ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 22, 2010

ಅತ್ಯಮೂಲ್ಯ ಉತ್ತರ ಪತ್ರಿಕೆಗಳು

ನಮಸ್ತೆ .. ಒಂದು ದಿನದ ಉದ್ದೇಶಪೂರ್ವಕ ವಿರಾಮದ ನಂತರ ಇವತ್ತು ಮತ್ತೆ ನಿಮ್ಮ ಮುಂದೆ ಸ್ಪರ್ಧಾರ್ಥಿ. ಇವತ್ತಿನ ವಿಷಯ ಸ್ವಲ್ಪ ಆಸಕ್ತಿದಾಯಕವಾಗಿರುವುದರ ಜೊತೆಗೆ ಓದುಗರ ಪಾಲ್ಗೊಳ್ಳುವಿಕೆಯನ್ನ ಬಯಸುವಂಥದು. ಸೀದಾ ವಿಷಯಕ್ಕೆ ಬರ್ತೀನಿ :

ನಾವು ಎದುರಿಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೆಲವೊಮ್ಮೆ ಪ್ರಶ್ನೆಗಳು & ಉತ್ತರಗಳು ಹಿಂದೆಲ್ಲೋ ನೋಡಿದಂತೆ ಯಥಾವತ್ತಾಗಿ ಅಚ್ಚಾಗಿ ಅಚ್ಚರಿ ಮೂಡಿಸುತ್ತವೆ. ಅಂದರೆ , ನೀವು ಇನ್ನಾವುದೋ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಆ ಪ್ರಶ್ನೆಯನ್ನ ಬಿಡಿಸಿರುತ್ತೀರಿ. ಅಲ್ಲವೇ ? ಮತ್ತು ಅಂಥ ಸಂದರ್ಭದಲ್ಲಿ ಉತ್ತರ ನಿಮಗೆ ಥಟ್ಟನೇ ಹೊಳೆದು ಆನಂದಭಾಷ್ಪವೊಂದು ಕಣ್ಣಂಚಿನಿಂದ ಉದುರಿದರೂ ಅಚ್ಚರಿಯಿಲ್ಲ.. 

ಹೀಗಾಗಿ ನಾನು ಒಂದು ಕುತಂತ್ರ ಮಾಡಿದೀನಿ.. ಕೇಳಿಸ್ಕೊಳ್ಳಿ.

ನಾವು ಆಸಕ್ತ ಸ್ಪರ್ಧಾರ್ಥಿಗಳು ತಾವು ಕುತೂಹಲಕ್ಕೆಂದು / ಅಭ್ಯಾಸದ ದೃಷ್ಟಿಯಿಂದ ಬಿಡಿಸುವ ಯಾವತ್ತೂ ಪ್ರಶ್ನೆಪತ್ರಿಕೆಗಳ ( ಮಾದರಿ ಪ್ರಶ್ನೆಪತ್ರಿಕೆಗಳನ್ನ Avoid ಮಾಡುವುದು ಒಳ್ಳೆಯದು ) ಮೇಲೆ ಒಂದು ಸಣ್ಣ ಟಿಪ್ಪಣಿ ಮಾಡಿಟ್ಟುಕೊಳ್ಳೋಣ. ಬಿಡುವಿದ್ದಾಗ ಅಂಥ ಟಿಪ್ಪಣಿಗಳನ್ನ e-ಪತ್ರಿಕೆಯಲ್ಲಿ ಪ್ರಕಟಿಸೋಣ. ಆ ಟಿಪ್ಪಣಿ ಹೇಗಿರಬೇಕು ಅಂದ್ರೆ :


ಉದಾಹರಣೆ : 
15. ದುಬೈ ನಲ್ಲಿ ಚಲಾವಣೆಯಲ್ಲಿರುವ ನಾಣ್ಯ ಯಾವುದು ?
ಎ. ಟಾಕಾ
ಬಿ. ದಿನಾರ್
ಸಿ. ಡಾಲರ್
ಡಿ. ದಿರಾಮ್

ಉತ್ತರ : ದಿರಾಮ್ ( Dirham ) ಅಂತ ನಿಮಗೆಲ್ಲ ಗೊತ್ತಾದ ನಂತರ ನಿಮ್ಮ ಟಿಪ್ಪಣಿ 


" ದುಬೈ ( ಸೌದಿ ಅರೇಬಿಯಾ ) ನಲ್ಲಿ ಚಲಾವಣೆಯಲ್ಲಿರುವ ನಾಣ್ಯ - ದಿರಾಮ್ "


ಇಷ್ಟಿದ್ದರೆ ಸಾಕು. ಆಗ ನಿಮ್ಮ ಪರೀಕ್ಷಾ ಸಿದ್ಧತೆಯ ತಾಲೀಮಿಗೆ ಹೊಸ Excercise ಒಂದು ಸೇರಿದಂತಾಗಿ ಪ್ರಶ್ನೆಪತ್ರಿಕೆಯನ್ನ ಮರುಕಳಿಸುವ ಶಿಕ್ಷಕರು ಬೆಪ್ಪಾಗುವುದು ಖಚಿತ. ಒಂದು ವೇಳೆ ಮರುಕಳಿಸದೇ ಹೋದರೆ ಹೊಸ ಜ್ಞಾನದ ಸಾಲೊಂದು ನಮ್ಮ ಮೆದುಳಿನಲ್ಲಿ ದಾಸ್ತಾನುಗುವುದು ಇಮ್ಮಡಿ ಖಚಿತ. ಅಲ್ವೇ ?!!ಇದು ಕಾಪಿ ಹೊಡೆಯುವ ಹೊಸ ತಂತ್ರವಾಯಿತು ಅಂತ ಮಡಿವಂತರು ಅಲವತ್ತುಕೊಂಡರೆ .. ಅವರನ್ನ ಪಕ್ಕಕ್ಕಿಡಿ.

ಬಹಳಷ್ಟು ವಿಶ್ವವಿದ್ಯಾನಿಲಯದ ಪ್ರಶ್ನೆಪತ್ರಿಕೆ ತಯಾರಕರು ತಮ್ಮ ಶ್ರಮ ತಪ್ಪಿಸಲು ಹಿಂದಿನ ನಾಲ್ಕಾರು ಪ್ರಶ್ನೆಪತ್ರಿಕೆಗಳನ್ನ ಕಲಸಿ ಹೊಸ ಪ್ರಶ್ನೆಪತ್ರಿಕೆ ತಯಾರು ಮಾಡಿ : " ಈ ಸಲ ವಿದ್ಯಾರ್ಥಿಗಳಿಗೆ ಕಹಿ ಔಷಧಿಯೊಂದನ್ನ ಕೊಡೋಣ " ಅನ್ನುವ ಹವಣಿಕೆಯಲ್ಲಿರುತ್ತಾರೆ. ಆದರೆ ಅವರ ಆ ಕಹಿ ಔಷಧಿ ಅನೇಕ ಸಲ ದಿವ್ಯೌಷಧಿ ಆಗುವುದು / ಆಗಿರುವುದು ಸಾಬೀತಾಗಿದೆ.

ಅದಕ್ಕೆ ನನ್ನ ಸಲಹೆ ಏನೆಂದರೆ : 
  • ಕೇಂದ್ರ ಸರಕಾರ ಇರಬಹುದು
  • ರಾಜ್ಯ ಸರಕಾರ ಇರಬಹುದು
  • ಬ್ಯಾಂಕ್ ಉದ್ದಿಮೆಯ ಪರೀಕ್ಷೆ ಇರಬಹುದು
ಎಂಥದೇ ಪರೀಕ್ಷೆ ಇರಲಿ .. ಪ್ರಶ್ನೆಪತ್ರಿಕೆ ಬಿಡಿಸಿ. ಅಲ್ಲಿ ದೊರೆಯುವ ಸಿದ್ಧೌಷಧವನ್ನ ಮುಂದೆ ಒದಗಬಹುದಾದ ತುರ್ತು ಪರಿಸ್ಥಿತಿಗೆ ಮುಂಚೆಯೇ ತಯಾರು ಮಾಡಿಟ್ಟುಕೊಳ್ಳುವುದು ಜಾಣರ ಲಕ್ಷಣ. ಸ್ಪರ್ಧಾರ್ಥಿಗಳೆಲ್ಲ ಜಾಣರು - ಕೋಣರಲ್ಲ ಅಂತ ಸಾಬೀತುಮಾಡೋಣ.

ಇಂತಿ ನಿಮ್ಮ ಪ್ರೀತಿಯ,

: ಸ್ಪರ್ಧಾರ್ಥಿ.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ