ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 28, 2010

ಯಾರಿದು ? ಸ್ವಾಮಿ ಅಗ್ನಿವೇಶ್

ಈ ಮಾವೋವಾದಿಗಳ / ನಕ್ಸಲರ ಸುದ್ದಿ ಬಂದಾಗೆಲ್ಲಾ ಸ್ವಾಮಿ ಅಗ್ನಿವೇಶ್ ಕೂಡ ಪತ್ರಿಕೆಗಳಲ್ಲಿ ಪ್ರಕಟವಾಗ್ತಾರೆ. ಯಾರಿದು ? ಅಂತ ತಡಕಾಡಿದಾಗ ಸಿಕ್ಕ ಸ್ವಲ್ಪ ಮಾಹಿತಿಯಲ್ಲಿ ಅಲ್ಪವನ್ನ ನಿಮಗೆ ನೀಡ್ತಿದೀನಿ :

 • ಛತ್ತೀಸಘಡದ ಜಾಂಜಗೀರ್-ಚಂಪಾ ಜಿಲ್ಲೆಯ ಶಕ್ತಿ ಎಂಬಲ್ಲಿ ಶ್ಯಾಂ ವೇಪಾ ರಾವ್ ಆಗಿ ಸಪ್ಟೆಂಬರ್ 21, 1939ರಲ್ಲಿ ಜನನ
 • ಕಲ್ಕತ್ತಾದಲ್ಲಿ ಕಾನೂನು & ಅರ್ಥಶಾಸ್ತ್ರದಲ್ಲಿ ಪದವಿ
 • 1968ರಲ್ಲಿ ಹರ್ಯಾಣಾದಲ್ಲಿ ಆರ್ಯ ಸಮಾಜ ಸೇರಿ 1970ರಲ್ಲಿ ಸನ್ಯಾಸ ಸ್ವೀಕಾರ
 • ಸನ್ಯಾಸ ಸ್ವೀಕರಿಸಿದ ದಿನವೇ ಆರ್ಯ ಸಭಾ ಎಂಬ ಹೆಸರಿನ ರಾಜಕೀಯ ಪಕ್ಷ ಸ್ಥಾಪನೆ
 • ಆರ್ಯ ಸಭಾದ ಸಿದ್ಧಾಂತಗಳನ್ನ ವೈದಿಕ ಸಮಾಜವಾದ ಎಂದು ಹೆಸರಿಸಿದ ಅಗ್ನಿವೇಶ್
 • 1977ರಲ್ಲಿ MLA ಆಗಿ ಆಯ್ಕೆ ( ಹರ್ಯಾಣಾ )
 • 1979 ರಿಂದ 1982ರವರೆಗೆ ರಾಜ್ಯದ ಶಿಕ್ಷಣ ಮಂತ್ರಿಯಾಗಿ ಸೇವೆ
 • ಮಂತ್ರಿಯಾಗಿದ್ದಾಗಲೇ 1981ರಲ್ಲಿ ' ಜೀತ ಕಾರ್ಮಿಕರ ವಿಮುಕ್ತಿ ಸಂಘಟನೆ ' ಸ್ಥಾಪಿಸಿದ ಅಗ್ನಿವೇಶ್
 • ರಾಜಸ್ಥಾನದಲ್ಲಿ ನಡೆದ ಸತಿ ಪದ್ಧತಿಯ ಆಚರಣೆಯನ್ನ ಖಂಡಿಸಿ ನಡೆಸಿದ ಪಾದಯಾತ್ರೆಯ ಫಲವಾಗಿ Commission of Sati (prevention) Act of 1987 ಜಾರಿಗೆ ಬಂತು.
 • ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಅಗ್ನಿವೇಶ್ ಕಳಕಳಿ ಮನನೀಯ
 • " ಮುಸ್ಲಿಮರೆಲ್ಲಾ ಭಯೋತ್ಪಾದಕರು ಅಂತ ಬಿಂಬಿಸುವ ಅಮೆರಿಕವೇ ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ " - ಎನ್ನುವ ಅಗ್ನಿವೇಶ್
 • ಆರ್ಯ ಸಮಾಜದ ಹೆಸರಿನಿಂದ ಪ್ರವರ್ಧಮಾನಕ್ಕೆ ಬಂದ ಅಗ್ನಿವೇಶ್ ಅವರ ಧೋರಣೆಗಳು ದಯಾನಂದ ಸರಸ್ವತಿಯವರ ಮೂಲ ಆರ್ಯ ಸಮಾಜದ ತತ್ವಗಳಿಗೆ ತದ್ವಿರುದ್ಧವಾಗಿರುವುದನ್ನ ದೇಶದಾದ್ಯಂತ ಇರುವ ಆರ್ಯ ಸಮಾಜ ಪ್ರತಿನಿಧಿ ಸಭೆಗಳು ಪ್ರಶ್ನಿಸಿವೆ.

ಇನ್ನು ಅವರ ನಕ್ಸಲರ ಬಗೆಗಿನ ಕಾಳಜಿಯೋ / ಧೋರಣೆಯೋ ಎಂಥದಿದೆ ಅಂತ ತಿಳಿಯುವ ಇರಾದೆ ಇದೆಯಾ ? ಹಾಗಿದ್ರೆ ನಿಮ್ಮಲ್ಲೇ ಒಬ್ರು ಹುಡುಕಿ ಹೇಳಿ. ಎಲ್ಲ ನಾನೇ ಹುಡುಕಿ ಕೊಟ್ಟು ನೀವು ಬರೀ ಓದೋ ಕೆಲಸ ಮಾಡಿದ್ರೆ ತಪ್ಪಲ್ವಾ ? ಶಾಲೆಯಲ್ಲಿ ಚಟುವಟಿಕೆ ಬೇಕು ಅನ್ನುವ ಹಾಗೆ ಇಲ್ಲೂ ಇರಲಿ... ನಿಮ್ಮ ಮಾಹಿತಿ ಲೇಖನ ರೂಪದಲ್ಲಿದ್ದರೂ ಸೈ - Comment ರೂಪದಲ್ಲಿದ್ದರೂ ಸೈ.: ರವಿ
.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ