ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 30, 2010

ದೇಶ ಮೊದಲು !!

1 ಪ್ರತಿಕ್ರಿಯೆಗಳು

ಗಾಂಧೀಜಿ ಯವರ ಅಂಹಿಸೆ ಅಂದು ಇಂದು ಎಂದಿಗೂ ಪ್ರಸಕ್ತ. ಹಿಂಸೆ ಯಿಂದ ಸಾಧನೆ ಶೂನ್ಯ. 


  ನಮ್ಮ ದೇಶದಲ್ಲಿ ಇನ್ನೂ ಸಾಧಿಸುವುದು ಬಹಳವಿದೆ. 

ಅವನ್ನೆಲ್ಲ ಪಕ್ಕಕ್ಕಿಟ್ಟು ನಮ್ಮ ಹಿಂದಣ ಸಾಧನೆಗಳನ್ನ / ಸಂಸ್ಕೃತಿ ಗಳನ್ನ ಹೇಳುತ್ತಾ ಹೋದರೆ ಕೇಳುವವರು ಇಲ್ಲ.
 ಇಂದಿನ ಸಾಧನೆ / ಸಂಸ್ಕೃತಿ ಮುಖ್ಯ.
ಹಿಂದೆ ಹೇಗೆ ಹಳ್ಳಿಯ ಪ್ರತಿಯೊಬ್ಬರ ನಡವಳಿಕೆಯೂ ಎಲ್ಲರಿಂದ ಗಮನಿಸಲ್ಪಟ್ಟು  ಟೀಕೆ / ಪ್ರಶಂಸೆ ಗಳಿಸುತ್ತಿತ್ತೋ ಹಾಗೆಯೇ  ಇಂದಿನ Global Village ನಲ್ಲೂ ಕೂಡ. ಇಡೀ ಜಗತ್ತು ನಮ್ಮನ್ನು ನೋಡುತ್ತಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ವರ್ತನೆ ಅನುಕರಣೀಯವಾಗಿರಲಿ. ನಮ್ಮ ಮೊದಲ ಆದ್ಯತೆ ದೇಶವಾಗಲಿ.
  ದೇಶ ಮೊದಲು. ಇನ್ನುಳಿದೆಲ್ಲವೂ ಆಮೇಲೆ !!


ನಮ್ಮದು ಸುಂದರ ದೇಶ. ಶಾಂತಿ ಪ್ರಿಯ ದೇಶ.
ಆದರೆ ,



ಶಾಂತಿ ಪ್ರಿಯ ದೇಶವಾಗುವುದಕ್ಕೂ ಶಾಂತಿಯುತ ದೇಶವಾಗುವುದಕ್ಕೂ ವ್ಯತ್ಯಾಸವಿದೆ !!

ಎಲ್ಲೆಡೆ ಶಾಂತಿ ನೆಲೆಸಲಿ ..



: ಸ್ಪರ್ಧಾರ್ಥಿ



.

Sep 28, 2010

Title Suit ಅಂದ್ರೇನು ?

0 ಪ್ರತಿಕ್ರಿಯೆಗಳು

Quite Title Suit = To settle a controversy. For example, a lawsuit to quiet title to a piece of property can be undertaken when one believes oneself to be owner of a tract of land. If such is proven, one can legally extinguish claims of those who falsely assert ownership. A suit to quiet title enables the rightful owner to transfer clear title to the property. Historically, such lawsuits have been used to extinguish claims of a squatter on property.


***** 

ಇದು answers.com ನೀಡುವ ಉತ್ತರ. ಇದನ್ನೇ ನಾನು ಕನ್ನಡಕ್ಕೆ ಇಳಿಸುವ ಪ್ರಯತ್ನ ಮಾಡ್ತೀನಿ ನೋಡಿ :

ಟೈಟಲ್ ಸ್ಯೂಟ್ = ಅಂದ್ರೆ ವಿವಾದಗಳನ್ನ ಬಗೆಹರಿಸು ಎಂದರ್ಥ. ಉದಾಹರಣೆಗೆ : ಒಂದು ದಾವೆ(suit) ( ನ್ಯಾಯಾಲಯದ ಮೂಲಕ ಕ್ಲೇಮು / ಹಕ್ಕು ಸಾಧಿಸುವ ವಾದ=ದಾವೆ ) ಮೂಲಕ, ನಿಗದಿತ ಭೂಮಿಯ ಮೇಲಿನ  ಒಡೆತನದ ತಕರಾರುಗಳನ್ನ ಬಗೆಹರಿಸಿಕೊಂಡರೆ ಅಂಥ suit ಅನ್ನು titlesuit ಅಂತ ಕರೀತಾರೆ. 

*****


Title =
  1. An identifying name given to a book, play, film, musical composition, or other work.
  2. A formal appellation attached to the name of a person or family by virtue of office, rank, hereditary privilege, noble birth, or attainment or used as a mark of respect.

Meaning in Law.
  1. The coincidence of all the elements that constitute the fullest legal right to control and dispose of property or a claim.
  2. The aggregate evidence that gives rise to a legal right of possession or control.
  3. The instrument, such as a deed, that constitutes this evidence.

Clear Title = Title that is clear of all claims or disputed interests. It is necessary to have clear title to a piece of real estate before it can be sold by one party to another. In order to obtain a clear title, it is usually necessary to have a title search performed by a title company, which may find various clouds on the title such as an incomplete certificate of occupancy, outstanding building violations, claims by neighbors for pieces of the property, or an inaccurate survey. Once these objections have been resolved, the owner will have a clear and marketable title.






 : ರವಿ




.

ಯಾರಿದು ? ಸ್ವಾಮಿ ಅಗ್ನಿವೇಶ್

0 ಪ್ರತಿಕ್ರಿಯೆಗಳು
ಈ ಮಾವೋವಾದಿಗಳ / ನಕ್ಸಲರ ಸುದ್ದಿ ಬಂದಾಗೆಲ್ಲಾ ಸ್ವಾಮಿ ಅಗ್ನಿವೇಶ್ ಕೂಡ ಪತ್ರಿಕೆಗಳಲ್ಲಿ ಪ್ರಕಟವಾಗ್ತಾರೆ. ಯಾರಿದು ? ಅಂತ ತಡಕಾಡಿದಾಗ ಸಿಕ್ಕ ಸ್ವಲ್ಪ ಮಾಹಿತಿಯಲ್ಲಿ ಅಲ್ಪವನ್ನ ನಿಮಗೆ ನೀಡ್ತಿದೀನಿ :

  • ಛತ್ತೀಸಘಡದ ಜಾಂಜಗೀರ್-ಚಂಪಾ ಜಿಲ್ಲೆಯ ಶಕ್ತಿ ಎಂಬಲ್ಲಿ ಶ್ಯಾಂ ವೇಪಾ ರಾವ್ ಆಗಿ ಸಪ್ಟೆಂಬರ್ 21, 1939ರಲ್ಲಿ ಜನನ
  • ಕಲ್ಕತ್ತಾದಲ್ಲಿ ಕಾನೂನು & ಅರ್ಥಶಾಸ್ತ್ರದಲ್ಲಿ ಪದವಿ
  • 1968ರಲ್ಲಿ ಹರ್ಯಾಣಾದಲ್ಲಿ ಆರ್ಯ ಸಮಾಜ ಸೇರಿ 1970ರಲ್ಲಿ ಸನ್ಯಾಸ ಸ್ವೀಕಾರ
  • ಸನ್ಯಾಸ ಸ್ವೀಕರಿಸಿದ ದಿನವೇ ಆರ್ಯ ಸಭಾ ಎಂಬ ಹೆಸರಿನ ರಾಜಕೀಯ ಪಕ್ಷ ಸ್ಥಾಪನೆ
  • ಆರ್ಯ ಸಭಾದ ಸಿದ್ಧಾಂತಗಳನ್ನ ವೈದಿಕ ಸಮಾಜವಾದ ಎಂದು ಹೆಸರಿಸಿದ ಅಗ್ನಿವೇಶ್
  • 1977ರಲ್ಲಿ MLA ಆಗಿ ಆಯ್ಕೆ ( ಹರ್ಯಾಣಾ )
  • 1979 ರಿಂದ 1982ರವರೆಗೆ ರಾಜ್ಯದ ಶಿಕ್ಷಣ ಮಂತ್ರಿಯಾಗಿ ಸೇವೆ
  • ಮಂತ್ರಿಯಾಗಿದ್ದಾಗಲೇ 1981ರಲ್ಲಿ ' ಜೀತ ಕಾರ್ಮಿಕರ ವಿಮುಕ್ತಿ ಸಂಘಟನೆ ' ಸ್ಥಾಪಿಸಿದ ಅಗ್ನಿವೇಶ್
  • ರಾಜಸ್ಥಾನದಲ್ಲಿ ನಡೆದ ಸತಿ ಪದ್ಧತಿಯ ಆಚರಣೆಯನ್ನ ಖಂಡಿಸಿ ನಡೆಸಿದ ಪಾದಯಾತ್ರೆಯ ಫಲವಾಗಿ Commission of Sati (prevention) Act of 1987 ಜಾರಿಗೆ ಬಂತು.
  • ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಅಗ್ನಿವೇಶ್ ಕಳಕಳಿ ಮನನೀಯ
  • " ಮುಸ್ಲಿಮರೆಲ್ಲಾ ಭಯೋತ್ಪಾದಕರು ಅಂತ ಬಿಂಬಿಸುವ ಅಮೆರಿಕವೇ ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ " - ಎನ್ನುವ ಅಗ್ನಿವೇಶ್
  • ಆರ್ಯ ಸಮಾಜದ ಹೆಸರಿನಿಂದ ಪ್ರವರ್ಧಮಾನಕ್ಕೆ ಬಂದ ಅಗ್ನಿವೇಶ್ ಅವರ ಧೋರಣೆಗಳು ದಯಾನಂದ ಸರಸ್ವತಿಯವರ ಮೂಲ ಆರ್ಯ ಸಮಾಜದ ತತ್ವಗಳಿಗೆ ತದ್ವಿರುದ್ಧವಾಗಿರುವುದನ್ನ ದೇಶದಾದ್ಯಂತ ಇರುವ ಆರ್ಯ ಸಮಾಜ ಪ್ರತಿನಿಧಿ ಸಭೆಗಳು ಪ್ರಶ್ನಿಸಿವೆ.





ಇನ್ನು ಅವರ ನಕ್ಸಲರ ಬಗೆಗಿನ ಕಾಳಜಿಯೋ / ಧೋರಣೆಯೋ ಎಂಥದಿದೆ ಅಂತ ತಿಳಿಯುವ ಇರಾದೆ ಇದೆಯಾ ? ಹಾಗಿದ್ರೆ ನಿಮ್ಮಲ್ಲೇ ಒಬ್ರು ಹುಡುಕಿ ಹೇಳಿ. ಎಲ್ಲ ನಾನೇ ಹುಡುಕಿ ಕೊಟ್ಟು ನೀವು ಬರೀ ಓದೋ ಕೆಲಸ ಮಾಡಿದ್ರೆ ತಪ್ಪಲ್ವಾ ? ಶಾಲೆಯಲ್ಲಿ ಚಟುವಟಿಕೆ ಬೇಕು ಅನ್ನುವ ಹಾಗೆ ಇಲ್ಲೂ ಇರಲಿ... ನಿಮ್ಮ ಮಾಹಿತಿ ಲೇಖನ ರೂಪದಲ್ಲಿದ್ದರೂ ಸೈ - Comment ರೂಪದಲ್ಲಿದ್ದರೂ ಸೈ.



: ರವಿ




.

Sep 27, 2010

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ - ಕ್ಲರಿಕಲ್ ಪರೀಕ್ಷೆ ಜನವರಿ 2010

0 ಪ್ರತಿಕ್ರಿಯೆಗಳು
.




ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ - ಕ್ಲರಿಕಲ್ ಪರೀಕ್ಷೆ ಜನವರಿ 2010
{ ಅತ್ಯಮೂಲ್ಯ ಉತ್ತರ ಪತ್ರಿಕೆ : 02 }
 



  • ಸೌದಿ ಅರೇಬಿಯಾದ ನಾಣ್ಯ - ದಿನ್ಹಾರ್
  • ಕರ್ನಾಟಕ , ಆಂಧ್ರಪ್ರದೇಶ , ಪಶ್ಚಿಮ ಬಂಗಾಳ , ತಮಿಳುನಾಡು & ಜಮ್ಮು ಮತ್ತು ಕಾಶ್ಮೀರ - ಇವು ರೇಶ್ಮೆ ಉತ್ಪಾದನೆಯಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳು
  • ' ವಿಶೇಷ ಕೃಷಿ & ಗ್ರಾಮೀಣ ಉದ್ಯೋಗ ಯೋಜನೆ ' - ಇದು ಕೃಷಿ ಉತ್ಪನ್ನಗಳು & ಕೃಷಿ ಸಂಬಂಧೀ ಉತ್ಪನ್ನಗಳ ರಫ್ತು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಯೋಜನೆ.
  • ಏಪ್ರಿಲ್ 1, 2009 ರಿಂದ ಜಾರಿಗೆ ಬರುವಂತೆ Commodity Transaction Tax ಅನ್ನು ರದ್ದುಪಡಿಸಲಾಗಿದೆ ( ಹಿಂಪಡೆಯಲಾಗಿದೆ )
  • ಕೇಂದ್ರ ಸರ್ಕಾರ ಜಮ್ಮು & ಕಾಶ್ಮೀರದಲ್ಲಿ ಮೊಗಲ್ ದೊರೆ ಅಕ್ಬರ್ ನಿರ್ಮಿಸಿದ್ದ ಹೆದ್ದಾರಿಯೊಂದನ್ನ ಪುನರ್ ನಿರ್ಮಿಸುವ ನಿರ್ಧಾರ ಕೈಗೊಂಡಿದೆ.
  • ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕ್ಕೆ ' ಯಶ್ ಪಾಲ್ ಸಮಿತಿ ' ಉನ್ನತ ಶಿಕ್ಷಣ ಪದ್ಧತಿಯ ಪುನರ್ ಪರಿಶೀಲನೆ & ಸುಧಾರಣೆಗೆ ಸಲಹೆಗಳನ್ನ ನೀಡಿತು.
  • 2011-2012ರ ಹೊತ್ತಿಗೆ ಪ್ರಧಾನ ಮಂತ್ರಿ ರೋಜಗಾರ್ ಯೋಜನೆಯ ಅಡಿಯಲ್ಲಿ ಸಣ್ಣ & ಮಧ್ಯಮ ಕೈಗಾರಿಕೆ ವಲಯದಲ್ಲಿ 37 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ.
  • ಈಶಾನ್ಯ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ' ಒಂದು ಗ್ರಾಮ - ಒಂದು ಉತ್ಪನ್ನ ' ( One Village - One Product ) ಯೋಜನೆಯಡಿಯಲ್ಲಿ ನಿಂಬೆಹಣ್ಣಿನ ಸಸಿಗಳನ್ನ ನೆಡುವ ಮೂಲಕ ಪ್ರಾರಂಭಿಸಿದೆ.
  • Mission Clean Ganga - ಪ್ರಕಾರ 2020ರ ವೇಳೆಗೆ ಗಂಗಾ ನದಿಯ ನೀರಿನಲ್ಲಿ ಕಲ್ಮಶ ಹರಿಬಿಡುವುದನ್ನ ತಡೆಯುವ ಗುರಿ ಹೊಂದಿದೆ.
  • ಜಗತ್ತಿನಲ್ಲಿ ಅತಿ ಹೆಚ್ಚು ಬಂಗಾರದ ದಾಸ್ತಾನು ಹೊಂದಿರುವ ದೇಶ - ಅಮೆರಿಕಾ
  • ಮಾನವ ಸಂಪನ್ಮೂಲ ಅಭಿವೃದ್ಧಿ ಪಟ್ಟಿಯಲ್ಲಿ ಭಾರತ 134ನೇ ಸ್ಥಾನದಲ್ಲಿದ್ದರೆ ನಾರ್ವೆ ಪ್ರಥಮ & ನೈಗರ್ ಕೊನೆಯ ಸ್ಥಾನದಲ್ಲಿದೆ. ಏಷ್ಯಾ & ಆಸ್ಟ್ರೇಲಿಯಾ ಖಂಡ ಮಾತ್ರ ಪರಿಗಣಿಸಿದರೂ ಭಾರತ ದೇಶ ಮೊದಲ 10 ಸ್ಥಾನದಲ್ಲೂ ಕಾಣಿಸಿಕೊಂಡಿಲ್ಲ.
  • 2009ರಲ್ಲಿ Capgemini ತಯಾರಿಸಿರುವ ಏಷ್ಯಾ ಪೆಸಿಫಿಕ್ ಪ್ರದೇಶದ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ.
  • GM Food ಎನ್ನುವ ಪದ ಇತ್ತೀಚೆಗೆ ಬಳಕೆಯಲ್ಲಿದೆ. GM ಎಂದರೆ Genetically Modified.
  • ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದಲ್ಲಾ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಸೇರಿದವರು.
  • ಕಳೆದ ಡಿಸೆಂಬರ್ ನಲ್ಲಿ ಜಾಗತಿಕ ತಾಪಮಾನ ಕುರಿತ ಐತಿಹಾಸಿಕ ಸಭೆ ನಡೆದದ್ದು ಕೋಪನ್ ಹೇಗನ್ ನಲ್ಲಿ . ಕೋಪನ್ ಹೇಗನ್ ಡೆನ್ಮಾರ್ಕ್ ದೇಶದಲ್ಲಿದೆ.
  • ಸುಬ್ರತೋ ಕಪ್ ಫುಟ್ ಬಾಲ್ ಕ್ರೀಡೆಗೆ ಸಂಬಂಧಿಸಿದೆ.
  • ಸತ್ಯಂ ಕಂಪೆನಿಯನ್ನು ಮಹೀಂದ್ರಾ ಸಂಸ್ಥೆ ಖರೀದಿಸಿದ ನಂತರ 'ಮಹೀಂದ್ರಾ ಸತ್ಯಂ' ಕಂಪೆನಿ MENA ದೇಶಗಳಿಂದ ಬೃಹತ್ Contract ಪಡೆಯಿತು. MENA ಅಂದ್ರೆ Middle East & North Africa.
  • ಜಪಾನ್ ನ ಈಗಿನ ಪ್ರಧಾನ ಮಂತ್ರಿ - ಕಾನ್ ನಾಓಟೋ ( Kan Naoto )
  • ಭಾರತದಲ್ಲಿ ಈಗ ಚಾಲ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಪಾಲಿಸಿ ( National Health Policy ) 2002ರಲ್ಲಿ ಪರಿಷ್ಕರಿಸಲಾಯಿತು.  [ ಮೂಲತಃ 1983ರಲ್ಲಿ ಈ Policy ಅಸ್ತಿತ್ವಕ್ಕೆ ಬಂತು ]
  • ಕೇಂದ್ರ ಸರ್ಕಾರದ Ministry of Overseas Indian Affairs ಸ್ಥಾಪಿಸಿರುವ Indian Community Welfare Fund(ICWF) ಜನವರಿ 1, 2009ರಲ್ಲಿ ಜಾರಿಗೆ ಬಂತು. ಜಗತ್ತಿನ 17 Emigration Clearance Required (ECR) ದೇಶಗಳಿಗೆ ಸಂಬಂಧಿಸಿದಂತೆ ಆ ದೇಶಗಳಲ್ಲಿ ತೊಂದರೆಗೀಡಾಗುವ ಭಾರತೀಯರ ಸಲುವಾಗಿ ಈ ನಿಧಿ ಸ್ಥಾಪನೆಯಾಗಿದೆ. ಯುಎಇ,  ಸೌದಿ ಅರೇಬಿಯಾ, ಕತಾರ್, ಓಮನ್, ಕುವೈತ್, ಬಹ್ರೇನ್, ಮಲೇಷಿಯಾ, ಲಿಬಿಯಾ, ಜೋರ್ಡಾನ್, ಯೆಮೆನ್, ಸೂಡಾನ್, ಅಫ್ಘಾನಿಸ್ತಾನ್, ಇಂಡೋನೇಷಿಯಾ, ಸಿರಿಯಾ, ಲೆಬನಾನ್, ಥಾಯಲ್ಯಾಂಡ್ & ಇರಾಕ್ : ಇವೇ ಆ 17 ದೇಶಗಳು.





: ಉತ್ತರಚೋರ







.

Sep 25, 2010

ಕಂಪ್ಯೂಟರ್ ಮೂಲಕ ಅನ್ನದಾಸೋಹ

0 ಪ್ರತಿಕ್ರಿಯೆಗಳು
ಇದೇನಿದು ಹೊಸ ಥರ ಇದೆಯಲ್ಲಾ ?! ಅಂತಿರಾ ? ಹೌದು ಹೊಸ ಯುಗಕ್ಕೆ ಹೊಸ ಮಾರ್ಗಗಳು. ಇದು United Nations Food Programme ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು Non-Profit ಅಂತರಜಾಲ ತಾಣ. 


ತಾಣದ ಧ್ಯೇಯಗಳು ಇಷ್ಟು :

  1. ಸರ್ವರಿಗೂ ಉಚಿತ ಶಿಕ್ಷಣ
  2. ಹಸಿದವರಿಗೆ ಉಚಿತ ಆಹಾರ ನೀಡುವ ಮೂಲಕ ಜಗತ್ತಿನಲ್ಲಿ ಹಸಿವಿನ ಸಮಸ್ಯೆಯನ್ನ ಹೋಗಲಾಡಿಸುವುದು.
ತಾಣದ ಕಾರ್ಯಾಚರಣೆ ಸರಳವಾಗಿದೆ :

ತಾಣದಲ್ಲಿ ಹತ್ತು ಹಲವು ವಿಷಯಗಳ ಮೇಲೆ ಶೈಕ್ಷಣಿಕ Quiz ತಯಾರು ಮಾಡಿದಾರೆ. ನಾವು Click ಮಾಡುವ ಪ್ರತಿ ಸರಿ ಉತ್ತರಕ್ಕೆ 10 ಕಾಳು ಅಕ್ಕಿ (ಧಾನ್ಯ) ದಾಸೋಹದ ಪಾತ್ರೆಗೆ ಸೇರುತ್ತದೆ. 

ಅದು ಹೇಗೆ mouseclick ಮಾಡಿದರೆ ಅಕ್ಕಿ ಸಿಗುತ್ತದೆ ?

ಪ್ರತಿಯೊಂದು ಅಂತರಜಾಲತಾಣಕ್ಕೂ ಹಣ ಮಾಡಿಕೊಳ್ಳುವ ಅವಕಾಶವಿರುತ್ತದೆ. ತನ್ನ ಒಡೆತನದ ತಾಣದಲ್ಲಿ ಜಾಹೀರಾತು ಪ್ರಕಟಿಸಲು ಸ್ಥಳಾವಕಾಶ ನೀಡುವ ಮೂಲಕ ಆ ಅಂತರಜಾಲ ತಾಣದ ಮಾಲೀಕನಿಗೆ ಹಣ ಸಂದಾಯವಾಗುತ್ತದೆ. ಹಾಗೆ ಸ್ಥಳಾವಕಾಶ ನೀಡಿದ ನಂತರ ಸದರಿ ತಾಣದಲ್ಲಿ ಒಬ್ಬ ನೆಟ್ಟಿಗ / ನೆಟಿಝನ್ ( interNET + citiZEN = NETIZEN ) ಮಾಡುವ MouseClick ಗಳ ಸಂಖ್ಯೆ ಆಧರಿಸಿ ಸದರಿ ತಾಣದ ಒಡೆಯನಿಗೆ ಜಾಹೀರಾತುದಾರರು ಹಣ ಸಂದಾಯ ಮಾಡುತ್ತಾರೆ.

ಇದೇ ರೀತಿಯಲ್ಲಿ ಸದರಿ ವಿಶ್ವಸಂಸ್ಥೆಯ ಈ ತಾಣಕ್ಕೂ ಜಾಹೀರಾತು ಕಂಪೆನಿಗಳ ಒಡೆಯರು ಗುಪ್ತದಾನಿಗಳಾಗಿದ್ದಾರೆ. ಅಂಥ ಜಾಹೀರಾತು ಕಂಪೆನಿಗಳು ದಾಸೋಹ ಮಾಡಲು ನಾವು ಮಾಡುವ Mouse Click ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಇಷ್ಟೆಲ್ಲಾ ಓದಿದ ಮೇಲೆ ನೀವೂ ಅನ್ನದಾಸೋಹಕ್ಕೆ ಕುತೂಹಲಿಗಳಾಗಿದೀರಿ ಅಂತ ಗೊತ್ತು ನನಗೆ : ಆದರೆ ಅನ್ನ - ಸಾರು ಬಡಿಸಲು ಅನ್ನದ ಕೈ - ಸೌಟು ಹುಡುಕುವ ಅವಶ್ಯಕತೆಯಿಲ್ಲ... !! ನಿಮ್ಮ ಕಂಪ್ಯೂಟರ್ Mouse ಹಿಡಿದು ಈ ಕೆಳಕಂಡ ತಾಣ ಕ್ಲಿಕ್ಕಿಸಿ .. ಸರಿ ಉತ್ತರಗಳನ್ನ ಕ್ಲಿಕ್ಕಿಸುತ್ತಾ ಹೋಗಿ . ಮನಸ್ತೃಪ್ತಿಯಾಗುವವರೆಗೆ ಊಟ ಬಡಿಸಿ..!!! ಇವತ್ತೊಂದು  ದಿನವಲ್ಲಾ  ಪ್ರತಿ ದಿನವೂ ದಾಸೋಹ ಮಾಡುವ ಸತ್ಕೃಪೆಗೆ ಪಾತ್ರರಾಗಿ.. ಬದಲಿಗೆ ನಿಮ್ಮ ಜ್ಞಾನವನ್ನೂ ಹೆಚ್ಚಿಸಿಕೊಳ್ಳಿ .. ಇಗೋ e-ಅನ್ನದ ಪಾತ್ರೆ ನಿಮ್ಮ ಕೈಗೆ : 







: ನಿಹಾರಿಕಾ




.

Sep 23, 2010

ಸ್ಟಾಫ್ ಸೆಲೆಕ್ಷನ್ ಕಮೀಷನ್ - DEO ಪರೀಕ್ಷೆ - 2009

1 ಪ್ರತಿಕ್ರಿಯೆಗಳು


ಸ್ಟಾಫ್ ಸೆಲೆಕ್ಷನ್ ಕಮೀಷನ್ - DEO ಪರೀಕ್ಷೆ - 2009
{ ಅತ್ಯಮೂಲ್ಯ ಉತ್ತರ ಪತ್ರಿಕೆ : 01 }
 

  • ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ವಯಸ್ಸಿನಲ್ಲಿ ಯಾವುದೇ ಮೇಲ್ಮಿತಿಯಿಲ್ಲ. ಕೆಳಮಿತಿ ಕನಿಷ್ಟ 35 ವರ್ಷವಾಗಿರಬೇಕು.
  • ಜವಾಹರ್ ರೋಜಗಾರ್ ಯೋಜನೆಯ ಜವಾಬ್ದಾರಿ ಗ್ರಾಮಪಂಚಾಯತಿಗೆ ಸೇರಿದ್ದು.
  • ಲೋಕಸಭೆ ಅಧಿವೇಶನ ನಡೆಯಲು ಇರಬೇಕಾದ ಕೋರಂ - ಒಟ್ಟು ಸದಸ್ಯ ಬಲದ 1/10
  • ಪ್ರಜಾಪ್ರಭುತ್ವದಲ್ಲಿ ' ಸಮಾನರಲ್ಲಿ ಮೊದಲಿಗ = First Among Equals ' ಎಂದು ಕರೆಸಿಕೊಳ್ಳುವ ವ್ಯಕ್ತಿ - ರಾಷ್ಟ್ರಪತಿ. ( ಇದೇ ಕಾರಣಕ್ಕೆ ಅವರನ್ನು ದೇಶದ ಪ್ರಥಮ ಪ್ರಜೆ ಎಂದು ಕರೆಯಲಾಗುತ್ತದೆ )
  • ಭಾರತದ ಸಿಲಿಕಾನ್ ವ್ಯಾಲಿ - ಬೆಂಗಳೂರು
  • ' ಇಂಡಿಯಾ ವಿನ್ಸ್ ಫ್ರೀಡಂ ' ಪುಸ್ತಕ ಬರೆದವರು - ಮೌಲಾನಾ ಅಬುಲ್ ಕಲಾಮ್ ಆಜಾದ್
  • ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನ ಡಿಸೆಂಬರ್ 10ರಂದು ಆಚರಿಸಲಾಗುತ್ತದೆ.
  • 1959ರವರೆಗೆ ಪಾಕಿಸ್ತಾನದ ರಾಜಧಾನಿ ಕರಾಚಿ ಆಗಿತ್ತು.
  • ರಿಸರ್ವ್ ಬ್ಯಾಂಕಿನ FERA ( Foreign Exchange Regulation Act ) ಈಗ FEMA ( Foreign Exchange Management Act ) ಎಂದು ಬದಲಾಗಿದೆ.
  • ಮಾಹಿತಿ ಹಕ್ಕು ಕಾಯ್ದೆ 2005ರಲ್ಲಿ ಜಾರಿಗೆ ಬಂತು.
  • 2010ರ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯ ವಿಜೇತರು - ಭಾರತ & ಕೊರಿಯಾ ( ಜಂಟಿ ). 2009ರಲ್ಲಿ ಭಾರತ ಮಲೇಷಿಯಾ ವಿರುದ್ಧ ಜಯ ಸಾಧಿಸಿತು.
  • 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತ - ಶ್ರೀಲಂಕಾ - ಬಾಂಗ್ಲಾದೇಶ ಒಟ್ಟುಗೂಡಿ ಆಯೋಜಿಸುತ್ತಿವೆ.
  • ಹಾಲಿ ಇಸ್ರೋ ಮುಖ್ಯಸ್ಥರು - ಕೆ.ರಾಧಾಕೃಷ್ಣನ್ ( ಹಿಂದಿನವರು : ಮಾಧವನ್ ನಾಯರ್ )
  • Gross National Product - Net National Product = Depriciation
  • My Experiments With Truth ಎಂಬ ಆತ್ಮಕಥನ ಬರೆದವರು - ಮಹಾತ್ಮಾ ಗಾಂಧೀಜಿ
  • ಭಾರತದ ಪ್ರಮುಖ ಮರುಭೂಮಿಯ ನದಿ - ಲೂನಿ
  • ನಾಗಾರ್ಜುನಸಾಗರ ಜಲಾಶಯ ಕೃಷ್ಣಾ ನದಿಗೆ ಅಡ್ಡಲಾಗಿ ಆಂಧ್ರಪ್ರದೇಶದಲ್ಲಿ ಕಟ್ಟಲಾಗಿದೆ.
  • Stagnation & Inflation ಎರಡೂ ಒಟ್ಟಿಗೆ ಸಂಭವಿಸಿದರೆ ಅದನ್ನ Stagflation ಎಂದು ಕರೆಯುತ್ತಾರೆ.
  • ರಾಜಸ್ಥಾನದ ಖೇತ್ರಿ ನಗರ ತಾಮ್ರದ ಉದ್ದಿಮೆಗೆ ಹೆಸರುವಾಸಿ. ಅಲ್ಲಿ Hindustan Copper Limited ಕಾರ್ಖಾನೆ ಇದೆ.
  • ಸಾಂಚಿ ಸ್ಥೂಪ ಇರುವ ಸಾಂಚಿ ನಗರ ಮಧ್ಯಪ್ರದೇಶದಲ್ಲಿದೆ.
  • ಅಕ್ಬರನ ಪಟ್ಟಾಭಿಷೇಕವಾದಾಗ ಅವನಿಗೆ 13 ವರ್ಷ.
  • ಕೇರಳ ರಾಜ್ಯಕ್ಕೆ ಅಂಟಿಕೊಂಡಿರುವ ಕರಾವಳಿಗೆ ಮಲಬಾರ್ ಎಂದು ಹೆಸರು. ( ತಮಿಳುನಾಡು - ಕೋರಮಂಡಲ್ ; ಕರ್ನಾಟಕ - ಕೆನರಾ ; ಮಹಾರಾಷ್ಟ್ರ - ಕೊಂಕಣ್ )
  • ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಬಂಗಾರ ನಿಕ್ಷೇಪಗಳನ್ನ ಹೊಂದಿದೆ.
  • " ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು. ನಾನು ಅದನ್ನ ಪಡೆದೇ ತಿರುತ್ತೇನೆ. " ಎಂದು ಗುಡುಗಿದವರು ತಿಲಕ್
  • ( minus 40 degree ) ಈ ಮಾಪನ ಫ್ಯಾರನ್ ಹೀಟ್(F) ಮತ್ತು ಸೆಲ್ಸಿಯಸ್(C) ಎರಡೂ ಮಾಪನಗಳ ಮೇಲೆ ಒಂದೇ ಆಗಿ ಓದಲ್ಪಡುತ್ತದೆ. ಮಾಪನ ಪರಿವರ್ತನಾ ಸೂತ್ರ ಹೀಗಿದೆ : C = (F-32 ) * 5/9



: ಉತ್ತರಚೋರ







.

Sep 22, 2010

ಅತ್ಯಮೂಲ್ಯ ಉತ್ತರ ಪತ್ರಿಕೆಗಳು

0 ಪ್ರತಿಕ್ರಿಯೆಗಳು
ನಮಸ್ತೆ .. ಒಂದು ದಿನದ ಉದ್ದೇಶಪೂರ್ವಕ ವಿರಾಮದ ನಂತರ ಇವತ್ತು ಮತ್ತೆ ನಿಮ್ಮ ಮುಂದೆ ಸ್ಪರ್ಧಾರ್ಥಿ. ಇವತ್ತಿನ ವಿಷಯ ಸ್ವಲ್ಪ ಆಸಕ್ತಿದಾಯಕವಾಗಿರುವುದರ ಜೊತೆಗೆ ಓದುಗರ ಪಾಲ್ಗೊಳ್ಳುವಿಕೆಯನ್ನ ಬಯಸುವಂಥದು. ಸೀದಾ ವಿಷಯಕ್ಕೆ ಬರ್ತೀನಿ :

ನಾವು ಎದುರಿಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೆಲವೊಮ್ಮೆ ಪ್ರಶ್ನೆಗಳು & ಉತ್ತರಗಳು ಹಿಂದೆಲ್ಲೋ ನೋಡಿದಂತೆ ಯಥಾವತ್ತಾಗಿ ಅಚ್ಚಾಗಿ ಅಚ್ಚರಿ ಮೂಡಿಸುತ್ತವೆ. ಅಂದರೆ , ನೀವು ಇನ್ನಾವುದೋ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಆ ಪ್ರಶ್ನೆಯನ್ನ ಬಿಡಿಸಿರುತ್ತೀರಿ. ಅಲ್ಲವೇ ? ಮತ್ತು ಅಂಥ ಸಂದರ್ಭದಲ್ಲಿ ಉತ್ತರ ನಿಮಗೆ ಥಟ್ಟನೇ ಹೊಳೆದು ಆನಂದಭಾಷ್ಪವೊಂದು ಕಣ್ಣಂಚಿನಿಂದ ಉದುರಿದರೂ ಅಚ್ಚರಿಯಿಲ್ಲ.. 

ಹೀಗಾಗಿ ನಾನು ಒಂದು ಕುತಂತ್ರ ಮಾಡಿದೀನಿ.. ಕೇಳಿಸ್ಕೊಳ್ಳಿ.

ನಾವು ಆಸಕ್ತ ಸ್ಪರ್ಧಾರ್ಥಿಗಳು ತಾವು ಕುತೂಹಲಕ್ಕೆಂದು / ಅಭ್ಯಾಸದ ದೃಷ್ಟಿಯಿಂದ ಬಿಡಿಸುವ ಯಾವತ್ತೂ ಪ್ರಶ್ನೆಪತ್ರಿಕೆಗಳ ( ಮಾದರಿ ಪ್ರಶ್ನೆಪತ್ರಿಕೆಗಳನ್ನ Avoid ಮಾಡುವುದು ಒಳ್ಳೆಯದು ) ಮೇಲೆ ಒಂದು ಸಣ್ಣ ಟಿಪ್ಪಣಿ ಮಾಡಿಟ್ಟುಕೊಳ್ಳೋಣ. ಬಿಡುವಿದ್ದಾಗ ಅಂಥ ಟಿಪ್ಪಣಿಗಳನ್ನ e-ಪತ್ರಿಕೆಯಲ್ಲಿ ಪ್ರಕಟಿಸೋಣ. ಆ ಟಿಪ್ಪಣಿ ಹೇಗಿರಬೇಕು ಅಂದ್ರೆ :


ಉದಾಹರಣೆ : 
15. ದುಬೈ ನಲ್ಲಿ ಚಲಾವಣೆಯಲ್ಲಿರುವ ನಾಣ್ಯ ಯಾವುದು ?
ಎ. ಟಾಕಾ
ಬಿ. ದಿನಾರ್
ಸಿ. ಡಾಲರ್
ಡಿ. ದಿರಾಮ್

ಉತ್ತರ : ದಿರಾಮ್ ( Dirham ) ಅಂತ ನಿಮಗೆಲ್ಲ ಗೊತ್ತಾದ ನಂತರ ನಿಮ್ಮ ಟಿಪ್ಪಣಿ 


" ದುಬೈ ( ಸೌದಿ ಅರೇಬಿಯಾ ) ನಲ್ಲಿ ಚಲಾವಣೆಯಲ್ಲಿರುವ ನಾಣ್ಯ - ದಿರಾಮ್ "


ಇಷ್ಟಿದ್ದರೆ ಸಾಕು. ಆಗ ನಿಮ್ಮ ಪರೀಕ್ಷಾ ಸಿದ್ಧತೆಯ ತಾಲೀಮಿಗೆ ಹೊಸ Excercise ಒಂದು ಸೇರಿದಂತಾಗಿ ಪ್ರಶ್ನೆಪತ್ರಿಕೆಯನ್ನ ಮರುಕಳಿಸುವ ಶಿಕ್ಷಕರು ಬೆಪ್ಪಾಗುವುದು ಖಚಿತ. ಒಂದು ವೇಳೆ ಮರುಕಳಿಸದೇ ಹೋದರೆ ಹೊಸ ಜ್ಞಾನದ ಸಾಲೊಂದು ನಮ್ಮ ಮೆದುಳಿನಲ್ಲಿ ದಾಸ್ತಾನುಗುವುದು ಇಮ್ಮಡಿ ಖಚಿತ. ಅಲ್ವೇ ?!!



ಇದು ಕಾಪಿ ಹೊಡೆಯುವ ಹೊಸ ತಂತ್ರವಾಯಿತು ಅಂತ ಮಡಿವಂತರು ಅಲವತ್ತುಕೊಂಡರೆ .. ಅವರನ್ನ ಪಕ್ಕಕ್ಕಿಡಿ.

ಬಹಳಷ್ಟು ವಿಶ್ವವಿದ್ಯಾನಿಲಯದ ಪ್ರಶ್ನೆಪತ್ರಿಕೆ ತಯಾರಕರು ತಮ್ಮ ಶ್ರಮ ತಪ್ಪಿಸಲು ಹಿಂದಿನ ನಾಲ್ಕಾರು ಪ್ರಶ್ನೆಪತ್ರಿಕೆಗಳನ್ನ ಕಲಸಿ ಹೊಸ ಪ್ರಶ್ನೆಪತ್ರಿಕೆ ತಯಾರು ಮಾಡಿ : " ಈ ಸಲ ವಿದ್ಯಾರ್ಥಿಗಳಿಗೆ ಕಹಿ ಔಷಧಿಯೊಂದನ್ನ ಕೊಡೋಣ " ಅನ್ನುವ ಹವಣಿಕೆಯಲ್ಲಿರುತ್ತಾರೆ. ಆದರೆ ಅವರ ಆ ಕಹಿ ಔಷಧಿ ಅನೇಕ ಸಲ ದಿವ್ಯೌಷಧಿ ಆಗುವುದು / ಆಗಿರುವುದು ಸಾಬೀತಾಗಿದೆ.

ಅದಕ್ಕೆ ನನ್ನ ಸಲಹೆ ಏನೆಂದರೆ : 
  • ಕೇಂದ್ರ ಸರಕಾರ ಇರಬಹುದು
  • ರಾಜ್ಯ ಸರಕಾರ ಇರಬಹುದು
  • ಬ್ಯಾಂಕ್ ಉದ್ದಿಮೆಯ ಪರೀಕ್ಷೆ ಇರಬಹುದು
ಎಂಥದೇ ಪರೀಕ್ಷೆ ಇರಲಿ .. ಪ್ರಶ್ನೆಪತ್ರಿಕೆ ಬಿಡಿಸಿ. ಅಲ್ಲಿ ದೊರೆಯುವ ಸಿದ್ಧೌಷಧವನ್ನ ಮುಂದೆ ಒದಗಬಹುದಾದ ತುರ್ತು ಪರಿಸ್ಥಿತಿಗೆ ಮುಂಚೆಯೇ ತಯಾರು ಮಾಡಿಟ್ಟುಕೊಳ್ಳುವುದು ಜಾಣರ ಲಕ್ಷಣ. ಸ್ಪರ್ಧಾರ್ಥಿಗಳೆಲ್ಲ ಜಾಣರು - ಕೋಣರಲ್ಲ ಅಂತ ಸಾಬೀತುಮಾಡೋಣ.

ಇಂತಿ ನಿಮ್ಮ ಪ್ರೀತಿಯ,

: ಸ್ಪರ್ಧಾರ್ಥಿ



.

Sep 21, 2010

ನೀವೂ ಗುಟುಕು ನೀಡಬಹುದು !!

1 ಪ್ರತಿಕ್ರಿಯೆಗಳು


ನಮಸ್ತೆ ... ಇವತ್ತು ಪತ್ರಿಕೆಯ ಧ್ಯೇಯವೇನೆಂಬುದನ್ನ ಇನ್ನೊಮ್ಮೆ ತಿಳಿದುಕೊಳ್ಳೋಣ.


***

ಸ್ಪರ್ಧಾರ್ಥಿ ಪತ್ರಿಕೆ ಯಾರೊಬ್ಬರ ಒಡೆತನದ ಪತ್ರಿಕೆಯಲ್ಲ. 

ಬದಲಿಗೆ ಇದು  ಸಮಸ್ತ ಕನ್ನಡಿಗರ ಪಾಲ್ಗೊಳ್ಳುವಿಕೆಗೆ ಮುಕ್ತವಾಗಿರುವ ಪತ್ರಿಕೆ

ಇನ್ನೂ ಸರಳವಾಗಿ ಹೇಳಬೇಕೆಂದರೆ : ಇದೊಂದು ಸ್ವಾರ್ಥಮಯ ಪತ್ರಿಕೆ

***

" ಸ್ಪರ್ಧಾರ್ಥಿ ... ಸ್ವಾರ್ಥಮಯ ಪತ್ರಿಕೆಯಾ ? ಹೇಗೆ ? " ಅನ್ನುತ್ತೀರಾ ?

ಅದು ಹೀಗೆ... 

ನೀವು ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಜ್ಞಾನವನ್ನ ಸಂಗ್ರಹಿಸಿ ಒಂದೆಡೆ ಬರೆದಿಟ್ಟುಕೊಳ್ಳುತ್ತೀರಲ್ಲಾ ?! ಹಾಗೆ ಬರೆದಿಡುವ ಸ್ಥಳ ಈ ಸ್ಪರ್ಧಾರ್ಥಿ ಯಾದರೆ ನಿಮ್ಮ ಸ್ವಾರ್ಥವೂ ಈಡೇರುತ್ತದೆ. ಜೊತೆಗೆ ಸಾಕಷ್ಟು ಜನರಿಗೆ ನೀವು ಪಡೆದ ಜ್ಞಾನವನ್ನ ಹೆಚ್ಚಿನ ಪರಿಶ್ರಮವಿಲ್ಲದೆ ಹಂಚಿದ ಪುಣ್ಯವೂ ಬರುತ್ತದೆ. ಸ್ವಾರ್ಥ ಸಾಧನೆಯೇ ಮೇಲಾಗಿರುವ ಇಂದಿನ ಜಗತ್ತಿನಲ್ಲಿ ಹೇಗೆ ಬದುಕುವುದು ಅಂತ ಚಿಂತಿಸುವ ಬದಲು ಸ್ವಾರ್ಥಕ್ಕೆ ತಿಳಿಯದ ಹಾಗೆ ಅದನ್ನ ನಿಸ್ವಾರ್ಥಿಯನ್ನಾಗಿ ಪರಿವರ್ತಿಸುವ ವಿಧಾನಗಳನ್ನ ಶೋಧಿಸೋಣ. 

ಈ ನಿಟ್ಟಿನಲ್ಲಿ ಸ್ಪರ್ಧಾರ್ಥಿ ಪತ್ರಿಕೆ ಅಂಥ ಸ್ವಾರ್ಥಿಗಳಿಗೆ ತಕರಾರು ತೆಗೆಯಲು ಆಸ್ಪದ ನೀಡದ ಹಾಗೆ ಸಾಧ್ಯವಾದಷ್ಟು ಸರಳ ವಿಧಾನಗಳ ಮೂಲಕ ಜ್ಞಾನ ಹಂಚುವ ದಾರಿ ಹುಡುಕುತ್ತಿದೆ, ಅನುದಿನ.

ಅಂಥ ಶೋಧನೆಯ ಫಲವೇ : spardharthi on tweetboard

ಅಂದ್ರೆ ಸ್ಪರ್ಧಾರ್ಥಿ ಪತ್ರಿಕೆಯ ಅಧಿಕೃತ Twitter Account ಒಂದಿದೆ : http://twitter.com/spardharthi

ಅದಕ್ಕೆ ' ಗುಟುಕು ಜ್ಞಾನ ' ಅಂತ ಹೆಸರಿಡಲಾಗಿದೆ.

ಇಂತಿಪ್ಪ ಗುಟುಕು ಜ್ಞಾನದ twitter account ಅನ್ನ twitetrboard ಎನ್ನುವ ವಿನೂತನ gadget ನೊಂದಿಗೆ ಬೆರೆಸಿ ಒಂದು gadget ಅನ್ನ ಸ್ಪರ್ಧಾರ್ಥಿ ತಾಣದಲ್ಲಿ ಬಲಭಾಗದಲ್ಲಿ ( ಕಂಪ್ಯೂಟರ್ ಎದುರಿಗೆ ಕುಳಿತಿರುವ ನಮ್ಮ ಎಡಭಾಗದಲ್ಲಿ ) ಇರಿಸಲಾಗಿದೆ. ಹಾಂ ..

tweets

ಎನ್ನುವ Button ಕಾಣುತ್ತದಲ್ಲಾ... ಅದೇ. ಅದರ ಮೇಲೆ ಕ್ಲಿಕ್ಕಿಸಿದರೆ ಗುಟುಕು ಜ್ಞಾನದ tweetboard ಜಾರಿಕೊಂಡು ನಿಮ್ಮೆದುರಿಗೆ ಹಾಜರಾಗುತ್ತದೆ. ಆ tweetboard ನಲ್ಲಿ ನಿಮ್ಮ twitter account ಬಳಸಿ ನಿಮ್ಮ ಪಾಲಿನ ಜ್ಞಾನದ ಗುಟುಕನ್ನ ಸಮಯ ಸಿಕ್ಕಾಗ , ಜ್ಞಾನದ Deposit ಇದ್ದಾಗ ನೀಡುತ್ತಾ ಹೋಗಿ. ಹಾಗೆ ನೀವು ಬರೆಯುವ ಗುಟುಕು ಜ್ಞಾನದ ಜೊತೆ ಇನ್ನೊಬ್ಬ ಸ್ನೇಹಿತ ಬರೆಯುವ ಗುಟುಕೂ ಸೇರಿ ದಿನಕ್ಕೆ 10 ಜನ ಸ್ನೇಹಿತರು ಬರೆದರೂ ಸಾಕು ಬೇಕಾದಷ್ಟಾಯಿತಲ್ಲಾ ?!! ಹನಿ ಹನಿ ಸೇರಿ ಸಾಗರವಾಗೋದು ಹೀಗೇನೇ ?!! ಇದೊಂದು ಪ್ರಾತ್ಯಕ್ಷಿಕೆಯಷ್ಟೇ !!!

ಅಂದ ಹಾಗೆ : ನೀವು ನೀಡುವ ಗುಟುಕು ಜ್ಞಾನ ಎಲ್ಲೂ ಕಳೆದು ಹೋಗುವುದಿಲ್ಲ. ಅದು ನಿಮ್ಮ twitter account ನ Home page ನಲ್ಲಿ ನೀವು ಈ ಮುಂಚೆ / ತದನಂತರ ಟ್ವೀಟಿಸಿದ ಇತರೆ ಸಾಲುಗಳ ಸಂಗಡ ಬೆಚ್ಚಗೆ ಕೂತಿರುತ್ತದೆ. ಮೊದಲೇ ಹೇಳಿದ್ನಲ್ಲಾ ನಾನು , ಸ್ಪರ್ಧಾರ್ಥಿ ಸ್ವಾರ್ಥಮಯ ಪತ್ರಿಕೆ ಅಂತ !!

ಸ್ವಾರ್ಥ ಸಾಧನೆಗೆ ನೀವು ತಯಾರಾ ?!!!



: ಸ್ಪರ್ಧಾರ್ಥಿ




.

Sep 20, 2010

ಡೇವಿಸ್ ಕಪ್

0 ಪ್ರತಿಕ್ರಿಯೆಗಳು


ಭಾರತ ಡೇವಿಸ್  ಕಪ್ ಪಂದ್ಯಾವಳಿಯ ವಿಶ್ವ ತಂಡಗಳ ಗುಂಪಿಗೆ ಅರ್ಹತೆ ಪಡೆದಿರುವ್ ಸುದ್ದಿ ನಿಮಗೆಲ್ಲ ಗೊತ್ತಾಗಿರಬೇಕು . ಏನಿದು ಡೇವಿಸ್  ಕಪ್ ? ಅಂತ ತಿಳಿಯುವ ಕುತೂಹಲವಿದ್ದರೆ ಕೆಳಕಂಡ ಕೊಂಡಿಗಳನ್ನ ಅನುಸರಿಸಿ :



 : ರವಿ



.

Sep 18, 2010

ಪುಣ್ಯಾಶ್ರಮದ ಪುಣ್ಯಾತ್ಮನಿಗೆ ಶ್ರದ್ಧಾಂಜಲಿ

0 ಪ್ರತಿಕ್ರಿಯೆಗಳು
 .


ಸ್ಪರ್ಧಾರ್ಥಿ ಪತ್ರಿಕೆಗೆ ಇಂಥ ಮಹಾನುಭಾವರ ಜೀವನ ಆದರ್ಶ .. ಅಂತೆಯೇ ಪತ್ರಿಕೆಯ ಎಲ್ಲ ಓದುಗರಿಗೂ.

ಸಮಾಜಮುಖಿ ಜೀವನಕ್ಕೆ ಹೊಸ ಭಾಷ್ಯ ಬರೆದ ಪಂಡಿತ್ ಪುಟ್ಟರಾಜ ಗವಾಯಿಗಳು ನಮಗೆಲ್ಲ ದಾರಿದೀಪ.

ಮಹಾತ್ಮರೇ ಹಾಗೆ...
" ಅವರು ಎಂದಿಗೂ ನಮ್ಮನಗಲುವುದೇ ಇಲ್ಲ .. ಯಾಕಂದ್ರೆ ಅವರು ಜೀವ ಮುಖೇನ  ಬದುಕಿರುವುದಿಲ್ಲ. ಜೀವನದ ಮುಖೇನ ಬದುಕಿರುತ್ತಾರೆ. ಜೀವ ಹೋದರೇನಂತೆ ? ಅವರು ನಡೆದು - ನುಡಿದು ತೋರಿಸಿದ ಜೀವನ ಅಮರ. "

ಅಂಥ ಅಮರತ್ವ ಹೊಂದುವ ಹಾಗೆ ಜೀವನ ಸಾಗಿಸೋಣ .. ಗವಾಯಿಗಳಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಿಸೋಣ


: ಸ್ಪರ್ಧಾರ್ಥಿ





.

Sep 17, 2010

ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳು

0 ಪ್ರತಿಕ್ರಿಯೆಗಳು

ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳು


  
ಕೊನೆ ದಿನಾಂಕ : 20 ಸಪ್ಟೆಂಬರ್ 2010
ಪರೀಕ್ಷಾ ದಿನಾಂಕ : 12 ಡಿಸೆಂಬರ್ 2010
ಒಟ್ಟು Vacancy :
187
ವಿದ್ಯಾರ್ಹತೆ : ಬ್ಯಾಂಕಿನ ಅಧಿಸೂಚನೆ ನೋಡಿ ಅದಕ್ಕೆ ಇಲ್ಲಿ ಕ್ಲಿಕ್ಕಿಸಿ
( BE & MBA ಪದವಿ ಪಡೆದವರಿಗೆ ಹೆಚ್ಚಿನ ಅವಕಾಶ )
ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ  + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://www.canarabank.com/English/Scripts/RecruitmentProject32010.aspx




 

:  ಪತ್ರೋದ್ಯೋಗಿ




.

Sep 16, 2010

ಕಾಶ್ಮೀರಕ್ಕೆ ಕೊಂಡಿಗಳು !!!

0 ಪ್ರತಿಕ್ರಿಯೆಗಳು

 .





ಬಹುಶಃ ನಮಗೆಲ್ಲ ಕಾಶ್ಮೀರ ಸಮಸ್ಯೆಯ ಸರಿಯಾದ ಮಾಹಿತಿ ಇರದೇ ಇರುವುದೇ ಆ ವಿಷಯದ ಬಗ್ಗೆ ಚರ್ಚೆಗೆ ಅಥವಾ ಮಾತನಾಡಲೂ ಕೂಡ ಸಮಸ್ಯೆಯಾಗಿದೆ ... 
ಆ ಸಮಸ್ಯೆಗೆ ಪರಿಹಾರ ರೂಪದಲ್ಲಿ ಕೆಲವು ಸಂಬಂಧಿಸಿದ ಅಂತರಜಾಲ ( ಅಂತರ್ಜಾಲ ಸರಿಯಾದ ಕನ್ನಡ ಪದ ಬಳಕೆಯಲ್ಲ - ಅಂತರರಾಷ್ಟ್ರೀಯ ಇದ್ದ ಹಾಗೆ ಅಂತರಜಾಲ ) ತಾಣಗಳ ಕೊಂಡಿಗಳನ್ನ ನೀಡ್ತೀನಿ ನೋಡಿ ... ನಂತರ ನಿಮ್ಮ ನಿಲುವು / ಅಭಿಪ್ರಾಯ / ಬರಹ ... ಬರೆಯಿರಿ ... ಆಯ್ತಾ ?

{ .. ಇವೆಲ್ಲ ವಿಕಿ ಪುಟಗಳು ... }













----------------------



:: ವ್ಯಕ್ತಿ ವೈಯಕ್ತಿಕ ಅಭಿಪ್ರಾಯ ::










 : ರವಿ  




.

Sep 15, 2010

Newspaper ಪದಕೋಶ :: 05 :: ಸಪ್ಟೆಂಬರ್ 14, 2010

0 ಪ್ರತಿಕ್ರಿಯೆಗಳು
Groove = A long narrow furrow or channel ;  The spiral track cut into a phonograph record for the stylus to follow ; Slang. A very pleasurable experience. ; Slang. A settled routine: got into the groove of a nine-to-five job. ; Slang. A situation or an activity that one enjoys or to which one is especially well suited: found his groove playing bass in a trio.

{ ... he has got the groove ... }

Conquistador =  A conqueror, especially one of the 16th-century Spanish soldiers who defeated the Indian civilizations of Mexico, Central America, or Peru.

{ ... On Rafa's US Open Triumph ... }

Thrust = To push or drive quickly and forcibly.; To issue or extend: poplars thrusting their branches upward; thrust out his finger. ; To force into a specified condition or situation: She thrust herself through the crowd. He was thrust into a position of awesome responsibility. ; To include or interpolate improperly. ; To force on an unwilling or improper recipient: "Some have greatness thrust upon them"Archaic. To stab; pierce. (Shakespeare). ;

{ ... the thrust was in keeping with the CCS observations ... }

Defer = To put off; postpone.; To postpone the induction of (one eligible for the military draft).

{ ... jat sangharsha samiti deferred its ongoing agitation ... }

Relentless = Unyielding in severity or strictness; unrelenting: relentless persecution. ;  Steady and persistent; unremitting: the relentless beat of the drums.

{ ... relentless nadal completes career grandslam ... }

OverWhelm = To surge over and submerge; engulf: waves overwhelming the rocky shoreline. ; To defeat completely and decisively: Our team overwhelmed the visitors by 40 points. ; To affect deeply in mind or emotion: Despair overwhelmed me. ; To present with an excessive amount: They overwhelmed us with expensive gifts. ; To turn over; upset: The small craft was overwhelmed by the enormous waves.

{ ... spanish left hander overwhelmed djokovic with uncanny shotmaking to win $ 1.7 million... } 

Uncanny = Peculiarly unsettling, as if of supernatural origin or nature; eerie ; So keen and perceptive as to seem preternatural.

{ ... spanish left hander overwhelmed djokovic with uncanny shotmaking to win $ 1.7 million... } 

Complacent = Contented to a fault; self-satisfied and unconcerned: He had become complacent after years of success. ;  Eager to please; complaisant.

{ ... dhoni said : we wont be complacent despite the brilliant start ... }

Amicable = Characterized by or exhibiting friendliness or goodwill; friendly

{ ... on babri issue : court explores possibility of amicable solution ... }

Restrain = To hold back or keep in check; control: couldn't restrain the tears. ; To hold (a person) back; prevent: restrained them from going. ; To deprive of freedom or liberty. ;  To limit or restrict.

{ ... on kashmir issue to india : pakistan calls for restraint ... }

point-blank ( range )  =  Aimed straight at the mark or target without allowing for the drop in a projectile's course. ; Straightforward; blunt: a point-blank accusation. ; So close to a target that a weapon may be aimed directly at it: point-blank range. ; Close enough so that missing the target is unlikely or impossible: a point-blank shot.

{ ... haren pandya was shot dead at point-blank range ... }



: ಪದಾರ್ಥಿ


.

ಕಾಶ್ಮೀರದಲ್ಲಿ ಹಿಂಸೆ : ಸ್ಪರ್ಧಾರ್ಥಿಗಳ ಸಲಹೆ

1 ಪ್ರತಿಕ್ರಿಯೆಗಳು
ಇವತ್ತು ಸ್ವಲ್ಪ ಬೇರೆ ರೀತಿಯಲ್ಲಿ ಜ್ಞಾನಾರ್ಜನೆ ಮಾಡೋಣ ... ನಮ್ಮದೇ ನೆಲದ ಭಾಗವಾಗಿರುವ ಕಾಶ್ಮೀರದಲ್ಲಿ ಇಂದು ಹಿಂಸೆ ಭುಗಿಲೆದ್ದಿದೆ. ಅವರಿಗೆ ಭಾರತದ ಅಧೀನದಲ್ಲಿರುವುದು ಬೇಡವಂತೆ ... !! ನಾವು ಅಲ್ಲಿಂದ ಕಾಲ್ತೆಗೆಯಬೇಕಂತೆ ... !!! ಇಷ್ಟೆಲ್ಲಾ ನಮ್ಮದೇ ನೆಲದ ಮೇಲೆ ನಡೆಯುತ್ತಿರಬೇಕಾದರೆ ನಾವು ನಮಗದು ಸಂಬಂಧವಿಲ್ಲ ಎಂಬಂತೆ ಇರುವುದು ದೇಶದೆಡೆಗಿನ ದ್ರೋಹವಾಗುತ್ತದೆ. ಅಂತ ದ್ರೋಹಕ್ಕೆ ಅವಕಾಶ ಮಾಡಿಕೊಡದೆ ನಾವು ನಮ್ಮ ಪಾಲಿನ ಸಲಹೆ ಏನಿದೆ ಅನ್ನೋದನಾದ್ರೂ ತಿಳಿಯೋಣ .. ನಮ್ಮೊಬ್ಬರ ಅಭಿಪ್ರಾಯಗಳಿಂದ ಏನಾಗಲು ಸಾಧ್ಯ ಎಂಬುದು ನಿಮ್ಮ ಅಭಿಪ್ರಾಯವಾದರೆ ...


" ನಾಳೆ ದಿವಸ ನೀವು ( ನಾವು ) ನಿರ್ಧಾರ ತೆಗೆದುಕೊಳ್ಳುವ ಸ್ಥಾನ ತಲುಪಿದರೆ ನಮ್ಮೊಬ್ಬರ ನಿರ್ಧಾರವೇ ಪ್ರಮುಖವಾಗುತ್ತದಲ್ಲವೇ ? " ಎನ್ನುವುದು ನನ್ನ ವಾದ.

ಈ ಸಮಸ್ಯೆಗೆ ನಿಮ್ಮ ಪರಿಹಾರ ಏನು ಅಂತ Comment ಗಳ ಮೂಲಕ ತಿಳಿಸಿ ...


ನಾಳೆ ಸ್ಪರ್ಧಾರ್ಥಿಯ ಅಭಿಪ್ರಾಯ ಬರೆಯಲಾಗುವುದು ...

 : ಸ್ಪರ್ಧಾರ್ಥಿ



.

Sep 14, 2010

ಹೊಸತು :: ಪ್ರಚಲಿತ ವಿದ್ಯಮಾನಗಳ ಒಳನೋಟ

1 ಪ್ರತಿಕ್ರಿಯೆಗಳು
::  ಪ್ರಚಲಿತ ವಿದ್ಯಮಾನಗಳ ಒಳನೋಟ ::

ಪ್ರಚಲಿತ ವಿದ್ಯಮಾನಗಳನ್ನ ಚುಟುಕಾಗಿ ತಿಳಿಯುವುದು ಬಹುಆಯ್ಕೆ ಉತ್ತರಗಳಿರುವ ಪ್ರಶ್ನೆಪತ್ರಿಕೆಗಳನ್ನ ಬಿಡಿಸಲು ಅನುವಾದರೆ ಆ ವಿದ್ಯಮಾನಗಳ ಒಳನೋಟ ವಿಸ್ತೃತ ಉತ್ತರ ಬಯಸುವ ಪ್ರಶ್ನೆಪತ್ರಿಕೆಗಳನ್ನ ಬಿಡಿಸಲು ಸಹಾಯ ಮಾಡುತ್ತವೆ. ಈ ಹೂರಣವನ್ನ ತನ್ನಲ್ಲಿಟ್ಟುಕೊಂಡ ಸ್ಥಿರ ಅಂಕಣವೊಂದು ನಿಮ್ಮ ಮುಂದೆ ಇಂದಿನಿಂದ.

ಆದರೆ 2009ರ ಜನವರಿ 1 ರಿಂದ ಇಲ್ಲಿಯವರೆಗಿನ ಪ್ರಮುಖ ಘಟನೆಗಳ ಒಳನೋಟಗಳನ್ನ ಶೀಘ್ರದಲ್ಲೇ ತಯಾರಿಸಿ ನಿಮ್ಮ ಮುಂದೆ ಇಡಲಾಗುವುದು. ಆದರೆ ಸದರಿ ಒಳನೋಟದ ಪೂರ್ತಿ ಪಾಠಕ್ಕಾಗಿ ನೀವು ತಾಣವನ್ನೇ ಖುದ್ದಾಗಿ ಭೇಟಿ ನೀಡಬೇಕು ... ಅಂದ್ರೆ ಈ ಮೇಲ್ ಗಳಲ್ಲಿ ಇದರ ರುಚಿ ಇರುವಂತೆಯೇ ಬಡಿಸಲಾಗುವುದಿಲ್ಲ !!


ತಾಣದಲ್ಲಿ ಬಲಭಾಗದಲ್ಲಿ ಇರುವ ಮೇಲ್ಕಂಡ ಚಿತ್ರದ ಮೇಲೆ ಕ್ಲಿಕ್ಕಿಸಿದರೆ 
ಅಥವಾ
ನಿಮಗೆ ಪ್ರತಿದಿನದ ಆಗುಹೋಗುಗಳ ಒಳನೋಟ ಲಭ್ಯ !!!

{ ಸದರಿ ಒಳನೋಟ ಬಹುಶಃ ನವೆಂಬರ್ 1 ನೇ ತಾರೀಖಿನ ಹೊತ್ತಿಗೆ ಸತ್ಯಾಪನಗೊಳ್ಳುವ ನಿರೀಕ್ಷೆಯಿದೆ... 
ಅಲ್ಲಿಯವರೆಗೆ ತಾಳ್ಮೆಯಿರಲಿ .. }




: ಸ್ಪರ್ಧಾರ್ಥಿ




.

ನಮ್ಮ ಶರೀರ ನಮಗೆಷ್ಟು ಗೊತ್ತು ?

0 ಪ್ರತಿಕ್ರಿಯೆಗಳು

ನಮ್ಮ ಶರೀರ ನಮಗೆಷ್ಟು ಗೊತ್ತು ?




1) ನಮ್ಮ ತಲೆಯಲ್ಲಿರುವ ಕೂದಲುಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ.  ಪ್ರತಿ ಕೂದಲುಗಳೂ ಮೂರು ವರ್ಷಕ್ಕಿಂತ ಅಧಿಕ ಬೆಳೆಯುತ್ತದೆ.  ಅದರ ವೇಗ ಮೂರು ದಿನಗಳಿಗೆ ಒಂದು ಮಿ.ಮೀ.  ಅಂದರೆ ವರ್ಷಕ್ಕೆ ಸುಮಾರು ಐದು ಇಂಚು ಉದ್ದ ಬೆಳೆಯುತ್ತದೆ.

2) ನಮ್ಮ ಇಡೀ ದೇಹದಲ್ಲಿರುವ ಕೂದಲುಗಳ ಸಂಖ್ಯೆ ಸುಮಾರು 50 ಲಕ್ಷ.

3) ನಮ್ಮ ಹೃದಯದ ತೂಕ ಕೇವಲ 250 ಗ್ರಾಂ.

4) ನಮ್ಮ ಚರ್ಮದಲ್ಲಿನ ಮೆಲನಿನ್ ಕಣಗಳ ಉತ್ಪತ್ತಿ ಕಡಿಮೆ ಆದರೆ ಚರ್ಮ ಬಿಳುಪಾಗಿಯೂ ಹೆಚ್ಚಿದ್ದರೆ ಚರ್ಮ ಕಪ್ಪಾಗಿಯೂ ಆಗುತ್ತದೆ.

5) ನಮ್ಮ ದೇಹದ ಶೇ.60 ರಷ್ಟು ಭಾಗ ನೀರಿನಿಂದ ಆವೃತ್ತವಾಗಿದ್ದು ಉಳಿದದ್ದು ಮೂಳೆ, ಮಾಂಸ ಖಂಡಗಳು ಇತ್ಯಾದಿ.

6) ನಮ್ಮ ಚರ್ಮದಲ್ಲಿ ಕೆರಾಟಿನ್ ಎಂಬ ನೀರು ನಿರೋಧಕ ವಸ್ತು ಇದ್ದು ಅದು ನೀರನ್ನು ತಾತ್ಕಾಲಿಕವಾಗಿ ಚರ್ಮದೊಳಗೆ ಬರುವುದನ್ನು ತಡೆ ಹಿಡಿಯುತ್ತದೆ.  ಅದಕ್ಕಾಗಿ ಮಳೆಯಲ್ಲಿ ನೆನೆದರೂ ಚರ್ಮ ನೆನೆಯುವುದಿಲ್ಲ.  ಆದರೆ, ಸ್ನಾನ ಮಾಡಿದಾಗ ಅಥವಾ ಈಜುತ್ತಿದ್ದಾಗ ಶೇ.4ರಷ್ಟು ನೀರು ಕೆರಾಟಿನ್ ಅನ್ನು ಛೇದಿಸಿ ಒಳ ಸೇರುತ್ತದೆ.  ಅದಕ್ಕಾಗಿಯೇ ಸ್ನಾನದ ನಂತರ ನಮ್ಮ ಕೈಬೆರಳುಗಳ ಚರ್ಮವು ಸ್ವಲ್ಪ ಮಟ್ಟಿಗೆ ಸುಕ್ಕುಗಟ್ಟಿರುತ್ತದೆ.

7) ಹೃದಯದ ಪ್ರತಿ ಬಡಿತಕ್ಕೆ ರಕ್ತವು ಚಿಮ್ಮಿ ಇಡೀ ದೇಹದುದ್ದಕ್ಕೂ ಹರಿಯುತ್ತದೆ.  ಪ್ರತಿದಿನ ಹೃದಯವು ಈ ರೀತಿ 9000 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ.

8) ಗೊರಿಲ್ಲಾದ ದೇಹ ಮಾನವನ ದೇಹಕ್ಕಿಂತ ದೊಡ್ಡದಿದೆ.  ಆದರೆ ಅದರ ಮೆದುಳು 0.45 ಕೆ.ಜಿ. ತೂಕವಿದ್ದರೆ ಮಾನವನ ಮೆದುಳಿನ ತೂಕ 1.40 ಕೆ.ಜಿ.  ಅದಕ್ಕೆ ನಮಗೆ ಬುದ್ದಿ ಜಾಸ್ತಿ !!!!!!!

9) ನಮ್ಮ ರಕ್ತದಲ್ಲಿರುವ ಕೊಳೆಯನ್ನು ಸೋಸಲು ಮೂತ್ರ ಪಿಂಡಗಳಲ್ಲಿ 10,00,000 ಆಲಿಕೆಗಳಿವೆ.  ನೆಪ್ರೋನ್ ಎಂಬ ಹೆಸರಿನ ಇವುಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿದರೆ ಸುಮಾರು 80 ಕಿ.ಮೀ. ಉದ್ದವಾಗುತ್ತದೆ.

10) ನಮ್ಮ ಶರೀರದಲ್ಲಿ ಗಾಯವಾದಾಗ ರಕ್ತವು ನೀರು ಹರಿದಂತೆ ನಿರಂತರವಾಗಿ ಹರಿಯುವುದಿಲ್ಲ.  ಬದಲಾಗಿ ಹೆಪ್ಪುಗಟ್ಟುತ್ತದೆ.  ಇದಕ್ಕೆ ಕಾರಣ ರಕ್ತದಲ್ಲಿನ ಪ್ರೊಥ್ರೋಂಬಿನ್ ಎಂಬ ರಕ್ತದ ಕಣ.  ಇದು ಗಾಳಿಗೆ ಸೋಕಿದೊಡನೆ ಬಲೆಯ ರೂಪ ತಾಳಿ ರಕ್ತ ಹರಿಯುವುದನ್ನು ತಡೆಯುತ್ತದೆ.  ಇದನ್ನು ಯಕೃತ್ ಉತ್ಪಾದಿಸುತ್ತದೆ.  ಆದ್ದರಿಂದ, ಯಕೃತ್ ಗೆ ಹಾನಿಯಾದರೆ ರಕ್ತ ಹೆಪ್ಪುಗಟ್ಟುವಿಕೆ ನಿಲ್ಲುತ್ತದೆ.

11) ಉಗುರು ಒಂದು ನಿರ್ಜೀವ ಪ್ರೋಟೀನ್ ವಸ್ತು.  ಇದು ಸತ್ತ ಜೀವಕೋಶಗಳಿಂದ ಉಂಟಾದುದು.  ಅದಕ್ಕಾಗಿ ಇದನ್ನು ಕತ್ತರಿಸಿದರೂ ನೋವಿನ ಅನುಭವವಾಗುವುದಿಲ್ಲ.

12) ಹುಟ್ಟಿನಿಂದ ಸಾಯುವವರೆಗೂ ಯಾವುದೇ ವ್ಯಕ್ತಿಯ ಕೈಬೆರಳುಗಳ ಗುರುತುಗಳು ಬದಲಾಗುವುದಿಲ್ಲ ಮತ್ತು ಪ್ರತಿ ವ್ಯಕ್ತಿಯ ಬೆರಳುಗಳು ವಿಶಿಷ್ಟವಾಗಿದ್ದು ಬೇರೆಯವರ ಗುರುತುಗಳಿಂದ ಪ್ರತ್ಯೇಕವಾಗಿರುತ್ತದೆ.  ಅವಳಿ-ಜವಳಿಗಳಾಗಿ ಹುಟ್ಟಿದರೂ ಕೈಬೆರಳಿನ ಗುರುತುಗಳು ಬೇರೆ ಬೇರೆಯಾಗಿರುತ್ತದೆ.  ಇದನ್ನು ಕಂಡು ಹಿಡಿದವರು ಸರ್ ಎಡ್ವರ್ಡ್ ಹೆನ್ರಿ.

13) ಸಸ್ಯಗಳನ್ನೂ ಒಳಗೊಂಡಂತೆ ಎಲ್ಲಾ ಪ್ರಾಣಿಗಳಿಗೂ ನಿದ್ರೆ ಅತ್ಯಾವಶ್ಯಕ.  ಶಾರೀರಿಕ ಹಾಗೂ ಮಾನಸಿಕ ಬಳಲಿಕೆಯಿಂದ ಬಿಡುಗಡೆ ಹೊಂದುವುದು ನಿದ್ರೆಯಾಗಿದೆ.  ನಿದ್ರೆಯಲ್ಲಿದ್ದಾಗ ನಮ್ಮ ಉಸಿರಾಟ ನಿಧಾನವಾಗಿ ಹೃದಯದ ಬಡಿತ ಮಂದವಾಗುತ್ತದೆ.  ಆಗ ನಮ್ಮ ಶಾರೀರಿಕ ಚಟುವಟಿಕೆಗಳು ಬದಲಾಗುತ್ತದೆ.  ಇದನ್ನು ನಿಯಂತ್ರಣದಲ್ಲಿಡುವುದು ಹೈಪಾಥಲಾಮಸ್ ಎಂಬ ಮೆದುಳಿನ ಭಾಗ.




- ಎಂ.ಬಿ.ಲಾವಣ್ಯ 




.

Sep 13, 2010

ಕನ್ನಡ ಚಲನಚಿತ್ರಗಳು Online !! ಸಂಪೂರ್ಣ ಉಚಿತವಾಗಿ .... !!!!

0 ಪ್ರತಿಕ್ರಿಯೆಗಳು
ಮೂರು ದಿನ ರಜೆಯನ್ನ ಹೇಗೆ ಕಳೀಬೇಕು ಅಂತ ಗುರುವಾರ ಸಂಜೆ ಪ್ಲಾನ್  ಮಾಡ್ತಾ ಇರಬೇಕಾದ್ರೆ ಗೆಳೆಯ ಅಭಿ ಹಿಂದೊಮ್ಮೆ ಹೇಳಿದ ತಾಣದ ನೆನಪಾಯ್ತು ... ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಚಲನಚಿತ್ರಗಳು Online ಸಿಗ್ತಾವಂತೆ ... ಸಂಪೂರ್ಣ ಉಚಿತವಾಗಿ .... !!!!

ಒಳ್ಳೆ ಕನ್ನಡ ಸಿನೆಮಾ ನೋಡಿ ಭಾಳ ದಿನಾ ಆಗಿತ್ತು .. ಒಂದಿಷ್ಟು ಹಳೆ ಚಿತ್ರಗಳನ್ನ ನೋಡೋಣ ಅಂತ ತೀರ್ಮಾನಿಸಿ ಆ ತಾಣವನ್ನ ತೆರೆದ್ರೆ ಅಲ್ಲಿ ನೂರಾರು ಸಿನೆಮಾಗಳಿದಾವೆ !!! ಮನಸಲ್ಲೇ ಅವನಿಗೆ ಧನ್ಯವಾದ ಹೇಳಿ ನಂಗೆ ಇಷ್ಟವಾದ ಕೆಲವು ಸಿನೆಮಾಗಳನ್ನ ನೋಡಿದೆ ...ನಿಮಗೂ ಮುಂದೆ ರಜೆ ಇದ್ದಾಗ , ಬೇಜಾರಾದಾಗ ನೋಡಲಿಕ್ಕೆ ಅಂತ ಆ ತಾಣದ ಹೆಸರು ಹೇಳಿರ್ತೀನಿ ... Bookmark ಮಾಡಿ ಇಟ್ಕೋಳಿ.. ಆಯ್ತಾ ?




 : ರವಿ 



.

Sep 11, 2010

ಅರ್ಜೆಂಟೀನ ಮಹಿಳೆಯರಿಗೆ ಒಲಿದ ಹಾಕಿ ವಿಶ್ವಕಪ್

0 ಪ್ರತಿಕ್ರಿಯೆಗಳು




ಚುಟುಕು ಸುದ್ದಿ : ಅರ್ಜೆಂಟೀನ ಮಹಿಳೆಯರಿಗೆ ಒಲಿದ ಹಾಕಿ ವಿಶ್ವಕಪ್ 2010

ಸುದ್ದಿಯ ಒಳನೋಟ  :  
  • ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾಕೂಟ 1974 ರಲ್ಲಿ ಪ್ರಾರಂಭವಾಯಿತು. 
  • ಅಂದಿನಿಂದ ಇಂದಿನವರೆಗೆ ( 2010 ) ಒಟ್ಟು 12 ಪಂದ್ಯಾವಳಿಗಳು ನಡೆದಿವೆ. 
  • 1982 ರಲ್ಲಿ  International Federation of Women's Hockey Associations (IFWHA) ಇದು International Hockey Federation (FIH) ಜೊತೆ ವಿಲೀನವಾದಂದಿನಿಂದ FIH ಕ್ರೀಡಾಕೂಟವನ್ನ ಆಯೋಜಿಸುತ್ತಿದೆ.
  • ಇಲ್ಲಿಯವರೆಗೆ ಹಾಲೆಂಡ್ ( ನೆದರ್ಲ್ಯಾಂಡ್ ) ತಂದ 6 ಬಾರಿ ಗೆದ್ದುಕೊಂಡಿದ್ದರೆ, ಅರ್ಜೆಂಟೀನಾ , ಜರ್ಮನಿ & ಆಸ್ಟ್ರೇಲಿಯ ತಲಾ ಎರಡು ಬಾರಿ ಗೆದ್ದುಕೊಂಡಿವೆ.
  • ಭಾರತ 1974 ರ ವಿಶ್ವಕಪ್ ನಲ್ಲಿ 4ನೆ  ಸ್ಥಾನ ಪಡೆದದ್ದೇ ಇಲ್ಲಿಯವರೆಗಿನ ಹೆಚ್ಚಿನ ಸಾಧನೆ.
  • ಈ ಸಾಲಿನ ವಿಶ್ವಕಪ್ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ ಆಗಸ್ಟ್ ೨೯, ೨೦೧೦ ರಿಂದ ಸಪ್ಟೆಂಬರ್ ೧೧, ೨೦೧೦ ರವರೆಗೆ ನಡೆದು ಅತಿಥೇಯ ಅರ್ಜೆಂಟೀನಾ ಹಾಲೆಂಡ್ ಅನ್ನು 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಗೆದ್ದುಕೊಂಡಿತು.
  • ಈ ಬಾರಿಯ ವಿಶ್ವಕಪ್ ಚಿಹ್ನೆ ಹೀಗಿದೆ :
  • ಐದು ಖಂಡಗಳಿಂದ ತಲಾ ಒಂದರಂತೆ 5 ತಂಡಗಳು, ಆತಿಥ್ಯ ವಹಿಸಿದ ದೇಶದ ತಂಡವನ್ನ ಸೇರಿಸ್ಕೊಂಡು ಅರ್ಹತಾ ಪಂದ್ಯಗಳಲ್ಲಿ ಮೊದಲ 3 ಸ್ಥಾನ ಪಡೆದ ತಂಡಗಳನ್ನ ಆಡಿಸುವುದು ವಾಡಿಕೆ. ಆದರೆ ಈ ಬಾರಿ ಏಷ್ಯ ಮತ್ತು ಯುರೋಪ್  ನಿಂದ ಕ್ರಮವಾಗಿ 2 ಮತ್ತು 3 ತಂಡಗಳು ಪಾಲ್ಗೊಂಡಿದ್ದವು.
  • ಈ ಸಲದ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಅಂದರೆ 13 ಗೋಲುಗಳನ್ನ ಗಳಿಸಿದ್ದು ಹಾಲೆಂಡ್ ನ  Maartje Paumen 
  • ಅರ್ಜೆಂಟೀನಾದ Luciana Aymar ಅತ್ಯುತ್ತಮ ಆಟಗಾರ್ತಿ ಯಾಗಿ ಘೋಷಿತರಾದರು.
  • ಭಾರತದ ರಾಣಿ ರಾಮಪಾಲ್ ಅತ್ಯುತ್ತಮ ಯುವ ಕ್ರೀಡಾಪಟು ಆಗಿ ಘೋಷಿತರಾದರು.
  • ಆಸ್ಟ್ರೇಲಿಯಾ ತಂಡ ಪ್ರಾಮಾಣಿಕ ಆಟಕ್ಕಾಗಿ ಪ್ರಶಸ್ತಿ ಪಡೆಯಿತು.


ಇದುವರೆಗಿನ ವಿಶ್ವಕಪ್ ಪಂದ್ಯಗಳ ವಿವರ ಇಂತಿದೆ :


ವರ್ಷ - ಆತಿಥ್ಯ - ವಿಜೇತ ರಾಷ್ಟ್ರ - 2ನೇ ಸ್ಥಾನ [ ಗೋಲು ಅಂತರ ]
1974 - ಫ್ರಾನ್ಸ್ - ಹಾಲೆಂಡ್ - ಅರ್ಜೆಂಟೀನಾ [ 1-0 ]
1976 - ಜರ್ಮನಿ - ಪಶ್ಚಿಮ ಜರ್ಮನಿ - ಅರ್ಜೆಂಟೀನಾ [ 2-0 ]
1978 - ಸ್ಪೇನ್ - ಹಾಲೆಂಡ್ - ಪಶ್ಚಿಮ ಜರ್ಮನಿ [ 1-0 ]
1981 - ಅರ್ಜೆಂಟೀನಾ - ಪಶ್ಚಿಮ ಜರ್ಮನಿ - ಹಾಲೆಂಡ್ [ 3-1 ]
1983 - ಮಲೇಷಿಯಾ - ಹಾಲೆಂಡ್ - ಕೆನಡಾ [ 4-2 ]
1986 - ಹಾಲೆಂಡ್ - ಹಾಲೆಂಡ್ - ಪಶ್ಚಿಮ ಜರ್ಮನಿ [ 3-0 ]
1990 - ಆಸ್ಟ್ರೇಲಿಯಾ - ಹಾಲೆಂಡ್ - ಆಸ್ಟ್ರೇಲಿಯಾ [ 3-1 ]
1994 - ಐರಲ್ಯಾಂಡ್ಸ್ - ಆಸ್ಟ್ರೇಲಿಯಾ - ಅರ್ಜೆಂಟೀನಾ [ 2-0 ]
1998 - ಹಾಲೆಂಡ್ - ಆಸ್ಟ್ರೇಲಿಯಾ - ಹಾಲೆಂಡ್ [ 3-2 ]
2002 - ಆಸ್ಟ್ರೇಲಿಯಾ - ಅರ್ಜೆಂಟೀನಾ - ಹಾಲೆಂಡ್ [ 4-3 ]
2006 - ಸ್ಪೇನ್ - ಹಾಲೆಂಡ್ - ಆಸ್ಟ್ರೇಲಿಯಾ [ 3-1 ]
2010 - ಅರ್ಜೆಂಟೀನಾ - ಅರ್ಜೆಂಟೀನಾ - ಹಾಲೆಂಡ್ [ 3-1 ]








: ದಿನಕರ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ