UPS (Uninterreptible Power Supply) :: ಕಂಪ್ಯೂಟರ್ ಬಳಸುವಾಗ ದಿಢೀರನೆ ವಿದ್ಯುತ್ ಸಂಪರ್ಕ ಹೊರಟು ಹೋದರೆ ನಾವು ಮಾಡುತ್ತಿದ್ದ ಕೆಲಸ ಅಪೂರ್ಣವಾಗುವುದಷ್ಟೇ ಅಲ್ಲ ಮಾಡಿದ್ದೆಲ್ಲಾ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಈ ಅನನುಕೂಲತೆಯನ್ನ ತಪ್ಪಿಸಲೆಂದೇ ತಯಾರಿಸಲಾದ ಸಾಧನ, ಯು.ಪಿ.ಎಸ್. . ಸದರಿ ಸಾಧನದ ಹೆಸರು UPS ಆದರೆ ಇದನ್ನ ಕಂಪ್ಯೂಟರ್ ಗೆ ಮಾತ್ರ ಬಳಸುತ್ತಾರೆ ಎಂದು ತಿಳಿದರೆ ತಪ್ಪು. ವಿದ್ಯುತ್ ನಿಲುಗಡೆಯಾದ ತಕ್ಷಣ ತನ್ನಲ್ಲಿ ಸಂಗ್ರಹವಾಗಿರುವ ಅಥವಾ ಮರುಕ್ಷಣದಲ್ಲಿಯೇ ವಿದ್ಯುತ್ ಉತ್ಪಾದನೆಯಾಗುವಂತೆ ಸೂಚನೆ ನೀಡುವ ಸಾಧನಕ್ಕೆ UPS ಎಂದು ಹೆಸರು. ಎರಡನೇ CASE ನಲ್ಲಿ ಬರುವ ವಿದ್ಯುತ್ ಉತ್ಪಾದನೆ ಮಾಡುವ ಸಾಧನಕ್ಕೆ POWER GENERATOR ಎಂದು ಹೆಸರು. POWER GENERATE ಮಾಡುವ ಸಾಧನಕ್ಕೂ , ವಿದ್ಯುತ್ ನಿಲುಗಡೆಯ ಮರುಕ್ಷಣವೇ ವಿದ್ಯುತ್ ಪೂರೈಕೆ ಸಲ್ಲಸಲು ಸೂಚನೆ ನೀಡುವ UPS ಗೂ ವ್ಯತ್ಯಾಸವನ್ನ ಓದುಗರು ಅರಿಯಬೇಕು.
ಹೀಗೆ ವಿದ್ಯುತ್ ಸರಬರಾಜು ನೀಡಲು UPS ಸಾಧನದ ಒಳಗೆ Battery ಯನ್ನ ಅಳವಡಿಸಲಾಗಿರುತ್ತದೆ(Battery Room). ಹಾಗೆ ಅಳವಡಿಸಲಾಗಿರುವ ಬ್ಯಾಟರಿ Acid Battery ಅಥವಾ Rechargeable Li-Ion Battery ಆಗಿರುತ್ತದೆ. ಈ ಬ್ಯಾಟರಿಗಳು ವಿದ್ಯುತ್ ಸರಬರಾಜು ಇದ್ದಾಗ ತಮ್ಮಲ್ಲಿ ಅದನ್ನ ತುಂಬಿಕೊಂಡು , ಅಭಾವ ಎದುರಾದಾಗ ತಮ್ಮ ಶೇಖರಣೆ ಖಾಲಿಯಾಗುವವರೆಗೆ ನೀಡುತ್ತವೆ. ಶೇಖರಣೆ ಖಾಲಿಯಾದ ನಂತರ ಮತ್ತೆ ವಿದ್ಯುತ್ ಬಳಸಿ ಮರುಪೂರಣ ಮಾಡಿಕೊಳ್ಳುತ್ತವೆ. ಇವೆಲ್ಲಕ್ಕೂ ಕಳಶಪ್ರಾಯವಾಗಿ ವಿದ್ಯುತ್ ನಿಲುಗಡೆಯಾದ ತತ್ ಕ್ಷಣವೇ Battery ಯಿಂದ ವಿದ್ಯುತ್ ಎಳೆಯಲು ಸೂಚನೆ ನೀಡುವ ಸಲುವಾಗಿ UPS ಒಳಗಡೆ Electronic Circuit ಒಂದನ್ನು ಕೂಡ ಜೋಡಿಸಲಾಗಿರುತ್ತದೆ.
: e-ಶ
No comments:
Post a Comment