ಅದು ಏನಂದ್ರೆ ಒಂದು ಹೊಸ Twitter Account ಶುರು ಮಾಡಿದೀನಿ.
ಅಲ್ಲಿ ಒಂದು ಸಾಲಿನ ಜ್ಞಾನ ಹಂಚಲು ಹಂಚಿಕೆ ಹಾಕಿದೀನಿ.
ಜ್ಞಾನವನ್ನ 140 ಅಕ್ಷರಗಳಲ್ಲಿ ಹಿಡಿದಿಟ್ಟು ಸ್ಪರ್ಧಾರ್ಥಿ Twitter Account ನಲ್ಲಿ ನಾನು ಬರೀತೀನಿ.
ಅದನ್ನ Follow ಮಾಡಿದರೆ ಆ 140 ಅಕ್ಷರಗಳ ಜ್ಞಾನ ನಿಮ್ಮ ಮುಂದೆ.
ನಿಮಗೂ ಇದೇ ರೀತಿಯಲ್ಲಿ ಜ್ಞಾನ ಹಂಚುವ ಮನಸ್ಸಾದ್ರೆ,
ನೀವೂ ಇದೇ ಉದ್ದೇಶಕ್ಕೆಂದು ಒಂದು ಹೊಸ Twitter Account ಶುರು ಮಾಡಿ.
ಆದ್ರೆ, ಒಂದೇ ಒಂದು ಷರತ್ತು ಏನಂದ್ರೆ ....
" ಅಲ್ಲಿ ನೀವು ಜ್ಞಾನ ಪ್ರಸಾರದ ಹೊರತು ಬೇರೇನೂ ಬರೆಯಕೂಡದು "
" ಅಂಥದ್ದೇನಾದ್ರೂ ಬರೆದಲ್ಲಿ ಅದನ್ನ ತೆಗೆದುಹಾಕಲಾಗುವುದು "
ಮೇಲ್ಕಂಡ ನಿಯಮ ಪಾಲಿಸಿ ಅಂಥದೊಂದು Twitter Account ಅನ್ನ ನೀವು ಶುರು ಮಾಡಿದ್ದೇ ಆದಲ್ಲಿ, ನಿಮ್ಮ ಆ Twitter Account ಅನ್ನ ನಾನು ( @spardharthi ) Follow ಮಾಡ್ತೀನಿ.
ಆಗ ನನ್ನ & ನಿಮ್ಮ ಪಾಲಿನ ಜ್ಞಾನ ನಮ್ಮೆಲ್ಲರ ಪಾಲಾಗುತ್ತೆ.
ಇದೇ ತಾನೆ ಸ್ಪರ್ಧಾರ್ಥಿಯ ಧ್ಯೇಯ !!
ಇಷ್ಟು ನಿಯಮ / ಕಾರ್ಯವೈಖರಿ ಪಾಲಿಸಿ ಜ್ಞಾನ ಹಂಚುವ ಕೆಲಸ ಮಾಡೋಣ.
1000 ಗಟ್ಟಲೇ ಅಕ್ಷರ ಬಳಸಿ ಲೇಖನ ಬರೆಯಲು ಆಲಸಿ ಎನ್ನಿಸುವವರು ,
ಒಂದು ಸಾಲಿನ ಆದರೆ 140 ಅಕ್ಷರ ಮೀರದ ವಾಕ್ಯಗಳಲ್ಲಿ ಜ್ಞಾನ ಹಂಚಿ.
Let's Tweet Knowledge in 140 Letters.
Cheers!!!
ಸರಿನಾ ?
ಸರಿ ಹಾಗಿದ್ರೆ. Over 2 U.
1 comment:
ಜ್ಞಾನ ಎನ್ನುವುದು ವಿಷಯಗಳ ಗ್ರಹಣ, ಕಲಿಕೆ ಹಾಗೂ ತಿಳುವಳಿಕೆ ಇವನ್ನೆಲ್ಲಾ ಒಳಗೊಂಡು ಮನಸ್ಸು ಮಾಡುವ ಒಂದು ಪ್ರಕ್ರಿಯೆ. ಇದು ನಿಜಕ್ಕೂ ಸ್ವಾಗತಾರ್ಹ.
- ಎಂ.ಬಿ.ಲಾವಣ್ಯ
Post a Comment