ನಮಸ್ತೆ...
ಬಹಳ ದಿನದ ನಂತರ ಏನಾದರೂ ಬರೆಯೋ ಮನಸಾಗಿದೆ. ಯಾವ ವಿಷಯದ ಮೇಲೆ ಬರೆಯೋದು ಅಂತ ವಿಚಾರ ಮಾಡಿದಾಗ ಒಲಿಂಪಿಕ್ಸ್ ನೆನಪಾಯ್ತು. ಪದಕ ಪಟ್ಟಿ - ಸಾಧನೆ ಮಾಹಿತಿಗಿಂತ ವಿಭಿನ್ನವಾದದ್ದನ್ನ ಪರಿಚಯಿಸೋಣ ಅಂತ ಈ ವಿಷಯ ಎತ್ಕೊಂಡಿದೀನಿ.
ಮೊದಲು ಈ ವಿಡಿಯೋ ನೋಡಿ : ಇದು ಸ್ವಯಂ ವೇದ್ಯ ವಿಡಿಯೋ !!
-------
http://youtu.be/qij0QULBBdk
-------
ಈಗ ನಾನು ಸಂಗ್ರಹಿಸಿರುವ ಮಾಹಿತಿಯನ್ನು ನಂಬುವುದಾದರೆ...
" 1980ರ ದಶಕದಿಂದ ಚೀನಾ ಅಥ್ಲೀಟ್ ಗಳನ್ನು ತಯಾರು ಮಾಡುವ ಕಾರ್ಯವನ್ನು ಪ್ರಾರಂಬಿಸಿತಂತೆ. ಚೀನಾ ದೇಶದ ಎಲ್ಲ ಶಾಲಾಶಿಕ್ಷಕರಿಗೆ ತಮ್ಮ ಶಾಲೆಯಲ್ಲಿ ಕ್ರೀಡೆಯಲ್ಲಿ ಜನ್ಮತಹ ಗುಣ ಹೊಂದಿ ಮುಂದಿರುವ ಮಕ್ಕಳನ್ನು ಗುರುತಿಸುವಂತೆ ಸೂಚಿಸಲಾಗುತ್ತಂತೆ. ಅಲ್ಲದೇ ಅಂತಹ ಮಕ್ಕಳ ಬಗೆಗಿನ ಮಾಹಿತಿಯನ್ನು ಹತ್ತಿರದ ಸರ್ಕಾರ ಅಧಿಸೂಚಿಸಿದ ಸರ್ಕಾರಿ ಅಧಿಕಾರಿಗೆ ತಿಳಿಸಲು ಸೂಚಿಸಲಾಗಿರುತ್ತದಂತೆ. ಅಂತಹ ಅಧಿಕಾರಿಗಳು ಶಿಕ್ಷಕರು ಸೂಚಿಸಿದ ಮಕ್ಕಳನ್ನು ಪರೀಕ್ಷೆಗೊಳಪಡಿಸಿ ಹತ್ತಿರದ ಕ್ರೀಡಾ ತರಬೇತುದಾರನ ಹತ್ತಿರ ಬಿಡುತ್ತಾರಂತೆ. ತದನಂತರ ಚೀನಾ ದೇಶದಾದ್ಯಂತ ತೆರೆದಿರುವ ಸುಮಾರು 3000 ಕ್ರೀಡಾ ಹಾಸ್ಟೆಲ್ ಗಳ ಪೈಕಿ ಸದರಿ ಮಗು ಯಾವ ಕ್ರೀಡೆಯಲ್ಲಿ ಮುಂದಿದೆಯೋ ಅಂತಹ ಕ್ರೀಡೆಗೆ ಸಂಬಂಧಿಸಿದ ಹಾಸ್ಟೆಲ್ ಗೆ ಕಳುಹಿಸಲಾಗುತ್ತದಂತೆ. ಸದರಿ ಮಕ್ಕಳನ್ನು ಬಹುತೇಕ ಬಾರಿ ತಂದೆ ತಾಯಿಯರಿಂದ ದೂರ ಮಾಡಿ ಇರಿಸಲಾಗುತ್ತದಂತೆ. ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ತರಬೇತಿಗೆ ನಿಯೋಜಿತವಾದ ಮಗುವಿಗೆ " ನಿನ್ನ ಜೀವನದ ಗುರಿ - ಒಲಿಂಪಿಕ್ ಪದಕ " ಎಂಬುದಾಗಿ ನಂಬಿಸಿ ಅಚ್ಚೊತ್ತುವಂತೆ ಮಾಡಿ ಆ ನಿಟ್ಟಿನಲ್ಲಿ ಸಫಲರಾಗುವಂತೆ ಮಾಡುವುದೇ ಚೀನಾ ದೇಶ ಅನುಸರಿಸುವ ವಿಧಾನವಂತೆ.... "
ಈ ಪ್ಯಾರಾವನ್ನು ಅಂತೆ-ಕಂತೆಯ ರೀತಿ ಬರೆದ್ದೇಕೆಂದರೆ ನನಗೆ ಈ ವಿಷಯದ ಸತ್ಯಾತ್ಯತೆಯ ಬಗ್ಗೆ ಖಚಿತತೆ ಇಲ್ಲ. ಆದರೆ 75 ಪ್ರತಿಶತ ಇದು ಸತ್ಯ ಎಂದು ಓದಿ ನಂಬಿದ್ದೇನೆ. ಅದಕ್ಕೇನೆ ಈ ಮಾಹಿತಿಯನ್ನ ನಿಮಗೂ ನೀಡಿ ಸತ್ಯಾಸತ್ಯತೆಯನ್ನು ನಿಮ್ಮಿಂದಲೂ ಪರೀಕ್ಷೆ ಮಾಡಿಸೋಣ ಅಂತನ್ನುವುದು ನನ್ನ ಉದ್ದೇಶ.
ನೀವೂ ಕೂಡ ಓದಿ ತಿಳಿದುಕೊಂಡು ಪ್ರತಿಕ್ರಿಯಿಸಿ.
.
.
No comments:
Post a Comment