ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 5, 2010

ನಮ್ಮ ಗುರುಪ್ರಸಾದ್

'ಮಠ' ಚಲನಚಿತ್ರ ನೋಡಿದ ಪ್ರತಿಯೊಬ್ಬರಿಗೂ ಗೊತ್ತು ನಿರ್ದೇಶಕ ಗುರುಪ್ರಸಾದ್ Calibre ಏನೆಂದು. ಅಂಥ ಗುರುಪ್ರಸಾದ್ ಹಿಂದೆ " ಯಾರಿಗೆ ಬೇಡ ದುಡ್ಡು !! " (2002) ಎಂಬ ಚಿತ್ರ ಮಾಡಿದ್ದು ಕಡಿಮೆ ಜನರಿಗೆ ಗೊತ್ತು. 'ಮಠ'(2006)ದ ನಂತರ ಬಿಡುಗಡೆಯಾದ  'ಎದ್ದೇಳು ಮಂಜುನಾಥ'(2009) ಚಿತ್ರ ಕೂಡ ಗುರುಪ್ರಸಾದ್ ರ ಸಾಮರ್ಥ್ಯವನ್ನ ಸಾಬೀತು ಪಡಿಸಿದೆ.


ಈಗ 2 ಚಿತ್ರಗಳು ಅವರ ಮುಂದಿವೆ : ಡೈರೆಕ್ಟರ್ಸ್' ಸ್ಪೆಷಲ್ ಮತ್ತೆ ಜುಗಲ್ ಬಂದಿ.


ಡೈರೆಕ್ಟರ್ಸ್ ಸ್ಪೆಷಲ್ ನಲ್ಲಿ ಕೋಮಲ್ ರನ್ನ ಸೇರಿಸಿಕೊಂಡದ್ದು ನಂತರ ಅವರು ಕೈಕೊಟ್ಟದ್ದು ಈಗ ಇತಿಹಾಸ. ತಬ್ಲಾ ನಾಣಿ ಯವರಂತೂ ಎಂದಿನಂತೆ ಗುರುಪ್ರಸಾದ್ ಜೊತೆಗಿದಾರೆ. ಕೋಮಲ್ ಬಿಟ್ಟು ಹೋದ ನಂತರ ಗುರುಪ್ರಸಾದ್ ರಂಗಭೂಮಿಯಿಂದ ಕೆಲವು ಪ್ರತಿಭಾವಂತರನ್ನ ತಮ್ಮ Director Special ಚಿತ್ರಕ್ಕೆ ಆರಿಸಿಕೊಂಡಿದ್ದಾರಂತೆ. ಎಂಥ ಕಗ್ಗಲ್ಲನ್ನೂ ಕಡೆದು ಸುಂದರ ಶಿಲ್ಪವನ್ನಾಗಿಸಿವ ಶಿಲ್ಪಿಯ ಹಾಗೆ ನಮ್ಮ ಗುರುಪ್ರಸಾದ್ ಅಲ್ವಾ ?!! ಅಂಥದ್ರಲ್ಲಿ ರಂಗಭೂಮಿಯ ನಟರು ಅವರ ಪರಿಶ್ರಮಕ್ಕೆ ಬೆಲೆ ತಂದೇ ತರುತ್ತಾರೆ ಅಂತ ಹಾರೈಸೋಣ.


ಜುಗಲ್ ಬಂದಿಯಲ್ಲೂ ನಾಣಿಯವರಿರುವುದು ಗೊತ್ತಾಗಿದೆ. ಬಾಕಿ ರೂಪುರೇಷೆಗಳು ತಿಳಿದು ಬಂದಿಲ್ಲ.: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ