ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Dec 5, 2010

PDO Study Material : ಪಿಡಿಓ ಪರೀಕ್ಷಾ ಮಾರ್ಗದರ್ಶಿ:: ಪಂಚಾಯತ್ ಅಭಿವೃದ್ಧಿ ಅಧಿಕಾರಿ ::1. ಮೊದಲನೆಯದಾಗಿ PDO ಹುದ್ದೆಯ ಸ್ವರೂಪದ ಬಗ್ಗೆ ತಿಳಿದುಕೊಳ್ಳೋಣ. ಏನು ಈ ಹುದ್ದೆ ? ಸಂಬಳವೇನು ? ಅಂದ್ರೆ C&R Rules(ವೃಂದ & ನೇಮಕಾತಿ ನಿಯಮಗಳು) : ಇಲ್ಲಿ ಕ್ಲಿಕ್ಕಿಸಿ :


2. ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯದ ಪ್ರಕಾರ ಕೆಳಕಂಡ ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು.
  • ಸಾಮಾನ್ಯ ಜ್ಞಾನ & ಪ್ರಚಲಿತ ವಿದ್ಯಮಾನ
  • ಸಾಮಾನ್ಯ ಕನ್ನಡ
  • ಸಾಮಾನ್ಯ ಇಂಗ್ಲೀಷ್
  • ಕಂಪ್ಯೂಟರ್ ಜ್ಞಾನ
  • ಪಂಚಾಯತ್ ರಾಜ್ ಅಧಿನಿಯಮ 1993

ಸಾಮಾನ್ಯ ಜ್ಞಾನ : ಈ ವಿಷಯ ಹೆಸರಿಗೆ ತಕ್ಕ ಹಾಗೆ ಸಾಮಾನ್ಯ ಜ್ಞಾನವಾಗಿದ್ದು, ದಿನನಿತ್ಯದ ಜೀವನದಲ್ಲಿ ಎದುರಾಗುವ ವಿಜ್ಞಾನ, ಇತಿಹಾಸ, ಭೂಗೋಳ.. ಇತ್ಯಾದಿ ಪ್ರಶ್ನೆಗಳೇ ನಿಮಗೆ ಪರೀಕ್ಷೆಗಳಲ್ಲಿ ಎದುರಾಗುವುದರಿಂದ ನೀವು ಸದರಿ ವಿಷಯಗಳ ಕಡೆ ಗಮನ ಹರಿಸುವುದು ಕ್ಷೇಮಕರ. ಇಷ್ಟಿದ್ದಾಗ್ಯೂ ಈ ವಿಷಯಕ್ಕೆ ಪರಾಮರ್ಶನ ಗ್ರಂಥಗಳ ಅವಶ್ಯಕತೆ ಖಂಡಿತ ಇದೆ. ಆದರೆ ಸದರಿ ವಿಷಯದ ಬಗ್ಗೆ ಒಂದು ಬೃಹದ್ಗಂತ್ರ ಇಟ್ಟುಕೊಂಡು ಓದುವುದು ಸಮಯ ಉಳಿಸುವಲ್ಲಿ ಮತ್ತು ಜ್ಞಾನ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. Tata McGraw Hill General Studies Manual ಸಾಕು ಬೇಕಾದಷ್ಟಾಯ್ತು.

ಪ್ರಚಲಿತ ವಿದ್ಯಮಾನ : ದಿನದಿನದ ಪತ್ರಿಕೆಗಳನ್ನ ಓದಿ  ಪರೀಕ್ಷಾ ದೃಷ್ಟಿಯಿಂದ ಪ್ರಮುಖವೆನಿಸುವ ಸುದ್ದಿಗಳನ್ನ ಮನನ ಮಾಡಿಕೊಳ್ಳುವುದು. ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ  ಈ ವಿಷಯದ ಮೇಲೆ ಕೇಳಲಾದ ಪ್ರಶ್ನೆಗಳನ್ನ ಬಿಡಿಸಿ, ಆ ಪ್ರಶ್ನೆಯಿಂದ ಒಂದು ಸಾಲಿನ 'ಸಾಮಾನ್ಯ ಜ್ಞಾನ' ಪಡೆಯುವುದು ನಿಮಗೆ ಈ ವಿಷಯದ ಶೀಘ್ರ ತಯಾರಿಗೆ ಒಂದು Shortcut. ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

ಸಾಮಾನ್ಯ ಕನ್ನಡ : ಮೈಸೂರು ವಿವಿ ದಶಕಗಳ ಹಿಂದೆ ಪ್ರಕಟಿಸಿದ್ದ ಕನ್ನಡ ವ್ಯಾಕರಣ ಪುಸ್ತಕ ಎಂದಿಗೂ ಪ್ರಸಕ್ತ. ಇದರ ಜೊತೆಗೆ ಕನ್ನಡ ಸಾಹಿತ್ಯ ಲೋಕದ ಬಗ್ಗೆ ಪ್ರಾಥಮಿಕ ಜ್ಞಾನ ಬಹುಮುಖ್ಯ(ಕೃತಿ-ಕರ್ತೃ-ಕಾವ್ಯನಾಮ-ಪ್ರಶಸ್ತಿ ..ಇತ್ಯಾದಿ)

ಸಾಮಾನ್ಯ ಇಂಗ್ಲೀಷ್ : ಸಾಮಾನ್ಯ ಇಂಗ್ಲೀಷ್ ಪರೀಕ್ಷೆಯ ಬಗ್ಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಿಕೊಡುವಂಥದ್ದು. ಪ್ರತಿದಿನ ಆಂಗ್ಲ ದಿನಪತ್ರಿಕೆಗಳನ್ನ ಓದಿ, ಅಲ್ಲಿ ಕಂಡುಬರುವ ನಿಮಗೆ ತಲೆಬುಡ ತಿಳಿಯದ ಪದಗಳ ತಲೆಬುಡ ತಿಳಿಯಿರಿ. ಇನ್ನು ಈ ಪತ್ರಿಕೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುವುದು Common Sense.

ಕಂಪ್ಯೂಟರ್ ಜ್ಞಾನ : ಈ ಪರೀಕ್ಷೆಯ ಬಗ್ಗೆ
  • Computer Manufacturing Companies
  • Computer Hardware
  • Computer OS & Softwares : Primary Knowledge
  • Keyboard Shortcuts
  • MS Office Working Knowledge
ಇಷ್ಟು ಮಾಹಿತಿಯಿದ್ದರೆ, ಸಾಕು. ನೀವು ಉತ್ತೀರ್ಣರಾಗಬಹುದು. ಈ ಪರೀಕ್ಷೆ Just Pass ಸಾಕಾಗಿರೋದ್ರಿಂದ ಮೇಲ್ಕಂಡ ಮಾಹಿತಿಗಳ ಬಗ್ಗೆ ಪಕ್ಕಾ ಆಗಿದ್ರೆ ಸಾಕು !!

ಪಂಚಾಯತ್ ರಾಜ್ ಅಧಿನಿಯಮ 1993 : ಸದರಿ ವಿಷಯವನ್ನ ಅಭ್ಯಸಿಸಲು ಒಂದಕ್ಕಿಂತ ಹೆಚ್ಚಿನ Reference ಪುಸ್ತಕಗಳು, ಅಂತರಜಾಲ ತಾಣಗಳ ಸಹಾಯ ಅವಶ್ಯಕತೆ ಇದೆ. ಆದರೆ ಅವೆಲ್ಲವನ್ನ ಒಟ್ಟುಗೂಡಿಸಿ ನೀಡುವ ಪ್ರಯತ್ನವೊಂದನ್ನ ಮಾಡಲಾಗಿದೆ. ಸದರಿ Reference Notes ಇರುವುದು 70 ಪುಟಗಳ PDF Formatನಲ್ಲಿ. ಆಸಕ್ತರು ಅದನ್ನ Download ಮಾಡಿಕೊಂಡು Print Out ತೆಗೆದುಕೊಳ್ಳಿ.

Self Prepared Notes Link : http://www.slideshare.net/revappa/pdo-panchayat-raj-rules-1993-e-notes


---------------

---------------


ಈ ಹಿಂದಿನ ಪ್ರಶ್ನೆ ಪತ್ರಿಕೆಗಳು : 20ನೇ ಸಪ್ಟೆಂಬರ್ 2009 


---------------


 

:  ಪತ್ರೋದ್ಯೋಗಿ

2 comments:

Ashok Reddy said...

Please suggest a good author/Book for PDO

Ashok Reddy said...

Please auggest ASp

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ