ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2014

ಏನಿದು FSSAI ?

9 ಪ್ರತಿಕ್ರಿಯೆಗಳು




ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ :


  • ಇದು ಭಾರತದ್ಲಲಿ ಸಾರ್ವಜನಿಕ ಬಳಕೆಗೆ ಲಭ್ಯವಿರುವ ಎಲ್ಲ ಮಾದರಿಯ ಸಂಸ್ಕರಿತ/ಪಾಕ್ಡ್ ಆಹಾರ ವಸ್ತುಗಳ ಗುಣಮಟ್ಟ ನಿರ್ಧರಣೆಗೆ ಇರುವ ಒಂದು ಮಾನದಂಡ.

  • ಇದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂಸ್ಥೆ. ಈ ಸಂಸ್ಥೆಯನ್ನು 5ನೇ ಆಗಸ್ಟ್ 2011ರಲ್ಲಿ ಸ್ಥಾಪಿಸಲಾಯಿತು.

  • ಇದರ ಪ್ರಧಾನ ಕಚೇರಿ ದೆಹಲಿಯಲ್ಲಿದ್ದು, ದೇಶಾದ್ಯಂತ ಅನೇಕ ಪ್ರಯೋಗಾಲಯಗಳು ಆಹಾರ ಗುಣಮಟ್ಟ ನಿರ್ಧರಣೆಗೆ ಈ ಸಂಸ್ಥೆಗೆ ಸಹಭಾಗಿಯಾಗಿವೆ.

  • ಹೈದರಾಬಾದ್ ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯುಟ್ರಿಷನ್ (NIN)ಸಂಸ್ಥೆಯ ಜೊತೆ ಸಹಭಾಗಿತ್ವ ಹೊಂದಿದೆ.

  • ಇದು ಸಂಸ್ಥೆಯ ವೆಬ್ ವಿಳಾಸ : http://www.fssai.gov.in/

  • 2006ರ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಕಾಯ್ದೆಯಡಿಯಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಕಾಯ್ದೆಯ ಪ್ರತಿ.

  • ಭಾರತದಲ್ಲಿ ಬಳಸಲ್ಪಡುವ ಆಹಾರ ಪದಾರ್ಥಗಳನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಿ ಮಾರುಕಟ್ಟೆಗೆ ಬಿಡಿಗಡೆಯಾಗುವ ಪ್ರತಿ ಹೊಸ ಪದಾರ್ಥವನ್ನು ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡಿಸಿ ದೃಢೀಕರಿಸದ ನಂತರವೇ ಸದರಿ ಪದಾರ್ಥ ಮಾರಾಟಕ್ಕೆಲೈಸೆನ್ಸ್ ನಂಬರ್ ಪಡೆದುಕೊಂಡ ನಂತರವಷ್ಟೇ ಅದು ಮಾರಾಟಕ್ಕೆ ಲಭ್ಯ.


Nov 20, 2012

ಸ್ಟಾಫ್ ಸೆಲೆಕ್ಷನ್ ಕಮೀಷನ್ - ಡೇಟಾ ಎಂಟ್ರಿ ಆಪರೇಟರ್ / ಲೋವರ್ ಡಿವಿಷನ್ ಕ್ಲರ್ಕ್ ಪರೀಕ್ಷೆ - ಸಾಮಾನ್ಯ ಜ್ಞಾನ

1 ಪ್ರತಿಕ್ರಿಯೆಗಳು



ಸ್ಟಾಫ್ ಸೆಲೆಕ್ಷನ್ ಕಮೀಷನ್ - ಡೇಟಾ ಎಂಟ್ರಿ ಆಪರೇಟರ್ / ಲೋವರ್ ಡಿವಿಷನ್  ಕ್ಲರ್ಕ್  ಪರೀಕ್ಷೆ  -  ಸಾಮಾನ್ಯ ಜ್ಞಾನ - ದಿ.04.12.2011

{ ಅತ್ಯಮೂಲ್ಯ ಉತ್ತರ ಪತ್ರಿಕೆ : 12 }




  • ರಾಕೆಟ್ ಚಲಿಸುವ ತತ್ವ - Conservation of Momentum
  • Cost of Production = Sum of Wages + Interest + Rent + Normal Profit
  • ಸೂರ್ಯನನ್ನು ಸುತ್ತಲು 88 ದಿನಗಳನ್ನು ತೆಗೆದುಕೊಳ್ಳುವ ಗ್ರಹ - ಬುಧ
  • ಹಾಲನ್ನು ಕಡೆದು ಬೆಣ್ಣೆ ಮಾಡುವಾಗ ೀ ಕಾರಣದಿಂದ ಬೆಣ್ಣೆ(FAT) ಬೇರ್ಪಡುತ್ತದೆ   - Centrifugal Force
  • ಕ್ಯಾಡ್ಮಿಯಂ ಮಾಲಿನ್ಯ  ಈ ರೋಗಕ್ಕೆ ಕಾರಣವಾಗುತ್ತದೆ - Itai Itai
  • ಈಗ ಬಳಕೆಯಲ್ಲಿರುವ ಕಂಪ್ಯೂಟರ್ ಪೀಳಿಗೆ - 4th Generation Computer
  • ಮೂರನೇ ಪಾಣಿಪತ್ ಯುದ್ಧ ನಡೆದದ್ದು - ಕ್ರಿ.ಶ.1761
  • ಭೂಪಾಲ್ ಅನಿಲ ದುರಂತದಲ್ಲಿ ಬಿಡುಗಡೆಯಾದ ವಿಷಕಾರಿ ಅನಿಲ - ಮೀಥೈಲ್ ಐಸೋಥಯೋಸಯನೇಟ್
  • ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವುದು - ಉತ್ತರ ಪ್ರದೇಶದಲ್ಲಿ
  • ಗಿಡ್ಢಾ ನೃತ್ಯ  ಈ ರಾಜ್ಯದ್ದು - ಪಂಜಾಬ್
  • ದೇಶದ ಆದಾಯ ಲೆಕ್ಕಹಾಕುವಾಗ - ರಫ್ತು ಮೌಲ್ಯವನ್ನು ಕೂಡಿಸಬೇಕು ಹಾಗೂ ಆಮದಿನ ಮೌಲ್ಯವನ್ನು ಕಳೆಯಬೇಕು.
  • ಫ್ಯೂಸ್ ವೈರ್ ತಯಾರಾಗುವುದು- Tin & Led ನ ಮಿಶ್ರಲೋಹದಿಂದ
  • ಮಾನವ ದೇಹದ ಅತಿ ಚಿಕ್ಕ ಗ್ರಂಥಿ - ಪಿಟ್ಯೂಟರಿ
  • ಇಲ್ತುಮಿಷ್ ಅಧ್ಯಯನ ಕೇಂದ್ರ ಸ್ಥಾಪಿಸಿದ ನಗರ - ಪಟ್ನಾ
  • ಕಾಲಾ ಅಝಾರ್ ರೋಗ ಬರುವುದು - Sand Fly ನಿಂದ
  • AGMARK - ಇದು ಕೃಷಿ ಉತ್ಪನ್ನಗಳ ಗುಣಮಟ್ಟ ನಿರ್ಧಾರಕ ಚಿಹ್ನೆ

.




: ಉತ್ತರಚೋರ

Nov 19, 2012

ಸ್ಟಾಫ್ ಸೆಲೆಕ್ಷನ್ ಕಮೀಷನ್ - ಡೇಟಾ ಎಂಟ್ರಿ ಆಪರೇಟರ್ / ಲೋವರ್ ಡಿವಿಷನ್ ಕ್ಲರ್ಕ್ ಪರೀಕ್ಷೆ - ಸಾಮಾನ್ಯ ಜ್ಞಾನ

0 ಪ್ರತಿಕ್ರಿಯೆಗಳು



ಸ್ಟಾಫ್ ಸೆಲೆಕ್ಷನ್ ಕಮೀಷನ್ - ಡೇಟಾ ಎಂಟ್ರಿ ಆಪರೇಟರ್ / ಲೋವರ್ ಡಿವಿಷನ್  ಕ್ಲರ್ಕ್  ಪರೀಕ್ಷೆ  -  ಸಾಮಾನ್ಯ ಜ್ಞಾನ - ದಿ.04.12.2011

{ ಅತ್ಯಮೂಲ್ಯ ಉತ್ತರ ಪತ್ರಿಕೆ : 11 }




  • ಸಿಟ್ರಸ್ ಜಾತಿಯ ಗಿಡಗಳ ಎಲೆಗಳು ಹಳದಿ ಚುಕ್ಕೆ ರೋಗಕ್ಕೆ ತುತ್ತಾಗಲು ಕಾರಣ - ಮ್ಯಾಗ್ನೀಷಿಯಂ
  • ರಾಜ್ಯದಲ್ಲಿ ಚುನಾವಣೆ ನಂತರ ಯಾವುದೇ ಪಕ್ಷ ಬಹುಮತ ಗಳಿಸದಿದ್ದಲ್ಲಿ ಮುಂದಿನ ನಿರ್ಧಾರ ರಾಜ್ಯಪಾಲರ Discretion(ವಿವೇಚನೆ) ಗೆ ಬಿಟ್ಟಿದ್ದು. ರಾಷ್ಟ್ರಪತಿಗಳ ಸಲಹೆ ಕೇಳಲೇಬೇಕು ಎಂದಿಲ್ಲ.
  • ಭೂಮಿಯ ಕೆಳಪದರದಲ್ಲಿ ಶೇಖರಗೊಂಡಿರುವ ಶಾಖಶಕ್ತಿ - ಜಿಯೋ ಥರ್ಮಲ್ ಶಕ್ತಿ
  • ಸಂಪೂರ್ಣ ಮಹಿಳೆಯರನ್ನೇ ಒಳಗೊಂಡಿದ್ದ ಎವರೆಸ್ಟ ಶಿಖರ ಏರಿದ ಭಾರತೀಯ ವಾಯು ಸೇನೆಯ ತುಕಡಿಯ ಮುಂದಾಳತ್ವ ವಹಿಸಿದವರು - ಸ್ಕ್ವಾಡ್ರನ್ ಲೀಡರ್ ನಿರುಪಮಾ ಪಾಂಡೆ 
  • ವಾತಾವರಣದಲ್ಲಿನ Humidity ಅಳೆಯುವ ಮಾಪಕ - Hygrometer
  • ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಲದಲ್ಲಿ ಇಡೀ ಮಂತ್ರಿಮಂಡಲ ರಾಜೀನಾಮೆ ನೀಡಿದೆ ಎಂದರ್ಥ.
  • National Botanical Garden ಇರುವ ನಗರ - ಲಕ್ನೋ
  • ಕ್ಲೋರಿನ್ ಅನ್ನು ಸುಣ್ಣದ ನೀರಿನ ಮೇಲೆ ಹಾಯಿಸುವ ಮೂಲಕ ತಯಾರಿಸಲಾಗುವ ವಸ್ತು - ಬ್ಲೀಚಿಂಗ್ ಪೌಡರ್
  • ಭಾರತೀಯ ಸಂವಿಧಾನ ಜಾರಿಗೆ ಬಂದದ್ದು - 26ನೇ ಜನವರಿ 1950
  • ನಿಸರ್ಗದ ರಾಡಾರ್(RADAR) ಎಂದು ಕರೆಸಿಕೊಳ್ಳುವ ಪಕ್ಷಿ - ಪಾರಿವಾಳ(Pigeon)
  • ಆಳ ಸಮುದ್ರಕ್ಕಿಳಿಯುವಾಗ ಉಸಿರಾಟಕ್ಕೆ ಬಳಸುವ ಆಮ್ಲಜನಕವನ್ನು DILUTE ಮಾಡಲು ಹೀಲಿಯಂ ಅನ್ನು ಬಳಸಲಾಗುತ್ತದೆ.
  • ಆಳ ಸಮುದ್ರಕ್ಕಿಳಿಯುವಾಗ ಉಸಿರಾಟಕ್ಕೆ ಬಳಸಲು ಆಮ್ಲಜನಕವನ್ನು DILUTE ಮಾಡಲಾಗುತ್ತದೆ.
  • ರಂಗಸ್ವಾಮಿ ಕಪ್ ಸಂಬಂಧಿಸಿದ ಕ್ರೀಡೆ - ಹಾಕಿ
  • ಭಗವಾನ್ ಮಹಾವೀರನ ತಾಯಿ - ತ್ರಿಶಾಲಾ
  • ಬಯೋ ಫರ್ಟಿಲೈಜರ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ಹಿಂದಿಕ್ಕಿದ ರಾಜ್ಯ - ತಮಿಳುನಾಡು
  • ಹಳದಿ ಕ್ರಾಂತಿ - ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ಸಂಬಂಧಿಸಿದೆ.
  • ಹೆಲಿಕಾಪ್ಟರ್ ಸಂಶೋಧಿಸಿದವರು - ಬ್ರಿಗೆಟ್
  • ರೇಯಾನ್ ತಯಾರಿಕೆಗೆ ಬಳಸಲಾಗುವ ಪ್ರಮುಖ ಕಚ್ಚಾವಸ್ತು - ಸೆಲ್ಯುಲೋಸ್
  • ಸಿಂಧೂ ನಾಗರೀಕತೆಯ ಸ್ನಾನಗೃಹಗಳು ಕಂಡುಬರುವ ಸ್ಥಳ - ಮೊಹೆಂಜೊದಾರೊ
  • ಮರುಭೂಮೀಕರಣವನ್ನು ವಿರೋಧಿಸುವ ದಿನವನ್ನಾಗಿ ವಿಶ್ವಸಂಸ್ಥೆ ಗುರುತಿಸಿರುವ ದಿನ - ಜೂನ್ 17
  • ದಕ್ಷಿಣ ಭಾರತದ ಸನ್ ಗ್ರೂಪ್ ಖರೀದಿಸಿದ ವಿಮಾನಯಾನ ಕಂಪೆನಿ - ಸ್ಪೈಸ್ ಜೆಟ್ 

{{ ...ಮುಂದುವರೆಯುವುದು }}

.
ನಿನ್ನೆಯ ದಿನ ಪ್ರಕಟವಾದ ಉತ್ತರಗಳಲ್ಲಿ 
1993ರಲ್ಲಿ ಪರಿಚಯಿಸಲಾದ ಪಂಚಾಯತಿರಾಜ್ ವ್ಯವಸ್ಥೆಯನ್ನು ಪ್ರಥಮವಾಗಿ ಅಳವಡಿಸಿಕೊಂಡ ರಾಜ್ಯಗಳು -
ರಾಜಸ್ಥಾನ ಮತ್ತು ಉತ್ತರಪ್ರದೇಶ
ಎಂದು ಪ್ರಕಟಿಸಲಾಗಿತ್ತು. 
ಆದರೆ 
ಸರಿ ಉತ್ತರ 
ರಾಜಸ್ಥಾನ ಮತ್ತು ಆಂದ್ರಪ್ರದೇಶ  
ಎಂದಾಗಬೇಕು. 
(-ಸ್ಪರ್ಧಾರ್ಥಿ)
.




: ಉತ್ತರಚೋರ

Nov 16, 2012

ಸ್ಟಾಫ್ ಸೆಲೆಕ್ಷನ್ ಕಮೀನ್ - ಭಾರತೀಯ ಆಹಾರ ನಿಗಮ - ಸಾಮಾನ್ಯ ಜ್ಞಾನ - II

1 ಪ್ರತಿಕ್ರಿಯೆಗಳು



ಸ್ಟಾಫ್ ಸೆಲೆಕ್ಷನ್ ಕಮೀನ್ - ಭಾರತೀಯ ಆಹಾರ ನಿಗಮ -  ಸಾಮಾನ್ಯ ಜ್ಞಾನ - ದಿ.11.11.2012

{ ಅತ್ಯಮೂಲ್ಯ ಉತ್ತರ ಪತ್ರಿಕೆ : 10 }



  • ಭಾರತದಲ್ಲಿ New Economic Policy ಜಾರಿಗೆ ಬಂದ ವರ್ಷ - 1991
  • ಭಾರತೀಯ ಸಂವಿಧಾನದ ಅನುಚ್ಛೇದ 356ರನ್ವಯ ತುರ್ತು ಪರಿಸ್ಥಿತಿ ವಿಧಿಸಿದಾಗ ರಾಜ್ಯದ ಆಳ್ವಿಕೆ - ರಾಜ್ಯಪಾಲರ ಅಧೀನದಲ್ಲಿರುತ್ತದೆ.
  • ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸ್ಥಾಪಿಸಲಾಗಿದ್ದು - 14ನೇ ಆಗಸ್ಟ್ 1993ರಂದು
  • 'ಭಾರತ ಗಣರಾಜ್ಯ'ದ ಅಧಿಕೃತ ಭಾಷೆ - ದೇವನಾಗರಿ ಲಿಪಿಯ ಹಿಂದಿ (ಜೊತೆಗೆ English - As Subsidiary Official Language)
  • 1993ರಲ್ಲಿ ಪರಿಚಯಿಸಲಾದ ಪಂಚಾಯತಿರಾಜ್ ವ್ಯವಸ್ಥೆಯನ್ನು ಪ್ರಥಮವಾಗಿ ಅಳವಡಿಸಿಕೊಂಡ ರಾಜ್ಯಗಳು - ರಾಜಸ್ಥಾನ ಮತ್ತು ಉತ್ತರಪ್ರದೇಶ
  • ಕ್ರಿ.ಶ.1325ರಲ್ಲಿ ದೆಹಲಿ ಸುಲ್ತಾನನಾದ ಜುನಾ ಖಾನ್(Jauna Khan) ಜನಪ್ರಿಯ ಹೆಸರು - ಮೊಹಮದ್ ಬಿನ್ ತುಘಲಕ್
  • ಔರಂಗಜೇಬನ್ನು ವಿರೋಧಿಸಿದ ಕಾರಣಕ್ಕೆ ಅವನಿಂದ ಶಿರಚ್ಛೇದನಕ್ಕೆ ಒಳಗಾದ ಸಿಖ್ ಗುರು - ತೇಘ ಬಹದ್ದೂರ್
  • ಆ್ಯನಿ ಬೆಸೆಂಟ್ ಜೊತೆಗೆ ಹೋಂ ರೂಲ್ ಚಳುವಳಿ ಆರಂಭಿಸಿದವರು - ಬಾಲ ಗಂಗಾಧರ ತಿಲಕ್
  • ಭಾರತದ ಭೂಭಾಗಕ್ಕೆ ಉತ್ತರಕ್ಕಿರುವ ಮಿತಿ - 37 ಡಿಗ್ರಿ 6 ಮಿನ್ಯುಟ್
  • ಭಾರತದ ಉತ್ತರದಲ್ಲಿರುವ  ಭಾಬರ್ ಪ್ರಸ್ಥಭೂಮಿ ಉಂಟಾಗುವುದು - ನದಿ ಹರಿವಿನಿಂದ
  • ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ಸಾಗುವಳಿ ಮಾಡುವ ಕೃಷಿ ಪದ್ಧತಿಗೆ Subsistence Farming ಎನ್ನುತ್ತಾರೆ.
  • ಆಫ್ರಿಕಾ ಮತ್ತು ಯುರೋಪ್ ಖಂಡವನ್ನು ಬೇರ್ಪಡಿಸುವುದು - ಮೆಡಿಟರೇನಿಯನ್ ಸಮುದ್ರ
  • ಡಾಲ್ಫಿನ್ ಒಂದು - ಸಸ್ತನಿ
  • ಮಶ್ರೂಮ್ ಇದು ಫಂಗೈ ಜಾತಿಗೆ ಸೇರಿದೆ.
  • ಎಂಡೋಕ್ರೈನ್ ಗ್ಲ್ಯಾಂಡ್ ಮತ್ತು ಎಕ್ಸೋಕ್ರೈನ್ ಗ್ಲ್ಯಾಂಡ್ ಎರಡೂ ಆಗಿರುವ ಗ್ರಂಥಿ - Pancreas
  • ಕಿಡ್ನಿ ತೊಂದರೆಯನ್ನು ಸರಿಪಡಿಸಲು ಡಯಲಿಸಿಸ್ ಪದ್ಧತಿ ಅನುಸರಿಸುತ್ತಾರೆ.
  • ವೆಬ್ ವಿಳಾಸದ ಕೊನೆಯ ಮೂರು ಅಕ್ಷರಗಳು ಸಂಸ್ಥೆಯ ತೆರನನ್ನು ಸೂಚಿಸುತ್ತವೆ. (Eg- .com, .org, .edu )
  • ನೈಸರ್ಗಿಕವಾಗೊ ದೊರೆಯುವ ಧಾತುಗಳಲ್ಲಿ  ಅತಿ ಭಾರವಾದದ್ದು - ಯುರೇನಿಯಂ
  • ಪ್ರತಿ ವರ್ಷ ಸಾವಿರಾರು ಬಲಿ ತೆಗೆದುಕೊಳ್ಳುವ Mine Explosion ಗೆ ಕಾರಣ - Methane Mixing with Air
  • ಓಝೋನ್ ಪದರ ನಾಶಕ್ಕೆ ಕಾರಣವಾಗುವ ವಸ್ತುಗಳ ಬಳಕೆಯನ್ನು ದಿನೇದಿನೇ ತಗ್ಗಿಸಲು ನಿರ್ಣಯ ಕೈಗೊಂಡ ಸಭೆ - Montreal Protocol
  • ಕೊಚ್ಚಿನ್ ಮತ್ತು ಎರ್ನಾಕುಲಂ ಇವು ಅವಳಿ ನಗರಗಳು
  • ಒಂದೇ ನಗರದಲ್ಲಿ ಭಾರತೀಯ ರೈಲ್ವೆಯ ಎರಡು ಪ್ರಾಂತೀಯ ಕಚೇರಿಗಳನ್ನು ಹೊಂದಿರುವ ನಗರಗಳು - ಮುಂಬೈ ಮತ್ತು ಕೋಲ್ಕತಾ
  • ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ನಗರ - ಸ್ಟಾಕ್ ಹೋಮ್
  • " Inflation is unjust and deflation ininexpedient. Of the two deflations is worse." ಎಂದು ಹೇಳಿದವರು - J.F. Keynes




: ಉತ್ತರಚೋರ

Nov 15, 2012

ಸ್ಟಾಫ್ ಸೆಲೆಕ್ಷನ್ ಕಮೀನ್ - ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಕ್ಸಾಮ್ - ಸಾಮಾನ್ಯ ಜ್ಞಾನ

0 ಪ್ರತಿಕ್ರಿಯೆಗಳು



ಸ್ಟಾಫ್ ಸೆಲೆಕ್ಷನ್ ಕಮೀನ್ - ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಕ್ಸಾಮ್ - ಸಾಮಾನ್ಯ ಜ್ಞಾನ - ದಿ.08.07.2012

{ ಅತ್ಯಮೂಲ್ಯ ಉತ್ತರ ಪತ್ರಿಕೆ : 09 }



  • ಚಿಕನ್ ಪಾಕ್ಸ್ ಹರಡುವ ವೈರಾಣು - Variola Virus
  • ಬಾಹ್ಯ ಆಯಸ್ಕಾಂತೀಯ ಪರಿಣಾಮಗಳಿಂದ ರಕ್ಷಿಸಲು ವಸ್ತುಗಳನ್ನು ರಬ್ಬರ್ ನಿಂದ ಆವರಿಸಬೇಕು
  • ವಾಹನಗಳಲ್ಲಿ ಬಳಸುವ Hydraulic Brake ಸಾಧನಗಳಿಗೆ ಅಳವಡಿಸಿಕೊಂಡಿರುವ ನಿಯಮ - Pascal's Law
  • Completely Interconnected Network Topology = MESH
  • Amide ಗಳನ್ನು Amine ಗಳಾಗಿ ಪರಿವರ್ತಿಸುವ ರಾಸಾಯನಿಕ ಕ್ರಿಯೆಯ ಹೆಸರು - Hoffman Reaction
  • Antacid ಆಗಿ ಬಳಸಲ್ಪಡುವ base - Magnesium Hydroxide
  • ಕಬ್ಬಿಣವನ್ನು ತುಕ್ಕು ಹಿಡಿಯುವುದರಿಂದ ತಪ್ಪಿಸಲು - ಗ್ರೀಸ್ ಬಳಿಯುವುದು , ಗ್ಯಾಲ್ವನೀಕರಣ , ಬಣ್ಣ ಹಚ್ಚುವುದನ್ನು ಮಾಡಬಹುದು.
  • Denatured Alcohol = is Unfit for Drinking as it contains poisonous substances
  • ಚರಂಡಿ ನೀರಿನಿಂದ Phenolics As Pollutants ಗಳನ್ನು ಬೇರ್ಪಡಿಸುವ ಪದ್ಧತಿ - Ion Exchange Resin Technique
  • Supersonic Air Plane ಗಳು ಸೃಷ್ಟಿಸುವ ಅಲೆಗಳು - Sonic BOOM
  • ನಮ್ಮ ಕಣ್ಣು ಹಳದಿ ಬಣ್ಣಕ್ಕೆ ಹೆಚ್ಚು ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಗುಣ ಹೊಂದಿದ್ದಾಗ್ಯೂ ಅಪಾಯದ ಸಂಕೇತ ಸೂಚಿಸಲು ಕೆಂಪು ಬಣ್ಣ ಬಳಸಲು ಕಾರಣ - the Wavelength of Red Light is More Than that of Yellow Light
  • ಭಾರತ ರತ್ನ ಪ್ರಶಸ್ತಿ ಪಡೆದಿರುವ ಮುಖ್ಯಮಂತ್ರಿ - ಎಂ.ಜಿ.ರಾಮಚಂದ್ರನ್(ತಮಿಳುನಾಡು)
  • 2012ರ ಮುಖ್ಯ  ಒಲಿಂಪಿಕ್ಸ್ 400ಮೀ ಓಟಕ್ಕೆ ಅರ್ಹತೆ ಪಡೆದ ಅಂಗವಿಕಲ ಅಥ್ಲೀಟ್ - ಆಸ್ಕರ್ ಪಿಸ್ಟೋರಿಯಸ್
  • ಪ್ರಯಾಗ ಅನ್ನು ಅಲ್ಲಾ ಹಾ ಬಾದ್ ಎಂದು ನಾಮಕರಣ ಮಾಡಿದವರು - ಅಕ್ಬರ್
  • ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2012 ಪಟ್ಟ ಜಯಿಸಿದವರು - ವನ್ಯಾ ಮಿಶ್ರಾ
  • ಗ್ರಾಮೀಣ ಭಾರತದ ಅಭಿವೃದ್ಧಿಗೆ 'PURA' ಯೋಜನೆಯನ್ನು ಪ್ರಸ್ತಾಪಿಸಿದವರು - ಎ.ಪಿ.ಜೆ.ಅಬ್ದುಲ್ ಕಲಾಂ




: ಉತ್ತರಚೋರ

Nov 14, 2012

ಸ್ಟಾಫ್ ಸೆಲೆಕ್ಷನ್ ಕಮೀನ್ - ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಕ್ಸಾಮ್ - ಸಾಮಾನ್ಯ ಜ್ಞಾನ - ದಿ.08.07.2012

1 ಪ್ರತಿಕ್ರಿಯೆಗಳು



ಸ್ಟಾಫ್ ಸೆಲೆಕ್ಷನ್ ಕಮೀನ್ - ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಕ್ಸಾಮ್ - ಸಾಮಾನ್ಯ ಜ್ಞಾನ - ದಿ.08.07.2012

{ ಅತ್ಯಮೂಲ್ಯ ಉತ್ತರ ಪತ್ರಿಕೆ : 08 }



  • ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳಿಗಾಗಿ ನೇಮಿಸಲ್ಪಟ್ಟ ಸಮಿತಿ - ನರಸಿಂಹನ್ ಸಮಿತಿ
  • 13ನೇ ಪಂಚವಾರ್ಷಿಕ ಯೋಜನೆ ಅವಧಿ - 2012 ರಿಂದ 2017
  • National Income = Sum Total of Factor Incomes
  • Safeguards against the misuse of proclamation of national emergency ಅನ್ನು ಸಂವಿಧಾನದಲ್ಲಿ ಅಳವಡಿಸಲಾದ ತಿದ್ದುಪಡಿ - 44ನೇ ತಿದ್ದುಪಡಿ
  • ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ರದ್ದುಪಡಿಸುವ ಅಧಿಕಾರ ಇರುವುದು - ರಾಷ್ಟ್ರಪತಿಗಳಿಗೆ
  •  ಭಾರತದ ಯಾವುದೇ ಉಚ್ಛ ನ್ಯಾಯಾಲಯದಿಂದ ಮುಖ್ಯ ನಾಯಮೂರ್ತಿಯಾಗಿ ನಿವೃತ್ತಿ ಹೊಂದಿದವರು ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಕೈಗೊಳ್ಳುವ ಹಾಗಿಲ್ಲ.
  • ಹಿಂದೂ ವಿವಾಹ ಕಾಯ್ದೆ - 1955
  • Medical Termination of Pregnancy Act - 1971
  • ಭಾರತದ ಮೊದಲ ವೈಸರಾಯ್ - ಲಾರ್ಡ್ ಕ್ಯಾನಿಂಗ್
  • ಎರಡನೇ ತರೈನ್ ಯುದ್ಧದಲ್ಲಿ ಪೃಥ್ವಿರಾಜ್ ಚೌಹಾಣ್ ರನ್ನು ಸೋಲಿಸಿದವನು - ಮಹಮದ್ ಘೋರಿ
  • ನಾನಾ ಫಡ್ನವೀಸ್ ನಿಜನಾಮಧೇಯ - ಬಾಲಾಜಿ ಜನಾರ್ಧನ ಬಾನು
  • ಭೂಮಿ ಸೂರ್ಯನಿಂದ ಅತಿ ದೂರದಲ್ಲಿ ಈ ದಿನದಂದು ಇರುತ್ತದೆ - ಜುಲೈ 4
  • Total Population / Available Land Area = Popultion Density
  • Green Gland ಈ ಕ್ರಿಯೆಗೆ ಸಂಬಂಧಿಸಿವೆ - Excertion
  • ಉಸಿರಾಟದ ಪ್ರಕ್ರಿಯೆಯಲ್ಲಿ ಆಮ್ಲಜನಕ ರಕ್ತಕ್ಕೆ ಹಾಗೂ ರಕ್ತದಿಂದ ಸಾಗಣೆ ಈ ಕ್ರಿಯೆಯನ್ವಯ ನಡೆಯುತ್ತದೆ - Diffusion
  • ಹೃದಯದಲ್ಲಿ ಈ Muscle ಇರುವುದಿಲ್ಲ - ಐಚ್ಛಿಕ ಮಾಂಸಖಂಡ(Voluntary Muscle)
  • ಮಣ್ಣಿನಲ್ಲಿರುವ ಲವಣಾಂಶವನ್ನು ಅಳೆಯುವ ಸಾಧನ - Conductivity Meter
  • Fungal Diseaseಗೆ ಉದಾಹರಣೆ - Ringworm Disease

( ... ಮುಂದುವರಿಯುವುದು )


: ಉತ್ತರಚೋರ

Nov 13, 2012

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರಿಕಲ್ ಹುದ್ದೆ ಪರೀಕ್ಷೆ - ಸಾಮಾನ್ಯ ಜ್ಞಾನ

0 ಪ್ರತಿಕ್ರಿಯೆಗಳು



ಸ್ಟೇಟ್ ಬ್ಯಾಂಕ್  ಆಫ್ ಇಂಡಿಯಾ ಕ್ಲರಿಕಲ್ ಹುದ್ದೆ  ಪರೀಕ್ಷೆ - ಸಾಮಾನ್ಯ ಜ್ಞಾನ 

{ ಅತ್ಯಮೂಲ್ಯ ಉತ್ತರ ಪತ್ರಿಕೆ : 07 }



  • ಕಿಶನ್ ಗಂಗಾ ವಿದ್ಯುತ್ ಯೋಜನೆ - ಜಮ್ಮು ಮತ್ತು ಕಾಶ್ಮೀರದಲ್ಲಿದೆ.
  • ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬೇಯಿಸಲು ಬಳಸುವ ತತ್ವ -  Conduction
  • ವಾತಾವರಣದಲ್ಲಿ ಹವಾಮಾನ ಬದಲಾವಣೆ ಸಂಬಂಧೀ ಚಟುವಟಿಕೆ ನಡೆಯುವುದು - TROPOSHPHEREನಲ್ಲಿ
  • ಅಮರ್ತ್ಯ ಸೇನ್ ರಿಗೆ ನೊಬೆಲ್ ದೊರಕಿದ ವಿಭಾಗ - ಅರ್ಥಶಾಸ್ತ್ರ - WELFARE ECONOMICS & SOCIAL CHOICE THEORY
  • ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯರ ಗುಂಪಿಗೆ ಹೀಗೆನ್ನುತ್ತಾರೆ - P5
  • UNDERSEA OBJECTS ನೋಡಲು/ಗುರುತಿಸಲು ಬಳಸುವ ಸಾಧನ - SONAR
  • SUBMARINE ನಿಂದ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ - PERISCOPE
  • ಭಾರತದ ಅತಿ ಹಳೆಯ MUTUAL FUND ಸಂಸ್ಥೆ - UNITED TRUST OF INDIA(UTI)
  • ಸುಪ್ರಸಿದ್ಧ NH7(ಪ್ರಸ್ತುತ NH44) ಯಾವ ನಗರಗಳನ್ನು ಸಂಪರ್ಕಿಸುತ್ತದೆ - ವಾರಣಾಸಿ : ಕನ್ಯಾಕುಮಾರಿ
  • WORLD TRADE ORGANISATION ಪ್ರಾರಂಭವಾಗಿದ್ದು - 1ನೇ ಜನವರಿ 1995
  • ಬಂಗಾಳ ವಿಭಜನೆಯಾದಾಗ ಭಾರತದ ವೈಸರಾಯ್ - ಕರ್ಜನ್
  • ಪ್ರತಿಶ್ಠಿತ ಕಾರು ತಯಾರಿಕಾ ಕಂಪೆನಿಯಾದ Jaguar Land Rover ನ್ನು ಟಾಟಾ ಕಂಪೆನಿ ಖರಿದಿಸಿದ್ದು - ಫೋರ್ಡ್ ಕಂಪೆನಿಯಿಂದ

( ... ಮುಂದುವರಿಯುವುದು )


: ಉತ್ತರಚೋರ

Nov 12, 2012

ಉತ್ತಮ ವ್ಯಕ್ತಿತ್ವಕ್ಕಾಗಿ...

0 ಪ್ರತಿಕ್ರಿಯೆಗಳು
ನಮಸ್ತೆ...

ಸ್ಪರ್ಧಾರ್ಥಿ ಓದುಗರಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು !!

ಈ ದಿನ ಹಾಗೇ ಫೇಸ್ ಬುಕ್ ಪುಟ ತಿರುವುತ್ತಿದ್ದಾಗ ಒಂದು ಬರಹ  ಇದಿರಾಯ್ತು. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕಾಗಿ ನಾವು ದಿನನಿತ್ಯ  ಮಾಡುವ ಕೆಲವು ತಪ್ಪುಗಳ ಸೂಕ್ಷ್ಮ ಅವಲೋಕನ ಅದಾಗಿತ್ತು. ಅದನ್ನು ಕೆಲವು ಪತ್ರಿಕೆಯ ಭಟ್ಟರು ತುಂಡಾಗಿ ಕತ್ತರಿಸಿ ತಮ್ಮದೇ ತುಂಡೋಕ್ತಿ ಎಂದು ಹೇಳಿಕೊಳ್ಳುವ ರೀತಿಯ ಬದಲಾಗಿ, ಅಪ್ಪಟ ಪದಾರ್ಥವನ್ನೇ ನಿಮ್ಮ ಮುಂದೆ ಇಡುತ್ತೇನೆ. ಆಸ್ವಾದಿಸಿ !! ಆದರೆ ಆಸ್ವಾದಿಸಿ ಚಪ್ಪರಿಸುವ ಜೊತೆಗೆ ಪಾಲಿಸಿ ಸುಧಾರಿಸೋಣ !!

---



---  


Sep 2, 2012

ಭಾರತೀಯ ಆಹಾರ ನಿಗಮದಲ್ಲಿ 6545 ಹುದ್ದೆಗಳು

0 ಪ್ರತಿಕ್ರಿಯೆಗಳು



ಭಾರತೀಯ ಆಹಾರ ನಿಗಮದಲ್ಲಿ  6545 Asst(Grade III)ಹುದ್ದೆಗಳು


 
ಕೊನೆ ದಿನಾಂಕ : 19 ಸಪ್ಟೆಂಬರ್ 2012
ಪರೀಕ್ಷಾ ದಿನಾಂಕ : 11 ನವೆಂಬರ್ 2012 
ಒಟ್ಟು Vacancy : 6545
ವಿದ್ಯಾರ್ಹತೆ : ಇಲಾಖೆಯ ಅಧಿಸೂಚನೆಗಾಗಿ  ಇಲ್ಲಿ ಕ್ಲಿಕ್ಕಿಸಿ 
        ನಿಗದಿಪಡಿಸಿರುವ ಪಠ್ಯ : ಇಲ್ಲಿ ಕ್ಲಿಕ್ಕಿಸಿ 
ವಯೋಮಿತಿ : ಅಧಿಸೂಚನೆಯಲ್ಲಿದ್ದಂತೆ
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://ssconline.nic.in/



 

:  ಪತ್ರೋದ್ಯೋಗಿ 

Aug 23, 2012

ಶ್ರೀ ಜಿ.ವೆಂಕಟಸುಬ್ಬಯ್ಯನವರಿಗೆ 100 ವಸಂತ ತುಂಬಿದ ಸಂಭ್ರಮ !!

0 ಪ್ರತಿಕ್ರಿಯೆಗಳು
.

: ಶ್ರೀ ಜಿ.ವೆಂಸುಬ್ಬಯ್ಯನವರ ಕಿರು ಪರಿಚಯ :


 


.
ಜನನ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ 23ನೇ ಆಗಸ್ಟ್ 1913 ರಂದು

ತಂದೆ : ಶ್ರೀ ಗಂಜಾಂ ತಿಮ್ಮಣ್ಣಯ್ಯ


ತಾಯಿ : ಶ್ರೀಮತಿ ಸುಬ್ಬಮ್ಮ


ವಿದ್ಯಾಭ್ಯಾಸ :  ಮೈಸೂರು ವಿವಿಯಿಂದ ಎಂ.ಎ.


ನೌಕರಿ : ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಸೇರಿ - ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆಗೆ ಸೇರಿ ಪ್ರಾಂಶುಪಾಲರಾಗಿ ನಿವೃತ್ತಿ


ಕೃತಿಗಳು : 


  • ನಯನಸೇನ, 
  • ಅನುಕಲ್ಪನೆ, 
  • ನಳಚಂಪು,
  • ಅಕ್ರೂರ ಚರಿತ್ರೆ, 
  • ಲಿಂಡನ್ ಜಾನ್ಸನ್ ಕಥೆ, 
  • ಸಂಯುಕ್ತ ಸಂಸ್ಥಾನ ಪರಿಚಯ, 
  • ಶಂಕರಾಚಾರ್ಯ, 
  • ಕಬೀರ್, 
  • ಇದು ನಮ್ಮ ಭಾರತ, 
  • ಸರಳಾದಾಸ್, 
  • ರತ್ನಾಕರವರ್ಣಿ, 
  • ದಾಸಸಾಹಿತ್ಯ, 
  • ವಚನಸಾಹಿತ್ಯ, 
  • ಶಾಸನ ಸಾಹಿತ್ಯ, 
  • ಷಡಕ್ಷರ ದೇವ, 
  • ಸರ್ವಜ್ಞ, 
  • ಕನ್ನಡ-ಕನ್ನಡ ಇಂಗ್ಲೀಷ್ ನಿಘಂಟು, 
  • ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ, 
  • ಇಂಗ್ಲೀಷ್-ಕನ್ನಡ ನಿಘಂಟು, 
  • ಹೊಯ್ಸಳ ಕರ್ನಾಟಕ ರಜತೋತ್ಸವ ಸಂಪುಟ, 
  • ಮುದ್ದಣ ಭಂಡಾರ ಭಾಗ-೧, 
  • ಮುದ್ದಣ ಭಂಡಾರ ಭಾಗ-೨, 
  • ಕಾವ್ಯಲಹರಿ, 
  • ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, 
  • ಕನ್ನಡವನ್ನು ಉಳಿಸಿ ಬೆಳೆಸಿದವರು, 
  • ಪ್ರೊ|| ಟಿ.ಎಸ್. ವೆಂಕಣ್ಣಯ್ಯನವರು, 
  • ಕವಿ ಜನ್ನ, ಡಿ.ವಿ.ಗುಂಡಪ್ಪನವರು, 
  • ಕನ್ನಡದ ನಾಯಕಮಣಿಗಳು, 
  • ಕರ್ಣಕರ್ಣಾಮೃತ, 
  • ನಾಗರಸನ ಭಗವದ್ಗೀತೆ, 
  • ತಮಿಳು ಕತೆಗಳು, 
  • ಇಗೋ ಕನ್ನಡ-೧, 
  • ಇಗೋ ಕನ್ನಡ-೨, 
  • ಮುದ್ದಣ ಪದಪ್ರಯೋಗಕೋಶ, 
  • ಎರವಲು ಪದಕೋಶ, 
  • ಕುಮಾರವ್ಯಾಸನ ಅಂತರಂಗ


... ಮುಂತಾದವು

ಅಲಂಕರಿಸಿದ ಹುದ್ದೆಗಳು : 


  • ಕ.ಸಾ.ಪ. ಕಾರ್ಯದರ್ಶಿ
  • 1964 ರಿಂದ 1969 ರವರೆಗೆ ಕ.ಸಾ.ಪ. ಅಧ್ಯಕ್ಷ ಹುದ್ದೆ
  • ಕನ್ನಡ ಸುಡಿ ಪತ್ರಿಕೆಯ ಸಂಪಾದಕರಾಗಿ ಸೇವೆ
  • ಕನ್ನಡ-ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಸಂಪಾದಕರು
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು
  • ಅಖಿಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷರು
  • ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯ ಕನ್ನಡ ಪ್ರತಿನಿಧಿ
... ಮುಂತಾದವು

ಬಿರುದುಗಳು :

  • ನಿಘಂಟು ಸಾರ್ವಭೌಮ, 
  • ಸಂಚಾರಿಜೀವಂತಪದಕೋಶ, 
  • ಭಾಷಾವಿಜ್ಞಾನ ಪ್ರವೀಣ, 
  • ಪದಗಳಕಣಜ, 
  • ನಿಘಂಟು ನಿಸ್ಸೀಮ, 
  • ಶಬ್ಧರ್ಷಿ, 
  • ಪದಜೀವಿ, 
  • ಪದಗುರು, 
  • ನಡೆದಾಡುವ ನಿಘಂಟು, 
  • ಶಬ್ದಸಂಜೀವಿನಿ, 
  • ಶಬ್ದಬ್ರಹ್ಮ, 
  • ಶಬ್ದಸಾಗರ, 
  • ಶಬ್ದಸಹಾಯವಾಣಿ, 
  • ಶಬ್ದಗಾರುಡಿಗ, 
  • ಶಬ್ದಶಿಲ್ಪಿ, 
  • ಚಲಿಸುವ ಜ್ಞಾನಭಂಡಾರ,
  • ಕನ್ನಡದ ಕಿಟ್ಟಲ್

... ಮುಂತಾದವು

ಪ್ರಶಸ್ತಿಗಳು :


  •  ಮುದ್ದಣ ಭಂಡಾರ ಗ್ರಂಥಕ್ಕೆ ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
  • ಸಾಹಿತ್ಯ ಸಾಧನೆಗಾಗಿ ೧೯೯೧ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 
  • ೧೯೯೨ ರಲ್ಲಿ ಮಾಂಟ್ರಿಯಲ್ ಕೆನಡದಲ್ಲಿ ನಡೆದ ಕನ್ನಡ ಸಮ್ಮೇಳನದ ಗೌರವ ಆತಿಥ್ಯ, 
  • ೧೯೯೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 
  • ೧೯೯೮ ರಲ್ಲಿ ಶಂಬಾ ಪ್ರಶಸ್ತಿ, 
  • ೧೯೯೯ ರಲ್ಲಿ ಸೇಡಿಯಾಪು ಪ್ರಶಸ್ತಿ, 
  • ೧೯೯೯ ರಲ್ಲಿ ಶಿವರಾಮ ಕಾರಂತ ಪ್ರಶಸ್ತಿ, 
  • ೨೦೦೦ ದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ವಿಶೇಷ ಪ್ರಶಸ್ತಿ, 
  • ೨೦೦೧ ರಲ್ಲಿ ವನಮಾಲಿ ಪ್ರಶಸ್ತಿ, 
  • ೨೦೦೩ ರಲ್ಲಿ ಮುದ್ದಣ ಪುರಸ್ಕಾರ, 
  • ೨೦೦೫ ರಲ್ಲಿ ಮಾಸ್ತಿ ಪ್ರಶಸ್ತಿ, 
  • ೨೦೦೫ ರಲ್ಲಿ  ನಾಡೋಜ ಪ್ರಶಸ್ತಿ, 
  • ೨೦೦೭ ರಲ್ಲಿ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವ, 
  • ೨೦೦೮ ರಲ್ಲಿ ಪ್ರತಿಷ್ಠಿತ ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, 
  • ೨೦೦೯ ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, 
  • ೨೦೧೦ ರಲ್ಲಿ ಗೋಕಾಕ್ ವಾಙ್ಮಯ ಟ್ರಸ್ಟ್‌ನ ವಿ.ಕೃ. ಗೋಕಾಕ್ ಪ್ರಶಸ್ತಿ 

... ಮುಂತಾದವು

ಬೆಂಗಳೂರಿನಲ್ಲಿ ನಡೆದ ೭೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. 

Aug 22, 2012

ಚೀನಾ ಬಿಡಿ - ಅದರದ್ದು ಎಲ್ಲೆಡೆ ವಾಮಮಾರ್ಗ - ಅಮೆರಿಕಾ ಹೇಗೆ ಒಲಿಂಪಿಕ್ಸ್ ನಲ್ಲಿ ಮುಂದೆ ??

2 ಪ್ರತಿಕ್ರಿಯೆಗಳು



ಎಲ್ಲರಿಗೂ ತಿಳಿದಿರುವ ಹಾಗೆ ಅಮೆರಿಕನ್ನರಿಗೆ ಧರ್ಮಕ್ಕಿಂತ ದೇಶದ ಬಗ್ಗೆ ಪ್ರೀತಿ ಜಾಸ್ತಿ. Country First ಎಂಬ ನೀತಿ ಅವರದ್ದು. ನಾವು ಹೇಗೆ ನಮ್ಮ ದೇಶದ ಬಗ್ಗೆ ಹೇಳಿಕೊಳ್ಳುವಾಗ ನಮ್ಮದು ಸಂಪದ್ಭರಿತ ರಾಷ್ಟ್ರ - ಜಾತ್ಯಾತೀತ ರಾಷ್ಟ್ರ - ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಎಂಬಿತ್ಯಾದಿಯಾಗಿ ಹೇಳಿಕೊಳ್ಳೂತ್ತೇವಲ್ಲ ... ಅದೇ ರೀತಿ ಅವರು ಈ ಕೆಳಗಿನಂತೆ ಹೇಳಿಕೊಳ್ಳುವದು ಸರ್ವೇ ಸಾಧಾರಣವಾಗಿ ಕಂಡುಬರುತ್ತದೆ....

"The United States of America is exceptional among the nations of the world.  Unlike most other countries, there is no overarching ethnic or religious affiliation that identifies one as an “American.”Rather, what binds the more than 300 million Americans together is a shared civic identity. 

ಇಂತಿಪ್ಪ ದೇಶದಲ್ಲಿ ಕ್ರೀಡೆಯ ಬಗೆಗಿನ ದೃಷ್ಟಿಕೋನ ಹೇಗಿರಬಹುದು ಎಂಬ ಕುತೂಹಲಕ್ಕಾಗಿ ಮಾಹಿತಿಯನ್ನು ತಡಕಾಡಿದಾಗ ಕೆಲವು ಕುತೂಹಲಕರ ಅಂಶಗಳು ಸಿಕ್ಕಿದ್ವು. ನಿಮ್ಮೊಂದಿಗೆ ಅವುಗಳನ್ನು ಹಂಚಿಕೊಳ್ಳೋಣ ಅಂತ ಈ ಬರಹ.


  • ಅಮೆರಿಕದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಸಂಪೂರ್ಣ ತನ್ನ ಹಿಡಿತದಲ್ಲಿಟ್ಟುಕೊಂಡಿರುವ  ಇಲಾಖೆ ಎಂಬುದಿಲ್ವಂತೆ.  President's Council on Physical Fitness and Sports ಎಂಬ ಸಮಿತಿ ದೇಶದ ಕ್ರೀಡಾ ಚಟುವಟಿಕೆಗಳ ಬಗ್ಗೆ ಅಮೆರಿಕದ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾ ದೇಶದ ನಾಗರಿಕರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಕ್ರೀಡೆಯನ್ನು ಶಿಫಾರಸ್ಸು ಮಾಡುತ್ತದಂತೆ.
  • ಅಮೆರಿಕ ಸಂಸತ್ತು ಅಖೈರುಗೊಳಿಸಿರುವ ಅಮೆರಿಕಾ ಒಲಿಂಪಿಕ್ ಅಸೋಸಿಯೇಷನ್   ಸಂಸ್ಥೆಯು ಎಲ್ಲ ದೇಶಗಳ ಹಾಗೆ ತನ್ನ ದೇಶದಲ್ಲಿ ಒಲಿಂಪಿಕ್ ಪಾಲ್ಗೊಳ್ಗಲುವಿಕೆಗೆ ಸಂಬಂಧಿಸಿದ ಜವಾಬ್ದಾರಿ ಹೊಂದಿದೆ. ಇದರಲ್ಲೇನಿದೆ ವಿಶೇಷ ಅಂದಿರಾ - ಆಯ್ಕೆಯಾಗುವ ಕ್ರೀಡಾಳುಗಳು ತಯಾರಾಗುವ ಬಗೆಯೇ - American Special !!
  • ಎಲ್ಲ ದೇಶಗಳಲ್ಲೂ Amateur Sports ಮತ್ತು Proffessional Sports ಎಂಬ ಎರಡು ವಿಧಗಳಿರುತ್ತವೆ. ಶಾಲಾ ಕಾಲೇಜುಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸಮಯ ಕಳೆಯಲು ಅಥವಾ ಆಟದ ಸಮಯವನ್ನು ಪೂರೈಸಲು ಅಥವಾ ಹವ್ಯಾಸದ ಭಾಗವಾಗಿ ಆಟ ಆಡುವ ರೀತಿಗೆ  Amateur Sports  ಎನ್ನಬಹುದು.  ಈ ತೆರನಾದ ಕ್ರೀಡೆಯ ಪಾಲ್ಗೊಳ್ಳುವಿಕೆಯಲ್ಲಿ ಗಂಭೀರತೆ ಕಡಿಮೆ. ಈ ಹಂತದಲ್ಲಿ ಅನೇಕ ಉತ್ತಮ ಕ್ರೀಡಾಪಟುಗಳು ಸರಿಯಾದ ಮಾರ್ಗದರ್ಶನವಿಲ್ಲದೆ ಉತ್ತಮ ಕ್ರೀಡಾ ಭವಿಷ್ಯ ಕಳೆದುಕೊಂಡು ಯಾವುದೋ ಬ್ಯಾಂಕಿನಲ್ಲಿ - ಸರ್ಕಾರೀ ಕಚೇರಿಯಲ್ಲಿ - ಇಲ್ಲಾ ಸಾಫ್ಟ್ ನೌಕರಿಯಲ್ಲಿ ಜಾಗ ಪಡೆದು ಸಂಸಾರ ಸಾಗರಕ್ಕೆ ಧುಮುಕಿ ಹಿಂದೊಮ್ಮೆ ತಾವು ಕ್ರೀಡೆಯಲ್ಲಿ ಮುಂದಿದ್ದೆವು ಎಂಬ ಕತೆಗಳನ್ನು ಮೊಮ್ಮಕ್ಕಳಿಗೆ ಹೇಳುವ ತಾತಂದಿರಾಗಿಬಿಡುತ್ತಾರೆ.
    ಅಮೆರಿಕ ಒಲಿಂಪಿಕ್ಸ್ ನಲ್ಲಿ ಗಳಿಸಿ ಒಟ್ಟು ಪದಕಗಳೊಂದಗೆ ಚಿನ್ನದ ಪದಕಗಳ %  GRAPH
  • ಆದರೆ ಅಮೆರಿಕದಲ್ಲಿ Amateur Sports ಬಗ್ಗೆ ಕೂಡ ಗಮನಹರಿಸಲಾಗುತ್ತದೆ.  ಈ ಒಂದು ಅಂಶವೇ ಸಾಕು ಅಮೆರಿಕವನ್ನು ಇತರ ದೇಶಗಳಿಂದ ವಿಭಿನ್ನವಾಗಿರಿಸಲು. ಮಾಧ್ಯಮಿಕ ಮತ್ತು ಪಿಯು ಹಂತದ ಶಾಲೆಗಳಲ್ಲಿ(Secondary & Tertiary Educational Institutions) ಕ್ರೀಡೆಗಳಲ್ಲಿ ಅಭ್ಯಾಸದ ಕಡೆಗಿನ  ಉತ್ಸುಕತೆಯಷ್ಟೇ ಕ್ರೀಡೆಯ ಕಡೆಗೂ ಇಟ್ಟುಕೊಂಡು ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಿತ್ತು -ಹೆಚ್ಚಿದೆ- ಹೆಚ್ಚಿರುತ್ತದೆ. ಅದುವೇ ಅಲ್ಲಿನ ಜನಜೀವನದ ವಿಶೇಷತೆ. ಈ ಬಗ್ಗೆ ಕ್ರೀಡಾಸಕ್ತ ವಿದ್ಯಾರ್ಥಿಗಳ  ಆಸಕ್ತಿಯನ್ನು ಪೋಷಿಸಲು  National Collegiate Athletic Association  ಎಂಬ ಶಾಲಾ ಕಾಲೇಜುಗಳ ಸಂಘವೊಂದನ್ನು ಸ್ಥಾಪಿಸಿಕೊಂಡಿದ್ದಾರೆ.   ನಾನು ಮೊದಲೇ ಹೇಳಿದಂತೆ ಸರ್ಕಾರದ ನೇರ ಹಸ್ತಕ್ಷೇಪ ಇಲ್ಲ  ಎಂಬುದನ್ನು ನಾನು ನಿಮಗಿಲ್ಲಿ ತೋರಿಸಿಕೊಟ್ಟ ಹಾಗಾಯಿತು.  ಸುಮಾರು 1281 ಶಿಕ್ಷಣ ಸಂಸ್ಥೆಗಳು ಇದರ ಭಾಗವಾಗಿವೆ. ಈ ಸಂಸ್ಥೆ ಕ್ರೀಡೆಯಲ್ಲಿ ಮುಂದಿರುವ ಹುಡುಗರನ್ನು ತನ್ನ ಸುಪರ್ದಿಯಲ್ಲಿರುವ ಶಾಲೆಗಳ ಮುಖಾಂತರ ಗುರುತಿಸಿ ಅವರಿಗೆ ಹೇರಳ ಶಿಷ್ಯವೇತನ ನೀಡುತ್ತದೆ.  ಅಷ್ಟೇ ಅಲ್ಲ  ಈ NCAA ಗೆ ಕಾರ್ಫೊರೇಟ್ ಜಗತ್ತಿನ ಹಣಕಾಸಿನ ಬೆಂಬಲ ಇರುವುದು ಅಲ್ಲಿನ ಅತಿ ದೊಡ್ಡ ಪ್ಲಸ್ ಪಾಯಿಂಟ್. ವಿಕಿ ಪುಟದಿಂದ ಹೆಕ್ಕಿ ತೆಗೆದ ಮಾಹಿತಿಯ ಪ್ರಕಾರ  ಈ ಕೆಳಕಂಡ ಹೆಸರಾಂತ ಕಂಪೆನಿಗಳು ಆ ಧೇಶದಲ್ಲಿ ಕ್ರೀಡೆಯಲ್ಲಿ ಹಣ ತೊಡಗಿಸಿರೋದನ್ನು ನೀವು ಕಾಣಬಹುದು.
Sponsors
CompanyCategorySince
AT&TWireless services2001
Coca-ColaNon-alcoholic beverages2002
The HartfordMutual funds and related financial services2004
Enterprise Rent-A-CarCar rental2005
Lowe'sHome improvement2005
CapitalOneBanking and credit cards2008
Kraft (Planters)Snack foods2008
Hershey's (Reese's)Candy2009
LGElectronics2009
UPSPackage delivery and logistics2009
Nissan (Infiniti)Car & parts2010
UnileverPersonal-care products2010

    NCAA Basketball ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳ ಬೃಹತ್ ಪಟ್ಟಿ
  • ನಂತರದ್ದು ಕ್ರೀಡಾ ಕ್ಲಬ್ ಗಳ ಸರದಿ. ಅವು ಪ್ರತಿ ವರ್ಷ ಹೊಸ ಹೊಸ ಪ್ರತಿಭಾವಂತ ಹುಡುಗರನ್ನು  ಆರಿಸಿ ತಮ್ಮ ವಾರ್ಷಿಕ ಕ್ರೀಡಾ ಡ್ರಾಫ್ಟ್ ನಲ್ಲಿ ಸೇರಿಸಿಕೊಳ್ಳುತ್ತಾರೆ. ಹಾಗೆ ಸೇರ್ಪಡೆಗೊಂಡ ವಿದ್ಯಾರ್ಥಿ ಕ್ರೀಡಾರ್ಥಿಯಾಗಿ ಬದಲಾಗುತ್ತಾನೆ. ಇಲ್ಲಿಂದಲೇ ಅವರ ಜೀವನದಲ್ಲಿ ಯೂ - ಟರ್ನ್ !!

..

... ಮುಂದುವರೆದ ಭಾಗ ನಾಳೆ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ