ಸುದ್ದಿ : ಶೈಕ್ಷಣಿಕ ಹಣಕಾಸು ನೆರವನ್ನ ಕಡಿತಗೊಳಿಸಲು ತೀರ್ಮಾನಿಸಿದ ಇಟಲಿ ಸರ್ಕಾರದ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
|
ಜಾಗತಿಕ ನಕ್ಷೆಯಲ್ಲಿ ಇಟಲಿ |
|
ಇಟಲಿ ನೆರೆಹೊರೆ |
|
ವ್ಯಾಟಿಕನ್ ಸಿಟಿ |
|
ಆಲ್ಪ್ಸ್ ಪರ್ವತಗಳ ವ್ಯಾಪ್ತಿ |
- ದಕ್ಷಿಣ ಮಧ್ಯ ಯುರೋಪ್ ನಲ್ಲಿ ಸ್ಥಿತಗೊಂಡಿರುವ ಇಟಲಿ, ಉತ್ತರದಲ್ಲಿ ಫ್ರಾನ್ಸ್, ಸ್ವಿಟ್ಜರಲ್ಯಾಂಡ್, ಆಸ್ಟ್ರಿಯಾ & ಸ್ಲೊವೇನಿಯಾ ದೇಶಗಳಿಂದ ಸುತ್ತುವರಿಯಲ್ಪಟ್ಟಿದೆ. ದಕ್ಷಿಣಕ್ಕೆ ಸಿಸಿಲಿ & ಸಾರ್ಡೇನಿಯಾ ದ್ವೀಪಗಳಿದ್ದು ಅವೂ ಕೂಡ ಇಟಲಿಯ ಅಧೀನ ಪ್ರದೇಶಗಳೇ ಆಗಿವೆ.
- ವಿಶೇಷತೆಯೆಂದರೆ : ಈ ದೇಶದ ಒಂದು ಪುಟ್ಟ ನಗರದಂತಿರುವ ವ್ಯಾಟಿಕನ್ ಸಿಟಿ, ಜಾಗತಿಕವಾಗಿ ದೇಶವೆಂದು ಮಾನ್ಯ ಮಾಡಲ್ಪಟ್ಟಿದೆ. ಹೀಗಾಗಿ ಅದನ್ನೂ ನೆರೆಯ ದೇಶವೆಂದೇ ಹೇಳಬೇಕು !!
- ದೇಶದ ಉತ್ತರದ ಗಡಿಯಗುಂಟ ಚಾಚಿಕೊಂಡಿರುವ ಆಲ್ಪ್ಸ್ ಪರ್ವತಗಳು ಉತ್ತರದ ದೇಶಗಳ ನಡುವಿನ ಗಡಿರೇಖೆಯಾಗಿ ಕೆಲಸ ಮಾಡುತ್ತಿವೆ. ಥೇಟ್ ನಮ್ಮ ಹಿಮಾಲಯದ ಹಾಗೆ. ಈ ಪ್ರದೇಶದಲ್ಲಿರುವ Mont Blanc ದೇಶದ ಅತಿ ಎತ್ತರದ ಪರ್ವತ.
- ದೇಶದ ಅತಿ ದೊಡ್ಡ ನದಿ ಪೋ(Po), ಫ್ರಾನ್ಸ್ ದೇಶಕ್ಕೆ ಅಂಟಿಕೊಂಡಿರುವ ಪಶ್ಚಿಮ ಗಡಿಯಲ್ಲಿ (ಆಲ್ಪ್ಸ್ ನಲ್ಲಿ) ಹುಟ್ಟಿ ಪೂರ್ವದೆಡೆಗೆ ಹರಿದು ಅಡ್ರಿಯಾಟಿಕ್ ಸಮುದ್ರ ಸೇರುತ್ತದೆ.
- ಸದರಿ ದೇಶ ಯುರೇಷಿಯನ್ ಪ್ಲೇಟ್ & ಆಫ್ರಿಕನ್ ಪ್ಲೇಟ್ ಸಂಧಿಸುವ ಸ್ಥಳದಲ್ಲಿರುವುದರಿಂದ ಜೀವಂತ ಜ್ವಾಲಾಮುಖಿಗಳು ಈ ದೇಶದಲ್ಲಿ ಕೆಲವಿವೆ.
: ರವಿ
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment