕೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಿರು ಪರಿಚಯ ಮಾಡಿಕೊಡಲಾಗಿದೆ.
: ಇಲ್ಲಿ ಕ್ಲಿಕ್ಕಿಸಿ :
------------------
ಪರೀಕ್ಷಾ ವೈವಿಧ್ಯಗಳು
ಪರೀಕ್ಷಾ ವೈವಿಧ್ಯಗಳು
ವಿವಿಧ ಪರೀಕ್ಷೆಗಳು, ಪುಸ್ತಕ ಸಲಹೆ ಎಲ್ಲಾ ಗೊತ್ತು ಮಾಡಿಕೊಂಡ ಹಾಗಾಯ್ತು. ಈಗ ಸ್ಪರ್ಧಾತ್ಮಕ ಜಗತ್ತು ದಿನೇ ದಿನೇ ಹೊಸ ಹೊಸ ಆವಿಷ್ಕಾರಗಳನ್ನ ಕಾಣುತ್ತಿದೆ. ಸದರಿ ಮಾಹಿತಿ ಸರಣಿಯ ಉದ್ದೇಶ :
" ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಗಳನ್ನ ಪಕ್ಕಕ್ಕಿಟ್ಟು ಹೊಸ ಹೊಸ ಪರೀಕ್ಷಾ ಪದ್ಧತಿಗಳನ್ನ ಅಕ್ಷರಶಃ ಸಂಶೋಧಿಸಿ ನಮ್ಮಂತಹ ಸ್ಪರ್ಧಾರ್ಥಿಗಳ ಎದುರಿಗೆ ದಿಢೀರನೆ ಇಡ್ತಾ ಇದಾರೆ !! ಏನು ಮಾಡುವುದು ?!! "
ಅಂತ ಅಲವತ್ತುಕೊಳ್ಳುವುದನ್ನ ತಪ್ಪಿಸೋದು. ಹೊಸದಾಗಿ ಸೃಷ್ಟಿಸಲಾಗುವ ಪರೀಕ್ಷಾ ಪದ್ಧತಿಗಳ ಜೊತೆಗೆ ಈಗಾಗಲೇ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿಗಳ ಬಗೆಗೂ ವಿವರಿಸುವ ಪ್ರಯತ್ನವನ್ನ ಇಲ್ಲಿ ಮಾಡಲಾಗಿದೆ.
: ಇಲ್ಲಿ ಕ್ಲಿಕ್ಕಿಸಿ :
------------------
'ಉತ್ತರಚೋರ'ನ ಉತ್ತರ ಪತ್ರಿಕೆಗಳು
ಪರೀಕ್ಷೆಗಳಲ್ಲಿ ನಕಲು ಮಾಡುವುದು ತಪ್ಪು. ಆದರೆ ಅನೆಕ ವೇಳೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ 'ಪರಿಣಿತ'ರೇ ನಕಲು ಮಾಡ್ತಾರೆ ಅಂದ್ರೆ ನೀವು ನಂಬಬೇಕು. ಎಲ್ಲರೂ ಮಾಡೋದಿಲ್ಲ , ಯಾವಾಗಲೂ ಮಾಡೋದಿಲ್ಲ. ಆದರೆ ಕೆಲವೊಮ್ಮೆ ಯಾವುದೋ ರಾಜ್ಯದ ಪ್ರ.ಪತ್ರಿಕೆಯಲ್ಲಿ ಬಂದ ಪ್ರಶ್ನೆ ನಮ್ಮ ರಾಜ್ಯದ ಪ್ರ.ಪತ್ರಿಕೆಯಲ್ಲಿ ಮರುಕಳಿಸುವ ಸಾಧ್ಯತೆಯನ್ನ ಅಲ್ಲಗಳೆಯಲಾಗದು. ಬ್ಯಾಂಕ್ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ ಎಫ್.ಡಿ.ಎ. ಪರೀಕ್ಷೆಯಲ್ಲಿ - RRB ಯಲ್ಲಿ ಕೇಳಿದ ಪ್ರಶ್ನೆ SSC ಯಲ್ಲಿ. ಹೀಗೇನಾದ್ರೂ ಆಗೋ ಸಾಧ್ಯತೆ 5% ಮಾತ್ರ ಇದ್ದರೂ ಆ ಸಾಧ್ಯತೆಯೂ ನಮ್ಮದಾಗಲಿ !! ಯಾಕೆ ಅವಕಾಶ ಬಿಟ್ಟುಕೊಡೋಣ ? ಅಂತ ಮನಗಂಡು, ಇದನ್ನ ಸಾಕಾರಗೊಳಿಸಲು ಸ್ಪರ್ಧಾರ್ಥಿ ಪತ್ರಿಕೆ ಒಂದು ದಾರಿ ಹುಡುಕಿದೆ. ಬಿಡುವಿದ್ದಾಗ ಬಿಡಿಸುವ ಯಾವುದೇ ಪ್ರಶ್ನೆ ಪತ್ರಿಕೆ ಇರಬಹುದು. ಅಲ್ಲಿನ ಪ್ರಶ್ನೆಯ ಒಗಟನ್ನ ಬಿಡಿಸಿದ ನಂತರ ಉಳಿಯುವುದು ಉತ್ತರವೆಂಬ ಒಂದು ಸಾಲಿನ ಮಾಹಿತಿ. ಅಂಥ ಒಂದು ಸಾಲಿನ ಮಾಹಿತಿಗಳನ್ನ ಕಲೆಹಾಕಿ , ಸದರಿ ಪ್ರಶ್ನೆ ಕಂಡುಬಂದ ಪರೀಕ್ಷೆಯ ಶೀರ್ಷಿಕೆಯಡಿಯಲ್ಲಿಯೇ ಮಾಹಿತಿಗಳನ್ನ ಬರೆಯಲಾಗುವುದು. ಹಾಗೆ ಬಿಡಿಸಿದ ಪ್ರಶ್ನೆ ಇನ್ಯಾವ ಪರೀಕ್ಷೆಯಲ್ಲೂ ಮರುಕಳಿಸದೇ ಇದ್ದರೂ ಕೂಡ ನಮ್ಮ ಜ್ಞಾನ ವೃದ್ಧಿಯನ್ನಂತೂ ಅಲ್ಲಗಳೆಯಲಾಗದು ತಾನೇ ?
: ಇಲ್ಲಿ ಕ್ಲಿಕ್ಕಿಸಿ :
------------------
ಎಲ್ಲ ತರಹದ ಪರೀಕ್ಷೆಗಳಿಗೆ ಅತ್ಯುಪಯುಕ್ತ e-ತಾಣಗಳು
------------------
ಮೋಜು ಆದರೂ ಜ್ಞಾನ
ಎಲ್ಲ ತರಹದ ಪರೀಕ್ಷೆಗಳಿಗೆ ಅತ್ಯುಪಯುಕ್ತ e-ತಾಣಗಳು
ಸ್ಪರ್ಧಾರ್ಥಿ e - ಪತ್ರಿಕೆಯ ತೆರನಾಗಿಯೇ ಇನ್ನಿತರರೂ ಜ್ಞಾನ ಹಂಚುವ ಉತ್ಸಾಹದಲ್ಲಿದ್ದಾರೆ. ಹಂಚಿಯೂ ಇದ್ದಾರೆ. ಅಂಥ ಸಮಾನ ಮನಸ್ಕ ಅಂತರಜಾಲ ತಾಣಗಳ ಪಟ್ಟಿಯೇ ಈ ಮಾಹಿತಿ ಕಣಜ. ಇಲ್ಲಿ ಉಚಿತ ಪುಸ್ತಕ ನೀಡುವ ತಾಣಗಳಿದಾವೆ / ದೇಶದ ವಿವಿಧ ಭಾಗಗಳಲ್ಲಿ ನಡೆದ ವಿವಿಧ ಪರೀಕ್ಷೆಗಳ ಬಿಡಿಸಿದ ಪ್ರಶ್ನೆ ಪತ್ರಿಕೆ ನೀಡುವ ತಾಣಗಳಿದಾವೆ / ಕ್ರೀಡೆ, ಸಿನೆಮಾ ... ಹೀಗೆ ಪರೀಕ್ಷಾ ದೃಷ್ಟಿಯಿಂದ ಉಪಯುಕ್ತವೆನಿಸುವ ಸಾಕಷ್ಟು ತಾಣಗಳ ಸಂಗ್ರಹವೇ ಈ ಮಾಹಿತಿ ಪುಟ. ಜೊತೆಗೆ ಈ ಪುಟ ನಿಂತ ನೀರಲ್ಲ. ಸ್ಪರ್ಧಾರ್ಥಿ ಪತ್ರಿಕೆಯ ಸಮಸ್ತ ಪುಟಗಳ ಹಾಗೆ ಕಾಲ ಕಾಲಕ್ಕೆ ಹೊಸ ನೀರು ಹರಿಯುವ ಜೀವ ನದಿ.
: ಇಲ್ಲಿ ಕ್ಲಿಕ್ಕಿಸಿ :
------------------
ಮೋಜು ಆದರೂ ಜ್ಞಾನ
ಪಾಠದ ಜೊತೆಗೆ ಆಟವೂ ಬೇಕು ಅಂತಾರೆ. " Change of Work Is Rest " ಅಂತಲೂ ಹೇಳ್ತಾರೆ. ಇವೆರಡನ್ನೂ ತನ್ನಲ್ಲಿ ಮೇಳೈಸಿಕೊಂಡಿರುವ ಪುಟವೇ ಮೋಜು ಆದರೂ ಜ್ಞಾನ. ಇಲ್ಲಿ ರಂಜನೆಯ ಜೊತೆ ಜೊತೆಗೆ ಜ್ಞಾನ ವೃದ್ಧಿಸುವ ಮಾಹಿತಿಯೂ ಲಭ್ಯ.
: ಇಲ್ಲಿ ಕ್ಲಿಕ್ಕಿಸಿ :
------------------
ಘಟನೆಗಳ ಯಥಾವತ್ ಗ್ರಹಿಕೆಗೆ YouTube
ದೈನಂದಿನ ಜೀವನದ ಕೆಲವು ಘಟನೆಗಳನ್ನ ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಇನ್ನು ಕೆಲವು ಘಟನೆಗಳನ್ನ ಶಬ್ದಗಳಲ್ಲಿ ವಿವರಿಸಿದರೂ ಆ ವಿವರಣೆ ನಮ್ಮ ವಿಚಾರಶಕ್ತಿಗೆ ನಿಲುಕದೆ ಆ ಘಟನೆಯ ಚಿತ್ರಣ ನಮ್ಮ ಮನಸಲ್ಲಿ ಅದು ನೈಜವಾಗಿ ಇರುವ ಹಾಗೆಯೇ ತದ್ವತ್ತಾಗಿ ಮೂಡದೇ ಹೋಗಿ ನಮ್ಮಲ್ಲಿ 'ತಪ್ಪು ಕಲ್ಪನೆ' ಮೂಡುವ ಸಾಧ್ಯತೆಯಿರುತ್ತದೆ.
ಉದಾ :
- ಚಂಡಮಾರುತ ಹೇಗೆ ಉಂಟಾಗುತ್ತದೆ ?
- ಸುನಾಮಿ ಹೇಗೆ ಉಂಟಾಗುತ್ತದೆ ?.
- ಚಂದ್ರನ ಮೇಲಿನ ಮಾನವನ ಮೊದಲ ಹೆಜ್ಜೆ ...
ಇಂಥ ವಿಷಯಗಳಲ್ಲಿ ಉಂಟಾಗಬಹುದಾದ ತಪ್ಪು ಕಲ್ಪನೆಗಳನ್ನ ಹೋಗಲಾಡಿಸುವ ಉದ್ದೇಶದಿಂದ 'ಸ್ಪರ್ಧಾರ್ಥಿ e-ಪತ್ರಿಕೆ' ಒಂದು Gadget ಅನ್ನ ನಿಮ್ಮ ಬಳಕೆಗೆ ನೀಡಿದೆ. ಅದು ಏನಂದ್ರೆ YouTube ನಿಮಗೆಲ್ಲ ಪರಿಚಿತವಿರುವ ತಾಣ. ಅಲ್ಲಿ ನಾಲ್ದೆಸೆಗಳಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಚಲನಚಿತ್ರ ( Video )ಗಳನ್ನ ಸಂಗ್ರಹಿಸಿ ಇಡಲಾಗಿದೆ. ಅಲ್ಲಿ ಶೈಕ್ಷಣಿಕವಾಗಿ ಸಹಾಯವಾಗುವ ಸಾವಿರಾರು ಚಲನಚಿತ್ರಗಳೂ ಇದಾವೆ. ಅಂಥ ಚಲನ ಚಿತ್ರಗಳ ಸಂಗ್ರಹವನ್ನ ಸ್ಪರ್ಧಾರ್ಥಿ ಪತ್ರಿಕೆ ಮಾಡುತ್ತದೆ. ನಿಮ್ಮ ಮುಂದೆ ಶೈಕ್ಷಣಿಕವಾಗಿ ಉಪಯುಕ್ತವೆನಿಸುವ ನೂರಾರು ವಿಡಿಯೋಗಳ ಸಂಗ್ರಹಾಲಯ ತೆರೆಯುತ್ತದೆ. ಅಲ್ಲಿ ನಿಮಗೆ ತಿಳಿಯಬೇಕೆಂದು ಕುತೂಹಲವಿರುವ ವಿಡಿಯೋವನ್ನ ನೋಡಿ, ವಿಷಯವನ್ನ ಅದು ಇರುವಂತೆಯೇ ಗ್ರಹಿಸಿರಿ..
: ಇಲ್ಲಿ ಕ್ಲಿಕ್ಕಿಸಿ :
------------------
ನೀವೂ ಭಾಗವಹಿಸಿ
ಈ Idea ಹೊಸತಲ್ಲ...ಆದ್ರೆ ಈ ಥರ ತಮಗೆ ತಿಳಿದಿರೋ ವಿಷಯವನ್ನ ನಿಸ್ವಾರ್ಥತೆಯಿಂದ ಸ್ನೇಹಿತರೊಂದಿಗೆ ಹಂಚಿಕೊಳ್ಳೋ ಗುಣವನ್ನ ಬೆಳೆಸಿಕೊಳ್ಳೋದು, ಬೆಳೆಸೋದು ಮತ್ತು ಆ Shared ಜ್ಞಾನವನ್ನ ಬಳಸಿ ಎಲ್ಲರೊಟ್ಟಿಗೆ ಬೆಳೆಯೋದು ಹೊಸದು. " ಪತ್ರಿಕೆಯ ಜ್ಞಾನಾಗಾರಕ್ಕೆ ನಿಮ್ಮ ಸರಕು ಸಾಗಿಸುವ ಬಗೆ ಹೇಗೆ ? " ಎಂದು ತಿಳಿಸಲೊಂದು ಪುಟ.
: ಇಲ್ಲಿ ಕ್ಲಿಕ್ಕಿಸಿ :
------------------
ಭರತವರ್ಷಕ್ಕೆ ನುಡಿನಮನ
ಹಿಂದೂ ಮಹಾಸಾಗರವನ್ನ ತನ್ನ ಪದತಲದಲ್ಲಿ ಹರಡಿಕೊಂಡು ಹಿಂದುಕುಶ್ ಒಳಗೊಂಡ ಹಿಮಾಲಯದ ಛಾವಣಿಯ ನಡುವೆ ತನ್ನ ವಿಶಾಲ ಭೂಭಾಗವನ್ನ ಹರವಿಕೊಂಡು ನಿಂತಿದ್ದ ಆ ಅಖಂಡ ಭರತಖಂಡ ಕ್ಕೆ ಈ ಪುಟ ಸಮರ್ಪಿತ.
: ಇಲ್ಲಿ ಕ್ಲಿಕ್ಕಿಸಿ :
------------------
ನಿಮಗ್ಗೊತ್ತಾ ? ಈ ಭೂಮಿ ನಮಗೂ ಸೇರಿದೆ...
ಸೃಷ್ಟಿಯ ನಿಗೂಢತೆಗಳ Sample ಎಂಬಂತೆ ಮನುಷ್ಯ ಪ್ರಾಣಿಗೆ ಮಾತ್ರ ಬುದ್ಧಿ ಎಂಬ ಅನವಶ್ಯಕ Advantage ನೀಡಿದ್ದೇ ತಪ್ಪಾಯ್ತು ಎಂಬಂತೆ ಮನುಷ್ಯರಾದ ನಾವಿಂದು Behave ಮಾಡ್ತಿದೀವಿ..ಅಲ್ವಾ ? ಅವರೂ ನಮ್ಮಂತೆ ಪ್ರಾಣಿಗಳು. ಈ ಭೂಮಿ ನಮ್ಮಷ್ಟೇ ಅವರಿಗೂ ಸೇರಿದ್ದು. ನಮ್ಮ ಪಾಲು ನಮಗಿರಲಿ..ಅವರದ್ದಾದ್ರು ಅವರಿಗಿರಲಿ Pleaaaase. ಇಲ್ಲವಾದಲ್ಲಿ ಮೇಲಿನ ಚಿತ್ರ ನಿಜರೂಪ ತಳೆಯುವ ದಿನ ದೂರವಿಲ್ಲ.
: ಇಲ್ಲಿ ಕ್ಲಿಕ್ಕಿಸಿ :
------------------
ಮಾರ್ದನಿ : ನಿಮ್ಮ ಪ್ರತಿಕ್ರಿಯೆಗಳಿಗೊಂದು ಪುಟ
ಪತ್ರಿಕೆಯೊಂದಕ್ಕೆ ಓದುಗರೇ ಪ್ರಾಣವಾಯು. ಅವರ ಬೇಕು ಬೇಡಗಳು : ಟೀಕೆ ಟಿಪ್ಪಣಿಗಳು ಪತ್ರಿಕೆಯೊಂದಕ್ಕೆ ಮುಖಪುಟವೆಷ್ಟು ಪ್ರಮುಖವೋ ಅಷ್ಟೇ ಪ್ರಮುಖ. ನಮ್ಮ ಧ್ವನಿಗೆ ನಿಮ್ಮ ಧ್ವನಿಯ ಸೇರಿದಂತೆ ...
: ಇಲ್ಲಿ ಕ್ಲಿಕ್ಕಿಸಿ :
------------------
Timepass ಕಡ್ಲೆಕಾಯಿ
ಕನ್ನಡದ ಪ್ರಮುಖ ಕಾದಂಬರಿಕಾರರೊಮ್ಮೆ ಸಾಂದರ್ಭಿಕವಾಗಿ ಹೇಳಿದ್ರು : " ಜೀವನದಲ್ಲಿ ನಾವು ಎಲ್ಲವನ್ನೂ ವಿಮರ್ಶಾತ್ಮಕ ದೃಷ್ಟಿಯಿಂದ ನೋಡ್ತಾ ಹೋದ್ರೆ, ಜೀವನವನ್ನ ಅನುಭವಿಸಲಿಕ್ಕಾಗೋದಿಲ್ಲ.... " ಅಂತೆಯೇ ನಾವಿಲ್ಲಿ ಎಲ್ಲವನ್ನ ಜ್ಞಾನಾರ್ಜನೆಯ ದೃಷ್ಟಿಯಿಂದ ನೋಡಿದರೆ ಕಲಿಕೆ ಬೇಸರವಾದೀತು. ಬೇಸರ ದೂರ ಮಾಡಲು ಈ ಮನರಂಜನಾ ಪುಟ. ಇಲ್ಲಿರುವುದು Sheer FUN. ಅನುಭವಿಸಿ.
: ಇಲ್ಲಿ ಕ್ಲಿಕ್ಕಿಸಿ :
------------------
ಹಾಗೇ ಸುಮ್ಮನೆ... ಮಾತು-ಕತೆ
ಈ ಪತ್ರಿಕೆಯನ್ನ ಶುರು ಮಾಡಿದ ಹುಡುಗನಿಗೆ ಆವಾಗವಾಗ ಏನೇನೋ ಗೀಚುವ ಹವ್ಯಾಸ. ಆ ಹವ್ಯಾಸಕ್ಕೊಂದು ಪುಟ.
: ಇಲ್ಲಿ ಕ್ಲಿಕ್ಕಿಸಿ :
------------------
ನನಗೂ ಬ್ಲಾಗ್ ಶುರು ಮಾಡ್ಬೇಕು ಅನ್ನಿಸ್ತಿದೆ...!?
ಇಷ್ಟೆಲ್ಲಾ ಓದಿದ ಮೇಲೆ ಪತ್ರಿಕೆಯ ಓದುಗರಿಗೆ " ನಾನೂ ಒಂದು ಬ್ಲಾಗ್ ಶುರು ಮಾಡಬೇಕು" ಅಂತನ್ನಿಸಿದರೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲ ತೋರಿಸುವ ಸೌಜನ್ಯವೇ ಈ ಪುಟದ ಆಶಯ. ಬ್ಲಾಗ್ ಜಗತ್ತಿನಲ್ಲಿ ನನಗೆ ತಿಳಿದಿರುವ ಸಮಸ್ತವನ್ನೂ ಈ ಪುಟದ ಮೂಲಕ ನಿಮಗೆ ಹೇಳಿಕೊಡುವೆ.
: ಇಲ್ಲಿ ಕ್ಲಿಕ್ಕಿಸಿ :
------------------
e-ಪತ್ರಿಕೆ ಬಳಸುವ ಮುನ್ನ, ಈ ಮುನ್ನುಡಿಯನ್ನೊಮ್ಮೆ ಓದಿ
ಪತ್ರಿಕೆ ನಿಮಗೆ ಖಂಡಿತವಾಗಲೂ ಇಷ್ಟವಾಗಿದ್ದಲ್ಲಿ ಪತ್ರಿಕೆಯ ಹುಟ್ಟು - ಆಶಯ ದ ಬಗ್ಗೆ ನೀವುಗಳು ತಿಳಿಯುವುದು ಸಮಂಜಸ ಅನ್ನಿಸಿ ಅದಕ್ಕೊಂದು ಪುಟವನ್ನ ಮೀಸಲಿರಿಸಿದೆ.
: ಇಲ್ಲಿ ಕ್ಲಿಕ್ಕಿಸಿ :
------------------
ಪತ್ರಿಕೆಯ ಲೇಖಕ ಬಳಗ
ಇಷ್ಟೆಲ್ಲಾ ಮಾಹಿತಿ ಕಲೆ ಹಾಕುತ್ತಾ ನಮ್ಮ ಪತ್ರಿಕೆಯ ಲೇಖಕ ಬಳಗವೂ ಪತ್ರಿಕೆ ಹರಡುತ್ತಿರುವ ವಿವಿಧ ವಿಷಯಗಳ ಭಾಗವೇ ಆಗಿ ಹೋಗಿದ್ದಾರಲ್ಲವೇ ? ಅಂತೆಯೇ ಅವರ ಪರಿಚಯವೂ ವಿವಿಧ ವಿಷಯ ವಿಭಾಗಗಳಡಿಯಲ್ಲೇ ಆಗಿ ಬಿಡಲಿ ಅಂತ !!!!
: ಇಲ್ಲಿ ಕ್ಲಿಕ್ಕಿಸಿ :
------------------
ಇಷ್ಟೆಲ್ಲಾ ಸಾಹಸ ಮಾಡಿರುವ ಹುಚ್ಚು ಹುಡುಗ ಯಾರು ಅಂತ ಅರಿಯುವ ಮನಸು ನಿಮಗಾಗಿದ್ರೆ.. ಕೊನೆಯದಾಗಿ ನನ್ನ ಬಗ್ಗೆ ಸ್ವಲ್ಪ.
: ಇಲ್ಲಿ ಕ್ಲಿಕ್ಕಿಸಿ :
------------------