ಸುದ್ದಿ : ಕೀನ್ಯಾದಲ್ಲಿ ಬಾಂಬ್ ಸ್ಫೋಟ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
|
ಜಾಗತಿಕ ನಕ್ಷೆಯಲ್ಲಿ ಕೀನ್ಯಾ |
|
ಕೀನ್ಯಾ ಭೌಗೋಳಿಕ |
|
ನೆರೆ-ಹೊರೆ |
|
ಗ್ರೇಟ್ ರಿಫ್ಟ್ ವ್ಯಾಲ್ಯಿ |
|
ವಲಸೆ |
- ಆಫ್ರಿಕಾ ಖಂಡದ ಎರಡನೇ ಅತಿ ದೊಡ್ಡ ಪರ್ವತವಾದ Mount Kenya ದಿಂದ ತನ್ನ ಹೆಸರನ್ನು ಪಡೆದಿರುವ ದೇಶ ಕೀನ್ಯಾ. ಸಿಕ್ಕಾಪಟ್ಟೆ ಜೀವವೈವಿಧ್ಯಗಳು ಈ ದೇಶದ USP(Unique Selling Proposition).
- ಸೊಮಾಲಿಯಾ, ಇಥಿಯೋಪಿಯಾ, ಸುಡಾನ್, ಉಗಾಂಡಾ & ತಾಂಝಾನಿಯಾ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಕೀನ್ಯಾ, ನೈರುತ್ಯಕ್ಕಿರುವ ವಿಕ್ಟೋರಿಯಾ ಲೇಕ್ ಕೂಡ ಗಡಿಯಂತಿದ್ದು, ಆ ಕೆರೆ ಕೀನ್ಯಾ-ಉಗಾಂಡಾ-ತಾಂಝಾನಿಯಾ ದೇಶಗಳ ಗಡಿಗಳಿಗೂ ಅಂಟಿಕೊಂಡಿದೆ. ಆಗ್ನೇಯಕ್ಕೆ ಹಿಂದೂ ಮಹಾಸಾಗರವಿದೆ.
- ಕೀನ್ಯಾ ದೇಶದ ಮೇಲೆ ಭೂಮಧ್ಯರೇಖೆ ಹಾದು ಹೋಗುತ್ತದೆ.
- ಆಫ್ರಿಕಾ ಖಂಡದ ಭೌಗೋಳಿಕ ಆಕರ್ಷಣೆಗಳಲ್ಲೊಂದಾದ Great Rift Valley ಕೀನ್ಯಾ ದೇಶದ ಮೂಲಕ ಹಾದು ಹೋಗುತ್ತದೆ.
- ಭೂಮಧ್ಯರೇಖೆಯ ಬಳಿ ಇರುವ ಪ್ರದೇಶಗಳಂತೆ ಇಲ್ಲೂ ಕೂಡ, ಮಾರ್ಚ್ ನಿಂದ ಮೇವರೆಗೆ ನಿರಂತರ ಮಳೆಯಿದ್ದು ಅಕ್ಟೋಬರ್ ಕಾಲದಲ್ಲಿ ಮತ್ತೊಮ್ಮೆ ಮಳೆ ಸುರಿಯುತ್ತದೆ.
- ಜೂನ್ ನಿಂದ ಸಪ್ಟೆಂಬರ್ ವರೆಗೆ ಪ್ರಾಣಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ತಂಡೋಪತಂಡವಾಗಿ ವಲಸೆ ಹೋಗುವ ದೃಶ್ಯ ಛಾಯಾಗ್ರಾಹಕರಿಗೆ ಕೈಬೀಸಿ ಕರೆಯುವ ರಮಣೀಯ ಆಕರ್ಷಣೆ.
: ರವಿ
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment