ನಿಮಗೆಲ್ಲ ತಿಳಿದಿರುವ ವಿಷಯವೊಂದನ್ನೇ ಇವತ್ತು ಹಾಗೇ ಸುಮ್ಮನೇ ಅಂತ ಹೇಳ್ತೀನಿ ಕೇಳಿ : ಭಾರತದಲ್ಲಿನ ಬ್ಯಾಂಕುಗಳಲ್ಲಿ ನೌಕರಿಗಾಗಿ ಅರ್ಜಿ ಕರೆಯುವುದಕ್ಕೆ ಸಂಬಂಧಿಸಿದಂತೆ ಕ್ಲರ್ಕ್ ಮತ್ತೆ ಪ್ರೊಬೇಷನರಿ ಆಫೀಸರ್ ಈ ಎರಡು ಹುದ್ದೆಗಳು ಮಾತ್ರ ಜಾಸ್ತಿ ಪ್ರಚಾರ ಪಡೆದಂತವು. ( ಅದಕ್ಕೆ ಕಾರಣವೂ ಇಲ್ಲದೇ ಇಲ್ಲ ಬಿಡಿ.. ಅಲ್ಲಿ ಬೇಕಾಗಿರುವ ಪ್ರಮುಖರು ಅವರಿಬ್ಬರೇ ತಾನೇ ?! ) ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ತಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಿರುವ ಬಾಬ್ತು ಇತರ ತಾಂತ್ರಿಕ ಜ್ಞಾನವುಳ್ಳವರನ್ನೂ ಕೆಲಸಕ್ಕೆ ತೆಗೆದುಕೊಳ್ಳುತ್ತಿವೆ.
ಸಾಮಾನ್ಯವಾಗಿ ಕೆಲಸಕ್ಕೆ ಕಷ್ಟಪಡುವವರು ನನ್ನ ಹಾಗೆ ಸಾಮಾನ್ಯ ಪದವಿ ಮಾಡಿದವರು ಇಲ್ಲವೇ 10 ಅಥವಾ 12 ನೇ ತರಗತಿ ಮುಗಿಸಿದವರು. ಈಗ ಕ್ಲರಿಕಲ್ ಕೆಲಸಗಳಿಗೂ 12ನೇ ತರಗತಿ ಶಿಕ್ಷಣ ಬಯಸುವುದು ಹಳೆಯ ಮಾತಾಯಿತು.. ಅದಕ್ಕೂ ಪದವಿ ಬೇಕು ಅನ್ನುವ ಕಾಲ ಬಂದಿದೆ. ಹೀಗಿರುವಾಗ ಪದವಿ ಮುಗಿಸಿ ಕ್ಲರಿಕಲ್ ಕೆಲಸ ಸೇರುವುದಕ್ಕಿಂತ ಸ್ವಲ್ಪ ಜಾಸ್ತಿ ಶ್ರಮ ಪಟ್ಟು ಪ್ರೊಬೇಷನರಿ ಆಫೀಸರ್ ಹುದ್ದೆಗೇ ಸೇರುವುದು ಸರಿ ಅನ್ನಿಸುತ್ತದೆ. ಅದಕ್ಕೆ ಸಹಾಯವಾಗುವ ಕೆಲವು ತಾಣಗಳ ಪಟ್ಟಿಯನ್ನ ಇಲ್ಲಿ ನೀಡ್ತಿದೀನಿ .. ನೋಡಿ ನಿಮಗೆ ಅನುಕೂಲವಾಗಬಹುದು :
ವಿವಿಧ ಬ್ಯಾಂಕುಗಳ ಹೊಸ ನೇಮಕಾತಿ ಅಧಿಸೂಚನೆಗಳಿಗಾಗಿ : ಇಲ್ಲಿ ಕ್ಲಿಕ್ಕಿಸಿ
ಈ ಹಿಂದೆ ನಡೆದ ಕೆಲವು ಸಂದರ್ಶನಗಳಲ್ಲಿ ಕೇಳಲಾದ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ ( ವಿವಿಧ ಸರ್ಕಾರಿ ನೌಕರಿಗಳಿಗಾಗಿ )
ಸಂದರ್ಶನಕ್ಕೆ ಸಂಬಂಧಿಸಿದಂತೆ ಇನ್ನೊಂದು ತಾಣ
( ಕ್ಲರಿಕಲ್/ಪ್ರೊಬೇಷನರಿ ಆಫೀಸರ್ ಹುದ್ದೆಗಳ ಈ ಹಿಂದಿನ ಪ್ರಶ್ನೆಪತ್ರಿಕೆಗಳು ಸಂಪೂರ್ಣ ಉಚಿತ !! ಬೇಕಾ ? ಇಲ್ಲಿ ಕ್ಲಿಕ್ಕಿಸಿ )
............ ಮನಸು ಮಾಡಿದರೆ ಇನ್ನೂ ಹತ್ತೆಂಟು ಉಪಯುಕ್ತ ಅನ್ನಿಸುವ ತಾಣಗಳನ್ನ ನಾನೇ ಹುಡುಕಿ ಕೊಡಬಹುದು. ಆದರೆ ನೀವೂ ಸ್ವಲ್ಪ ಶ್ರಮ ತೆಗೆದುಕೊಳ್ಳಿ ಅನ್ನುವ ದೃಷ್ಟಿಯಿಂದ ಇಲ್ಲಿಗೇ ನಿಲ್ಲಿಸ್ತಿದೀನಿ. ನೀವು ಈ ಬರಹಕ್ಕೆ Comment ರೂಪದಲ್ಲಿ ನಿಮಗೆ ಗೊತ್ತಿರುವ , ಬ್ಯಾಂಕ್ ಪರೀಕ್ಷೆಗಳಿಗೆ ಅನುಕೂಲ ಆಗುವ ನಾಲ್ಕಾರು ತಾಣಗಳ ಅಂತರ್ಜಾಲ ಕೊಂಡಿಗಳನ್ನ ನೀಡಿ ನಿಮಗೆ ತಿಳಿದಿರುವ ಜ್ಞಾನಮೂಲವನ್ನ ಇತರರೊಂದಿಗೂ ಹಂಚಿಕೊಳ್ಳಿ. ನೀವು ಎಲ್ಲರೂ ಒಂದು ತಾಣವನ್ನ ಹಂಚುವ ಔದಾರ್ಯತೆ ತೋರಿದರೂ ನೂರಾರು ತಾಣಗಳ ಜ್ಞಾನ ನಮ್ಮೆಲ್ಲರದಾಗಬಹುದು !! ನೋಡಿ ಹನಿ ಹನಿ ಸೇರಿ ಹಳ್ಳವಾಗೋದು ಹೀಗೇನೇ !!!!!
.
No comments:
Post a Comment