ಸುದ್ದಿಯಲ್ಲಿರುವ ಸ್ಥಳ ನಕ್ಷೆ :
- ಜಗತ್ತಿನ ನಾಲ್ಕನೇ ಅತಿ ದೊಡ್ಡ ದ್ವೀಪ ಮಡಗಾಸ್ಕರ್. ವಿಸ್ತೀರ್ಣದಲ್ಲಿ ಫ್ರಾನ್ಸ್ ಗಿಂತ ಸ್ವಲ್ಪ ದೊಡ್ಡದೇ !
- ದ್ವೀಪದ ಮಧ್ಯ ಭಾಗದ ಎತ್ತರದ ಪ್ರಸ್ಥಭೂಮಿ ಪೂರ್ವ ಕರಾವಳಿಯ ಕಡೆ ಭೂಮಿ ಕಡಿದಾಗಿದ್ದು, ಅಲ್ಲಿ ಮಳೆಕಾಡು ಸಣ್ಣ ಪ್ರಮಾಣದಲ್ಲಿ ಚಾಚಿಕೊಂಡಿದೆ. ಮಧ್ಯ ಎತ್ತರ ಪ್ರದೇಶದಿಂದ ಪಶ್ಚಿಮದ ಕಡೆಗಿನ ಭೂಮಿ ಕ್ರಮೇಣ ಜಾರಿಕೊಂಡಿದೆ.
- ಮಧ್ಯ ಪ್ರಸ್ಥಭೂಮಿಯಲ್ಲಿ ತಲೆ ಎತ್ತಿರುವ ಬೆಟ್ಟಗಳು ಇಳಿಜಾರಿನ ಕಾರಣದಿಂದ ಉಂಟಾಗಿರುವ ವಿಪರೀತವೆನ್ನುವ ಮಣ್ಣಿನ ಸವಕಳಿಯಿಂದ ಬೋಳಾಗಿದ್ದು, ಕೆಂಪು ಮಣ್ಣು ( Red Laterite Soil ) ತೆರೆಯಲ್ಫಟ್ಟು, ಆಕಾಶದಿಂದ ನೋಡಿದಾಗ ಕಾಣುವ ಭೂಪ್ರದೇಶಕ್ಕೆ ಅನ್ವರ್ಥಕವಾಗಿ Red Island (ಕೆಂಪು ದ್ವೀಪ) ಎಂದು ಕರೆಯಲಾಗಿದೆ.
- ಈ ದ್ವೀಪದಲ್ಲಿ ಎರಡೇ ಕಾಲಗಳು(ಋತುಗಳು) : ನವೆಂಬರ್ ನಿಂದ ಏಪ್ರಿಲ್ ವರೆಗೆ ಬಿಸಿಲು ಮತ್ತು ಮಳೆಯಿಂದ ಕೂಡಿದ ವಾತಾವರಣವಿದ್ದರೆ, ಮೇ ಯಿಂದ ಅಕ್ಟೋಬರ್ ವರೆಗೆ ತಂಪಾದ, ಒಣಹವೆಯ ವಾತಾವರಣವಿರುತ್ತದೆ.
: ರವಿ
No comments:
Post a Comment