ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 18, 2010

ವಿಕಿಪೀಡಿಯಾದ ಡಿಕ್ಷನರಿ = ವಿಕ್ಷನರಿ



ವಿಕಿಪೀಡಿಯಾದ ಬಗ್ಗೆ ಕೇಳಿಯೇ ಇರುತ್ತೀರಿ ನೀವೆಲ್ಲಾ ? ಹಿಂದೆಲ್ಲಾ ಹತ್ತೆಂಟು ಸಂಪುಟಗಳಲ್ಲಿ ಸಂಗ್ರಹಗೊಂಡಿದ್ದ Brittanica Encyclopedia ದ ಬಗ್ಗೆ ಅಚ್ಚರಿ ಮಿಶ್ರಿತ ಕೃತಜ್ಞತೆಯಿಂದ ನೋಡುತ್ತಿದ್ದ ನಾವು ಈ ವಿಕಿಪೀಡಿಯಾವನ್ನ ಕಂಡ ಮೇಲೆ ಮಂತ್ರಮುಗ್ಧರಾಗಿದ್ದೇವೆ ಎಂತಲೇ ಹೇಳಬೇಕು. ಈ ವಿಕಿಪೀಡಿಯಾ ದಿನನಿತ್ಯ ಬರೆಯಲ್ಪಡುವ - ತಿದ್ದಲ್ಪಡುವ ಒಂದು ನೆಟ್ ಪುಸ್ತಕ. ಗೂಗಲ್ Random ಆಗಿ ಅತಿ ಹತ್ತಿರದ ಉತ್ತರ ಹುಡುಕಿದರೆ ಇದು ನಿರ್ದಿಷ್ಟ ವಾಕ್ಯ / ಪದ ಕ್ಕೆ ಸುದೀರ್ಘ ಮಾಹಿತಿ ನೀಡುವುದರ ಜೊತೆಗೆ ನೀವೂ ಆ ಮಾಹಿತಿಗೆ ತಿದ್ದುಪಡಿ ಅಥವಾ ಹೆಚ್ಚಿನ ಸೇರ್ಪಡೆ ಮಾಡುವ ಅವಕಾಶ ಒದಗಿಸುತ್ತದೆ. ನೋಡಿ ... ಎಂಥ ಅವಕಾಶ. ತಾವು ಬರೆದ ಲೇಖನಕ್ಕೆ ಇನ್ನೊಬ್ಬರು ತಮ್ಮ ಅಭಿಪ್ರಾಯ ನೀಡಿದರೇನೇ ಸಿಡುಕುವ ಈ ಕಾಲದಲ್ಲಿ ಅದನ್ನ ತಿದ್ದಿ ಇನ್ನೂ ಶ್ರೀಮಂತವಾಗಿಸುವ ಧ್ಯೇಯ ಹೊಂದಿರುವ ಈ ತಾಣದ ಮಹಾನ್ ತನಕ್ಕೆ  " ಜೈ ಹೋ ! " ಎನ್ನಲೇಬೇಕಲ್ವಾ ?!!


ಇಂತಿಪ್ಪ ವಿಕಿಪೀಡಿಯಾದ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುವುದೇ ವಿಕ್ಷನರಿ


ಈ ವಿಕ್ಷನರಿ ಜಗತ್ತಿನ ವಿವಿಧ ಭಾಷೆಗಳ ಶಬ್ದಗಳಿಗೆ ಕನ್ನಡ to ಇಂಗ್ಲೀಷ್ ಹಾಗೂ ಇಂಗ್ಲೀಷ್ to ಕನ್ನಡ  ರೀತಿಯಲ್ಲಿ ಶಬ್ದಾರ್ಥ ಕಲೆಹಾಕುವ ಕೆಲಸ ಮಾಡುತ್ತೆ.

ಕನ್ನಡ ವಿಕ್ಷನರಿಗಾಗಿ ಇಲ್ಲಿ ಕ್ಲಿಕ್ಕಿಸಿ


ಸುಮಾರು 120350 ಶಬ್ದಗಳನ್ನ ಜೋಡಿಸಿಕೊಂಡಿರುವ ತಮಿಳು ಭಾಷೆ 100000+ ಶಬ್ದಗಳನ್ನ ಕಲೆಹಾಕಿರುವ ಇಂಗ್ಲೀಷ್ ಮತ್ತಿತರ ಭಾಷೆಗಳ ಸಾಲಿನಲ್ಲಿ ನಿಂತಿದೆ. 68608 ಶಬ್ದಗಳನ್ನ ಜೋಡಿಸಿಕೊಂಡಿರುವ ಕನ್ನಡ ಭಾಷೆ 10000+ ಶಬ್ಗಗಳನ್ನ ಕಲೆಹಾಕಿರುವ ಭಾಷೆಗಳ ಜೊತೆ 2ನೇ ಸಾಲಿನಲ್ಲಿ ನಿಂತಿದೆ. 


Hello ಸಾಫ್ಟ್ ಗಳಿರಾ !! Ur Attention Please. You Can Afford CCD Cappucino From Ur 5 Digit Salary. But Make Sure That Ur Knowledge Is Not Been Drained By Someone Who Is A Foreigner aka Your Client, Who Can Be Anybody & U Will Never Mind To Change Them Often. Isnt It Bloody Knowledge Prostitution. Pay Me More & I'm Yours Kind of Attitude Has The Same Phrase I Think. Change Your Attitude ( Whosoever Have That ) & Give Some of Your Share of Your Knowledge Towards Your Mother India.

[ I Have Used English, As Many Understand It Better & Feel The Punch Only In That Language ]


ಬೆಂಗಳೂರಿನಲ್ಲಿ ಸಾಫ್ಟವೇರ್ ನೆಲೆನಿಂತರೇನು ಬಂತು, ಮಣ್ಣು. ನಮ್ಮ ನೆಲದಲ್ಲಿ ಅವರ ಕೆಲಸ ಮಾಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಜಾಸ್ತಿ ಲಾಭ ಮಾಡಿಕೊಳ್ಳುವ ಅವರ ಹುನ್ನಾರ ಅರಿಯದ ಇದು ಒಂದು ರೀತಿಯ ಗಣಿ ಸಾಗಣೆಯಂತೇ ಲೆಕ್ಕ ಅಲ್ವೇನ್ರೀ ? ಇಂದು ನಮ್ಮಲ್ಲಿಯ ವಿದ್ಯುತ್ ಮತ್ತೊಂದು ಬರಿದು ಮಾಡಿಕೊಂಡು ನಾಳೆ ಅವರ ಮುಂದೆ ನಿಲ್ಲುವ ಬದಲು , ಇನ್ನೂ Developed ದೇಶಗಳ ಸಾಲಿನಲ್ಲಿ ನಿಲ್ಲಲು ಪ್ರಯತ್ನಿಸುತ್ತಿರುವ ನಾವು ಅವರಿಗಾಗಿ ಕೆಲಸ ಮಾಡಿಕೊಡುವುದರ ಜೊತೆ ಜೊತೆಗೆ ಆ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡು ನಮ್ಮ ದೇಶಕ್ಕೂ ನಾವು ಕಲಿತ ನಾಲ್ಕಕ್ಷರದ ಮೂಲಕ  ಸಹಾಯ ಮಾಡಿದರೆ ಆಗಲ್ವಾ ? 


ಬರೀ ಸ್ವದೇಸ್ ಮೂವೀ ನೋಡಿ ಕಣ್ಣು ಒದ್ದೆ ಮಾಡಿಕೊಂಡ್ರೆ ಸಾಲಲ್ಲಪ್ಪ. ಅದನ್ನ ಅಳವಡಿಸಿಕೊಳ್ಳೋದಕ್ಕೂ will ಬೇಕು. ಅದು ಬಿಟ್ಟು ಅವರು ನೀಡೋ Per Annum Package ಗಾಗಿ  ಬೇಕಾಗೋ ಒಳ್ಳೇ Appraisal ಗಾಗಿ ವರ್ಷ ಇಡೀ ' ಹೋರಾಡೋದು  ' ಬಿಟ್ಟು ದೇಶದ Appraisal ಕಡೆನೂ ಗಮನ ಹರಿಸಿ ಅಂತ ನಮ್ಮ  ಸಾಫ್ಟ್ ಬಂಧುಗಳಿಗೆ ಕೇಳ್ಕೊಳೊಣ್ವಾ ?





 
: ರವಿ




No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ