ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Jan 7, 2011

ಕ್ಷಮೆ ಮತ್ತು ಕಾರಣ ಮತ್ತು ಮತ್ತೊಂದು ....

ಸ್ಪರ್ಧಾರ್ಥಿಯ ಓದುಗರಿಗೆ ಕ್ಷಮೆ ಕೇಳಿ ; ಕ್ಷೇಮ ಸಮಾಚಾರ ಕೇಳುತ್ತಾ ...

ಕೆಲವು ದಿನಗಳಿಂದ ನಿಮ್ಮೊಂದಿಗೆ ಜ್ಞಾನವನ್ನ ಹಂಚಿಕೊಳ್ಳದೇ ಇರಲು ಕಾರಣವನ್ನರಹುತ್ತಿದ್ದೇನೆ.

ಕಾರಣ : ಪ್ರತಿ ದಿನ ಸಂಜೆ ಮನೆ ತಲುಪಿದ ನಂತರ ನನ್ನ ಸಂಗಾತಿಯಾಗಿದ್ದ ಕಂಪ್ಯೂಟರ್ ನನ್ನ ಮೇಲೆ ಮುನಿಸಿಕೊಂಡಿದ್ದು ON ಆಗಲು ನಿರಾಕರಿಸುತ್ತಿದೆ. ಕಂಪ್ಯೂಟರ್ ON ಆದ ಕೂಡಲೇ ನಿಮಗೆ ಜ್ಞಾನ ಹಂಚುವ ಕೆಲಸ ಪ್ರಾರಂಭ ಮಾಡುವ ಹುಮ್ಮಸ್ಸಿನಲ್ಲಿದ್ದೇನೆ.

ಈಗ ಮತ್ತೊಂದು ಸಮಾಚಾರ ಹೇಳುತ್ತೇನೆ. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸ್ಪರ್ಧಾರ್ಥಿಯ ಹುಡುಗ ಆಯ್ಕೆಯಾಗಿದ್ದು, ಜನವರಿ 15ರಿಂದ ಹಳ್ಳಿವಾಸ ಆರಂಭವಾಗಲಿದೆ. Always Connected ಸ್ಥಿತಿಯಿಂದ Never Connected ಸ್ಥಿತಿಗೆ ತೆರಳುತ್ತಿದ್ದಾನೆ. ಹೀಗಾಗಿ ಸ್ವಲ್ಪ ದಿನ ಅಲ್ಲಿನ ಪರಿಸರಕ್ಕೆ ಹೊಂದಾಣಿಕೆ ಆಗುವ ತನಕ ಸ್ಪರ್ಧಾರ್ಥಿ ತಾಣದಲ್ಲಿ ಹೊಸ ಬರಹಗಳು ಬರದೇ ಇರಬಹುದು. ಆ ಸ್ವಲ್ಪ ದಿನ ಸ್ಪರ್ಧಾರ್ಥಿಗಳು ಸಹಕರಿಸಬೇಕೆಂದು ಮನವಿ ಕೂಡ ಮಾಡಿದ್ದಾನೆ.

ಪಂಚಾಯತ್ ಅಭಿವೃದ್ಧಿ ಅದಿಕಾರಿ ಹುದ್ದೆಯಲ್ಲಿ ನೂರಾ ಎಂಟು ತಲೆನೋವುಗಳಿದ್ದರೂ ಧೈರ್ಯ ಮಾಡಿ ಹೋಗ್ತಿದಾನೆ, ಸ್ಪರ್ಧಾರ್ಥಿ ಓದುಗರೆಲ್ಲರ ಶುಭೇಚ್ಛೆ ಇರಲಿ.

ಮತ್ತೆ ಶೀಘ್ರದಲ್ಲೇ ನಿಮ್ಮ ಜೊತೆ ಜ್ಞಾನ ಹಂಚಿಕೊಳ್ಳುವ ಉತ್ಸುಕತೆಯಲ್ಲಿ,

 
:   ಸ್ಪರ್ಧಾರ್ಥಿ

2 comments:

ಪರಶು.., said...

ಒಂದು ಕಡೆ ಸಂತೋಷ, ಒಂದು ಕಡೆ ಬೇಸರ ಎರಡೂ ಒಟ್ಟೊಟ್ಟಿಗೆ ಆಗ್ತಿದೆ ರೇವಪ್ಪಾ...

ಜೂನಿಯರ್ ಅಸಿಸ್ಟೆಂಟ್ ಹುದ್ದೆಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗ್ತಿದೀರ ಎನ್ನೋ ಸಂತೋಷ ಒಂದುಕಡೆಯದ್ದಾದರೆ, ದೂರದ ಬೆಳಗಾಂ ಗೆ ಹೋಗುತ್ತಿರೋದರಿಂದ ನಮ್ಮಿಂದ ಸ್ವಲ್ಪ ದೂರವಾಗ್ತಿದೀರಿ ಎನ್ನೋ ಬೇಸರ ಇನ್ನೊಂದು ಕಡೆಯದ್ದು. ಆದರೂ ನಮ್ಮೊಂದಿಗೆ ಸದಾ ಸಂಪರ್ಕದಲ್ಲಿರ್ತಿರಾ ಅನ್ನೋ ಭರವಸೆಯೊಂದಿಗೆ ಕಳಿಸಿಕೊಡ್ತಿದೀವಿ...

" ಓ ಗೆಳೆಯಾ ಇದ್ದ ಕೆಲವು ವರ್ಷಗಳನ್ನು ಚೊಕ್ಕಾಗಿ ಕಳೆದು ಹೋಗು, ಇದ್ದಾಗ ಹೂವಿನಂತೆ ಗಮಗಮಿಸು. ಇಲ್ಲದಾಗ ಅದರ ಸವಿನೆನಪು ಉಳಿಯಲಿ"

ADM - nistrator said...

ಧನ್ಯವಾದಗಳು ಪರಶು.

ಸಚಿವಾಲಯ ನನ್ನ ಮೊದಲ ಮನೆಯಾಗಿ ಸದಾ ನೆನಪಲ್ಲಿರುತ್ತದೆ ಅನ್ನುವುದು ಎಷ್ಟು ನಿಜವೋ

ವಿದ್ಯಾರ್ಥಿ ಜೀವನದ ಗೆಳೆಯರ ಬಳಗವನ್ನ ಅಗಲಿದಾಗ ಹುದ್ದೆಯೊಂದನ್ನ ಅಲಂಕರಿಸಿ JobHolder ಆದ ಮೇಲೆ ಗೆಳೆಯರ ಬಳಗ ಹೇಗಿರುತ್ತೋ ಅಂತ ಹೆದರಿದ್ದ ನನಗೆ ನಿಮ್ಮಂಥ ಸಹೃದಯಿಗಳು ದೊರೆತದ್ದು

ಅಷ್ಟೇ ನಿಜ & ನನ್ನ ಅದೃಷ್ಟ.

ಹೀಗಿರುವಾಗ ನಿಮ್ಮಗಳನ್ನ ಬಿಟ್ಟು ಹೋಗುವುದು ಖಂಡಿತ ಬೇಸರದ ಸಂಗತಿ.

ಆದರೆ, ಹೋದ ಕಡೆಯಲ್ಲಿ ಕೆಲಸದ ಸ್ವಭಾವ ಎಂಥದೇ ಇರಲಿ ಅಲ್ಲೊಂದು ನನ್ನತನದ ಛಾಪು ಮೂಡಿಸುವ ಬಯಕೆ ನನ್ನದು...ಅದೇ ರೀತಿ ಈ ಕಿರಿಯ ಸಹಾಯಕ ಹುದ್ದೆಯಲ್ಲಿದ್ದುಕೊಂಡು ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ.

ದಿನವೂ ರಂಪ ರಾಮಾಯಣ ಇರುವ ಪಂಚಾಯತಿಯಲ್ಲಿಯೂ ಕೂಡ ಅಂಥದೇ ಹೊಸತನ ತೋರುವ ವಿಶ್ವಾಸ ನನ್ನದು.

ನೋಡೋಣ : ನಿಮ್ಮ ಶುಭ ಹಾರೈಕೆಗಳು ನನ್ನೊಂದಿಗಿರಲಿ.

ಕೊನೆವರೆಗೂ ನಿಮ್ಮೆಲ್ಲರ ಜೊತೆ ಇದೇ ಬಾಂಧವ್ಯ ಮುಂದುವರೆಸಿಕೊಂಡು ಹೋಗುವ ಭರವಸೆಯೊಂದಿಗೆ
- ರೇವಪ್ಪ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ