ಎಲ್ಲರಿಗೂ ತಿಳಿದಿರುವ ಹಾಗೆ ಅಮೆರಿಕನ್ನರಿಗೆ ಧರ್ಮಕ್ಕಿಂತ ದೇಶದ ಬಗ್ಗೆ ಪ್ರೀತಿ ಜಾಸ್ತಿ. Country First ಎಂಬ ನೀತಿ ಅವರದ್ದು. ನಾವು ಹೇಗೆ ನಮ್ಮ ದೇಶದ ಬಗ್ಗೆ ಹೇಳಿಕೊಳ್ಳುವಾಗ ನಮ್ಮದು ಸಂಪದ್ಭರಿತ ರಾಷ್ಟ್ರ - ಜಾತ್ಯಾತೀತ ರಾಷ್ಟ್ರ - ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಎಂಬಿತ್ಯಾದಿಯಾಗಿ ಹೇಳಿಕೊಳ್ಳೂತ್ತೇವಲ್ಲ ... ಅದೇ ರೀತಿ ಅವರು ಈ ಕೆಳಗಿನಂತೆ ಹೇಳಿಕೊಳ್ಳುವದು ಸರ್ವೇ ಸಾಧಾರಣವಾಗಿ ಕಂಡುಬರುತ್ತದೆ....
"The United States of America is exceptional among the nations of the world. Unlike most other countries, there is no overarching ethnic or religious affiliation that identifies one as an “American.”Rather, what binds the more than 300 million Americans together is a shared civic identity.
ಇಂತಿಪ್ಪ ದೇಶದಲ್ಲಿ ಕ್ರೀಡೆಯ ಬಗೆಗಿನ ದೃಷ್ಟಿಕೋನ ಹೇಗಿರಬಹುದು ಎಂಬ ಕುತೂಹಲಕ್ಕಾಗಿ ಮಾಹಿತಿಯನ್ನು ತಡಕಾಡಿದಾಗ ಕೆಲವು ಕುತೂಹಲಕರ ಅಂಶಗಳು ಸಿಕ್ಕಿದ್ವು. ನಿಮ್ಮೊಂದಿಗೆ ಅವುಗಳನ್ನು ಹಂಚಿಕೊಳ್ಳೋಣ ಅಂತ ಈ ಬರಹ.
- ಅಮೆರಿಕದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಸಂಪೂರ್ಣ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಇಲಾಖೆ ಎಂಬುದಿಲ್ವಂತೆ. President's Council on Physical Fitness and Sports ಎಂಬ ಸಮಿತಿ ದೇಶದ ಕ್ರೀಡಾ ಚಟುವಟಿಕೆಗಳ ಬಗ್ಗೆ ಅಮೆರಿಕದ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾ ದೇಶದ ನಾಗರಿಕರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಕ್ರೀಡೆಯನ್ನು ಶಿಫಾರಸ್ಸು ಮಾಡುತ್ತದಂತೆ.
- ಅಮೆರಿಕ ಸಂಸತ್ತು ಅಖೈರುಗೊಳಿಸಿರುವ ಅಮೆರಿಕಾ ಒಲಿಂಪಿಕ್ ಅಸೋಸಿಯೇಷನ್ ಸಂಸ್ಥೆಯು ಎಲ್ಲ ದೇಶಗಳ ಹಾಗೆ ತನ್ನ ದೇಶದಲ್ಲಿ ಒಲಿಂಪಿಕ್ ಪಾಲ್ಗೊಳ್ಗಲುವಿಕೆಗೆ ಸಂಬಂಧಿಸಿದ ಜವಾಬ್ದಾರಿ ಹೊಂದಿದೆ. ಇದರಲ್ಲೇನಿದೆ ವಿಶೇಷ ಅಂದಿರಾ - ಆಯ್ಕೆಯಾಗುವ ಕ್ರೀಡಾಳುಗಳು ತಯಾರಾಗುವ ಬಗೆಯೇ - American Special !!
- ಎಲ್ಲ ದೇಶಗಳಲ್ಲೂ Amateur Sports ಮತ್ತು Proffessional Sports ಎಂಬ ಎರಡು ವಿಧಗಳಿರುತ್ತವೆ. ಶಾಲಾ ಕಾಲೇಜುಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸಮಯ ಕಳೆಯಲು ಅಥವಾ ಆಟದ ಸಮಯವನ್ನು ಪೂರೈಸಲು ಅಥವಾ ಹವ್ಯಾಸದ ಭಾಗವಾಗಿ ಆಟ ಆಡುವ ರೀತಿಗೆ Amateur Sports ಎನ್ನಬಹುದು. ಈ ತೆರನಾದ ಕ್ರೀಡೆಯ ಪಾಲ್ಗೊಳ್ಳುವಿಕೆಯಲ್ಲಿ ಗಂಭೀರತೆ ಕಡಿಮೆ. ಈ ಹಂತದಲ್ಲಿ ಅನೇಕ ಉತ್ತಮ ಕ್ರೀಡಾಪಟುಗಳು ಸರಿಯಾದ ಮಾರ್ಗದರ್ಶನವಿಲ್ಲದೆ ಉತ್ತಮ ಕ್ರೀಡಾ ಭವಿಷ್ಯ ಕಳೆದುಕೊಂಡು ಯಾವುದೋ ಬ್ಯಾಂಕಿನಲ್ಲಿ - ಸರ್ಕಾರೀ ಕಚೇರಿಯಲ್ಲಿ - ಇಲ್ಲಾ ಸಾಫ್ಟ್ ನೌಕರಿಯಲ್ಲಿ ಜಾಗ ಪಡೆದು ಸಂಸಾರ ಸಾಗರಕ್ಕೆ ಧುಮುಕಿ ಹಿಂದೊಮ್ಮೆ ತಾವು ಕ್ರೀಡೆಯಲ್ಲಿ ಮುಂದಿದ್ದೆವು ಎಂಬ ಕತೆಗಳನ್ನು ಮೊಮ್ಮಕ್ಕಳಿಗೆ ಹೇಳುವ ತಾತಂದಿರಾಗಿಬಿಡುತ್ತಾರೆ.
- ಆದರೆ ಅಮೆರಿಕದಲ್ಲಿ Amateur Sports ಬಗ್ಗೆ ಕೂಡ ಗಮನಹರಿಸಲಾಗುತ್ತದೆ. ಈ ಒಂದು ಅಂಶವೇ ಸಾಕು ಅಮೆರಿಕವನ್ನು ಇತರ ದೇಶಗಳಿಂದ ವಿಭಿನ್ನವಾಗಿರಿಸಲು. ಮಾಧ್ಯಮಿಕ ಮತ್ತು ಪಿಯು ಹಂತದ ಶಾಲೆಗಳಲ್ಲಿ(Secondary & Tertiary Educational Institutions) ಕ್ರೀಡೆಗಳಲ್ಲಿ ಅಭ್ಯಾಸದ ಕಡೆಗಿನ ಉತ್ಸುಕತೆಯಷ್ಟೇ ಕ್ರೀಡೆಯ ಕಡೆಗೂ ಇಟ್ಟುಕೊಂಡು ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಿತ್ತು -ಹೆಚ್ಚಿದೆ- ಹೆಚ್ಚಿರುತ್ತದೆ. ಅದುವೇ ಅಲ್ಲಿನ ಜನಜೀವನದ ವಿಶೇಷತೆ. ಈ ಬಗ್ಗೆ ಕ್ರೀಡಾಸಕ್ತ ವಿದ್ಯಾರ್ಥಿಗಳ ಆಸಕ್ತಿಯನ್ನು ಪೋಷಿಸಲು National Collegiate Athletic Association ಎಂಬ ಶಾಲಾ ಕಾಲೇಜುಗಳ ಸಂಘವೊಂದನ್ನು ಸ್ಥಾಪಿಸಿಕೊಂಡಿದ್ದಾರೆ. ನಾನು ಮೊದಲೇ ಹೇಳಿದಂತೆ ಸರ್ಕಾರದ ನೇರ ಹಸ್ತಕ್ಷೇಪ ಇಲ್ಲ ಎಂಬುದನ್ನು ನಾನು ನಿಮಗಿಲ್ಲಿ ತೋರಿಸಿಕೊಟ್ಟ ಹಾಗಾಯಿತು. ಸುಮಾರು 1281 ಶಿಕ್ಷಣ ಸಂಸ್ಥೆಗಳು ಇದರ ಭಾಗವಾಗಿವೆ. ಈ ಸಂಸ್ಥೆ ಕ್ರೀಡೆಯಲ್ಲಿ ಮುಂದಿರುವ ಹುಡುಗರನ್ನು ತನ್ನ ಸುಪರ್ದಿಯಲ್ಲಿರುವ ಶಾಲೆಗಳ ಮುಖಾಂತರ ಗುರುತಿಸಿ ಅವರಿಗೆ ಹೇರಳ ಶಿಷ್ಯವೇತನ ನೀಡುತ್ತದೆ. ಅಷ್ಟೇ ಅಲ್ಲ ಈ NCAA ಗೆ ಕಾರ್ಫೊರೇಟ್ ಜಗತ್ತಿನ ಹಣಕಾಸಿನ ಬೆಂಬಲ ಇರುವುದು ಅಲ್ಲಿನ ಅತಿ ದೊಡ್ಡ ಪ್ಲಸ್ ಪಾಯಿಂಟ್. ವಿಕಿ ಪುಟದಿಂದ ಹೆಕ್ಕಿ ತೆಗೆದ ಮಾಹಿತಿಯ ಪ್ರಕಾರ ಈ ಕೆಳಕಂಡ ಹೆಸರಾಂತ ಕಂಪೆನಿಗಳು ಆ ಧೇಶದಲ್ಲಿ ಕ್ರೀಡೆಯಲ್ಲಿ ಹಣ ತೊಡಗಿಸಿರೋದನ್ನು ನೀವು ಕಾಣಬಹುದು.
Company | Category | Since |
---|---|---|
AT&T | Wireless services | 2001 |
Coca-Cola | Non-alcoholic beverages | 2002 |
The Hartford | Mutual funds and related financial services | 2004 |
Enterprise Rent-A-Car | Car rental | 2005 |
Lowe's | Home improvement | 2005 |
CapitalOne | Banking and credit cards | 2008 |
Kraft (Planters) | Snack foods | 2008 |
Hershey's (Reese's) | Candy | 2009 |
LG | Electronics | 2009 |
UPS | Package delivery and logistics | 2009 |
Nissan (Infiniti) | Car & parts | 2010 |
Unilever | Personal-care products | 2010 |
- ನಂತರದ್ದು ಕ್ರೀಡಾ ಕ್ಲಬ್ ಗಳ ಸರದಿ. ಅವು ಪ್ರತಿ ವರ್ಷ ಹೊಸ ಹೊಸ ಪ್ರತಿಭಾವಂತ ಹುಡುಗರನ್ನು ಆರಿಸಿ ತಮ್ಮ ವಾರ್ಷಿಕ ಕ್ರೀಡಾ ಡ್ರಾಫ್ಟ್ ನಲ್ಲಿ ಸೇರಿಸಿಕೊಳ್ಳುತ್ತಾರೆ. ಹಾಗೆ ಸೇರ್ಪಡೆಗೊಂಡ ವಿದ್ಯಾರ್ಥಿ ಕ್ರೀಡಾರ್ಥಿಯಾಗಿ ಬದಲಾಗುತ್ತಾನೆ. ಇಲ್ಲಿಂದಲೇ ಅವರ ಜೀವನದಲ್ಲಿ ಯೂ - ಟರ್ನ್ !!
..
... ಮುಂದುವರೆದ ಭಾಗ ನಾಳೆ
2 comments:
By going to RentalCars you can discover the cheapest car rentals at over 49,000 locations across the world.
There is shocking news in the sports betting industry.
It's been said that every bettor needs to look at this,
Watch this now or quit betting on sports...
Sports Cash System - Robotic Sports Betting Software
Post a Comment