ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 29, 2010

ಏನಿದು ವಿಕಿ ಲೀಕ್ಸ್ ? ( What Is WikiLeaks ? )

ಚುಟುಕು ಸುದ್ದಿ : ಅಮೆರಿಕಾದ 'ನೀತಿ'ಗಳನ್ನ ನಗ್ನಗೊಳಿಸಿದ ವಿಕಿಲೀಕ್ಸ್ಸುದ್ದಿಯ ಒಳನೋಟ :

 • ಮೊಟ್ಟ ಮೊದಲಿಗೆ ತಿಳಿದುಕೊಳ್ಳಬೇಕಿರುವುದು : ವಿಕಿಲೀಕ್ಸ್ ಒಂದು ಪತ್ರಿಕಾ ಮಾಧ್ಯಮ.
 • ಇದಾದ ನಂತರ ತಿಳಿಯಬೇಕಿರುವುದು : Wiki Leaks ಸಂಸ್ಥೆಗೂ Wikipedia ( Wikimedia Foundation ) ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂಬುದು.
 • ಸನ್ ಶೈನ್ ಪ್ರೆಸ್ ಇದರ ಮಾಲೀಕ.
 • ಜೂಲಿಯನ್ ಅಸ್ಸಾಂಜ್ ಎಂಬ ಆಸ್ಟ್ರೇಲಿಯಾ ಪ್ರಜೆ ಇದರ ಸಂಸ್ಥಾಪಕ ಎಂದು ಅನೇಕ ಕಡೆ ವರದಿಯಾಗಿದ್ದರೂ, ಇದರ ಹಿಂದೆ ಬಹುರಾಷ್ಟ್ರೀಯ ಮೆದುಳುಗಳ ಬುದ್ಧಿ ಚಾತುರ್ಯವಿದೆ. ಈ ಸಂಸ್ಥೆಯ ಸ್ಥಾಪನೆಯ ಹಿಂದೆ ಚೀನೀ Dissident ಗಳಿದ್ದಾರೆ , ಪತ್ರಕರ್ತರಿದ್ದಾರೆ , ಗಣಿತಜ್ಞರಿದ್ದಾರೆ , US, Taiwan, Europe, Australia & South Africaದ ಕಂಪ್ಯೂಟರ್ ತಜ್ಞರಿದ್ದಾರೆ ...ಎಂದು ಇನ್ನೊಂದು ವರದಿ ಹೇಳುತ್ತದೆ.
 • 2006ರಲ್ಲಿ ಪ್ರಾರಂಭವಾದ ಈ ಸಂಸ್ಥೆಯ ಧ್ಯೇಯ ತಿಳಿಯಬೇಕಂದ್ರೆ ಅದರ ಸ್ಲೋಗನ್ ಓದಿದರೆ ಸಾಕು :  
Wiki Leaks : We Open Governments

ಜೂಲಿಯನ್ ಅಸ್ಸಾಂಜ್
 • ಪತ್ರಿಕಾ ಮಾಧ್ಯಮಕ್ಕೆ ವಿವಿಧ ರೂಪಗಳಿರುವ ಹಾಗೆ (ಕಾಗದ, ರೇಡಿಯೋ, ಟಿವಿ..) ಸದರಿ ಪತ್ರಿಕಾ ಮಾಧ್ಯಮದ ರೂಪ : ಅಂತರಜಾಲ ತಾಣ. ಇದೊಂದು Document Archive Website Cum Newspaper.
 • ಅದು ಹೇಗೆ ಇವರು ಸರ್ಕಾರದ Classified (ರಹಸ್ಯ) ಮಾಹಿತಿಗಳನ್ನ ಹೀಗೆ ಜಗತ್ತಿನ ಮುಂದಿಡುತ್ತಾರೆ ? ಅದು ಕಾನೂನು ಬಾಹಿರವಲ್ಲವೇ ? ಎಂಬುದು ನಿಮ್ಮ ಸಂದೇಹವಾಗಿದ್ದರೆ : 
 

ಮೊದಲು ತಿಳಿಯಬೇಕಿರುವುದು, ವೆಬ್ ಸೈಟ್ ಒಂದು ಹೇಗೆ ಕೆಲಸ ಮಾಡುತ್ತದೆ ಅಂತ.
ಪ್ರಥಮತರವಾಗಿ ನೀವು ತೆರೆಯಬೇಕೆಂದಿರುವ ವೆಬ್ ಸೈಟ್ ನ ಉದ್ದೇಶವನ್ನ ನಿಕ್ಕಿ ಮಾಡಿಕೊಳ್ಳಬೇಕು. ಅದು ಯಾಕಂದ್ರೆ ನಿಮ್ಮ ಉದ್ದೇಶಕ್ಕೆ ತಕ್ಕ ಹಾಗೆ Storage, Site Address Extension ... ಇತ್ಯಾದಿಗಳಿರುತ್ತವೆ. ಅಂದರೆ ನೀವು ದಿನೇ ದಿನೇ ಹೊಸ ಹೊಸ ಮಾಹಿತಿಗಳನ್ನ ಅಲ್ಲಿ ಸೇರಿಸುವವರಾಗಿದ್ದರೆ ನಿಮಗೆ ಒಂದೆರಡು GB ಗಳು ಸಾಲದೇ ಹೋಗಬಹುದು. ಆಮೇಲೆ, ಸೈಟ್ ನ ಮಾಹಿತಿಗನುಗುಣವಾಗಿ Site Address Extension ಆರಿಸಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ವೆಬ್ ಸೈಟ್ ಅನ್ನ ಶೈಕ್ಷಣಿಕ ಉದ್ದೇಶಗಳಿಗೆ ಬಳಸಬೇಕು ಅಂತಿದ್ದರೆ, www.shikshana.edu ಅಥವಾ www.shikshana.ac.in  ಅಂತಲೂ, ನೀವು TV Channel ಒಂದರ ಒಡೆಯರಾಗಿದ್ದು, ಅದನ್ನ ವೆಬ್ಬಾಗಿಲಿನ ಮೂಲಕ ತೋರಿಸುವ ಉಮೇದಿಯಿದ್ದರೆ, www.kannadachannel.tv ಅಂತಲೂ ...ಇತ್ಯಾದಿ  ಎಲ್ಲಾ ಸಿಗುತ್ತವೆ. ನೀವಿಲ್ಲಿ ಗಮನಹರಿಸಬೇಕಾದ ಅಂಶವೆಂದರೆ ನಿಮ್ಮ ವೆಬ್ ತಾಣದ ಹೆಸರು ನೀವು ನೀಡಬಯಸಿರುವ ನಿಮ್ಮ ತಾಣದ ಮಾಹಿತಿಗಳ ಬಗ್ಗೆ ಒಂದು ಪದದಲ್ಲಿ ಸೂಚಿಸುವಂತಿದ್ದು, ಆಕರ್ಷಣೀಯವಾಗಿರಬೇಕು. ಇದಿಷ್ಟು ವೆಬ್ ವಿಳಾಸದ ಹೆಸರಿನ ಮಾತಾಯಿತು.
ಮುಂದಿನ ಹೆಜ್ಜೆ ನಿಮ್ಮ ವೆಬ್ ಪುಟದ ವಿನ್ಯಾಸ. ಇದಕ್ಕೆ  WE DO WEB DESIGNING  HERE ಎಂಬ ಬೋರ್ಡ್ ಹಾಕಿರುವ ಅಂಗಡಿಗಳಿಗೆ ಹೋಗಬೇಕು. ಅವರು ನಿಮ್ಮ ತಾಣದ ಮುಖಪುಟ ಹೇಗಿರಬೇಕು, ವೆಬ್ಬಾರ್ಥಿ ನಿಮ್ಮ ತಾಣದ ಮಾಹಿತಿಗಳನ್ನ ಹೆಕ್ಕುವ ವೈವಿಧ್ಯ ವಿಧಗಳು .. ಇತ್ಯಾದಿಗಳನ್ನೊಳಗೊಂಡ Menu Card ಅನ್ನ ನಿಮ್ಮ ಮುಂದೆ ತೆರೆದಿಡುತ್ತಾರೆ.  ಅಷ್ಟೇ ಅಲ್ಲದೆ ನಿಮ್ಮ ಪರವಾಗಿ ಅವರೇ ತಾಣವನ್ನ ಕಾಲದಿಂದ ಕಾಲಕ್ಕೆ Update ಕೂಡ ಮಾಡುತ್ತಾರೆ. ನಿಮ್ಮ ಜೇಬಿಗೆ ಸರಿಹೊಂದುವ, ನಿಮ್ಮ ಮನಕ್ಕೊಪ್ಪುವ ವಿನ್ಯಾಸದ, ನಿಮ್ಮ ತಾಣ ಸಾರಬೇಕಿರುವ ಧ್ಯೇಯ ತಿಳಿಸಲನುಕೂಲವಾಗುವ ಮೆದು / ಗಾಢ ಬಣ್ಣ .. ಇತ್ಯಾದಿ ಅಂಶಗಳನ್ನ ನೋಡಿಕೊಂಡು ಅಂತಿಮಗೊಳಿಸಬೇಕು. ಇದಿಷ್ಟನ್ನ ಕೇಳಿದ ನಂತರ Website ಬಗ್ಗೆ ನಿಮಗೊಂದು ಕಲ್ಪನೆ ಮೂಡಿರಬಹುದು. ಆ ಕಲ್ಪನೆಯನ್ನ ಗಟ್ಟಿಗೊಳಿಸಲು, ವಿವಿಧ ರಂಗದವರು ತಮ್ಮ ಧ್ಯೇಯ & ಉದ್ದೇಶ & ಕಲ್ಪನಾ ಲಹರಿಯನ್ನ ಸಾರುವ ತಾಣಗಳನ್ನ ಹೇಗೆ ವಿನ್ಯಾಸಗೊಳಿಸಿಕೊಂಡಿದ್ದಾರೆ ಅಂತ ಕೆಲವು ಉದಾಹರಣೆಗಳ ಮೂಲಕ ನೋಡೋಣ ಬನ್ನಿ :
ವಿಷಯವನ್ನ ನಿಕ್ಕಿ ಮಾಡಿಕೊಂಡಾಯಿತು. ಮಾಹಿತಿಯನ್ನ ಬರೆದಿಟ್ಟುಕೊಂಡಾಯಿತು.  ಒಪ್ಪವಾದ ಓರಣವೂ ಮಾಡಿ ಆಯಿತು. ಇಷ್ಟು ಮಾತ್ರ ಆದರೆ ನೀವು ನಿರ್ಮಿಸಿದ ತಾಣವನ್ನ ನಿಮ್ಮ ಮನೆಯ ಏಕೈಕ ಕಂಪ್ಯೂಟರ್ ಪರದೆಯ ಮೇಲೆ ನೀವೊಬ್ಬರು ಮಾತ್ರ ನೋಡಲು ಸಾಧ್ಯವಾಗುತ್ತದೆ. ನಿಮ್ಮ ಉದ್ದೇಶ ನಿಮ್ಮ ಸಂದೇಶವನ್ನ ಜಗದಗಲ ಸಾರುವುದು ತಾನೇ ? ಹಾಗಿದ್ದರೆ, ಮುಂದಿನ ಹಂತವಾಗಿ ನೀವು ಸಂಗ್ರಹಿಸಿ, ಸಾರಬಯಸಿರುವ ಮಾಹಿತಿಯನ್ನ ಜಗದೆಲ್ಲಾ ವೆಬ್ಬಿಗರಿಗೆ ಸಿಗುವ (Access) ಜಾಗದಲ್ಲಿ ಇರಿಸಬೇಕು. ಅದುವೇ Web Hosting.

WE DO WEBSITE HOSTING : ಅಂತ ನೀವು ಎಲ್ಲಾದರೂ ವಿಜ್ಞಾಪನೆಗಳನ್ನ ನೋಡಿಯೇ ಇರುತ್ತೀರಿ. ಅವರ ಕೆಲಸ ಅಂದ್ರೆ  ವೆಬ್ ಸೈಟ್  ಒಂದರ ಸಮಗ್ರ ಮಾಹಿತಿಯನ್ನ ಜಗತ್ತಿನೆಲ್ಲೆಡೆಯ ಜನರಿಗೆ ನಿಲುಕುವ ಹಾಗೆ ಒಂದೆಡೆ(Serverನಲ್ಲಿ) ಸಂಗ್ರಹಿಸಿಡುವುದು. ಈ ಕೆಲಸ ಮಾಡಲು ಒಂದು Host Site ಅಂತ ಇರುತ್ತದೆ. ಅದು ನಿಮ್ಮ ತಾಣದ ಎಲ್ಲ ಮಾಹಿತಿಗಳನ್ನ ಒಂದೆಡೆ ಕೂಡಿಡುವ ಕೆಲಸ ಮಾಡುತ್ತದೆ. ಅಂದರೆ ನೀವು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಆ ತಾಣವನ್ನ ಜಾಲಾಡಲು ಪ್ರಾರಂಭಿಸಿದರೂ, ಸದರಿ Host ನಿಂದ ನಿಮಗೆ ಮಾಹಿತಿ ರವಾನೆಯಾಗುತ್ತದೆ. ಹಾಗೆ ನಿಮಗೆ ಲಭ್ಯವಾಗುವ ಮಾಹಿತಿ ಕೂಡಿಡುವ ಜಾಗ ತುಂಬಾ ದುಬಾರಿಯಾಗಿದ್ದು ನನ್ನ ತಿಳುವಳಿಕೆಯ ಪ್ರಕಾರ 1GB Storage ಗೆ ಮತ್ತು 1 ವರ್ಷದ ಅವಧಿಗೆ ರೂ.10000/-. ಈ ದುಬಾರಿ ವೆಚ್ಚವನ್ನ ನಿಭಾಯಿಸಲಿಕ್ಕಾಗದ ಮತ್ತು ಹೊಸತನವನ್ನ ಹಂಚುವ ಹುಮ್ಮಸ್ಸಿನ ನಮ್ಮಂಥವರಿಗೆಂದೇ ಇಂದು Blog ಎಂಬ PseudoWebsite ಗಳು ಸೃಷ್ಟಿಯಾಗಿರುವುದು. Blog ಗಳು ಉಚಿತ Storage ನೀಡುವುದಲ್ಲದೇ, ಅನೇಕ ವಿಶಿಷ್ಟ ವಿನ್ಯಾಸಗಳ ಮೂಲಕ ನಿಮ್ಮ ಮನದ ಲಹರಿಯನ್ನ ಹರಿಯಬಿಡಲಿಕ್ಕೆ ಸಹಾಯಕವಾಗಿವೆ. ಇಂತಿಪ್ಪ Blog ಲೋಕದ ಕೆಲವು ಉದಾಹರಣೆಗಳನ್ನ ನೋಡೋಣ :
ಸದರಿ Host ಗಳಲ್ಲಿ ನೀವು ನಿಮ್ಮಿಷ್ಟದ ಮಾಹಿತಿಯನ್ನ ಸೇರಿಸುವ ಸ್ವಾತಂತ್ರ್ಯವಿದ್ದರೂ ಕೂಡ, Website Host Site ಎಂಬುದು ಗೋದ್ರೇಜ್ ತಿಜೋರಿಯ ಹಾಗೆ ಸುರಕ್ಷಿತ ತಾಣವೇನಲ್ಲ. ತಿಜೋರಿಗಾದರೆ ಕೀಲಿಕೈ ನಿಮ್ಮ ಬಳಿ ಇರುತ್ತದೆ. ಆದರೆ ಇಲ್ಲಿ ಹಾಗಲ್ಲ. ನಿಮಗೆ ತಿಳಿದಿದೆಯೋ ಇಲ್ಲವೋ, ಪ್ರತಿ ದೇಶದ ಅಧಿಕೃತ Intelligence Agency ಯವರು ತಮ್ಮ ದೇಶದಲ್ಲಿ ನೆಲೆಗೊಂಡಿರುವ Serverಗೆ ನಂಟಸ್ತಿಕೆ ಹೊಂದಿರುವ ಯಾವುದೇ ಅಂತರಜಾಲ ತಾಣದ ಆಗುಹೋಗುಗಳನ್ನ ತಮ್ಮ ಗಸ್ತಿನಲ್ಲಿಡಬಹುದು. ನೀವು ಸೇರಿಸುವ ಮಾಹಿತಿ ಆಕ್ಷೇಪಾರ್ಹವಾಗಿದ್ದರೆ, ನಿಮ್ಮ ತಾಣವನ್ನ ಸಾರ್ವಜನಿಕರ ಬಳಕೆಯಿಂದ ದೂರವಿಡುವ ಅಥವಾ ಅದನ್ನ ತೆಗೆದೇ ಹಾಕುವ ಸಾಧ್ಯತೆ ಇರುತ್ತದೆ.

 

ವಿಷಯ ಹೀಗಿರುವಾಗ, ವಿಕಿಲೀಕ್ಸ್ ಜಗದ ದೊಡ್ಡಣ್ಣನನ್ನ ಹೀಗೆ ಬತ್ತಲೆ ಮಾಡಿತಲ್ಲಾ !! ಈ ತಾಣಕ್ಕೆ ವ್ಹಾ ! ಎಂಥ ಮೀಟರ್ !! ಅಂತ ನಿಮ್ಮ ಉದ್ಗಾರವಾದರೆ, ಇಲ್ಲಿದೆ ಉತ್ತರ.

ಮೇಲಿನ ಪ್ಯಾರಾದಲ್ಲಿ ಗಮನಿಸಬೇಕಾದ ಅಂಶ ಎಂದರೆ ...ತಮ್ಮ ದೇಶದಲ್ಲಿ ನೆಲೆಗೊಂಡಿರುವ Server... ಎಂಬುದು. ಈ Clause ಏನಿದೆಯಲ್ಲಾ ಇದೇ ವಿಕಿಲೀಕ್ಸ್ ಗೆ ವರವಾಗಿ ಪರಿಣಮಿಸಿರುವುದು. ಜೂಲಿಯನ್ ಅಸ್ಸಾಂಜ್ ಪ್ರಕಾರ ಸದರಿ ವಿಕಿಲೀಕ್ಸ್ ತಾಣದ Host Site Central Server ಸ್ವೀಡನ್ ದೇಶದಲ್ಲಿದೆ. ಅದರಲ್ಲಿ ಮುಖ್ಯವಾಗಿ PRQ ಎಂಬ ಅಸಾಧ್ಯ ಛಾತಿಯುಳ್ಳ Website Hosting ಕಂಪೆನಿಯ ಸಂರಕ್ಷಣೆಯಲ್ಲಿದೆ. ಸದರಿ PRQ ಸಂಸ್ಥೆ, ತನ್ನ ಮುಖಪುಟದಲ್ಲಿ ತನ್ನ ಸಾಮರ್ಥ್ಯದ ಬಗ್ಗೆ ಹೇಳುತ್ತಾ ಏನು ಹೇಳುತ್ತದೆ ಗೊತ್ತಾ ?
 1. Refugee Hosting
 2. Confidentiality
 3. Technical Proficiency
ಇವಿಷ್ಟು ತನ್ನ ಅಗ್ಗಳಿಕೆಗಳು ಎಂದಿದೆ. (( ನೀವೂ ಓದಿ : ಇಲ್ಲಿ ಕ್ಲಿಕ್ಕಿಸಿ )) ಇದರ ಜೊತೆಗೆ ಅತಿ ಮುಖ್ಯ ಅಂಶವೇನೆಂದರೆ ಸ್ವೀಡನ್ ದೇಶದ ಕಾನೂನಿನ ಪ್ರಕಾರ ತನ್ನ ದೇಶದಲ್ಲಿ ನೆಲೆಗೊಂಡಿರುವ ಯಾವುದೇ ಪತ್ರಿಕಾ ಮಾಧ್ಯಮಕ್ಕೆ ಅದು ಸಂಗ್ರಹಿಸಿ ಬಿತ್ತರಿಸಿದ ಸುದ್ದಿಯ ಮೂಲ ಯಾವುದು ಅಂತ ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಇದಕ್ಕೂ ಮಿಗಿಲಾಗಿ ತನ್ನ ದೇಶದಲ್ಲಿ ನೆಲೆಗೊಂಡಿರುವ ಅಂಥ ಸಮೂಹ ಮಾಧ್ಯಮಗಳಿಗೆ ಕಾನೂನು ರೀತ್ಯಾ ರಕ್ಷಣೆ ನೀಡುವ ಜವಾಬ್ದಾರಿಯನ್ನೂ ಅಲ್ಲಿನ ಸರ್ಕಾರ ಹೊತ್ತಿದೆ. ಇವೆರಡು ಅಂಶಗಳನ್ನ ಆಧರಿಸಿ ವಿಕಿಲೀಕ್ಸ್ ಸಂಸ್ಥೆ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸುದ್ದಿಗಳನ್ನ ಸ್ಫೋಟಿಸುತ್ತಿದೆ.

ಇಷ್ಟು ಸಾಕು ಈ ವಿಕಿ ಲೀಕ್ಸ್ ಪತ್ರಿಕೆಗೆ ಇಂಥ ಭಯಂಕರ ಛಾತಿ ಹೇಗೆ ಬಂತು ಅಂತ ತಿಳಿಯಲಿಕ್ಕೆ. ಅಲ್ವಾ ?
 • ಇಲ್ಲಿ ನೀಡಿರುವ ಮಾಹಿತಿಗೆ ಪೂರಕವಾಗಿ ನಿಮಗೆ ಏನೇನು ತಿಳಿದಿದೆ ?
 • ನಿನ್ನೆ ರವಿವಾರ ಹೊರ ಬಿದ್ದಿರುವ ಭಯಾನಕ ಸತ್ಯಗಳು ಯಾವುವು ಅಂತ ನೀವು ಪಟ್ಟಿ ಮಾಡಬಲ್ಲಿರಾ ?
 • ಗೊತ್ತಿದ್ರೆ : ಪ್ರತಿಕ್ರಿಯಿಸಲು ಹಿಂಜರಿಯಬೇಡಿ.

: ರವಿ

  2 comments:

  Blogger said...

  DreamHost is ultimately the best hosting provider for any hosting plans you need.

  Blogger said...

  WP-land - $5 a month Wordpress hosting.

  ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

  ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ