ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 8, 2010

ಒಂದು ವಾರದ ವಿರಹ6 ತಿಂಗಳ ನಂತರ ನಮ್ಮೂರಿಗೆ ಹೋಗ್ತಾ ಇದೀನಿ. ಅಲ್ಲಿ ಅಂತರ್ಜಾಲದ ಸಂಪರ್ಕದ ಕೊರತೆ ಇದೆ. ಹೀಗಾಗಿ ಈ ಒಂದು ವಾರ ನಿಮಗೆ ದೈನಂದಿನ ಜ್ಞಾನ ಪುಟವನ್ನ ನೀಡೋದು ಸಾಧ್ಯವಾಗೋದಿಲ್ಲ. ಅದಕ್ಕೆ ನಿಮಗೆ Sorry ಕೇಳ್ತೀನಿ...

ಮತ್ತೆ ಮುಂದಿನ ಮಂಗಳವಾರದಿಂದ ದೈನಂದಿನ ಜ್ಞಾನ ಪುಟ ನಿಮ್ಮೆದುರಿಗೆ - ನಿಮ್ಮ mailಮನೆಗೆ.

ಅಲ್ಲಿ ತನಕ ನೀವು ಖಾಲಿ ಏನಕ್ಕೆ ಕೂತುಕೊಳ್ತೀರಿ ? 


ನಾನು ಒಂದು ವಾರ ನಿಮಗೆ ಜ್ಞಾನವನ್ನ ಹಂಚುವ ಕೆಲಸ ಮಾಡಿದೀನಿ. ಅದರಲ್ಲಿ ಸಿನೆಮಾ, ಅಧ್ಯಯನ, ಸಂದರ್ಶನ ... ಹೀಗೆ ನಾನಾ ವಿಚಾರಗಳಿದ್ವು. ಅವೆಲ್ಲವನ್ನೂ ಯಾರಿಗೂ ತಿಳಿದೇ ಇರಲಿಲ್ಲ ಅನ್ನೋ ಅಹಂ ಇಂದ ಬರೀಲಿಲ್ಲ. ಬದಲಿಗೆ ನನಗೆ ತಿಳಿಯದ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿ ನಿಮಗೂ ಹಂಚಿದೀನಿ. ಹಾಗೆ ಹಂಚಿದಾಗ ನಿಮಗೆ ಆ ಮಾಹಿತಿ ಕಲೆ ಹಾಕಲು ನಾನು ತೆಗೆದುಕೊಂಡಷ್ಟು ಸಮಯದ ಉಳಿತಾಯ ಆದ ಹಾಗಾಯ್ತು ತಾನೆ ?

ಎಲ್ರಿಗೂ ಅಲ್ದೇ ಹೋದ್ರೂ ಕೆಲವು ಜನ ಸ್ಪರ್ಧಾರ್ಥಿಗಳಿಗಾದ್ರೂ ನಾನು ಹಂಚಿದ ವಿಷಯಗಳು ಹೊಸತಾದವು ಅನಿಸಿರಲಿಕ್ಕೆ ಸಾಕು. ಅಲ್ಲಿಗೆ ನನ್ನ ಶ್ರಮ ಸಾರ್ಥಕ. 

ಅದೇ ರೀತಿ ನೀವೂ ಕೂಡ ಪ್ರತಿ ದಿನ ಒಂದು ವಿಚಾರವನ್ನ ಹೊಸತಾಗಿ ತಿಳಿಯುವ ಹಟ ಮಾಡಿ. ಹಾಗೆ ಒಂದು ವಾರದಲ್ಲಿ  ನೀವು ತಿಳಿದುಕೊಳ್ಳುವ 7 ಹೊಸ ವಿಚಾರಗಳಲ್ಲಿ ಕನಿಷ್ಠ 2 ನ್ನಾದ್ರೂ ಹಂಚಿಕೊಂಡರೆ ಇನ್ನೊಬ್ಬರಿಗೆ ಆ ಮಾಹಿತಿ ಕಲೆಹಾಕಲು ಪಡುವ ಶ್ರಮದ ಉಳಿತಾಯವಾಗಬಹುದಲ್ವೇ ?

ಇನ್ನು ಹೇಗೆ ಹಂಚಿಕೋಬೇಕು ನಿಮ್ಮ ಲೇಖನವನ್ನ ಅನ್ನೋದು ಗೊತ್ತು ತಾನೆ ? ಬಹಳ ಸರಳವಾಗಿದೆ : ನಿಮ್ಮ ಲೇಖನವನ್ನ ನನ್ನ mail ID : spardharthi@gmail.com ಗೆ email ಮಾಡಿ. ಉರಿನಿಂದ ಬಂದ ಮರುದಿನದಿಂದ ನಿಮ್ಮ ಲೇಖನಗಳನ್ನೇ ಪ್ರಕಟಿಸ್ತೀನಿ. ಸರಿನಾ ?

ಇಲ್ಲಿ ಖಂಡಿತ ಸ್ವಾರ್ಥ ಪೂರಿತ ದುಷ್ಟಬುದ್ಧಿಯನ್ನ ಇಣುಕಲು ಬಿಡಬೇಡಿ. ಬದಲಿಗೆ " ನೀ ನನಗಾದರೆ ನಾ ನಿನಗೆ " ಅನ್ನುವ ನಾಣ್ಣುಡಿ ನೆನಪಿರಲಿ. ಈ ನಾಣ್ಣುಡಿಯಲ್ಲಿ ನಿಮಗೆ ನಂಬಿಕೆ ಇದ್ರೂ ಬಂತು ಬಿಟ್ರೂ ಬಂತು , ಆದರೆ : ನಿಮಗೆ ಸಹಾಯ ದೊರೆತು ಅದರಿಂದ ಒಳ್ಳೆಯದಾಗುವುದು, ನೀವು ಇತರರಿಗೆ ಸಹಾಯ ಮಾಡಿದಾಗ ಮಾತ್ರ !!

- ಸ್ಪರ್ಧಾರ್ಥಿ


.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ