ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ - ಕ್ಲರಿಕಲ್ ಪರೀಕ್ಷೆ ಜನವರಿ 2010
{ ಅತ್ಯಮೂಲ್ಯ ಉತ್ತರ ಪತ್ರಿಕೆ : 02 }
- ಸೌದಿ ಅರೇಬಿಯಾದ ನಾಣ್ಯ - ದಿನ್ಹಾರ್
- ಕರ್ನಾಟಕ , ಆಂಧ್ರಪ್ರದೇಶ , ಪಶ್ಚಿಮ ಬಂಗಾಳ , ತಮಿಳುನಾಡು & ಜಮ್ಮು ಮತ್ತು ಕಾಶ್ಮೀರ - ಇವು ರೇಶ್ಮೆ ಉತ್ಪಾದನೆಯಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳು
- ' ವಿಶೇಷ ಕೃಷಿ & ಗ್ರಾಮೀಣ ಉದ್ಯೋಗ ಯೋಜನೆ ' - ಇದು ಕೃಷಿ ಉತ್ಪನ್ನಗಳು & ಕೃಷಿ ಸಂಬಂಧೀ ಉತ್ಪನ್ನಗಳ ರಫ್ತು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಯೋಜನೆ.
- ಏಪ್ರಿಲ್ 1, 2009 ರಿಂದ ಜಾರಿಗೆ ಬರುವಂತೆ Commodity Transaction Tax ಅನ್ನು ರದ್ದುಪಡಿಸಲಾಗಿದೆ ( ಹಿಂಪಡೆಯಲಾಗಿದೆ )
- ಕೇಂದ್ರ ಸರ್ಕಾರ ಜಮ್ಮು & ಕಾಶ್ಮೀರದಲ್ಲಿ ಮೊಗಲ್ ದೊರೆ ಅಕ್ಬರ್ ನಿರ್ಮಿಸಿದ್ದ ಹೆದ್ದಾರಿಯೊಂದನ್ನ ಪುನರ್ ನಿರ್ಮಿಸುವ ನಿರ್ಧಾರ ಕೈಗೊಂಡಿದೆ.
- ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕ್ಕೆ ' ಯಶ್ ಪಾಲ್ ಸಮಿತಿ ' ಉನ್ನತ ಶಿಕ್ಷಣ ಪದ್ಧತಿಯ ಪುನರ್ ಪರಿಶೀಲನೆ & ಸುಧಾರಣೆಗೆ ಸಲಹೆಗಳನ್ನ ನೀಡಿತು.
- 2011-2012ರ ಹೊತ್ತಿಗೆ ಪ್ರಧಾನ ಮಂತ್ರಿ ರೋಜಗಾರ್ ಯೋಜನೆಯ ಅಡಿಯಲ್ಲಿ ಸಣ್ಣ & ಮಧ್ಯಮ ಕೈಗಾರಿಕೆ ವಲಯದಲ್ಲಿ 37 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ.
- ಈಶಾನ್ಯ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ' ಒಂದು ಗ್ರಾಮ - ಒಂದು ಉತ್ಪನ್ನ ' ( One Village - One Product ) ಯೋಜನೆಯಡಿಯಲ್ಲಿ ನಿಂಬೆಹಣ್ಣಿನ ಸಸಿಗಳನ್ನ ನೆಡುವ ಮೂಲಕ ಪ್ರಾರಂಭಿಸಿದೆ.
- Mission Clean Ganga - ಪ್ರಕಾರ 2020ರ ವೇಳೆಗೆ ಗಂಗಾ ನದಿಯ ನೀರಿನಲ್ಲಿ ಕಲ್ಮಶ ಹರಿಬಿಡುವುದನ್ನ ತಡೆಯುವ ಗುರಿ ಹೊಂದಿದೆ.
- ಜಗತ್ತಿನಲ್ಲಿ ಅತಿ ಹೆಚ್ಚು ಬಂಗಾರದ ದಾಸ್ತಾನು ಹೊಂದಿರುವ ದೇಶ - ಅಮೆರಿಕಾ
- ಮಾನವ ಸಂಪನ್ಮೂಲ ಅಭಿವೃದ್ಧಿ ಪಟ್ಟಿಯಲ್ಲಿ ಭಾರತ 134ನೇ ಸ್ಥಾನದಲ್ಲಿದ್ದರೆ ನಾರ್ವೆ ಪ್ರಥಮ & ನೈಗರ್ ಕೊನೆಯ ಸ್ಥಾನದಲ್ಲಿದೆ. ಏಷ್ಯಾ & ಆಸ್ಟ್ರೇಲಿಯಾ ಖಂಡ ಮಾತ್ರ ಪರಿಗಣಿಸಿದರೂ ಭಾರತ ದೇಶ ಮೊದಲ 10 ಸ್ಥಾನದಲ್ಲೂ ಕಾಣಿಸಿಕೊಂಡಿಲ್ಲ.
- 2009ರಲ್ಲಿ Capgemini ತಯಾರಿಸಿರುವ ಏಷ್ಯಾ ಪೆಸಿಫಿಕ್ ಪ್ರದೇಶದ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ.
- GM Food ಎನ್ನುವ ಪದ ಇತ್ತೀಚೆಗೆ ಬಳಕೆಯಲ್ಲಿದೆ. GM ಎಂದರೆ Genetically Modified.
- ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದಲ್ಲಾ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಸೇರಿದವರು.
- ಕಳೆದ ಡಿಸೆಂಬರ್ ನಲ್ಲಿ ಜಾಗತಿಕ ತಾಪಮಾನ ಕುರಿತ ಐತಿಹಾಸಿಕ ಸಭೆ ನಡೆದದ್ದು ಕೋಪನ್ ಹೇಗನ್ ನಲ್ಲಿ . ಕೋಪನ್ ಹೇಗನ್ ಡೆನ್ಮಾರ್ಕ್ ದೇಶದಲ್ಲಿದೆ.
- ಸುಬ್ರತೋ ಕಪ್ ಫುಟ್ ಬಾಲ್ ಕ್ರೀಡೆಗೆ ಸಂಬಂಧಿಸಿದೆ.
- ಸತ್ಯಂ ಕಂಪೆನಿಯನ್ನು ಮಹೀಂದ್ರಾ ಸಂಸ್ಥೆ ಖರೀದಿಸಿದ ನಂತರ 'ಮಹೀಂದ್ರಾ ಸತ್ಯಂ' ಕಂಪೆನಿ MENA ದೇಶಗಳಿಂದ ಬೃಹತ್ Contract ಪಡೆಯಿತು. MENA ಅಂದ್ರೆ Middle East & North Africa.
- ಜಪಾನ್ ನ ಈಗಿನ ಪ್ರಧಾನ ಮಂತ್ರಿ - ಕಾನ್ ನಾಓಟೋ ( Kan Naoto )
- ಭಾರತದಲ್ಲಿ ಈಗ ಚಾಲ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಪಾಲಿಸಿ ( National Health Policy ) 2002ರಲ್ಲಿ ಪರಿಷ್ಕರಿಸಲಾಯಿತು. [ ಮೂಲತಃ 1983ರಲ್ಲಿ ಈ Policy ಅಸ್ತಿತ್ವಕ್ಕೆ ಬಂತು ]
- ಕೇಂದ್ರ ಸರ್ಕಾರದ Ministry of Overseas Indian Affairs ಸ್ಥಾಪಿಸಿರುವ Indian Community Welfare Fund(ICWF) ಜನವರಿ 1, 2009ರಲ್ಲಿ ಜಾರಿಗೆ ಬಂತು. ಜಗತ್ತಿನ 17 Emigration Clearance Required (ECR) ದೇಶಗಳಿಗೆ ಸಂಬಂಧಿಸಿದಂತೆ ಆ ದೇಶಗಳಲ್ಲಿ ತೊಂದರೆಗೀಡಾಗುವ ಭಾರತೀಯರ ಸಲುವಾಗಿ ಈ ನಿಧಿ ಸ್ಥಾಪನೆಯಾಗಿದೆ. ಯುಎಇ, ಸೌದಿ ಅರೇಬಿಯಾ, ಕತಾರ್, ಓಮನ್, ಕುವೈತ್, ಬಹ್ರೇನ್, ಮಲೇಷಿಯಾ, ಲಿಬಿಯಾ, ಜೋರ್ಡಾನ್, ಯೆಮೆನ್, ಸೂಡಾನ್, ಅಫ್ಘಾನಿಸ್ತಾನ್, ಇಂಡೋನೇಷಿಯಾ, ಸಿರಿಯಾ, ಲೆಬನಾನ್, ಥಾಯಲ್ಯಾಂಡ್ & ಇರಾಕ್ : ಇವೇ ಆ 17 ದೇಶಗಳು.
: ಉತ್ತರಚೋರ
.
No comments:
Post a Comment