ಸುದ್ದಿ : ಈಜಿಪ್ಟ್ ಕಡಲ ತೀರದಲ್ಲಿ ಶಾರ್ಕ್ ಹಾವಳಿ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
 |
ಜಾಗತಿಕ ನಕ್ಷೆಯಲ್ಲಿ ಈಜಿಪ್ಟ್ |
 |
ನೆರೆ-ಹೊರೆ |
 |
ನೈಲ್ ನದಿಗುಂಟ ನೆಲೆಗೊಂಡಿರುವ ಚಾರಿತ್ರಿಕ ಸ್ಥಳಗಳು |
 |
ತೇಜಸ್ವಿ |
- ಆಫ್ರಿಕಾ ಖಂಡದ ಭೂಭಾಗ ತನ್ನ ಈಶಾನ್ಯ ತುದಿಗೆ ಏಷ್ಯಾ ಖಂಡಕ್ಕೆ ಮುತ್ತಿಟ್ಟಿರುವ ಜಾಗದಲ್ಲಿ ಸ್ಥಿತಗೊಂಡಿದೆ ಈಜಿಪ್ಟ್.
- ಪುರಾತನ ಅನ್ನುವ ಪದಕ್ಕೆ ಅನ್ವರ್ಥದಂತೆ ನೆನಪಾಗುವ ಈಜಿಪ್ಟ್ ದೇಶ, ಜಗತ್ತಿನಲ್ಲಿ ಅಲೆಮಾರಿ ಮಾನವ ನಾಗರಿಕತೆಯನ್ನ ಕಂಡುಕೊಂಡ ಪ್ರಮುಖ ಚಾರಿತ್ರಿಕ ಸ್ಥಳಗಳಲ್ಲಿ ಒಂದು.
- ಈಜಿಪ್ಟ್ ಎಂದು ನಮಗೆಲ್ಲಾ ಪರಿಚಿತವಿರುವ ಈ ದೇಶದ ಅಧಿಕೃತ ಹೆಸರು : ಇಸ್ಲಾಮಿಕ್ ರಿಪಬ್ಲಿಕ್ ಆಫ್ ಈಜಿಪ್ಟ್.
- ಪೂರ್ವದಿಂದ ಪ್ರಾರಂಭಿಸಿ ಮತ್ತೆ ಪೂರ್ವಕ್ಕೇ ತಲುಪಿದರೆ ಕೆಂಪು ಸಮುದ್ರ, ಇಸ್ರೇಲ್, ಮೆಡಿಟರೇನಿಯನ್ ಸಮುದ್ರ, ಲಿಬಿಯಾ & ಸುಡಾನ್ ದೇಶಗಳು ಈಜಿಪ್ಟ್ ದೇಶದ ಭೂಭಾಗಕ್ಕೆ ಅಂಟಿಕೊಂಡಿರುವುದನ್ನ ಕಾಣಬಹುದು.
- ಈಜಿಪ್ಟ್ ಪುರಾತನ ನಾಗರೀಕತೆ ಎನಿಸಿಕೊಂಡಿದ್ದರೂ ಒಂದು ಸಂಶೋಧನೆಯ ಪ್ರಕಾರ ಪ್ರಾರಂಭದಿಂದಲೂ ಈ ಪ್ರದೇಶ ಭಾರಿ ಅನಿಸುವ ಜನಸಾಂದ್ರತೆಯನ್ನೇನೂ ಹೊಂದಿರಲಿಲ್ಲ. ಬದಲಿಗೆ ಇಂದು ಜಗತ್ತಿನ ಅತಿ ವಿಸ್ತೀರ್ಣವಾದ ಮರುಭೂಮಿಯಾಗಿ ಮೆರೆಯುತ್ತಿರುವ ಸಹಾರಾ ಅಂದು ಹಸಿರು ಕಾಡಿನಿಂದಾವೃತವಾದ ಭೂಪ್ರದೇಶವಾಗಿತ್ತು. ಆದರೆ ಬೇರೆಲ್ಲೋ ಆದ ವಾತಾವರಣ ವೈಪರೀತ್ಯ ಆಫ್ರಿಕಾ ಖಂಡದ ಈ ಭಾಗದ ಮೇಲೆ ಪರಿಣಾಮ ಬೀರಿ ಕಗ್ಗಾಡು - ಬೆಂಗಾಡಾಯಿತು. ಈ ಪರಿವರ್ತನೆಯಲ್ಲಿ ಅಲ್ಲಿ ನೆಲೆಗೊಂಡಿದ್ದ ಜನಸ್ತೋಮವನ್ನ ಕೈಬೀಸಿ ಕರೆದದ್ದು ಪೂರ್ವದ ಕಡೆಗೆ ಹರಿಯುತ್ತಿದ್ದ ನೈಲ್ ನದಿ.
- ನೈಲ್ ನದಿಯ ನಿಗೂಢ ಹುಟ್ಟು & ಹರಿವಿನ ಬಗ್ಗೆ ತಿಳಿಯಲು ನಮ್ಮ ತೇಜಸ್ವಿಯವರ ಅಲೆಮಾರಿ ಅಂಡಮಾನ್ & ಮಹಾನದಿ ನೈಲ್ ಓದಲು ಮರೆಯಬೇಡಿ.
- ಸುತ್ತಲಿನ ದೇಶಗಳಂತೆ ಇದೂ ಕೂಡ ಇಸ್ಲಾಂ ಧರ್ಮವನ್ನ ಬಾಚಿ ತಬ್ಬಿರುವ ದೇಶ.
- ಈ ದೇಶದ ಭೌಗೋಳಿಕ ಆಕರ್ಷಣೆಯೆಂದರೆ ಅದು ನೈಲ್ ನದಿ. ನೈಲ್ ನದಿಯ ಮೋಡಿಯೆಂದರೆ ದೇಶದ 99 ಪ್ರತಿಶತ ಜನಸಂಖ್ಯೆ ದೇಶದ 6 ಪ್ರತಿಶತ ಭೂಮಿಯಲ್ಲಿ ಮಾತ್ರ ನೆಲೆಗೊಂಡಿದ್ದು, ಅದೂ ನೈಲ್ ನದಿಯ ದಡಗಳಲ್ಲಿ !!
- ನೈಲ್ ನದಿಯ ಸುತ್ತಲಿನ ಫಲವತ್ತಾದ ಭೂಮಿಯನ್ನ ಬಿಟ್ಟರೆ ದೇಶದ ಬಹುಭಾಗ ಸಹಾರಾ ಮರುಭೂಮಿ & ಲಿಬಿಯಾ ಮರುಭೂಮಿಗೆ ಆಹುತಿಯಾಗಿದೆ.
- ಪಿರಾಮಿಡ್ ಗಳು, ಸ್ಫಿಂಕ್ಸ್ & ಇತ್ತೀಚಿನ ಸುಯೇಜ್ ಕಾಲುವೆ, ಇವಿಷ್ಟು ದೇಶದ ಮಾನವ ನಿರ್ಮಿತ ಆಕರ್ಷಣೆಗಳು.
- ಇದೇ ಸಂದರ್ಭದಲ್ಲಿ ಪಿರಾಮಿಡ್ ಗಳ ನಿಗೂಢ ರಚನೆಯ ಬಗ್ಗೆ ತಿಳಿಯಲು ಪ್ರಯತ್ನಿಸೋಣ :
ದೇಶದ ತುಂಬೆಲ್ಲಾ ಹರಡಿರುವ ಪಿರಾಮಿಡ್ ಗಳಲ್ಲಿ ಮುಖ್ಯವಾಗಿ ಗಮನ ಸೆಳೆದಿರೋದು ಗಿಝಾ ಪಟ್ಟಣದ ಮಹಾ ಪಿರಾಮಿಡ್. ಎಲ್ಲ ಪಿರಾಮಿಡ್ ಗಳಂತೆ ಇದೂ ಕೂಡ ರಾಜನೊಬ್ಬನ ಮಮ್ಮಿಯ ಆವಾಸ ಸ್ಥಾನವೆನ್ನುವುದು ಸಾಮಾನ್ಯ ಅಂಶವಾದರೂ, ಅದರ ಬೃಹತ್ ಗಾತ್ರ(480.6 ಅಡಿ ಎತ್ತರ) ಹಾಗೂ ಅಲ್ಲಿ ಬಳಸಲಾಗಿರುವ ಕೆಲವು ಕಲ್ಲುಗಳ ತೂಕ 25000 ರಿಂದ 80000 ಕೆ.ಜಿ.ವರೆಗೂ ಇರುವ ಅಂಶಗಳು ಈ ಪಿರಾಮಿಡ್ ಅನ್ನು ತನ್ನ ಸಹಚರರಿಗಿಂತ ಎತ್ತರದಲ್ಲಿ ನಿಲ್ಲುವಂತೆ ಮಾಡಿವೆ. ಈ ಕಲ್ಲುಗಳು ದೊರೆಯುವುದು ಗಿಝಾ ಪಟ್ಟಣದಿಂದ 500 ಮೈಲಿ ದೂರದಲ್ಲಿರುವ ಆಸ್ವಾನ್ ನಗರದ ಕ್ವಾರಿಯಲ್ಲಿ.

ಆ ಗಾತ್ರ-ಆ ತೂಕದ ಕಲ್ಲುಗಳನ್ನ ತಂದು, ಆ ಎತ್ತರದ ಕಟ್ಟಡದಲ್ಲಿ ಬಳಸಿ ಅಂದು ಲಭ್ಯವಿದ್ದ ತಂತ್ರಜ್ಞಾನದೊಂದಿಗೆ ಕ್ರಿ.ಪೂ.2560ರಲ್ಲಿ 20 ವರ್ಷಗಳ ಪರಿಶ್ರಮದೊಂದಿಗೆ ಅವರು ಕಟ್ಟಿದ ರೀತಿ ಇಂದಿಗೂ ನಿಗೂಢ. ಅಷ್ಟು ತೂಕದ ಕಲ್ಲುಗಳನ್ನ ಅಷ್ಟು ಎತ್ತರದ ಕಟ್ಟಡದ ತುದಿಯವರೆಗೆ ಹೇಗೆ ಸಾಗಿಸಲಾಯಿತು, ಅಲ್ಲಿರುವ ನಿಗೂಢ ಖಾಲಿ ಜಾಗಗಳು, ನಿಗೂಢ ಕೋಣೆಯ ನಿಗೂಢ ಆಕಾರಗಳು .. ಎಲ್ಲವೂ ನಿಗೂಢವೇ. ಒಂದು ವಾದದ ಪ್ರಕಾರ : ಕಟ್ಟಡದ ಬದಿಗಳಲ್ಲಿ Slope ಒಂದನ್ನ ನಿರ್ಮಿಸಿ ಅದರ ಮೇಲಿನಿಂದ ಭಾರದ ಕಲ್ಲುಗಳನ್ನ ಸಾಗಿಸಿ ಮೇಲ್ಭಾಗದವರೆಗೂ ಒಯ್ಯಲಾಯಿತು. ಸದ್ಯಕ್ಕೆ ಇದು ಕಟ್ಟಡದ ನಿರ್ಮಾಣಕ್ಕೆ ಬಳಸಿದ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಮಾನ್ಯತೆ ಹೊಂದಿರುವ ವಾದ. ಆದರೆ ಅಲ್ಲಿರುವ ನಿಗೂಢ ಕೋಣೆಗಳು & ಕಟ್ಟಡದ ವಾಸ್ತು ವಿನ ಬಗ್ಗೆ ಇನ್ನೂ ಅನೇಕ ಸಂಶಯಗಳು ಬಗೆಹರಿಯಬೇಕಿವೆ.


: ರವಿ
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment