ಎಷ್ಟು ದಿವಸ ರವಿ ಅನ್ನೋನೊಬ್ಬ ಬರೀತಾ ಹೋಗ್ತಾನೆ ಹೇಳಿ ? ಹಾಗೊಂದು ಪಕ್ಷ ಅವನು ಬರೆಯೋದೇ ಆದ್ರೂ, ದಿನ ಅವನೆಷ್ಟೇ ತರಹೇವಾರಿ ಅಡುಗೆ ಮಾಡಿ ಹಾಕಿದ್ರೂ ಅದು ಬರೋದು ಒಂದೇ ಅಡುಗೆ ಮನೆಯಿಂದ. ಅಂಥ ಅಡುಗೆ ವರ್ಷ ಕಳೆದರೂ ಬೇಸರ ಆಗೋದಿಲ್ಲ ಅನ್ನೋದಕ್ಕೆ ಪೂರ್ವ ನಿದರ್ಶನಗಳು ಕಡಿಮೆ.
ವಿಷಯ ಹೀಗಿರಬೇಕಾದ್ರೆ, ನಿಮಗೆ ಗೊತ್ತಿರೋ ವಿಷಯವನ್ನ ಹಂಚಿಕೊಳ್ಳೋ ಸಾರ್ಥಕತೆಯನ್ನ ಪಡೆದುಕೊಳ್ಳಿ. ಅಂಥದೊಂದು ಮುಕ್ತ ವೇದಿಕೆ ಇಲ್ಲಿ, ಸ್ಪರ್ಧಾರ್ಥಿ ತಾಣದಲ್ಲಿ ಉಚಿತವಾಗಿ ಲಭ್ಯವಿದೆ ಅನ್ನೋದನ್ನ ಮರೀಬೇಡಿ.
ನಿಮ್ಮಲ್ಲಿರಬಹುದಾದ ಹಿಂಜರಿಕೆಗಳನ್ನ ಪಟ್ಟಿ ಮಾಡ್ತೀನಿ ಕೇಳಿ :
- ನಾನು ಬರೆದ ವಿಷಯ ಈಗಾಗ್ಲೇ ಎಲ್ರೀಗೂ ಗೊತ್ತಿದ್ರೆ ? ::: ಗೊತ್ತಿದ್ರೆ ಅವನಿಗೆ ಗೊತ್ತಿರುತ್ರೀ ... ಬರೀತಿರೋ ನಿಮಗಲ್ವಲ್ಲಾ ? ಇಲ್ಲಿ ಬರೆಯೋ ವಿಷಯಗಳೆಲ್ಲಾ ಒಬ್ಬರಿಗಲ್ಲಾ ಒಬ್ಬರಿಗೆ ಗೊತ್ತಿರುವಂಥವೇ. ಯಾರಿಗೂ ಗೊತ್ತಿಲ್ದೇ ಇರೋ ವಿಷಯ ಬರೆದ್ರೆ ಅದೊಂದು Research Paper ಆಗುತ್ತೆ. ನೀವಿಲ್ಲಿ ಬರೆದು, ಪ್ರಕಟವಾಗಬೇಕಾಗಿರೋ ಲೇಖನಗಳ ಹಿಂದಿರಬೇಕಾಗಿರುವ ಧ್ಯೇಯ ಇಷ್ಟೇ : ಲೇಖಕ ಆ ಲೇಖನದ ವಿಷಯವನ್ನ ಕುತೂಹಲದ ನೀರಿಗೆ ಇಳಿದು ಹುಡುಕಾಡಿ 'ಶೋಧಿ'ಸಿರಬೇಕು. ಆ ವಿಷಯ ಸಾಮಾನ್ಯರು ತಿಳಿದಿರುವ ಸಾಮಾನ್ಯ ವಿಷಯವಾಗಿದ್ದರೂ ಪ್ರತಿ ವ್ಯಕ್ತಿ / ವಿದ್ಯಾರ್ಥಿ / ಲೇಖಕ ಅದನ್ನ ಬಿತ್ತರಿಸುವ ಸಾಮರ್ಥ್ಯ ಪ್ರತಿ ವ್ಯಕ್ತಿಯ Finger Print ನಷ್ಟೇ Unique. ನಿಮ್ಮ ಪದಗಳಲ್ಲಿ ಆ ಶಕ್ತಿ ತುಂಬಿಸಿ, ಅತಿ ಸಾಮಾನ್ಯ ವಿಷಯವನ್ನೂ ಕುತೂಹಲಕಾರಿಯಾಗಿ Present ಮಾಡುವ ಶಕ್ತಿಯನ್ನ ಬೆಳೆಸಿಕೊಳ್ಳಿ. ವಿಷಯ ಸಂಗ್ರಹ ನಿಮ್ಮ Prelims ಗೆ ಸಹಾಯ ಆದ್ರೆ, ವಿಷಯವನ್ನ Present ಮಾಡುವ ನಿಮ್ಮ Uniqueness ಮುಖ್ಯ ಪರೀಕ್ಷೆಗೆ ಸಹಾಯ ಮಾಡತ್ತೆ. Got My Point ? Thats Like A Good Boy !!
- ಲೇಖನಕ್ಕೆ ಕಚ್ಚಾ ಸಾಮಗ್ರಿ ಎಲ್ಲಿಂದ ಹುಡುಕ್ಲಿ ನಾನು ? ::: ಇದನ್ನ ನಾನು ಹೇಳಕ್ಕಾಗಲ್ಲ. ನಿಮ್ಮ ಲೇಖನದ ಹರವು ಆಧರಿಸಿ ಹುಡುಕಿ. ನಿಮ್ಮ ಮನೆ ಕಪಾಟಿನಲ್ಲಿರುವ ಪುಸ್ತಕಗಳು, ಊರ ಗ್ರಂಥಾಲಯ, ಕಾಲೇಜ್ / ಯುನಿವರ್ಸಿಟಿ ಲೈಬ್ರರಿ, ಗೂಗಲ್, ವಿಕಿಪೀಡಿಯಾ ... ಇವೆಲ್ಲಾ ನಿಮಗೆ ಸಹಾಯವಾಗಬಲ್ಲವು.
- ಬರೀಬೇಕು ಅಂತ ವಿಷಯ ಇಟ್ಕೊಂಡಿದೀನಿ.. ಮುಂದೇನು ? ::: ಮುಂದೇನು ತಕ್ಷಣ ಆ ಜ್ಞಾನ ಪುಟವನ್ನ ಕನ್ನಡ Unicode ನಲ್ಲಿ / Google Transliterator / gmail mailbox ನಲ್ಲಿರೋ ಪ್ರಾದೇಶಿಕ ಭಾಷೆಯನ್ನ ಟೈಪಿಸುವ ಟೂಲ್ ಬಳಸಿ ಬರೆದು ತುರ್ತಾಗಿ ಮಿಂಚಂಚೆ ಕಳಿಸಿ : ವಿಳಾಸ - spardharthi@gmail.com
ಈ ಮಾತುಕತೆಯ ಮುಂದಿನ ಲೇಖನ ರವಿ ಬಿಟ್ಟು ಮತ್ತೊಬ್ಬ ಆಸಕ್ತ " ಸ್ಪರ್ಧಾರ್ಥಿ " ಯದೇ ಇರಬೇಕು ಅಂತ ನಿರ್ಧಾರ ಮಾಡಿ ಆಗಿದೆ. ನೋಡೋಣ ಪ್ರತಿ ದಿನ ಸ್ಪರ್ಧಾರ್ಥಿ ತಾಣದ ಜ್ಞಾನಪುಟ ಓದುವ ನಿಮ್ಮಲ್ಲೆಷ್ಟು ಜನ ನಿಮ್ಮ ಪಾಲಿನ ಜ್ಞಾನಬುತ್ತಿಯನ್ನ ನಮ್ಮೊಂದಿಗೆ ಹಂಚಿ ತಿನ್ನುವ ಔದಾರ್ಯ ತೋರಿಸ್ತೀರಿ ಅಂತ !!
ಇಂತಿ ನಿಮ್ಮ,
ಸ್ಪರ್ಧಾರ್ಥಿ
.
No comments:
Post a Comment