ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Dec 1, 2010

Radia TapeGate

ಚುಟುಕು ಸುದ್ದಿ : ನೀರಾ ರಾಡಿಯಾ Tape ಗಳನ್ನ ತನ್ನೆದುರಿಗೆ ಹಾಜರುಪಡಿಸಲು ಆದೇಶಿಸಿದ ಸರ್ವೋಚ್ಚ ನ್ಯಾಯಾಲಯಸುದ್ದಿಯ ಒಳನೋಟ :
  • ಮೇಲ್ಕಂಡ ಸುದ್ದಿಯನ್ನು ಪ್ರಕಟಿಸಿದ ಬಹುತೇಕ ಪತ್ರಿಕೆಗಳಲ್ಲಿ ಕಂಡುಬಂದ ಒಂದು ಶಬ್ದವೆಂದರೆ : Tapegate. ಅದೇ ರೀತಿ ವಿಕಿಲೀಕ್ಸ್ ಬಿರುಗಾಳಿಯ ಜೊತೆಗೂ ಇದೇ ಪದ ಬಳಕೆಯಾಗುತ್ತಿದೆ - Cablegate ಅಂತ.
  • ಇಲ್ಲಿ Cable ಓಕೆ ? Gate ಯಾಕೆ ? ಅಂತ ಪ್ರಶ್ನೆ ಬಂದೇ ಬರುತ್ತದೆ. ಅದಕ್ಕೆ ಉತ್ತರ ಇಂತಿದೆ.
  • ಒಂದು ವಾದದ ಪ್ರಕಾರ : 1970ರ ದಶಕದಲ್ಲಿ ಅಮೆರಿಕದಲ್ಲಿ ನಡೆದ Watergate ಹಗರಣದ ನಂತರ ಅಲ್ಲಿನ ಸುದ್ದಿಪತ್ರಿಕೆಗಳು ಪ್ರತಿಯೊಂದು ಹೊಸ ಹಗರಣದ ಜೊತೆಗೆ Gate ಎನ್ನುವ ಪದ ಸೇರಿಸತೊಡಗಿದವು. ಅಂತೆಯೇ ಅದು ದಿನಪತ್ರಿಕೆಗಳು ಬಳಸುವ ಹಾಗೂ ತನ್ಮೂಲಕ
    ವಾಟರ್ ಗೇಟ್ ಕಟ್ಟಡ ಸಂಕೀರ್ಣ
    ಜನರ ಭಾಷೆಯಲ್ಲಿ ದೊಡ್ಡ ಮಟ್ಟದ ಕಳುವು, ಮೋಸ, ಹಗರಣ ಗಳ ಹೆಸರಿನ ಜೊತೆಯಲ್ಲಿ Gate ಎನ್ನುವ ಪದ ಬಳಕೆ ರೂಢಿಗೆ ಬಂತು ಎನ್ನಬಹುದು. ಉದಾಹರಣೆಗೆ : ನಾನು ನಿಮ್ಮ ಪುಸ್ತಕವೊಂದನ್ನ ಕದ್ದರೆ ಅದನ್ನ ನೀವು Bookgate ಎಂದು ಕರೆಯಬಹುದು. ಆದರೆ ದೊಡ್ಡ ಮಟ್ಟದ ಹಗರಣ(Scandal)ಗಳಿಗೆ ಮಾತ್ರ ಆ ಪದವನ್ನ ಸೇರಿಸಿ ಬಳಸುವುದು ಆ ಪದಕ್ಕೆ ನೀಡುವ ಮರ್ಯಾದೆಯಾಗಿದೆ. ಆದರೆ ತಮಾಷೆಯೆಂದರೆ ಆದಿಯಲ್ಲಿ ಬಳಕೆಯಾದ Watergate ಪ್ರಕರಣದ Gate ಪದಕ್ಕೆ ಅರ್ಥವೇ ಇಲ್ಲ. ಕಾರಣ ಅಮೆರಿಕಾದ Watergate Complex ಎಂಬ ಕಟ್ಟಡದಲ್ಲಿ ನಡೆಯಿತೆನ್ನಲಾದ ಪ್ರಕರಣವದು. ಮುಂದೆ ದೇಶದ ಅಧ್ಯಕ್ಷ ನಿಕ್ಸನ್ ರ ರಾಜೀನಾಮೆಗೆ ಕಾರಣವಾಯಿತು ಈ ಹಗರಣ. ರೋಚಕ ಮಾಹಿತಿಯೆಂದರೆ ಇಲ್ಲಿಯತನಕ ರಾಜೀನಾಮೆ ನೀಡಿ ಪದತ್ಯಾಗ ಮಾಡಿದ ಅಮೆರಿಕಾದ ಅಧ್ಯಕ್ಷ ಅವರೊಬ್ಬರೇ.
  • ಇದೇ ಅರ್ಥವನ್ನ ಇಂಗ್ಲೀಷಿನಲ್ಲಿ ಹೇಳುವುದಾದರೆ Adding "Gate" to the end of a word is meant to convey the perceived presence of scandalous activity.
ಒಂದು ವಿಷಯವನ್ನ ನಾವಿಲ್ಲಿ ಗಮನಿಸಬೇಕು. ಪಶ್ಚಿಮದ ಸಂಸ್ಕೃತಿ ಅಂತ ನಾವೆಲ್ಲ ಕರೆಯುವ ಸಂಸ್ಕೃತಿ ವಾಸ್ತವದಲ್ಲಿ ಅಮೆರಿಕ ಸಂಸ್ಕೃತಿ. ಅಮೆರಿಕ ಸಂಸ್ಕೃತಿಯ ಎರಕದಲ್ಲಿ ನಾವಿಂದು ನಮ್ಮ ಭವಿಷ್ಯವನ್ನ ರೂಪಿಸಿಕೊಳ್ಳುತ್ತಿದ್ದೇವೆ ಎಂಬುದನ್ನ ಭಾರತದ ಅನಾದಿ ಸಂಸ್ಕೃತಿಯ ಆರಾಧಕರು ಮತ್ತು ಪ್ರಗತಿಪರರರಾದಿಯಾಗಿ ಎಲ್ಲರೂ ಒಪ್ಪಲೇಬೇಕಾದ ವಿಷಯವಾಗಿದೆ. ಆದರೆ ಸದರಿ ಎರಕ ನಮ್ಮ ಮಣ್ಣಿಗೆ ನಮ್ಮ ದೇಹಕ್ಕೆ ನಮ್ಮ ಪೀಳಿಗೆಗೆ ಎಷ್ಟು ಸಹಕಾರಿ ಎಂಬುದನ್ನ ನಾವು ಭಾರತೀಯರು ವೈಯಕ್ತಿಕ ವಿಮರ್ಶೆಯ ಮೂಲಕ  ನಿರ್ಧರಿಸಬೇಕಿದೆ. ಪತ್ರಿಕೆಯ ಸಂಪಾದಕನೊಬ್ಬನ ಸಂಪಾದಕೀಯ ನಮ್ಮ ಬಾಳಿಗೆ ದಿಸೆಯಾಗಬಾರದು.

ಇಲ್ಲಿ ನನ್ನ ಮೇಲೆ ಮಡಿವಂತಿಕೆಯ ಆರೋಪ ಬರಬಹುದು. ಆದರೆ ನಾನಿಲ್ಲಿ ಹೇಳಹೊರಟಿರುವುದು Creativity ಗೆ ಹಿಡಿದಿರುವ ತುಕ್ಕಿನ ಬಗ್ಗೆ. ನಾವು ಸಭ್ಯಸಾಚಿಗಳಾಗುವ ದಾರಿಯನ್ನೂ ನಾವು ಅಮೇರಿಕನ್ನರಿಂದ ಕಲಿಯಬೇಕಾಗಿರುವುದು ನಮ್ಮ ದುರದೃಷ್ಟ. ನಮ್ಮ ದಿನನಿತ್ಯದ ಸಭ್ಯತೆ(Etiquette)ಗಳನ್ನೂ ನಾವು ಅಮೆರಿಕದ ಯಾವುದೋ ಮೂಲದಿಂದ ಎತ್ತಿ ತರುವುದು ಎಂಥ  ಜಾಣತನ ? ನಮ್ಮ ಹಿರಿಯರು ಅವನ್ನ ಬರೆದಿಟ್ಟಿಲ್ಲವೇ ? ಅಥವಾ ಹಿತ್ತಲ ಗಿಡ ಮದ್ದಲ್ಲವೇ ? ಇಷ್ಟೇ ಅಲ್ಲ ಇಂದು ಅನೇಕ Advertisemnt ಗಳೂ ಬೇರಾವುದೋ ಮೂಲದ ನಕಲುಗಳು. ಉದಾ : ಐಪಿಎಲ್ ಮೊದಲ ಆವೃತ್ತಿಯ ಬಣ್ಣದೋಕುಳಿಯ ರೀತಿಯಲ್ಲಿ ಮೂಡಿಬಂದ ವಿಜ್ಞಾಪನೆ ಅಮೆರಿಕದ ಬೇಸ್ ಬಾಲ್ ಪಂದ್ಯಾವಳಿಯ ಯಥಾವತ್ ಅನುಕರಣೆ ಎಂದರೆ ನೀವು ನಂಬಬೇಕು.

ಆದರೆ ನಮ್ಮ ದೇಶದಲ್ಲೂ ಅವರನ್ನ ಮೀರಿಸುವ ಕ್ರಿಯಾಶೀಲರಿದ್ಧಾರೆ ಎಂಬುದನ್ನ ನಾವೆಲ್ಲಾ ಒಪ್ಪಕೊಳ್ಳಬೇಕು. ಒಪ್ಪಿಕೊಳ್ಳೋಣ. ಇದರ ಜೊತೆಯಲ್ಲೇ ಅಲ್ಲಿನ  ಅಂದ್ರೆ ಅಮೆರಿಕದ ಜನರಿಗಿರುವ ರಾಷ್ಟ್ರದ ಬಗೆಗಿನ ಜಾಗೃತ  ಅಭಿಮಾನದ ತೀವೃತೆ ನಮ್ಮಲ್ಲಿ ಬಹುಶಃ ಬರದೇ ಹೋಗಬಹುದು ಎಂಬ ನಿಷ್ಠುರ ಸತ್ಯವನ್ನೂ ಒಪ್ಪಿಕೊಳ್ಳೋಣ. ಕಾರಣವೂ ನಿಚ್ಚಳವಿದೆ, ದೇಶಕ್ಕೆ ಲಭಿಸಿದ ಸ್ವಾತಂತ್ರ್ಯಕ್ಕೆ ಬಸಿದು ಹೋದ ರಕ್ತದ ಕೋಡಿಯ ಕಥೆಯನ್ನ ಹಾಗೂ ದಿವ್ಯಾತ್ಮಗಳ ಪರಿಶ್ರಮವನ್ನ ಯಥಾವತ್ ಅನುವಾದಿಸಿ ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಎಡವಿದ ನಮ್ಮ ಹಿರಿಯರ ಅವಜ್ಞೆ. ಅವರೇ ಇಂದು , ಇಂದಿನ ಯುವಪೀಳಿಗೆ ಅಮೆರಿಕದ ಪಾಲಾಗುತ್ತಿರುವ ಬಗ್ಗೆ ಅಲವತ್ತುಕೊಳ್ಳುತ್ತಿದ್ದಾರೆ. ಎಂಥ ವಿಪರ್ಯಾಸ !

ಅಂದು ಅವರು ತೋರಿದ  ಅವಜ್ಞೆ ಇಂದು ಜಗತ್ತಿನ ಪ್ರಬಲ ದೇಶವೊಂದರ ಆಕರ್ಷಕ ಆದರೆ ಟೊಳ್ಳಾದ ಸಂಸ್ಕೃತಿಯೆಡೆಗೆ, ಸಮೃದ್ಧ ಮತ್ತು ನೈತಿಕಮೌಲ್ಯಗಳ ಮೇಲೆ ನೆಲೆಗೊಂಡಿದ್ದ ಸಂಸ್ಕೃತಿಯ ನೆಲೆವೀಡಾಗಿರುವ ಇಡೀ ದೇಶವನ್ನ ಸೆಳೆಯುತ್ತಿದೆ. ಇಲ್ಲಿ ನಾನು ಮತ್ತೊಂದು ಅಲವತ್ತುಕೊಳ್ಳುವ ಪ್ರಸಂಗವನ್ನ ನಿಮ್ಮೆದುರು ತೆರೆದಿಡುತ್ತಿಲ್ಲ. ಬದಲಿಗೆ, ದೇಶ ಮೊದಲು ಎಂಬ ಕಲ್ಪನೆಯ ಈ ದಿನದ ತುರ್ತಿನ ಬಗ್ಗೆ ಜ್ಞಾಪಿಸಲು ಹೊರಟೆ ಅಷ್ಟೇ. ದೇಶ ಮೊದಲ ಆದ್ಯತೆಯಾದಾಗ ಅದರೊಟ್ಟಿಗೆ ದೇಶದ ಸಂಸ್ಕೃತಿಯೂ ನಮ್ಮ ಆದ್ಯತೆಯಾಗುವುದರಲ್ಲಿ ಸಂಶಯ ಬೇಡ.
 
"When we were young kids growing up in America , 
we were Told to eat our vegetables at dinner and not leave them. 
Mothers said, think of the starving children in India And finish the dinner.''

And now I tell my children: 

''Finish your homework
Think of the children in India Who would make you starve ,  if you don't. " 

: Thomas L Friedman
 

ಇದರ ಜೊತೆಗೆ ಒಬಾಮಾ , ಫ್ರೀಡ್ ಮನ್ ಮುಂತಾದವರು ತಮ್ಮ ದೇಶದ ಯುವಕರಿಗೆ  " ಬೆಂಗ್ಳೂರ ಹುಡುಗರನ್ನ ನೋಡಿ ಕಲಿಯಿರಿ "  ಎಂದು ನೀಡುತ್ತಿರುವ ಹಿತವಚನಗಳಲ್ಲಿ, ನಮ್ಮದು ಬೆನ್ನು ತಟ್ಟಿಕೊಳ್ಳುವ ಸಾದನೆಯೇನಲ್ಲ ಎಂಬುದನ್ನ ಸ್ವಲ್ಪ ವಿಮರ್ಶೆ ಮಾಡಿದರೆ ನಮಗೆಲ್ಲಾ ತಿಳಿದೀತು. ಯೋಗರಾಜ ಭಟ್ಟರ " ಲೈಫು ಇಷ್ಟೇನೆ.. "ಗೀತೆಯಷ್ಟೇ ಸರಳವಾಗಿದೆ ನಮ್ಮ ಜೀವನ. ಅಮೆರಿಕದ ಹುಡುಗರು ನಮ್ಮನ್ನ ನೋಡಿ ಕಲಿಯುವುದು ಅಷ್ಟರಲ್ಲೇ ಇದೆ. ಆದರೆ ನಾವು ಅವರ Country First ಎಂಬ Built in Software ಅನ್ನ ನಮ್ಮಲ್ಲಿ ಅಳವಡಿಸಿಕೊಳ್ಳೋದು ಯಾವತ್ತು ? ಅವರ ಎಲ್ಲ Software ಗಳನ್ನ ನೋಡಿ ಓದಿ ಕಲಿತ್ರೂ ಇದು ಮಾತ್ರ ಕಷ್ಟ. ಅಲ್ಲಾ ?

ಸತ್ಯ ಏನಂದ್ರೆ ನಮ್ಮೆಲ್ಲರೊಳಗೊಬ್ಬ ಸುಭಾಷಚಂದ್ರ ಬೋಸರಿಸದ್ದಾರೆ ! ತಿಲಕರಿದ್ದಾರೆ ! ಸಂಗೊಳ್ಳಿ ರಾಯಣ್ಣ - ಕಿತ್ತೂರು ಚೆನ್ನಮ್ಮ ರಿದಾರೆ !! ಆದರೆ ಅವರನ್ನ ಸ್ವಾತಂತ್ರ್ಯ ದಿನಾಚರಣೆಗಳಂದು ಅಥವಾ ಅದನ್ನ Attend ಮಾಡಲು ಆಗದಿದ್ದರೆ Rang De Basanti ಸಿನೆಮಾ ನೋಡುವಂದು ಆವಾಹಿಸಿಕೊಳ್ಳುವುದು ನನ್ನನ್ನು ಸೇರಿಸಿಕೊಂಡು ನಮ್ಮೆಲ್ಲರೊಳಗಿರುವ ಹವ್ಯಾಸವಾಗಿಹೋಗಿದೆ. ಅವರು ನೆನಪಾದಷ್ಟೇ ವೇಗದಲ್ಲಿ ಮರೆತೂ ಹೋಗಿರುತ್ತಾರೆ. ಇದನ್ನ ಅಳಿಸಿ ನಾವೆಲ್ಲಾ 'ದೇಶ ಮೊದಲು' ಭಾವನೆಯನ್ನ ಬೆಳೆಸಿಕೋಳ್ಳೋಣ ಎಂಬುದು ಈ ಕೊರೆತದ ಕರೆ. ನೀನೇ ಮಾಡದ್ದನ್ನ ನಮಗೆ ಬೋಧಿಸ್ತೀಯಲ್ಲಾ ಅಂತ ನಿಮ್ಮ ವಾದವಾದರೆ ...

ತಪ್ಪುಗಳನ್ನ ಗುರುತಿಸಿ-ಪಾಲಿಸಿ ಬೋಧಿಸುವುದು Best ಆದರೆ, ಗುರುತಿಸಿ ಜೊತೆಜೊತೆಯಾಗಿ ನಿವಾರಿಸಿಕೊಳ್ಳುವುದು  Good, ಎರಡೂ ಮಾಡದಿರುವುದು Bad. ಅಲ್ವಾ ?!

  • ಇನ್ನೊಂದು ವಾದದ ಪ್ರಕಾರ : ಇನ್ನೊಂದು ವಾದ ಯಾವುದೆಂದು ನಂಗೆ ತಿಳಿದೇ ಇಲ್ಲ. ನಿಮಗೇನಾದ್ರು ಗೊತ್ತಾ ? ಹೋಗ್ಲಿ Watergate ಪ್ರಕರಣದ ಬಗ್ಗೆ ಗೊತ್ತಾ ?


: ರವಿ

1 comment:

Blogger said...

Quantum Binary Signals

Get professional trading signals delivered to your cell phone every day.

Start following our trades NOW & make up to 270% per day.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ