ಸುದ್ದಿ : ಸೊಮಾಲಿಯಾದಲ್ಲಿನ ಹಿಂಸೆಯನ್ನ ನಂದಿಸಲು 8000 AU (African Union) ಸೈನಿಕರು ಮೊಗದಿಶು ಪಟ್ಟಣಕ್ಕೆ ರವಾನೆ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
|
ಜಾಗತಿಕ ನಕ್ಷೆಯಲ್ಲಿ ಸೊಮಾಲಿಯಾ |
|
ನೆರೆ-ಹೊರೆ |
|
ಭೌಗೋಳಿಕ |
- ಕಮ್ಯೂನಿಸ್ಟರ ಕೈಯಲ್ಲಿರುವ ರಿಪಬ್ಲಿಕ್ ಆಫ್ ಸೊಮಾಲಿಯಾ ಆಫ್ರಿಕಾ ಖಂಡದ ಈಶಾನ್ಯಕ್ಕೆ ಚಾಚಿರುವ ಘೇಂಡಾಮೃಗದ ಕೊಂಬಿನಂತಿರುವ ಭೂಭಾಗವನ್ನ(Horn of Africa ಎಂದು ಭೂಗೋಳಶಾಸ್ತ್ರಜ್ಞರು ಕರೆದಿದ್ದಾರೆ) ಆಕ್ರಮಿಸಿದೆ.
- ಉತ್ತರಕ್ಕೆ ಯೆಮೆನ್ ಒಳಗೊಂಡು ಏಡನ್ ಕೊಲ್ಲಿ, ವಾಯುವ್ಯಕ್ಕೆ ಜಿಬೌತಿ(Djibouti), ಪಶ್ಚಿಮಕ್ಕೆ ಇಥಿಯೋಪಿಯಾ, ದಕ್ಷಿಣಕ್ಕೆ ಕೀನ್ಯಾ ಮತ್ತು ಪೂರ್ವಕ್ಕೆ ಹಿಂದೂ ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿದೆ.
- ಭೂಮಧ್ಯರೇಖೆಗೆ ಹತ್ತಿರವಿರುವ ಈ ದೇಶದಲ್ಲಿ ವರ್ಷವೊಂದರಲ್ಲಿ ಗುರುತಿಸಬಹುದಾದ ಅಂಥ ತಾಪಮಾನ ವ್ಯತ್ಯಾಸಗಳಾಗದೇ ಹೋದರೂ ಅಲ್ಲಿ ಋತುಗಳನ್ನ ಈ ರೀತಿ ಗುರುತಿಸಿದ್ದಾರೆ.
ಡಿಸೆಂಬರ್ ನಿಂದ ಮಾರ್ಚ್ ವರೆಗೆ : ಬೇಸಿಗೆ
ಏಪ್ರಿಲ್ ನಿಂದ ಜೂನ್ ವರೆಗೆ : ಮಳೆಗಾಲ
ಜುಲೈ ನಿಂದ ಸಪ್ಟೆಂಬರ್ ವರೆಗೆ : ಮೆದುಬೇಸಿಗೆ
ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ : ಮೆದುಮಳೆಗಾಲ
- ಸೊಮಾಲಿಯಾ, ಆಫ್ರಿಕಾ ಖಂಡದಲ್ಲೇ ಅತಿ ಉದ್ದದ ಕರಾವಳಿ ತೀರ ಹೊಂದಿರುವ ದೇಶ.
- ಸುನ್ನಿ ಮುಸ್ಲಿಮರು ದೇಶದ ಜನಸಂಖ್ಯೆಯ ಪರಿಪೂರ್ಣ ಎನ್ನಬಹುದಾದ ಭಾಗವಾಗಿದ್ದಾರೆ.
- ದೇಶದ ಭೂಬಾಗ ಬಹುತೇಕ ಸಮತಟ್ಟಾಗಿದ್ದು ಉತ್ತರಕ್ಕೆ ಅರೆಮರುಭೂಮಿ, ಈಶಾನ್ಯಕದ್ಕೆ ಪರ್ವತ ಸಾಲುಗಳು - ಪ್ರಮುಖ ಎಂದು ಹೇಳಬಹುದಾದ ಭೌಗೋಳಿಕ ಅಂಶಗಳು.
: ರವಿ
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment