ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 26, 2010

ಎಲ್ಲಿಲ್ಲಿ ನೋಡಿ ಎಲ್.ಇ.ಡಿ


:: ಎಲ್ಲಿಲ್ಲಿ ನೋಡಿ  ಎಲ್.ಇ.ಡಿ ::



ಲೈಟ್ ಎಮಿಟಿಂಗ್ ಡಯೋಡ್ ಎಂಬುದನ್ನು ಸಂಕ್ಷೇಪಿಸಿಕೊಂಡು ಎಲ್.ಇ.ಡಿ ಎಂದು ಕರೆಯಲ್ಪಡುವ  ಪುಟ್ಟ ವಿದ್ಯುದ್ದೀಪವನ್ನು  ನೀವು ಎಲ್ಲೆಲ್ಲೂ ನೋಡಿರುತ್ತೀರಿ, ಇಲ್ಲ ನೋಡಿಲ್ಲ ಅಂತೀರಾ ? ಹಾಗಾದ್ರೆ ನಿಮ್ಮ ಕಂಪ್ಯೂಟರ್ ನ ಕೀಲಿಮಣೆಯ ನಂಬರ್ ಲಾಕ್,  ಕ್ಯಾಪ್ಸ್ ಲಾಕ್, ಸ್ಕ್ರಾಲ್ ಲಾಕ್ ನ ಇಂಡಿಕೇಟರ್ ಗಳ ಕಡೆ ಕಣ್ಣಾಯಿಸಿ.  ಹಾ ಕಾಣಿಸ್ತಲ್ವಾ ಹಸಿರು ಬಣ್ಣದ ಪುಟ್ಟ ದೀಪ,  ಇವನ್ನೆ ಎಲ್.ಇ.ಡಿ. ಲ್ಯಾಂಪ್ಸ್ ಅನ್ನೊದು. ಇಂದು ನಾವು ದಿನನಿತ್ಯ ಬಳಸುವ ವಿದ್ಯುದ್ದುಪಕರಣಗಳಲ್ಲಿ, ಅಲಂಕಾರಿಕ ವಸ್ತುಗಳಲ್ಲಿ, ವಾಹನಗಳಲ್ಲಿ ಈ ಪುಟ್ಟ ಆಕರ್ಷಕ ದೀಪಗಳ ಬಳಕೆ ಸರ್ವೇ ಸಾಮಾನ್ಯವಾಗಿದೆ. ನಮ್ಮ ಬಿ.ಎಂ.ಟಿ.ಸಿ ಯ ನೂತನ ಬಸ್ ಗಳಲ್ಲಿ ಎಲ್.ಇ.ಡಿ. ಬಳಕೆಯ ನಾಮಫಲಕಗಳನ್ನು ದಿನನಿತ್ಯ ಕಾಣುತ್ತೇವೆ ಹಾಗೇ ರಾತ್ರಿ ಹೇಳದೇ ಕೇಳದೆ ವಿದ್ಯುತ್ ಕೈ ಕೊಟ್ಟಾಗ ಹೊತ್ತಿಸುತ್ತೇವಲ್ಲ ಎಮರ್ಜೆನ್ಸಿ ಲೈಟು ಅವುಗಳಲ್ಲೂ ಹಾಗೂ  ಸೌರ ವಿದ್ಯುದ್ದೀಪಗಳಲ್ಲೂ ಸಹ ಈ ಎಲ್.ಇ.ಡಿ.ಗಳು ಬಹುಸಂಖ್ಯೆಯಲ್ಲಿ ಬಳಕೆಯಾಗುತ್ತಿವೆ.


ಈ ಎಲ್.ಇ.ಡಿ. ಎಂಬುದು ಹೆಸರೇ ಸೂಚಿಸುವಂತೆ  ಬೆಳಕನ್ನು ಹೊರಸೂಸಬಲ್ಲಂತಹ ಡಯೋಡ್ ಆಗಿದೆ. ಒಂದು ಕಡೆ ಋಣಾತ್ಮಕ ವಿದ್ಯುದಾವೇಶಗಳಿರುವ ಎಲೆಕ್ಟ್ರಾನ್ ಗಳು ಹಾಗೂ ಇನ್ನೊಂದುಕಡೆ ಧನಾತ್ಮಕ ವಿದ್ಯುದಾವೇಶಗಳಿರುವ ಎಲೆಕ್ಟ್ರಾನ್ ಗಳಿರುವ ಎರಡು ಅರೆವಾಹಕ ಭಾಗಗಳನ್ನು ಸೇರಿಸಿ ಈ ಎಲ್.ಇ.ಡಿ. ಗಳನ್ನು ತಯಾರಿಸಲಾಗಿರುತ್ತದೆ. ವಿದ್ಯುತ್ ಹರಿದಾಗ ಧನಾತ್ಮಕ ಹಾಗೂ ಋಣಾತ್ಮಕ ವಿದ್ಯುದಾವೇಶಗಳು ಒಂದುಗೂಡಿ ಪೋಟಾನುಗಳ ರೂಪದಲ್ಲಿ ಬೆಳಕನ್ನು ಹೊರಸೂಸುತ್ತವೆ. ಎಲ್.ಇ.ಡಿ. ತಯಾರಿಕೆಯಲ್ಲಿ ಬಗೆಬಗೆಯ ಧಾತುಗಳನ್ನು ಬಳಸುವ ಮೂಲಕ ಬಣ್ಣಬಣ್ಣದ ಬಲ್ಬ್ ಗಳನ್ನು ತಯಾರಿಸಲಾಗುತ್ತದೆ.  ಬಣ್ಣ ಬಣ್ಣದ ಬೆಳಕು ಸೂಸುವ ಎಲ್.ಇ.ಡಿ.ಗಳನ್ನು ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ, ಸಿಗ್ನಲ್ ದೀಪಗಳಲ್ಲಿ, ನಾಮಫಲಕಗಳಲ್ಲಿ,   ವಿದ್ಯುತ್ ಉಪಕರಣಗಳಲ್ಲಿ ಬಳಸಿದರೆ, ಬಿಳಿಬೆಳಕು ಸೂಸುವ ಪುಟ್ಟ ಪುಟ್ಟ ಈ ದೀಪಗಳನ್ನು ಬಹುಸಂಖ್ಯೆಯಲ್ಲಿ ಒಗ್ಗೂಡಿಸಿ ಶುಭ್ರವಾದ, ತಂಪಾದ, ಹಿತಕರ ಬೆಳಕನ್ನು ಪಡೆಯಲಾಗುವ ಗೃಹ ಬಳಕೆಯ ದೀಪಗಳಲ್ಲಿ ಬಳಸಲಾಗುತ್ತದೆ.



ಅಮೇರಿಕಾದ ನಿಕ್ ಹೋಲೋನ್ಯಾಕ್ ಎಂಬ ವಿಜ್ಞಾನಿ 1962 ರಲ್ಲಿ ಮೊದಲ  ಎಲ್.ಇ.ಡಿ ಯನ್ನು ಸೃಷ್ಠಿಸಿದ. ಅಲ್ಲಿಂದೀಚೆಗೆ ಕ್ಷಿಪ್ರಗತಿಯಲ್ಲಿ ಜನಪ್ರಿಯವಾಗಿರುವ ಈ ಪುಟಾಣಿ ದೀಪಗಳು ಇಂದು ಸರ್ವವ್ಯಾಪಿಯಾಗಿವೆ. ಸಾಮಾನ್ಯ ವಿದ್ಯುತ್ ದೀಪಗಳಿಗಿಂತ ಹತ್ತು ಹನ್ನೆರಡು ಪಟ್ಟು ಕಾರ್ಯದಕ್ಷತೆ ಮತ್ತು ಬಾಳಿಕೆಯನ್ನು ಈ ಪುಟ್ಟ ದೀಪಗಳು ಹೊಂದಿದ್ದು.  ಸಮ ಪ್ರಮಾಣದ ವಿದ್ಯುತ್ ಪ್ರವಾಹದಲ್ಲಿ ಒಂದು ಎಲ್.ಇ.ಡಿ ಕನಿಷ್ಟ ಸುಮಾರು ಒಂದು ಲಕ್ಷಗಂಟೆಗಳಷ್ಟು ಬಾಳಿಕೆ ಬರಬಲ್ಲದು ಎಂದು ಅಂದಾಜಿಸಲಾಗಿದೆ. ಅತಿಕಡಿಮೆ ಓಲ್ಟೇಜಿನ ವಿದ್ಯುತ್ ಪ್ರವಾಹದಲ್ಲೂ ಸಹ ಬೆಳಕನ್ನು ಹೊರಸೂಸಬಲ್ಲ ಇವು ಕಡಿಮೆ ಬೆಲೆಯಲ್ಲಿ ಕೈಗೆಟಕುವ ವಿದ್ಯುದ್ ದೀಪಗಳಾಗಿವೆ. 


ಇಂದು ಎಲ್.ಇ.ಡಿ. ಬಳಕೆ ಕೇವಲ ಬೆಳಕಿಗಷ್ಟೇ ಅಲ್ಲದೆ ಅಲ್ಟ್ರಾ ವೈಲೆಟ್  ಮೂಲಕ ನೀರನ್ನು ಶುದ್ಧೀಕರಿಸುವ ಯೂವಿ ಟ್ರೀಟೆಡ್ ತಂತ್ರಜ್ಞಾನಕ್ಕೂ ಕಾಲಿಟ್ಟಿದ್ದು ಇಲ್ಲಿ ಯಶಸ್ವಿಯಾದರೆ ವಿದ್ಯುತ್ ಸಂಪರ್ಕ ಇಲ್ಲದಂತಹ ಸ್ಥಳಗಳಲ್ಲೂ ಸೌರಶಕ್ತಿಯ ಮೂಲಕ ನೀರಿನ ಶುದ್ಧೀಕರಣವನ್ನು ಸಾಧ್ಯವಾಗಿಸಬಹುದು ಎಂಬುದು ನಮ್ಮ ವಿಜ್ಞಾನಿಗಳ ಕನಸಾಗಿದೆ.

ಈ ವಿದ್ಯುದ್ ದೀಪಗಳ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸುವ ಮತ್ತು ಇನ್ನೂ ಕಡಿಮೆ ದರದಲ್ಲಿ ಕೈಗೆಟುಕುವಂತಹ ಎಲ್,ಇ.ಡಿಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳ ಪ್ರಯತ್ನ ನಿರಂತರವಾಗಿ ಸಾಗಿದ್ದು ಎಲ್ಲೆಲ್ಲೂ ಎಲ್.ಇ.ಡಿ ಗಳ ಬೆಳಕೇ ರಾರಾಜಿಸುವ ಕಾಲವು ಸನ್ನಿಹಿತವಾಗುತ್ತಿದೆ.

ಎಲ್.ಇ.ಡಿ.ಗಳ ಬಗ್ಗೆ ಹೆಚ್ಚು ತಿಳಿಯಲು
http://kn.wikipedia.org/wiki/ಲ್‌ಇಡಿ_ಲ್ಯಾ೦ಪ್

: ಪರಶು 



.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ