ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 19, 2010

ನನ್ನ ಧ್ವನಿಗೆ ನಿನ್ನ ಧ್ವನಿಯ, ಸೇರಿದಂತೆ ನಮ್ಮ ಧ್ವನಿಯ ...
ನಮ್ಮ ಹೆಮ್ಮೆಯ ಭೀಮಸೇನ ಜೋಷಿಯವರ ಸುವರ್ಣ ಕಂಠದಿಂದ ಪ್ರಾರಂಭವಾಗುವ " ಮಿಲೇ ಸುರ ಮೇರಾ ತುಮ್ಹಾರಾ ... " ಗೀತೆ ಇಂದಿಗೂ ಜನಪ್ರಿಯ. ಸ್ವಾತಂತ್ರ್ಯ ದಿನಾಚರಣೆಯ ಆಸುಪಾಸಿನಲ್ಲಿರುವ ನಾವು ಇವತ್ತು  ಆ ಗೀತೆಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಗೀತೆಯ ನಿರ್ಮಾಣ : ಲೋಕ ಸೇವಾ ಸಂಚಾರ ಪರಿಷದ್

ಗೀತೆಯ ರಚನೆಕಾರರು : ಪಿಯೂಷ್ ಪಾಂಡೆ

ಗೀತೆಯನ್ನ ಸಂಗೀತಕ್ಕಳವಡಿಸಿದವರು : ಅಶೋಕ್ ಪಟ್ಕಿ ( & ಲೂಯಿಸ್ ಬ್ಯಾಂಕ್ಸ್ )

ಗೀತೆಯನ್ನ ನಿರ್ದೇಶಿಸಿದವರು : ಸುರೇಶ್ ಮುಲಿಕ್

ಗೀತೆಯ ಪ್ರಥಮ ಪ್ರಸಾರ : ದೂರದರ್ಶನ ವಾಹಿನಿಯಲ್ಲಿ 1988ರ ಸ್ವಾತಂತ್ರ್ಯ ದಿನಾಚರಣೆಯಂದು , ಪ್ರಧಾನಮಂತ್ರಿಗಳ ಭಾಷಣದ ನಂತರ

" ಮಿಲೇ ಸುರ ಮೇರಾ ತುಮ್ಹಾರಾ, ದೋ ಸುರ ಬನೇ ಹಮಾರಾ " 

ಎಂಬೀ ವಾಕ್ಯವನ್ನೊಳಗೊಂಡ ಈ ಗೀತೆ ಭಾರತದ 14 ಭಾಷೆಗಳಲ್ಲಿ ಉಚ್ಛರಿಸಲ್ಪಟ್ಟು, ವಿವಿಧ ಸ್ಥಳೀಯ ಸುಪ್ರಸಿದ್ಧ ವ್ಯಕ್ತಿಗಳನ್ನ ಒಳಗೊಂಡು ಚಿತ್ರಿತವಾಗಿದೆ. ಬಳಸಿದ ಭಾಷೆಗಳ ಲಿಪಿ ಇಂತಿದೆ :मिले सुर मेरा तुम्हारा, तो सुर बने हमारा सुर की नदियाँ हर दिशा से, बहते सागर में मिलें
बादलों का रूप लेकर, बरसे हलके हलके
मिले सुर मेरा तुम्हारा, तो सुर बने हमारा
मिले सुर मेरा तुम्हारा
चॉन्य् तरज़ तय म्यॉन्य् तरज़, इक॒वट॒ बनि यि सॉन्य् तरज़
چأنِۂ ترز تَے میأنِۂ ترز، اِکوَٹہٕ بَنِہ یِہ سأنِۂ ترز
ਤੇਰਾ ਸੁਰ ਮਿਲੇ ਮੇਰੇ ਸੁਰ ਦੇ ਨਾਲ, ਮਿਲਕੇ ਬਣੇ ਇੱਕ ਨਵਾਂ ਸੁਰ ਤਾਲ
मिले सुर मेरा तुम्हारा, तो सुर बने हमारा
मुंहिंजो सुर तुहिंजे सां पियारा मिले जड॒हिं, गीत असांजो मधुर तरानो बणे तड॒हिं
مُنهِنجو سُر تُنهِنجي سان پِيارا مِلي جَڏَهِن، گِيت اَسانجو مَڍُر تَرانوبَڻي تَڏَهِن
سر کی دریا بہتے ساگر میں ملےਬਾਦਲਾਂ ਦਾ ਰੂਪ ਲੈਕੇ, ਬਰਸਨ ਹੌਲੇ ਹੌਲੇ
இசைந்தால் நம் இருவரின் ஸ்வரமும் நமதாகும்
திசை வேறானாலும் ஆழி சேர் ஆறுகள் முகிலாய்
மழையாய் பொழிவது போல் இசை
நம் இசை
ನನ್ನ ಧ್ವನಿಗೆ ನಿನ್ನ ಧ್ವನಿಯ, ಸೇರಿದಂತೆ ನಮ್ಮ ಧ್ವನಿಯ
నా స్వరము నీ స్వరము సంగమమై, మన స్వరంగా అవతరించే
എന്റെ സ്വരവും നിങ്ങളുടെ സ്വരവും, ഒന്നുചേര്‍ന്നു നമ്മുടെ സ്വരമായ്
তোমার সুর মোদের সুর, সৃষ্টি করুক ঐক্যসুর সৃষ্টি হউক ঐক্যতান
ତୁମ ଆମର ସ୍ବରର ମିଳନ, ସୃଷ୍ଟି କରି ଚାଲୁ ଏକ ତାନ
મળે સૂર જો તારો મારો, બને આપણો સૂર નિરાળો
माझ्या तुमच्या जुळता तारा, मधुर सुरांच्या बरसती धारा

सुर की नदियाँ हर दिशा से, बहते सागर में मिलें
बादलों का रूप लेके, बरसे हलके हलके
मिले सुर मेरा तुम्हारा, तो सुर बने हमारा
मिले सुर मेरा तुम्हारा

 1. ಹಿಂದಿ
 2. ಕಾಶ್ಮೀರಿ
 3. ಉರ್ದು
 4. ಪಂಜಾಬಿ
 5. ಸಿಂಧಿ
 6. ತಮಿಳು
 7. ಕನ್ನಡ
 8. ತೆಲುಗು
 9. ಮಲಯಾಳಿ
 10. ಬಂಗಾಳಿ
 11. ಅಸ್ಸಾಮೀ
 12. ಒರಿಯಾ
 13. ಗುಜರಾತಿ
 14. ಮರಾಠಿ

ಸದರಿ ಗೀತೆಯ ಚಲನಚಿತ್ರದಲ್ಲಿ ಮೂಡಿ ಬಂದ ಖ್ಯಾತನಾಮರಿವರು :

:: ಸಿನೆಮಾ / ದೂರದರ್ಶನ ::

ಅಮಿತಾಬ್ ಬಚ್ಚನ್
ಮಿಥುನ್ ಚಕ್ರವರ್ತಿ
ತನ್ವೀರ್ ಆಶಾಯ್
ಕಮಲ್ ಹಾಸನ್
ಕೆ.ಆರ್.ವಿಜಯ
ರೇವತಿ
ಜಿತೇಂದ್ರ
ವಹೀದಾ ರಹಮಾನ್
ಹೇಮಾ ಮಾಲಿನಿ
ತನುಜಾ
ಶರ್ಮಿಳಾ ಟಾಗೋರ್
ಶಬಾನಾ ಅಜ್ಮಿ
ದೀಪಾ ಸಾಹಿ
ಓಂ ಪುರಿ
ದೀನಾ ಪಾಠಕ್
ಮೀನಾಕ್ಷಿ ಶೇಷಾದ್ರಿ


:: ನಾಟ್ಯ ::


ಮಲ್ಲಿಕಾ ಸಾರಾಭಾಯ್

:: ವ್ಯಂಗ್ಯ ಚಿತ್ರಕಾರ ::

ಮಾರಿಯೋ ಮಿರಾಂಡಾ

:: ನಿರ್ದೇಶಕ ::

ಮೃಣಾಲ್ ಸೇನ್

:: ಲೇಖಕರು ::

ಸುನಿಲ್ ಗಂಗೋಪಾಧ್ಯಾಯ
ಆನಂದಶಂಕರ ರೇ


:: ಗಾಯಕರು ::

ಭೀಮಸೇನ್ ಜೋಷಿ
ಎಂ.ಬಾಲಮುರಳಿ ಕೃಷ್ಣ
ಲತಾ ಮಂಗೇಶ್ಕರ್
ಸುಚಿತ್ರಾ ಮಿತ್ರಾ


:: ಕ್ರೀಡಾ ಪಟುಗಳು ::

ನರೇಂದ್ರ ಹಿರ್ವಾನಿ
ಎಸ್.ವೆಂಕಟರಾಘವನ್
ಪ್ರಕಾಶ್ ಪಡುಕೋಣೆ
ರಾಮನಾಥನ್ ಕೃಷ್ಣನ್
ಅರುಣ್ ಲಾಲ್
ಪಿ.ಕೆ.ಬ್ಯಾನರ್ಜೀ
ಚುನೀ ಗೋಸ್ವಾಮಿ
ಸೈಯದ್ ಕಿರ್ಮಾನಿ
ಲೆಸ್ಲೀ ಕ್ಲಾಡಿಯಸ್
ಗುರುಬಕ್ಸ್ ಸಿಂಗ್


ಜೊತೆಗೆ

ಪ್ರತಾಪ್ ಪಠಾಣ್ ( ಮಲಯಾಳಿ ನಟ )
ಏ.ವಿ.ರಮಣನ್ ( ತಮಿಳು ನಟ )<<< >>>


ಇದೀಗ 22 ವರ್ಷಗಳ ನಂತರ ಕಳೆದ ಜನವರಿ 26ಕ್ಕೆ ಪ್ರಸಾರ ಮಾಡುವ ಸಲುವಾಗಿ ZOOM TV ಯವರು


" ಫಿರ್ ಮಿಲೇ ಸುರ ... "

ಅನ್ನುವ ಶೀರ್ಷಿಕೆಯಡಿಯಲ್ಲಿ ಎ.ಆರ್.ರಹಮಾನ್ ಸಂಗೀತ ಅಳವಡಿಕೆಯೊಂದಿಗೆ ( ಹಿಂದಿನ ಸಂಗೀತವನ್ನ ಉಳಿಸಿಕೊಂಡಿರುವುದರ ಜೊತೆಗೆ ) ನಿರ್ಮಿಸಿದೆ. ಈ ಅವತರಣಿಕೆ ಈ ಹಿಂದಿನ 6 ನಿಮಿಷ 9 ಸೆಕೆಂಡ್ ಗಿಂತ ದೊಡ್ಡದಿದ್ದು 16 ನಿಮಿಷ 17 ಸೆಕೆಂಡ್ ಅವಧಿಯದ್ದಾಗಿದೆ. ಈ ಬಾರಿ ಕೈಲಾಶ್ ಸುರೇಂದ್ರನಾಥ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಈ ವ್ಯಕ್ತಿ ಮತ್ತಾರೂ ಅಲ್ಲ. ಮೊದಲ ಅವತರಣಿಕೆಯ ನಿರ್ಮಾಪಕರು. ಆದರೆ ಹೊಸ ಅವತರಣಿಕೆ ಹಳಬರಿಗೆ ಸುತಾರಾಂ ರುಚಿಸಿಲ್ಲ. ಇನ್ನು ಇದೇ ಮೊದಲ ಸಲ ನೋಡಿರುವವರಿಗೂ ಅಂಥ ಉತ್ಸಾಹಕಾರಿ ಅನಿಸಿಲ್ಲ. ಜೊತೆಗೆ ಮುಖ್ಯವಾಗಿ ಸಿನೆಮಾ ಕ್ಷೇತ್ರದವರಿಗೆ ಮಣೆ ಹಾಕಿ ಗೀತೆಯನ್ನ ಕಮರ್ಷಿಯಲ್ ಆಗಿ ನಿರ್ಮಿಸಿರುವುದು ಸಾಕಷ್ಟು ಜನರ ಟೀಕೆಗೆ ಗುರಿಯಾಗಿದೆ.

: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ