ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Jul 3, 2010

Mobile Operating System

Android : Symbian : Windows Phone : iOS : BADA : Maemo

ಈ ಶಬ್ದಗಳನ್ನ ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದ ನೆನಪಿದೆಯಾ ? ಇಲ್ವಾ ?!! ಹಾಗಿದ್ರೆ ಕೇಳಿ ನಾನು ಹೇಳ್ತೀನಿ ಏನಿವು ಅಂತ.

ಇವು , ನಮ್ಮ ದಿನನಿತ್ಯದ ಭಾಗವಾಗಿ ಹೋಗಿರುವ ಮೊಬೈಲ್ ಗಳ Operating Sysyem ಗಳ ಹೆಸರುಗಳು. ಮೊದಲಿಗೆ ಮೊಬೈಲ್ ನಮ್ಮ ಕೈಗೆ ಬಂದಾಗ ಅವು ಬಳಸ್ತಾ ಇದ್ದದ್ದು Operating System ( OS )ನ ಗುಣಾಂಶಗಳನ್ನ ಹೊಂದಿದ್ದರೂ OS ಅಲ್ಲದ ಒಂದು ಸರಳ Software. ಆ ದಿನಗಳಲ್ಲಿ ಆ ಮೊಬೈಲ್ ಗಳು ನಮಗೆ ನೀಡುತ್ತಿದ್ದ ಸೌಲಭ್ಯಗಳು ಅಷ್ಟೇ ನಿಯಮಿತವಾದವುಗಳು ತಾನೇ ?

ಆದರೆ ದಿನಕಳೆದಂತೆ ಮೊಬೈಲ್ ಗಳು PDA(Personal Digital Assistant) ಗಳಾಗಿ ಬದಲಾದುವು. ಆವಾಗ ಅವು ಒಂದು ಪುಟ್ಟ ಕಂಪ್ಯೂಟರ್ ಮಾಡಬೇಕಾದ ಕೆಲಸಗಳನ್ನ ಮಾಡಬೇಕಾದ ಒತ್ತಡಕ್ಕೆ ಒಳಗಾದುವು. ಆ ಒತ್ತಡವನ್ನ ಹಿಂದಿದ್ದ ಸರಳ Software ನಿಂದ ನಿಭಾಯಿಸುವುದು ಅಸಾಧ್ಯವೆಂದರಿತು ಹೆಚ್ಚು ಹೆಚ್ಚು ಸಾಧ್ಯತೆಗಳನ್ನ ಹೊಂದಿದ : ಸಣ್ಣ ಪ್ರಮಾಣದ ಕಂಪ್ಯೂಟರ್ ಲೆಕ್ಕದಲ್ಲಿ ಕೆಲಸ ನಿರ್ವಹಿಸಬಲ್ಲ Software ತಯಾರಿಸಿದರು. ಕಂಪ್ಯೂಟರ್ ಗಳಲ್ಲಿ ಬಳಸುವ OS ತರಹ ಕೆಲಸ ನಿರ್ವಹಿಸುತ್ತಿದ್ದರಿಂದ ಇದಕ್ಕೆ Mobile OS ಎಂದು ನಾಮಕರಣ ಮಾಡಿದರು. 

ವ್ಯಾಪಾರಿ ಜಗತ್ತಿನ ಸಾಮಾನ್ಯ ನಿಯಮದಂತೆ  ಒಂದು ನಿರ್ದಿಷ್ಟ ಉತ್ಪನ್ನವನ್ನ ಹತ್ತೆಂಟು ಕಂಪೆನಿಗಳು ತಯಾರಿಸಿ ಮಾರುಕಟ್ಟೆಗೆ ಹರಿಯಬಿಡುವ ಆರೋಗ್ಯಕರ ಪ್ರವೃತ್ತಿ ಇಲ್ಲೂ ಕಂಡು ಬಂದು ವಿವಿಧ ಕಂಪೆನಿಗಳು ವಿವಿಧ ಸಾಧ್ಯತೆಯಿರುವ Mobile OSಗಳನ್ನ ತಯಾರಿಸಿ ನಮ್ಮೆದುರಿಗಿರಿಸಿದಾರೆ : ಅವುಗಳ ಉದಾಹರಣೆಗಳೇ ಮೇಲಿನ ಹೆಸರುಗಳು

: ಕೆಲವು ಜನಪ್ರಿಯ Mobile OS ಗಳ ಪುಟ್ಟ ಪರಿಚಯ ಇಲ್ಲಿದೆ :


SYMBIAN : Symbian Foundation ಕಂಪೆನಿಯ ಈ ಉತ್ಪನ್ನ ಪ್ರಮುಖವಾಗಿ ನೋಕಿಯಾ ಕಂಪೆನಿಯಿಂದ ಬಳಸಲ್ಪಟ್ಟು  ಆ ಕಂಪೆನಿಯ ಮುಂಚೂಣಿ ಮೊಬೈಲ್ ಗಳಾದ NSeries / ESries ಮೊಬೈಲ್ ಗಳ 'ಜೀವಾಳ'.  S40, S60 ... ಹೀಗೆ ವಿವಿಧ ಹಂತಗಳಲ್ಲಿ ಇದು ಪರಿಚಯಿಸಲಾಗಿದ್ದು S60 5th Edition ಇದು ಈ ದಿನಗಳಲ್ಲಿ ನಮ್ಮ ಮನಸೂರೆಗೊಂಡಿರುವ Touch Screen ಮೊಬೈಲ್ ಗಳ 'ಜೀವಾಳ'. ಕೆಲವು ಸೋನಿ ಎರಿಕ್ಸನ್ , ಮೊಟೊರೋಲಾ ... ಕಂಪೆನಿಯ ಮೊಬೈಲ್ ಗಳಲ್ಲೂ ಇದನ್ನ ಬಳಸಲಾಗಿದೆ.


ANDROID : ಇದು ಗೂಗಲ್ ಕಂಪೆನಿ ತಯಾರಿಸಿದ Mobile OS. ಈ ದಿನಗಳಲ್ಲಿ ಅತ್ಯಂತ ಜನಪ್ರಿಯ OS. ಅನೇಕ ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕಾ ಕಂಪೆನಿಗಳು ಇದನ್ನ ಬಳಸಿಕೊಂಡು ಹೊಸ ಹೊಸ ಉತ್ಪನ್ನಗಳನ್ನ ಹೊರತರುತ್ತಿವೆ. HTC, Samsung, T-Mobile ... ಇತ್ಯಾದಿ Mobile Handset ತಯಾರಕರು ಈ ಉತ್ಪನ್ನದ ಬಳಕೆದಾರರು.


iOS : ತನ್ನೆಲ್ಲ ಉತ್ಪನ್ನಗಳ ಹೆಸರಿನ ಹಿಂದೆ ( i ) ಅನ್ನುವ ಅಕ್ಷರ ಸೇರಿಸಿ ( ಉದಾಹರಣೆಗೆ : iPHONE, iPAD, iPOD, iMAC.... ) ಮಾರುಕಟ್ಟೆಗೆ ಪರಿಚಯಿಸುವ ಆ್ಯಪಲ್ ಕಂಪೆನಿಯ ಈ Mobile OS ತಾನು ಉತ್ಪಾದಿಸುವ iPHONE ಗಾಗಿ ತಯಾರು ಮಾಡಿರುವ ಉತ್ಪನ್ನ. ತಾನೇ ಉತ್ಪಾದಕ ತಾನೇ ಬಳಕೆದಾರ ಅನ್ನುವ ಪಾರಮ್ಯದ ಸಂಕೇತವೋ ಏನೋ ( i ) ಎನ್ನುವ ಅಕ್ಷರದ ಸೂಚ್ಯರ್ಥ.


WINDOWS MOBILE : ಕಂಪ್ಯೂಟರ್ ಜಗತ್ತಿನಲ್ಲಿ ಚಕ್ರಾಧಿಪತ್ಯ ಸಾಧಿಸಿರುವ ಮೈಕ್ರೋಸಾಫ್ಟ್ ಕಂಪೆನಿಯ ಈ ಉತ್ಪನ್ನ ಮೊಬೈಲ್ ಗಳಿಗೆಂದು ತಯಾರಿಸಿರುವ OS. Microsoft ಕಂಪೆನಿ ಕಂಪ್ಯೂಟರ್ ಕ್ಷೇತ್ರದಲ್ಲಿ ಪರಿಚಯಿಸಿರುವ ಎಲ್ಲ ತರಹದ Application ಗಳ ಸಾಮ್ಯತೆ ಈ Mobile OS ನಲ್ಲೂ ದೊರೆಯುವುದರಿಂದ Almost ಎಲ್ಲ ಮೊಬೈಲ್ ತಯಾರಕ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ Atleast ಒಂದು ಉತ್ಪನ್ನಕ್ಕಾದರೂ ಈ OS ಬಳಸಿಕೊಂಡು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.


RIM BLACKBERRY : Research In Motion ( RIM ) ಕಂಪೆನಿಯ ಜನಪ್ರಿಯ ಉತ್ಪನ್ನವಾದ BlackBery ಮೊಬೈಲ್ ಗಾಗಿ ಈ OS ಬಳಕೆಯಾಗುತ್ತಿದೆ.


BADA : ಇದು ಈ ವರ್ಷದ ಮೊಬೈಲ್ ಜಾಗತಿಕ ಸಮ್ಮೇಳನ ( Mobile World Congress 2010 ) ನಲ್ಲಿ  Samsung Electronics ಕಂಪೆನಿಯಿಂದ ಪರಿಚಯಿಸಲಾದ Mobile OS. 


MEEGO : ಇದು ಈ ವರ್ಷದ ಮೊಬೈಲ್ ಜಾಗತಿಕ ಸಮ್ಮೇಳನ ( Mobile World Congress 2010 ) ನಲ್ಲಿ  Nokia Corporation & Intel ನಿಂದ ಜಂಟಿಯಾಗಿ ಉತ್ಪಾದಿಸಿ, ಪರಿಚಯಿಸಲಾದ Mobile OS. 


MAEMO : ಇದು Nokia Corporation ಕಂಪೆನಿಯಿಂದ ಪರಿಚಯಿಸಲಾಗಿರುವ Mobile OS.



ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಸಂಬಂಧಿಸಿದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


- ರೇವಪ್ಪ


No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ