ಸುದ್ದಿ : ವೆನೆಜುಯೆಲಾದಲ್ಲಿ ಭೀಷಣ ಮಳೆ ; ರಾಷ್ಟ್ರೀಯ ತುರ್ತು ಘೋಷಣೆ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
 |
ಜಾಗತಿಕ ನಕ್ಷೆಯಲ್ಲಿ ವೆನೆಜುಯೆಲಾ |
 |
ನೆರೆ-ಹೊರೆ |
 |
ಭೌಗೋಳಿಕ |
 |
Tepuis ಪರ್ವತಸಾಲು |
 |
ಆ್ಯಂಜೆಲ್ ಜಲಪಾತ |
 |
UP Animation ಚಲನಚಿತ್ರದ ಒಂದು STILLPHOTO |
- ಅಧಿಕೃತವಾಗಿ ಬೊಲಿವಾರಿಯನ್ ರಿಪಬ್ಲಿಕ್ ಆಫ್ ವೆನೆಜುಯೆಲಾ ಎನಿಸಿಕೊಳ್ಳುವ ವೆನೆಜುಯೆಲಾ ದಕ್ಷಿಣ ಅಮೆರಿಕ ಖಂಡದ ಉತ್ತರದಲ್ಲಿ ಸ್ಥಿತಗೊಂಡಿರುವ ಜಗತ್ತಿನಲ್ಲೇ ಅತಿ ಹೆಚ್ಚು ಜೀವವೈವಿಧ್ಯ(Biodiversity) ಹೊಂದಿರುವ 17 ದೇಶಗಳಾದ
- ಪಪುವಾ ನ್ಯೂ ಗಿನಿಯಾ
- ಆಸ್ಟ್ರೇಲಿಯಾ
- ಫಿಲಿಪ್ಪೀನ್ಸ್
- ಇಂಡೋನೇಷಿಯಾ
- ಮಲೇಷಿಯಾ
- ಚೀನಾ
- ಭಾರತ
- ಮಡಗಾಸ್ಕರ್
- ದಕ್ಷಿಣ ಆಫ್ರಿಕಾ
- ಇಕ್ವೆಡಾರ್
- ಕಾಂಗೋ
- ವೆನೆಜುಯೆಲಾ
- ಕೊಲಂಬಿಯಾ
- ಬ್ರೆಝಿಲ್
- ಮೆಕ್ಸಿಕೋ
- ಪೆರು
- ಅಮೆರಿಕಾ
ಪಟ್ಟಿಯಲ್ಲಿ ಅಂದ್ರೆ
MegaDiverse Countries ಪಟ್ಟಿಯಲ್ಲಿ ಇದೂ ಇದೆ.
- ಹಿಂದೊಮ್ಮೆ ಬಹುತೇಕ ದಕ್ಷಿಣ ಅಮೆರಿಕಾದ ದೇಶಗಳಂತೆ ಇದೂ ಕೂಡ ಸ್ಪೇನ್ ದೇಶದ ವಸಾಹತಾಗಿದ್ದು 1821ರಲ್ಲಿ ಸ್ವಾತಂತ್ರ್ಯ ಪಡೆಯಿತು.
- ಪಶ್ಚಿಮಕ್ಕೆ ಕೊಲಂಬಿಯಾ, ಉತ್ತರಕ್ಕೆ ಕೆರಿಬಿಯನ್ ಸಮುದ್ರ & ಕೆರಿಬಿಯನ್ ದ್ವೀಪಗಳು, ಪೂರ್ವಕ್ಕೆ ಗಯಾನಾ ಮತ್ತು ದಕ್ಷಿಣಕ್ಕೆ ಬ್ರಾಝಿಲ್ ನೆರೆಹೊರೆಯಾಗಿ ಸುತ್ತುವರೆದಿವೆ.
- ದೇಶದ ಈಶಾನ್ಯದಂಚಿಗೆ ಉತ್ತರ ಅಟ್ಲಾಂಟಿಕ್ ಮಹಾಸಾಗರ ಕೂಡ ಇಣುಕಿದೆ.
- ವಿಸ್ತೀರ್ಣದಲ್ಲಿ 33ನೇ ಅತಿ ದೊಡ್ಡ ದೇಶ.
- ದೇಶದ ಉತ್ತರಕ್ಕಿರುವ ಆ್ಯಂಡಿ ಪರ್ವತಗಳು ಮತ್ತು ದೇಶದ ಬ್ರೆಝಿಲ್ ಕಡೆಗಿನ ದಕ್ಷಿಣ ಭಾಗಕ್ಕಿರುವ ಅಮೆಜಾನ್ Basin ಈ ದೇಶದ ಪ್ರಮುಖ ಭೌಗೋಳಿಕ ಅಂಶಗಳಾಗಿವೆ.
- ಜಗತ್ತಿನ ಅತಿ ಎತ್ತರದ ಆ್ಯಂಜೆಲ್ ಫಾಲ್ಸ್ ದೇಶದ ಆಕರ್ಷಣೆಗಳಲ್ಲೊಂದು.
- Tepuis ಎನ್ನುವ ಸಮತಟ್ಟಾದ ಶಿಖರವುಳ್ಳ ಪರ್ವತ ಮಾದರಿಗಳೂ ಈ ದೇಶದ ಆಕರ್ಷಣೆಯ ಬಿಂದುವಾಗಿವೆ.
- ಪೆಟ್ರೋಲಿಯಂ & ನೈಸರ್ಗಿಕ ಅನಿಲ ಈ ದೇಶದ ಪ್ರಾಕೃತಿಕ ಸಂಪತ್ತಿನಲ್ಲಿ ಅಗ್ರ ಸ್ಥಾನದಲ್ಲಿವೆ.
- ಜೂನ್ ನಿಂದ ಅಕ್ಟೋಬರ್ ವರೆಗೆ ಮಳೆಗಾಲವಿದ್ದು ಇನ್ನುಳಿದ ವರ್ಷವಿಡೀ ಒಣಬೇಸಿಗೆ ರೂಪದ ವಾತಾವರಣವಿರುತ್ತದೆ.
ಆದರೆ ಅದೇಕೆ ಈ ಡಿಸೆಂಬರ್ ನಲ್ಲಿ ಇಂಥ ಕುಂಭದ್ರೋಣ ಮಳೆ ಸುರಿಯುತ್ತಿದೆ ಅಂತೀರಾ ? ನಾವು ಮಾಡಿದ ಪಾಪವನ್ನ ನಾವೇ ಉಣ್ಣಬೇಕಲ್ಲಾ !! ಪ್ರಕೃತಿಗೆ ಧಕ್ಕೆ ನೀಡುವಾಗ ಬರದ ಚಿಂತೆ ಅದು ಮುನಿಸಿಕೊಂಡಾಗ ಏಕೆ ?!! ನಮಗೆ ಯಾರಾದರೂ ತೊಂದರೆ ಮಾಡಿದಾಗ ನಾವು ಅವರಿಗೆ ತಿರುಗಿ 'ನೀಡು'ವುದು ಎಷ್ಟು ನ್ಯಾಯಸಮ್ಮತವೋ ಪ್ರಕೃತಿಯ ಈ ಮುನಿಸೂ ಅಷ್ಟೇ ನ್ಯಾಯಸಮ್ಮತ. ಅಲ್ವೇನ್ರೀ ?!!
- ಇದೇ ನೆಪದಲ್ಲಿ ಡಿಸ್ನಿ ಪಿಕ್ಸಾರ್ ನವರು ತಯಾರಿಸಿರುವ UP ಚಿತ್ರ ನೋಡಲು ನಿಮಗೆ ಸಲಹೆ ನೀಡ್ತಿದೀನಿ. ಆ ಚಿತ್ರ ಇದೇ ಭಾಗವನ್ನ ಕಲ್ಪಿಸಿಕೊಂಡು ತಯಾರಿಸಲಾಗಿರುವ Very Cute Animation ಚಿತ್ರ. ಚಿತ್ರ ನೋಡೋದನ್ನ ಮರೀಬೇಡಿ ಮತ್ತೆ. ಹಾಗೇ ಪ್ರತಿಕ್ರಿಯಿಸೋದನ್ನ ಕೂಡ !!
: ರವಿ
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment