ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ - ಗ್ರೇಡ್ ಬಿ ಅಧಿಕಾರಿ ಹುದ್ದೆಯ ಪರೀಕ್ಷೆ - ಫೆಬ್ರುವರಿ 2011
{ ಅತ್ಯಮೂಲ್ಯ ಉತ್ತರ ಪತ್ರಿಕೆ : 04 }
- ನಮ್ಮ ದೇಶದ ಗ್ರಾಮೀಣ ಜನರಿಗೆ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ 100 ದಿನದ ಉದ್ಯೋಗ ಭರವಸೆಯನ್ನು ನೀಡುತ್ತಿರುವ ಯೋಜನೆ - ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.
- 2007ರ ಸಾರ್ಕ್ ಶೃಂಗಸಭೆಯಲ್ಲಿ South Asian Free Trade Agreement (SAFTA) ಎಂಬ ಒಪ್ಪಂದ ಮಾಡಿಕೊಂಡು ಸಾರ್ಕ್ ದೇಶಗಳ ನಡೆವೆ ನಡೆಯುವ ಆಮದು-ರಫ್ತು ವ್ಯವಹಾರಕ್ಕೆ Customs ಶುಲ್ಕವನ್ನು ರದ್ದುಪಡಿಸಲಾಯಿತು.
- ಭಾರತದ ಎಲ್ಲ ಜಿಲ್ಲೆಗಳ ಎಲ್ಲ ಗ್ರಾಮೀಣ ಬ್ಯಾಂಕುಗಳಿಗೆ ಬಡ್ಡಿಯ ದರವನ್ನು ನಿಗದಿ ಮಾಡುವ ಸಂಸ್ಥೆ - NABARD
- ಪ್ರತಿ ವರ್ಷ ಜಾಗತಿಕ ಜನಸಂಖ್ಯೆಗೆ ಅತಿ ಹೆಚ್ಚಿನ ಪಾಲು ನೀಡುತ್ತಿರುವುದು - ಭಾರತದ ಜನಸಂಖ್ಯೆ
- ಈಗ ಜಗತ್ತಿನ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶ ಮುಂದೊಮ್ಮೆ ಅತಿ ಹೆಚ್ಚು ಮುದುಕರನ್ನು ಹೊಂದಲಿದೆ. ಕಾರಣ ನಮ್ಮ ಜೀವನಶೈಲಿಯಿಂದಾಗಿ Fertility ಯಲ್ಲಿ ಇಳಿಮುಖವಾಗಲಿದೆ.
- ಭಾರತದ ಮೊದಲ ಯೋಜನಾ ಆಯೋಗದ ಅವಧಿ - 1951-1956
- ಭಾರತದ ವಿದೇಶಾಂಗ ನೀತಿಗೆ ಪಂಚಶೀಲ ತತ್ವದ ಪ್ರಭಾವ ಜಾಸ್ತಿ ಇದೆ.
- Development As Freedom ಕೃತಿಯ ಕರ್ತೃ - ಅಮರ್ತ್ಯ ಸೇನ್
- ವಿಶ್ವ ಬ್ಯಾಂಕ್ ನ 'ಆಣೆಕಟ್ಟು ಪುನಶ್ಚೇತನ ಯೋಜನೆ'ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ ಹಾಕಿರುವ ರಾಜ್ಯ - ಕೇರಳ
- ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ - ಥೋರಿಯಂ
- ಹಾಲಿನ ಉತ್ಪಾದನೆಯಲ್ಲಿ ಭಾರತ ಸ್ವಯಂಪೂರ್ಣತೆಯನ್ನು ಸಾಧಿಸಿದೆ.
- 2010ರ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ -119
- ಲೂಯಿಸ್ ಇನಾಸಿಯೋ ಲು ಲಾ ಡ ಸಿಲ್ವಾ - ಇವರು 2010ರ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ ಪಡೆದರು.
- ಚಾಲ್ತಿ ಕಾನೂನಿನ ಪ್ರಕಾರ ಭಾರತದಲ್ಲಿ ದಿನದ ಕನಿಷ್ಟ ಕೂಲಿ - ರೂ.125/-
- United Nations Conference on Trade and Development (UNCTAD) ಸಂಸ್ಥೆಯ ಪ್ರಕಾರ 2010 ರಿಂದ 2012ರ ಅವಧಿಯಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ವಿದೇಶೀ ಬಂಡವಾಳ ಹೂಡಿಕೆ ಪಡೆಯುವ ದೇಶ - ಭಾರತ
- ಭಾರತದಲ್ಲಿ ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ Microfinance ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ $407 ಬಿಲಿಯನ್ ಮೊತ್ತದ ಸಾಲವನ್ನು ಭಾರತಕ್ಕೆ ನೀಡಿರುವ ಸಂಸ್ಥೆ - ವಿಶ್ವಬ್ಯಾಂಕ್
- 2010ರಲ್ಲಿ ಸಂಸತ್ತಿನಲ್ಲಿ ಪಾಸಾದ ಒಂದು ಮಸೂದೆ - RTE - Right to Education
- ನವೆಂಬರ್ 2010ರಲ್ಲಿ ಭಾರತ ಸರ್ಕಾರ SABALA ( ‘Sabla’ or the ‘Rajiv Gandhi Scheme for Adolescent Girls’ ) ಎಂಬ ಯೋಜನೆ ಜಾರಿ ಮಾಡಿತು. ಇದರ ಪ್ರಕಾರ Integrated Child Development Services ವತಿಯಿಂದ 11ರಿಂದ 18 ವಯಸ್ಸಿನ ಒಳಗಿನ ಹೆಣ್ಣು ಹುಡುಗಿಯರಿಗೆ ಪೌಷ್ಠಿಕ ಆಹಾರ ಮತ್ತು ವಿಶೇಷ ತರಬೇತಿ ನೀಡಲಾಗುವುದು.
- ನೇಪಾಳ ದೇಶಕ್ಕೆ ಕೊಳವೆ ಬಾವಿ ಕೊರೆಯುವ ಸಲುವಾಗಿ 26ದಶಲಕ್ಷ ಸಹಾಯಧನವನ್ನು ಭಾರತ ನೀಡಿದೆ.
- ಜಾಗತಿಕ ಮಟ್ಟದಲ್ಲಿ RIC ಗುಂಪು ಎಂದರೆ - Russia - India - China
- ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಭಾರತದ 40% ಜನತೆ ಅಂತರರಾಷ್ಟ್ರೀಯ ಬಡತನ ರೇಖೆ(IPL) (ದಿನವೊಂದಕ್ಗಿಂಕೆ 1.25 ಅಮೆರಿಕನ್ತ ಡಾಲರ್ ಗಿಂತ ಕಡಿಮೆ ಸಂಪಾದನೆ ) ಕೆಳಗೆ ವಾಸಿಸುತ್ತಿದ್ದಾರೆ.
: ಉತ್ತರಚೋರ
No comments:
Post a Comment