ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

ಮುಕ್ತ & ಸ್ವಾರ್ಥ-ಪತ್ರಿಕೆಯ ಧ್ಯೇಯ

ಸ್ಪರ್ಧಾರ್ಥಿ e-ಪತ್ರಿಕೆ : ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ



ಮುಕ್ತ

ಸ್ಪರ್ಧಾರ್ಥಿ ಪತ್ರಿಕೆಯನ್ನ ರೇವಪ್ಪ ಎಂಬ ಕನ್ನಡದ ಹುಡುಗ ಶುರು ಮಾಡಿದ್ದರೂ ಕೂಡ, ಪತ್ರಿಕೆಗೆ ಪ್ರೋತ್ಸಾಹ ನೀಡುವ ಮತ್ತು  ತಮ್ಮ ಪಾಲಿನ ಜ್ಞಾನವನ್ನ ಹಂಚಿಕೊಳ್ಳುವ ಸಹೃದಯಿ ಕನ್ನಡಿಗರು ಪತ್ರಿಕೆಯನ್ನ ದಿನವೂ ಬೆಳೆಸುತ್ತಿದ್ದಾರೆ. ಇಲ್ಲಿ ಜ್ಞಾನಹಂಚುವ ಪ್ರಾಮಾಣಿಕ ಕಳಕಳಿಯುಳ್ಳ : ಕನ್ನಡ ಬಲ್ಲ ಪ್ರತಿಯೊಬ್ಬ ವ್ಯಕ್ತಿಯೂ ಭಾಗವಹಿಸಬಹುದು. ಈ ಪತ್ರಿಕೆ ಯಾರೊಬ್ಬರ ಒಡೆತನಕ್ಕೆ ಸೇರಿಲ್ಲ. ಬದಲಿಗೆ ಇದು ಕನ್ನಡವನ್ನ ಪ್ರೀತಿಸುವ, ಕನ್ನಡಕ್ಕೆ ಕೃತಜ್ಞತೆ ತೋರಬಯಸುವ ಪ್ರತಿ ಕನ್ನಡಿಗನ ಸ್ವಂತ ಪತ್ರಿಕೆ. 

ಸ್ವಾರ್ಥ

ಸ್ಪರ್ಧಾರ್ಥಿ ಪತ್ರಿಕೆಯಲ್ಲಿ ದಿನವೂ ಹೊಸ ಹೊಸ ಮಾಹಿತಿ ಪ್ರಕಟಗೊಳ್ಳುತ್ತವಲ್ಲಾ .. ಅವುಗಳನ್ನ ಯಾರು ಬರೀತಾರೆ ? ಅವರು ಪತ್ರಿಕೆಗೆ ಅಂತನೇ ನೇಮಕಗೊಂಡಿರುವವರಾ ? ಅಥವಾ ಪತ್ರಿಕೆಯನ್ನ ಬಹುವಾಗಿ ನೆಚ್ಚಿಕೊಂಡು ಅದರ ಶ್ರೇಯೋಭಿವೃದ್ಧಿಗೆ ಸದಾ ಮಿಡಿಯುತ್ತಿರುವ ವ್ಯಕ್ತಿಯ ಪರಿಶ್ರಮವಾ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ : ಸ್ವಾರ್ಥ !!

ಹೌದು. ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು ಅನ್ನುವ ಹಾಗೆ ಸ್ವಾರ್ಥಮಯ ಜಗತ್ತನ್ನ ಸ್ವಾರ್ಥವನ್ನ ಬಳಸಿಕೊಂಡೇ ನಿಸ್ವಾರ್ಥಿಯಾಗಿಸುವ ಪ್ರಯತ್ನವಿದು.

ಪ್ರತಿ ಸ್ಪರ್ಧಾರ್ಥಿ ತಾನು ಬಯಸುವ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವ ನಿಟ್ಟಿನಲ್ಲಿ ಅಧ್ಯಯನ ಮಾಡುತ್ತಾ, ಟಿಪ್ಪಣಿಗಳನ್ನ ಮಾಡಿಟ್ಟುಕೊಳ್ಳುತ್ತಾ ತಯಾರಿ - ತಾಲೀಮಿನಲ್ಲಿ ತೊಡಗಿರುತ್ತಾನೆ. ಹೀಗೆ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ಸ್ಪರ್ಧಾರ್ಥಿ ತಾನು ಓದಿಕೊಂಡಿದ್ದನ್ನ ಮನನ ಮಾಡಿಕೊಂಡು ವಿಷಯವನ್ನ ಗಟ್ಟಿಗೊಳಿಸಿಕೊಳ್ಳುವ ಪ್ರಕ್ರಿಯೆಯ ಹಂತದಲ್ಲಿ ಪತ್ರಿಕೆ ಅವರಿಗೆ ಸಹಾಯಹಸ್ತವಾಗುವುದರ ಜೊತೆಗೆ ತನ್ಮೂಲಕ ಅವರೂ ಇತರರಿಗೆ ಸಹಾಯ ಮಾಡುವ ದಾರಿ ತೋರಿಸಿದೆ. ವಿಷಯವೊಂದರ ಮನನಕ್ಕೆ ಜನಪ್ರಿಯ ರೂಢಿಯಾಗಿರುವ 'ಬರೆದು ತೆಗೆಯುವ' ಹವ್ಯಾಸದ ಭಾಗವಾಗಿ ನಿಮ್ಮ ಮೇಜಿನ ಮೇಲಿರುವ ಹಾಳೆಯ ಬದಲಿಗೆ ನಿಮ್ಮ mail IDಯ e-ಹಾಳೆಯ ಮೇಲೆ ಬರೆದು ತೆಗೆಯಿರಿ. ಹಾಗೆ ನೀವು ಬರೆದು ತೆಗೆಯೋದು ನಿಮ್ಮ ಸ್ವಾರ್ಥಕ್ಕಾಗಿ. ನಿಮ್ಮ ಮನನಕ್ಕಾಗಿ. ಆದರೆ ನೆನಪಿರಲಿ : ನಿಮಗೆ ಇಲ್ಲಿಯವರೆಗೆ ತಿಳಿದಿರದ ಹೊಸ ವಿಷಯವೊಂದನ್ನ ಅಭ್ಯಸಿಸಿ ಅರಿತು, ಹತ್ತಾರು ವಾಕ್ಯದಲ್ಲಿ ಟಿಪ್ಪಣಿ ಮಾಡಿ ಕಳುಹಿಸಬೇಕು. ಯಾಕಂದ್ರೆ ಯಾರಿಗೋ ಸಹಾಯ ಮಾಡುವ ನಿಟ್ಟಿನಲ್ಲಿ ನಿಮ್ಮ ಸಮಯವೇಕೆ ವ್ಯರ್ಥ ಮಾಡಿಕೊಳ್ಳುತ್ತೀರಿ ?

ಬರೆದಾದ ನಂತರ ಸ್ಪರ್ಧಾರ್ಥಿ(spardharthi@gmail.com)ಗೆ  email ಕಳಿಸಿದರೆ ಮುಗಿಯಿತು. ಸ್ವಾರ್ಥವೂ ಈಡೇರಿತು - ನಿಸ್ವಾರ್ಥದ ಕೈಂಕರ್ಯವೂ ಪೂರೈಸಿತು !!





: ಸ್ಪರ್ಧಾರ್ಥಿ



.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ