ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 23, 2010

T9 Dictionary : Text on 9 Keys

ಮೊಬೈಲ್ ನಮ್ಮಗಳ ಕೈಗೆ ಬಂದಾಗಿಂದ ಈ ಟಿ9 ಡಿಕ್ಷನರಿ (T9 Dictionary) ಯನ್ನ ಬಳಸ್ತಾ ಇದೀವಿ. ಆದ್ರೆ ಅದು ಏನು ಅದನ್ನ ತಯಾರಿಸಿದವರು ಯಾರು, ಯಾವ ಯಾವ ಕಂಪೆನಿಗಳು ಅದನ್ನ ಬಳಸ್ತಿದಾವೆ, ಅದಕ್ಕೆ ಪ್ರತಿಸ್ಪರ್ಧಿಗಳು ಯಾರಾದರೂ ಇದಾರಾ ? ಇದ್ರೆ ಅವರ್ಯಾರು ? ಇವುಗಳ ಬಗ್ಗೆ ತಲೆ ಕೆಡಿಸಿಕೊಂಡಿದೀರಾ ? ಇಲ್ವಾ ? ಹಾಗಿದ್ರೆ ಇವತ್ತು ಆ ಕೆಲಸ ಮಾಡಿ ಬಿಡಿ.

Ofcourse ಇದೊಂದು Software. Predictive Text Technology ಅಂತ ಸಾಮಾನ್ಯ ಹೆಸರು. ಆದರೆ ವಿವಿಧ ಕಂಪೆನಿಗಳು ತಮ್ಮದೇ ಧಾಟಿಯಲ್ಲಿ ಈ ಸಾಫ್ಟವೇರ್ ಅನ್ನ ತಯಾರಿಸಿರುವುದರಿಂದ ಅವಕ್ಕೆ ತಮ್ಮದೇ ಹೆಸರು ನೀಡಿದ್ದಾರೆ. ( ಉದಾ : ಟೂತ್ ಪೇಸ್ಟ್ ಸಾಮಾನ್ಯ ಹೆಸರು. ಅದನ್ನ ತಯಾರು ಮಾಡೋರು ಅದನ್ನ ಕೋಲ್ಗೇಟ್, ಪೆಪ್ಸೊಡೆಂಟ್, ಮಿಸ್ ವಾಕ್ .. ಇತ್ಯಾದಿ ಹೆಸರಿಟ್ಟ ಹಾಗೆ ) ಮೂಲವಾಗಿ ಇದನ್ನ ತಯಾರಿಸಿದವರು Tegic Communications ಅನ್ನುವ ಕಂಪೆನಿಯವರು. ಇಂದು ಈ T9 Dictionary ಯನ್ನ LG, NEC, Nokia, Samsung Electronics, Siemens, Sony Ericsson... ಇತ್ಯಾದಿ ಕಂಪೆನಿಗಳು ತಮ್ಮ ಮೊಬೈಲ್ ಫೋನ್ ಗಳಲ್ಲಿ ಬಳಸುತ್ತಿವೆ.

ಪ್ರತಿಸ್ಪರ್ಧಿ Software ಗಳೂ ಇಲ್ಲದೇ ಇಲ್ಲ. ಅವೆಂದರೆ, 

  • SureType : RIM ನವರ Blackberry ಗಾಗಿ
  • iTap : Motorola ದಿಂದ ತನ್ನ ಫೋನುಗಳಿಗಾಗಿ
  • LetterWise : wordwise ಕಂಪೆನಿಯಿಂದ


ನಮ್ಮ ಮೊಬೈಲ್ ನ KeyPad ಮೇಲೆ 1 ರಿಂದ 9ರವರೆಗೆ ಅಂಕಿಗಳನ್ನ ಮುದ್ರಿಸಿ, ಆ ಅಂಕಿಗಳ ಜೊತೆಯೇ A ಯಿಂದ Z ವರೆಗೆ ಇಂಗ್ಲೀಷ್ ಅಕ್ಷರಗಳನ್ನೂ ಮುದ್ರಿಸಿರುವುದು ನಿಮಗೆ ಗೊತ್ತು. ಆ 9 Key ಗಳನ್ನ ಬಳಸಿ ನಮಗೆ ಬೇಕಾದ ಶಬ್ದವನ್ನ ಟೈಪಿಸಿವುದು ಹೇಗೆ ಅಂತಲೂ ನಿಮಗೆ ಗೊತ್ತು. ಈಗ ನಾನು ಗೊತ್ತು ಮಾಡಿಸಲಿಕ್ಕೆ ಹೊರಟಿರುವುದು.....
ಈ ತಂತ್ರಜ್ಞಾನದಲ್ಲಿ ಒಂದೆ ತರಹದ Key ಗಳನ್ನ ಒತ್ತಿದಾಗ ಮೂಡುವ ಶಬ್ದಗಳನ್ನ Textonyms ಅಂತ ಕರೀತಾರೆ. ಅಂದ್ರೆ,


ನೀವು 326 ಅಂತ Key ಗಳನ್ನ ಒತ್ತಿದರೆ dam, fan ... ಶಬ್ದಗಳು ಮೂಡುತ್ತವೆ. ಇಲ್ಲಿ fan ಇದು dam ನ Textonym.

ಈ ತಂತ್ರಜ್ಞಾನದಲ್ಲಿ UDB ( User Database ) ಅನ್ನುವ ಅಂಶವೊಂದಿದೆ. ಇದರ ಮೂಲಕ ನೀವು ಬಳಸುವ ಆದರೆ ಸದರಿ Dictionary ಯಲ್ಲಿಲ್ಲದ ಶಬ್ದವನ್ನ ಸೇರಿಸಬಹುದು, ಮುಂದೆ ಬೇಕಾದಾಗ ಅದು ನಿಮ್ಮ ಟಿ9 ಡಿಕ್ಷನರಿಗೆ ಸೇರಿಸಲ್ಪಟ್ಟಿರುತ್ತದೆ. ಇಷ್ಟು ಟಿ9 ಪುರಾಣ.


ಹೆಚ್ಚಿನ ಮಾಹಿತಿಗಾಗಿ ಕಂಪೆನಿಯ ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ಕಿಸಿ

: ರವಿ

2 comments:

ಪರಶು.., said...

ಹಾಯ್ ರೇವಪ್ಪಾ... t9 ಡಿಕ್ಷನರಿ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದೀರಿ t9 ಡಿಕ್ಷನರಿ ಅನ್ನೋದು ಗೊತ್ತಿತ್ತು, ಅದನ್ನು ಉಪಯೋಗಿಸಿ ಟೈಪ್ ಮಾಡೋದು ಗೊತ್ತಿತ್ತು ಆದರೆ ಅದರ ಪೂರ್ವಪರ ತಿಳಿದಿರಲಿಲ್ಲ... ಇಂತಹ ಉಪಯುಕ್ತ ಮಾಹಿತಿಗಳು ಹೆಚ್ಚು ಹೆಚ್ಚು ಮೂಡಿ ಬರಲಿ..

MANJUDADA said...

ನಿಜವಾಗಿ T9 ಡಿಕ್ಷನರಿ ಬಗ್ಗೆ ನೀವು ನೀಡಿರುವ ಮಾಹಿತಿ ತುಂಬಾ ಜನಕ್ಕೆ ತಿಳಿದಿರಲಿಕ್ಕಿಲ್ಲ.ಉಪಯುಕ್ತ ಮಾಹಿತಿ ನೀಡಿದ್ದೀರಿ.ಮತ್ತು T9 ಡಿಕ್ಷನರಿಗೆ ಪರ್ಯಾಯವಾಗಿರುವ software ಗಳ ಬಗ್ಗೆ ಕೂಡ ಮಾಹಿತಿ ಇದೆ.ನಿಮ್ಮ ಈ ರೀತಿಯ ಲೇಖನಗಳು ನಮ್ಮ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ.ಖಂಡಿತ ಒಳ್ಳೆ ಪ್ರಯತನ.ಹೀಗೆ ಮುಂದುವರಿಸಿ.MBM.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ